ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/04/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 47/2021 ಕಲಂ 143, 147, 448, 504, 506 ಸಂ 149 ಐಪಿಸಿ : ಇಂದು ದಿನಾಂಕ 02/04/2021 ರಂದು ರಾತ್ರಿ 9-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮನೆಯವರು ಮನೆಯಲ್ಲಿ ಇರುವಾಗ ತಮ್ಮ ಮನೆ ಮುಂದೆ ಹಾಕಿದ ಜೋಳದ ಸ್ವಪ್ಪೆಯನ್ನು ದನಗಳು ಬಂದು ತಿನ್ನುತ್ತಿದ್ದವು, ಆಗ ಫಿರ್ಯಾಧಿ ಬಂದು ಅವುಗಳಿಗೆ ಕಲ್ಲುಗಳಿಂದ ಹೊಡೆದಿದ್ದು, ಒಂದು ಕಲ್ಲು ಸ್ವಲ್ಪ ಮುಂದೆ ಹೋಗಿ ಬಿದ್ದುದರಿಂದ ಆರೋಪಿತರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಫಿರ್ಯಾಧಿ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಹೊಡೆಯಲು ಬರುತ್ತಿದ್ದಾಗ ಫಿರ್ಯಾಧಿಯು ಅಲ್ಲಿಂದ ಓಡಿಹೋಗಿದ್ದು, ನಂತರ ಆರೋಪಿತರೆಲ್ಲರೂ ಕೂಡಿ ಫಿರ್ಯಾಧಿ ತಾಯಿಗೆ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ಪ್ರಕರಣ ದಾಖಲು ಮಾಡಿರುತ್ತಾರೆ,

ಗುರಮಿಠಕಲ್ ಪೊಲೀಸ್ ಠಾಣೆ :- 24/2021 ಕಲಂ:323,355,504,506 ಸಂಗಡ 34 ಐಪಿಸಿ : ಇಂದು ದಿನಾಂಕ 03.04.2021 ರಂದು 5:00 ಪಿಎಮ್ ಕ್ಕೆ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯದ ಪತ್ರ ನಂ ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಾಲಯದ ಖಾಸಗಿ ಫಿಯರ್ಾದಿ ಸಂಖ್ಯೆ 45/2019 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 156(3) ಸಿಆರಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖಾ ವರದಿಯನ್ನು ಸಲ್ಲಿಸಿಲು ಆದೇಶಿಸಿದ್ದು ಸದರಿ ಖಾಸಗಿ ಫಿಯರ್ಾದಿ ನಂ:45/2019 ನೇದ್ದರ ಫಿಯರ್ಾದಿದಾರರಾದ ಶ್ರೀ ಕೃಷ್ಣಪ್ಪ ತಂದೆ ಹೀರಪ್ಪ ಚವ್ಹಾಣ, ವ||38 ವರ್ಷ ಉ||ಕೂಲಿಕೆಲಸ ಸಾ||ಬರದೇವನಾಳ ಜಾಲಿಗಿಡದ ತಾಂಡಾ ತಾ||ಹುಣಸಗಿ ಜಿ||ಯಾದಗಿರಿ ರವರ ಸದರಿ ಖಾಸಗಿ ಫಿಯರ್ಾದದ ಸಾರಾಂಶವೆನೆಂದರೆ 1 ನೇ ಆರೋಪಿ ಶಾಂತಾಬಾಯಿ @ ಗುಂಗಿಬಾಯಿ ಚವ್ಹಾಣ ಇವರು ಫಿಯರ್ಾದಿಯ ಹೆಂಡತಿ ಇದ್ದು ಆರೋಪಿ ನಂ 2 ತಿರುಪತಿ ತಂದೆ ಕೃಷ್ಣಪ್ಪ ಮತ್ತು 3 ಭೀಮಬಾಯಿ ಗಂಡ ತಿರುಪತಿ ಇವರು ಫಿಯರ್ಾದಿಯ ಮಾವ ಅತ್ತೆ ಇರುತ್ತಾರೆ. ಫಿಯರ್ಾದಿದಾರರ ಲಗ್ನವು ಶಾಂತಾಬಾಯಿ @ ಗುಂಗಿಬಾಯಿ ಚವ್ಹಾಣ ರವರೊಂದಿಗೆ ಹೀಗ್ಗೆ 8 ವರ್ಷಗಳ ಹಿಂದೆ ಕಡದರಾಳ ಗ್ರಾಮದಲ್ಲಿ ಜರಿಗಿದ್ದು ಇರುತ್ತದೆ. ಲಗ್ನವಾದ ನಂತರ ಶಾಂತಾಬಾಯಿ @ ಗುಂಗಿಬಾಯಿ ಚವ್ಹಾಣ ಇವಳು ಫಿಯರ್ಾದಿದಾರನ ಜೊತೆ ಫಿಯರ್ಾದಿದಾರನ ಮನೆಯಲ್ಲಿ 2 ವರ್ಷದ ಸಂತೃಪ್ತಿ ಜೀವನ ನಡೆಸಿದ್ದು ನಂತರ ಪಿರ್ಯಾದಿಗೆ ದಿನಾಲೂ ನನಗೆ ಒಡವೆ ತಂದು ಕೊಡು ಮತ್ತು ಮನೆಯಲ್ಲಿ ನೋಡಲಿಕ್ಕೆ 50,000 ರೂಪಾಯಿಯ ಟಿವಿ ತಂದುಕೊಡು ಎಂದು ಪೀಡಿಸತೊಡಗಿದ್ದು ಇಲ್ಲದಿದ್ದರೆ ನಾನು ನಿನ್ನ ಜೊತೆ ಸಂಸಾರ ಮಾಡುವದಿಲ್ಲ ನನ್ನ ತವರು ಮನೆಗೆ ಹೋಗುತ್ತೇನೆ ಎಂದು ಹೇಳದೇ ಕೇಳದೇ ತನ್ನ ತವರು ಮನೆಯಾದ ಕಡದರಾಳ ತಾಂಡಾಕ್ಕೆ ಹೋಗಿದ್ದು ಇರುತ್ತದೆ. ಹೀಗಿರಲು ದಿನಾಂಕ 23.08.2019 ರಂದು ಪಿರ್ಯಾದಿಯ ಸಂಬಂಧಿಕರಾದ ಮಾರನಾಳ ತಾಂಡಾ ಗ್ರಾಮದ 1. ಶೇಖರನಾಯಕ ತಂದೆ ಸೂರಪ್ಪನಾಯಕ ವ-45 ವರ್ಷ 2. ಗಣಪತಿ ತಂದೆ ಬುದ್ದಪ್ಪನಾಯಕ ವ-46 ವರ್ಷ 3. ಜೈರಾಮ ತಂದೆ ಗೋವಿಂದನಾಯಕ ವ-45 ವರ್ಷ ಸಾ-ಎಲ್ಲರೂ ಮಾರನಾಳತಾಂಡಾ ತಾ||ಹುಣಸಗಿ ಜಿ||ಯಾದಗಿರಿ 4. ತಿರುಪತಿ ತಂದೆ ಹರಿಸಿಂಗನಾಯಕ 5. ಬಾಬು ತಂದೆ ನಂದಪ್ಪ ವ-35 ವರ್ಷ 6. ಬಾಲಚಂದ್ರ ತಂದೆ ಶಂಕ್ರಪ್ಪ ವ-40ವರ್ಷ ಎಲ್ಲರೂ ಸಾ-ಬರದೇವನಾಳ ಜಾಲಿಗಿಡದತಾಂಡಾ ಸಾಕ್ಷಿದಾರರನ್ನು ಕರೆದುಕೊಂಡು ಕಡದರಾಳ ತಾಂಡಾಕ್ಕೆ ಸಾಯಂಕಾಲ 4:00 ಗಂಟೆ ಸುಮಾರಿಗೆ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಹೋಗಿದ್ದು ಆಗ ಪಿರ್ಯಾದಿಯ ಹೆಂಡತಿಯ ತವರು ಮನೆಯಲ್ಲಿ 1)ಶಾಂತಾಬಾಯಿ @ ಗುಂಗಿಬಾಯಿ ಚವ್ಹಾಣ ವ-30 ವರ್ಷ ಉ-ಕೂಲಿಕೆಲಸ2)ತಿರುಪತಿ ತಂದೆ ಕೃಷ್ಣಪ್ಪ ವ-50 ವರ್ಷ ಉ-ಒಕ್ಕಲುತನ 3) ಭಿಮಾಬಾಯಿ ಗಂಡ ತಿರುಪತಿ ರಾಠೋಡ ವ-45 ವರ್ಷ ಉ-ಮನೆಗೆಲಸ ಸಾ-ಎಲ್ಲರೂ ಕಡದರಾಳತಾಂಡಾ ತಾ||ಹುಣಸಗಿ ಜಿ||ಯಾದಗಿರಿ ರವರೆಲ್ಲರು ಇದ್ದು ಆರೋಪಿತರೆಲ್ಲರೂ ಹೊರಗೆ ಬಂದವರೇ ಅವರಲ್ಲಿ ಪಿರ್ಯಾದಿಯ ಮಾವನಾದ ತಿರುಪತಿ ಇವರು ಪಿರ್ಯಾದಿಯ ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ಕೆಡವಿದರು. ಆಗ ಭಿಮಾಬಾಯಿ ಇವಳು ಪಿರ್ಯಾದಿಯ ಎದೆಯ ಮೇಲೆ ಕುಳಿತು ಚಪ್ಪಲಿಯಿಂದ ಕಪಾಳಕ್ಕೆ ತಲೆಗೆ ಹೊಡೆದಳು. ಪಿರ್ಯಾದಿಯ ಹೆಂಡತಿ ಶಾಂತಾಬಾಯಿಯು ಪಿರ್ಯಾದಿಗೆ ಇವನಿಗೆ ಬಿಡಬೇಡಿ ಈ ಸೂಳೆ ಮಗನಿಗೆ ಬಾಳ ಸೊಕ್ಕು ಬಂದಿದೆ ಅದಕ್ಕಾಗಿ ಇವತ್ತು ಇವನನ್ನು ಜೀವ ಸಹಿತ ಮುಗಿಸಿಬಿಡಿ ಎಂದು ಚೀರಾಡಹತ್ತಿದಳು ಅಷ್ಟರಲ್ಲಿ ಪಿರ್ಯಾದಿಯ ಜೊತೆಗೆ ಹೋಗಿದ್ದ ಮೇಲೆ ನಮೂದಿಸಿದ ಸಾಕ್ಷಿದಾರರೆಲ್ಲರೂ ಮೇಲೆ ತೋರಿಸಿದ 3 ಜನ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿಗೆ ಹೊಡೆಯುವದನ್ನು ಬಿಡಿಸಿದರು. ಇಲ್ಲದಿದ್ದರೆ ಪಿರ್ಯಾದಿಗೆ ಅವನ ಹೆಂಡತಿ ಮತ್ತು ಹೆಂಡತಿಯ ತಂದೆತಾಯಿ ಜೀವ ಸಹಿತ ಮುಗಿಸಿಬಿಡುತ್ತಿದ್ದರು. ಕಾರಣ ಈ ಬಗ್ಗೆ ಆರೋಪಿತರ ವಿರುದ್ದ ಕ್ರಮ ಜರುಗಿಸಿ ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಪಿರ್ಯಾದಿಯವರ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:24/2021 ಕಲಂ:323,355,504,506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-04-2021 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