Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/03/2021

ಸೈದಾಪೂರ ಪೊಲೀಸ್ ಠಾಣೆ:- 39/2020 ಕಲಂ. 279, 337, 338 ಐಪಿಸಿ. ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ. 08.03.2021 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಶ್ರೀ ಹಣಮಂತ್ರಾಯ ತಂದೆ ತಿಪ್ಪಣ್ಣ ಕೋರಿ ಸಾ|| ಬದ್ದೇಪಲ್ಲಿ ತಾ|| ಗುರುಮಠಕಲ ಜಿ|| ಯಾದಗಿರಿ ಇವನು ಠಾಣೆಗೆ ಬಂದು ನೀಡಿದ ಫಿಯರ್ಾದಿಯೇನೆಂದರೆ, ಈಗ 3 ದಿನದ ಹಿಂದೆ ದಿನಾಂಕ: 06.03.2021 ರಂದು ಫಿಯರ್ಾದಿ ತಂದೆ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬರುವದಾಗಿ ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ ಇಂದು ರಾತ್ರಿ ಕಡೇಚೂರ ಕ್ರಾಸ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ವಾಹನ ಡಿಕ್ಕಿಪಡಿಸಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಮೈಯೆಲ್ಲ ರಕ್ತವಾಗಿದ್ದು ಯಾರೋ 108 ಅಂಬುಲೆನ್ಸ್ ತರಿಸಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾರೆ ಅಂತ ತಿಳಿಸಿದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರ ಪಡೆಯುತ್ತಿದ್ದ ತಂದೆಯನ್ನು ನೋಡಲಾಗಿ ಎರಡೂ ಕಾಲುಗಳಿಗೆ ಪಾದಕ್ಕೆ, ಹಿಮ್ಮಡಿಗೆ, ಮತ್ತು ಬೆರಳಿನ ಮೇಲ್ಬಾಗದಲ್ಲಿ ಭಾರಿ ರಕ್ತಗಾಯವಾಗಿದ್ದು, ಹಣೆಗೆ ಮತ್ತು ಮುಖಕ್ಕೆ ರಕ್ತಗಾಯವಾಗಿರುವದು ಕಂಡುಬಂದಿರುತ್ತದೆ. ಅಪಘಾತದಲ್ಲಿ ಆದ ಗಾಯಗಳಿಂದಾಗಿ ನನ್ನ ತಂದೆ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಮಾತನಾಡಿಸಿದರೆ ಮಾತನಾಡಲಿಲ್ಲ. ನನ್ನ ತಂದೆ ಶೆಟ್ಟಿಹಳ್ಳಿಯಿಂದ ನಡೆದುಕೊಂಡು ರಾತ್ರಿ ವೇಳೆಯಲ್ಲಿ ಕಡೇಚೂರ ಮಾರ್ಗವಾಗಿ ಬದ್ದೇಪಲ್ಲಿ ಗ್ರಾಮಕ್ಕೆ ಬರುತ್ತಿದ್ದಾಗ ರಾತ್ರಿ ವೇಳೆಯಲ್ಲಿ ಯಾವುದೋ ವಾಹನ ಚಾಲಕನು ತನ್ನ ವಾಹವನದಿಂದ ಕಡೆಚೂರ ಕ್ರಾಸ ಹತ್ತಿರ ಡಿಕ್ಕಿಪಡಿಸಿ ವಾಹನ ನಿಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ. . ಸದರಿ ವಾಹನ ಪತ್ತೆ ಮಾಡಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಾರಾಂಶ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ.:- 32/2020 ಕಲಂ: 78(3) ಕೆ.