ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/04/2021

ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂ: 45/2021 ಕಲಂ: 143,147,323,324,307.504.506 ಸಂ.149 ಐಪಿಸಿ: ಇಂದು ದಿನಾಂಕ; 07/04/2021 ರಂದು 11-30 ಎಎಮ್ ಕ್ಕೆ ಪಿರ್ಯಾಧಿ ಶ್ರೀ ಭೀಮರಾಯ ತಂದೆ ಭೀಮಶಪ್ಪ ಅಂಬಿಗೇರ ಸಾ; ಕೋಲಿವಾಡ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ಹಿಗೇ ಎರಡು ತಿಂಗಳ ಹಿಂದೆ ನಮ್ಮ ಕಾಕನ ಮಗನಾದ ಶಿವಪ್ಪ ತಂದೆ ಸೈದಪ್ಪ ಅಂಬಿಗೇರ ಈತನ ಹತ್ತಿರ ಟ್ರಾಕ್ಟರ ಚಾಲಕನಾಗಿ ರಾಮಣ್ಣ ತಂದೆ ಕೃಷ್ಣಪ್ಪ ವಡ್ಡರ ಈತನು ಕೆಲಸ ಮಾಡುತ್ತಿದ್ದು ಆಗ ಶಿವಪ್ಪ ಈತನು ರಾಮಣ್ಣನಿಗೆ ಸರಿಯಾಗಿ ಪಗಾರ ಕೊಡದ ಕಾರಣ ಕೆಲಸ ಬಿಟ್ಟಿದ್ದನು. ಅದೇ ವಿಷಯಕ್ಕೆ 15 ದಿವಸಗಳ ಹಿಂದೆ ರಾಮಣ್ಣ ಮತ್ತು ಅವರ ಅಣ್ಣತಮಕಿಯ ಪೈಕಿ ಭೀಮರಾಯ ತಂದೆ ನಾಗಪ್ಪ ಬೆನಕಲ್ ಇವರಿಗೂ ಶಿವಪ್ಪನಿಗೂ ಜಗಳಗಳಾಗಿ ತಕರಾರು ಮಾಡಿಕೊಂಡಿದ್ದರು. ನಂತರ ದಿನಾಂಕ; 04/04/2021 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಭೀಮರಾಯ ಬೆನಕಲ್ ಈತನು ಸೈದಾಪೂರ ಹೋಟೇಲ ಪಕ್ಕದಲ್ಲಿ ನಮ್ಮ ಓಣಿಯ ಕಡೆಗೆ ಬರುವ ರೋಡಿನ ಮೇಲೆ ಶಿವಪ್ಪನ ಸಂಗಡ ರಾಮಣ್ಣ ಈತನು ನಿಮ್ಮ ಟ್ರಾಕ್ಟರ ಚಾಲಕನ ಕೆಲಸ ಬಿಟ್ಟಿದ್ದಕ್ಕೆ ನನ್ನ ಸಂಗಡ ಯಾಕೆ ಜಗಳ ಮಾಡುತ್ತೀರಿ ಅಂತಾ ತಕರಾರು ಮಾಡಿದ್ದನು. ದಿನಾಂಕ;05/04/2021 ರಂದು ಬೆಳೆಗ್ಗೆ 8-30 ಗಂಟೆ ಸುಮಾರಿಗೆ ನಾನು ನಮ್ಮ ಕಾಕನ ಮಕ್ಕಳಾದ ಶಿವಪ್ಪ ತಂದೆ ಸೈದಪ್ಪ ಅಂಬಿಗೇರ, ದೇವಿಂದ್ರಪ್ಪ ತಂದೆ ಸೈದಪ್ಪ ಅಂಬಿಗೇರ ಕೂಡಿಕೊಂಡು ರಾಮಣ್ಣನ ಮನೆಯ ಹೋದಾಗ ಅಲ್ಲಿ ರಾಮಣ್ಣ ಮತ್ತು ಭೀಮರಾಯ ಬೆನಕಲ್ ಇಬ್ಬರು ಅವರ ಮನೆಯ ಮುಂದೆ ನಿಂತಿದ್ದರು. ಆಗ ಶಿವಪ್ಪನು ರಾಮಣ್ಣನಿಗೆ ನಮ್ಮ ಟ್ರಾಕ್ಟರ ಚಾಲಕನಾಗಿ ಕೆಲಸಕ್ಕೆ ಬರುವಂತೆ ಹೇಳಿದಾಗ ರಾಮಣ್ಣನು ನೀನು ನನಗೆ ಸರಿಯಾಗಿ ಪಗಾರ ಕೊಡುವುದಿಲ್ಲ ಅದಕ್ಕೆ ಕೆಲಸ ಬಿಟ್ಟಿದ್ದೆನೆ ಮತ್ತೆ ನೀನ್ನ ಹತ್ತಿರ ಬರುವುದಿಲ್ಲ ನಾನು ಈಗ ಗಂಜಗೆ ಹಮಾಲಿ ಕೆಲಸಕ್ಕೆ ಹೋಗುತ್ತಿದ್ದೆನೆ ನನಗೆ ಮತ್ತೆ ಮತ್ತೆ ಕರೆಯಬೇಡ ಅಂತಾ ಅಂದಾಗ ಶಿವಪ್ಪ ಈತನು ಇನ್ನು ಮುಂದೆ ಸರಿಯಾಗಿ ಪಗಾರ ಕೊಡುತ್ತೇನೆ ಕೆಲಸಕ್ಕೆ ಬಾ ಅಂತಾ ಕರೆದಾಗ ರಾಮಣ್ಣ ಮತ್ತು ಭೀಮರಾಯ ಇವರು ನಿನಗೆ ಒಂದು ಸಾರಿ ಹೇಳಿದರೆ ತಿಳಿಯುವುದಿಲ್ಲ ಬರಲ್ಲ ಅಂತಾ ಹೇಳಿದರು ಕೂಡಾ ಯಾಕೆ ಒತ್ತಾಯ ಮಾಡುತ್ತೀಯಾ ಅಂತಾ ತಕರಾರು ಮಾಡಿದ್ದರು. ನಿನ್ನೆ ದಿನಾಂಕ; 06/04/2021 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಕಾಕನ ಮಗನಾದ ದೇವಿಂದ್ರಪ್ಪ ಕೂಡಿಕೊಂಡು ಗಂಜ ಹಿಂದೆಯಿರುವ ನಮ್ಮ ಹೊಲಕ್ಕೆ ಹೋಗುತ್ತಿರುವಾಗ ಗಂಜ ರೋಡಿಗೆ ಬರುವ ನರಸಿಂಗರಾವ್ ಕಟ್ಟಿಗೆ ಅಡ್ಡೆಯ ಹತ್ತಿರ ರೋಡಿನ ಮೇಲೆ ರಾಮಣ್ಣ ತಂದೆ ಕೃಷ್ಣಪ್ಪ ವಡ್ಡರ, ಹೊನ್ನಪ್ಪ ತಂದೆ ಕೃಷ್ಣಪ್ಪ ವಡ್ಡರ, ಜಲಾಲ ತಂದೆ ಸಾಬಣ್ಣ ಧೋತ್ರೆ, ಸೂಗಪ್ಪ ತಂದೆ ಬೈಲಪ್ಪ ವಡ್ಡರ, ಭೀಮರಾಯ ತಂದೆ ನಾಗಪ್ಪ ಬೆನಕಲ್ ರವರು ಕೂಡಿಕೊಂಡು ಇದ್ದಾಗ ನಾವು ಅವರಿಗೆ ನಮ್ಮ ಮೇಲೆ ಕೇಸು ಮಾಡಲಿಕ್ಕೆ ಪೊಲೀಸ ಠಾಣೆಗೆ ಹೋಗಿರಿ ನಾವು ನಿಮಗೇನು ಮಾಡಿಲ್ಲ ನಿಮಗೂ ಶಿವಪ್ಪನಿಗೂ ತಕರಾರು ಇದ್ದು ನಮಗೆ ಯಾಕೆ ನಿಮ್ಮ ಜಗಳದಲ್ಲಿ ನಡುವೆ ನಮ್ಮ ಹೆಸರು ಬರೆಸಿದ್ದಿರಿ ಇದು ಸರಿಯಲ್ಲ ಅಂತಾ ಕೇಳಿದ್ದಕ್ಕೆ ಅವರು ಲೇ ಸೂಳೇ ಮಕ್ಕಳೇ ನಿಮ್ಮದು ಓಣಿಯಲ್ಲಿ ಬಹಳ ಆಗಿದೆ ನಿಮ್ಮಿಂದ ದೂರ ಇದ್ದರು ಕೂಡಾ ಮತ್ತೆ ನಮ್ಮ ಹತ್ತಿರನೇ ಬರುತ್ತೀರಿ ನಿಮಗೆ ಇಲ್ಲಿಂದ ಹೋಗಲು ಬಿಡುವುದಿಲ್ಲ ನಿಮಗೆ ಕೊಲೆ ಮಾಡಿಯೇ ಬಿಡುತ್ತೇವೆ ಅಂತಾ ನಮಗೆ ಕೊಲೆ ಮಾಡುವ ಉದ್ದೇಶದಿಂದ ರಾಮಣ್ಣ ಈತನು ಈ ಸೂಳೇ ಮಕ್ಕಳಿಗೆ ಜೀವ ಸಹಿತ ಹೂತು ಹಾಕಿ ಬಿಡೋಣಾ ಅಂತಾ ಅಂದವನೇ ಕಟ್ಟಿಗೆ ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಹೊನಪ್ಪ ಈತನು ಕಾಲಿನಿಂದ ಹೊಟ್ಟೆಗೆ, ತೊರಡಿಗೆ ಒದ್ದನು. ಆಗ ದೇವಿಂದ್ರಪ್ಪ ಈತನು ಜಗಳ ಬಿಡಿಸಲು ಬಂದಾಗ ಅವನಿಗೂ ಕೂಡಾ ಜಲಾಲ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಸೂಗಪ್ಪ ಈತನು ಕಾಲಿನಿಂದ ಹೊಟ್ಟೆಗೆ, ಬೆನ್ನಿಗೆ ಒದ್ದನು. ಭೀಮರಾಯ ಈತನು ಕಾಲಿನಿಂದ ನನಗೆ ಬಲಗಾಲಿನ ಮೊಳಕಾಲಿನ ಕೆಳಗೆ ಒದ್ದು, ಕೈಯಿಂದ ಕಪಾಳಕ್ಕೆ ಹೊಡೆದನು ಮತ್ತು ಈ ಸೂಳೆ ಮಕ್ಕಳಿಗೆ ಇವತ್ತು ಕೊಲೆ ಮಾಡದೇ ಬಿಡಬಾರದು ಹಿಗೇ ಬಿಟ್ಟರೆ ಮತ್ತೆ ಮತ್ತೆ ನಮ್ಮ ತಂಟೆಗೆ ಬರುತ್ತಾರೆ ಅಂತಾ ಬೈದಾಡಿ ನಮ್ಮ ಮೇಲೆ ಕೊಲೆ ಪ್ರಯತ್ನ ಮಾಡಿದ್ದು ಆಗ ನಾವು ಚಿರಾಡುತ್ತಿರುವಾಗ ನಮಗೆ ಪರಿಚಯಸ್ಥರಾದ ನಾಗಪ್ಪ ತಂದೆ ಮಲ್ಲಯ್ಯ ನಕ್ಕಲೋರ, ಖಾಜಾ ಹುಸೇನ ತಂದೆ ಜಲಾಲಸಾಬ, ಭೀಮರಾಯ ತಂದೆ ದೇವಿಂದ್ರಪ್ಪ ಹಂಚಿನಾಳ ಮತ್ತು ನಮ್ಮ ಅಣ್ಣತಮಕಿಯ ಪೈಕಿ ಸಾಬರೆಡ್ಡಿ ತಂದೆ ಶಿವಪ್ಪ ಅಂಬಿಗೇರ ರವರು ಜಗಳ ಬಿಡಿಸಿದರು. ನಂತರ ಉಪಚಾರ ಕುರಿತು ನಾವು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುವ ಕಾಲಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ನಮಗೆ ವಿಚಾರಿಸಿದ್ದು ಆಗ ನಾವು, ಪೊಲೀಸರಿಗೆ ಈಗ ನಮ್ಮದು ಯಾವುದೇ ದೂರು ಇರುವುದಿಲ್ಲ. ನಾವು ಮನೆಯಲ್ಲಿ ಈ ಜಗಳದ ಬಗ್ಗೆ ವಿಚಾರಿಸಿ ನಂತರ ನಾವು ಠಾಣೆಗೆ ಬಂದು ದೂರು ಸಲ್ಲಿಸುತ್ತೇವೆ ಅಂತಾ ತಿಳಿಸಿದ್ದು ಈಗ ಇಂದು ದಿನಾಂಕ; 07/04/2021 ರಂದು ನಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ನಮಗೆ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ, ಕೊಲೆಯ ಪ್ರಯತ್ನ ಮಾಡಿದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.45/2021 ಕಲಂ. 143, 147, 323, 324, 307, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:- 20/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 07/04/2021 ರಂದು ಸಮಯ 2-55 ಎ.ಎಂ.ಕ್ಕೆ ರಿಮ್ಸ್ ಆಸ್ಪತೆ ರಾಯಚೂರಿನಿಂದ ಆರ್.ಟಿ.ಎ/ ಡೆತ್ ಎಂ.ಎಲ್.ಸಿ ಪೋನ್ ಮೂಲಕ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆ ಕುರಿತು ಶ್ರೀ ಭೀಮಾಶಂಕರ ಎ.ಎಸ್.ಐ ರವರಿಗೆ ನೇಮಿಸಿದ್ದು, ಸದರಿಯವರು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಈ ಕೇಸಿನಲ್ಲಿನ ಮೃತನ ಪತ್ನಿಯಾದ ಪಿಯರ್ಾದಿ ಶ್ರೀದೇವಿ ಗಂಡ ಸಾಬರೆಡ್ಡಿ ಕಣಗಲ್ ವಯ;24 ವರ್ಷ, ಜಾ;ಉಪ್ಪಾರ, ಉ;ಕೂಲಿ ಕೆಲಸ, ಸಾ;ಗಾಂಧಿನಗರ ತಾಂಡ ಯಾದಗಿರಿ ಇವರು ಘಟನೆ ಬಗ್ಗೆ ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಅಸಲು ಪಿಯರ್ಾದಿ ಹೇಳಿಕೆಯನ್ನು ಠಾಣೆಯ ಶ್ರೀ ವೆಂಕಟೇಶ ಸಿಪಿಸಿ-369 ರವರ ಸಂಗಡ ರಾಯಚೂರಿನಿಂದ ಠಾಣೆಗೆ ಮುಂದಿನ ಕ್ರಮಕ್ಕಾಗಿ ಕಳಿಸಿದ್ದು, ಇಂದು ದಿನಾಂಕ 07/04/2021 ರಂದು ಸಮಯ 11 ಎ.ಎಂ.ಕ್ಕೆ ಶ್ರೀ ವೆಂಕಟೇಶ ಸಿಪಿಸಿ-369 ರವರು ಬಂದು ಪಿಯರ್ಾದಿ ಅಸಲು ಹೇಳಿಕೆಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮಗೆ ಇಬ್ಬರು ಮಕ್ಕಳು ಇರುತ್ತಾರೆ. ನನ್ನ ಗಂಡ ಸಾಬರೆಡ್ಡಿ ವಯ;28 ವರ್ಷ ಈತನು ಸೆಂಟ್ರಿಂಗ್ ಕೂಲಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ನಿನ್ನೆ ಕೆಲಸದಿಂದ ಸಾಯಂಕಾಲ ಮನೆಗೆ ಬಂದು ಊಟ ಮಾಡಿಕೊಂಡು ತನ್ನ ತಮ್ಮನಾದ ಅಶೋಕ ಈತನೊಂದಿಗೆ ಸುಭಾಷ್ ಸರ್ಕಲ್ ಹತ್ತಿರ ಸನಾ ಮೊಬೈಲ್ ಅಂಗಡಿಗೆ ಹೋಗಿ ಮೋಬೈಲ್ ರೀಚಾರ್ಜ ಮಾಡಿಸಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 06/04/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮೈದುನ ಅಶೋಕ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ಅಣ್ಣನಾದ ಸಾಬರೆಡ್ಡಿ ಇಬ್ಬರು ಸನಾ ಮೋಬೈಲ್ ಅಂಗಡಿಗೆ ಬಂದು ಮೊಬೈಲ್ ರೀಚಾರ್ಜ ಮಾಡಿಸಿಕೊಂಡು ಮರಳಿ ಮನೆಗೆ ಬರುವಾಗ ಸುಭಾಷ್ ವೃತ್ತದ ರಸ್ತೆ ಬದಿಯಲ್ಲಿ ನಡೆದುಕೊಂಡು ಗಾಂಧಿನಗರ ತಾಂಡಾಕ್ಕೆ ಬರುತ್ತಿದ್ದಾಗ ವಾಡಿ ಕಡೆಯಿಂದ ಬರುತ್ತಿದ್ದ ಒಬ್ಬ ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಲ್ಲಿ ಅಣ್ಣ ಸಾಬರೆಡ್ಡಿಗೆ ಜೋರಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಸದರಿ ಅಪಘಾತದಲ್ಲಿ ರಸ್ತೆಯ ಬದಿಗೆ ಬಿದ್ದಾಗ ಆತನಿಗೆ ಎಡಗಾಲು ಮೊಣಕಾಲು ಕೆಳಗೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಹಾಗೂ ಎಡಗಾಲು ತೊಡೆಗೆ ಭಾರೀ ಗುಪ್ತಗಾಯವಾಗಿರುತ್ತದೆ, ಬಲಸೊಂಟಕ್ಕೆ ರಕ್ತಗಾಯ, ಬಲಗೈ ಬೆಳುಗಳಿಗೆ ಭಾರೀ ಗುಪ್ತಗಾಯವಾಗಿದ್ದು, ಬಲಗೈ ಮುಂಗೈಗೆ ಭಾರೀ ಗುಪ್ತಗಾಯ ಅಲ್ಲದೇ ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ನಮಗೆ ಅಪಘಾತ ಪಡಿಸಿದ ಲಾರಿ ನಂಬರರ ಎಮ್.ಎಚ್-12, ಕೆಪಿ-7528 ನೇದ್ದು ಇದ್ದು, ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿದ್ದು ತನ್ನ ಹೆಸರು ನಿಯಾಜ್ ತಂದೆ ಮಹೀಮೂದ ಡಕಾರೆ ಸಾ;ದಂಡೋತಿ ತಾ;ಚಿತ್ತಾಪುರ ಅಂತಾ ತಿಳಿಸಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 06/04/2021 ರಂದು ಸಮಯ 8-30 ಪಿ.ಎಂ.ಕ್ಕೆ ಜರುಗಿರುತ್ತದೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರಬೇಕು ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ನಮ್ಮ ಮನೆಯಲ್ಲಿದ್ದ ಭಾವನವಾದ ಮುನಿಯಪ್ಪ ಹಾಗೂ ನಮ್ಮ ಓಣಿಯವಾದ ಶ್ರೀನಿವಾಸ ತಂದೆ ಹಣಮಂತ ಕಿಣ್ಣಿಕೇರಿ ಇವರಿಗೆ ನನಗೆ ಬಂದ ಮಾಹಿತಿ ತಿಳಿಸಿ ಒಂದು ಖಾಸಗಿ ವಾಹನದಲ್ಲಿ ಘಟನಾ ಸ್ತಳಕ್ಕೆ ಬಂದು ನೋಡಲಾಗಿ ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಕೂಡಲೇ ನನ್ನ ಗಂಡನಾದ ಸಾಬರೆಡ್ಡಿ ಈತನಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ವೈದ್ಯರು ಹೆಚ್ಚಿನ ಉಪಚಾರ ಕುರಿತು ಯಾದಗಿರಿಯಿಂದ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವು ತಡಮಾಡದೇ 108 ಅಂಬುಲೆನ್ಸ್ ನಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ರಿಮ್ಸ್ ಆಸ್ಪತೆಯಲ್ಲಿ ನನ್ನ ಗಂಡ ಸಾಬರೆಡ್ಡಿ ಈತನು ಉಪಚಾರ ಹೊಂದುತ್ತಾ ಚಿಕಿತ್ಸೆಗೆ ಸ್ಪಂದಿಸದೇ ಅಪಘಾತದಲ್ಲಾದ ಗಂಭೀರ ಸ್ವರೂಪದ ಗಾಯಗಳ ಭಾದೆಯಿಂದ ಇಂದು ದಿನಾಂಕ 07/04/2021 ರಂದು ಬೆಳಗಿನ ಜಾವ 2-50 ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಅಂತಾ ರಿಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ನಾನು ಆಸ್ಪತೆಯಲ್ಲಿದ್ದು ನನ್ನ ಗಂಡ ಸಾಬರೆಡ್ಡಿಯ ಮೃತದೇಹವನ್ನು ಗುತರ್ಿಸಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ 06/04/2021 ರಂದು ರಾತ್ರಿ ಸಮಯ 8-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿ ಸುಭಾಷ್ ಸರ್ಕಲ್ ಮುಖ್ಯ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಲಾರಿ ನಂಬರ ಎಮ್.ಎಚ್-12, ಕೆಪಿ-7528 ನೇದ್ದರ ಚಾಲಕನು ತನ್ನ ಲಾರಿಯನ್ನು ವಾಡಿ ಕಡೆಯಿಂದ ಯಾದಗಿರಿ ಹೊಸ ಬಸ್ ನಿಲ್ದಾಣದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ಗಂಡನಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ನನ್ನ ಗಂಡನು ಅಪಘಾತದಲ್ಲಾದ ಗಂಭೀರ ಸ್ವರೂಪದ ಗಾಯಗಳ ಭಾದೆಯಿಂದ ಚಿಕಿತ್ಸೆ ಪಡೆಯುತ್ತಾ ರಿಮ್ಸ್ ಆಸ್ಪತೆ ರಾಯಚೂರದಲ್ಲಿ ಮೃತ ಪಟ್ಟಿದ್ದು ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 20/2021 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 42/2021 ಕಲಂ: 78(3) ಕೆ.ಪಿ.ಆಕ್ಟ್: ಇಂದು ದಿನಾಂಕ: 07/04/2021 ರಂದು 5-50 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದೇನಂದರೆ ಇಂದು ದಿನಾಂಕ: 07/04/2021 ರಂದು ಸಮಯ ಮಧ್ಯಾಹ್ನ 1-45 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಮುತ್ತಪ್ಪ ಎ.ಎಸ್.ಐ (ಡಿ.ಎಸ್.ಪಿ ಕಾರ್ಯಲಯ ಯಾದಗಿರಿ), ಚಂದ್ರಕಾಂತ ಹೆಚ್.ಸಿ 109 ಗುರುಮಠಕಲ್ ಠಾಣೆ, ಪ್ರಕಾಶ ಹೆಚ್.ಸಿ 18 ವಡಗೇರಾ ಠಾಣೆ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇರ ಮಾರ್ಗದರ್ಶನದಲ್ಲಿ ನನಗೆ ಬಾತ್ಮಿ ಬಂದಿದ್ದೇನಂದರೆ ಗುಂಡಳ್ಳಿ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 1-50 ಪಿಎಮ್ ಕ್ಕೆ ಹೊರಟು ಸಮಯ 2-25 ಪಿಎಮ್ ಸುಮಾರಿಗೆ ಗುಂಡಳ್ಳಿ ಗ್ರಾಮ ತಲುಪಿ ಗುಂಡಳ್ಳಿ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಹನುಮಾನ ದೇವರ ಗುಡಿಯನ್ನು ಮರೆಯಾಗಿ ನಿಂತು ನೋಡಲಾಗಿ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 4-20 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಾಯಬಣ್ಣ ತಂದೆ ಹಣಮಂತ ವಡಗೇರಿ, ವ:50, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾ:ಶಹಾಪೂರ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 18,000/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 18,000/- ರೂ. ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿಯವನಿಗೆ ಮಟ್ಕಾ ನಂಬರಗಳನ್ನು ಬರೆದ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಚಂದ್ರಾಮಪ್ಪ ಅಲ್ಲಿಪೂರ ಸಾ:ಮರಮಕಲ್ ತಾ:ಶಹಾಪೂರು ಎಂಬ ಬುಕ್ಕಿಗೆ ಕೊಡುವುದಾಗಿ ಹೇಳಿರುತ್ತಾನೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ. 42/2021 ಕಲಂ: 78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ :- ಯು.ಡಿ.ಆರ್ ನಂ 14/2021 ಕಲಂ 174 ಸಿ.ಆರ್.ಪಿ.ಸಿ: ಇಂದು ದಿನಾಂಕ 07/04/2021 ರಂದು 10:00 ಎ.ಎಂ ಕ್ಕೆ ಪಿರ್ಯಾದಿ ಜುಲೇಖಾ ಗಂಡ ಸೋಪಿಸಾಬ ರಸ್ತಾಪೂರ ವ|| 24 ಷರ್ವ, ಉ|| ಕೂಲಿ ಜಾ|| ಮುಸ್ಲಿಂ, ಸಾ|| ಕನ್ಯಾಕೊಳ್ಳುರು, ಇದ್ದು, ನನಗೆ ಸುಮರು 2 ವರ್ಷಗಳಿಂದೆ ನಮ್ಮ ಸಂಬಂದಿಕರಾದ ಖಾಸಿಂಸಾಬ ಇವರ ಮಗನಾದ ಸೋಪಿಸಾಬ ಇವರಿಗೆ ಕೊಟ್ಟು ಮದುವೆಮಾಡಿದ್ದು, ನಮ್ಮ ಸಂಸಾರದಲ್ಲಿ, ನಮಗೆ ಒಂದು ಗಂಡು ನಬೀಸಾಬ ವ|| 7 ತಿಂಗಳು ನಮ್ಮ, ಅತ್ತೆ ಮಾವ ಕೂಲಿ ಕೆಲಸಮಡಿಕೊಂಡು ಗಂಡ ಮಕ್ಕಳೊಂದಿಗೆ ಉಪ ಜೀಸಿಸುತ್ತಿದ್ದು, ಸದರಿ ನನ್ನ ಗಂಡ ಸೋಪಿಸಾಬ ಈತನು ಹೀಗ 1 1/2 ವರ್ಷಗಳಿಂದ ಸರಾಯಿ ಕುಡಿಯುವದನ್ನು ಹೆಚ್ಚಿಗೆ ಮಾಡಿದ್ದು, ನಾವೂ ಸದರಿ ನನ್ನ ಗಂಡನಿಗೆ ಸರಾಯಿ ಕುಡಿಯುವದರಿಂದ ನಿನ್ನ ಆರೋಗ್ಯ ಹಾಳಾಗುತ್ತದೆ ಅಂತಾ ಆಗಾಗ ಬುದ್ದಿವಾದ ಹೇಳುತ್ತಿದ್ದೇವು, ನಿಮ್ಮ ಅಣ್ಣ ನಬೀಸಾಬ ಕೂಡ ಆನರೋಗ್ಯದಿಂದ ಮೃತಪಟ್ಟಿದ್ದು, ನೀನು ಕುಡಿಯುದನ್ನು ಬಿಟ್ಟು ಬೀಡು ಅಂತಾ ತಿಳಿಸುತ್ತಿದ್ದೆವು. ಹೀಗಿದ್ದು ದಿನಾಂಕ 06/04/2021 ರಂದು ಸಾಯಂಕಾಲ 8 ಗಂಟೆ ಸುಮಾರಿಗ ಸದರಿ ನನ್ನ ಗಂಡ ಸೋಪಿಸಾಬ ಇತನು ಕುಡಿದು ಮನೆಗೆ ಬಂದಿದ್ದು, ಈ ರೀತಿ ಸರಾಯಿ ಕುಡಿಯಬೇಡ ಅಂತಾ ನಮ್ಮ ಅತ್ತೆ-ಮಾವ ನಾನು ಬುದ್ದಿವಾದ ಹೇಳಿದ್ದು,ನಂತರ ಎಲ್ಲರೂ ಊಟಾ ಮಾಡಿ ನಾವೂ ಮ್ಯಾಳಿಗೆ ಮೇಲೆ ಮಲಗಿದ್ದು, ನಮ್ಮ ಅತ-ಮಾವ ಮನೆಯಲ್ಲಿ ಮಲಗಿದ್ದೇವು, ಇಂದು ದಿನಾಂಕ 07/04/2021 ರಂದು ಬೇಳಿಗ್ಗೆ 5:30 ಎ.ಎಂ. ಕ್ಕೆ ಎದ್ದು ಕೇಳಗೆ ಬಂದೇವು, ನಮ್ಮ ಖಾಸಿಂಸಾಬ ಇತನು ನಮಾಜ ಮಾಡಲು ಹೋಗಿದ್ದು, ನಾನು ಮತ್ತು ನಮ್ಮ ಅತ್ತೆ ಅಡಿಗೆ ಮನೆಯಲ್ಲಿ ಅಡಿಗೆ ಮಾಡಲು ಒಳಗೆ ಹೋಗಿದ್ದು ನಂರ ಅಂದಾಜು 5:40 ಎ.ಎಂ ಸುಮರಿಗೆ ನನ್ನ ಗಂಡ ವಾಂತಿ ಮಾಡಿಕೊಳ್ಳುವ ಶಬ್ದ ಕೇಳಿ ನಾನು ಮತ್ತು ನಮ್ಮ ಅತ್ತೆ ಹೋರಿಗಿನ ಪಡಸಲಾಗಿ ಬಂದು ನೋಡಲಾಗಿ ನನ್ನ ಗಂಡ ಸೋಪಿಸಾಬ ಇತನು ಬೆಳೆಗಳಿಗೆ ಸಿಂಪರಣೆ ಮಾಡುವ ಕ್ರೀಮಿನಾಶಕ ಎಣ್ಣಿ ಸೇವೆನ ಮಾಡಿದ್ದು, ಕೂಡಲೇ ನಾನು ಚಿರಾಡುತ್ತಾ, ನಮ್ಮ ಅತ್ತೆ, ಸೋಪಂಬಿ, ನಮ್ಮ ಸೋಪಿಸಾಬ, ಹಾಗೂ ಭಾಷಮಿಯಾ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ವೈದ್ಯಾದೀಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬರುಗಿಯ ಯುನೆಟೇಡ ಆಸ್ಪತ್ರೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಇವರನ್ನು ಪರೀಕ್ಷಿಸಿದ್ದ ವೈದ್ಯಾದೀಕಾರಿಗಳು ಉಪಚಾರ ಕುರಿತು ಆಸ್ಪತ್ರೆ ಬರುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದು, ಅಂದಾಜು ಸಮಯ 08:00 ಎ.ಎಂ ಆಗಿದ್ದು ಇರುತ್ತದೆ.ಕಾರಣ ನನ್ನ ಗಂಡ ಸೋಪಿಸಾಬ ತಂದೆ ಖಾಸಿಂಸಾಬ ರಸ್ತಾಪುರ ವ|| 27 ವರ್ಷ ಉ|| ಗೌಂಡಿ, ಸಾ|| ಕನ್ಯಾಕೊಳ್ಳುರು, ಇತನು ತನ್ನ ಕುಡಿತ ಚಟದಿಂದ ಜಿಗುಪ್ಸೆಗೊಂಡು ಬೇಳೆಗಳಿಗೆ ಹೊಡಿಯುವ ಸಿಂಪರಣೆ ಮಾಡುವ ಕ್ರೀಮಿನಾಶಕ ಎಣ್ಣಿ, ಸೇವನೆ ಮಾಡಿ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದು, ಯಾರ ಮೇಲೆ ಯಾವೂದೆ ರೀತಿಯಾ ಸಂಶಯ ಇರುವದಿಲ್ಲಾ ಅಂತಾ ಹೇಳಿ ಬರೆಯಿಸಿದ ಅಜರ್ಿ ನಿಜವಿರುತ್ತದೆ ಮುಂದಿನ ಕ್ರಮ ಕೈಗೊಳ್ಳಲು ವಿನಂತಿ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 14/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪುರ ಪೊಲೀಸ್ ಠಾಣೆ :- 12/2021 ಕಲಂ. 107 ಸಿಆರ್ಪಿಸಿ: ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಸುರೇಶ ಎ.ಎಸ್.ಐ. ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 07/04/2021 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಬೀಟ್ ಸಿಬ್ಬಂಧಿಯಾದ ಶ್ರೀ ನಿಂಗಪ್ಪ ಹೆಚ್ಸಿ-118 ರವರನ್ನು ಸಂಗಡ ಕರೆದುಕೊಂಡು ಹಳ್ಳಿ ಬೇಟಿ ಕುರಿತು ಬೇವಿನಾಳ ಗ್ರಾಮಕ್ಕೆ 4 ಪಿ.ಎಂ ಕ್ಕೆ ಬೇಟಿ ನಿಡಿದಾಗ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಗ್ರಾಮದ ಹೂಗಾರ ಜನಾಂಗದವರಾದ ನಾಗಪ್ಪ ತಂದೆ ಶಿವಣ್ಣ ಹೂಗಾರ ಮತ್ತು ಅದೇ ಗ್ರಾಮದ ರೆಡ್ಡಿ ಜನಾಂಗದವರಾದ ಶಿವಣ್ಣಗೌಡ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಇವರ ನಡುವೆ ಮನೆಯ ಮುಂದಿನ ಜಾಗದ ಸಲುವಾಗಿ ಎರಡು ಪಾಟರ್ಿಗಳು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೋಡೇ ಬಿಡೋಣ ಅಂತಾ ಊರಲ್ಲಿ ಒಬ್ಬರಿಗೊಬ್ಬರು ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮರಳಿ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 12/2021 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪುರ ಪೊಲೀಸ್ ಠಾಣೆ :- 13/2021 ಕಲಂ. 107 ಸಿಆರ್ಪಿಸಿ: ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಸುರೇಶ ಎ.ಎಸ್.ಐ. ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 07/04/2021 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಬೀಟ್ ಸಿಬ್ಬಂಧಿಯಾದ ಶ್ರೀ ನಿಂಗಪ್ಪ ಹೆಚ್ಸಿ-118 ರವರನ್ನು ಸಂಗಡ ಕರೆದುಕೊಂಡು ಹಳ್ಳಿ ಬೇಟಿ ಕುರಿತು ಬೇವಿನಾಳ ಗ್ರಾಮಕ್ಕೆ 4 ಪಿ.ಎಂ ಕ್ಕೆ ಬೇಟಿ ನಿಡಿದಾಗ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಗ್ರಾಮದ ಹೂಗಾರ ಜನಾಂಗದವರಾದ ನಾಗಪ್ಪ ತಂದೆ ಶಿವಣ್ಣ ಹೂಗಾರ ಮತ್ತು ಅದೇ ಗ್ರಾಮದ ರೆಡ್ಡಿ ಜನಾಂಗದವರಾದ ಶಿವಣ್ಣಗೌಡ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಇವರ ನಡುವೆ ಮನೆಯ ಮುಂದಿನ ಜಾಗದ ಸಲುವಾಗಿ ಎರಡು ಪಾಟರ್ಿಗಳು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೋಡೇ ಬಿಡೋಣ ಅಂತಾ ಊರಲ್ಲಿ ಒಬ್ಬರಿಗೊಬ್ಬರು ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮರಳಿ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 13/2021 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ ಠಾಣೆ :- 07/2021 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ:07/04/2021 ರಂದು 10.00 ಎಎಂ ಕ್ಕೆ ನಾನು ಸೋಮಲಿಂಗ ಒಡೆಯರ ಪಿಎಸ್ಐ (ಕಾ.ಸು) ಗೋಗಿ ಠಾಣೆ ನಮ್ಮ ಜೀಪ ಚಾಲಕನಾದ ಹನುಮಂತ್ರಾಯ ಸಿಪಿಸಿ-331 ರವರೊಂದಿಗೆ ಪೆಟ್ರೋಲಿಂಗ ಕುರಿತು ಗೋಗಿಪೇಠ ಗ್ರಾಮಕ್ಕೆ ಬೇಟಿ ನೀಡಿದಾಗ ಆರೋಪಿ ಚಾಂದಪಾಷಾ ತಂದೆ ಅಲ್ಲಾವುದ್ದಿನ್ ತಾಷೆ ಸಾ|| ಗೋಗಿಪೇಠ ಇವರುಗಳ ವಿವಾದಿತ ಗೋಗಿ.ಕೆ ಹೊಲ ಸವರ್ೇ ನಂ: 170 ಕ್ಷೇತ್ರ 10-13 ಎಕರೆ ಹಾಘೂ ಸವರ್ೆ ನಂಬರ : 591 ಕ್ಷೇತ್ರ 5 ಎಕರೆ ಇದ್ದು ಉಳುಮೆ ಮಾಡುವ ವಿಷಯದಲ್ಲಿ ಚಾಂದಪಾಷಾ ತಂದೆ ಅಲ್ಲಾವುದ್ದಿನ್ ಮತ್ತು ಜಯಿರೋದ್ದಿನ್ ತಂದೆ ಖಮರುದ್ದಿನ್ ಮೇಸ್ತ್ರಿ ಸಾ|| ಗೋಗಿಪೇಠ ಇವರ ನಡುವೆ ವೈಷ್ಯಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಇಬ್ಬರ ನಡುವೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಜೈಯಿರೋದ್ದಿನ್ ತಂದೆ ಖಮರುದ್ದಿನ್ ಮೇಸ್ರ್ತಿ ತಾಷಾ ವಯಾ:34 ಜಾ: ಮುಸ್ಲಿಂ ಉ|| ವ್ಯಾಪಾರ ಸಾ: ಗೋಗಿಪೇಠ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ಇಂದು ದಿನಾಂಕ:07/04/2021 ರಂದು 11.00 ಎ.ಎಂಕ್ಕೆ ಠಾಣೆ ಪಿ.ಎ.ಆರ್ ನಂ: 07/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

ಭೀ.ಗುಡಿ ಪೊಲೀಸ ಠಾಣೆೆ:- 06/2021 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ 07/04/2021 ರಂದು ಮದ್ಯಾಹ್ನ ನಾನು ಸಂಗಡ ಭೀರಪ್ಪ ಸಿಹೆಚ್ಸಿ-148 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಹೊತಪೇಟ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಹೊತಪೇಟ ಗ್ರಾಮದ ನಿಂಗಪ್ಪ ತಂದೆ ನಾಗಪ್ಪ ಕಲ್ಲೂರ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ರಮೇಶ ತಂದೆ ಹೊನ್ನಪ್ಪ ಹೊಸಮನಿ ಸಂಗಡ 19 ಜನರು ಇವರ ನಡುವೆ ರಾಜಕೀಯ ಹಾಗೂ ದೇವರ ಚಾಜಾದ ವಿಷಯದಲ್ಲಿ ದಿ:05/04/2021 ರಂದು ಜಗಳವಾಗಿದ್ದರಿಂದ ಪ್ರತಿವಾದಿ ಜನರ ಮೇಲೆ ಠಾಣೆ ಗುನ್ನೆ ನಂ: 29/2021 ಕಲಂ 143,147,148,323,324,326,354,307,504,506 ಸಂಗಡ 149 ಐಪಿಸಿ ನೇದ್ದು ದಾಖಲಾಗಿದ್ದು ಇರುತ್ತದೆ. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 07/04/2021 ರಂದು 6.30 ಪಿ.ಎಮ್.ಕ್ಕೆ ಮರಳಿ ಠಾಣೆಗೆ ಬಂದು ಠಾಣೆಯ ಪಿ.ಎ.ಆರ್ ನಂ: 06/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ :- ಗುನ್ನೆ ನಂ, 45/2021 ಕಲಂ: 341, 323, 324, 354, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ 07.04.2021 ರಂದು 8.