ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/02/2021

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 03/2021 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 10/02/2021 ರಂದು 9-00 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಮಂಜುಳಾ ಗಂಡ ಮಾನಪ್ಪ ಕಕ್ಕೇರಿ ಸಾ|| ಚೆನ್ನೂರ (ಕೆ) ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ಈಗ ಸುಮಾರು 03 ವರ್ಷಗಳ ಹಿಂದ ನನ್ನ ಗಂಡನಾದ ಮಾನಪ್ಪ ಕಕ್ಕೇರಿ ಇವರು ಮರಣ ಹೊಂದಿದ್ದರಿಂದ ನಾನು ನನ್ನ ಮಕ್ಕಳಾದ 1) ಸುಮಲತಾ ಗಂಡ ತಿಮ್ಮಣ್ಣ ತಳವಾರ 2) ಪ್ರೀಯಾಂಕ ತಂದೆ ಮಾನಪ್ಪ ಕಕ್ಕೇರಿ 3) ಚಿದಾನಂದ ತಂದೆ ಮಾನಪ್ಪ ಕಕ್ಕೇರಿ 4) ಅನುಷಾ ತಂದೆ ಮಾನಪ್ಪ ಕಕ್ಕೇರಿ ಇವರೊಂದಿಗೆ ನನ್ನ ತವರು ಊರಾದ ಚೆನ್ನೂರ (ಕೆ) ಗ್ರಾಮಕ್ಕೆ ಬಂದು ವಾಸವಾಗಿರುತ್ತೇನೆ. ಹೀಗಿದ್ದು ಈಗ ಒಂದು ವರ್ಷದ ಹಿಂದೆ ನನ್ನ ಹಿರಿಯ ಮಗಳಾದ ಸುಮಲತಾ ಗಂಡ ತಿಮ್ಮಣ್ಣ ತಳವಾರ ಇವಳಿಗೆ ನನ್ನ ಖಾಸಾ ತಮ್ಮನಾದ ತಿಮ್ಮಣ್ಣ ತಂದೆ ಹಣಮಂತ್ರಾಯ ತಳವಾರ ಇತನಿಗೆ ಕೊಟ್ಟು ಮದುವೆ ಮಾಡಿದ್ದೇನು. ನನ್ನ ತಮ್ಮ ಮತ್ತು ನನ್ನ ಮಗಳು ಇಬ್ಬರೂ ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದರು. ನನ್ನ ಮಗಳು ನನ್ನ ತಮ್ಮನೊಂದಿಗೆ ಸುಖವಾಗಿದ್ದಳು. ಹೀಗಿದ್ದು ದಿನಾಂಕ: 06/02/2021 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ನನ್ನ ಮಗಳು ಸುಮಲತಾ ಮತ್ತು ನನ್ನ ತಮ್ಮ ತಿಮ್ಮಣ್ಣ ಕೂಡಿ ಚೆನ್ನೂರ (ಕೆ) ಗ್ರಾಮ ಸೀಮಾಂತರದಲ್ಲಿರುವ ತಮ್ಮ ಹೊಲಕ್ಕೆ ಸೇಂಗಾ ಬೆಳೆಗೆ ಕ್ರಿಮಿನಾಶಕ ಔಷದ ಹೊಡೆಯಲು ಹೋಗಿದ್ದರು. ನಂತರ ನನ್ನ ತಮ್ಮ ತಿಮ್ಮಣ್ಣ ಈತನು ಸಾಯಂಕಾಲ 5-30 ಗಂಟೆ ಸುಮಾರಿಗೆ ತನ್ನ ಹೆಂಡತಿಗೆ ಮನೆಗೆ ಕರೆದುಕೊಂಡು ಬಂದು ತಿಳಿಸಿದ್ದೆನೆಂದರೆ, ' ಹೊಲದಲ್ಲಿ ಕ್ರಿಮಿನಾಶಕ ಔಷದ ಡ್ರಮ್ಮಿಗೆ ನೀರು ಹಾಕಿ ಕಲಿಸಿ ನಂತರ ಕ್ರಿಮಿನಾಶಕ ಎಣ್ಣಿ ಹಾಕಲು ಬಾಟಲ್ ಮುಚ್ಚಳಿಕೆ ಬಿಚ್ಚಲು ಹೋದಾಗ ಅದು ಬಿಚ್ಚದ ಕಾರಣ ಬಾಯಿಯಿಂದ ಬಿಚ್ಚುವಾಗ ಮೊದಲು ಅದರೊಳಗೆ ಇದ್ದ ಕ್ರಿಮಿನಾಶಕ ಔಷದ ಸುಮಲತಾ ಇವಳ ಬಾಯಿಯೊಳಗೆ ಹೋಗಿ ಅಸ್ವಸ್ಥಳಾಗಿದ್ದಾಳೆ ' ಅಂತಾ ತಿಳಿಸಿದ್ದು, ಆಗ ನಾನು ಗಾಬರಿಗೊಂಡಿದ್ದು, ನಾನು ಮತ್ತು ನನ್ನ ಅಕ್ಕಳಾದ ಮರೆಮ್ಮ ಗಂಡ ದೇವಿಂದ್ರಪ್ಪ ಗೌಡರ, ಹಾಗೂ ನನ್ನ ತಮ್ಮ ತಿಮ್ಮಣ್ಣ ಕೂಡಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ, ಅಲ್ಲಿಯ ವೈದ್ಯಾಧಿಕಾರಿಗಳ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರದಲ್ಲಿರುತ್ತಾ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ: 10/02/2021 ರಂದು 1-30 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾಳೆ. ನನ್ನ ಮಗಳು ತಮ್ಮ ಹೊಲದಲ್ಲಿ ಕ್ರಿಮಿನಾಶಕ ಔಷದ ಹೊಡೆಯಲು ಹೋಗಿ ಕ್ರಿಮಿನಾಶಕ ಔಷದ ಡಬ್ಬಿಯ ಮುಚ್ಚಳಿಕೆ ಬಿಚ್ಚಲು ಹೋದಾಗ ಆಕಸ್ಮಿಕವಾಗಿ ಮೊದಲು ಡಬ್ಬಿಯೊಳಗಿದ್ದ ಕ್ರಿಮಿನಾಶಕ ಔಷದವು ಬಾಯಿಯಿಂದ ಹೊಟ್ಟೆಯೊಳಗೆ ಹೋಗಿ ಅಸ್ವಸ್ಥಳಾಗಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು, ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್. ನಂ: 03/2021 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 12/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 10/02/2021 ರಂದು 09.25 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಶ್ರೀ ವೆಂಕಟೇಶ ಡಿ.ವಾಯ್.ಎಸ್.ಪಿ ಸುರಪೂರ ಉಪ ವಿಭಾಗ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 10/02/2021 ರಂದು ವನದುಗರ್ಾ ಗ್ರಾಮದ ಉಡುಪಿ ಹೊಟೆಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಹಣಮಂತ ತಂದೆ ಲಂಕಪ್ಪ ಪರಸನಳ್ಳಿ ವಯಾ:35 ಜಾ: ಬೇಡರ ಉ: ಒಕ್ಕಲುತನ ಸಾ:ವನದುಗರ್ಾ ತಾ: ಶಹಾಪೂರ ಜಿ: ಯಾದಗೀರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 07.50 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2730/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 38/2021 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:10/02/2021 ರಂದು 7:35 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸ.ತ ಫಿರ್ಯಾದಿ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 08 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 10-02-2021 ರಂದು 4-15 ಪಿ.ಎಮ್. ಸುಮಾರಿಗೆ ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಾತ್ಮಿ ಬಂದಿದ್ದೆನೆಂದರೆ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಗೇರಾ ಸೀಮಾಂತರದ ಇಚಲಹಳ್ಳದ ಹತ್ತಿರ ಕೆಲವು ಜನರು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ 1) ಶ್ರೀ ಮಂಜನಾಥ ಹೆಚ್ಸಿ-176 2) ಮನೋಹರ ಹೆಚ್ಸಿ-105 