ಪಿ.ಆಕ್ಟ್ : ಇಂದು ದಿನಾಂಕ: 08/03/2021 ರಂದು 6-30 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೆನಂದರೆ ಇಂದು ದಿನಾಂಕ: 08/03/2021 ರಂದು ಸಮಯ ಮಧ್ಯಾಹ್ನ 2:00 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀವೇಣುಗೋಪಾಲ ಪಿಸಿ 36 ಮತ್ತು ಶ್ರೀ ಮಹೇಂದ್ರ ಪಿಸಿ 254 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಶಿವಪೂರ ಗ್ರಾಮದ ಮರಗಮ್ಮ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 2-30 ಪಿಎಮ್ಕ್ಕೆ ಹೊರಟು ಸಮಯ 3-00 ಪಿಎಮ್ ಸುಮಾರಿಗೆ ಶಿವಪೂರು ಗ್ರಾಮ ತಲುಪಿ ಶಿವಪೂರು ಗ್ರಾಮದ ನರಸಪ್ಪನ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಶಿವಪೂರು ಗ್ರಾಮದ ಮರಗಮ್ಮ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 3-15 ಪಿಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ದೇವಪ್ಪ ತಂದೆ ಮಹಾದೇವಪ್ಪ ಮಹಾಂತಪ್ಪನೋರ, ವ:38, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಶಿವಪೂರು ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 1800/- ರೂ ಮತ್ತು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 1800/- ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು 6-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 32/2021 ಕಲಂ 78 (3) ಕೆ.ಪಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:- 48/2021 ಕಲಂ 279, 338 ಐ.ಪಿ.ಸಿ ಮತ್ತು ಕಲಂ. 187 ಐ.ಎಮ್.