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರಿಮತಿ ಸವಿತಾ ಗಂಡ ರವಿಕುಮಾರ ಮಲ್ಕಾಪೂರ ವಯಾ|| 38 ಜಾ|| ಲಿಂಗಾಯತ ಉ|| ಹೊಲಮನೆಗೆಲಸ ಸಾ|| ಕೆಂಭಾವಿ ಇವರು ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಕೆಂಭಾವಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ ಹೊಲ ಸವರ್ೇ ನಂ 581 ರಲ್ಲಿ 11 ಎಕರೆ 20 ಗುಂಟೆ ಹೊಲವಿದ್ದು, ಸದರಿ ಹೊಲಕ್ಕೆ ಹೋಗುವ ದಾರಿಯ ವಿಷಯದಲ್ಲಿ ನಮಗೂ ಹಾಗೂ ನಮ್ಮ ಪಕ್ಕದ ಹೊಲದ ಪಾರ್ವತಿ ಗಂಡ ಚಂದ್ರಶೇಖರ ಆಲ್ದಾಳ ಇವರ ಮದ್ಯ ತಕರಾರು ನಡೆದು ಸದರಿಯವರು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ದಿನಾಂಕ 06/04/2021 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ನಾನು ಪಾರ್ವತಿ ಇವರ ಹೊಲದಲ್ಲಿ ಹಾದು ನಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಸದರಿ ಹೊಲದ 1) ಪಾರ್ವತಿ ಗಂಡ ಚಂದ್ರಶೇಖರ ಆಲ್ದಾಳ 2) ಆದಪ್ಪ ತಂದೆ ಅಮರಪ್ಪ ಆಲ್ದಾಳ 3) ಮಹಾಂತೇಶ ತಂದೆ ಆದಪ್ಪ ಆಲ್ದಾಳ 4) ಸಂಗಮೇಶ ತಂದೆ ಚಂದ್ರಶೇಖರ ಆಲ್ದಾಳ ಸಾ|| ಎಲ್ಲರೂ ಕೆಂಭಾವಿ ಇವರು ನನಗೆ ತಡೆದು ನಿಲ್ಲಿಸಿ ಏನಲೆ ರಂಡಿ ನಮ್ಮ ಹೊಲದಲ್ಲಿ ಏಕೆ ಹಾದು ಹೋಗುತ್ತೀ ಅಂತ ಎಲ್ಲರು ಬೈಯುತ್ತಿದ್ದಾಗ ನಾನು ನಮ್ಮ ಹೊಲಕ್ಕೆ ಹೋಗಲು ದಾರಿ ಎಲ್ಲಿದೆ ಇದೇ ದಾರಿ ಮುಖಾಂತರ ಹಾದು ಹೋಗಬೇಕು ಅಂತ ಅಂದಾಗ ಸೂಳೆ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಪಾರ್ವತಿ ಇವಳು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಎಡಗೈ ಮೊಳಕೈ ಕೆಳಗಡೆ ಹೊಡೆದು ರಕ್ತಗಾಯ ಪಡಿಸಿದಳು, ಮಹಾಂತೇಶ ಈತನು ಸಹ ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯಪಡಿಸಿದನು. ನಂತರ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಆದಪ್ಪ ಆಲ್ದಾಳ ಈತನು ಈ ಸೂಳೆಯ ಸೊಕ್ಕು ಬಾಳ ಆಗಿದೆ ಅಂತ ಬೈಯುತ್ತಾ ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾಗಪ್ಪ ತಂದೆ ಬಸಪ್ಪ ಕೊಡೆಕಲ್, ಹಣಮಂತ ತಂದೆ ಮಾರೆಪ್ಪ ಮೋಪಗಾರ ಹಾಗೂ ನಮ್ಮ ತಂದೆಯಾದ ಸದಾಶಿವಪ್ಪ ತಂದೆ ಸೂಗಪ್ಪ ಅಂಗಡಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮ್ಮ ಹೊಲದಲ್ಲಿ ಹಾದು ಹೋದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ನನ್ನ ಗಂಡನಾದ ರವಿಕುಮಾರ ಇವರಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದ್ದು, ಅವರು ನಮ್ಮ ಮನೆಗೆ ಬಂದಾಗ ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ನಂತರ ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಉಪಚಾರ ಪಡೆದು ನಂತರ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಸದರ ಮೇಲ್ಕಾಣಿಸಿದ 04 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 45/2021 ಕಲಂ 341, 323, 324, 354, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ:- ಗುನ್ನೆ ನಂ, 46/2021 ಕಲಂ:448, 323, 324, 354, 504, 506, ಸಂಗಡ,34 ಐಪಿಸಿ: ಇಂದು ದಿನಾಂಕ 07.04.2021 ರಂದು 9.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರಿಮತಿ ಗುರುಬಾಯಿ ಗಂಡ ಬಸಪ್ಪ ಆಲ್ದಾಳ ವಯಾ|| 60 ಜಾ|| ಗಾಣಿಗ ಉ|| ಹೊಲಮನೆಗೆಲಸ ಸಾ|| ಕೆಂಭಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶ ಏನಂದರೆ, ಕೆಂಭಾವಿ ಸೀಮಾಂತರದಲ್ಲಿ ನನ್ನ ಗಂಡನ ಹೆಸರಿನಲ್ಲಿ ಹೊಲ ಸವರ್ೇ ನಂ 580 ರಲ್ಲಿ 7 ಎಕರೆ 5 ಗುಂಟೆ ಹೊಲವಿರುತ್ತದೆ. ನಮ್ಮ ಹೊಲದಲ್ಲಿ ಯಾವುದೇ ದಾರಿ ಇಲ್ಲದಿದ್ದರೂ ಕೂಡ ರವಿಕುಮಾರ ತಂದೆ ಗುರುಪಾದಪ್ಪ ಮಲ್ಕಾಪುರ ಇವರು ತಮ್ಮ ಹೊಲ ಸವರ್ೇ ನಂ 581 ಕ್ಕೆ ನಮ್ಮ ಹೊಲದಲ್ಲಿಯೇ ಹಾದು ಹೋಗುತ್ತಿದ್ದುದರಿಂದ ನಾವು ನಿಮ್ಮ ಹೊಲಕ್ಕೆ ಹೋಗಲು ದಾರಿ ನಮ್ಮ ಹೊಲದಲ್ಲಿ ಇರುವದಿಲ್ಲ ಅಂತ ಅಂದಿದ್ದಕ್ಕೆ ರವಿಕುಮಾರ ಈತನು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ದಿನಾಂಕ 06/04/2021 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿದ್ದಾಗ ನಮ್ಮ ಪಕ್ಕದ ಹೊಲದ 1) ರವಿಕುಮಾರ ತಂದೆ ಗುರುಪಾದಪ್ಪ ಮಲ್ಕಾಪುರ 2) ಸವಿತಾ ಗಂಡ ರವಿಕುಮಾರ ಮಲ್ಕಾಪುರ 3) ರಾಜು ತಂದೆ ತೋಟಪ್ಪ ತೋಟದ 4) ಶ್ರೀಶೈಲ ತಂದೆ ಶಂಕ್ರೆಪ್ಪ ಮಲ್ಕಾಪುರ ಸಾ|| ಎಲ್ಲರೂ ಕೆಂಭಾವಿ ಇವರು ನಮ್ಮ ಹೊಲದಲ್ಲಿ ಬಂದವರೆ ಏನಲೆ ರಂಡಿ ನಮ್ಮ ಹೊಲಕ್ಕೆ ಹೋಗಲು ಏಕೆ ದಾರಿಕೊಡುವದಿಲ್ಲ ನಾವು ಇಲ್ಲಿಯೇ ಹಾದು ಹೋಗುತ್ತೇವೆ ನೀವೇನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿರಿ ಅಂತ ಅನ್ನುತ್ತಿದ್ದಾಗ ನಾನು ಇಲ್ಲಿ ದಾರಿ ಇರುವದಿಲ್ಲ ಹಾದ ಹೋಗಬೇಡರಿ ಅಂತ ಅಂದಾಗ ನಾಲ್ಕೂ ಜನರು ಈ ಸೂಳೆಯದು ಸೊಕ್ಕು