ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/03/2021

ಶಹಾಪೂರ ಪೊಲೀಸ್ ಠಾಣೆ:- 50/2021 ಕಲಂ 279, 304(ಎ) ಐ.ಪಿ.ಸಿ: ಇಂದು ದಿನಾಂಕ 09/03/2021 ರಂದು ಮುಂಜಾನೆ 06-30 ಗಂಟೆಗೆ ಫಿಯರ್ಾದಿ ಶ್ರೀಮತಿ ಮಹಾದೇವಿ ಗಂ/ ಪರಶುರಾಮ ಚಲವಾದಿ ವ|| 25 ವರ್ಷ ಜಾ|| (ಪ.ಜಾ) ಹೊಲೆಯ ಉ|| ಕೂಲಿಕೆಲಸ ಸಾ|| ಪೇಠ ಅಮ್ಮಾಪುರ ತಾ|| ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ 08-03/2021 ರಂದು ನಿನ್ನೆ ರಾತ್ರಿ 10.00 ಪಿ.ಎಂ. ಸುಮಾರಿಗೆ ಊಟ ಆದ ನಂತರ ತನ್ನ ಗಂಡ ಪರಶುರಾಮ ಇವರು ಬಹಿದರ್ೆಸೆಗೆ ಹೋಗಿ ಬರುತ್ತೇನೆ. ಅಂತಾ ಹೇಳಿ ಮನೆಯಿಂದ ತನ್ನ ಮೋಟರ ಸೈಕಲ್ ನಂ. ಕೆಎ-33 ವಿ-0104 ನೇದ್ದನ್ನು ಚಲಾಯಿಸಿಕೊಂಡು ರಾತ್ರಿ 10.45 ಪಿ.ಎಂ. ಸುಮಾರಿಗೆ ಹತ್ತಿಗುಡೂರ-ಹೈಯಾಳ(ಬಿ) ರಸ್ತೆಯಲ್ಲಿ ಮುನಮುಟಗಿ ಕ್ರಾಸ್ ದಾಟಿ ಹೈಯಾಳ(ಬಿ) ಕಡೆಗೆ ಇರುವ ಬಸಂತಪುರ ಹಳ್ಳದ ಹತ್ತಿರ ಒಬ್ಬ ವ್ಯಕ್ತಿ ಅಪಘಾತ ಜರುಗಿ ಭಾರಿ ರಕ್ತಗಾಯ ಹೊಂದಿ ಬಿದ್ದಿರುತ್ತಾನೆ ಅಂತಾ ಸುದ್ದಿ ಕೇಳಿ ಫಿಯರ್ಾದಿಯವರ ಅಣ್ಣ ಅಮಾತೆಪ್ಪ ಕಲ್ಮನಿ ಇವರು ನೋಡಿ ಬರುತ್ತೇನೆ ಅಂತಾ ಹೇಳಿ ಹೋಗಿ 11.00 ಪಿ.ಎಂ.ಕ್ಕೆ ಫಿಯರ್ಾದಿಯವರಿಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಅಪಘಾತದಲ್ಲಿ ಭಾರೀ ಗಾಯಹೊಂದಿ ಬಿದ್ದ ವ್ಯಕ್ತಿ ಭಾವ ಪರಶುರಾಮ ಇವರು ಇದ್ದು, ಯಾವುದೋ ಒಂದು ವಾಹನ ಭಾವನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿ ಓಡಿ ಹೋಗಿದ್ದು, ಅಪಘಾತದಲ್ಲಿ ಭಾವನ ಹಣೆಯ ಬಲಭಾಗದಲ್ಲಿ ಭಾರೀ ರಕ್ತಗಾಯ, ಬಲ ರಟ್ಟೆ, ಮೊಳಕೈ ಕೆಳಗೆ ಭಾರೀ ಒಳಪೆಟ್ಟಾಗಿ ಮುರಿದಂತೆ ಕಂಡು ಬರುತ್ತದೆ. ಮತ್ತು ಬಲ ಮೊಳಕಾಲ ಕೆಳಗೆ ಭಾರೀ ರಕ್ತಗಾಯವಾಗಿರುತ್ತದೆ ಸ್ಥಳಕ್ಕೆ ಬಂದ 108 ವಾಹನದಲ್ಲಿ ಭಾವನಿಗೆ ಹಾಕಿಕೊಂಡು ಶಹಾಪುರ ಕ್ಕೆ ಹೊರಟಿದ್ದೇನೆ ಅಂತಾ ಹೇಳಿದ್ದು, ನಾನು ಶಹಾಪುರ ಸಕರ್ಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿದ್ದ ತನ್ನ ಗಂಡನಿಗೆ ನೋಡಲಾಗಿ ಮೇಲ್ಕಾಣಿಸಿದಂತೆ ಗಾಯಗಳಾಗಿ ಮೃತಪಟ್ಟಿದ್ದರು. ದಿನಾಂಕ: 08/03/2021 ರಂದು ರಾತ್ರಿ ಅಂದಾಜು 10.15 ಪಿ.ಎಂ ಇಂದ 10.40 ಪಿ.ಎಂ. ಮಧ್ಯದ ಅವಧಿಯಲ್ಲಿ ತನ್ನ ಗಂಡ ಪರಶುರಾಮ ಇವರು ತನ್ನ ಮೋಟರ ಸೈಕಲ್ ನಂ. ಕೆಎ-33 ವಿ-0104 ನೇದ್ದರಲ್ಲಿ ಬಹಿದರ್ೆಸೆಗೆಂದು ಮನೆಯಿಂದ ಹೋಗಿ ಮರಳಿ ಮುನಮುಟಗಿ ಕ್ರಾಸ್ ಕಡೆಗೆ ಬರುತ್ತಿದ್ದಾಗ ಹತ್ತಿಗುಡೂರ-ಹೈಯಾಳ(ಬಿ) ರಸ್ತೆಯಲ್ಲಿರುವ ಬಸಂತಪುರ ಹಳ್ಳದ ಹತ್ತಿರ ಹತ್ತಿಗುಡೂರ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸಿ ತನ್ನ್ನ ಗಂಡನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿದ್ದರಿಂದ ತನ್ನ ಗಂಡನು ಅಪಘಾತದಲ್ಲಿ ಭಾರಿ ರಕ್ತಗಾಯಗಳನ್ನು ಹೊಂದಿ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ಕಾರಣನಾದ ಅಪರಿಚಿತ ವಾಹನದ ಚಾಲಕನ ವಿರುದ್ದ ಸೂಕ್ತ ಕಾನುನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 50/2021 ಕಲಂ 279, 304(ಎ) ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ.:- ಗುನ್ನೆ ನಂ: 31/2021 ಕಲಂ 279, 337, 338 ಐಪಿಸಿ: ಇಂದು ದಿನಾಂಕ 09.03.2021 ರಂದು ಸಂಜೆ 4:00 ಗಂಟೆಯ ಸುಮಾರಿಗೆ ಗಾಯಾಳು ಅನಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕಬ್ಬಿನ ಹಾಲನ್ನು ಕುಡಿದು ಬಸ್ ನಿಲ್ದಾಣ ಕಡೆಯಿಂದ ಊರಿನ ಒಳಗೆ ಹೋಗುವ ಸಲುವಾಗಿ ನಾರಾಯಣಪೇಠ-ಯಾದಗಿರಿ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಕ್ರೂಶರ ವಾಹನ ಸಂಖ್ಯೆ ಕೆಎ-33-ಎ-4144 ನೇದ್ದರ ಚಾಲಕನಾದ ಆರೋಪಿತನು ನಾರಾಯಣಪೇಠ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಗಾಯಾಳು ಬಾಬುಗೆ ಅಪಘಾತಪಡಿಸಿ ಭಾರಿ ಹಾಗೂ ಸಾಧಾ ಸ್ವರೂಪದ ಗಾಯಗೊಳಿಸಿದ್ದು ಅದನ್ನು ನೋಡಿದ ಸ್ಥಳದಲ್ಲಿದ್ದ ಫಿರ್ಯಾದಿ ಹಾಗೂ ಇತರರು ಕೂಡಿಕೊಂಡು ಗಾಯಾಳುವನ್ನು ಚಿಕಿತ್ಸೆ ಕುರಿತು ನಾರಾಯಣಪೇಠ ಸರಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಂತರ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ, ರಾಯಚೂರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ನಂತರ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 31/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:- 33/2021 ಕಲಂ: 504, 341, 323, 506 ಐಪಿಸಿ: ಇಂದು ದಿನಾಂಕ: 09/03/2021 ರಂದು ಮದ್ಯಾಹ್ನ 6-30 ಪಿಎಮ್ ಕ್ಕೆ ಶ್ರೀ ಹಣಮಂತ ತಂದೆ ಸಿದ್ದಯ್ಯ ಊಲ್ಟಿ, ವ:55, ಜಾ:ಬೇಡರು, ಉ:ಒಕ್ಕಲುತನ ಸಾ:ಕಾಡಂಗೇರಾ(ಬಿ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಮಗ ಸಿದ್ದಪ್ಪ ತಂದೆ ಹಣಮಂತ ಊಲ್ಟಿ ಈತನು ಟಂ-ಟಂ ಆಟೋ ಚಲಾಯಿಸಿಕೊಂಡು ವಾಸ ಇರುತ್ತಾನೆ. ಸದರಿ ಟಂ-ಟಂ ಆಟೋವನ್ನು ನಮ್ಮೂರಿನಿಂದ-ಶಹಾಪೂರಕ್ಕೆ ಚಲಾಯಿಸಿಕೊಂಡು ಇರುತ್ತಾನೆ. ದಿನಾಂಕ: 04/03/2021 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ನಮ್ಮೂರ ಮರೆಪ್ಪ ತಂದೆ ಸಿದ್ದರಾಮಪ್ಪ ಬೆಂಡೆಬಂಬಳ್ಳಿ ಈತನು ಮನೆಗೆ ಹತ್ತಿರದಿಂದ ನಡೆದುಕೊಂಡು ಬರುತ್ತಿದ್ದಾಗ ಸದರಿ ಮೆರೇಪ್ಪ ಈತನು ಬಂದು ನನಗೆ ತಡೆದು ನಿಲ್ಲಿಸಿ ನಿನ್ನ ಮಗ ಸಿದ್ಯಾ ಎಲ್ಲಿ ಆನ ಆ ಬೋಸುಡಿ ಮಗ ನಮಗೆ ಇವತ್ತು ಶಹಾಪೂರದಲ್ಲಿ ತನ್ನ ಟಂ-ಟಂ ಆಟೋದಲ್ಲಿ ಕರೆದುಕೊಂಡು ಬಾ ಎಂದರೆ ಟಂ-ಟಂ ದಿಂದ ಕೆಳಗೆ ಇಳಿಸಿರುತ್ತಾನೆ. ಎಂದು ಅವ್ಯಾಚ ಬೈಯುತ್ತಿದಾಗ ಜಗಳದ ಸಪ್ಪಳ ಕೇಳಿ ಅಲ್ಲಿಗೆ ಬಂದ ನನ್ನ ಮಗ ಸಿದ್ದಪ್ಪನಿಗೆ ಇದೇ ಬೋಸಡಿ ಮಗ ಇಲ್ಲಿ ಅನಾ ನೋಡು ಎಂದು ಜಗಳ ತೆಗೆದು ನನ್ನ ಮಗನಿಗೆ ಎದೆ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಇದ್ದ ದೇವಮ್ಮ ಗಂಡ ಬಸಪ್ಪ ಮತ್ತು ಶರಣಪ್ಪ ತಂದೆ ಬಸಪ್ಪ ಊಲ್ಟಿ ಇವರು ಬಂದು ಬಿಡಿಸಿದಾಗ ಹೊಡೆಯವುದು ಬಿಟ್ಟ ಅವನು ಇವತ್ತು ಉಳಿದಿ ಸೂಳೇ ಮಗ ಇನ್ನೋಮ್ಮೆ ಸಿಕ್ಕರೇ ನಿನಗೆ ಖಲಾಸ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ವಿನಾಕಾರಣ ಟಂ-ಟಂ ಆಟೋದಲ್ಲಿ ಕೂಡಿಸಿ ಕೆಳಗೆ ಇಳಿಸಿರುತಾನೆ ಎಂದು ಜಗಳ ತೆಗೆದು ತಡೆದು ನಿಲ್ಲಿಸಿ ಕೈಯಿಂದ ಹೊಡದು ಅವ್ಯಾಚ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2021 ಕಲಂ: 504, 341, 323, 506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ ಯಾದಗಿರಿ:- 09/2021 ಕಲಂ. 174 ಸಿಆರ್ಪಿಸಿ: ಇಂದು ದಿನಾಂಕ:09/03/2021 ರಂದು 1 .ಎಮ್ ಕ್ಕೆ ಪಿಯರ್ಾಧಿದಾರರಾದ ಶ್ರೀಮತಿ ಮೋನಮ್ಮ ಗಂಡ ಸಣ್ಣೆಪ್ಪ ಸೊನ್ನದ ವ|| 35 ವರ್ಷ ಜಾ|| ಕಬ್ಬಲಿಗ ಉ|| ಹೊಲ ಮನೆಗೆಲಸ ಸಾ|| ತಡಿಬಿಡಿ ತಾ|| ವಡಗೇರಾ ಜಿ||ಯಾದಗಿರಿ ಇವರ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇರುತ್ತಾನೆ. ನನ್ನ ಹಿರಿಯ ಮಗಳಾದ ಲಕ್ಷ್ಮಿ@ಸುಮಿತ್ರಾ ತಂದೆ ಸಣ್ಣೆಪ್ಪ ಸೊನ್ನದ ವ|| 16 ವರ್ಷ ಇವಳು ಸುಮಾರು 3 ವರ್ಷಗಳ ಹಿಂದೆ ನನ್ನ ತವರು ಮನೆಯಾದ ಸುರಪೂರ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಬಂದಿರುತ್ತಾಳೆ. ಇವಳಿಗೆ ಸುಮಾರು 2-3 ವರ್ಷಗಳಿಂದ ಹೊಟ್ಟೆ ನೋವು ಇದ್ದು ಇವಳಿಗೆ ಖಾಸಗಿ ಆಸ್ಪತ್ರೆ ಮತ್ತು ಗಿಡಮೂಲಿಕೆ ಔಷದಗಳು ಹಲವಾರು ಕಡೆ ತೋರಿಸದರು ಕೂಡಾ ಅವಳ ಹೊಟ್ಟೆ ನೋವು ಕಡಿಮೆ ಆಗಿರುವದಿಲ್ಲ. ಅವಳಿಗೆ ಆಗಾಗ ಹೊಟ್ಟೆ ನೋವು ಬಂದರೆ ಹೊಟ್ಟೆ ಹಿಡಿದುಕೊಂಡು ಒದ್ದಾಡುತ್ತಾ ಅಳುತ್ತಿದ್ದಳು ಆಗ ನಾವು ಖಾಸಗಿ ಆಸ್ಪತ್ರೆಗೆ ತೋರಿಸಿದ ಔಷದಗಳು ಕೊಟ್ಟಾಗ ಸ್ವಲ್ಪ ಆರಾಗಿರುತ್ತಿದ್ದಳು. ನಾವು ಹೊಲಕ್ಕೆ ಕೆಲಸಕ್ಕೆ ಹೋದಾಗ ಒಬ್ಬಳೆ ಇದ್ದಾಗ ಹೊಟ್ಟು ನೋವು ಬಂದಾಗ ಅಳುತ್ತಾ ಹೊಟ್ಟೆ ಬಹಳ ನೋವು ಆಗುತ್ತಿದೆ ನನಗೆ ಸಾಯಂಗ ಆಗುತ್ತಿದೆ ಅಂತ ಹೇಳುತ್ತಿದ್ದಳು. ನಾವು ಹೊಲದಿಂದ ಬಂದಾಗ ನಮ್ಮ ಮುಂದೆ ಹೇಳಿದಾಗ ನಾವು ನಿನಗೆ ಸರಿಯಾದ ಆಸ್ಪತ್ರೆಗೆ ತೋರಿಸಿ ನಿನ್ನ ಹೊಟ್ಟೆ ನೋವು ಕಡಿಮೇ ಮಾಡಿಸುತ್ತೆವೆ ಅಂತ ದೈರ್ಯ ಹೇಳುತ್ತಿದ್ದೆವು. ಆದರೆ ಇಂದು ದಿನಾಂಕ:09/03/2021 