ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04-06-2021

ಹುಣಸಗಿ ಪೊಲೀಸ್ ಠಾಣೆ :- 31/2021 188, 269, 270 ಐಪಿಸಿ : ಬಲಶೆಟ್ಟಿಹಾಳ ಗ್ರಾಮದಲ್ಲಿ ವಾರದ ಸಂತೆ ಇದ್ದ ಪ್ರಯುಕ್ತ ಫಿರ್ಯಾದಿದಾರರು ಸಂಗಡ ಸಿಬ್ಬಂದಿಯವರೊಂದಿಗೆ ದಿನಾಂಕ:03/06/2021 ರಂದು ಬೆಳಿಗ್ಗೆ 09.00 ಗಂಟೆಯ ಸುಮಾರಿಗೆ ಹೋದಾಗ ಕುಂಬಾರ ಬಿಲ್ಡಿಂಗ್ ಮುಂದೆ ಪತ್ರಾಸ ಶೆಡ್ಡಿನಲ್ಲಿ ಬಲಶೆಟ್ಟಿಹಾಳ ಗ್ರಾಮದ ಮಹ್ಮದರಪೀಕ್ ತಂದೆ ಅಹಿಬಸಾಬ ತಾಳಿಕೋಟಿ (ತಾರಗಾರ) ಸಾ:ದ್ಯಾಮನಾಳ ಹಾ:ವ:ಬಲಶೆಟ್ಟಿಹಾಳ ತಾ:ಹುಣಸಗಿ ಜಿ:ಯಾದಗಿರಿ ಈತನು ಮೊಬೈಲ್ ಮಾರಾಟ & ರಿಪೇರಿ ಅಂಡಿಯನ್ನು ತೆರೆದು ಮೊಬೈಲ್ ಮಾರಾಟ ಮೊಬೈಲ್ ರಿಪೇರಿ ಮಾಡುತ್ತಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ:ಕಂ:ದಂಡ:ಕೋವಿಡ್-19:53:2019-20 ದಿ:21/05/2021ರ ಪ್ರಕಾರ ಬಲಶೆಟ್ಟಿಹಾಳ ಗ್ರಾಮದಲ್ಲಿ ಮೊಬೈಲ್ ರಿಪೇರಿ & ಮಾರಾಟ ಮಾಡಲು ನಿಷೇಧ ಇದ್ದರೂ ಸಹ ಆರೋಪಿತನು ಸದರಿ ಅಂಗಡಿಯನ್ನು ತೆರೆದು ಮಾನ್ಯ ಜಿಲ್ಲಾಧಿಕರಿಗಳ ಆದೇಶವನ್ನು ಉಲ್ಲಂಘನೆ ಮಾಡಿ, ಅಂಗಡಿಯನ್ನು ತೆರೆದು ಮೊಬೈಲ್ ಮಾರಾಟ & ರಿಪೇರಿ

ಹುಣಸಗಿ ಪೊಲೀಸ್ ಠಾಣೆ :- 32/2021 188, 269, 270 ಐಪಿಸಿ : ಬಲಶೆಟ್ಟಿಹಾಳ ಗ್ರಾಮದಲ್ಲಿ ವಾರದ ಸಂತೆ ಇದ್ದ ಪ್ರಯುಕ್ತ ಫಿರ್ಯಾದಿದಾರರು ಸಂಗಡ ಸಿಬ್ಬಂದಿಯವರೊಂದಿಗೆ ದಿನಾಂಕ:03/06/2021 ರಂದು ಬೆಳಿಗ್ಗೆ 09.00 ಗಂಟೆಯ ಸುಮಾರಿಗೆ ಬಲಶೆಟ್ಟಿಹಾಳ ಗ್ರಾಮಕೆ ಹೋಗಿ 09.30 ಗಂಟೆಗೆ ಕುಂಬಾರ ಕಾಂಪ್ಲೆಕ್ಸ್ದಲ್ಲಿ ಹೋದಾಗ, ಸದರಿ ಕಾಂಪ್ಲೆಕ್ಸನ ಉತ್ತರಕ್ಕೆ ಮುಖಮಾಡಿ ಇರುವ ಅಂಗಡಿಯಲ್ಲಿ ಬಲಶೆಟ್ಟಿಹಾಳ ಗ್ರಾಮದ ಸಂಗಣ್ಣ ತಂದೆ ಬಸಪ್ಪ ಕುಂಬಾರ ವಯಾ-32ವರ್ಷ, ಜಾ:ಲಿಂಗಾಯತ ಕುಂಬಾರ ಉ:ವ್ಯಾಪಾರ ಸಾ:ಬಲಶೆಟ್ಟಿಹಾಳ ತಾ:ಹುಣಸಗಿ ಜಿ:ಯಾದಗಿರಿ ಈತನು ಲೇಡಿಜ್ ಕಾರ್ನರ ಅಂಗಡಿ ತೆರೆದು ಮಾರಾಟ ಮಾಡಿಕೊಂಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ:ಕಂ:ದಂಡ:ಕೋವಿಡ್-19:53:2019-20 ದಿ:21/05/2021ರ ಪ್ರಕಾರ ಸದರಿ ಅಂಗಡಿ ತೆರೆಯಲು ನಿಷೇಧವಿದ್ದರೂ ಮಾನ್ಯ ಜಿಲ್ಲಾಧಿಕರಿಗಳ ಆದೇಶವನ್ನು ಉಲ್ಲಂಘನೆ ಮಾಡಿ.
