ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04-05-2021

ಸುರಪೂರ ಪೊಲೀಸ್ ಠಾಣೆ :- 70/2021 ಕಲಂ: 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕಃ 03/05/2021 ರಂದು 00-15 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀಮತಿ ನೀಲಾಬಾಯಿ ಗಂಡ ಸೀತಾರಾಮ ಚವ್ಹಾಣ ಸಾ: ಹೊರುಂಚಾ ತಾಂಡಾ, ತಾ: & ಜಿಲ್ಲೆ: ಯಾದಗಿರಿ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನನ್ನ ನಾದಿನಿ ಮಗಳಾದ ಕರೀಷ್ಮಾ ತಂದೆ ಭಗವಾನ ವಯಃ 20 ವರ್ಷ ಇವಳಿಗೆ ಹುಣಸಗಿ ತಾಲೂಕಿನ ಯರಕಿಹಾಳ ತಾಂಡಾಕ್ಕೆ ಕೊಟ್ಟಿದ್ದು ಇಂದು ದಿನಾಂಕಃ 03/05/2021 ರಂದು ಯರಕಿಹಾಳ ತಾಂಡಾದಲ್ಲಿ ವರನ ಮನೆಯ ಮುಂದೆ ಮದುವೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಸದರಿ ಮದುವೆ ಕಾರ್ಯಕ್ರಮಕ್ಕೆ ಹೋಗಲು ಎರಡು ಕೃಜರ ಜೀಪಗಳನ್ನು ಬಾಡಿಗೆಗೆ ಮುಗಿಸಿದ್ದರು. ನಿನ್ನೆ ದಿನಾಂಕಃ 02/05/2021 ರಂದು ಸಾಯಂಕಾಲ ನಾವು ಮದುಮಗಳಾದ ಕರೀಷ್ಮಾ ಇವಳನ್ನು ಕರೆದುಕೊಂಡು ಮದುವೆಗೆ ಹೋಗಲು ತಯಾರಾಗಿ ನಾನು ಮತ್ತು ನನ್ನ ಗಂಡನಾದ ಸಿತಾರಾಮ ತಂದೆ ರೆಡ್ಡಿ ಚವ್ಹಾಣ ವಯಃ 45 ವರ್ಷ, ನನ್ನ ಮಗನಾದ ರಾಕೇಶ ತಂದೆ ಸಿತಾರಾಮ ಚವ್ಹಾಣ ವಯಃ 7 ವರ್ಷ ಹಾಗು ನಮ್ಮೂರಿನ ಪೂಜಾ ತಂದೆ ಡೊಂಗ್ರಿನಾಯಕ ರಾಠೋಡ, ಮೇನಕಾ ತಂದೆ ಭದ್ರ ರಾಠೋಡ, ಜ್ಯೋತಿಬಾಯಿ ಗಂಡ ವಿನೋದ ರಾಠೋಡ, ನಮ್ಮ ಸಂಬಂಧಿಕರಾದ ಕಂಚಗಾರಹಳ್ಳಿ ತಾಂಡಾದ ಸೋನಿಬಾಯಿ @ ಜಿಜಿಬಾಯಿ ಗಂಡ ಸುಭಾಶ ಚವ್ಹಾಣ, ಪಾಪಿಬಾಯಿ ಗಂಡ ಪಾಂಡು ಚವ್ಹಾಣ, ಮುದ್ನಾಳ ದೊಡ್ಡ ತಾಂಡಾದ ಘಮ್ಮಿಬಾಯಿ ಗಂಡ ರವಿ ಚವ್ಹಾಣ, ಪುನ್ಯಾ ತಂದೆ ಜಾತ್ರಾ ಚವ್ಹಾಣ, ಬೆಳಗೇರಾ ತಾಂಡಾದ ರೇಣುಕಾ ತಂದೆ ಕಿಶನ ರಾಠೋಡ ಎಲ್ಲರೂ ಕೃಜರ ಜೀಪ ನಂಬರ ಕೆ.ಎ 32 ಸಿ 5139 ನೇದ್ದರಲ್ಲಿ ಮದುಮಗಳೊಂದಿಗೆ ಕುಳಿತುಕೊಂಡೇವು. ಇನ್ನೊಂದು ಕೃಜರ ಜೀಪಿನಲ್ಲಿ ನಮ್ಮ ಸಂಬಂಧಿಕರಾದ ಜ್ಯೋತಿ ಗಂಡ ಪಾಪಾಜಿ ಚವ್ಹಾಣಹಾಗು ಇನ್ನಿತರರು ಕುಳಿತುಕೊಂಡರು. ನಾವೆಲ್ಲರೂ ಕೂಡಿ ನಿನ್ನೆ ರಾತ್ರಿ 7-30 ಗಂಟೆಯ ಸುಮಾರಿಗೆ ಹೊರುಂಚಾ ತಾಂಡಾದಿಂದ ಹೊರಟು