ರಂದು ಮುಂಜಾನೆ 10:30 ಗಂಟೆಗೆ ನನ್ನ ಮಗಳು ಲಕ್ಷ್ಮಿ@ ಸುಮಿತ್ರಾ ಇವಳು ವಿಪರಿತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ನೋವು ತಾಳಲಾರದೇ ಮನೆಯಲ್ಲಿದ್ದ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಔಷದ ಸೇವಿಸಿ ಒದ್ದಾಡುತ್ತಿದ್ದಳು ಚಿರುವ ಶಬ್ದ ಕೇಳಿ ನಾನು ಗಾಬರಿಯಾಗಿ ನೋಡಿ ಯಾಕೆ ಏನಾಗಿದೆ ಎಂದು ವಿಚಾರಿಸಿದಾಗ ರಾತ್ರಿಯಿಂದ ಹೊಟ್ಟೆ ನೋವು ಇದ್ದು. ಹೊಟ್ಟೆ ನೋವು ತಾಳಲಾರದೆ ನಾನು ಬೆಳೆಗೆ ಹೊಡೆಯುವ ಕ್ರೀಮಿನಾಕ ಔಷದ ಸೇವಿಸಿರುತ್ತೆನೆ ಅಂತ ಹೇಳಿದಾಗ. ಮನೆಯಲ್ಲಿದ್ದ ನಾನು, ನನ್ನ ಅಣ್ಣ ಮರೆಪ್ಪ ತಂದೆ ಮರೆಪ್ಪ ಜಾಲಗಾರ, ನನ್ನ ತಾಯಿ ಮಲ್ಲಮ್ಮ, ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಸಕರ್ಾರಿ ಆಸ್ಪತ್ರೆ ಸುರಪೂರ ತಂದೆ ಸೇರಿಕೆ ಮಾಡಿದ್ದು, ಉಪಚಾರ ಪಡೆಯುತ್ತಾ 12:10 ಪಿ.ಎಂ ಕ್ಕೆ ಮೃತ ಪಟ್ಟಿರುತ್ತಾಳೆ ಅಂತಾ ವೈದ್ಯಾದಿಕಾರಿಗಳು ತಿಳಿಸಿರುತ್ತಾರೆ. ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವದಿಲ್ಲ ಅಂತ ಹೇಳಿಕೆ ನೀಡಿದ್ದು ನಿಜ ಇರುತ್ತದೆ. ಅಂತ ಹೇಳಿಕೆ ನೀಡದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.09/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೆಕಲ್ಲ ಗ್ರಾಮೀಣ ಪೊಲೀಸ್ ಠಾಣೆ:- ಗುನ್ನೆ ನಂ.17/2021 ಕಲಂ: 143, 323, 504, 506, 341, 498(ಎ) ಸಂಗಡ 149 ಐ.ಪಿ.ಸಿ: ಕೇಸಿನ ಸಂಕ್ಷಿಪ್ತ ಸಾರಾಂಶ:- ಇಂದು ದಿನಾಂಕ :09/03/2021 ರಂದು ಮಧ್ಯಾಹ್ನ 1:15 ಗಂಟೆಗೆ ಪಿಯರ್ಾದಿ ಶ್ರೀಮತಿ ಯಲ್ಲಮ್ಮ ಗಂಡ ನಿಂಗಪ್ಪ ಮ್ಯಾಗಿನಮನಿ ವ-25 ವರ್ಷ ಉ-ಮನೆಗೆಲಸ ಜಾತಿ-ಹಿಂದೂ ಬೇಡರ ಸಾ-ಗೆದ್ದಲಮರಿ ತಾ-ಹುಣಸಗಿ ಜಿ||ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾನು, ಸಂಗಮ್ಮ,ಶಶಿಕಲಾ,ಶಿಲ್ಪಾ ಅಂತ ಹೆಸರಿನ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಹಾಗೂ ರಮೇಶ ಅಂತ ಹೆಸರಿನ ಒಬ್ಬ ಗಂಡು ಮಗ ಇದ್ದು, ಈಗ 5 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ನನಗೆ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ನಿಂಗಪ್ಪ ತಂದೆ ಹಣಮಪ್ಪ ಮ್ಯಾಗಿನಮನಿ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಮದುವೆಯು ನಮ್ಮ ಧರ್ಮದ ಸಂಪ್ರದಾಯದಂತೆ ಕಕ್ಕೇರಾ ಪಟ್ಟಣದ ಸೋಮನಾಥ ದೇವರ ದೇವಸ್ಥಾನದಲ್ಲಿ ಆಗಿದ್ದು, ಮದುವೆ ಕಾಲಕ್ಕೆ ನಮ್ಮ ತಂದೆ ತಾಯಿ ಹಾಗೂ ನಮ್ಮೂರ ಹಣಮಗೌಡ ತಂದೆ ಭೀಮನಗೌಡ ಮಾಲಿಪಾಟೀಲ, ಬಸಪ್ಪ ತಂದೆ ಹುಲಗಪ್ಪ ಮ್ಯಾಗಿನಮನಿ, ರಾಮಪ್ಪ ತಂದೆ ಸಂಜೀವಪ್ಪ ಕಡದರಗಡ್ಡಿ ಇವರು ಹಾಗೂ ಇತರರು ಮತ್ತು ಗೆದ್ದಲಮರಿ ಗ್ರಾಮದ ನನ್ನ ಅತ್ತೆ ಮಾವ ಹಾಗೂ ಅವರ ಸಂಬಂಧಿಕರ ಸಮಕ್ಷಮದಲ್ಲಿ ಆಗಿದ್ದು, ಮದುವೆಯಾದ ನಂತರ ನಾನು ತವರು ಮನೆಯಿಂದ ಗಂಡನ ಮನೆಗೆ ನಡೆಯಲಿಕ್ಕೆ ಬಂದಿದ್ದು ಎರಡು-ಮೂರು ವರ್ಷಗಳವರೆಗೆ ನನ್ನ ಗಂಡನ ಮನೆಯಲ್ಲಿ ನನಗೆ ನನ್ನ ಗಂಡ ಅತ್ತೆ ಮಾನಮ್ಮ ಮಾವ ಹಣಮಪ್ಪ ಹಾಗೂ ನನ್ನ ಗಂಡನ ಅಣ್ಣಂದಿರಾದ ಸೋಮಪ್ಪ,ಹುಲಗಪ್ಪ ಮತ್ತು ಮೈದುನನಾದ ದೇವಪ್ಪ ರವರು ಒಳ್ಳೆಯ ರೀತಿಯಿಂದ ನಡೆಸಿಕೊಂಡಿದ್ದು, ನಮ್ಮ ದಾಂಪತ್ಯದಿಂದ ನನಗೆ ರಾಮೇಶ ಹಾಗೂ ನಿಖಿಲ್ ಅಂತ ಇಬ್ಬರು ಗಂಡು ಮಕ್ಕಳು ಜನಿಸಿದ್ದು ನಾನು ಈಗ ಸದ್ಯ 5 ತಿಂಗಳ ಗಭರ್ಿಣಿಯಿದ್ದು ನಂತರ ಈಗ ಸುಮಾರು 2 ವರ್ಷಗಳಿಂದ ನನ್ನ ಗಂಡನಾದ ನಿಂಗಣ್ಣನು ತನ್ನ ತಂದೆ,ತಾಯಿ,ಅಣ್ಣಂದಿರಾದ ಸೋಮಪ್ಪ,ಹುಲಗಪ್ಪ ಹಾಗೂ ತನ್ನ ತಮ್ಮನಾದ ದೇವಪ್ಪ ಇವರ ಮಾತನ್ನು ಕೇಳಿ ನನಗೆ ವಿನಾಕಾರಣ ಬೈಯುವದು ಹೊಡೆಬಡೆ ಮಾಡುವದು ಮತ್ತು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ಸೂಳೆ ನೀನು ನನಗೆ ಎಷ್ಟು ದಿವಸಗಳಿಂದ ನನ್ನ ಪಾಲಿಗೆ ಮುಲಾಗಿದ್ದಿ ಅಂತ ಬೈಯುವದು ಹೀಯಾಳಿಸುವದು ಮಾಡುತ್ತಾ ಬಂದಿದ್ದು ಆದರೂ ಕೂಡಾ ನಾನು ಇಂದಲ್ಲ ನಾಳೆ ನನ್ನ ಗಂಡನು ಸರಿ ಹೊಂದುತ್ತಾನೆ ನನ್ನ ಸಂಸಾರದಲ್ಲಿ ಒಳ್ಳೆಯದಾಗುತ್ತದೆ ಅಂತ ತಿಳಿದುಕೊಂಡು ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸದೆ ತಾಳಿಕೊಂಡು ಬಂದಿದ್ದು ಇದ್ದು, ಈಗ 5-6 ತಿಂಗಳುಗಳಿಂದ ಮತ್ತೆ ನನಗೆ ನನ್ನ ಗಂಡನು ಅತಿಯಾಗಿ ತನ್ನ ತಂದೆತಾಯಿ ಅಣ್ಣ ತಮ್ಮಂದಿರ ಮಾತನ್ನು ಕೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡ ಹತ್ತಿದ್ದು ಆಗ ನಾನು ನನ್ನ ತಂದೆ ತಾಯಿಯವರಿಗೆ ಈ ವಿಷಯವನ್ನುತಿಳಿಸಿದಾಗ ನನ್ನ ತಂದೆ ಶಿವರಾಯ ತಾಯಿ ಮುದಕಮ್ಮ ರವರು ಹಾಗೂ ನನ್ನ ತವರೂರು ಕಡದರಗಡ್ಡಿಯ ಹಣಮಗೌಡ ಮಾಲಿಪಾಟೀಲ, ಬಸಪ್ಪ ಮ್ಯಾಗಿನಮನಿ, ರಾಮಪ್ಪ ಕಡದರಗಡ್ಡಿ ರವರಿಗೆ ಕರೆದುಕೊಂಡು ನನ್ನ ಗಂಡನ ಮನೆಗೆ ಬಂದು ಗೆದ್ದಲಮರಿ ಗ್ರಾಮದ ಆದಪ್ಪ ಮ್ಯಾಗಿನಮನಿ, ಅಮರಪ್ಪ ಮ್ಯಾಗಿನಮನಿ, ತಿರುಪತಿ ಹಡಪದ ರವರಿಗೆ ಕರೆಯಿಸಿ ಇವರ ಸಮಕ್ಷಮದಲ್ಲಿ ನನ್ನ ಗಂಡನಿಗೆ ನಮ್ಮ ಅತ್ತೆ ಮಾವ ಹಾಗೂ ನನ್ನ ಗಂಡನ ಅಣ್ಣಂದಿರಾದ ಸೋಮಪ್ಪ,ಹುಲಗಪ್ಪ ಹಾಗೂ ಮೈದುನನಾದ ದೇವಪ್ಪನಿಗೆ ಬುದ್ದಿಮಾತು ಹೇಳಿ ನನ್ನೊಂದಿಗೆ ಸರಿಯಾಗಿ ಇರುವಂತೆ ತಿಳುವಳಿಕೆ ನೀಡಿ ಹೋಗಿದ್ದು ನಂತರ 15-20 ದಿನ ಎಲ್ಲರೂ ನನಗೆ ಚೆನ್ನಾಗಿ ನೋಡಿಕೊಂಡಿದ್ದು ಮತ್ತೆ ಅವರೆಲ್ಲರೂ ನನಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುವದನ್ನು ಮುಂದುವರೆಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ 22.02.2021 