ಸುರಪೂರ ಪೊಲೀಸ್ ಠಾಣೆ :- 98/2021 ಕಲಂ: 143 147 148 323 324,326,307, 504 506 ಸಂಗಡ 149 ಐಪಿಸಿ : ಇಂದು ದಿನಾಂಕಃ 03/06/2021 ರಂದು 11-30 ಎ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ಮಾನಪ್ಪತಂದೆ ಮಾಹಾದೇವಪ್ಪ ಮೂಲಿಮನಿ ವಯಸ್ಸು:33 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ದೇವರಗೋನಾಲ ಇವರುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿದಅಜರ್ಿತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:26-05-2021 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ನನ್ನತಮ್ಮನಾದ ವಿಜಯತಂದೆ ಮಾಹಾದೇವಪ್ಪ ಮೂಲಿಮನಿ, ಹಾಗೂ ನಮ್ಮಅಣ್ಣತಮಕಿಯವರಾದ ಬೀಮಪ್ಪತಂದೆದುರ್ಗಪ್ಪ ಸುರಪೂರ, ಬಸಪ್ಪತಂದೆ ಮಾನಪ್ಪಕಟ್ಟಿಮನಿ, ಮಲ್ಲಪ್ಪತಂದೆ ಮಾನಪ್ಪಕಟ್ಟಿಮನಿ, ಅಮಾತೆಪ್ಪತಂದೆ ಮಾನಪ್ಪಟಕರೇರ, ಬಾಲಪ್ಪತಂದೆ ಮಾನಪ್ಪ ಸುರಪೂರ, ಮಹೇಶ ತಂದೆಆನಂದಪ್ಪ ಮೂಲಿಮನಿ, ಮಾರ್ಥಂಡಪ್ಪತಂದೆ ಬೀಮರಾಯಕಟ್ಟಿಮನಿ ಎಲ್ಲರೂ ನಮ್ಮಓಣಿಯ ಲಕ್ಷ್ಮಣತಂದೆ ಬಸಪ್ಪಕಟ್ಟಿಮನಿ ಇವರ ಮನೆಯ ಮುಂದಿನ ಸಿಸಿ ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತುಕೊಂಡಿರುವಾಗಾಗಅದೇ ಸಮಯಕ್ಕೆ ನಮ್ಮೂರ ಹೊಲೆಯರಜನಾಂಗದ ಹುಡುಗನಾದ ಹಣಮಂತತಂದೆ ಶಿವಪ್ಪ ಕೊಂಬಿನ್ ಈತನು ಪೋನಿನಲ್ಲಿ ಮಾತನಾಡುತ್ತಾ ನಾನು ಮಾದರಓಣಿಯಲ್ಲಿದ್ದೆನೆ. ನಾನು ಮಾದರಓಣಿಯಲ್ಲಿಇದ್ದೆನೆಅಂತಾ ಹಲವಾರು ಸಲ ಪದೇ ಪದೇಅದೆ ಮಾತು ಹೇಳುತ್ತಿರುವಾಗ ಅಲ್ಲೆ ನಿಂತಿದ್ದ ಅವನಿಗೆ ನಾನು ಹಾಗೇ ಜಾತಿಎತ್ತಿ ಮಾತನಾಡಬಾರದುಅಂತಾ ಹೇಳಿದಾಗ ಅವನು ನಾನು ಹೀಗೆ ಮಾತಾಡೋದು ನೋಡು ನೀವೆನು ಶಂಟಾ ಮಾಡತೀರಿ ನಮ್ಮವರನ್ನುಕರೆದುಕೊಂಡು ಬಂದುಒಂದು ಕೈ ನೊಡೆ ಬಿಡುತ್ತೆನೆಅಂತಾಅನ್ನುತ್ತಾಅಲ್ಲಿಂದ ಹೊರಟು ಹೋಗಿದ್ದನು. ನಾವು ಅದಕ್ಕೆ ಎನು ಅನ್ನದೆ ಸುಮ್ಮನಿದ್ದೆವು. ಹೀಗಿದ್ದುಅದೆ ದಿವಸ ರಾತ್ರಿ 8 ಗಂಟೆ ಸುಮಾರಿಗೆ ನಾವು ಇದೆ ವಿಷಯವಾಗಿ ಮೇಲೆ ಹೇಳಿದವರೆಲ್ಲರು ನಮ್ಮಓಣಿಯಕೆಂಚಮ್ಮನಗುಡಿಯಕಟ್ಟೆಯ ಮೇಲೆ ಕುಳಿತುಕೊಂಡು ಚಚರ್ೆ ಮಾಡುತ್ತಾ ಮಾತನಾಡುತ್ತಾ ಕುಳಿತಿರುವಾಗ ಅದೇ ಸಮಯಕ್ಕೆ ಹೊಲೆಯರಜನಾಂಗದವರಾದಆರೋಪಿತರೆಲ್ಲರೂತಮ್ಮಕೈಯಲ್ಲಿರಾಡು, ಬಡಿಗೆಗಳನ್ನು ಹಿಡಿದುಕೊಂಡುಗುಂಪುಕಟ್ಟಿಕೊಂಡು ನಮ್ಮ ಹತ್ತಿರ ಬಂದವರೆ ಸುಮ್ಮನೆ ಕುಳಿತಿದ್ದ ನಮ್ಮೇಲ್ಲರಿಗೂ ಏನಲೇ ಮಾದಿಗಜಾತಿಯ ಸುಳೇ ಮಕ್ಕಳೆ ಮಧ್ಯಾಹ್ನ ಸಮಯದಲ್ಲಿ ನಮ್ಮ ಹೊಲೆಯರ ಹುಡುಗ ನಿಮ್ಮಓಣಿಯಲ್ಲಿ ಮಾತನಾಡುತ್ತಾ ಹೋಗುತ್ತಿರುವಾಗ ಅವನಿಗೆ ಬೈದು ಕಳಿಸಿದಿರಂತೆ ಇವತ್ತು ನಿಮಗೆ ಒಂದು ಕೈ ನೊಡೆ ಬಿಡುತ್ತೆವೆಅಂತಾಅಂದವರೆಕೊಲೆ ಮಾಡುವಉದ್ದೇಶದಿಂದಅವರಲ್ಲಿಯ ಬೀಮಪ್ಪ ಸಾದುಈತನುತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದಒಂದುರಾಡಿನಿಂದ ಬಾಲಪ್ಪ ಸುರಪೂರಈತನತಲೆಯ ಹಿಂದುಗಡೆ ಹೊಡೆದು ಭಾರಿರಕ್ತಗಾಯ ಮಾಡಿದಲ್ಲದೆ ಬಲಗೈ ರಟ್ಟೆಗೆ ಹೊಡೆದು ಗುಪ್ತಗಾಯಗೊಳಿಸಿದನು. ವಿಜಯಕುಮಾರ ಮೂಲಿಮನಿ ಈತನಿಗೆ ನಾಗಪ್ಪ ಬೊಮ್ಮನಳ್ಳಿ ಇವನು ತನ್ನಕೈಯಲ್ಲಿಯ ಬಡಿಗೆಯಿಂದತಲೆಯ ನೆತ್ತಿಯ ಮೇಲೆ, ಎಡಗಡೆ ಬುಜಕ್ಕೆ ಹೊಡೆದುರಕ್ತಗಾಯ ಮತ್ತುಗುಪ್ತಗಾಯ ಪಡಿಸಿದನು. ಬೀಮಣ್ಣ ಸುರಪೂರಈತನಿಗೆ ಶಾಂತಪ್ಪ ಕಳಸನವರ ಈತನುತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದ ಅವನ ತಲೆಗೆ ಮತ್ತುಎಡಗೈ ಮುಂಗೈಗೆ, ಹಾಗೂ ನಿಂಗಪ್ಪಕರಿಗುಡ್ಡಈತನುತನ್ನತಂದಿದ್ದಒಂದು ಬಡಿಗೆಯಿಂದ ಅವನ ಬಲ ರಟ್ಟೆಗೆಎಡಗೈ ಮುಂಡಿಗೆ ಹೊಡೆದುರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದರು. ಮಲ್ಲಪ್ಪಕಟ್ಟಿಮನಿ ಈತನಿಗೆಚಿದಾನಂದಈತನುಒಂದು ಬಡಿಗೆಯಿಂದ ಹಣೆಗೆ ಮತ್ತು ಬಲ ರಟ್ಟೆಗೆ ಹೊಡೆದುರಕ್ತಗಾಯ ಮಾಡಿದನು. ನಿಂಗಪ್ಪ ಸಾದುಈತನು ಕಾಲಿನಿಂದ ಬೆನ್ನಿಗೆಒದ್ದನು. ಮಹೇಶ ಮೂಲಿಮನಿ ಈತನಿಗೆ ನಿಂಗಪ್ಪ ಸಾದುಈತನುಅಲ್ಲೆ ಬಿದ್ದಒಂದುಕಲ್ಲಿನಿಂದ ಬಲಗೈಗೆ ಹೊಡೆದುರಕ್ತಗಾಯ ಪಡಿಸಿದನು. ಅಮಾತೆಪ್ಪಟಕರೇರಈತನಿಗೆ ಮೌನೇಶತಂದೆ ಬೀಮಪ್ಪಈತನುಒಂದು ಬಡಿಗೆಯಿಂದ ಅವನ ತಲೆಯ ಹಿಂದುಗಡೆ ಹಾಗೂ ಮೌನೇಶತಂದೆಚಂದ್ರಪ್ಪಈತನುಒಂದು ಬಡಿಗೆಯಿಂದಎಡ ಮುಂಡಿಗೆ ಹೊಡೆದು ಗಾಯಗೊಳಿಸಿದನು. ಬಸಪ್ಪಕಟ್ಟಿಮನಿ ಈತನಿಗೆ ಹಣಮಂತ ಕೊಂಬಿನ ಈತನು ಬಸಪ್ಪಕಟ್ಟಿಮನಿ ಈತನಿಗೆತನ್ನಕೈಯಲ್ಲಿಯ ಬಡಿಗೆಯಿಂದಎಡಗಡೆ ಮೇಲಕಿನ ಹತ್ತಿರ ಹೊಡೆದುರಕ್ತಗಾಯ ಹಾಗೂ ತಲೆಗೆ ಹೊಡೆದುಗುಪ್ತಗಾಯ ಪಡಿಸಿದನು. ನನಗೆ ಶರಣಪ್ಪಗಡ್ಡದಈತನುಒಂದುಕಲ್ಲಿನಿಂದ ನನ್ನ ಬಲಗಡೆತಲೆಗೆ ಹೊಡೆದು ಗಾಯಗೊಳಿಸಿದನು, ಮಂಜುನಾಥ ಮಾಗಂಡಿ, ಮಾನಪ್ಪ ಮಾಗಂಡಿ, ಬೀಮಪ್ಪ ಮತ್ತು ಶ್ರೀರಾಮ್ ಕಳಸನವರ ಈ ನಾಲ್ಕು ಜನರು ಮಾರ್ಥಂಡಪ್ಪಕಟ್ಟಿಮನಿ ಈತನಿಗೆತಕ್ಕೆಯಲ್ಲಿ ಹಿಡಿದುಕೊಂಡುಕೈಯಿಂದತಲೆಗೆ ಬಲಗೈಗೆ ಹೊಡೆದು ಗುಪ್ತಗಾಯಗೊಳಿಸಿ ಎಲ್ಲರೂಕೂಡಿ ನಮ್ಮೆಲ್ಲರಿಗೂ ಹೊಡೆ ಬಡೆ ಮಾಡುತ್ತಿರುವಾಗ ನಮ್ಮಓಣಿಯಕುಶಪ್ಪತಂದೆ ಮಾನಪ್ಪಕಟ್ಟಿಮನಿ, ಹಣಮಂತತಂದೆ ಹಯ್ಯಾಳಪ್ಪ ಕಟ್ಟಿಮನಿ, ಹಯ್ಯಾಳಪ್ಪ ತಂದೆತಿಪ್ಪಣ್ಣ ಮೂಲಿಮನಿ, ಶಿವಲಿಂಗಪ್ಪ ತಂದೆ ನಾಗಪ್ಪ ಮೂಲಿಮನಿ, ಬಾಲಪ್ಪತಂದೆ ಹಣಮಂತ ಪೂಜಾರಿಇವರು ಬಂದು ಜಗಳ ಬಿಡಿಸಿದರು ಆಗ ಅವರುಇವತ್ತು ಉಳದಿರಿ ಸುಳೇ ಮಕ್ಕಳೆ ಇನ್ನೊಮ್ಮೊ ನಮ್ಮಜಾತಿಯವರತಂಟೆಗೆ ಬಂದರೆಜೀವ ಹೊಡೆಯುವದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ನಂತರಗಾಯಗೊಂಡ ನಾವೆಲ್ಲರೂಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸುರಪೂರ ಸರಕಾರಿಆಸ್ಪತ್ರೆಗೆ ಬಂದು ಸೇರಿಕೆಯಾಗಿಉಪಚಾರ ಪಡೆದುಕೊಂಡಿದ್ದು, ನಾನು ಮಹೇಶ ಮೂಲಿಮನಿ ಇಬ್ಬರು ಹೊರತು ಪಡಿಸಿ ಉಳಿದ 7 ಜನರಲ್ಲಿ ಬಾಲಪ್ಪ ಸುರಪೂರಈತನು ಕಲಬುರಗಿಯನೈಟೆಡ್ಆಸ್ಪತ್ರೆಗೆ ಸೇರಿಕೆಯಾಗಿಉಪಚಾರ ಪಡೆಯುತ್ತಿದ್ದು ಇನ್ನುಳಿದವರು ಯಾದಗಿರಿಯ ಸರಕಾರಿಆಸ್ಪತ್ರೆಗೆ ಸೇರಿಕೆಯಾಗಿಉಪಚಾರ ಪಡೆದುಕೊಂಡಿರುತ್ತಾರೆ. ಜಗಳವು ನಮ್ಮೂರ ನಮ್ಮಜನಾಂಗ ಹಾಗೂ ನಮ್ಮೂರ ಹೊಲೆಯರಜನಾಂಗದ ಮಧ್ಯಆಗಿದ್ದರಿಂದ ಹಾಗೂ ಊರ ವಿಷಯವಾಗಿದ್ದರಿಂದ ನಾವು ದೂರುಕೊಡದೆ ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರ ಮಾಡಿಇಂದುಠಾಣೆಗೆತಡವಾಗಿ ಬಂದುದೂರು ನಿಡಿದ್ದುಇರುತ್ತದೆ. ಮೇಲೆ ಹೇಳಿದ 14 ಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಸೈದಾಪೂರ ಪೊಲೀಸ್ ಠಾಣೆ :- 86/2021, ಕಲಂ. 341, 323,324,504.506. ಸಂ.34 ಐ ಪಿ ಸಿ : ದಿನಾಂಕ: 03-06-2021 ರಂದು ಸಾಯಂಕಾಲ 04-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 03-06-2021 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ನಾನು ಹೊಲಕ್ಕೆ ಹೋಗಬೇಕಂತ ನಮ್ಮೂರಿನ ನಾಕಿನ್ ಕಟ್ಟೆ ಹತ್ತಿರ ಇರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಲೇ ಸುಳೆ ಮಗನೆ ನಮ್ಮ ಹೊಲದ ಮ್ಯಾರಿ ಯಾಕೆ ಹೊಡದಿ ಸೂಳೆ ಮಗನೆ ನೀನು ಪದೆ ಪದೆ ಹೊಲದ ಮ್ಯಾರಿ ಹೊಡೆತಿ ಅಂತಾ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತ ಪೆಟ್ಟು ಮಾಡಿ ಅಂಜಿ ಹೋಗುತ್ತಿರುವಾಗ ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ

ಶಹಾಪೂರ ಪೊಲೀಸ್ ಠಾಣೆ :- 119/2021 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ: 03-06-2021 ರಂದು 8:30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ (ಅ.ವಿ.) ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 03-06-2021 ರಂದು 7:00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪುರ ನಗರ ಇಂಡಸ್ಟ್ರೀಯಲ್ ಏರಿಯಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಗುಪ್ತ ಸಿಬ್ಬಂದಿಯವರಿಂದ ಮಾಹಿತಿ ಬಂದ ಬಗ್ಗೆ ಮಾನ್ಯ ಪಿ.ಐ ಸಾಹೇಬರು ತಿಳಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 29/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಇಸ್ಪೀಟ ಜುಜಾಟ ಆಡುವ ವ್ಯಕ್ರಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.119/2021 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ನಂತರ ದಾಳಿಗೆ ಹೋಗಿ ದಾಳಿಮಾಡಿ 9 ಜನ ಆರೋಪಿತರು ಮತ್ತು 11300/- ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

ಸೈದಾಪೂರ ಪೊಲೀಸ್ ಠಾಣೆ :- 87/2021 ಕಲಂ. 341, 323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ. 03.06.2021 ರಂದು ಸಾಯಂಕಾಲ 6.00 ಗಂಟೆಗೆ ಬೀರಪ್ಪ ತಂದೆ ಹಯ್ಯಾಳಪ್ಪ ಕೋಟೆಪ್ಪನ್ನೋರ ವಯ|| 21 ವರ್ಷ, ಜಾ|| ಕುರುಬರ ಉ|| ವಿದ್ಯಾಥರ್ಿ ಸಾ|| ಕರಣಗಿ ತಾ|| ಗುರುಮಠಕಲ ಜಿ|| ಯಾದಗಿರಿ .ಇವರು ಠಾಣೆಗೆ ಬಂದು ನೀಡಿದ ದೂರು ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ. 03.06.2021 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಫಿಯರ್ಾದಿ ತಮ್ಮ ಜಮೀನುದಿಂದ ಮನೆಗೆ ಹೊರಟಾಗ ಕರಣಗಿ ಗ್ರಾಮದ ನಾಕಿನರವರ ಕಟ್ಟೆ ಹತ್ತಿರ ಆರೋಪಿತರೆಲ್ಲರೆಲ್ಲರೂ ಗುಂಪುಕಟ್ಟಿಕೊಂಡು ಕೈಯಲ್ಲಿ, ಕಲ್ಲು, ಬಡಿಗೆ ಹಿದುಕೊಂಡು ಬಂದು ದೂರುದಾರನಿಗೆ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕಲ್ಲು,ಕಟ್ಟಿಗೆಯಿಂದ ಫಿಯರ್ಾದಿ ತಲೆಗೆ ಕೈಗೆ, ಕಾಲಿಗೆ ಹೊಡೆದು ರಕ್ತಗಾಯ, ಗುಪ್ತಗಾಯ ಮಾಡಿ, ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು ಸಾರಾಂಶ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 99/2021 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 02/06/2021 ರಂದು 2:00 ಪಿ.ಎಂ ಕ್ಕೆ ಕ್ಕೆ ಶ್ರೀಮತಿ ಕವಿತಾ ಗಂಡ ಮಾನಪ್ಪ ಕವಡಿಮಟ್ಟಿ ವ|| 37 ವರ್ಷ ಜಾ|| ಮಾದಿಗ ಉ|| ಮನೆಗೆಲಸ ಸಾ|| ಜಾಲಗಾರ ಓಣಿ ಸುರಪುರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಆರು ಜನ ಮಕ್ಕಳಿದ್ದು, ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇರುತ್ತಾಳೆ. ನಮ್ಮ ಮನೆಯ ಬಾಜು ಮನೆಯವರಾದ ಮಾನಪ್ಪ ಕವಡಿಮಟ್ಟಿ ಇವರು ನಮ್ಮ ಜೊತೆ ಮನೆಯ ದಾರಿಯ ವಿಷಯವಾಗಿ ಆಗಾಗ ನಮ್ಮ ಜೊತೆ ಜಗಳ ಮಾಡುತ್ತಾ ಬಂದಿರುತ್ತಾರೆ. ನಾವು ಸರಿ ಹೊಗಬಹುದು ಅಂತಾ ಸುಮ್ಮನಿದ್ದೇವು. ದಿನಾಂಕ:02/06/2021 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ಯಾರೋ ಒಬ್ಬರು ನಮ್ಮ ಮನೆಯ ಮುಂದೆ ಹಾದು ಹೊಗುವಾಗ ನಾನು ಇಲ್ಲಿ ಯಾಕೆ ಹೊಗುತ್ತಿರಿ ದಾರಿ ಹಿಡಿದು ಹೊಗರಿ ಅಂತಾ ಹೇಳಿದ್ದಕ್ಕೆ ಅವರು ನನಗೆ ಗೊತ್ತಿರುವದಿಲ್ಲ. ಇನ್ನೊಮ್ಮ ಬರುವದಿಲ್ಲ ಅಂತಾ ಹೇಳಿ ಹೊದನು. ಹಿಗಿದ್ದು ನಿನ್ನೆ ದಿನಾಂಕ:02/06/2021 ರಂದು ಮುಂಜಾನೆ 10:00 ಗಂಟೆಗೆ ನಾನು ಮತ್ತು ನನ್ನ ಮಗ ನಾಗರಾಜ, ಮಗಳು ಪ್ರೇಮಾ ಮೂವರು ಮನೆಯಲ್ಲಿದ್ದಾಗ ನಮ್ಮ ಜನಾಂಗದವರಾದ 1) ಮಾನಪ್ಪ ತಂದೆ ಅಮಲಪ್ಪ ಕವಡಿಮಟ್ಟಿ (ವಕೀಲರು), 2) ಕವಿತಾ ಗಂಡ ಮಾನಪ್ಪ ಕವಡಿಮಟ್ಟಿ, 3) ಸಾಗರ ತಂದೆ ಮಾನಪ್ಪ ಕವಡಿಮಟ್ಟಿ, 4) ಸತೀಶ ತಂದೆ ಮಾನಪ್ಪ ಕವಡಿಮಟ್ಟಿ, 5) ಸುಷ್ಮೀತಾ ತಂದೆ ಮಾನಪ್ಪ ಕವಡಿಮಟ್ಟಿ, 6) ಮಲ್ಲಪ್ಪ ತಂದೆ ಮಲ್ಲಪ್ಪ ಬಿಲ್ಲವ ಸಾ|| ರುಕ್ಮಾಪುರ ಎಲ್ಲರು ಅಕ್ರಮ ಕೂಟ್ ರಚಿಸಿಕೊಂಡು ತಮ್ಮ ಕೈಯಲ್ಲಿ ಬಿಡಿಗೆ ಕಲ್ಲು ಹಿಡಿದುಕೊಂಡು ಬಂದವರೆ ಮಾನಪ್ಪ ಇತನು ಏನಲೇ ನಾಗೇ ಸೂಳೆ ಮಗನೆ ನಮ್ಮ ಮನೆಗೆ ಬರುವವರು ನಿಮ್ಮ ಮನೆಯ ಮುಂದೆ ಯಾಕೆ ಬರುತ್ತಾರೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರಿ ಅಂತಾ ಕೇಳುತ್ತಿದ್ದಾಗ ನನ್ನ ಮಗನು ನಾವು ಅವರಿಗೆ ಏನು ಅಂದಿರುವದಿಲ್ಲ ಅಂತಾ ಅನ್ನುತ್ತಿರುವಾಗ ನನ್ನ ಮಗನಿಗೆ ಮಾನಪ್ಪ ಇತನು ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು, ಸಾಗರ ಮತ್ತು ಸತೀಶ ಇಬ್ಬರು ಕೈಯಿಂದ ಮೈಕೈಗೆ ಹೊಡೆದು, ಮಲ್ಲಪ್ಪ ಬಿಲ್ಲವ ಇತನು ಕಾಲಿನಿಂದ ಒದ್ದು ಗುಪ್ತಗಾಯ ಮಾಡಿದರು. ಬಿಡಿಸಲು ಹೊದ ನನಗೆ ಕವಿತಾ ಇವಳು ಕಬ್ಬಿಣದ ಕೊಳವೆ ಇಂದ ಬೆನ್ನಿಗೆ, ಎಡಗೈ ಮಣಿಕಟ್ಟಿಗೆ, ಎರಡು ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದಳು, ಸುಷ್ಮೀತಾ ಇವಳು ನನ್ನ ಮಗಳು ಪ್ರೇಮಾ ಇವಳಿಗೆ ಕಲ್ಲಿನಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದಳು, ನಾವು ಚಿರಾಡುವುದನ್ನು ಕೇಳಿ ಅಲ್ಲೆ ಹೊರಟಿದ್ದ ನನ್ನ ಮಗಳು ಹುಲಗಮ್ಮ ಗಂಡ ಪರಮಣ್ಣ ತಳಿಗೇರಿ, ಪರಮಣ್ಣ ತಂದೆ ರಾಮಣ್ಣ ತಳಗೇರಿ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂ ಇವತ್ತು ಜನರು ಬಂದು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ನಿಮ್ಮ ಮನೆಯಲ್ಲಿ ಒಬ್ಬರಿಗಾದರೂ ಖಲಾಸ ಮಾಡುವತನಕ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನನಗೆ ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಹೊಗಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಮತ್ತು ನನ್ನ ಮಗ ನಾಗರಾಜನಿಗೆ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಆರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 99/2021 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಕೆಂಭಾವಿ ಪೊಲೀಸ್ ಠಾಣೆ:- 72/2021 ಕಲಂ: 279, 337,338,304 [ಎ] ಐ.ಪಿ.ಸಿ : ದಿನಾಂಕ 24.05.2021 ರಂದು 2100 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಯಲ್ಲಪ್ಪ ತಂದೆ ನಿಂಗಣ್ಣ ಬಬಲಾದಿ ವ|| 25 ಜಾ|| ಕುರಬರ ಉ|| ಚಾಲಕ ಸಾ|| ಮಹಲರೋಜಾ ತಾ|| ಶಹಾಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ, ನಮ್ಮ ತಂದೆಯವರಾದ ನಿಂಗಣ್ಣ ತಂದೆ ಸಿದ್ದಪ್ಪ ಬಬಲಾದಿ ವ|| 50 ವರ್ಷ ಇವರು ಪರಸನಳ್ಳಿ ಗ್ರಾಮದ ನಮ್ಮ ಸಂಬಂದಿಕರಲ್ಲಿ ಹಣ ತೆಗೆದುಕೊಂಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ 09.05.2021 ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ತಂದೆಯವರು ನಮ್ಮೂರಿನಿಂದ ಪರಸನಳ್ಳಿಗೆ ಹೋಗಿ ಹಣ ಕೊಟ್ಟು ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ ನಂಬರ ಕೆಎ-33 ವಾಯ್-6364 ನೇದ್ದನ್ನು ತೆಗೆದುಕೊಂಡು ನಮ್ಮೂರ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಇವರನ್ನು ಕರೆದಕೊಂಡು ಹೋಗಿದ್ದು ಇರುತ್ತದೆ. ನಂತರ ಅಂದೇ ದಿನಾಂಕ 09.05.2021 ರಂದು ಸಾಯಂಕಾಲ 05.30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ದುರ್ಗಪ್ಪ ಬಡಿಗೇರ ಇವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ತಾನು ನಮ್ಮ ಮೋಟರ ಸೈಕಲ ನಡೆಸುತ್ತಿದ್ದು ಹಿಂದೆ ನಮ್ಮ ತಂದೆಯವರಾದ ನಿಂಗಣ್ಣ ಇವರು ಕುಳಿತಿದ್ದು ನಾವಿಬ್ಬರೂ ಮರಳಿ ಮಹಲರೋಜಾಕ್ಕೆ ಬರುವ ಕುರಿತು ಪರಸನಳ್ಳಿ ಬಸ್ಸನಿಲ್ದಾಣ ದಾಟಿ ಬ್ರಿಜ್ ಮೇಲೆ ಬರುತ್ತಿದ್ದಾಗ ತಾನು ನಡೆಸುವ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದಿದ್ದು ನಮ್ಮ ತಂದೆಯವರಿಗೆ ಬಹಾಳ ಗಾಯಗಳಾಗಿರುತ್ತವೆ ಅಂತ ತಿಳಿಸಿದಾಗ ಕೂಡಲೇ ನಾನು ಪರಸನಳ್ಳಿ ಹತ್ತಿರ ಬಂದು ನೋಡಲು ನಮ್ಮ ತಂದೆಯವರು ಪರಸನಳ್ಳಿ ಬಸ್ಸನಿಲ್ದಾಣದಲ್ಲಿದ್ದು ವಿಚಾರಿಸಲು ನಾನು ಕುಳಿತು ಹೊರಟ ಮೋಟರ ಸೈಕಲ ನಂಬರ ಕೆಎ-33 ವಾಯ್-6364 ನೇದ್ದರ ಚಾಲಕನಾದ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಈತನು ನಮ್ಮ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಬ್ರಿಜ್ ಮೇಲೆ ಒಮ್ಮಲೆ ಬಲಭಾಗಕ್ಕೆ ಕಟ್ ಮಾಡಿದಾಗ ನಮ್ಮ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದು ನಾವಿಬ್ಬರೂ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ನನಗೆ ಸದರಿ ಅಪಘಾತದಲ್ಲಿ ತಲೆಯ ಮೇಲೆ ಭಾರೀ ರಕ್ತಗಾಯವಾಗಿ ಎದೆಗೆ ಭಾರೀ ಒಳಪೆಟ್ಟು ಆಗಿರುತ್ತದೆ. ಆದರೆ ನಮ್ಮ ಮೋಟರ್ ಸೈಕಲ ಚಾಲಕ ದುರ್ಗಪ್ಪ ಬಡಿಗೇರ ಈತನಿಗೆ ಯಾವದೇ ಗಾಯಗಳಾಗಿರುವದಿಲ್ಲ ಅಂತ ನಮ್ಮ ತಂದೆಯವರು ನನಗೆ ತಿಳಿಸಿದ್ದು ಇರುತ್ತದೆ. ನಮ್ಮ ತಂದೆಯವರಿಗೆ ನೋಡಲಾಗಿ ತಲೆಯಿಂದ ರಕ್ತಸ್ರಾವವಾಗುತ್ತಿದ್ದರಿಂದ ಅವರನ್ನು ನಾನು ಹಾಗು ನಮ್ಮ ಸಂಬಂದಿಯವರಾದ ಬಸವರಾಜ ತಂದೆ ಸಾಯಬಣ್ಣ ನಾಯ್ಕೋಡಿ ಸಾ|| ಪರಸನಳ್ಳಿ ಇಬ್ಬರೂ ಕೂಡಿಕೊಂಡು ಹೆಚ್ಚಿನ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಪಡೆಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ತಂದೆಯವರಿಗೆ ಅಪಘಾತಪಡಿಸಿದ ಮೋಟರ್ ಸೈಕಲ ನಂಬರ ಕೆಎ- 33 ವಾಯ್-6364 ನೇದ್ದರ ಚಾಲಕ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಸಾ|| ಮಹಲರೋಜಾ ಈತನ ಅತೀವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 72/2021 ಕಲಂ 279.337.338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಂತರ ಇಂದು ದಿನಾಂಕ 03.06.2021 ರಂದು 9 ಎಎಮ್ಕ್ಕೆ ಪ್ರಕರಣದ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಪುರವಣೆ ಹೇಳಿಕೆ ನೀಡಿದ್ದೇನಂದರೆ ದಿನಾಂಕ 09.05.2021 ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರದಲ್ಲಿದ್ದ ತಮ್ಮ ತಂದೆಯವರಿಗೆ ದಿನಾಂಕ 02.06.2021 ರಂದು ಯುನೈಟೆಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಸರಕಾರಿ ಆಸ್ಪತ್ರೆ ಕಲಬುಗರ್ಿಗೆ ತಂದು ಸೇರಿಕೆ ಮಾಡಿದ್ದು ಸದರಿ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ನಮ್ಮ ತಂದೆ ಗಾಯಾಳು ನಿಂಗಪ್ಪ ತಂದೆ ಸಿದ್ದಪ್ಪ ಬಬಲಾದಿ ಇವರು ನಿನ್ನೆ ದಿನಾಂಕ 02.06.2021 ರಂದು ರಾತ್ರಿ 10 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುಗರ್ಿಯಲ್ಲಿ ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತ ಪುರವಣೆ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ 304[ಎ] ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-06-2021 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080