Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/02/2021

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 29/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 09/02/2021 ರಂದು 16-40 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ. (ಕಾ.ಸೂ) ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ಇಂದು ದಿನಾಂಕ: 09/02/2021 ರಂದು ಮದ್ಯಾಹ್ನ 15-45 ಗಂಟೆಯ ಸುಮಾರಿಗೆ ಪಿ. ಐ. ಸಾಹೇಬರಿಗೆ ಬಂದ ಮಾಹಿತಿಯನ್ನು ನನಗೆ ತಿಳಿಸಿದ್ದೆನೆಂದರೆ. ಸಗರ (ಬಿ) ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 29/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1650=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 30/2020 ಕಲಂಃ ಕಲಂ 279,338 ಐಪಿಸಿ : ಇಂದು ದಿನಾಂಕ: 09-02-2021 ರಂದು 7:00 ಪಿ.ಎಮ್.ಕ್ಕೆ ಫಿರ್ಯಾದಿ ತಿಪ್ಪಣ್ಣ ತಂದೆ ಖಂಡಪ್ಪ ಪಟ್ಟೇದಾರ ವಯ: 35 ವರ್ಷ ಜಾ: ಬೇಡರ ಉ: ಒಕ್ಕಲುತನ ಸಾ: ಬೊಮ್ಮನಹಳ್ಳಿ ತಾ: ವಡಗೇರಾ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರುಪಡಿಸಿದ್ದು ಏನಂದರೆ ಇಂದು ದಿನಾಂಕ: 09-02-2021 ರಂದು 12:20 ಪಿ.ಎಮ್.ಕ್ಕೆ ನಮ್ಮ ತಮ್ಮನಾದ ಬೀಮಾಶಂಕರ ತಂದೆ ಖಂಡಪ್ಪ ಪಟ್ಟೇದಾರ ಈತನು ತನ್ನ ಮಗನಾದ ಮಹೇಶ 6 ವರ್ಷ ಈತನನ್ನು ನನ್ನ ಮೊಟಾರಸೈಕಲ್ ನಂ.ಕೆ.ಎ.33-ವೈ-4224 ನೇದ್ದರಲ್ಲಿ ಕೂಡಿಸಿಕೊಂಡು ಹೊಲಕ್ಕೆ ಹೋಗುತ್ತೇನೆಂದು ಹೋದನು. ಆತನು ಹೋದ 10 ನಿಮಿಷಗಳಲ್ಲಿ ನಮ್ಮೂರ ಮಲ್ಲಪ್ಪ ತಂದೆ ಆಂದೇರೆಪ್ಪ ನಾಟೇಕಾರ ಈತನು ನನಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಿಮ್ಮ ತಮ್ಮನಿಗೆ ಕ್ರಾಸ ಹತ್ತಿರ ಕಾರ ಡಿಕ್ಕಿ ಹೊಡೆದು ಬಹಳ ಗಾಯವಾಗಿದೆ ಬಾ ಎಂದು ಹೇಳಿದನು. ಆಗ ನಾನು ತಕ್ಷಣ ಹೋಗಿ ನೋಡಲಾಗಿ ನಮ್ಮ ತಮ್ಮನು ಗಾಯಗೊಂಡು ಸ್ಥಳದಲ್ಲೆ ಇದ್ದನು. ನಾನು ಹೇಗಾಯಿತು ಎಂದು ನಮ್ಮ ತಮ್ಮನಿಗೆ ಕೇಳಲಾಗಿ ನಾನು ನಮ್ಮೂರಿನಿಂದ ಹೊಲಕ್ಕೆ ಹೊರಟಾಗ ಹತ್ತಿಗೂಡೂರ ಕಡೆಯಿಂದ ಒಂದು ಕಾರ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮೂರ ಕ್ರಾಸದಲ್ಲಿ ಬಲವಾಗಿ ಡಿಕ್ಕಿ ಹೊಡೆದಿದ್ದಿರಿಂದ ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಅದರಿಂದ ನನಗೆ ಎಡಗಾಲ ಮೊಳಕಾಲ ಕೆಳಗೆ ಭಾರೀ ಗಾಯವಾಗಿ ಕಾಲು ಮುರಿದಿದೆ. ಕುತ್ತಿಗೆಯ ಹತ್ತಿರ ರಕ್ತಗಾಯವಾಗಿದೆ. ಎಡಗೈ ಭುಜಕ್ಕೆ ಒಳಪೆಟ್ಟಾಗಿದೆ. ಮತ್ತು ಮಗ ಮಹೇಶನಿಗೆ ತಲೆಗೆ ಭಾರೀ ರಕ್ತಗಾಯವಾಗಿದೆ ಎಂದು ಹೇಳಿದನು. ನಮ್ಮ ತಮ್ಮನ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ ಕಾರ ಅಲ್ಲೇ ಇದ್ದು ಅದರ ನಂಬರ ನೋಡಲಾಗಿ ಕೆ.ಎ.53 ಸಿ- 8782 ಅಂತಾ ಇದ್ದು ಅದರ ಚಾಲಕನು ಕೂಡಾ ಅಲ್ಲೇ ಇದ್ದು ಆತನ ಹೆಸರು ಕೇಳಲಾಗಿ ಬಲಭೀಮ ತಂದೆ ಗುರಪ್ಪ ಮಾಶ್ಯಾಳ ಸಾ: ಶೇಳ್ಳಗಿ ತಾ: ಸುರಪುರ ಅಂತಾ ಹೇಳಿದನು ಆಗ ನಾನು ಮತ್ತು ಮಲ್ಲಪ್ಪ ತಂದೆ ಆಂದೇರೆಪ್ಪ ನಾಟೇಕಾರ ಇಬ್ಬರೂ ಕೂಡಿ ನನ್ನ ತಮ್ಮ ಮತ್ತು ಆತನ ಮಗ ಮಹೇಶನಿಗೆ ಅಲ್ಲಿಂದ ಒಂದು ಖಾಸಗಿ ವಾಹನದಲ್ಲಿ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಲು ವ್ಯವಸ್ಥೆ ಮಾಡಿ ಕಳುಹಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಅಫಘಾತಕ್ಕೀಡಾದ ಎರಡೂ ವಾಹನಗಳು ಸ್ಥಳದಲ್ಲೇ ಇರುತ್ತವೆ. ಕಾರಣ ಇಂದು ದಿನಾಂಕ: 09-02-2021 ರಂದು 12:30 ಪಿ.ಎಎಮ್.ಕ್ಕೆ ಹತ್ತಿಗೂಡೂರ ಯಾದಗಿರಿ ಮುಖ್ಯ ರಸ್ತೆಯ ಬೊಮ್ಮನಳ್ಳಿ ಕ್ರಾಸ ಹತ್ತಿರ ನನ್ನ ತಮ್ಮನ ಮೊಟಾರ ಸೈಕಲ್ ಗೆ ಡಿಕ್ಕಿಪಡಿಸಿ ಭಾರೀ ಗಾಯ ಪಡಿಸಿದ ಕಾರ ನಂ. ಕೆ.ಎ.53-ಸಿ-8782 ನೇದ್ದರ ಚಾಲಕ ಬಲಭೀಮ ತಂದೆ ಗುರಪ್ಪ ಮಾಶ್ಯಾಳ ಸಾ: ಶೇಳ್ಳಗಿ ತಾ: ಸುರಪುರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 230/2021 ಕಲಂ 279 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 17/2021 ಕಲಂ: 143,147,148,323,324,326.504.506 ಸಂ.149 ಐಪಿಸಿ : ಇಂದು ದಿನಾಂಕ 09/02/2021 ರಂದು 12-00 ಪಿ.