3) ಶ್ರೀ ಮಂಜುನಾಥ ಪಿಸಿ-271 4) ಶ್ರೀ ಮಾನಯ್ಯ ಸಿಪಿಸಿ-372 5) ಶ್ರೀ ವಿರೇಶ ಸಿಪಿಸಿ-374, 6) ಶ್ರೀ ದೇವಿಂದ್ರಪ್ಪ ಸಿಪಿಸಿ-184, 7) ಶ್ರೀ ಹುಸೇನಭಾಷಾ ಸಿಪಿಸಿ-27 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ನಾಗರಾಜ ತಂದೆ ಬಸಯ್ಯ ಪೊಲೀಸ್ ಪಾಟೀಲ್ ವಯಾ:24 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಶಖಾಪೂರ ತಾ:ಸುರಪುರ 2) ಶ್ರೀ ಪರಶುರಾಮ ತಂದೆ ಭೀಮಣ್ಣ ಗುಡ್ಡಾಕಾಯ ವಯಾ:26 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕುಂಬಾರಪೇಠ ತಾ:ಸುರಪೂರ ಇವರನ್ನು 4:45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರೊಂದಿಗೆ ಎಲ್ಲರೂ ಕೂಡಿ ಠಾಣೆಯಿಂದ 5 ಪಿ.ಎಮ್. ಕ್ಕೆ ಸರಕಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು 5:45 ಪಿ.ಎಮ್.ಕ್ಕೆ ಹಾಲಗೇರಾ ಸೀಮಾಂತರದ ಇಚಲಹಳ್ಳದ ಹತ್ತಿರೆ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ನಿಂತುಕೊಂಡು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟು ಅವುಗಳ ಮೇಲೆ ಪಂದ್ಯ ಆಡುತ್ತಾ ಜೂಜಾಟವಾಡುತ್ತಿದ್ದದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 5:50 ಪಿ.ಎಮ್.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 08 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಹಣಮಂತ ತಂದೆ ಮಲ್ಲಯ್ಯ ನಾಗುಂಡಿ ವಯಾ:33 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕನರ್ಾಳ ತಾ:ಸುರಪೂರ ಈತನ ಹತ್ತಿರ 550/- ನಗದು ಹಣ ಸಿಕ್ಕಿದ್ದು 2) ರಾಮಣ್ಣ ತಂದೆ ಹಣಮಯ್ಯ ಮುಸಲಿ ವಯಾ:55 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಹೇಮನೂರ ತಾ|| ಸುರಪುರ ಈತನ ಹತ್ತಿರ 500/- ನಗದು ಹಣ ಸಿಕ್ಕಿದ್ದು 3) ನಾಗಪ್ಪ ತಂದೆ ಹಣಮಂತ ದೊಡ್ಡಮನಿ ವಯಾ:31 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ಅಂಚೆಸೂಗೂರು ತಾ|| ದೇವದುರ್ಗ ಈತನ ಹತ್ತಿರ 570/- ನಗದು ಹಣ ಸಿಕ್ಕಿದ್ದು, 4) ಹಣಮಪ್ಪ ತಂದೆ ಭೀಮಪ್ಪ ಛಲವಾದಿ ವಯಾ:65 ವರ್ಷ ಜಾ:ಪರಿಶಿಷ್ಟ ಜಾತಿ ಉ:ಒಕ್ಕಲುತನ ಸಾ:ಅಂಚೆಸೂಗೂರು ತಾ|| ದೇವದುರ್ಗ ಈತನ ಹತ್ತಿರ 550/- ನಗದು ಹಣ ಸಿಕ್ಕಿದ್ದು, 5) ಬಸಪ್ಪ ತಂದೆ ಮುಕ್ಕಣ್ಣ ರಾಠೋಡ ವಯಾ:45 ವರ್ಷ ಜಾ:ಲಂಭಾಣಿ ಉ:ಒಕ್ಕಲುತನ ಸಾ:ಕಂಟಿ ತಾಂಡಾ ತಾ:ವಡಿಗೇರಿ ಈತನ ಹತ್ತಿರ 580/- ನಗದು ಹಣ ಸಿಕ್ಕಿದ್ದು, 6) ಗೌಡಪ್ಪ ತಂದೆ ರಂಗಣ್ಣ ಸುರಪೂರ ವಯಾ:25 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಚಂದ್ಲಾಪೂರ ತಾ:ಸುರಪೂರ ಈತನ ಹತ್ತಿರ 500/- ನಗದು ಹಣ ಸಿಕ್ಕಿದ್ದು, 7) ಮಲ್ಲಯ್ಯ ತಂದೆ ನಾಗಪ್ಪ ಗಡ್ಡೆಸೂಗುರು ವಯಾ:25 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕನರ್ಾಳ ತಾ:ಸುರಪೂರ ಈತನ ಹತ್ತಿರ 550/- ನಗದು ಹಣ ಸಿಕ್ಕಿದ್ದು, 8) ಹಣಮಂತ್ರಾಯ ತಂದೆ ದ್ಯಾವಪ್ಪಗೌಡ ಬಿರೆದಾರ ವಯಾ;50 ವರ್ಷ ಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ಗಂಗನಾಳ ತಾ;ಶಹಾಪೂರ ಈತನ ಹತ್ತಿರ 400/- ನಗದು ಹಣ ಸಿಕ್ಕಿದ್ದು, ಹೀಗೆ ಒಟ್ಟು ನಗದು ಹಣ 4200=00 ಹಾಗೂ ಕಣದಲ್ಲಿ 3 ಹುಂಜಗಳು ಇದ್ದು ಅವುಗಳ ಅ.ಕಿ 600/-ರೂ ಮತ್ತು 3 ಕತ್ತಿಗಳು ಅ.ಕಿ 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 5:50 ಪಿ.ಎಮ್ ದಿಂದ 6:50 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 8 ಜನ ಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ 7:35 ಪಿ.ಎಂ ಕ್ಕೆ ಬಂದು ತಮ್ಮ ವಶಕ್ಕೆ ಒಪ್ಪಿಸುತ್ತಿದ್ದರಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 31/2021. ಕಲಂ. 279.337.338 ಐ.ಪಿ.ಸಿ. : ಇಂದು ದಿನಾಂಕ: 10/02/2021 ರಂದು 22-00 ಗಂಟೆಗೆ ಪಿಯರ್ಾದಿ ಶ್ರೀ ಮಹ್ಮದ ಸೈಫುದ್ದಿನ್ ತಂದೆ ನೂರುದ್ದಿನ್ ಶೇಖ್ಲಾಡ್ಲೆ ವ|| 35 ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಕವಾಸಪೂರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ಇಂದು ದಿನಾಂಕ 10/02/2021 ರಂದು 7-15 ಗಂಟೆಗೆ ನಾನು ಶಹಾಪುರ ನಗರದ ಎಸ್.ಡಿ.ಪಿ.ಐ. ಆಫಿಸ್ ಮುಂದೆ ಭೀ,ಗುಡಿ-ಸುರಪೂರ ಮುಖ್ಯೆ ರಸ್ತೆ ಪಕ್ಕದಲ್ಲಿ ನಿಂತಾಗ ನನ್ನ ಅಣ್ಣ ಜಹೀರುದ್ದಿನ್ ತಂದೆ ನೋರುದ್ದಿನ್ ಈತನ ಮಗನಾದ ಜಿಯಾವುದ್ದಿನ್ ತಂದೆ ಜಹೀರುದ್ದಿನ್ ಶೇಖ ಲಾಡ್ಲೆ ವ|| 16 ಜಾ|| ಮುಸ್ಲಿಂ ಉ|| 10 ನೇ ತರಗತಿ ಸಹರಾ ಪಬ್ಲಿಕ್ ಶಾಲೆ ಸಾ|| ಮುಸ್ತಫ ಕಾಲೂನಿ ಶಹಾಪೂರ ಈತನು ತನ್ನ ಗೆಳೆಯರಾದ ಅಲ್ತಾಫ್ ತಂದೆ ಅಯ್ಯೂಬ ಜಮಾದಾರ ಸಾ|| ಕವಾಸಪೂರ, ಸೋಹೆಬ್ ಅಕ್ತರ್ ತಂದೆ ಮಹ್ಮದ ಸಲಿಂ ಇನಾಮದಾರ ಸಾ|| ಶಹಾಕಾಲೂನಿ ಶಹಾಪೂರ ಇವರೆಲ್ಲರು ಕೂಡಿಕೊಂಡು ಸಹಾರ ಪಬ್ಲಿಕ್ ಶಾಲೆಯಿಂದ ಮನೆಗೆ ಭೀ,ಗುಡಿ-ಸುರಪೂರ ಮುಖ್ಯ ರಸ್ತೆಯ ಮೇಲೆ ಎಸ್.ಡಿ.ಪಿ.