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ನಾನು ಗೆದ್ದಲಮರಿಯ ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನಾದ ನಿಂಗಪ್ಪ ತಂದೆ ಹಣಮಪ್ಪ ಮ್ಯಾಗಿನಮನಿ ವ-30 ವರ್ಷ ಇತನು ತನ್ನ ತಂದೆ ಹಣಮಪ್ಪ ತಾಯಿ ಮಾನಮ್ಮ ಹಾಗೂ ತನ್ನ ಅಣ್ಣಂದಿರಾದ ಸೋಮಪ್ಪ, ಹುಲಗಪ್ಪ ಮತ್ತು ತನ್ನ ತಮ್ಮನಾದ ದೇವಪ್ಪ ಇವರ ಮಾತನ್ನು ಕೇಳಿ ನನಗೆ ಏ ಸೂಳೆ ನಾವು ನಿನಗೆ ಎಷ್ಟು ಬೈದರು ಮತ್ತು ಹೊಡೆಬಡೆ ಮಾಡಿದರೂ ತವರು ಮನೆಗೆ ಹೋಗದೆ ನಾಯಿ ಬಿದ್ದ ಹಾಗೆ ನಮ್ಮ ಮನೆಯಲ್ಲಿಯೇ ಉಳಿದಿದಿ ರಂಡಿ, ಬೊಸಡಿ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಅಂದವರೇ ನನ್ನ ಗಂಡ ನಿಂಗಪ್ಪನು ನನಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿದ್ದು ಹಾಗೂ ನಾನು ನೆಲಕ್ಕೆ ಬಿದ್ದಾಗ ನನ್ನ ಅತ್ತೆ ಮಾನಮ್ಮಳು ನನ್ನ ಎಡಗೈ ಮುಂಗೈ ಮೇಲೆ ತನ್ನ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿ ಕೈಯಿಂದ ಎಡ ಕಪಾಳದ ಮೇಲೆ ಹೊಡೆದಿದ್ದು ಆಗ ನಾನು ಎದ್ದು ನನ್ನ ತವರು ಮನೆಗೆ ಹೊದರಾಯಿತು ಅಂತ ಮನೆಯ ಮುಂದೆ ಬಂದಾಗ ಉಳಿದವರು ನನಗೆ ತಡೆದು ನಿಲ್ಲಿಸಿ ಈ ಸೂಳಿದು ಸೊಕ್ಕು ಬಾಳ ಆಗಿದೆ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಾಳೆ ಇವಳು ಇನ್ನೊಮ್ಮೆ ಸಿಕ್ಕಾಗ ಜೀವಂತ ಬಿಡುವದು ಬೇಡ ಅಂತ ಜೀವದ ಬೆದರಿಕೆ ಹಾಕಿ ಬಾಯಿಗೆ ಬಂದ ಹಾಗೆ ಒದರಾಡ ಹತ್ತಿದ್ದು ಆಗ ನಾನು ನನಗೆ ಉಳಿಸಿರಪ್ಪೊ ಅಂತ ಚೀರಾಡಲು ಆಗ ನಮ್ಮ ಮನೆಯ ಪಕ್ಕದ ಮನೆಯವರಾದ ಆದಪ್ಪ ಮ್ಯಾಗಿನಮನಿ, ಅಮರಪ್ಪ ಮ್ಯಾಗಿನಮನಿ ಮತ್ತು ತಿರುಪತಿ ಹಡಪದ ರವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು ನಂತರ ನನ್ನ ಗಂಡನು ನನಗೆ ಹೊಟ್ಟೆಯ ಮೇಲೆ ಒದ್ದಿದ್ದರಿಂದ ನಾನು ಸದ್ಯ ಗಭರ್ಿಣಿ ಇದ್ದುದರಿಂದ ನನಗೆ ಬಹಳ ತ್ರಾಸ ಆಗುತ್ತಿದ್ದರಿಂದ ನೋಡಿ ಜಗಳ ಬಿಡಿಸಿದ ಆದಪ್ಪ ಮ್ಯಾಗಿನಮನಿ, ಅಮರಪ್ಪ ಮ್ಯಾಗಿನಮನಿ ಮತ್ತು ತಿರುಪತಿ ಹಡಪದ ರವರು ನನ್ನ ಗಂಡನಿಗೆ ನನ್ನನ್ನು ದವಾಖಾನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನನ್ನ ಗಂಡನು ನನಗೆ ಆ ದಿನ ತಾಳಿಕೋಟಿಯ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ಅದೇ ದಿನ ನನಗೆ ನನ್ನ ತವರೂರಾದ ಕಡದರಗಡ್ಡಿಗೆ ಕರೆದುಕೊಂಡು ಹೋಗಿ ತವರು ಮನೆಗೆ ಬಿಟ್ಟಿದ್ದು ನಾನು ಅಂದಿನಿಂದ ನನ್ನ ತವರು ಮನೆಯಲ್ಲಿಯೇ ಇದ್ದು ಇಲ್ಲಿಯವರೆಗೂ ನನ್ನ ಗಂಡ ಮತ್ತು ಅತ್ತೆ ಮಾವ ಮೈದುನರು ಯಾರೂ ನನ್ನ ತವರೂರಿಗೆ ಬಂದು ನನಗೆ ಗಂಡನ ಮನೆಗೆ ಕರೆದುಕೊಂಡು ಹೋಗಿರುವದಿಲ್ಲ. ನಾನು ಇಂದಿನವರೆಗೆ ನನ್ನ ತಂದೆ ತಾಯಿ ಮತ್ತು ಸಂಬಂಧಿಕರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನನಗೆ ಈ ಘಟನೆಯಲ್ಲಿ ಅಷ್ಟೆನು ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ ಆದಕಾರಣ ನನಗೆ ವಿನಾಕಾರಣ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ನನ್ನ ಗಂಡ ನಿಂಗಪ್ಪ ಅತ್ತಿ ಮಾನಮ್ಮ, ಮಾವ ಹಣಮಪ್ಪ ಹಾಗೂ ನನ್ನ ಗಂಡನ ಅಣ್ಣಂದಿರಾದ ಸೋಮಪ್ಪ, ಹುಲಗಪ್ಪ ಮತ್ತು ನನ್ನ ಗಂಡನ ತಮ್ಮನಾದ ದೇವಪ್ಪ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಲು ವಿನಂತಿ ಅಂತಾ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.17/2021 ಕಲಂ: 143, 323, 504, 506, 341, 498(ಎ) ಸಂಗಡ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:- ಯು.ಡಿ.ಆರ್ ನಂ 09/2021 ಕಲಂ 174 ಸಿ.ಆರ್.ಪಿ.ಸಿ: ಇಂದು ದಿನಾಂಕ 09/03/2021 ರಂದು 8:30 ಎ.ಎಂ ಕ್ಕೆ ಪಿರ್ಯಾದಿ ಶ್ರೀ ಮತಿ ದೇವಕೇಮ್ಮಾ ಗಂಡ ದೋಡ್ಡ ಭೀಮರಾಯ @ ಭೀಮರಾಯ ವ|| 60 ವರ್ಷ ಉ|| ಕೂಲಿ ಜಾ|| ಹಿಂದೂ ಕಬ್ಬಲಿಗ ಸಾ|| ಹಳಿಸಗರ ಇದ್ದು, ನಮಗೆ 4 ಜನ ಮಕ್ಕಳಿದ್ದು 1] ಶರಣಬಸವ ವ|| 36 ವರ್ಷ, 2] ಬಸವರಾಜ ವ|| 33 ವರ್ಷ, 3] ವೆಂಕೋಬಾ ವ|| 30 ವರ್ಷ, 4] ಮಲರಡ್ಡಿ ವ|| 27 ವರ್ಷ, ಮಕ್ಕಳಿದ್ದು ಮತ್ತು ನಮ್ಮ ಮಾವನವರು ಮೂರು ಜನ ಅಣ್ಣ ತಮ್ಮಂದಿಯರು ಎಲ್ಲರೂ ಕೂಡಿ ಇದ್ದು, ತಮ್ಮ ಕುಟಂಬ ಜೋತೆಯಲ್ಲಿ ಸಂಸಾರ ಮಾಡುತ್ತಿದ್ದು, ಹಳಿಸಗರ ಸೀಮಾಂತರದಲ್ಲಿ ನಮಗೆ ಬಂದ ಪಿತ್ರಾಜಿತ ಆಸ್ತಿಯಲ್ಲಿ ಸವರ್ೆ ನಂ. 280 1/ಎ, 1 ಎಕರೆ 37 ಗುಂಟಿ, 280 1/ಸಿ 18 ಗುಂಟಿ ಹೋಲದಲ್ಲಿ ಒಕ್ಕಲುತನ ಮಾಡಿಕೊಂಡು ಉಪ ಜೀವಿಸುತ್ತಿದ್ದು, ಹೀಗೆ ಎರಡು-ಮೂರು ವರ್ಷಗಳಿಂದ ಹೋಲದ ಲಾಗ ಲಿಗಡೆಗೆ ಮತ್ತು ಸಂಸಾರ ಅಡಚಣೆ ಗೋಸ್ಕಾರ ನಮ್ಮ ಮೈದುನ ಭೀಮರಾಯ ತಂದೆ ಮರೇಣ್ಣ ಇವರ ಹೆಸರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ನಿಯಮಿತ ಹಳಿಸಗರನಲ್ಲಿ 26,000/- ರೂ. ಸಾಲ ತೆಗಿದುಕೊಂಡಿದ್ದು, ಊರಲ್ಲಿ ಕೈಗಡ ಸಾಲ ಅಂತಾ 5,00,000/- ರೂ. ಸಾಲ ತೆಗಿದುಕೊಂಡಿದ್ದು, ಅದೆ ಸಾಲದ ವಿಚಾರವಾಗಿ ನನ್ನ ಮಗ ವೆಕೊಂಬಾ ಈತನು ದಿನಾ ಚಿಂತೆಮಾಡುತ್ತಾ ಇದ್ದು, ನಾವೂ ಮತ್ತು ಇವರ ತಂದೆ ದೋಡ್ಡ ಭೀಮರಾಯ ಏಕೆ ? ಚಿಂತೆ ಮಾಡುತ್ತಿಯಾ ಎಲ್ಲರೂ ಕೂಡಿ ದುಡಿದ ಸಾಲ ತೀರಿಸದರಾಯಿತು ಎಂದು ಹೇಳಿ ಸಮದಾನ ಮಾಡುತ್ತಿದ್ದೆವು. ಹೀಗಿದ್ದು ದಿನಾಂಕ 08/03/2021 ರಂದು 8:30 ಪಿ.ಎಂ ಕ್ಕೆ ನನ್ನ ಮಗ ವೆಂಕೋಬಾ ಈತನು ಬಾಹಳ ಚಿಂತೆಯಲ್ಲಿದ್ದ ನಾನು ಏಕೆ ಚಿಂತೆಮಾಡುತ್ತಾ ಇದ್ದಿ ಅಂತಾ ಕೇಳಿದ್ದು, ಏನು ಮಾತನಾಡದೆ, ನಾನು ಹೋಲಕ್ಕೆ ಹೋಗಿ ಬೆಳಗಳಿಗೆ ನೀರು ಬಿಟ್ಟು ಬರುತ್ತೆನೆ ಅಂತಾ ಹೇಳಿ ಹೋಗಿದ್ದು, ನಾವೂ ಊಟಾ ಮಾಡಿ ಮಲಗಿದ್ದು ಇರುತ್ತದೆ. ಇಂದು ಮುಂಜಾನೆ ನಮ್ಮ ಮೈದುನನ ಮಗ ಮಲರಡ್ಡಿ ಈತನು 6:45 ಎ.ಎಂ ಕ್ಕೆ ನನ್ನ ಮೈದುನ ಪೋನಿಗೆ ಪೋನ ಮಾಡಿ ನಾನು ಇಂದು 6:30 ಎ.ಎಂ ಕ್ಕೆ ಹೋಲಕ್ಕೆ ಬಂದು ನೋಡಲಾಗಿ ನಮ್ಮ ತಮ್ಮ ವೆಂಕೋಬಾ ಈತನು ವಿಷ ಸೇವನೆ ಮಾಡಿ ಮೃತ ಪಟ್ಟಿದ್ದಾನೆ ಅಂತಾ ತಿಳಿಸಿದ್ದು, ನಾನು ಮತ್ತು ನನ್ನ ಗಂಡ ದೋಡ್ಡ ಭೀಮರಾಯ @ ಭೀಮರಾಯ, ನಮ್ಮ ಮೈದುನ ಭೀಮರಾಯ, ಗೋಪಾಲ ತಂದೆ ಬಸವರಾಜ, ಬಸವರಾಜ ತಂದೆ ಶಂಕ್ರಪ್ಪ ರತ್ತಾಳ, ನಮ್ಮ ಮೈದುನ ಗೋವಿಂದರಾಜ ಎಲ್ಲರೂ ಕೂಡಿ ಹೋಲಕ್ಕೆ ಹೋಗಿ ನೋಡಲಾಗಿ ನನ್ನ ಮಗ ವೆಂಕೋಬಾ ತಂದೆ ದೋಡ್ಡ ಭೀಮರಾಯ ಸುರಪೂರ ಈತನು ಸಾಲ ಬಾದೆಯಿಂದ ದಿನಾಂಕ 08/03/2021 ರಿಂದ 08:30 ಪಿ.ಎಂ ದಿಂದ 09/03/2021 6:45 ಎ.ಎಂ ದೋಳಗೆ ಬೇಳೆಗಳಿಗೆ ಹೋಡೆಯಲು ತಂದಿಟಿದ್ದ ಕ್ರೀಮಿನಾಶಕ ಎಣ್ಣೆ ಸೇವನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಕಾರಣ ನನ್ನ ಮಗ ವೆಂಕೋಬಾ ತಂದೆ ಭೀಮರಾಯ ತಂದೆ ಭೀಮಣ್ಣ ವ|| 30 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಹಳಿಸಗರ ಶಹಾಪೂರ ಇತನು ದಿನಾಂಕ 08/03/2021 08:30 ಪಿ.ಎಂ ದಿಂದ 09/03/2021 ರ ಮದ್ಯದೊಳಗೆ ಸಾಲಬಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕ್ರೀಮಿನಶಕ ಎಣ್ಣೆ ಸೇವನೆ ಮಾಡಿ ಮೃತ ಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಯ ವಗೇರಾ ಇರುವದಿಲ್ಲಾ. ಈ ಬಗ್ಗೆ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 33/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂಬರ 51/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 09/03/2021 ರಂದು, ಮುಂಜಾನೆ 10-45 -ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದಿ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 09/03/2021 ರಂದು, ಮುಂಜಾನೆ 10-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಕನ್ಯಾಕೊಳ್ಳುರ ಅಗಸಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 12/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ಮುಂಜಾನೆ 10-30 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 51/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 1060 ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 10-03-2021 11:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080