ಎಮ್ ಕ್ಕೆ ಪಿರ್ಯಾಧಿ ಶ್ರೀಮತಿ ರೇಷ್ಮಾ ಬೇಗಂ ಗಂಡ ಮಹ್ಮದ ಖಾಸೀಂ ವ;28 ಜಾ; ಮುಸ್ಲಿಂ ಉ; ಮನೆಗೆಲಸ ಸಾ; ಲಾಡೆಜಗಲ್ಲಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದೆರೆ, ನನ್ನ ಗಂಡ ಮಹ್ಮದ ಖಾಸೀಂ ತಂದೆ ಮಹ್ಮದ ಬಾಬಾ ಈತನು ಅವರ ಸೊದರ ಮಾವನಾದ ಖಾಜಾ ಮೈನೊದ್ದೀನ್ ತಂದೆ ಶೇಕ್ ಹುಸೇನ ಸಾ; ಶಿವನಗರ ಯಾದಗಿರಿ ಈತನು ಯಾದಗಿರಿ ನಗರದ ಹಳೆ ಬಸ ನಿಲ್ದಾಣದ ಹತ್ತಿರವಿರುವ ಹಳೆ ಐ.ಬಿ ಮುಂದುಗಡೆ ಚಿಕನ್, ಎಗ್ ರೈಸ್ ಬಂಡಿ ಇಟ್ಟುಕೊಂಡಿದ್ದು ಅಲ್ಲಿ ನನ್ನ ಗಂಡ ಕೆಲಸ ಮಾಡಿಕೊಂಡು ಇರುತ್ತಾನೆ. ಹಿಗೀದ್ದು ನಿನ್ನೆ ದಿನಾಂಕ; 08/02/2021 ರಂದು ರಾತ್ರಿ 11-00 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ನನ್ನ ಮೈದುನ ಪೆರೋಜ್, ಹಾಗೂ ಖಾಜಾ ಮೈನೊದ್ದಿನ್ ರವರು ನಮ್ಮ ಮನೆಗೆ ಬಂದಿದ್ದು ನನ್ನ ಗಂಡನಿಗೆ ರಕ್ತಗಾಯವಾಗಿ ಬೆಹೋಷ ಆಗಿದ್ದು ಕಂಡು ನನ್ನ ಮೈದುನನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ, ನಾನು ಬಸ ನಿಲ್ದಾಣದ ಹತ್ತಿರವಿರುವಾಗ ಮುಜ್ಜು ತಂದೆ ಖಾಜಾ ಮೈನೊದ್ದೀನ್ ಈತನಿಂದ ಜಗಳದ ವಿಷಯ ಗೊತ್ತಾಗಿ ನಾನು ಶಾಸ್ತ್ರಿಚೌಕ ಕಡೆಗೆ ಬಂದಿದ್ದು ನನ್ನ ಅಣ್ಣ ಮಹ್ಮದ ಖಾಸೀಂ ಈತನಿಗೆ ರಕ್ತಗಾಯಗಳಾಗಿದ್ದು ಆಗ ನಾನು ಮುಜ್ಜು ಈತನಿಗೆ ವಿಚಾರಿಸಲು ನನಗೆ ತಿಳಿಸಿದ್ದೆನೆಂದರೆ, ನಿಮ್ಮ ಅಣ್ಣ ಮತ್ತು ನಾನು ಇಬ್ಬರು ಕೂಡಿಕೊಂಡು 10-00 ಗಂಟೆ ಸುಮಾರಿಗೆ ಎಗ್ ರೈಸ್ ವ್ಯಾಪಾರದಲ್ಲಿರುವಾಗ ಯಾರೋ 8-10 ಜನರು ಕೂಡಿಕೊಂಡು ಎಗ್ ರೈಸ್, ಚಿಕನ್ ತಿಂದು ಹಣ ಕೇಳಿದ್ದಕ್ಕೆ ನಮ್ಮ ಹತ್ತಿರ ಹಣ ಇರುವುದಿಲ್ಲ, ನಾವು ಹಣ ಕೊಡುವುದಿಲ್ಲಾ ಅಂತಾ ತಕರಾರು ಮಾಡಿದ್ದು ಇರುತ್ತದೆ. ನಂತರ ನಾವು ಎಗ್ ರೈಸ್ ಬಂಡಿ ಬಂದ್ ಮಾಡಿಕೊಂಡು ಶಾಸ್ತ್ರಿಚೌಕ ಮೂಲಕ ಮನೆಯ ಕಡೆಗೆ ಬರುತ್ತಿರುವಾಗ ಶಾಸ್ತ್ರಿಚೌಕದಲ್ಲಿ ರಾತ್ರಿ 10-30 ಗಂಟೆ ಸುಮಾರಿಗೆ ಅದೇ 8-10 ಜನರು ಕೂಡಿಕೊಂಡು ನಮ್ಮ ಹಿಂದೆ ಬಂದು ನಮ್ಮ ಸಂಗಡ ಜಗಳ ತೆಗೆದು ನಮಗೆ ಹಣ ಕೇಳುತ್ತೀರಾ ಬೋಸಡಿ ಮಕ್ಕಳೆ ಅಂತಾ ಅಂದಾಗ ನಿಮ್ಮ ಅಣ್ಣನಾದ ಮಹ್ಮದ ಖಾಸೀಂ ಈತನು ಅವರಿಗೆ ಎಗ್ ರೈಸ್ ಮತ್ತು ಚಿಕನ್ ತಿಂದಿರುತ್ತಿರಿ ಹಣ ಕೊಡದಿದ್ದರೆ ನಮ್ಮ ಜೀವನ ಹೇಗೆ ಸಾಗಬೇಕು ಅಂತಾ ಅಂದಿದ್ದಕ್ಕೆ, ಅವರು ನಮ್ಮ ಹತ್ತಿರ ಹಣ ಇಲ್ಲ ಅಂತಾ ಅಂದರು ಕೂಡಾ ಹಣ ಕೇಳುತ್ತೀರಿ ನಿಮಗೆ ಸೊಕ್ಕು ಬಹಳ ಆಗಿದೆ ಅಂತಾ ಅಂದು ನಮಗೆ ಎದುರು ಮಾತನಾಡುತ್ತಿರಾ ಮಕ್ಕಳೇ ಅಂತಾ ಎಲ್ಲರೂ ಕೂಡಿಕೊಂಡು ಜೀವದ ಬೆದರಿಕೆ ಹಾಕಿ ಅವರಲ್ಲಿ ಕೆಲವರು ಬಡಿಗೆಯಿಂದ ನಿಮ್ಮ ಅಣ್ಣನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿದ್ದು ಮತ್ತು ಕೆಲವರು ಎಡ ಕಿವಿಗೆ ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯ ಮಾಡಿದ್ದು ಆಗ ನಿಮ್ಮ ಅಣ್ಣನ ಕಿವಿ ಸ್ವಲ್ಪ ಹರಿದು ರಕ್ತಗಾಯವಾಗಿದ್ದು ಇರುತ್ತದೆ. ಕೆಲವರು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ತಿಳಿಸಿದ್ದು ನಂತರ ಸದರಿ ವಿಷಯವನ್ನು ನಾವು ಖಾಜಾ ಮೈನೊದ್ದೀನ್ ಈತನಿಗೆ ತಿಳಿಸಿ ಎಲ್ಲರೂ ಕೂಡಿಕೊಂಡು ಮನೆಗೆ ಬಂದಿದ್ದು ನನ್ನ ಅಣ್ಣನಿಗೆ ಹೊಡೆ ಬಡೆ ಮಾಡಿದವರ ಹೆಸರುಗಳೂ ನಮಗೆ ಗೊತ್ತಾಗಿರುವುದಿಲ್ಲಾ ಅಂತಾ ನನ್ನ ಮೈದುನ ಈ ಮೇಲಿನಂತೆ ನನಗೆ ಎಲ್ಲಾ ವಿಷಯವನ್ನು ತಿಳಿಸಿದನು. ನನ್ನ ಗಂಡನಿಗೆ ಹೊಡೆ ಬಡೆ ಮಾಡಿದವರ ಹೆಸರುಗಳು ಗೊತ್ತಾಗಿರುವುದಿಲ್ಲಾ ನಂತರ ತಿಳಿಸುತ್ತೇವೆ. ಸದರಿ ಘಟನೆಯು ನಿನ್ನೆ ದಿನಾಂಕ; 08/02/2021 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಶಾಸ್ತ್ರಿಚೌಕದಲ್ಲಿ ಜರುಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಕೂಡಿಕೊಂಡು ನಮ್ಮ ಪಕ್ಕದ ಮನೆಯವರಾದ ಮಹ್ಮದ ಮುನೀರ ತಂದೆ ಇಫ್ತಿಕಾರ ಹುಸೇನ ಇತನಿಗೆ ವಿಷಯವನ್ನು ತಿಳಿಸಿ ಈತನ ಕಾರಿನಲ್ಲಿ ಕರೆದುಕೊಂಡು ಉಪಚಾರ ಕುರಿತು ನನ್ನ ಗಂಡನಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ನನ್ನ ಗಂಡನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ತುತರ್ು ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಾವು ಆಸ್ಪತ್ರೆಯಲ್ಲಿರುವಾಗ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ರಾತ್ರಿ ಯಾದಗಿರಿ ನಗರ ಠಾಣೆ ಪೊಲೀಸರು ನಮಗೆ ಫೋನ ಮಾಡಿ ಎಮ್.ಎಲ್.