Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/03/2021

ಸೈದಾಪೂರ ಪೊಲೀಸ್ ಠಾಣೆ:- 41/2021 ಕಲಂ., 447, 323, 354, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ. 10.03.2021 ರಂದು ಮಧ್ಯಾಹ್ನ 01-00 ಗಂಟೆಗೆ ಶ್ರೀಮತಿ ಖತಾಲಬೀ ಗಂಡ ಇಮಾಮಸಾಬ ವಯ|| 45 ವರ್ಷ, ಜಾ|| ಮುಸ್ಲಿಂ, ಉ|| ಮನೆಕೆಲಸ ಸಾ|| ಚಂದಾಪೂರ ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ದೂರು ಅಜರ್ಿ ಸಾರಾಂಶವೇನೆಂದರೆ, ದಿನಾಂಕ. 07.03.2021 ರಂದು ಬೆಳಿಗ್ಗೆ 09.00 ಗಂಟೆಗೆ ಫಿಯರ್ಾದಿ ಮತ್ತು ಆಕೆಯ ಗಂಡ ತಮ್ಮ ಜಮೀನು ಸವರ್ೇ ನಂ. 5 ರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಅಕ್ರಮವಾಗಿ ನುಗ್ಗಿ ಆಬೀದ ಅಲಿ ತಂದೆ ಅಲ್ಲಿಸಾಬ ಮತ್ತು ಆತನ ಹೆಂಡತಿ ಪರವೀನ ಬೇಗಂ ಮತ್ತು ಆತನ ಮಗ ಇಬಾದುಲ್ಲಾ 3 ಜನ ಕೂಡಿ ಬಂದು ಜಗಳ ತೆಗೆದು ಏ ಭೋಸಡಿ ಮಕ್ಕಳೇ, ಸೂಳೇ ಮಕ್ಕಳೇ ನಿವ್ಯಾಕೆ ಈ ಹೊಲದಲ್ಲಿ ಬಂದೀದ್ದೀರಿ ಅಂತ ಅವಾಚ್ಯವಾಗಿ ಬೈದು, ಆಬೀದ ಅಲಿ ಫಿಯರ್ಾದಿ ಗಂಡನ ಎದೆ ಮೇಲಿನ ಅಂಗಿ ಹಿಡಿದು ನಿಲ್ಲಿಸಿ, ಕೈ ಮುಷ್ಠಿಮಾಡಿ ಗುದ್ದಿ ನೆಲಕ್ಕೆ ಹಾಕಿದ್ದು, ಬಿಡಿಸಿಕೊಳ್ಳಲು ಹೋದ ಫಿಯರ್ಾದಿಗೆ ಇಬಾದುಲ್ಲಾ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಬೆನ್ನಿಗೆ ಒದ್ದು ಅವಮಾನ ಮಾಡಿದ್ದು, ಪರವೀನಬೇಗಂ ಫಿಯರ್ಾದಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾಳೆ. ಮೈಬೂಬ ಹುಸೇನ ತಂದೆ ನನ್ನೆಸಾಬ ಇವನು ಬಂದು ಜಗಳ ಬಿಡಿಸಿ ಮನೆಗೆ ಕಳಿಸಿದ್ದು, ಅಲ್ಲಿಂದ ಹೋಗುವಾಗ ಮೇಲಿನ ಎಲ್ಲರು ಖೇತಕೆ ಪಾಸ ಅಬ ಏಕ ಬಾರ ಆಯಿತೋ ಖಲಾಸ ಕರತೆೆ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಸದರಿ ಮೇಲ್ಕಂಡ 3 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ:- 42/2021 ಕಲಂ. ಮಹಿಳೆ ಮತ್ತು ಮಕ್ಕಳು ಕಾಣೆಯಾದ ಬಗ್ಗೆ: ಇಂದು ದಿನಾಂಕ. 10.03.2021 