ಐ ಆಫಿಸ್ ಮುಂದೆ ಜಿಯಾವುದ್ದಿನ್ನು ಮುಂದೆ ನಡೆದುಕೊಂಡು ಹೊಗುತ್ತಿದ್ದನು, ಆತನ ಹಿಂದೆ ಅಲ್ತಾಫ್ ಮತ್ತು ಸೋಹೆಬ್ ಅಕ್ತರ್ ಇವರು ನಡೆದುಕೊಂಡು ಹೊಗುತ್ತಿದ್ದರು, ಆಗ ಸುರಪೂರ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಜೀಯಾವುದ್ದಿನ್ ಈತನಿಗೆ ಹಿಂದೆ ಡಿಕ್ಕಿ ಪಡಿಸಿ ಅಪಘಾತಮಾಡಿದ್ದರಿಂದ ಮೋಟರ್ ಸೈಕಲ್ ಚಾಲಕ ಮತ್ತು ಜೀಯಾವುದ್ದಿನ್ ರಸ್ತೆಯ ಮೇಲೆ ಬಿದ್ದರು ಆಗ ನಾನು ಹೋಗಿ ಜಿಯಾವುದ್ದಿನ್ಗೆ ನೋಡಲಾಗಿ ಬಲಗಾಲು ಮೋಳಕಾಲು ಕೆಳಗೆ ಮುರಿದು ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಮೋಟರ್ ಸೈಕಲ್ ಚಾಲಕನಿಗೆ ಹೆಸರು ವಿಚಾರಿಸಲಾಗಿ ಉದಯಕುಮಾರ ತಂದೆ ಅಯ್ಯಪ್ಪ ಜಂಗಳಿ ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು, ಸದರಿ ಉದಯಕುಮಾರನಿಗೆ ನೋಡಲಾಗಿ ಎಡಗಾಲು ಮೋಳಕಾಲಿಗೆ, ಪಾದದ ಹತ್ತಿರ ತರಚಿದ ರಕ್ತಗಾಯ, ಬಲಗೈ ಮೋಳಕೈ ಹತ್ತಿರ ತರಚಿದ ರಕ್ತಗಾಯ, ತಲೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಮೋಟರ್ ಸೈಕಲ್ ನೋಡಲಾಗಿ, ಸಿಲ್ವರ ಮತ್ತು ನೀಲಿ ಬಣ್ಣದ ಹೀರೊ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಇರುವದಿಲ್ಲಾ ಅದರ ಇಂಜಿನ್ ನಂಬರ ನೋಡಲಾಗಿ ಊಂ10ಇಘಉಊಆ01716 ಚೆಸ್ಸಿ ನಂಬರ ಒಃಐಊಂ10ಃಘಉಊಆ66512 ಇದ್ದು ಕೋನೆಯ 12 ಅಕ್ಷರ ಸ್ವಲ್ಪ ಕಾಣಿಸುತ್ತಿದ್ದು ಇರುತ್ತದೆ. ಸದರಿ ಅಪಘಾತವು ಸಾಯಾಂಕಾಲ 7-15 ಗಂಟೆಯ ಸುಮಾರಿಗೆ ಜರುಗಿದ್ದು ಇರುತ್ತದೆ, ಜಿಯಾವುದ್ದಿನ್ನಿಗೆ ಮತ್ತು ಉದಯಕುಮಾರನಿಗೆ ಉಪಚಾರ ಕುರಿತು ನಾನು ಮತ್ತು ಅಲ್ತಾಫ್, ಸೋಹೆಬ್ ಅಕ್ತರ್ ಎಲ್ಲರು ಕೂಡಿಕೊಂಡು ಅಲ್ಲೆ ಹೋರಟಿದ್ದ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದ್ದೆ. ನಾನು ನನ್ನ ಅಣ್ಣನ ಹೆಡತಿಯಾದ ಸೈನಾಜಬೆಗಂ ಗಂಡ ಜಹೀರುದ್ದಿನ್ ಶೇಖ್ಲಾಡ್ಲೆ ಸಾ|| ಮುಸ್ತಫ ಕಾಲೂನಿ ಶಹಾಪೂರ ಇವರಿಗೆ ಪೋನ ಮಾಡಿ ಜಿಯಾವುದ್ದಿನ್ಗೆ ಅಪಘಾತವಾದ ವಿಷಯ ತಿಳಿಸಿದ್ದರಿಂದ ಅವರು ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದು ಇರುತ್ತದೆ. ಜಿಯಾವುದ್ದಿನ್ನಿಗೆ ಉಪಚಾರಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಅಣ್ಣನ ಹೆಂಡತಿ ಸೈನಾಜ್ ಬೆಗಂ ಇವರು ಜಿಯಾವುದ್ದಿನ್ನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಯ ಆಸ್ಪತ್ರೆ ಕರೆದುಕೊಂಡು ಹೋದಳು. ಅಂತ ಅಜರ್ಿ ಸಲ್ಲಿಸಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 31/2021 ಕಲಂ: 279, 337. 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-02-2021 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080