ಸಿ ಬಗ್ಗೆ ವಿಚಾರಿಸಿದ್ದು ಆಗ ನಾವು, ಪೊಲೀಸರಿಗೆ ನನ್ನ ಗಂಡ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಕೂಡಲೇ ಕಲಬುರಗಿಗೆ ಚಿಕಿತ್ಸೆಗಾಗಿ ಬಂದಿರುತ್ತೇವೆ ನಾವು ಠಾಣೆಗೆ ಬಂದು ನಂತರ ದೂರು ಸಲ್ಲಿಸುತ್ತೇವೆ ಅಂತಾ ತಿಳಿಸಿದ್ದು ಈಗ ನಾನು ಇಂದು ದಿನಾಂಕ; 09/02/2021 ರಂದು ಠಾಣೆಗ ಬಂದು ದೂರು ನೀಡುತ್ತಿದ್ದು ನನ್ನ ಗಂಡನಿಗೆ ಹೊಡೆಬಡೆ ಮಾಡಿ, ಭಾರಿ ರಕ್ತಗಾಯ ಮಾಡಿದ ಅಪರಿಚಿತ 8-10 ಜನರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ. 17/2021 ಕಲಂ 143,147,148,323,324,326,504,506 ಸಂ.149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 18/2021 ಕಲಂ 78(3) ಕೆ.ಪಿ ಎಕ್ಟ್: ಇಂದು ದಿನಾಂಕ 09/02/2021 ರಂದು 3-45 ಪಿಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ.09/02/2021 ರಂದು 2-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟೇಷನ್ ಏರಿಯಾದ ಸ್ವಾಗತ ಹೋಟೇಲ ಹತ್ತಿರ ಮುಂದುಗಡೆ ರೋಡಿನ ಮೇಲೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 3-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 3-45 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.18/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು:

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 11/2021 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 09/02/2021 ರಂದು 9-30 ಪಿಎಂ ಕ್ಕೆ ಶ್ರೀ. ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾಸು) ಗೋಗಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಮತ್ತು ಒಂದು ವರದಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ಮಹಲರೋಜಾ ಗ್ರಾಮ ಸೀಮಾಂತರದಲ್ಲಿ ಎಲ್ಲಮ್ಮ ಗುಡ್ಡ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ ಮೇಲೆ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 06 ಜನರನ್ನು ಹಿಡಿದಿದ್ದು ಆರೋಪಿತರಿಂದ ನಗದು ಹಣ ರೂ. 