ವ್ಹಿ. ಆಕ್ಟ : ಇಂದು ದಿನಾಂಕ 08-03-2021 ರಂದು 5:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಬಸನಗೌಡ ಮಾಲಿ ಪಾಟೀಲ ವಯ: 40 ವರ್ಷ ಜಾ: ಬೇಡರ ಉ: ಮನೆಗೆಲಸ ಸಾ: ಗೌಡಗೇರಾ ತಾ: ಸುರಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನಾನು, ನನ್ನ ಮಗಳು ಶ್ರೀದೇವಿ ತಂದೆ ಬಸನಗೌಡ ಮತ್ತು ನಮ್ಮ ತಂಗಿಯಾದ ಲಕ್ಷ್ಮೀ ಗಂಡ ಭೀಮಣ್ಣ ಕಿರದಳ್ಳಿ ಸಾ: ಗೌಡಗೇರಾ ತಾ: ಶಹಾಪುರ ಮೂರು ಜನರು ಕೂಡಿ ದಿನಾಂಕ: 04-03-2021 ರಂದು ನಮ್ಮೂರಿನಿಂದ ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಬಾಷಾ ದಗರ್ಾಕ್ಕೆ ದೇವರ ದರ್ಶನಕ್ಕೆ ಹೋಗಲು ನಮ್ಮೂರಿನ ಮಡಿವಾಳಪ್ಪ ತಂದೆ ಗಿರಿಮಲ್ಲಪ್ಪಗೌಡ ಗೌಡಗೇರಾ ಈತನ ಆಟೋ ನಂ. ಕೆ.ಎ.33-ಎ-3935 ನೇದ್ದರಲ್ಲಿ ಕುಳಿತುಕೊಂಡು ಹೊರಟೆವು. ಆಟೋವನ್ನು ಮಡಿವಾಳಪ್ಪನು ಚಲಾಯಿಸುತ್ತಿದ್ದನು. ಹೀಗೆ ಆಟೋದಲ್ಲಿ ಹೊರಟು ಬೀಮರಾಯನ ಗುಡಿ ದಾಟಿ ಶಹಾಪುರ ನಗರದ ಕೆ.ಇ.ಬಿ ಹತ್ತಿರ ಬ್ರಿಡ್ಜ ದಾಟಿ ರಸ್ತೆಯ ಪಕ್ಕದಲ್ಲಿ ದಿಧಾನವಾಗಿ ಹೊರಟಾಗ 1:00 ಪಿ.ಎಮ್.ಸುಮಾರಿಗೆ ನಮ್ಮ ಎದುರಿನಿಂದ ಒಂದು ಆಟೋ ನಂ, ಕೆ.ಎ.33-ಎ-8020 ನೇದ್ದರ ಚಾಲಕನು ತನ್ನ ಆಟೋವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಆಟೋಕ್ಕೆ ಡಿಕ್ಕಿ ಪಡಿಸಿದನು. ಅದರಿಂದ ಆಟೋದಲ್ಲಿ ಕುಳಿತು ಹೊರಟ ನನ್ನ ಮಗಳು ಶ್ರೀದೇವಿ ಇವಳು ತಕ್ಷಣ ಕೆಳಗೆ ಬಿದ್ದಳು ಅದರಿಂದ ಅವಳಿಗೆ ಎರಡೂ ಮೊಳಕಾಲುಗಳಿಗೆ ಭಾರಿ ರಕ್ತಗಾಯಗಳಾಗಿದ್ದು ಇದೆ. ಸೋಂಟಕ್ಕೆ ಒಳಪೆಟ್ಟಾಗಿದೆ ಬಲಗಾಲ ತೊಡೆಗೆ ಭಾರೀ ರಕ್ತಗಾಯವಾಗಿದೆ. ನನಗೆ ಮತ್ತು ನಮ್ಮ ತಂಗಿ ಲಕ್ಷ್ಮೀ ಗಂಡ ಭೀಮಣ್ಣ ಇಬ್ಬರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಮಗೆ ಡಿಕ್ಕಿಪಡಸಿದ ಆಟೋ ಚಾಲಕನು ಡಿಕ್ಕಿ ಪಡಿಸಿ ಆಟೋವನ್ನು ನಿಲ್ಲಿಸದೇ ಸಮೇತಾ ಓಡಿ ಹೋದನು. ಅವನ ಹೆಸರು ಮರೆಪ್ಪ ತಂದೆ ಮಾನಪ್ಪ ಸಾ: ಹೈಯಾಳ ಬಿ ಅಂತಾ ನಂತರ ನಮಗೆ ಗೊತ್ತಾಗಿದೆ. ನಾನು ಗಾಬರಿಯಾಗಿ ನನ್ನ ಮಗಳನ್ನು ಅಲ್ಲಿಂದ ಯಾವುದೋ ಒಂದು ಖಾಸಗಿ ವಾಹನದಲ್ಲಿ ಶಹಾಪುರದ ಸರಕಾರಿ ಆಸ್ಪತ್ರಗೆ ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅಲ್ಲಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನಾನು