ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/03/2021

ಯಾದಗಿರ ನಗರ ಪೊಲೀಸ್ ಠಾಣೆ:- 29/2021 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ;06/03/2021 ರಂದು 5-45 ಪಿಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ (ಅ.ವಿ) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.06/03/2021 ರಂದು 02-30 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿರಭದೇಶ್ವರ ನಗರದ ಹೋರವಲಯದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 5-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ 5-45 ಪಿಎಂಕ್ಕೆ ಪರವಾನಿಗೆಯನ್ನು ಪಡೆದುಕೊಂಡು ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.29/2021 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ.:- 38/2021 ಕಲಂ. 279,337,338 ಐಪಿಸಿ : 06-03-2021 ರಂದು 02-30 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಎಮ್.ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಅಲಲಿ ಸೋಮಯ್ಯಸ್ವಾಮಿ ಈತನು ಪಿಯಾಧಿ ನೀಡಿದ ಸಾರಂಶವೆನೆಂದರೆ ಇಂದು ಮದ್ಯಾಹ್ನ ಸುಮಾರಿಗೆ ನಮ್ಮ ಅಣ್ಣ ನೀಲಕಂಠಯ್ಯಸ್ವಾಮಿ ಈತನು ನನಗೆ ತಿಳಿಸಿದ್ದೆನೆಂದರೆ ನಾನು ತಮ್ಮನಿಗೆ ಮಾತಾಡಿಸಲು ಮಂಚಲಾಪೂರಕ್ಕೆ ಹೋಗುತ್ತೇನೆ ಅಂತಾ ಹೇಳಿ ನಮ್ಮ ಕಾರ ನಂ. ಕೆಎ-12 ಎಮ್-8563 ನೇದ್ದನ್ನು ತೆಗೆದುಕೊಂಡು ಮಂಚಲಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ತಾನೆ ಕಾರು ನಡೆಸಿಕೊಂಡ ಹೋದನು. ಮದ್ಯಾಹ್ನ ನಾನು ಮನೆಯಲ್ಲಿ ಇರುವಾಗ ನಮ್ಮ ಅಣ್ಣನಿಗೆ ರಾಚನಳ್ಳಿಕ್ರಾಸ ಹತ್ತಿರ ಅಪಘಾತವಾಗಿದೆ ಅಂತಾ ಸುದ್ದಿ ತಿಳಿದು ಆಗ ನಾನು ಮತ್ತು ನನ್ನ ಗೆಳೆಯ ಬಸಯ್ಯಸ್ವಾಮಿ ತಂದೆ ಶೇಕ್ರಯ್ಯಸ್ವಾಮಿ ಇಬ್ಬರೂ ಕೂಡಿ ಮೋಟರ ಸೈಕಲ್ ಮೇಲೆ ರಾಚನಳ್ಳಿ ಕ್ರಾಸಗೆ ಬಂದು ನೋಡಲಾಗಿ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ರಾಚನಳ್ಳಿ ಕ್ರಾಸ ಹತ್ತಿರ ನಮ್ಮ ಅಣ್ಣನ ಕಾರು ಅಫಘಾತವಾಗಿ ಬಿದ್ದಿದ್ದು ನಮ್ಮ ಅಣ್ಣನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿತ್ತು ಬೆನ್ನಿಗೆ ಒಳಪೆಟ್ಟು ಆಗಿತ್ತು ಅಷ್ಟರಲ್ಲಿ ಅಂಬುಲೆನ್ಸ ಬಂತು ಆಗ ನಮ್ಮ ಅಣ್ಣ ನೀಲಕಂಠಯ್ಯಸ್ವಾಮಿ ಈತನಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ನಂತರ ನಮ್ಮ ಅಣ್ಣ ನೀಲಕಂಠಯ್ಯಸ್ವಾಮಿ ಈತನಿಗೆ ವಿಚಾರಿಸಲಾಗಿ ದಿನಾಂಕ: 06-03-2021 ರಂದು ಮದ್ಯಾಹ್ನ 01-30 ಗಂಟೆಗೆ ತಾನು ನಡೆಸುವ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಕಾರನ್ನು ನಿಯಂತ್ರಣ ಮಾಡದೆ ರೋಡಿನ ಪಕ್ಕದ ಜಾಲಿ ಗೀಡಕ್ಕೆ ಗುದ್ದಿ ಅಪಘಾತಪಡಿಸಿದ್ದು ಇರುತ್ತದೆ ಅಂತಾ ಪಿಯರ್ಾಧಿ ಸಾರಂಶ

ಇತ್ತೀಚಿನ ನವೀಕರಣ​ : 07-03-2021 11:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080