ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/03/2021

ಯಾದಗಿರಿ ನಗರ ಪೊಲೀಸ್ ಠಾಣೆ:- ಪಿ.ಎ.ಆರ್ ನಂ. 05/2021 ಕಲಂ 109 ಸಿ.ಆರ್.ಪಿ.ಸಿ : ಮಾನ್ಯರವಲ್ಲಿ ನಾನು ಕೃಷ್ಣಾ ಸುಬೇದಾರ ಪಿ.ಎಸ್.ಐ ಯಾದಗಿರಿ ನಗರ ಠಾಣೆ ತಮ್ಮಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ 04/03/2021 ರಂದು ಬೆಳಿಗ್ಗೆ 04-00 ಗಂಟೆಯಿಂದ ನಾನು ಸಂಗಡ ಅಪರಾಧ ವಿಭಾಗದ ಸಿಬ್ಬಂಧಿಯಾದ ಅಬ್ದುಲ್ ಭಾಷಾ ಪಿ.ಸಿ 237, ರವರನ್ನು ಕರೆದುಕೊಂಡು ಗುಡ್ ಮಾನರ್ಿಂಗ್ ಕರ್ತವ್ಯ ಮಾಡುತ್ತಾ ಯಾದಗಿರಿ ನಗರದ ಲಕ್ಷ್ಮೀ ನಗರ, ಲಕ್ಕಿನಗರ, ಚಿತ್ತಾಪೂರ ರೋಡ, ಹೊಸಾ ಬಸ್ ನಿಲ್ದಾಣ, ಅಜೀಜ್ ಕಾಲೋನಿ, ಗಂಜ್ ಏರಿಯಾದಿಂದ ಬೆಳಗಿನ ಜಾವ 06-00 ಗಂಟೆಯ ಸುಮಾರಿಗೆ ಯಾದಗಿರಿ ನಗರ ಚಕ್ರಕಟ್ಟಾ ಹತ್ತಿರ ಬಂದಾಗ ಅಲ್ಲಿ ಒಬ್ಬ ಹೆಣ್ಣು ಮಗಳು ಗಣೇಶ ಜುವೆಲರ್ಸ್ ಹತ್ತಿರ ಅನುಮಾನ ಆಸ್ಪದವಾಗಿ ತಿರುಗಾಡುತ್ತಿದ್ದಳು. ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಸದರಿಯವಳು ತನ್ನ ಇರುವಿಕೆಯನ್ನು ಮರೆಮಾಚುತ್ತಿದ್ದರಿಂದ ಅವಳ ಮೇಲೆ ನಮಗೆ ಅನುಮಾನ ಬಂದಿದ್ದರಿಂದ ನಿಲ್ಲಿಸಿ ವಿಚಾರಣೆ ಮಾಡಲಾಗಿ ಮೊದ ಮೊದಲು ತನ್ನ ಹೆಸರು ಹೇಳಲು ತಡವರಿಸತೊಡಗಿದಳು. ನಂತರ ಸ್ಥಳಕ್ಕೆ ಸುಮತಿ ಮ.ಪಿ.ಸಿ 421 ರವರಿಗೆ ಬರ ಮಾಡಿಕೊಂಡು ಸದರಿ ಹೆಣ್ಣು ಮಗಳಿಗೆ ಇಂದು ಬೆಳಿಗ್ಗೆ 07-00 ಗಂಟೆಗೆ ಠಾಣೆಗೆ ಕರೆದುಕೊಂಡು ಸದರಿ ಮಹಿಳಾ ಪಿ.ಸಿಯ ಸಮಕ್ಷಮದಲ್ಲಿ ಕೂಲಂಕುಶವಾಗಿ ವಿಚಾರಿಸಿದಾಗ ಅವಳು ತನ್ನ ಹೆಸರು ದ್ಯಾವಮ್ಮ ಗಂಡ ಮಲ್ಲಪ್ಪ ಕೊಳ್ಕರ ವಯಾ 55 ವರ್ಷ, ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಯರಗೋಳ ತಾ|| ಜಿ|| ಯಾದಗಿರಿ ಅಂತಾ ತಿಳಿಸಿದಳು. ಕಾರಣ ಸದರಿ ಹೆಣ್ಣು ಮಗಳಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಇರುವುದ್ದರಿಂದ ಇಂದು ದಿನಾಂಕ 04/03/2021 ರಂದು ಬೆಳಿಗ್ಗೆ 7-30 ಗಂಟೆಗೆ ಅವಳ ವಿರುದ್ದ ಮುಂಜಾಗ್ರತೆ ಕ್ರಮ ಕುರಿತು ಠಾಣೆ ಪಿ.ಎ.ಆರ್ ನಂ 05/2021 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ವಡಗೇರಾ ಪೊಲೀಸ್ ಠಾಣೆ.:- 30/2021 ಕಲಂ: 504,341,323,506 ಸಂ 34 ಐಪಿಸಿ : ಇಂದು ದಿನಾಂಕ 04/03/2021 ರಂದು 5-15 ಪಿಎಮ್ ಕ್ಕೆ ಪಿಯರ್ಾಧಿದಾರರಾದ ಶ್ರೀ ಬಸವರಾಜ ತಂದೆ ಅಯ್ಯಪ್ಪ ವಿಶ್ವಕರ್ಮ ವ:53, ಜಾ: ವಿಶ್ವಕರ್ಮ ಉ: ಕಾರಂಪೇಟ್ ಕೆಲಸ ಸಾ:ತಡಿಬಿಡಿ ರವರು ಪೋಲಿಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದು ಸಲ್ಲಿಸಿದ ದೂರು ಅಜರ್ಿಯೇನೆಂದರೆ ನಮಗೆ ಮತ್ತು ನಮ್ಮ ಮನೆಯ ಹಿಂದೆಯಿರುವ ನಮ್ಮ ಅಕ್ಕ ಶ್ರೀದೇವಿ ಗಂಡ ಮಲ್ಲಪ್ಪ ವಿಶ್ವಕರ್ಮ ಇಬ್ಬರ ಮಧ್ಯ ಜಾಗದ ಸಂಬಂಧ ಸುಮಾರು ದಿವಸಗಳಿಂದ ತಕರಾರು ಇರುತ್ತದೆ. ನಮ್ಮ ಮನೆಯ ಹಿಂದೆ ನಮ್ಮ ಜಾಗೆದಲ್ಲಿ ನಾವು ಕಂಪೌಂಡ ಗೋಡೆ ಹಾಕಲು ಹೋದರೆ ಶ್ರೀದೇವಿ ಮತ್ತು ಅವಳ ಮಗನಾದ ಆನಂದ ಸೊಸೆಯಾದ ಅನ್ನಮ್ಮ ಮೂರು ಜನರು ಸೇರಿ ನಮಗೆ ಅವ್ಯಾಚ ಬೈಗುಳಗಳಿಂದ ಬೈದು ಜಗಳಕ್ಕೆ ಬರುವುದು ಮಾಡುತ್ತಿದ್ದರು. ಹೀಗಿದ್ದು ದಿನಾಂಕ: 11/02/2021 ರಂದು ಮುಂಜಾನೆ 11 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆಡ ಹೋಗುತ್ತಿದ್ದಾಗ ಶ್ರೀದೇವಿ ಗಂಡ ಮಲ್ಲಣ್ಣ ವಿಶ್ವಕರ್ಮ 2)ಆನಂದ ತಂದೆ ಮಲ್ಲಣ್ಣ ವಿಶ್ವಕರ್ಮ 3)ಅನ್ನಮ್ಮ ಗಂಡ ಆನಂದ ವಿಶ್ವಕರ್ಮ ಎಲ್ಲ್ಲರು ಸಾ: ತಡಿಬಿಡಿ ಇದ್ದು ಎಲ್ಲಾರೂ ಸೇರಿ ಬಂದು ನನಗೆ ತಡೆದು ನಿಲ್ಲಿಸಿ ಬೋಸಡಿ ಮಗನೇ, ನಮ್ಮ ಜಾಗೆಯಲ್ಲಿ ಕಂಪೌಂಡ ಹಾಕಲು ಬರುತ್ತಿಯಾ ಏನಲ್ಲೇ ಆಂತಾ ಜಗಳ ತೆಗೆದು ತಡೆದು ನಿಲ್ಲಿಸಿ ಶ್ರೀದೇವಿ ನನ್ನ ಎದೆಯ ಮೇಲಿನ ಅಂಗಿ ಹಿಡಿದುಕೊಂಡಾಗ ಆನಂದನು ಕೈಯಿಂದ ಮುಷ್ಠಿ ಮಾಡಿ ಮುಖಕ್ಕೆ ಬೆನ್ನಿಗೆ ಬಲವಾಗಿ ಗುದಿದ್ದನು. ಅನ್ನಮ್ಮ ಇವಳು ಬಂದು