ರಂದು ಮಧ್ಯಾಹ್ನ 2.00 ಗಂಟೆಗೆ ಶ್ರೀ ಆನಂದ ತಂದೆ ನಾಗಪ್ಪ ವಯ||30 ವರ್ಷ, ಜಾ|| ವಡ್ಡರ ಉ|| ಒಕ್ಕಲುತನ ಸಾ|| ಕಣೇಕಲ್ ತಾ|| ಗುರುಮಠಕಲ ಜಿ||ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ.02.03.2021 ರಂದು ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಫಿಯರ್ಾದಿಗೆ ಗೊತ್ತಿಲ್ಲದಂತೆ ಫಿಯರ್ಾದಿ ಹೆಂಡತಿ ಇಬ್ಬರು ಮಕ್ಕಳಾದ ಮಲ್ಲೇಶ್ವರಿ ಮತ್ತು ನಾಗರಾಜರನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದು, ನಾರಾಯಣಪೇಟ ಕಡೆಗೆ ಅಟೋದಲ್ಲಿ ಹೋಗಿರುವದನ್ನು ಲಕ್ಷ್ಮಣ ತಂದೆ ಮಾರೆಪ್ಪ ವಡ್ಡರ ಇವರು ನೋಡಿರುತ್ತಾರೆ. ಕಾಣೆಯಾದ ಶ್ರೀಮತಿ ಯಲ್ಲಮ್ಮ ಗಂಡ ಆನಂದ ವಯ|| 28 ವರ್ಷ, ಇವಳ ಚಹರೆ ಅಗಲವಾದ ದುಂಡು ಮುಖ, ಅಗಲವಾದ ಮೂಗು, ಸಾದಾಕಪ್ಪು ಮೈಬಣ್ಣ, ಸದೃಢ ಮೈಕಟ್ಟು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಹೊಂದಿರುತ್ತಾಳೆ. ಎತ್ತರ 4' 2 ಇದ್ದು, ಮೈಮೇಲೆ ತಿಳಿ ಗುಲಾಬಿ ಸೀರೆ ಮತ್ತು ನೀಲಿ ಬಣ್ಣದ ಜಂಪರ ಧರಿಸಿದ್ದು ಇರುತ್ತದೆ. ಕಾಣೆಯಾದ ಕುಮಾರಿ ಮಲ್ಲೇಶ್ವರಿ ತಂದೆ ಆನಂದ ವಯ|| 6 ವರ್ಷ, ಇವಳು ದುಂಡು ಮುಖ, ಸಾದಾ ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಇದ್ದು, ಅಂದಾಜು ಎತ್ತರ 3' 2'' ಇದ್ದು, ಮೈಮೇಲೆ ಬಿಳಿ ಟಾಪ, ನೀಲಿ ಕಲರ ಲಂಗ ಕಾಲಲ್ಲಿ ಬೆಳ್ಳಿ ಚೈನ ಧರಿಸಿರುತ್ತಾಳೆ. ಕಾಣೆಯಾದ ಕು. ನಾಗರಾಜ ತಂದೆ ಆನಂದ ವಯ|| 4 ವರ್ಷ, ಇವನು ದುಂಡು ಮುಖ, ಕೆಂಪು ಗೋದಿ ಮೈಬಣ್ಣ, ದುಂಡುನೆಯ ಮೂಗು, ತಲೆಯಲ್ಲಿ 2'' ಕೆಂಪು ಮಿಶ್ರಿತ ಕಪ್ಪು ಕೂದಲು ಇದ್ದು, ಅಂದಾಜು ಎತ್ತರ 2' 2'' ಇದ್ದು, ಮೈಮೇಲೆ ಕೆಂಪು- ನೀಲಿ ಚೌಕಡಿ ಶರ್ಟ, ನೀಲಿ ಜೀನ್ಸ್ ಪ್ಯಾಂಟ ಧರಿಸಿರುತ್ತಾನೆ.ಎಲ್ಲಾ ಕಡೆಗೂ ಹುಡುಕಾಡಿ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿರುತ್ತೇವೆ ಸದರಿಯವರ ಸುಳಿವು ಸಿಕ್ಕಲ್ಲಿ ಹುಡುಕಿಕೊಡಬೇಕು ಅಂತ ದೂರು ಇರುತ್ತದೆ.
