Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/03/2021

ವಡಗೇರಾ ಪೊಲೀಸ್ ಠಾಣೆ:- 5/2021 174 ಸಿ.ಆರ್.ಪಿ.ಸಿ : ಮೃತಳಾದ ದೇವಮ್ಮ ಈಕೆಗೆ ಸುಮಾರು 2-3 ತಿಂಗಳ ಹಿಂದೆ ಭಾಣೆಂತನವಾಗಿ ಗಂಡು ಮಗುವಾಗಿದ್ದು, ಬಾಣೆಂತನದಲ್ಲಿ ಪಿಡ್ಸ್ ಆಗಿ ಬಲಗೈ ಮತ್ತು ಬಲಗಾಲಿಗೆ ಪಾಸರ್ಿ ಹೊಡೆದಿದ್ದರಿಂದ ಅದರ ತ್ರಾಸ ತಾಳಲಾರದೇ ದಿನಾಂಕ: 06/03/2021 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನಗನಾಳ ಗ್ರಾಮದ ಮನೆಯಲ್ಲಿ ಕ್ರಿಮಿನಾಶಕ ಎಣ್ಣೆ ಕುಡಿದಿದ್ದು.ಉಪಚಾರ ಕುರಿತು ಸಕರ್ಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತೋರಿಸಿ, ಹೆಚ್ಚಿನ ಉಪಚಾರ ಕುರಿತು ಶರಣ ಬಸವ ಖಾಸಗಿ ಆಸ್ಪತ್ರೆ ತೋರಿಸಲು ಹೋಗುವಾಗ ರಾತ್ರಿ 10 ಗಂಟೆ ಸುಮಾರಿಗೆ ಚಿಕ್ಸತೆಫಲಕಾರಿಯಾಗದೇ ದೇವಮ್ಮಳು ಮೃತಪಟ್ಟಿರುತ್ತಾಳೆ. ಮೃತಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 05/2021 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ.:- 32/2021 ಕಲಂ: 143,147,148,341,323,324,354,504,506 ಸಂಗಡ 149 ಐಪಿಸಿ : ಇಂದು ದಿನಾಂಕ 07.03.2021 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶರಣಮ್ಮ ಗಂಡ ಮಾನಪ್ಪ ಹೆಬ್ಬಾಳ ವಯಾ|| 60 ಜಾ|| ಕುರಬರ ಉ|| ಕೂಲಿ ಸಾ|| ಮಾಚಗುಂಡಾಳ ತಾ|| ಸುರಪೂರ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಚಿದರೆ ನಮ್ಮ ಹೊಲ ಹಾಗು ನಮ್ಮೂರ ನಮ್ಮ ಸಂಬಂದಿಯವರಾದ ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ ಇವರ ಹೊಲ ಆಜುಬಾಜು ಇದ್ದು ಸದರಿಯವರಿಗೂ ನಮಗೂ ಸುಮಾರು ವರ್ಷಗಳಿಂದ ಮನೆಯ ಜಾಗದ ವಿಷಯದಲ್ಲಿ ತಕರಾರು ನಡೆದು ಸದರಿಯವರು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 06/03/2021 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಾನು ಹಾಗು ನನ್ನ ಗಂಡ ಮಾನಪ್ಪ ಹೆಬ್ಬಾಳ ಹಾಗು ಮಗನಾದ ಮಾಳಪ್ಪ ಹೆಬ್ಬಾಳ ನಾನವು ಮೂರು ಜನರು ಸೇರಿ ಸುರಪೂರಕ್ಕೆ ಹೋಗುವ ಕುರಿತು ನಮ್ಮ ಹೊಲದಲ್ಲಿನ ಮನೆಯಿಂದ ನಡೆದುಕೊಂಡು ಭೀವ್ಮಣ್ಣ ತಂದೆ ಬಾಗಪ್ಪ ಇವರ ಹೊಲದ ಪಕ್ಕದಲ್ಲಿ ಹಾದು ಹೋಗುತ್ತಿದ್ದಾಗ ನಮ್ಮ ಜನಾಂಗದ 1] ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ 2] ನಾಗಮ್ಮ ಗಂಡ ಭೀಮಣ್ಣ ಹೋಸ್ಕೇರಾ 3] ಮಲ್ಲಪ್ಪ ತಂದೆ ನಿಂಗಪ್ಪ 4] ಚಂದ್ರಪ್ಪ ತಂದೆ ನಿಂಗಪ್ಪ 5] ಲಕ್ಷ್ಮೀ ಗಂಡ ಮಲ್ಲಪ್ಪ 6] ದೇವಮ್ಮ ಗಂಡ ಚಂದ್ರಪ್ಪ ಸಾ|| ಎಲ್ಲರೂ ಮಾಚಗುಂಡಾಳ ಹಾಗು ರತ್ತಾಳ ಗ್ರಾಮದ 7] ನಿಂಗವ್ವ ಗಂಡ ಪರಸಪ್ಪ 8] ಭಿಮವ್ವ ಗಂಡ ಗಿರೆಪ್ಪ 9] ಅಚಿ್ಯುಮ್ಮ ಗಂಡ ಭಿರಪ್ಪ 10] ಬೀರಪ್ಪ ತಂದೆ ಅಯಪ್ಪ 11] ದೇವಪ್ಪ ತಂದೆ ಪರಸಪ್ಪ ಸಾ|| ಎಲ್ಲರೂ ರತ್ತಾಳ ಈ ಎಲ್ಲಾ ಜನರು ಕೈಯಲ್ಲಿ ಕಬ್ಬಿಣದ ರಾಡು ,ಕಲ್ಲು ಹಾಗು ಬಡಿಗೆ ಹಿಡಿದುಕೊಂಡು ಗುಂಪು ಕಟ್ಟಿಕೊಂಡು ಬಂದವರೇ ನಮ್ಮನ್ನು ತಡೆದು ನಿಲ್ಲಿಸಿ ಏನಲೇ ಸೂಳೆ ಮಕ್ಕಳೆ ನಮ್ಮ ಜಾಗ ಬಿಡು ಅಚಿದರೆ ಯಾಕೇ ಬಿಡುವದಿಲ್ಲ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಈ ಸುಳೆ ಮಗನ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ನಾವೂ ಮೂರು ಜನರಿಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನನ್ನ ಗಂಡನಾದ ಮಾನಪ್ಪ ಈತನಿಗೆ ದೇವಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು. ಮಗನಾದ ಮಾಳಪ್ಪ ಈತನಿಗೆ ಚಂದ್ರಪ್ಪ ಹಾಗು ದೇವಣ್ಣ ಈ ಎರಡು ಜನರು ತಮ್ಮ ಕೈಯಲ್ಲಿದ್ದ ಕಲ್ಲಿನಿಂದ ಬಲಭುಜಕ್ಕೆ, ಬಲಗಾಲ ಮೊಳಕಾಲಿಗೆ ಹಾಗು ಬಲಮುಂಡಿಗೆ ಹೊಡೆಯುತ್ತಿದ್ದಾಗ ಮಾಳಪ್ಪ ಈತನು ಮಗನ ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ನಂತರ ನನಗೆ ಎಲ್ಲಾ ಜನ ಹೆಣ್ಣು ಮಕ್ಕಳು ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಮಲ್ಲಪ್ಪ ಹಾಗು ಬೀರಪ್ಪ ಇವರು ಕಲ್ಲಿನಿಂದ ನನ್ನ ಎದೆಗೆ ಹಾಗು ಭುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದಲ್ಲದೇ ನನ್ನ ಸೀರೆ ಹಾಗು ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಸದರಿ ಜಗಳದಲ್ಲಿ ನನ್ನ ಕೊರಳಲ್ಲಿನ ತಾಳಿ ಹಾಗು ಬೋರಮಳ ಕಳೆದು ಹೋಗಿದ್ದು ಇರುತ್ತದೆ. ಈ ವಿಷಯದಲ್ಲಿ ನಾನು ಹಾಗು ನನ್ನ ಗಂಡ ಹಾಗು ಮಗ ಮಾಳಪ್ಪ ನಾವೂ ಮೂರು ಜನರು ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಉಪಚಾರ ಪಡೆದುಕೊಂಡು ಮರಳಿ ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಸದರ ಮೇಲ್ಕಾಣಿಸಿದ 11 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 32/2021 ಕಲಂ 143,147,148,341,323,324,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:- 31/2021 ಕಲಂ 31/2021  9B[1][b] Explosive Act 1884 ಸಂಗಡ 336,286 ಐಪಿಸಿ : ಇಂದು ದಿನಾಂಕ 07.03.2021 ರಂದು 12.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಅಡೆಪ್ಪ ಬನ್ನಿ ಆರಕ್ಷಕ ನಿರೀಕ್ಷಕರು ಆಂತರಿಕ ಭದ್ರತಾ ವಿಭಾಗ ಕಲಬುರಗಿ-ಯಾದಗಿರ ಘಟಕ ರವರು ಠಾಣೆಗೆ ಹಾಜರಾಗಿ ಒಂದು ವರಧಿ ಹಾಜರಪಡಿಸಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ: 06/03/2021ರಂದು ಮಧ್ಯಾಹ್ನ 01.45 ಗಂಟೆಗೆ ವೇಳೆಯಲ್ಲಿ ಆಲ್ಹಾಳ ಸೀಮಾಂತರದಲ್ಲಿ ಶಾಂತಗೌಡ ರವರ ಆರಾಧ್ಯ ಕ್ರಷರ್ ಮತ್ತು ಕಲ್ಲಿನ ಕ್ವಾರಿಯಲ್ಲಿ ಅನಧಿಕೃತವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದು ಅಲ್ಲಿ ಒಂದು ಬುಲೋರೊ ಪಿಕಪ್ ವಾಹನದಿಂದ ಸ್ಪೋಟಕ ವಸ್ತುಗಳನ್ನು ತಂದು ಸಂಗ್ರಹಿಸಿ ಇಟ್ಟ ಬಗ್ಗೆ ಕಂಡು ಬಂದಿದ್ದು ನಿಗಾವಣೆ ಮಾಡಲು ಅಲ್ಲಿ ಸಿಬ್ಬಂದಿಯವರಿಗೆ ನೇಮಕ ಮಾಡಿದ್ದು ಇರುತ್ತದೆ. ಸ್ಪೋಟಕ ವಸ್ತು ಇದ್ದ ಕಾರಣ ಪರಿಶೀಲನೆ ಕಾಲಕ್ಕೆ ಸುರಕ್ಷಿತ ಕ್ರಮ ಕೈಕೊಳ್ಳಲು ಕೋರಿ ಬಿಡಿಡಿಎಸ್ ತಂಡದವರಿಗೆ ಸ್ಥಳಕ್ಕೆ ಬರಲು ಕೋರಿಕೊಂಡಿದ್ದು ಅವರು ಸ್ಥಳಕ್ಕೆ ಬಂದಿದ್ದು ಹಾಗೂ ಪಂಚರಾದ ಶ್ರೀ ಯಮನಪ್ಪ ತಂದೆ ರಾಮಪ್ಪ ತಳವಾರ ವಯ:48 ವರ್ಷ, ಜಾ:ಕಬ್ಬಲಿಗ , ಉ:ಬಿಲ್ ಕಲೆಕ್ಟರ್ ಗ್ರಾಮ ಪಂ ಯಕ್ತಾಪೂರ, ಸಾ:ಆಲ್ಹಾಳ ಶ್ರೀ ಶರಣಪ್ಪ ತಂದೆ ಮಡಿವಾಳಪ್ಪ ಉತ್ನಾಳ ವ|| 32 ಜಾ|| ಕಬ್ಬಲಿಗ ಉ|| ಗ್ರಾಮ ಲೆಕ್ಕಾಧಿಕಾರಿ ಎಂ ಬೊಮ್ಮನಳ್ಳಿ ಸಾ|| ಕೆಂಭಾವಿ ತಾ:ಸುರಪೂರ. ಹಾಗೂ ಶ್ರೀ ಸುದರ್ಶನರೆಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ್ ಠಾಣೆ & ಸಿಬ್ಬಂದಿಯವರಾದ ಶಾಂತಯ್ಯ ಸಿಹೆಚ್ಸಿ 69, ನಾಗರಾಜ ಸಿಪಿಸಿ 631, ಪ್ರಕಾಶ ಸಿಪಿಸಿ 803, ರಾಜಕುಮಾರ ಸಿಪಿಸಿ 1032, ದೊಡ್ಡಪ್ಪ ಸಿಪಿಸಿ 840, ಶಂಕರಗೌಡ ಸಿಹೆಚ್ಸಿ 33, ಸಯ್ಯದ ಸಿಪಿಸಿ 106 ರವರೊಂದಿಗೆ ನಮ್ಮ ಪೊಲೀಸ್ ಜೀಪ್ ನಂ ಕೆಎ 40 ಜಿ 0346 ಕೆಂಭಾವಿ ಠಾಣೆಯ ಜೀಪ ನಂ ಕೆಎ33 ಜಿ 0074 ನೇದ್ದರಲ್ಲಿ ಕುಳಿತು ಬೆಳಿಗ್ಗೆ 08.10 ಗಂಟೆಗೆ ಠಾಣೆಯಿಂದ ಹೊರಟು ಆಲ್ಹಾಳ ಸೀಮಾಂತರದಲ್ಲಿರುವ ಆರಾಧ್ಯ ಕಲ್ಲಿನ ಕ್ವಾರಿಯಲ್ಲಿ ಬೆಳಿಗ್ಗೆ 08.30 ಗಂಟೆಗೆ ಹೋಗಿ ನೋಡಲಾಗಿ ಒಂದು ಬುಲೋರೋ ಪಿಕಪ್ (ಕ್ಲೋಸ್) ವಾಹನ ನಿಂತಿದ್ದು ಪರಿಶೀಲಿಸಿ ನೋಡಲು ಅದರ ನಂ ಕೆಎ 28 ಡಿ 7274 ಅಂತಾ ಇದ್ದು ಅದರ ಹತ್ತಿರ ಅನಧಿಕೃತವಾಗಿ, ಅಜಾಗರೂಕತೆಯಿಂದ ಅಸುರಕ್ಷಿತವಾಗಿ ಇಟ್ಟಿದ್ದು ಕಂಡು ಬಂದಿರುತ್ತದೆ. ಇದೇ ವೇಳೆಗೆ ಇಲ್ಲಿಗೆ ಬಂದಿದ್ದ ಬಿಡಿಡಿಎಸ್ (ಬಾಂಬ ಪತ್ತೆ ಮತ್ತು ನಿಷ್ಕ್ರೀಯ ದಳ) ತಂಡದವರು ಹಾಜರಿದ್ದು ನಂತರ ಇವರ ಸಹಾಯದಿಂದ ಸ್ಥಳದಲ್ಲಿದ್ದ ಕಾಟನ್ ಬಾಕ್ಸ್ಗಳನ್ನು ಪರಿಶೀಲಿಸಿ ನೋಡಲು ಇವು ಸ್ಪೋಟಕ ವಸ್ತುಗಳು ಇರುತ್ತವೆ ಅಂತಾ ಬಿಡಿಡಿಎಸ್ ತಂಡದವರು ತಿಳಿಸಿದ್ದು ನಂತರ ಒಂದೊಂದಾಗಿ ತೆಗೆದು ಪರಿಶೀಲಿಸಲಾಗಿ ತಲಾ 25 ಕೆಜಿ ತೂಕವುಳ್ಳ 30 ಜಿಲೆಟಿನ್ ಬುಸ್ಟರ್ (ಐಡಿಯಲ್ ಇಂಡಸ್ಟ್ರೀಯಲ್ ಎಕ್ಸಪ್ಲೋಸಿವ್ ಲಿಮಿಟೆಡ್ ಸಿಕಿಂದ್ರಾಬಾದ್) ಎಕ್ಸಪ್ಲೋಸಿವ್ ಬಾಕ್ಸಗಳಿದ್ದು ಪತ್ರಿ ಬಾಕ್ಸನಲ್ಲಿ 9 ಟೂಬ್ಗಳು ಹೀಗೆ ಒಟ್ಟು 270 ಟೂಬ್ಗಳು ಇರುತ್ತವೆ. ನಂತರ ಸ್ವಲ್ಪ ಪಕ್ಕದಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ ಕಲ್ಲುಗಳ ಕೆಳಗಡೆ 150 ನಾನ್ ಎಲೇಕ್ಟ್ರೀಕಲ್ ಡೆಟೋನೇಟರ್ಗಳು ಇದ್ದವು. ಹಾಗೂ ಸದರಿ ವಾಹನದ ಚಾಲಕನಾದ ಮೌಲಾಲಿ ತಂದೆ ಮಹಿಬೂಬ ಸಾಬ ವಯ:21 ವರ್ಷ ಉ: ಎಕ್ಸಪ್ಲೋಸಿವ್ ವಾಹನದ ಚಾಲಕ ಸಾ: ಬನ್ನಟ್ಟಿ ತಾ:ಸಿಂದಗಿ ಜಿ: ಬಿಜಾಪುರ ಈತನಿಗೆ ಸದರಿ ಸ್ಪೋಟಕ ವಸ್ತುಗಳ ಬಗ್ಗೆ ವಿಚಾರಿಸಲಾಗಿ ಇದರ ಮಾಲಿಕರು ರವಿ ತಂದೆ ಶರಣಪ್ಪ ಬಿರಾದರ ಸಾ: ಬೊಮನಳ್ಳಿ ತಾ:ಸಿಂದಗಿ ಅಂತಾ ತಿಳಿಸಿದ್ದು ಇರುತ್ತದೆ ಮತ್ತು ಸದರಿ ಸ್ಪೋಟಕ ವಸ್ತುಗಳ ವಾಹನದೊಂದಿಗೆ ಯಾವುದೇ ಪರಿಣಿತಿ ಹೊಂದಿದ ಮತ್ತು ಪರವಾಣಿಗೆ ಹೊಂದಿದ ಸೈಟ್ ಬ್ಲಾಸ್ಟರ್ ತನ್ನ ಜೊತೆಗೆ ಇರುವುದಿಲ್ಲ ಮತ್ತು ಸದರಿ ಸ್ಪೋಟಕ ವಸ್ತುಗಳ ದಾಖಲೆಗಳನ್ನು ನೀಡುವಂತೆ ಕೇಳಲಾಗಿ ತನ್ನ ಹತ್ತಿರ ಯಾವುದೇ ದಾಖಲಾತಿ ಗಳು ಇರುವುದಿಲ್ಲ ಅಂತಾ ತಿಳಿಸಿದನು . ನಂತರ ಸದರಿ ಆರಾಧ್ಯ ಸ್ಟೋನ್ ಕ್ರಷರ್ ಮತ್ತು ಕ್ವಾರಿಯ ಸೈಟ್ ಮ್ಯಾನೇಜರ್ ಆನಂದ ರೆಡ್ಡಿ ತಂದೆ ಶರಣಗೌಡ ಪರಸನಳ್ಳಿ ಸಾ:ದಶರ್ಾನಾಪುರ ತಾ:ಶಹಾಪುರ ರವರನ್ನು ಗುನ್ನೆ ಸ್ಥಳಕ್ಕೆ ಕರೆಯಿಸಿ ವಿಚಾರಿಸಲಾಗಿ ಸದರಿ ಆರಾಧ್ಯ ಸ್ಟೋನ್ ಕ್ರಷರ್ ಮತ್ತು ಕ್ವಾರಿಯ ಮಾಲಿಕರ ಹೆಸರು ಶಾಂತಗೌಡ ತಂದೆ ಮಡಿವಾಳಪ್ಪ ಗೌಡ ಸಾ:ನಡಹಳ್ಳಿ ತಾ:ಮುದ್ದೆಬಿಹಾಳ ಜಿ:ಬಿಜಾಪುರ ಅಂತಾ ತಿಳಿಸಿದ್ದು ಇರುತ್ತದೆ. ಮತ್ತು ಸದರಿ ಕ್ರಷರ್ ಮಷಿನ್ ಮತ್ತು ಕ್ವಾರಿಯ ಪರವಾನಿಗೆ ಪತ್ರ ಇತರ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿ ದಾಖಲೆಗಳ ಬಗ್ಗೆ ನಮ್ಮ ಮಾಲಿಕರಾದ ಶಾಂತಗೌಡ ತಂದೆ ಮಡಿವಾಳಪ್ಪ ಗೌಡ ಸಾ:ನಡಹಳ್ಳಿ ತಾ:ಮುದ್ದೆಬಿಹಾಳ ಜಿ:ಬಿಜಾಪುರ ರವರಿಗೆ ಗೊತ್ತು ಅಂತಾ ತಿಳಿಸಿದನು. ನಂತರ ತಲಾ 25 ಕೆಜಿ ತೂಕವುಳ್ಳ 30 ಜಿಲೆಟಿನ್ ಬುಸ್ಟರ್ (ಐಡಿಯಲ್ ಇಂಡಸ್ಟ್ರೀಯಲ್ ಎಕ್ಸಪ್ಲೋಸಿವ್ ಲಿಮಿಟೆಡ್ ಸಿಕಿಂದ್ರಾಬಾದ್) ಎಕ್ಸಪ್ಲೋಸಿವ್ ಬಾಕ್ಸಗಳಿದ್ದು ಪತ್ರಿ ಬಾಕ್ಸನಲ್ಲಿ 9 ಟೂಬ್ಗಳು ಹೀಗೆ ಒಟ್ಟು 270 ಟೂಬ್ಗಳು ಇರುತ್ತವೆ ಅ.ಕಿ 24000/-. ಮತ್ತು 150 ನಾನ್ ಎಲೇಕ್ಟ್ರೀಕಲ್ ಡೆಟೋನೇಟರ್ಗಳನ್ನು ಅ.ಕಿ 4500/- ರೂಪಾಯಿ ಹೀಗೆ ಒಟ್ಟು ಅ.ಕಿ 28500/- ರೂಪಾಯಿಗಳ ಸ್ಪೋಟಕವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತೇವೆ. ಸದರಿ ಸ್ಪೋಟಕ ವಸ್ತುಗಳು ಅನಧಿಕೃತವಾಗಿ ಅಜಾಗೂರೂಕತೆಯಿಂದ ಅಸುರಕ್ಷಿತವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ ಆರಾಧ್ಯ ಕ್ರಷರ ಮತ್ತು ಕ್ವಾರಿಯ ಮಾಲಿಕರಾದ ಶಾಂತಗೌಡ ತಂದೆ ಮಡಿವಾಳಪ್ಪ ಗೌಡ ಸಾ:ನಡಹಳ್ಳಿ ತಾ:ಮುದ್ದೆಬಿಹಾಳ ಜಿ:ಬಿಜಾಪುರ ಮತ್ತು ಬೊಲೆರೊ ಪಿಕಪ್ಪ ಸಂಬಂಧಿಸಿದ ವಾಹನ ಚಾಲಕ ಮೌಲಾಲಿ ತಂದೆ ಮಹಿಬೂಬ ಸಾಬ ವಯ:21 ವರ್ಷ ಉ: ಎಕ್ಸಪ್ಲೋಸಿವ್ ವಾಹನದ ಚಾಲಕ ಸಾ: ಬನ್ನಟ್ಟಿ ತಾ:ಸಿಂದಗಿ ಜಿ: ಬಿಜಾಪುರ ಹಾಗೂ ಯಾವುದೇ ಪರವಾನಿಗೆ ಇಲ್ಲದೆ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡಿದ ರವಿ ತಂದೆ ಶರಣಪ್ಪ ಬಿರಾದರ ಸಾ: ಬೊಮನಳ್ಳಿ ತಾ:ಸಿಂದಗಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೋರಿ ಈ ದೂರಿನೊಂದಿಗೆ ಜಪ್ತಿ ಪಂಚನಾಮೆ, ಮತ್ತು ಮುದ್ದೆಮಾಲು ತಮ್ಮ ವಶಕ್ಕೆ ಪಡೆದು ಮಂದಿನ ಕ್ರಮ ಕೈಕೊಳ್ಳಲು ಕೋರಲಾಗಿದೆ ಅಂತ ವರಧಿ ಹಾಜರಪಡಿಸಿದ್ದು ಸದರ ವರಧಿ ಆದಾರದ ಮೇಲಿಂದ ಠಾಣಾ ಗುನ್ನೆ ನಂಬರ 31/2021 ಕಲಂ 31/2021 9B[1][b] Explosive Act 1884 ಸಂಗಡ 336,286 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಯಾದಗಿರಿ:- 37/2021 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ 07/03/2021 ರಂದು ಸಾಯಂಕಾಲ 7-30 ಪಿ.ಎಂ. ಕ್ಕೆ ಶ್ರೀ ದೇವಿಂದ್ರ ಸಿಹೆಚಸಿ-52 ರವರು ಮಾನ್ಯ ನ್ಯಾಯಾಲಯದಿಂದ ಅಸಂಜ್ಞೇಯ ಅಪರಾಧ ದಾಖಲು ಮಾಡಲು ಪರವಾನಿಗೆ ಪಡೆದುಕೊಂಡು ಬಂದು ಹಾಜರಪಡಿಸಿದ್ದೆನೆಂದರೆ ಮಾನ್ಯರವರಲ್ಲಿ ಈ ಮೇಲ್ಕಂಡ ವಿಷಯದನುಸರವಾಗಿ ವಿನಂತಿಸಿಕೊಳ್ಳುವುದೆನೆಂದರೆ ಇಂದು ದಿನಾಂಕ 07/03/2021 ರಂದು ಸಾಯಂಕಾಲ 6-00 ಪಿ.ಎಂ. ಕ್ಕೆ ಪಿ.ಎಸ್.ಐ(ಕಾ.ಸು) ರವರು ಜಪ್ತಿ ಪಂಚನಾಮೆನೊಂದಿಗೆ, 6 ಜನ ಆರೋಪಿತರು, ಮುದ್ದೆಮಾಲು ಸಮೇತ ತಮ್ಮ ವರದಿಯನ್ನು ಹಾಜರಪಡಿದ್ದೆನೆಂದರೆ ಇಂದು ದಿನಾಂಕ. 07-03-2021 ರಂದು 3-30 ಪಿ.ಎಮ್ ಕ್ಕೆ ನಾನು ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-361, 263 ಮತ್ತು 33 ರವರ ಜೋತೆಯಲ್ಲಿ ಮುಂಡರಗಿ ಗ್ರಾಮದಲ್ಲಿದ್ದಾಗ ನನಗೆ ಮಾಹಿತಿ ಬಂದಿದ್ದೆನೆಂದರೆ ರಾಮಸಮುದ್ರ ಗ್ರಾಮದ ಕಂಬಾರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಿಡದ ಕೆಳಗಡೆ ಯಾರೋ ಕೆಲವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಮುಂಡರಗಿ ಗ್ರಾಮದಿಂದ ಎಲ್ಲಾ ಸಿಬ್ಬಂದಿಯವರನ್ನು ಜೊತೆಯಲ್ಲಿಯೇ ಕರೆದುಕೊಂಡು ರಾಮಸಮುದ್ರ ಗ್ರಾಮದ ಕಡೆಗೆ ಹೊರಟು ಸಾಯಂಕಾಲ 4 ಗಂಟೆ ಸುಮಾರಿಗೆ ಕಂಬಾರ ಹೊಲದ ಹತ್ತಿರ ಬಂದು ಗಿಡಗಳ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಇಸ್ಪೀಟ ಜೂಜಾಟದ ದಾಳಿ ಬಗ್ಗೆ ತಿಳಿಸಿ ಎಲ್ಲರೂ ಕೂಡಿಕೊಂಡು ಮುಂದೆ ಹೋಗಿ ಎಲ್ಲರೂ ಅವಿತುಕೊಂಡು ನೋಡಲಾಗಿ ಒಂದು ಗಿಡದ ಕೆಳಗಡೆ ಇದ್ದ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಚಿತ ಪಡಿಸಿಕೊಂಡು ಎಲ್ಲರೂ ಅವರನ್ನು ಸುತ್ತಿವರೆದು 6 ಜನರನ್ನು ಸಾಯಂಕಾಲ 4-30 ಗಂಟೆಗೆ ಹಿಡಿದುಕೊಂಡೆವು, ಅವರ ಹೆಸರು 1)ಸೂಗಪ್ಪ ತಂದೆ ಮಹಾದೇವಪ್ಪ ಅಂಗಡಿ ವಯಾಃ 55 ವರ್ಷ ಜಾಃ ಲಿಂಗಾಯತ ಸಾಃ ಆಶನಾಳ 2)ಶರಣಗೌಡ ತಂದೆ ಜಗದೇಔಪ್ಪಗೌಡ ಪೊಲೀಸ್ ಪಾಟೀಲ ವಯಾಃ 40 ವರ್ಷ ಜಾಃ ಲಿಂಗಾಯತ ಉಃ ಒಕ್ಕಲುತನ ಸಾಃ ರಾಮಸಮುದ್ರ 3)ಶಿವರಾಜಪ್ಪ ತಂದೆ ಸಿದ್ದಲಿಂಗಪ್ಪ ಮಾಲಿ ಪಾಟೀಲ ವಯಾಃ 55 ವರ್ಷ ಜಾಃ ಲಿಂಗಾಯತ ಸಾಃ ರಾಮಸಮುದ್ರ 4)ಶೇಷಪ್ಪ ತಂದೆ ಮಲ್ಲಣ್ಣ ನಾಯಕ ವಯಾಃ 60 ವರ್ಷ ಜಾಃ ಬೇಡರ ಸಾಃ ಹಳಗೇರಾ 5)ಹಣಮಂತ ತಂದೆ ಬುಡ್ಡಣ್ಣ ಮೇಧ ವಯಾಃ 68 ವರ್ಷ ಜಾಃ ಮೇಧ ಸಾಃ ಆಶನಾಳ ಮತ್ತು 6)ಹಣಮಂತ ತಂದೆ ಶಿವಣ್ಣ ಉಪ್ಪಾರ ವಯಾಃ 40 ವರ್ಷ ಜಾಃ ಉಪ್ಪಾರ ಸಾಃ ರಾಮಸಮುದ್ರ ಈ 6 ಜನರಿಂದ ಇಸ್ಪಿಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 11,500/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡೆವು, ಈ ಸವಿಸ್ತಾರವಾದ ಪಂಚನಾಮೆಯನ್ನು ಇಂದು ದಿನಾಂಕ 07-03-2021 ರಂದು 4-30 ಪಿ.ಎಮ ದಿಂದ 5-30 ಪಿ.ಎಮ್ ದವರೆಗೆ ಮಾಡಿ ಮರಳಿ ಠಾಣೆಗೆ 6-00 ಪಿಎಂ. ಕ್ಕೆ ಬಂದು ಜಪ್ತಿ ಪಂಚನಾಮೆ, 6 ಜನ ಆರೋಪಿತರು, ಮುದ್ದೆಮಾಲು ಮತ್ತು ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜುರಪಡಿಸಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಎನ್.ಸಿ.ಆರ್ ನಂ: 07/2021 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ದಾಖಲಿಸಿದ್ದು ಇರುತ್ತದೆ. ಆದ್ದರಿಂದ ಈ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯರವರು ಗುನ್ನೆ ದಾಖಲಿಸಲು ಪರವಾನಿಗೆ ನೀಡಲು ವಿನಂತಿ. ಸದರಿ ಪರವಾನಿಗೆ ಪತ್ರದ ಸಾರಾಂಶಧ ಮೇಲಿಂದ ಠಾಣೆ ಗುನ್ನೆ ನಂ 37/2021 ಕಲಂ 87 ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 28/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 07.03.2021 ರಂದು ಸಂಜೆ 7:00 ಗಂಟೆಯ ಸುಮಾರಿಗೆ ಫಿರ್ಯಾದಿಯು ಗಾಯಾಳು ಅಂಜಪ್ಪ ಮಾಲೆ ಈತನೊಂದಿಗೆ ಸ್ಕೂಟರ ನಂಬರ ಕೆಎ-01-ಹೆಚ್.ಆರ್-1281 ನೇದ್ದರ ಮೇಲೆ ಕುಳಿತು ನಜರಾಪೂರ ಗ್ರಾಮದಿಂದ ಗುರುಮಠಕಲ್ಗೆ ಬರುತ್ತಿದ್ದಾಗ ಗುರುಮಠಕಲ್ ಪಟ್ಟಣದ ಹೆಚ್.ಪಿ ಗೋಡೋನ ಹತ್ತಿರ ಗಾಯಾಳು ಹಣಮಂತ ಯಾಧವ ಈತನು ರಾಮಲು ಎಂಬಾತನಿಗೆ ಮೋಟಾರು ಸೈಕಲ್ ನಂಬರ ಟಿ.ಎಸ್-06-ಇ.ವೈ-4055 ನೇದ್ದರ ಮೇಲೆ ಕೂಡಿಸಿಕೊಂಡು ಗುರುಮಠಕಲ್ ಕಡೆಯಿಂದ ತನ್ನ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿ ಹಾಗೂ ಆರೋಪಿತನಿಗೆ ಸೇರಿದಂತೆ ಗಾಯಳುದಾರರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 28/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 29/2021 ಕಲಂ: 341, 323, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 07.03.2021 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯಲ್ಲಿ ಚಹಾ ಕುಡಿಯಲು ಹೋಗಿದ್ದಾಗ ಆರೋಪಿ ಮಹಿಬೂಬ ಈತನು ಫಿರ್ಯಾದಿಯ ಮಗನಾದ ಉಬೇದುಲ್ಲಾ @ ಫರದೀನ್ ಈತನೊಂದಿಗೆ ಅವಾಚ್ಯವಾಗಿ ಬೈದು ಜಗಳ ತೆಗೆದಿದ್ದು ಆ ವಿಚಾರನ್ನು ಫಿರ್ಯಾದಿಯ ಮಗನು ಮನೆಗೆ ಹೋಗಿ ತನ್ನ ತಂದೆಯಾದ ಫಿರ್ಯಾದಿಗೆ ತಿಳೀಸಿದ ನಂತರ ಫಿರ್ಯಾದಿಯು ಪುನಃ ಸ್ಥಳಕ್ಕೆ ಹೋಗಿ ವಿಚಾರಿಸಿದಾಗಲೂ ಸಹ ಆರೋಪಿ ಮಹಿಬೂಬ ಈತನು ಅವಾಚ್ಯವಾಗಿ ಬೈದಿದ್ದು ಅದನ್ನು ಕೇಳಿದ ಫೀರ್ಯಾದಿ ನಾಳೆ ಊರಿನ ಪ್ರಮುಖರಿಗೆ ಕೂಡಿಸಿ ವಿಚಾರಿಸಿದರೆ ಆಯ್ತು ಅಂತಾ ತಿಳಿದು ಅಲ್ಲಿಂದ ಹೋಗುತ್ತಿದ್ದಾಗ ಆರೋಪಿತರಿಬ್ಬರು ಕೂಡಿ ಫಿರ್ಯಾದಿ ಮತ್ತು ಆತನ ಮಗನಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 29/2021 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 47/2021 ಕಲಂ 143,147,148,323,324,307,504,506 ಸಂ 149 ಐಪಿಸಿ : ಇಂದು ದಿನಾಂಕ 07/03/2021 ರಂದು 10.45 ಪಿಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀ ದೇವಪ್ಪ ತಂದೆ ಭಾಗಪ್ಪ ಚಿಕ್ಕಮೇಟಿ ವ|| 23ವರ್ಷ ಜಾ|| ಹಿಂದೂ ಮಾದರ(ಎಸ್.ಸಿ) ಉ|| ಕೂಲಿ ಸಾ|| ಸಾವೂರ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಬರಹದಿಂದ ಬರೆದ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 07/03/2021 ರಂದು ಸಂಜೆ 5.45 ಗಂಟೆ ಸುಮಾರಿಗೆ ಕೆಲಸದ ನಿಮಿತ್ಯ ನಾನು ಮತ್ತು ನಮ್ಮ ಸಂಬಂಧಿಕನಾದ ಸಿದ್ದಲಿಂಗಪ್ಪ ತಂದೆ ಚಂದಪ್ಪ ತಡಿಬಿಡಿ ಇಬ್ಬರೂ ಕೂಡಿ ಸೈಕಲ್ ಮೋಟಾರ ಮೇಲೆ ಹತ್ತಿಗುಡೂರ ಗ್ರಾಮಕ್ಕೆ ಬರುತ್ತಿದ್ದಾಗ ದೇವದುರ್ಗ ಕ್ರಾಸಿನಲ್ಲಿ ಹತ್ತಿಗುಡೂರ ಗ್ರಾಮದ ಹೊಲೆಯ ಜಾತಿಯ ಬಲಭೀಮ ತಂದೆ ಮಾನಪ್ಪ ಪಂಚಮ ಹಾಗೂ ಇತರ 3 ಜನರು ಕೂಡಿ ಸರಾಯಿ ಕುಡಿದ ನಶೆಯಲ್ಲಿ ರಸ್ತೆಯ ಮೇಲೆ ಅಡ್ಡ ಬಂದು ನಮ್ಮ ಸೈಕಲ್ ಮೋಟಾರ ನಿಲ್ಲಿಸಿ ಏನಲೇ ದೇವೆ ನೀನು ಬಹಳ ಸೊಕ್ಕಿನಿಂದ ತಿರುಗಾಡಕತ್ತೀದಿ ನೀವು ಮೊನ್ನೆ ನಮ್ಮ ಸಂಬಂಧಿಕರೊಂದಿಗೆ ಜಗಳ ಮಾಡಿದ್ದೀರಿ ನಿಮಗೆ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವಾಚ್ಯವಾಗಿ ಬೈಯಲು ಶುರು ಮಾಡಿದನು. ಆಗ ನಾನು ಯಾಕೋ ಅಣ್ಣ ನಾನೇನು ಮಾಡೀನಿ ದಾರಿ ಬಿಡು ಹೋಗುತ್ತೇವೆ ಅಂದಾಗ ನನಗೆ ಮತ್ತು ಸಿದ್ದಲಿಂಗನಿಗೆ ಕೈಯಿಂದ ಬೆನ್ನಿಗೆ ಹೊಡೆದರು, ನಾವು ಬಿಡಿಸಿಕೊಂಡು ನಮ್ಮ ಸೈಕಲ್ ಮೋಟಾರ ತಿರುಗಿಸಿ ಸಂಜೆ 6.00 ಗಂಟೆ ಸುಮಾರಿಗೆ ನಮ್ಮ ಊರಾದ ಸಾವೂರಗೆ ಹೋಗುತ್ತಿದ್ದಾಗ ಹತ್ತಿಗುಡೂರ ಹತ್ತಿರ ಇರುವ ದೇವದುರ್ಗ ಕ್ರಾಸಿನಲ್ಲಿನ ದಾಬಾದ ಮುಂದೆ 1) ಬಲಭೀಮ ತಂದೆ ಮಾನಪ್ಪ ಪಂಚಮ ಸಾ|| ಹತ್ತಿಗುಡೂರ 2) ಹೊನ್ನರಾಜ ತಂದೆ ಚನ್ನಪ್ಪ ಸಾ|| ಹತ್ತಿಗುಡೂರ 3) ವಿಶ್ವರಾಧ್ಯ ತಂದೆ ಲಚಮಪ್ಪ ಸಾ|| ಬೀರನೂರ, 4) ಪರಶುರಾಮ ತಂದೆ ಚಂದ್ರಪ್ಪ ಸಾ|| ಕೊಂಗಂಡಿ ಇವರು ಮತ್ತೆ ನಮ್ಮ ಸೈಕಲ್ ಮೋಟಾರನ್ನು ತಡೆದು ನಿಲ್ಲಿಸಿ ನಮ್ಮೊಂದಿಗೆ ಜಗಳ ತೆಗೆದು ಕೈಯಿಂದ ನಮಗೆ ಹೊಡೆಯುತ್ತಿದ್ದಾಗ ನಾವು ಯಾಕೆ ಸುಮ್ಮನೆ ಹೊಡೆಯುತ್ತಿದ್ದೀರಿ ಅಂದಾಗ ತಮ್ಮ ಸಂಬಂಧಿಕರಾದ 5) ಅಶೋಕ ತಂದೆ ಸಣ್ಣನಾಗಪ್ಪ ದೋರನಳ್ಳಿ ಸಾ|| ಬೀರನೂರ 6) ಮರಿಲಿಂಗ ತಂದೆ ಮಲ್ಲಪ್ಪ ಸಾ|| ಹತ್ತಿಗುಡೂರ 7) ರವಿಚಂದ್ರ ತಂದೆ ಗುರಪ್ಪ ಸಾ|| ಮಂಡಗಳ್ಳಿ ಹಾಗೂ ಇತರರಿಗೆ ಫೋನ ಮಾಡಿ ಕರೆಯಿಸಿ ಕೈಯಿಂದ ಹೊಡೆಯುತ್ತಿದ್ದಾಗ ಸಿದ್ದಲಿಂಗನು ಫೋನ ಮಾಡಿ ತಿಳಿಸಿದ್ದರಿಂದ ನಮ್ಮ ಮನೆಯವರಾದ ನಮ್ಮ ಅಕ್ಕ ದಂಡಮ್ಮ ಗಂಡ ಚಂದಪ್ಪ, ನಮ್ಮ ಅಣ್ಣ ಬಾಬು ತಂದೆ ಭಾಗಪ್ಪ ಚಿಕ್ಕಮೇಟಿ, ಚಂದಪ್ಪ ತಂದೆ ಹೊನ್ನಪ್ಪ, ಮರೆಪ್ಪ ತಂದೆ ಹಣಮಂತ ಚಿಕ್ಕಮೇಟಿ, ಬಸಪ್ಪ ತಂದೆ ಗಿರೆಪ್ಪ, ಅಯ್ಯಪ್ಪ ತಂದೆ ಶಂಕ್ರೆಪ್ಪ ಇವರೆಲ್ಲರೂ ಕೂಡಿ ಜಗಳ ಬಿಡಿಸಲು ನಾವಿದ್ದ ಸ್ಥಳಕ್ಕೆ ಬಂದು ಜಗಳ ಬಿಡಿಸುತ್ತಿದ್ದಾಗ ನಮ್ಮೊಂದಿಗೆ ಜಗಳ ಮಾಡುತ್ತಿದ್ದ ಬಲಭೀಮ ಹಾಗೂ ಇತರರು ರಾಡು, ಬಡಿಗೆ ತೆಗೆದುಕೊಂಡು ಬಂದು ಏನರೆಲೇ ಮಾದಿಗ ಸೂಳೆ ಮಕ್ಕಳೆ ನೀವು ಸಾವೂರಾಗ ನಮ್ಮ ಸಂಬಂಧಿಕರೊಂದಿಗೆ ಏಕೆ ಜಗಳ ಮಾಡಿದ್ದೀರಿ ಅಂತಾ ಅನ್ನುತ್ತಾ ನಮಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಅಣ್ಣನಾದ ಬಾಬು ಈತನಿಗೆ ಬಲಭೀಮನು ರಾಡಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿ, ಕಲ್ಲಿನಿಂದ ಮೂಗಿಗೆ ಮತ್ತು ಬಾಯಿಯ ಹತ್ತಿರ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಅದೇ ರೀತಿ ನಮ್ಮ ಮಾವನಾದ ಚಂದಪ್ಪ ತಂದೆ ಹೊನ್ನಪ್ಪ ಈತನಿಗೆ ಹೊನ್ನರಾಜನು ತಲೆಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಮಾಡಿದನು. ಉಳಿದವರು ಕೈಯಿಂದ ನನಗೆ ಮತ್ತು ಸಿದ್ದಲಿಂಗನಿಗೆ ಹೊಡೆದು ಗುಪ್ತಗಾಯ ಮಾಡಿದ್ದು ನಮ್ಮ ಮನೆಯವರು ಜಗಳ ಬಿಡಿಸಿದ್ದು ಇರುತ್ತದೆ. ಬಾಬು ಮತ್ತು ಚಂದಪ್ಪನಿಗೆ ಗಾಯಗಳಾಗಿದ್ದರಿಂದ ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ನನಗೆ ಮತ್ತು ಸಿದ್ದಲಿಂಗನಿಗೆ ಅಷ್ಟೊಂದು ಗಾಯಗಳಾಗದ ಕಾರಣ ಆಸ್ಪತ್ರೆಗೆ ತೋರಿಸಿಲ್ಲ. ನಮಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವರ ಸಂಬಂಧಿಕರೊಂದಿಗೆ ಆಗಿರುವ ಹಳೆಯ ಜಗಳದ ದ್ವೇಷ ಸಾಧಿಸಲು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಹಲ್ಲೆ ಮಾಡಿ ಕೈಯಿಂದ, ರಾಡಿನಿಂದ, ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಲಭೀಮ ತಂದೆ ಮಾನಪ್ಪ ಪಂಚಮ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುತ್ತೇನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 47/2021 ಕಲಂ: 143, 147, 148, 323, 324, 307, 504, 506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Last Updated: 08-03-2021 10:49 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080