ಕೈಯಿಂದ ಕಪಾಳಕ್ಕೆ ಹೊಡೆದಳು. ಆಗ ಅಲ್ಲಿಯೇ ಇದ್ದ ನನ್ನ ಹೆಂಡತಿ ಪಾರ್ವತಿ ಮತ್ತು ಅಣ್ಣಾನಾದ ಮೋನಪ್ಪ ತಂದೆ ಮುತ್ತಪ್ಪ ಇವರು ಬಂದು ಜಗಳ ಬಿಡಿಸಿದ್ದರು ಆಗ ಹೊಡೆಯುವುದು ಬಿಟ್ಟು ಅವರು ಇವತ್ತು ಉಳುದಿ ಬೋಸುಡಿ ಮಗನೇ ಇನ್ನೋಂದು ಸಲ ಸಿಕ್ಕರೇ ನಿನಗೆ ಖಲಾಸ ಮಾಡುತ್ತೇವೆ. ಎಂದು ಜೀವ ಭಯ ಹಾಕಿ ಹೋದರು. ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಒಂದೇ ಸಮುದಾಯ ಮತ್ತು ಭೀಗರು ಆಗಿರುವುದರಿಂದ ಊರಿನಲ್ಲೇ ನ್ಯಾಯ ಪಂಚಾಯತಿ ಮಾಡಿಕೊಳ್ಳಿ ಎಂದು ಹೇಳಿದರು. ಆದರೆ ಸದರಿಯವರು ನ್ಯಾಯ ಪಂಚಾಯತಿಗೆ ಬರದೇ ನಮಗೆ ಬೆದರಿಕೆ ಹಾಕುತ್ತಿದ್ದರಿಂದ ಈಗ ನಮ್ಮ ಹಿರಿಯರು ದೂರು ಕೊಡು ಅಂತಾ ಹೇಳಿದ್ದರಿಂದ ನಾನು ಪೋಲಿಸ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಿ ಎಂದು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶಸ ಮೇಲಿಂದ ಠಾಣಾ ಗುನ್ನೆ ನಂ: 30/2021 ಕಲಂ: 504.341.323.506.ಸಂಗಂಡ 34 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಹುಣಸಗಿ ಪೊಲೀಸ್ ಠಾಣೆ:- 15/2021 323, 324, 341, 355, 504, 506 ಸಂ.149 ಐಪಿಸಿ : ಇಂದು ದಿನಾಂಕ:04/02/2021 ರಂದು ಸಾಯಂಕಾಲ 05.15 ಗಂಟೆಗೆ ಗಂಟೆಗೆ ಶ್ರೀಮತಿ. ದೇವಮ್ಮ ಗಂಡ ರೇವಣಸಿದ್ದಪ್ಪ ಕೋಟೆಗುಡ್ಡ ವಯಾ-35 ವರ್ಷ, ಜಾ:ಕುರುಬರ, ಉ:ಮನೆಗೆಲಸ ಸಾ:ಕಾಮನಟಗಿ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಕೊಟ್ಟಿದ್ದರ ಸಾರಾಂಶವೆನೆಂದರೇ, ದಿನಾಂಕ:28/02/2021 ರಂದು ಸಾಯಂಕಾಲ 04.00 ಗಂಟೆಸ ಸುಮಾರಿಗೆ ಹೊಲದಲ್ಲಿ ಫಿರ್ಯಾದಿಯ ಗಂಡನು ನೀರು ಬಿಡುವಾಗ ಆರೋಪಿ ನಂ:1 ನೇದ್ದವನು ಫಿರ್ಯಾದಿಯೊಂದಿಗೆ ತಕರಾರು ಮಾಡಿ ಫಿರ್ಯಾದಿಯ ಹೊಲಕ್ಕೆ ನೀರು ಹೋಗದಂತೆ ಅಡ್ಡಗಟ್ಟಿದಾಗ ಫಿರ್ಯಾದಿಯ ಗಂಡನು ಕೇಳಿದ್ದರಿಂದ ಅವನಿಗೆ ಚಪ್ಪಲಿಯಿಂದ ಹೊಡೆದಿದ್ದು & ಕಲ್ಲಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು, ಇನ್ನುಳಿದ 4 ಜನ ಆರೋಪಿತರಲ್ಲಿ 2ಜನ ಮಹಿಳೆಯರು ಫಿರ್ಯಾದಿಗೆ ತಡೆದು ಕೈಯಿಂದ ಹೊಡೆದಿದ್ದು, ಫಿರ್ಯಾದಿಯ ಗಂಡನಿಗೆ ಇನ್ನುಳಿದ 2 ಜನ ಗಂಡು ಮಕ್ಕಳು ಕೈಯಿಂದ ಹೊಡೆದಿದ್ದು, ಹಾಗೂ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯ ಸಾರಾಂಶ ಇದ್ದು, ಸದರಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ್ ಠಾಣೆ ಯಾದಗಿರಿ:- 12/2021 ಕಲಂ 279, 338, 304(ಎ) ಐಪಿಸಿ : ದಿನಾಂಕ 04/03/2021 ರಂದು 9-10 ಪಿ.ಎಂ.ದ ಸುಮಾರಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಬಾದಲ್ ರೈಸ್ ಮಿಲ್ ಹತ್ತಿರ ಮುಖ್ಯ ರಸ್ತೆ ಹತ್ತಿರ ಈ ಕೇಸಿನ ಗಾಯಾಳು ಭೀಮರಾಯ ಮತ್ತು ಮೃತ ಆಟೋ ಚಾಲಕ ಹಣಮಂತ ಇಬ್ಬರು ಸೇರಿಕೊಂಡು ಆಟೋ ಟಂ,ಟಂ ನಂಬರ ಕೆಎ-33, ಎ-3995 ನೇದ್ದರಲ್ಲಿ ಯಾದಗಿರಿಯಿಂದ ಬೆಳಗೇರಾಕ್ಕೆ ಹೋಗುತ್ತಿದ್ದಾಗ ಆಟೋ ಟಂ ಟಂ ನೇದ್ದನ್ನು ಮೃತ ಹಣಮಂತ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಒಮ್ಮೊಲೆ ಬಲಕ್ಕೆ ಕಟ್ ಹೊಡೆದಾಗ ಆಟೋವು ಸ್ಕಿಡ್ ಆಗಿ ರಸ್ತೆ ಬದಿಗೆ ಬಿದ್ದು ಪಲ್ಟಿಯಾಗಿರುತ್ತದೆ. ಸದರಿ ಅಪಘಾತದಲ್ಲಿ ಆಟೋ ಚಾಲಕ ಹಣಮಂತ ಈತನಿಗೆ ಎದೆಯ ಎಡಭಾಗಕ್ಕೆ ಗಂಭೀರ ಗುಪ್ತಗಾಯ ಮತ್ತು ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಆಟೋದಲ್ಲಿ ಕುಳಿತಿದ್ದ ಗಾಯಾಳು ಭೀಮರಾಯ ಈತನಿಗೆ ಎಡಗಾಲು ಮೊಣಕಾಲು ಕೆಳಗೆ ಭಾರೀ ರಕ್ತಗಾಯಗಳಾಗಿ ಮುರಿದಿರುತ್ತದೆ. ಈ ಬಗ್ಗೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 12/2021 ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 05-03-2021 12:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080