ಬಾಳ ಆಗಿದೆ ಅಂತ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಸವಿತಾ ಇವಳು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಟೊಂಕಕ್ಕೆ ಹೊಡೆದು ಒಳಪೆಟ್ಟು ಪಡಿಸಿದಳು, ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ರವಿಕುಮಾರ ಈತನು ಈ ಸೂಳೆಯ ಸೊಕ್ಕು ಬಾಳ ಆಗಿದೆ ಅಂತ ಬೈಯುತ್ತಾ ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಯಮನಪ್ಪ ತಂದೆ ಗುತ್ತಪ್ಪ ಆಲ್ದಾಳ, ಸಿದ್ದಪ್ಪ ತಂದೆ ಅಮರಪ್ಪ ಆಲ್ದಾಳ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮಗೆ ಹಾದುಹೋಗಲು ನಿಮ್ಮ ಹೊಲದಲ್ಲಿ ದಾರಿ ಕೊಡದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು, ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 46/2021 ಕಲಂ 448, 323, 324, 354, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂಬರ 75/2021 ಕಲಂ 78[3] ಕೆ.ಪಿ ಆಕ್ಟ: ಇಂದು ದಿನಾಂಕ 07/04/2021 ರಂದು 11-10 ಗಂಟೆಗೆ ಸ|| ತ|| ಪಿಯರ್ಾದಿ ಚೆನ್ನಯ್ಯ ಎಸ್. ಹಿರೇಮಠ ಪಿ.ಐ. ಸಾಹೇಬರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಪರವಾನಗಿ ಪತ್ರ ಹಾಜರ ಪಡಿಸಿ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 07/04/2021 ರಂದು 10-30 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಗುಂಡಗುತರ್ಿ ಗ್ರಾಮದ ಗುಡಿಕಲ್ ಮಠದ ಮುಂದೆ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 20/2021 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ಅಂತ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 75/2021 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ನಂತರ ದಾಳಿ ಮಾಡಿ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1060=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಬಂದು ಮುಂದಿನ ಕ್ರಮ ಕುರಿತು ಹಾಜರ ಪಡಿಸಿದ್ದು ಇರುತ್ತದೆ,.
ಶಹಾಪೂರ ಪೊಲೀಸ್ ಠಾಣೆ :- 76/2021 ಕಲಂ 498(ಎ) 302. 504. ಸಂ 34 ಐ.ಪಿ.ಸಿ: ಇಂದು ದಿನಾಂಕ||07/04/2021 ರಂದು ಮಧ್ಯಾಹ್ನ 15.00 ಗಂಟೆಗೆ ಕಲಬುರಗಿ ಸರಕಾರಿ ಆಸ್ಪತ್ರೆಯಿಂದ ಡೆತ್ ಎಂ.ಎಲ್.ಸಿ ಇದೆ ಅಂತಾ ದೂರವಾಣಿ ಮೂಲಕ ಮಾಹಿತಿ ತಿಳಿಸಿದ ಮೇರೆಗೆ ಠಾಣೆ ಶ್ರೀ ಶಾಮಸುಂದರ ಪಿ.ಎಸ್.ಐ(ಅ.ವಿ) ಶಹಾಪುರ ಠಾಣೆ ರವರಿಗೆ ನೇಮಕ ಮಾಡಿ ಕಳುಹಿಸಿದ ಮೇರೆಗೆ ಸದರಿಯವರು ಕಲಬುಗರ್ಿಗೆ ಹೋಗಿ ಡೆತ್ ಎಂ.ಎಲ್.ಸಿ ಮತ್ತು ಪಿಯರ್ಾದಿ ಶ್ರೀಮತಿ ಮರೆಮ್ಮ ಗಂ/ ಸಿದ್ದಪ್ಪ ಕೋರಬಾರ ವ|| 65 ಜಾ|| ಪ.ಜಾತಿ(ಹೊಲೆಯ) ಉ|| ಕೂಲಿ ಕೆಲಸ ಸಾ|| ರೋಟ್ನಡಿಗಿ ತಾ|| ವಡಗೇರಾ ಜಿ|| ಯಾದಗಿರಿ ರವರು ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ್ದು, ಸದರಿ ದೂರನ್ನು ರಾತ್ರಿ 21.00 ಗಂಟೆಗೆ ಶ್ರೀ ಶಾಮಸುಂದರ ಪಿ.ಎಸ್.ಐ(ಅ.ವಿ) ರವರು ಠಾಣೆಗೆ ತಂದು ಹಾಜರಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ. ನಾನು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತೆನೆ ನನಗೆ ಮೂರು ಜನರು ಗಂಡು ಮಕ್ಕಳು, ಮತ್ತು ಮೂರು ಜನರು ಹೆಣ್ಣು ಮಕ್ಕಳು ಇರುತಾರೆ, ನಾಲ್ಕನೇಯ ಮಗಳಾದ ಬಸಮ್ಮ ವ|| 32 ವರ್ಷ ಸುಮಾರು 15 ವರ್ಷಗಳ ಹಿಂದೆ ಮುನುಮುಟಿಗಿ ಗ್ರಾಮದ ಸಿದ್ದಪ್ಪ ತಂದೆ ಭೀಮಪ್ಪ ಕೊಂಕಲ್ ಈತನೋದಿಗೆ ಮದುವೆ ಮಾಡಿ ಕೊಟ್ಟಿದ್ದೆನೆ ಆಕೆಗೆ ನಾಲ್ಕೂ ಜನ ಹೆಣ್ಣು ಮಕ್ಕಳಿರುತ್ತಾರೆ.ಮದುವೆಯ ಸಂದರ್ಬದಲ್ಲಿ ನನ್ನ ಅಳಿಯನು ಬೇಡಿದಂತೆ ಒಂದು ತೋಲೆ ಬಂಗಾರ ಮತ್ತು ಐವತ್ತು ಸಾವಿರ ರೂಪಾಯಿ ವರದಕ್ಷಿಣೆ ರೂಪದಲ್ಲಿ ಕೊಟ್ಟಿರುತ್ತೆವೆ, ಮತ್ತು ಮದುವೆಯಾದ ನಂತರ 2-3 ವರ್ಷಗಳ ವರೆಗೆ ನನ್ನ ಅಳಿಯ ಸಿದ್ದಪ್ಪನು ನನ್ನ ಮಗಳೊಂದಿಗೆ ಚೆನ್ನಾಗಿ ಸಂಸಾರ ಮಾಡಿರುತ್ತಾನೆ. ನಂತರದ ದಿನಗಳಲ್ಲಿ ನನ್ನ ಮಗಳಿಗೆ ಅಡುಗೆ ಮಾಡಲು ಬರುವದಿಲ್ಲಾ ನೋಡಲಿಕ್ಕೆ ಚೆನ್ನಾಗಿ ಇಲ್ಲವೆಂದು ನನ್ನ ಮಗಳಿಗೆ ಬೈಯುತ್ತಿದ್ದನು. ಮತ್ತು ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೆನೆಂದು ಹೇಳಿತ್ತಿದ್ದನು. ಅದರಂತೆ ಈಗ ಸುಮಾರು 3-4 ವರ್ಷಗಳಿಂದ ನನ್ನ ಅಳಿಯ ಸಿದ್ದಪ್ಪನು ನೀಲಮ್ಮ ಎಂಬುವಳೊಂದಿಗೆ ಎರಡನೇಯ ಮದುವೆ ಮಾಡಿಕೊಂಡಿರುತ್ತಾನೆ. ತದನಂತರ ನನ್ನ ಮಗಳಿಗೆ ಕುಡಿದು ಬಂದು ಹೊಡೆಯುವದು ಮತ್ತು ಬಡೆಯುವದು