ಯಾದಗಿರಿ, ಸುರಪೂರ ಮಾರ್ಗವಾಗಿ ಯರಕಿಹಾಳ ಕಡೆಗೆ ಹೊರಟಿದ್ದಾಗ, ರಾತ್ರಿ 9-30 ಗಂಟೆಯ ಸುಮಾರಿಗೆ ಸುರಪೂರ-ಲಿಂಗಸುಗೂರ ಮುಖ್ಯರಸ್ತೆಯ ಮೇಲೆ ತಿಂಥಣಿ ಕಮಾನ ಹತ್ತಿರದ ತಿರುವು ರಸ್ತೆಯಲ್ಲಿ ಕತ್ತಲಿನಲ್ಲಿ ಒಬ್ಬ ಲಾರಿ ಚಾಲಕನು ತನ್ನ ಲಾರಿಯ ಹಿಂದುಗಡೆ ಮುಂಜಾಗೃತ ಕ್ರಮಗಳನ್ನು ಸೂಚಿಸುವ ಇಂಡಿಕೇಟರ, ರೆಡಿಯಮ್ಗಳನ್ನು ಹಚ್ಚದೇ ನಿಷ್ಕಾಳಜಿತನದಿಂದ ರಸ್ತೆಯ ಮೇಲೆ ಲಾರಿಯನ್ನು ನಿಲ್ಲಿಸಿದರಿಂದ ನಮ್ಮ ಕೃಜರ ಜೀಪ ಚಾಲಕನಿಗೆ ಕತ್ತಲಿನಲ್ಲಿ ಮತ್ತು ತಿರುವು ರಸ್ತೆಯಲ್ಲಿ ಲಾರಿ ಕಾಣದೇ ಒಮ್ಮೆಲೆ ನಾವು ಕುಳಿತಿದ್ದ ಕೃಜರ ಜೀಪ ಲಾರಿಯ ಹಿಂಭಾಗದಲ್ಲಿ ಡಿಕ್ಕಿಯಾಗಿ ಒಳಗಡೆ ಕುಳಿತಿದ್ದ ನಮಗೆಲ್ಲರಿಗೆ ಗಾಯಗಳಾಗಿ ಚಿರಾಡುತ್ತಿದ್ದೇವು. ಆಗ ನಮ್ಮ ಹಿಂದುಗಡೆ ಹೊರಟಿದ್ದ ಕೃಜರ ಜೀಪನ ಚಾಲಕ ರವಿ ಬಳ್ಳೋಳ್ಳಿ ಸಾಃ ಯರಗೋಳ ಹಾಗು ಅದರಲ್ಲಿದ್ದವರು ಬಂದು ನಮಗೆ ಜೀಪಿನಿಂದ ಹೊರಗಡೆ ತಗೆದು ರಸ್ತೆಯ ಮೇಲೆ ಮಲಗಿದರು. ಸದರಿ ಅಪಘಾತದಲ್ಲಿ ಚಾಲಕನ ಪಕ್ಕ ಮುಂದಿನ ಸಿಟಿನಲ್ಲಿ ಕುಳಿತಿದ್ದ ನನ್ನ ಗಂಡ ಸಿತಾರಾಮನಿಗೆ ಹಣೆಯ ಮೇಲೆ ಭಾರಿರಕ್ತಗಾಯವಾಗಿ ಒದ್ದಾಡಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ನನಗೆ ಬಲಗಡೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ಬೆನ್ನು, ಎದೆಯಲ್ಲಿ ಒಳಪೆಟ್ಟಾಗಿರುತ್ತದೆ. ನನ್ನ ಮಗನಾದ ರಾಕೇಶನಿಗೆ ಎಡಗಣ್ಣಿನ ಹತ್ತಿರ ಹಾಗು ಬಲಗೈ ಹಸ್ತದ ಹತ್ತಿರ ರಕ್ತಗಾಯಗಳಾಗಿರುತ್ತವೆ. ಹಾಗು ಇನ್ನುಳಿದವರಿಗೂ ಭಾರಿ ಹಾಗು ಸಾದಾ ಸ್ವರೂಪದ ಗಾಯಗಳಾಗಿ ನರಳಾಡುತ್ತಿದ್ದಾಗ ಸ್ವಲ್ಪ ಹೊತ್ತಿನಲ್ಲಿ ಎರಡು 108 ಅಂಬ್ಯೂಲೇನ್ಸ್ ವಾಹನಗಳು ಬಂದು ಬಹಳ ಗಾಯಗಳಾಗಿ ನರಳಾಡುತ್ತಿದ್ದ ಜ್ಯೋತಿಬಾಯಿ, ಪಾಪಿಬಾಯಿ, ಕರಿಷ್ಮಾ, ರೇಣುಕಾ, ಪುನ್ಯಾ ಹಾಗು ನಮ್ಮ ಕೃಜರ ಜೀಪ ಚಾಲಕನಾದ ತಾಯಪ್ಪ ತಂದೆ ಹಣಮಂತ ಸಾಃ ವಡ್ನಳ್ಳಿ ಇವರಿಗೆ ಹಾಕಿಕೊಂಡು ಲಿಂಗಸುಗೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಮ್ಮ ಹಿಂದುಗಡೆ ಹೊರಟಿದ್ದ ಕೃಜರ ಜೀಪ ಚಾಲಕನಾದ ರವಿ ಇತನು ತನ್ನ ಜೀಪಿನಲ್ಲಿ ನನಗೆ ಮತ್ತು ನನ್ನ ಮಗ ರಾಕೇಶ, ಹಾಗು ಪೂಜಾ, ಮೇನಕಾ, ಸೋನಿಬಾಯಿ, ಘಮ್ಮಿಬಾಯಿ ಎಲ್ಲರಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ನಮಗೆ ಅಪಘಾತ ಪಡಿಸಿದ ಲಾರಿ ನಂಬರ ನೋಡಲಾಗಿ ಕೆ.