ಶೋರಾಪುರ ಪೊಲೀಸ್ ಠಾಣೆ:- 47/2020 ಕಲಂ 279, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ: ಇಂದು ದಿನಾಂಕ: 10/03/2021 ರಂದು 4 ಪಿ.ಎಂ ಕ್ಕೆ ಠಾಣೆಯಲ್ಲಿದಾಗ ಪಿಯರ್ಾದಿ ಶ್ರೀ ಮಂಜುನಾಥ ತಂದೆ ಮೌನೇಶ ಸಾಹುಕಾರ ವ|| 26 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ತಿಂಥಣಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಾರಾಂಶವೆನಂದರೆ, ನಮ್ಮ ತಂದೆ-ತಾಯಿಗೆ ನಾವು ಮೂರು ಜನ ಮಕ್ಕಳು ಇದ್ದು, ನಾನು ದೊಡ್ಡವನಾಗಿದ್ದು, ಇಬ್ಬರು ತಂಗಿಯರು ಇರುತ್ತಾರೆ. ಹಿಗಿದ್ದು ದಿನಾಂಕ:09/03/2021 ರಂದು ಮುಂಜಾನೆ ಅಂದಾಜು 10 ಗಂಟೆಗೆ ನಾನು ಮತ್ತು ನನ್ನ ತಂದೆಯಾದ ಮೌನೇಶ ತಂದೆ ಬಸವಣೆಪ್ಪ ಸಾಹುಕಾರ ವ|| 48 ವರ್ಷ, ಮಾರುತಿ ತಂದೆ ಯಂಕಪ್ಪ ಬುದಗುಂಪಿ ಮೂವರು ಕೂಡಿ ನಮ್ಮ ಹೊಲಕ್ಕೆ ಹೊಗಿ ಕೆಲಸ ಮಾಡಿ ಮರಳಿ ಮನೆಗೆ ಬರುವಾಗ ಸಾಯಂಕಾಲ ಅಂದಾಜು 6:20 ಗಂಟೆಗೆ ಸುರಪುರ-ಲಿಂಗಸೂಗುರು ಮುಖ್ಯ ರಸ್ತೆಯ ಗುರುನಾಥರಾವ್ ಕುಲಕಣರ್ಿ ಇವರ ಹೊಲದ ಹತ್ತಿರ ನಾವು ಮೂರು ಜನರು ರೋಡಿನ ಎಡ ಭಾಗಕ್ಕೆ ನಡೆದುಕೊಂಡು ಮನೆಗೆ ಹೊಗುತ್ತಿರುವಾಗ ನಮ್ಮ ಎದರುಗಡೆಯಿಂದ ಅಂದರೆ ಸುರಪುರ ಕಡೆಯಿಂದ ಒಂದು ವಾಹನವು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ನಮ್ಮ ತಂದೆ ನೆಲಕ್ಕೆ ಬಿದ್ದಾಗ ನಾವು ಎಬ್ಬಿಸಿ ನೋಡಲಾಗಿ ಕುತ್ತಿಗೆಯ ಹಿಂಬದಿಗೆ ತರಚಿದ ಗಾಯ, ಬಲಗೈ ಮುಂಡಿಯ ಹತ್ತಿರ ತರಚಿದ ಗಾಯ, ಎರಡು ಮೊಳಕೈಗೆ ತರಚಿದ ಗಾಯ, ಮತ್ತು ಎಡಗಾಲ ಮೊಳಕಾಲ ಕೆಳಗೆ ಮುರಿದ ಗುಪ್ತಗಾಯವಾಗಿರುತ್ತದೆ. ನಂತರ ಅಪಘಾತ ಪಡಿಸಿದ ವಾಹನ ನೊಡಲಾಗಿ ಅಶೋಕ ಲ್ಯಾಲೆಂಡ ನಂ. ಕೆಎ-33 ಬಿ-1964 ನೇದ್ದರ ಚಾಲಕ ವಾಹನವನ್ನು ಅಲ್ಲೆ ಬಿಟ್ಟು ನಮ್ಮ ಕಡೆ ನೋಡುತಾ ಓಡಿಹೊಗಿರುತ್ತಾನೆ. ಚಾಲಕನನ್ನು ನೊಡಿದರೆ ನಾವು ಗುರುತಿಸುತ್ತೇವೆ. ನಂತರ ನಮ್ಮ ತಂದೆಯನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಲಿಂಗಸೂರುಗುರಿನ ಹರ್ಸವರ್ಧನ ಪಾಟೀಲ್ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನಮ್ಮ ತಂದೆಗೆ ಅಪಘಾತ ಪಡಿಸಿದ ಅಶೋಕ ಲ್ಯಾಲೆಂಡ ವಾಹನ ನಂ. ಕೆಎ-33 ಬಿ-1964 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 47/2021 ಕಲಂ 279, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ ಯಾದಗಿರಿ:- 18/2021 ಕಲಂ: 279, 337, 338 ಐಪಿಸಿ ಸಂಗಡ 187 ಐಎಮವಿ ಆಕ್ಟ : ನಾನು ಇಂದು ದಿನಾಂಕ 10.03.2021 ರಂದು ಬೆಳಿಗ್ಗೆ 06:00 ಗಂಟೆಗೆ ಪಿಎಸಐ ಸಾಹೇಬರ ಆದೇಶದ ಮೇರೆಗೆ ನಾನು ರಸ್ತೆ ಅಪಘಾತದಲ್ಲಿ ಗಾಯ ಹೊಂದಿದ ಗಾಯಾಳು ಅಮರಯ್ಯ ತಂದೆ ಆಮನಿಂಗಯ್ಯ ಹಿರೇಮಠ ಸಾ||ರಾಜನಕೊಳುರ ಇವರ ಎಮ್.ಎಲ್.ಸಿ ವಿಚಾರಣೆಗಾಗಿ ವಿಜಯಪೂರದ ಸಂಜೀವಿನಿ ಸುಪರ ಸ್ಪೇಷಾಲಿಟಿ ಆಸ್ಪತ್ರೆಗೆ ಹೋಗಿ ಗಾಯಾಳುವಿಗೆ ನೋಡಲಾಗಿ ಗಾಯಾಳು ಅಮರಯ್ಯ ಇತನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರುವದಿಲ್ಲ ಅಂತ ಸದರಿ ಗಾಯಾಳುವಿಗೆ ಉಪಚರಿಸುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದ್ದರಿಂದ ಆಸ್ಪತ್ರೆಯಲ್ಲಿದ್ದ ಗಾಯಾಳುವಿನ ತಮ್ಮನಾದ ಈರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ:40 ವರ್ಷ ಜಾ: ಹಿಂದೂ ಲಿಂಗಾಯತ ಉ: ಕೂಲಿಕೆಲಸ ಸಾ: ರಾಜನಕೊಳುರ ತಾ:ಹುಣಸಗಿ ಇವರಿಗೆ ಅಪಘಾತದ ಬಗ್ಗೆ ವಿಚಾರಿಸಿ ಆಸ್ಪತ್ರೆಯಲ್ಲಿ 11:30 ರಿಂದ 12:30 ರವರೆಗೆ ಸದರಿಯವನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಸದರಿಯವನ ಹೇಳಿಕೆಯೊಂದಿಗೆ ಮರಳಿ ಠಾಣೆಗೆ 5:45 ಪಿಎಮಕ್ಕೆ ಬಂದಿದ್ದು ಸದರಿ ಈರಯ್ಯ ಇವರ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ನಾವು ಸಿದ್ದಯ್ಯ, ಅಮರಯ್ಯ, ಈರಯ್ಯ ಅಂತ 3 ಜನ ಗಂಡು ಮಕ್ಕಳಿದ್ದು ನಾವು 3 ಜನರದು ಮದುವೆಯಾಗಿದ್ದು, ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಬೇರೆಬೇರೆ ಮನೆ ಮಾಡಿಕೊಂಡು ಇದ್ದು ನನ್ನ ಅಣ್ಣನಾದ ಸಿದ್ದಯ್ಯ ಇವರು ಮೃತಪಟ್ಟಿದ್ದು ಅಣ್ಣನಾದ ಅಮರಯ್ಯ ಇವರದು ನಮ್ಮೂರ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕಿನ ಎದುರಗಡೆ ಒಂದು ಪಾನಶಾಪ್ ಅಂಗಡಿ ಇಟ್ಟುಕೊಂಡಿದ್ದು ಅಲ್ಲದೇ ನನ್ನ ಅಣ್ಣ ಅಮರಯ್ಯನು ನಮ್ಮೂರಲ್ಲಿ ಪಿಗ್ಮಿ ಏಜೆಂಟ್ ಕೆಲಸ ಮಾಡಿಕೊಂಡಿದ್ದು ದಿನಾಲೂ ಸಾಯಂಕಾಲ ವೇಳೆಯಲ್ಲಿ ನಮ್ಮೂರಲ್ಲಿ ಅಂಗಡಿಗಳಿಗೆ ಹೋಗಿ ಪಿಗ್ಮಿ ಕಲೆಕ್ಟ ಕೆಲಸ ಮಾಡುತ್ತಿರುವನು. ಹೀಗಿದ್ದು ನಿನ್ನೆ ದಿನಾಂಕ 09.03.2021 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಮಲ್ಲಣ್ಣ ತಂದೆ ಭೀಮನಗೌಡ ಯರಕಿಹಾಳ, ಮಹಾದೇವಯ್ಯ ತಂದೆ ಈರಯ್ಯ ಹಿರೇಮಠ 3 ಜನರು ಕೂಡಿ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಗೆ ಹೊಂದಿ ಇರುವ ಪರತಯ್ಯ ಹಿರೇಮಠ ರವರ ಹೋಟೆಲದಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದಾಗ ನನ್ನ ಅಣ್ಣನಾದ ಅಮರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ||45 ವರ್ಷ ಇತನು ಪಿಗ್ಮಿ ಕಲೆಕ್ಟ ಮಾಡುತ್ತಾ ನಮ್ಮೂರ ಹೆಚ.ಸಿ.ಪಾಟೀಲ ರವರ ಬಸವೇಶ್ವರ ಮೆಡಿಕಲ್ ಶಾಪದಲ್ಲಿ ಪಿಗ್ಮಿ ಕಲೆಕ್ಟ ಮಾಡಿಕೊಂಡು ಮುಂದೆ ಮಾಣಿಕಪ್ಪ ಸಾಹುಕಾರ ಇವರ ಕಿರಾಣಿ ಅಂಗಡಿಯ ಕಡೆಗೆ ಹೋಗಲು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯನ್ನು ನಡೆದುಕೊಂಡು ದಾಟುತ್ತಿರುವಾಗ ಬಲಶೆಟ್ಟಿಹಾಳ ಕಡೆಯಿಂದ ಒಬ್ಬ ಮೊಟರ ಸೈಕಲ್ ಸವಾರನು ತನ್ನ ಮೊಟರ ಸೈಕಲನ್ನು ಅತಿ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನನ್ನ ಅಣ್ಣ ಅಮರಯ್ಯನಿಗೆ ಡಿಕ್ಕಿ ಪಡಿಸಿದ್ದು ಇದರಿಂದ ನನ್ನ ಅಣ್ಣನು ರಸ್ತೆಯ ಮೇಲೆ ಬಿದ್ದಿದ್ದು ಮೊಟರ್ ಸೈಕಲ್ ಸವಾರನು ಮೋಟರ್ ಸೈಕಲನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಓಡಿ ಹೋಗಿದ್ದು, ಇದನ್ನು ನೋಡಿ ಹೋಟೆಲದಲ್ಲಿ ಚಹಾ ಕುಡಿಯುತ್ತಿದ್ದ ನಾನು ಮತ್ತು ನಮ್ಮೂರ ಮಲ್ಲಣ್ಣ ಯರಕಿಹಾಳ, ಮಹಾದೇವಯ್ಯ ಹಿರೇಮಠ ಹಾಗೂ ಹೆಚ.ಸಿ.ಪಾಟೀಲ ರವರ ಮೆಡಿಕಲ್ ಶಾಪನಲ್ಲಿದ್ದ ಬಸನಗೌಡ ತಂದೆ ಚಂದ್ರಶೇಖರಗೌಡ ಪಾಟೀಲ ಹಾಗೂ ದಾವಲಸಾಬ ತಂದೆ ಮಹಮ್ಮದಸಾಬ ಆವಂಟಿ ರವರು ನಮ್ಮ ಅಣ್ಣನಿಗೆ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣ ಅಮರಯ್ಯನ ತಲೆಯ ಮೇಲೆ ಹಾಗೂ ಎಡಗಡೆ ಸೊಂಟದ ಮೇಲೆ ಭಾರಿ ಗುಪ್ತ ಪೆಟ್ಟು ಆಗಿದ್ದು ಹಾಗೂ ಬಲಗಾಲಿನ ಪಾದದ ಕಿರುಬೆರಳಿನಿಂದ ಮೂರು ಬೆರಳುಗಳ ವರೆಗೆ ತರಚಿದ ನಮೂನೆಯ ರಕ್ತಗಾಯವಾಗಿದ್ದು ನನ್ನ ಅಣ್ಣನಿಗೆ ಸೊಂಟದ ಮೇಲೆ ಭಾರಿ ಪೆಟ್ಟಾಗಿದ್ದರಿಂದ ನಡೆಯಲಿಕ್ಕೆ ಬರದಂತೆ ಆಗಿದ್ದು ನನ್ನ ಅಣ್ಣನಿಗೆ ಅಪಘಾತಪಡಿಸಿದ ಮೋಟರ್ ಸೈಕಲ ನೋಡಲಾಗಿ ಅದು ಕೆಂಪು ಬಣ್ಣದ ಪ್ಲಾಟಿನಾ ಮೊಟರ್ ಸೈಕಲ ಆಗಿದ್ದು ಅದರ ನಂಬರ ಕೆಎ-33 ಇಎ-5175 ಇದ್ದು ಅಪಘಾತಪಡಿಸಿದ ಮೋಟರ ಸೈಕಲ ಸವಾರನ ಹೆಸರು ಹುಲಗಪ್ಪ ತಂದೆ ಬಸಣ್ಣ ಬಂಗಿ ಸಾ||ಹಣಮಸಾಗರ ಅಂತ ಗೊತ್ತಾಗಿದ್ದು ನಂತರ ನನ್ನ ಅಣ್ಣ ಅಮರಯ್ಯನಿಗೆ ಉಪಚಾರಕ್ಕಾಗಿ ನಾನು ಮತ್ತು ನಮ್ಮೂರ ಮಲ್ಲಣ್ಣ ತಂದೆ ಭೀಮನಗೌಡ ಯರಕಿಹಾಳ ಹಾಗೂ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ನನ್ನ ಅಣ್ಣನ ಹೆಂಡತಿ ಶಾಂತಮ್ಮ ರವರು ಕೂಡಿ ಒಂದು ವಾಹನದಲ್ಲಿ ತಾಳಿಕೋಟಿಯ ಸಿದ್ದಬಸವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಿದ್ದಬಸವ ಆಸ್ಪತ್ರೆಯ ವೈದ್ಯರು ನನ್ನ ಅಣ್ಣನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರದ ಸಂಜೀವಿನಿ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮತ್ತೆ ನಾವೆಲ್ಲರೂ ಕೂಡಿ ನನ್ನ ಅಣ್ಣನಿಗೆ ನಿನ್ನೆ ದಿನ ರಾತ್ರಿ 10:00 ಗಂಟೆಯ ಸುಮಾರಿಗೆ ಇಲ್ಲಿಗೆ ಕರೆದುಕೊಂಡು ಬಂದು ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನನ್ನ ಅಣ್ಣನು ಇನ್ನೂ ಈ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಅವನು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ನನ್ನ ಅಣ್ಣನಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವನ ಜೊತೆ ಆಸ್ಪತ್ರೆಯಲ್ಲಿ ಇದ್ದುದರಿಂದ ದೂರು ಕೊಡಲು ತಡವಾಗಿದ್ದು ಈ ಅಪಘಾತವು ಮೋಟರ್ ಸೈಕಲ ನಂ: ಕೆಎ-33 ಇಎ-5175 ನೇದ್ದರ ಸವಾರ ಹುಲಗಪ್ಪ ತಂದೆ ಬಸಣ್ಣ ಬಂಗಿ ಸಾ||ಹಣಮಸಾಗರ ಇತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:18/2021 ಕಲಂ:279, 337, 338 ಐಪಿಸಿ ಸಂಗಡ 187 ಐಎಮವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡೆನು.
ಭೀ.ಗುಡಿ ಗ್ರಾಮೀಣ ಪೊಲೀಸ್ ಠಾಣೆ18/2021 ಕಲಂ 279 ಐಪಿಸಿ:- ದಿನಾಂಕ:06/03/2021 ರಂದು 7 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಆರೋಪಿ ಕೂಡಿ ಕಾರ್ ನಂ:ಕೆಎ-33, ಎಮ್-8184 ನೇದ್ದರಲ್ಲಿ ಕುಳಿತು ಊರಿನಿಂದ ಶಹಾಪುರ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆ ಮೇಲೆ ಹಳ್ಳದ ಹತ್ತಿರ ಹೊರಟಾಗ ಆರೋಪಿತನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಹಳ್ಳದ ಬ್ರಿಜ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಬಗ್ಗೆ ದೂರು.

Last Updated: 11-03-2021 01:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080