ಒಬ್ಬಂಟಿಯಾಗಿದ್ದರಿಂದ ಇಲ್ಲಿಯ ವರೆಗೆ ನನ್ನ ಮಗಳೊಡನೆ ಆಸ್ಪತ್ರೆಯಲ್ಲಿ ಇದ್ದು ಉಪಚಾರಕ್ಕೆ ಸಹಾಯ ಮಾಡಿ ಇಂದು ದಿನಾಂಕ: 08-03-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ಮಗಳು ಇನ್ನೂ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಳೆ.ಆದ್ದರಿಂದ ದಿನಾಂಕ: 04-03-2021 ರಂದು 1:00 ಪಿ.ಎಮ್. ಸುಮಾರಿಗೆ ಶಹಾಪುರ ನಗರದ ಕೆ.ಇ.ಬಿ ಬ್ರಿಡ್ಜ ಹತ್ತಿರ ರಸ್ತೆಯ ಪಕ್ಕದಲ್ಲಿ ನಿಧಾನವಾಗಿ ಹೊರಟ ನಮ್ಮ ಆಟೋಕ್ಕೆ ಡಿಕ್ಕಿಪಡಿಸಿ ನನ್ನ ಮಗಳಿಗೆ ಭಾರೀಗಾಯಪಡಿಸಿ ಆಟೋ ಸಮೇತ ಓಡಿ ಹೋದ ಆಟೋ ನಂಬರ ಕೆ.ಎ.33-ಎ-8020 ನೆದ್ದರ ಚಾಲಕ ಮರೆಪ್ಪ ತಂದೆ ಮಾನಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.48/2021 ಕಲಂ. 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಯಾದಗಿರಿ:- 49/2021. ಕಲಂ. 279.337.ಐ.ಪಿ.ಸಿ. : ಇಂದು ದಿನಾಂಕ: 08/03/2021 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀ ಶಾಂತಪ್ಪ ತಂದೆ ಭೀಮಣ್ಣ ಬಾಕಲಿ ವ|| 50 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಹಳೇಬಸ್ಸ ನಿಲ್ದಾಣದ ಹತ್ತಿರ ಹುಣಸಗಿ ತಾ|| ಹುಣಸಗಿ ಜಿ|| ಯಾದಗಿರಿ, ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 7/3/2021 ರಂದು ನನ್ನ ವೈಯಕ್ತಿಕ ಕೆಲಸವಿದ್ದ ನಿಮಿತ್ಯವಾಗಿ ನಾನು ಮತ್ತು ನಮ್ಮ ಗ್ರಾಮದ ಮಹೇಶ ತಂದೆ ಭೀಮಣ್ಣ ದೋರಿ ಇಬ್ಬರು ಕೂಡಿಕೊಂಡು ನನ್ನ ಕಾರ ನಂ ಕೆಎ-33ಎಂ-7017 ನೇದ್ದರಲ್ಲಿ ವಾಡಿಗೆ ಹೋಗಿದ್ದೇವು.ಮುಗಿಸಿಕೊಂಡು ಸಾಯಂಕಾಲ ಸುಮಾರು 4-00 ಗಂಟೆಗೆ ವಾಡಿ ಬಿಟ್ಟು ಹುಣಸಿಗಿಗೆ ಬರುತ್ತಿರುವಾಗ ನಾನು ನನ್ನ ಕಾರು ಚಲಾಯಿಸುತ್ತಿದ್ದೇನು, ನನ್ನ ಪಕ್ಕದ ಸಿಟಿನಲ್ಲಿ ಮಹೇಶನು ಕುಳಿತುಕೊಂಡಿದ್ದನು. ಶಿರವಾಳ-ಶಹಾಪೂರ ಮುಖ್ಯ ರಸ್ತೆಯ ಮೇಲೆ ಮೇನ್ ಕೇನಾಲ ಮುಂದೆ ಇರುವಾಗ ಚಿಂತಮ್ಮಗೌಡ್ತಿ ಕಾಲೇಜ ಮುಂದೆ ನಾನು ನನ್ನ ಕಾರನ್ನು ಚಾಲಾಯಿಸಿಕೊಂಡು ಬರುವಾಗ, ಶಹಾಪೂರದ ಕಡೆಯಿಂದ ಅಂದಾಜು 5-20 ಗಂಟೆಗೆ ಒಂದು ದ್ವಿಚಕ್ರವಾಹನ ಸವಾರ ಅತಿ ವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ದೂರದಿಂದ ಅದನ್ನು ಗಮನಿಸಿದ ನಾನು ನನ್ನ ಕಾರನ್ನು ನಿದಾನವಾಗಿ ರಸ್ತೆಯ ಎಡಬಾಗಕ್ಕೆ ತಂದು ನಿಲ್ಲಿಸುತ್ತಿದ್ದಂತೆಯೇ ಎದರುಗಡೆಯಿಂದ ಬಂದು ಬೈಕಿನ ಸವಾರ ಅತಿ ವೇಗ ಮತ್ತು ನಿರ್ಲಕ್ಷತನದಿಂದ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ನಮ್ಮ ಕಾರಿಗೆ ಮುಂದೆ ಡಿಕ್ಕಿಹೊಡೆದು ಅಪಘಾತಮಾಡಿದನು. ಇದರ ಪರಿಣಾಮ ನಮ್ಮ ಕಾರ ನಂ ಕೆಎ-33ಎಂ-7017 ನ್ನೇದ್ದರ ಮುಂದಿನ ಬಲಬಾಗ ಜಖಂಗೊಂಡಿರುತ್ತದೆ. ಸದರಿ ಅಪಘಾತ ಮಾಡಿದ ದ್ವಿಚಕ್ರವಾಹನ ನೋಡಲಾಗಿ ಹೀರೊ ಕಂಪನಿಯ ಹೆಚ್.ಎಫ್. ಡಿಲಕ್ಸ್ ಮೋಟರ್ ಸೈಕಲ್ ನಂ ಕೆಎ-32 ಇಡಬ್ಲೂ-2154 ನ್ನೇದ್ದು ಇದ್ದು ಅದರ ಮುಂಭಾಗ ಜಖಂಗೊಂಡಿರುತ್ತದೆ. ಮೋಟರ್ ಸೈಕಲ್ ಓಡಿಸುತ್ತಿದ್ದ ಅದರ ಸವಾರನಿಗೆ ಹೆಸರು ವಿಚಾರಿಸಲಾಗಿ ವಿಶ್ವರಾಧ್ಯ ತಂದೆ ತಿಪ್ಪಣ್ಣ ದೊಡ್ಡಮನಿ ಸಾ|| ಸನ್ನತಿ ಅಂತ ತಿಳಿಸಿದ್ದು. ಮೋಟರ್ ಸೈಕಲ್ ಮೇಲೆ ಹಿಂಬದಿ ಕುಳಿತ್ತಿದ್ದ ಸವಾರನಿಗೆ ವಿಚಾರಿಸಲಾಗಿ ತನ್ನ ಹೆಸರು ಶರಣಪ್ಪ ತಂದೆ ಸೋಮಲಿಂಗಪ್ಪ ಕವಲ್ದಾರ ಸಾ|| ಸನ್ನತ್ತಿ ಅಂತ ತಿಳಿಸಿದನು. ವಿಶ್ವರಾಧ್ಯನಿಗೆ ನೋಡಲಾಗಿ ಬಲಗಾಲಿಗೆ ತೊಡೆಗೆ, ಎಡಗೈ ಮೊಳಕೈಗೆ ಗುಪ್ತಗಾಯವಾಗಿರುತ್ತದೆ. ಶರಣಪ್ಪನಿಗೆ ನೋಡಲಾಗಿ ಎದೆಗೆ, ಹೊಟ್ಟೆಗೆ ಗುಪ್ತಗಾಯ, ಕಾಲಿನ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಮಹೇಶನು 112 ಗೆ ಕರೆಮಾಡಿದ್ದರಿಂದ 112 ವಾಹನ ಅಪಘಾತವಾದ ಸ್ಥಳಕ್ಕೆ ಬಂದು ಗಾಯಹೊಂದಿದ್ದ ವಿಶ್ವಾರಾಧ್ಯನಿಗೆ, ಮತ್ತು ಶರಣಪ್ಪನಿಗೆ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಸದರಿ ಅಪಘಾತದಲ್ಲಿ ನಮಗೆ ಯಾವದೆ ಗಾಯವಾಗಿರುವದಿಲ್ಲಾ, ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 49/2021 ಕಲಂ: 279, 337, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- ಪಿ.ಎ.ಆರ್ ನಂ: 05/2021 ಕಲಂ. 107 ಸಿ.ಆರ್.ಪಿ.