12,200=00 ರೂ. ಹಾಗೂ 52 ಇಸ್ಪೇಟ ಎಲೆಗಳನ್ನು ಮತ್ತು 2 ಚಾರ್ಜರ ಲೈಟ್ಗಳು 7-45 ಪಿ.ಎಮ್.ದಿಂದ 8-45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 9-30 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ, ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಆರೋಪಿತರನ್ನು ಹಾಜರಪಡಿಸಿದ್ದರಿಂದ, ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 18/2021 ಕಲಂ: 279, 337,338 ಐ.ಪಿ.ಸಿ : ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಗಾಯಾಳು ಪಿರ್ಯಾದಿ ತೋಟಪ್ಪ ತಂದೆ ನಡಿಗೇರಪ್ಪ ಪೂಜಾರಿ ಸಾ|| ಕೆಂಭಾವಿ ಇವರು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ 07.02.2021 ರಂದು ರಾತ್ರಿ ಸಾಯಿನಗರದಲ್ಲಿ ಕೆಲಸವಿದ್ದ ನಿಮಿತ್ಯೆ ನಾನು ಹಾಗು ಭೀಮಾಶಂಕರ ತಂದೆ ಶಾಂತಪ್ಪ ಬಜಂತ್ರಿ ಇಬ್ಬರೂ ಕೂಡಿಕೊಂಡು ಭೀಮಾಶಕರ ಈತನ ಮೋಟರ ಸೈಕಲ ನಂಬರ ಕೆಎ-33 ಕೆ- 8250 ನೇದ್ದರಲ್ಲಿ ಹೊರಟಿದ್ದು ಸದರಿ ಮೋಟರ ಸೈಕಲ ಭೀಮಾಶಂಕರ ಈತನು ನಡೆಸುತ್ತಿದ್ದನು. ಹೀಗಿರುತ್ತಾ ರಾತ್ರಿ 9 ಗಂಟೆಯ ಸುಮಾರಿಗೆ ನಾವಿಬ್ಬರೂ ವಿದ್ಯಾಲಕ್ಷ್ಮೀ ಸ್ಕೂಲ ಹತ್ತಿರ ಹೊರಟಿದ್ದು, ನಾನು ಕುಳಿತ ಮೋಟರ ಸೈಕಲ ನಡೆಸುವ ಭೀಮಾಶಂಕರ ಭಜಂತ್ರಿ ಈತನಿಗೆ ಮೋಟರ ಸೈಕಲ್ ನಿಧಾನವಾಗಿ ನಡೆಸು ಅಂತ ಕೇಳಿಕೊಂಡರೂ ಸದರಿಯವನು ನನ್ನ ಮಾತು ಕೇಳದೆ ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮುಂದೆ ಒಂದು ಮೋಟರ ಸೈಕಲ್ ಸಹ ಹೊರಟಿದ್ದು ಸದರಿ ಮೋಟರ ಸೈಕಲ್ ಚಾಲಕನು ಹಿಂದೆ ಬರುವ ವಾಹನವನ್ನು ಗಮನಿಸದೇ ಅಲಕ್ಷತನದಿಂದ ಬಲಭಾಗಕ್ಕೆ ಕಟ್ ಮಾಡಿದಾಗ ಅತಿವೇಗವಾಗಿ ಹೊರಟ ನಮ್ಮ ಮೋಟರ ಸೈಕಲ್ ಆತನ ಮೋಟರ ಸೈಕಲ್ಗೆ ಡಿಕ್ಕಿಹೊಡೆದಿದ್ದು, ಕಾರಣ ನಾವು ಎರಡೂ ಮೋಟರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಗದ್ದಕ್ಕೆ ಭಾರಿ ರಕ್ತಗಾಯವಾಗಿ ಹಲ್ಲುಮುರಿದಂತಾಗಿ, ಎಡಮೆಲಕಿಗೆ, ಬಲಗಾಲ ಮೊಳಕಾಲಿಗೆ, ಬಲಗಾಲ ಪಾದಕ್ಕೆ ಹಾಗೂ ಎಡಗೈ ಮಣಿಕಟ್ಟಿನ ಹತ್ತಿರ ತರಚಿದ ರಕ್ತಗಾಯವಾದವು. ನಮ್ಮ ಮೋಟರ ಸೈಕಲ್ ಚಾಲಕ ಭೀಮಾಶಂಕರ ಭಜಂತ್ರಿ ಈತನಿಗೂ ಸಹ ಮೂಗಿಗೆ, ಗದ್ದಕ್ಕೆ, ಬಾಯಿಗೆ, ಎರಡೂ ಕೈಗಳ ಹಸ್ತಕ್ಕೆ ಹಾಗೂ ಬಲಗಾಲ ಪಾದಕ್ಕೆ ತರಚಿದ ರಕ್ತಗಾಯವಾಗಿದ್ದು ಅಲ್ಲದೆ ಹಣೆಗೂ ಸಹ ರಕ್ತಗಾಯವಾಗಿರುತ್ತದೆ. ಇನ್ನೊಂದು ಮೋಟರ ಸೈಕಲ್ ನಂಬರ ನೋಡಲಾಗಿ ಕೆಎ 33 ಕೆ 8740 ಅಂತ ಇದ್ದು, ಅದರ ಚಾಲಕನ ಬಗ್ಗೆ ಕೇಳಿ ತಿಳಿಯಲಾಗಿ ಕೆ. ವಿಜಯಕುಮಾರ ತಂದೆ ಸತ್ಯನಾರಾಯಣ ಸಾ|| ಲಕ್ಷ್ಮೀನಗರ ಕೆಂಭಾವಿ ಅಂತ ಗೊತ್ತಾಯಿತು. ಸದರಿಯವನಿಗೂ ಸಹ ಟೊಂಕಕ್ಕೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನಾವು 3 ಜನರು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡಿದ್ದು, ನಂತರ ನಾನು ಹಾಗೂ ಭೀಮಾಶಂಕರ ಭಜಂತ್ರಿ ಇಬ್ಬರು ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದಿದ್ದು, ಕೆ ವಿಜಯಕುಮಾರ ಅನ್ನುವವನು ಲಿಂಗಸುಗುರ ಯಾದವಾಡ ಆಸ್ಪತ್ರೆಗೆ ಹೋಗಿರುವದಾಗಿ ತಿಳಿದುಬಂದಿರುತ್ತದೆ ಅಂತ ಇತ್ಯಾದಿ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 18/2021 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡೆನು.

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ ಮನುಷ್ಯ ಕಾಣೆಯಾದ ಬಗ್ಗೆ. : ದಿನಾಂಕ:15/08/2019 ರಂದು 6 ಪಿ.ಎಮ್.ಕ್ಕೆ ಫಿಯರ್ಾದಿಯ ಮಗನಾದ ಬಸವರಾಜ ಈತನು ದುಡಿಯಲು ಬೆಂಗಳೂರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ಇಲ್ಲಿಯವರೆಗೆ ಮರಳಿ ಮನಗೆ ಬಂದಿರುವದಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು ಗಳಿಗೆ ಹೋಗಿ ವಿಚಾರಿಸಲಾಗಿ, ಸಂಬಂಧಿಕರ ಊರೂರುಗಳಿಗೆ ಹೋಗಿ ವಿಚಾರಿಸಲಾಗಿ ಬಸವರಾಜ ಈತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಕಾರಣ ಕಾಣೆಯಾದ ನನ್ನ ಮಗನನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ದೂರು ಇರುತ್ತದೆ.

Last Updated: 10-02-2021 01:37 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080