ಎ 45-8091 ಇದ್ದು ಅದರ ಚಾಲಕನು ನಮಗೆ ಅಪಘಾತವಾಗಿ ನರಳಾಡುವದನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಹೆಸರು, ವಿಳಾಸ ನಮಗೆ ಗೊತ್ತಿರುವದಿಲ್ಲ. ಆತನಿಗೆ ನೋಡಿದಲ್ಲಿ ಗುರುತಿಸುತ್ತೇನೆ ಅಂತ ವಗೈರೆ ಹೇಳಿಕೆ ಸಾರಾಂಶದ ಠಾಣೆ ಗುನ್ನೆ ನಂಬರ 70/2021 ಕಲಂ. 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಹುಣಸಗಿ ಪೊಲೀಸ್ ಠಾಣೆ :- 26/2021 341, 427, 504, 506 ಸಂ. 34 ಐಪಿಸಿ:ದಿನಾಂಕ:29/04/2021 ರಂದು ಫಿರ್ಯಾದಿಯ ಅಕ್ಕಳ ಹೆಸರಿನಲ್ಲಿರುವ ಹುಣಸಗಿ ಪಟ್ಟಣ ಪಂಚಾಯತಿ ಆಸ್ತಿ ನಂ:26-105, 26-106 ನೇ ಪ್ಲಾಟ ನೇದ್ದರಲ್ಲಿ ಆರೋಫಿತರೆಲ್ಲರೂ ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ, ಅರಬಿಯನ್ನು ಕಟ್ಟಿ ಬಂಬಗಳನ್ನು ಹಾಕಿರುವದನ್ನು ನೋಡಿ, ಫಿರ್ಯಾದಿ ಅವರ ಹತ್ತಿರ ಹೋಗಿ ಏಕೆ ನಮ್ಮ ಅಕ್ಕನ ಜಾಗದಲ್ಲಿ ಬಂಬು ಹಾಕಿದ್ದರಿ & ಬಟ್ಟಿ ಕಟ್ಟಿದ್ದರಿ ಅಂತಾ ಕೇಳಿದಾಗ, ಫಿರ್ಯಾದಿಗೆ ಆರೋಪಿ ನಂ:1 & 2 ನೇದ್ದವರು ಮುಂದೆ ಹೋಗದಂತೆ ಆಕ್ರಮವಾಗಿ ತಡೆದು ನಿಲ್ಲಿಸಿದ್ದು, ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೆ ಆರೋಪಿತರೆಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆಯನ್ನು ಹಾಕಿದ್ದು, ಅಲ್ಲಿಯೇ ಇದ್ದ 2 ಜನರು ನೋಡಿ ಜಗಳವನ್ನು ಬಿಡಿಸಿದ್ದು ಇರುತ್ತದೆ. ಫಿರ್ಯಾದಿಯು ಊರ ಹಿರಿಯರಿಗೆ ವಿಷಯ ತಿಳಿಸಿ ತಡವಾಗಿ ಬಂದು ಒಂದು ಟೈಪ್ ಮಾಡಿದ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ :- 60/2021 ಕಲಂ: 279,3337,338 ಐ.ಪಿ.ಸಿ : ದಿನಾಂಕ 02.05.2021 ರಂದು ಕಲಬುರಗಿ ಯುನೈಟೆಡ್ ಆಸ್ಪತ್ರೆಯಿಂದ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಮಗನಾದ ಶರಣಪ್ಪ ತಂದೆ ಮಲ್ಲಪ್ಪ ಸಗರ ಸಾ|| ಕಿರದಳ್ಳಿ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ನಮ್ಮ ಅಕ್ಕನ ಮಗನಾದ ಪರಶುರಾಮ ಸಾ|| ಪರಸನಳ್ಳಿ ಈತನ ಮದುವೆಯಿದ್ದ ಕಾರಣ ನಮ್ಮೂರಿನಿಂದ ಪರಸನಳ್ಳಿಗೆ ನಮ್ಮ ತಾಯಿಯಾದ ಯಮನಮ್ಮ ಗಂಡ ಮಲ್ಲಪ್ಪ ಸಗರ ವಯಾ|| 60 ಇವಳು ಹೋಗಿದ್ದಳು.ಹೀಗಿದ್ದು ದಿನಾಂಕ: 01/05/2021 ರಂದು ಬೆಳಿಗ್ಗೆ 8.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಳಿಯನಾದ ಪರಶುರಾಮ ತಂದೆ ನಿಂಗಪ್ಪ ಕಕ್ಕೇರಿ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತಾನು ಹಾಗೂ ನಮ್ಮ ತಾಯಿ ಯಮನಮ್ಮ ಇಬ್ಬರು ಕೂಡಿಕೊಂಡು ಸುರಪುರಕ್ಕೆ ಹೋಗುವ ಕುರಿತು ಮೋಟರ ಸೈಕಲ್ ನಂ ಕೆಎ 28 ಇಸಿ 0162 ನೇದ್ದರಲ್ಲಿ ಕಿರದಳ್ಳಿ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಒಂದು ನಾಯಿ ಅಡ್ಡ ಬಂದಿದ್ದರಿಂದ ನಾನು ಹಾಗೂ ಅಜ್ಜಿ ಯಮನಮ್ಮ ಇಬ್ಬರು ಮೋಟರ ಸೈಕಲ್ ಸಮೇತ ಸ್ಕಿಡ್ಡಾಗಿ ಬಿದ್ದಿರುತ್ತೇವೆ ಅಂತ ತಿಳಿಸಿದಾಗ ಕೂಡಲೆ ನಾನು ಕಿರದಳ್ಳಿ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ನಮ್ಮ ತಾಯಿ ಹಾಗೂ ಅಳಿಯ ಇಬ್ಬರು ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದು, ನಮ್ಮ ಅಳಿಯನಿಗೆ ನೋಡಲಾಗಿ ಬಲಗೈ ಮೊಳಕೈಗೆ ಬಲಗಾಲ ಪಾದಕ್ಕೆ ತರಚಿದ ಗಾಯಗಳಾಗಿ ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ತಾಯಿಯಾದ ಯಮನಮ್ಮ ಇವರಿಗೆ ನೋಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಬೆನ್ನಿಗೆ ಮತ್ತು ಮೂಗಿಗೆ ತರಚಿದ ಗಾಯಗಳಾಗಿದ್ದು ನಮ್ಮ ತಾಯಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೆ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಘಟನೆಗೆ ಮೋಟರ ಸೈಕಲ್ ಚಾಲಕನಾದ ಅಳಿಯ ಪರಶುರಾಮ ತಂದೆ ನಿಂಗಪ್ಪ ಕಕ್ಕೇರಿ ಸಾ|| ಪರಸನಳ್ಳಿ ಈತನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಮರಳಿ ಠಾಣೆಗೆ ಇಂದು ದಿ: 03/05/2021 ರಂದು 1 ಪಿಎಮ್ಕ್ಕೆ ಬಂದು ಠಾಣಾ ಗುನ್ನೆ ನಂಬರ 60/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-05-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080