ಹೆಚ್ಚಿಗೆ ಮಾಡುತ್ತಿದ್ದು, ಈ ಎಲ್ಲಾ ವಿಷಯಗಳು ನನ್ನ ಮಗಳು ಆಗಾಗ ನಮ್ಮೂರಿಗೆ ಬಂದಾಗ ತಿಳಿಸುತ್ತಿದ್ದಳು. ನಾವು ಮತ್ತು ನಮ್ಮೂರಿನ ಹಿರಿಯರಾದ 1] ಪರಪ್ಪ ತಂದೆ ಹಣಮಂತ 2] ಬಸಪ್ಪ ತುರಿಯಾಳ ಸೇರಿ ಎಲ್ಲರು ನನ್ನ ಅಳಿಯನಿಗೆ ಬುದ್ದಿವಾದ ಹೇಳಿದರು ಸಹ ಅವನು ಮತ್ತು ಅವನ ಎರಡನೇಯ ಹೆಂಡತಿಯಾದ ನೀಲಮ್ಮ ಸೇರಿ ನನ್ನ ಮಗಳಿಗೆ ಹೊಡೆಯುವದು ಬಡೆಯುವದು ಮನೆಯಿಂದ ಹೊರಗೆ ಹಾಕುವದು ಮಾಡುತ್ತಿದ್ದನು. ಈಗ ಒಂದು ವಾರದ ಹಿಂದೆ ನನ್ನ ಅಳಿಯ ಮತ್ತು ಅಳಿಯನ ಎರಡನೆ ಹೆಂಡತಿಯು ಸೇರಿ ನನ್ನ ಮಗಳು ಜೀವಂತ ಇದ್ದರೆ ನಮಗೆ ಸುಖವಾಗಿ ಸಂಸಾರ ಮಾಡಲು ಬಿಡುವದಿಲ್ಲಾ ವೆಂದು ಆಲೋಚಿಸಿ ದಿನಾಂಕ 05/04/2021 ರಂದು ರಾತ್ರಿ 9-00 ರಿಂದ 10-00 ಗಂಟೆ ಸುಮಾರಿಗೆ ನನ್ನ ಮಗಳು ಮುನುಮುಟಿಗಿ ಗ್ರಾಮದ ತನ್ನ ಮನೆಯಲ್ಲಿ ಇದ್ದಾಗ ಸಿದ್ದಪ್ಪ ಮತ್ತು ಅವನ ಎರಡನೇಯ ಹೆಂಡತಿ ನೀಲಮ್ಮ ಇಬ್ಬರು ಕೂಡಿ ನನ್ನ ಮಗಳಿಗೆ ಕೊಲೆಮಾಡುವ ಉದ್ದೇಶದಿಂದ ಬಸಮ್ಮಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ, ನೀಲಮ್ಮಳು ಕೈಯಿಂದ ನನ್ನ ಮಗಳ ಬೆನ್ನಿಗೆ ಗುದ್ದುತ್ತಿದ್ದಾಗ ಸಿದ್ದಪ್ಪನು ಅಲ್ಲಿಯೇ ಇದ್ದ ಒಂದು ಕಟ್ಟಿಗೆಯಿಂದ ನನ್ನ ಮಗಳ ತಲೆಗೆ ಜೋರಾಗಿ ಹೊಡೆದನು. ಅದರಿಂದ ನನ್ನ ಮಗಳು ಸ್ಥಳದಲ್ಲಿ ಕುಸಿದು ಭಾರಿ ಗಾಯದಿಂದ ನರಳಾಡುತ್ತಿದ್ದದ್ದನ್ನು ಅಲ್ಲೆಯೇ ಇದ್ದ ನನ್ನ ಅಳಿಯನ ತಮ್ಮಂದಿರಾದ ದೇವಪ್ಪ ಮತ್ತು ಸಣ್ಣ ದೇವಪ್ಪ ಇಬ್ಬರು ಕೂಡಿ ನನ್ನ ಮಗಳನ್ನು ಸರಕಾರಿ ಆಸ್ಪತ್ರೆ ಶಹಾಪೂರಿಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿ ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಜೀಮ್ಸ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ತದನಂತರ ನನ್ನ ಅಳಿಯನ ತಮ್ಮನಾದ ದೇವಪ್ಪನು ದಿನಾಂಕ 06/04/2021 ರಂದು ಬೆಳಿಗ್ಗೆ 9-00 ಗಂಟೆಗೆ ನಮಗೆ ಪೋನ ಮಾಡಿ ಘಟನೇಯ ಬಗ್ಗೆ ವಿವರವಾಗಿ ತಿಳಿಸಿರುತ್ತಾನೆ. ಮತ್ತು ನಾನು ನನ್ನ ಮಗ ಪೀರಪ್ಪ ಇಬ್ಬರು ಕೂಡಿಕೊಂಡು ಕಲಬುರಗಿ ಜೀಮ್ಸ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಇದ್ದ ನನ್ನ ಮಗಳನ್ನು ನೋಡಲಾಗಿ ನನ್ನ ಮಗಳು ಭಾರಿ ಗಾಯಗಳಿಂದ ನರಳುತ್ತ ಕೋಮಾ ಸ್ಥಿತಿಯಲ್ಲಿದ್ದಳು ಅಲ್ಲಿಯೇ ಇದ್ದ ನನ್ನ ಅಳಿಯನ ತಮ್ಮನಿಗೆ ವಿಚಾರಿಸಿದಾಗ ನನ್ನ ಅಳಿಯ ಕಟ್ಟಿಗೆಯಿಂದ ಹೊಡೆದ ಬಗ್ಗೆ ವಿವರವಾಗಿ ಹೇಳಿದನು. ಇಂದು ದಿನಾಂಕ 07/04/2021 ರಂದು ಬೆಳಿಗ್ಗೆ ಸುಮಾರು 3-05 ಗಂಟೆ ಸುಮಾರಿಗೆ ನನ್ನ ಮಗಳು ಸತ್ತ ಬಗ್ಗೆ ತಿಳಿಸಿರುತ್ತಾರೆ. ಕಾರಣ ಮೇಲಿನ ಘಟನೆಗೆ ಕಾರಣರಾದ ಅಳಿಯ ಸಿದ್ದಪ್ಪ ತಂದೆ ಭೀಮಪ್ಪ ಕೊಂಕಲ್ ಮತ್ತು ಅವನ ಎರಡನೆಯ ಹೆಂಡತಿ ನೀಲಮ್ಮ ಗಂಡ ಸಿದ್ದಪ್ಪ ಕೊಂಕಲ್ ಸಾ|| ಇಬ್ಬರು ಮುನುಟಿಗಿ ಗ್ರಾಮ ಇವರ ವಿರುದ್ದ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡಬೆಕು ಅಂತ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 76/2021 ಕಲಂ 498(ಎ), 302, 504, ಸಂ, 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:- ಯು.ಡಿ.ಆರ್ ನಂ.04/2021 ಕಲಂ: 174 ಸಿ.ಆರ್.ಪಿ.ಸಿ: ಸುಮಾರು 8 ವರ್ಷಗಳ ಹಿಂದೆ ಮೃತ ವೆಂಕಟಮ್ಮ ಎಂಬಾಕೆಯನ್ನು ಮಿನಾಸಪೂರ ಗ್ರಾಮದ ಲಿಂಗಪ್ಪ ಎಂಬಾತನೊಂದಿಗೆ ಮದುವೆಯಾಗಿದ್ದು ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಮದುವೆಯಾದ ಕೆಲ ವರ್ಷಗಳ ವರೆಗೆ ಇಬ್ಬರು ಅನೂನ್ಯವಾಗಿದ್ದು ನಂತರ ಲಿಂಗಪ್ಪನು ಕುಡಿತದ ಚಟಕ್ಕೆ ಬಿದಿದ್ದರಿಂದ ಬೇಸರಗೊಂಡ ವೆಂಕಟಮ್ಮ ಮಾನಸೀಕವಾಗಿ ನೊಂದು ದಿನಾಂಕ 05.04.2021 ರಂದು ಬೆಳಿಗ್ಗೆ 9:30 ಗಂಟೆಗೆ ಯಾವುದೋ ಕ್ರಿಮಿನಾಶಕ ಔಷದಿಯನ್ನು ಸೇವಿಸಿದ್ದು ನಂತರ ಚಿಕಿತ್ಸೆ ಕುರಿತು ನಾರಾಯಣಪೇಠ್ಗೆ, ಮಹಿಬೂಬನಗರಕ್ಕೆ ಹಾಗೂ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಹೈದ್ರಾಬಾದನ ಗಾಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ನಿನ್ನೆ ದಿನಾಂಕ 06.04.2021 ರಂದು ಸಂಜೆ 5:38 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿಯು ಇಂದು ದಿನಾಂಕ 07.04.2021 ರಂದು ಬೆಳಿಗ್ಗೆ 6:00 ಗಂಟೆಗೆ ಖುದ್ದಾಗಿ ಠಾಣೆಗೆ ಬಂದು ದೂರು ನೀಡಿದ್ದು ಆ ಬಗ್ಗೆ ಠಾಣೆ ಯು.ಡಿ.ಆರ್ ನಂಬರ 04/2021 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 09-04-2021 11:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080