ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09-04-2021

ಮಹಿಳಾ ಪೊಲೀಸ್ ಠಾಣೆ ಯಾದಗಿರಿ:- 24/2021 ಕಲಂ: 498(ಎ), 323, 504, 506 ಐ.ಪಿ.ಸಿ :ಇಂದು ದಿನಾಂಕ: 08.04.2021 ರಂದು ಮದ್ಯಾಹ್ನ 1.30 ಗಂಟೆಗೆ ಶ್ರೀಮತಿ ಪಿರ್ಯಾದಿ ಸುನೀತಾ ಗಂಡ ಕಾಶಿನಾಥ ಕೊಟಿಮನಿ ವಯಾ-22 ವರ್ಷ ಜಾತಿ-ಕಬ್ಬಲಿಗ ಉ-ಮನೆ ಕೆಲಸ ಸಾ-ಶಾಂತಿ ನಗರ ಯಾದಗಿರಿ ಇವರು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರು ಪಡಿಸಿದ್ದು ಸಾರಂಶವೆನೇಂದರೆ ನಮ್ಮ ತಾಯಿಗೆ ನಾವು ಒಟ್ಟು 5 ಜನ ಮಕ್ಕಳಿರುತ್ತೇವೆ. ನಾನು ನನ್ನ ತಾಯಿಗೆ 4 ನೇ ಮಗಳಾಗಿದ್ದು ಮನೆಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಶಾಂತಿ ನಗರದ ನಮ್ಮ ಕುಲಸ್ಥನಾದ ಕಾಶಿನಾಥ ತಂದೆ ಸಾಬಣ್ಣ ಕೊಟಿಮನಿ ಈತನು ಮತ್ತು ನಾನು ಇಬ್ಬರು ಒಬ್ಬರಿಗೊಬ್ಬರು  ಪ್ರೀತಿ ಮಾಡಿದ್ದು ನಮ್ಮೀಬ್ಬರ ಒಪ್ಪಿಗೆ ಮೇರೆಗೆ ಯಾದಗಿರಿ ಸಬ್ ರಜಿಸ್ಟರ್ ಕಛೇರಿಯಲ್ಲಿ 2019 ನೇ ಸಾಲಿನಲ್ಲಿ ರಜಿಸ್ಟರ್   ಮದುವೆ ಮಾಡಿಕೊಂಡಿರುತ್ತೇವೆ. ನಮ್ಮ ಮದುವೆಗೆ ನನ್ನ ತಾಯಿ ಗಂಗಮ್ಮಾ ಗಂಡ ಮೌಲಾಲಿ ಮತ್ತು ನನ್ನ ಅಣ್ಣನಾದ ಮಲ್ಲಿಕಾರ್ಜುನ ತಂದೆ ಮೌಲಾಲಿ ಇವರು ಮದುವೆಗೆ ಹಾಜರಿದ್ದರು. ನಮ್ಮ ಸಂಸಾರಿಕ ಜೀವನದಲ್ಲಿ ನಮಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇರುತ್ತದೆ.ಹೀಗಿದ್ದು ದಿನಾಂಕ: 04.04.2021 ರಂದು ಬೆಳಿಗ್ಗೆ 11.00 ಗಂಟೆಗೆ ನಾನು ಮತ್ತು ನನ್ನ ತಾಯಿ ಗಂಗಮ್ಮಾ ನನ್ನ ತಂಗಿ ಅಂಬಿಕಾ ಮನೆಯಲ್ಲಿದ್ದಾಗ ನನ್ನ ಗಂಡ ಕಾಶಿನಾಥ ಮತ್ತು ಅತ್ತೆ ಶಂಕ್ರಮ್ಮಾ ಇಬ್ಬರು ನಮ್ಮ ಮನೆಯ ಹತ್ತಿರ ಬಂದು ಏ ಸೂಳಿ ನಾವು ಕೊಟ್ಟ ನೀರಿನ ಮೊಟರ್ ಕೊಡು ಅಂತಾ ನನ್ನೊಟ್ಟಿಗೆ ಜಗಳ ಮಾಡಿ ನನಗೆ ಹೊಡೆಬಡೆ ಮಾಡಿದ್ದು ನನ್ನ ಅತ್ತೆ ಕೂಡ ಈ ರಂಡಿಗೆ ಬಿಡಬೇಡ ಎಷ್ಟು ದಿನದಿಂದ ನಮಗೆ ಮೂಲವಾಗಿದ್ದಾಳೆ ಅಂತಾ ನನ್ನ ಗಂಡನಿಗೆ ಹೊಡೆಯಲು ಕುಮ್ಮಕು ನೀಡುತ್ತಿದ್ದಳು ಮತ್ತು ನೀನು ನಮ್ಮ ಮನೆಗೆ ಬರಬೇಡ ಒಂದು ವೇಳೆ ಬಂದರೆ ನಾನು ಮತ್ತು ನನ್ನ ಮಗ ಇಬ್ಬರು ಕೂಡಿ ನಿನಗೆ ಜೀವ ಸಹಿತ ಬೀಡುವುದಿಲ್ಲ ಅಂತಾ ನನಗೆ ಪ್ರಾಣ ಬೇದರಿಕೆ ಹಾಕಿರುತ್ತಾರೆ. ನನ್ನ ಮಗನೊಂದಿಗೆ 4 ಜನರ ಮುಂದೆ ತಾಳಿ ಕಟ್ಟಿಸಿಕೊಂಡಿರುವುದಿಲ್ಲ. ಸೂಳಿ ನೀನು ಪ್ರೀತಿಸಿ ಮದುವೆಯಾಗಿದ್ದಿಯಾ ನನ್ನ ಮಗ ನಿನಗೆ ಗಂಡನಲ್ಲ ನೀನು ಅವನಿಗೆ ರಂಡಿ ಇದ್ದಿ ಅಂತಾ ನನ್ನ ಅತ್ತೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡುವಾಗ ನನ್ನ ತಾಯಿ ಗಂಗಮ್ಮಾ ತಂಗಿ ಅಂಬಿಕಾ ಇಬ್ಬರು ಜಗಳವನ್ನು ಬಿಡಿಸಿರುತ್ತಾರೆ. ಜಗಳವು ನಮ್ಮ ಮನೆಯ ಹತ್ತಿರ ಬೆಳಿಗ್ಗೆ 11.15 ಗಂಟೆಗೆ ಆಗಿರುತ್ತದೆ. ಮನೆಯಲ್ಲಿ ನಮ್ಮ ಹಿರಿಯರನ್ನು ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೆನೆ. ಜಗಳದಲ್ಲಿ ನನಗೆ ಯಾವುದೇ ರೀತಿ ಗಾಯಗಳು ಆಗಿರುವುದಿಲ್ಲ. ನಾನು ಆಸ್ಪತ್ರೆಗೆ ಹೋಗುವುದಿಲ್ಲ. ಆದ್ದರಿಂದ  ನನ್ನ ಗಂಡ ಕಾಶಿನಾಥ ತಂದೆ ಸಾಬಣ್ಣ ಮತ್ತು ನನ್ನ ಅತ್ತೆಯಾದ ಶಂಕ್ರಮ್ಮ ಗಂಡ ಸಾಬಣ್ಣ ರವರು ನನಗೆ ಮದುವೆಯಾದಗಿನಿಂದ  ನನ್ನ ಸಂಗಡ ಒಂದಲ್ಲ  ಒಂದು ರೀತಿ ಜಗಳ ಮಾಡುವುದು , ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುವುದು , ಅವ್ಯಾಚವಾಗಿ ಬೈದು  ಹೊಡೆಬಡೆ ಮಾಡಿ ಪ್ರಾಣ ಬೆದರಿಕೆ ಹಾಕಿದ ನನ್ನ ಗಂಡ ಕಾಶಿನಾಥ ತಂದೆ   ಸಾಬಣ್ಣ ಮತ್ತು ಅತ್ತೆಯಾದ ಶಂಕ್ರಮ್ಮಾ ಗಂಡ ಸಾಬಣ್ಣ ಸಾ- ಶಾಂತಿ ನಗರ  ಯಾದಗಿರಿ ಇವರ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ದೂರಿನ ಮೇಲಿಂದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯ ಗುನ್ನೆ ನಂ: 24/2021 ಕಲಂ: 498(ಎ), 323, 504, 506 ಸಂ/34 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:- ಗುನ್ನೆ ನಂ: 53/2021 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 08.04.2021 ರಂದು ಸಂಜೆ 02:00 ಗಂಟೆಗೆ ಗುರುಮಠಕಲ್ ಪಟ್ಟಣದ ಬಿಎಸ್ಎನ್ಎಲ್ ಆಫೀಸ್ ಹತ್ತಿರ ರೋಡಿನ ಮೇಲೆ ಇಬ್ಬರು ವ್ಯಕ್ತಿಗಳು ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 10/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ರಾತ್ರಿ ಮಧ್ಯಾಹ್ನ 03:40 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಮಧ್ಯಾಹ್ನ 04:00 ಗಂಟೆಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2800/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 08.04.2021 ರಂದು ಸಮಯ ಸಂಜೆ 05:10 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 53/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:- 56/2021 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 08-04-2021 ರಂದು ರಾತ್ರಿ 07-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ಲಕ್ಷ್ಮೀ ವೈನ್ ಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತರಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವರಿಂದ ನಗದು ಹಣ 540=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತರನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.56/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಭೀ.ಗುಡಿ ಪೊಲೀಸ ಠಾಣೆ:- 31/2021 ಕಲಂ 78(3) ಕೆಪಿ ಯ್ಯಾಕ್ಟ: ಇಂದು ದಿನಾಂಕ 08/04/2021 ರಂದು 06.00 ಪಿ.ಎಮ್.ಕ್ಕೆ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 7.15 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 8.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 690=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತರ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

 

ಇತ್ತೀಚಿನ ನವೀಕರಣ​ : 09-04-2021 12:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080