ಸಿ : ಇಂದು ದಿನಾಂಕ 08/03/2021 ರಂದು ಬೆಳಿಗ್ಗೆ 10-15 ಎ.ಎಂ.ದ ಸುಮಾರಿಗೆ ಠಾಣೆಯಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿ.ಪಿ.ಸಿ-361, ಶ್ರೀ ಮೋನಪ್ಪ ಸಿ.ಪಿ.ಸಿ-263 ಮತ್ತು ಜೀಪ ಚಾಲಕನಾದ ಶ್ರೀ ಭೀಮರಾಯ ಸಿ.ಪಿ.ಸಿ-33 ರವರೊಂದಿಗೆ ಚಾಮನಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿಂದ ಬಂದಳ್ಳಿ ಗ್ರಾಮಕ್ಕೆ ಬೆಳಿಗ್ಗೆ 11-00 ಎ.ಎಂ.ಕ್ಕೆ ಬೇಟಿ ನೀಡಿ ಗ್ರಾಮದ ಆಗು ಹೋಗುಗಳ ವಿಚಾರಿಸಲಾಗಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಸದರಿ ಗ್ರಾಮದ ಒಂದನೇ ಪಾಟರ್ಿಯವನಾದ 1)ಮಲ್ಲಪ್ಪ ತಂದೆ ಹಣಮಂತ ಹಲಗಿ ವಯಾಃ 50 ವರ್ಷ ಜಾಃ ಹರಿಜನ ಉಃ ಹೊಟೇಲ ಕೆಲಸ 2)ಹೊನ್ನಪ್ಪ ತಂದೆ ಚನ್ನಪ್ಪ ಹಲಗೇರ ವಯಾಃ 45 ವರ್ಷ ಜಾಃ ಮಾದಿಗ ಉಃ ಒಕ್ಕಲುತನ 3)ದೇವಮ್ಮ ಗಂಡ ಮಲ್ಲಿಕಾಜರ್ುನ ಹಲಗೇರ ವಯಾಃ 35 ವರ್ಷ ಜಾಃ ಹರಿಜನ ಉಃ ಕೂಲಿಕೆಲಸ ಸಾಃ ಎಲ್ಲರೂ ಬಂದಳ್ಳಿ ಮತ್ತು ಎರಡನೇ ಪಾಟರ್ಿಯವರಾದ 1)ನಾಗಮ್ಮ ಗಂಡ ನಾಗಪ್ಪ ಕೊನೆನೊರ ವಯಾಃ 40 ವರ್ಷ ಜಾಃಹರಿಜನ ಉಃ ಕೂಲಿಕೆಲಸ 2)ನಾಗಪ್ಪ ತಂದೆ ತಿಪ್ಪಣ್ಣ ಕೊನೆನೊರ ವಯಾಃ 45 ವರ್ಷ ಜಾಃ ಹರಿಜನ ಉಃ ಕೂಲಿಕೆಲಸ 3)ಶರಣಪ್ಪ ತಂದೆ ದೂಳಪ್ಪ ಕೊನೆನೊರ ವಯಾಃ 45 ವರ್ಷ ಜಾಃ ಹರಿಜನ ಉಃಕೂಲಿಕೆಲಸ ಸಾಃ ಎಲ್ಲರೂ ಬಂದಳ್ಳಿ ಈ ಎರಡು ಪಾಟರ್ಿ ಜನರ ಮಧ್ಯ ಬಂದಳ್ಳಿ ಗ್ರಾಮದಲ್ಲಿ ಗುಂಜಲಮ್ಮ ದೇವಿ ಗುಡಿ ಹತ್ತಿರ ಎರಡು ಪಾಟರ್ಿ ಜನರು ಒಂದಕ್ಕೊಂದು ಹತ್ತಿಕೊಂಡು ಮನೆ ಕಟ್ಟಿಕೊಂಡಿದ್ದು, ಇವರಿಬ್ಬರ ಮನೆಗಳ ಆಜುಬಾಜು ಖೂಲ್ಲಾ ಜಾಗೆಯಿರುತ್ತದೆ, ಒಂದನೇ ಪಾಟರ್ಿಯ ಜನರು ಎರಡನೇ ಪಾಟರ್ಿಯ ಜನರ ಮನೆಯ ಬಾಗಿಲು ಮುಂದೆ ಕಂಪೌಂಡ ಕಟ್ಟಿಕೊಂಡು ಅವರ ಸಂಬಂಧಿಕರಿಂದ ಒಂದು ಸಣ್ಣ ಕಿರಾಣಿ ಡಬ್ಬಿ ಇಟ್ಟುಕೊಂಡಿರುತ್ತಾರೆ, ಎರಡನೇ ಪಾಟರ್ಿಯ ಜನರು ತಮ್ಮ ಮನೆಯ ಮುಂದೆ ಇರುವ ಜಾಗ ನಮ್ಮದು ಇರುತ್ತದೆ, ನಾವು ತಿರುಗಾಡುವದಕ್ಕೆ ಜಾಗ ಇರುವದಿಲ್ಲ ಇಲ್ಲಿಂದ ಕಂಪೌಂಡ ಮತ್ತು ಕಿರಾಣಿ ಡಬ್ಬಿ ತೆಗೆಯಿರಿ ಅಂತಾ ಎರಡು ಪಾಟರ್ಿಯ ಜನರು ತಕರಾರು ಮಾಡಿಕೊಂಡು ವೈಮನಸ್ಸು ಬೆಳೆಸಿಕೊಂಡಿರುತ್ತಾರೆ, ಆ ಜಾಗ ನನಗೆ ಬರುತ್ತದೆ, ನಿನಗೆ ಬರುತ್ತದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ಗ್ರಾಮದಲ್ಲಿ ತಿರುಗಾಡುತ್ತಾ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ಗ್ರಾಮದಲ್ಲಿ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಬೆಳಿಗ್ಗೆ 11-30 ಎ.ಎಮ್ ಕ್ಕೆ ಬಂದು ಸದರಿ ಒಂದನೇ ಪಾಟರ್ಿಯವನಾದ 1)ಮಲ್ಲಪ್ಪ ತಂದೆ ಹಣಮಂತ ಹಲಗಿ ವಯಾಃ 50 ವರ್ಷ ಜಾಃ ಹರಿಜನ ಉಃ ಹೊಟೇಲ ಕೆಲಸ 2)ಹೊನ್ನಪ್ಪ ತಂದೆ ಚನ್ನಪ್ಪ ಹಲಗೇರ ವಯಾಃ 45 ವರ್ಷ ಜಾಃ ಮಾದಿಗ ಉಃ ಒಕ್ಕಲುತನ 3)ದೇವಮ್ಮ ಗಂಡ ಮಲ್ಲಿಕಾಜರ್ುನ ಹಲಗೇರ ವಯಾಃ 35 ವರ್ಷ ಜಾಃ ಹರಿಜನ ಉಃ ಕೂಲಿಕೆಲಸ ಸಾಃ ಎಲ್ಲರೂ ಬಂದಳ್ಳಿ, ಮತ್ತು ಎರಡನೇ ಪಾಟರ್ಿಯವರಾದ 1)ನಾಗಮ್ಮ ಗಂಡ ನಾಗಪ್ಪ ಕೊನೊನೊರ ವಯಾಃ 35 ವರ್ಷ ಜಾಃಹರಿಜ ಹೂ ಕೂಲಿಕೆಲಸ 2)ನಾಗಪ್ಪ ತಂದೆ ತಿಪ್ಪಣ್ಣ ಕೊನೆನೊರ ವಯಾಃ 45 ವರ್ಷ ಜಾಃ ಹರಿಜನ ಉಃ ಕೂಲಿಕೆಲಸ 3)ಶರಣಪ್ಪ ತಂದೆ ದೂಳಪ್ಪ ಕೊನೆನೊರ ವಯಾಃ 43 ವರ್ಷ ಜಾಃ ಹರಿಜನ ಉಃಕೂಲಿಕೆಲಸ ಸಾಃ ಎಲ್ಲರೂ ಬಂದಳ್ಳಿ ಇವರ ವಿರುದ್ದ ಮುಂಜಾಗೃತಾ ಕ್ರಮವಾಗಿ ಠಾಣೆ ಪಿ.ಎ.ಆರ್. ನಂ 05/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ್ ಠಾಣೆ:- 30/2021 ಕಲಂ. 379 ಐಪಿಸಿ : ಇಂದು ದಿನಾಂಕ: 08/03/2021 ರಂದು 6-45 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್. ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಟಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 08/03/2021 ರಂದು ಸಾಯಂಕಾಲ 5-30 ಪಿಎಮ್ ಸುಮಾರಿಗೆ ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ-10 ಮತ್ತು ಸಾಬರೆಡ್ಡಿ ಪಿ.ಸಿ-379 ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಹತ್ತಿಕುಣಿ ಕ್ರಾಸ ಮುಖಾಂತರ ಗಂಗಾನಗರ ಕ್ರಾಸ ಕಡೆಗೆ ಹೋಗುತ್ತಿರುವಾಗ 6-00 ಪಿಎಮ್ ಸುಮಾರಿಗೆ ಗಂಗಾನಗರ ಹಳ್ಳದ ಬ್ರಿಡ್ಜ ಕಡೆಯಿಂದ ಗಂಗಾನಗರ ಕ್ರಾಸದಲ್ಲಿ ನಮ್ಮ ಎದುರುಗಡೆ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟ್ರಾಕ್ಟರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ನಾವು ಹತ್ತಿರ ಹೋಗಿ ನೋಡಲು ಸದರಿ ಟ್ರಾಕ್ಟರವು ಒಂಊಓಆಖಂ 475ಆ ಕಂಪನಿಯದು ಇದ್ದು, ಸದರಿ ಟ್ರಾಕ್ಟರ್ ಚೆಸ್ಸಿ ನಂ. ಒಃಓಂಂಂಎಉಃಊಓಃ00568 ಇಂಜಿನ್ ನಂ. ಓಊಃ2ಏಂಇ0164 ಇದ್ದು ಹಾಗೂ ಟ್ರಾಕ್ಟರ ಟ್ರಾಲಿ ಚೆಸ್ಸಿ ನಂ.21/2017 ನೇದ್ದು ಇದ್ದು ಟ್ರಾಕ್ಟರದಲ್ಲಿ ಮರಳು ತುಂಬಿದ್ದು ಟ್ರಾಕ್ಟರ ಚಾಲಕನು ಟ್ರಾಕ್ಟರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 6-30 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ್ ಚೆಸ್ಸಿ ನಂ. ಒಃಓಂಂಂಎಉಃಊಓಃ00568 ಇಂಜಿನ್ ನಂ. ಓಊಃ2ಏಂಇ0164 ಇದ್ದು ಹಾಗೂ ಟ್ರಾಕ್ಟರ ಟ್ರಾಲಿ ಚೆಸ್ಸಿ ನಂ.21/2017 ನೇದ್ದು ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 6-45 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.30/2021 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 30/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 08.03.2021 ರಂದು ಮದ್ಯಾಹ್ನ 2:00 ಗಂಟೆಗೆ ನಜಲಾಪೂರ ಗ್ರಾಮದ ಸಕಾರಿ ಶಾಲೆಯ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 06/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡು ಮಾನ್ಯ ನ್ಯಾಯಾಲಯವು ಪರವಾನಿಗೆ ನೀಡಿದ ನಂತರ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಾಯಂಕಾಲ 5:45 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಾಯಂಕಾಲ 7:15 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹಪೀಜ್ ಹೆಚ್ಸಿ-31 ಗುರುಮಠಕಲ್ ಠಾಣೆ ಗುನ್ನೆ ನಂಬರ 30/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

Last Updated: 09-03-2021 10:49 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080