ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11-04-2021

ಯಾದಗಿರ ನಗರ ಪೊಲೀಸ್ ಠಾಣೆ :- 46/2021 ಕಲಂ. 379 ಐಪಿಸಿ : ಇಂದು ದಿನಾಂಕ: 10/04/2021 ರಂದು 10-30 ಎಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್. ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಟಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 10/04/2021 ರಂದು 9-30 ಎಎಮ್ ಸುಮಾರಿಗೆ ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ-10, ವಿಠೋಬಾ ಹೆಚ್.ಸಿ-86 ಮತ್ತು ಸಾಬರೆಡ್ಡಿ ಪಿ.ಸಿ-379 ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಹತ್ತಿಕುಣಿ ಕ್ರಾಸ ಮುಖಾಂತರ ಗಂಗಾನಗರ ಕ್ರಾಸ ಕಡೆಗೆ ಹೋಗುತ್ತಿರುವಾಗ 10-00 ಎಎಮ್ ಸುಮಾರಿಗೆ ಗಂಗಾನಗರ ಹಳ್ಳದ ಬ್ರಿಡ್ಜ ಕಡೆಯಿಂದ ಗಂಗಾನಗರ ಕ್ರಾಸದಲ್ಲಿ ನಮ್ಮ ಎದುರುಗಡೆ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟ್ರಾಕ್ಟರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ನಾವು ಹತ್ತಿರ ಹೋಗಿ ಟ್ರಾಕ್ಟರನ್ನು ಪರಿಶೀಲಿಸಲಾಗಿ ಒಂಊಓಆಖಂ 475 ಆ ಕಂಪನಿಯ ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಬಿ.1101 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಟ್ರಾಕ್ಟರದಲ್ಲಿ ಮರಳು ತುಂಬಿದ್ದು ಟ್ರಾಕ್ಟರ ಚಾಲಕನು ಟ್ರಾಕ್ಟರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 10-15 ಎಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಬಿ.1101 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 10-30 ಎಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.46/2021 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಸಂಚಾರಿ ಪೊಲೀಸ್ ಠಾಣೆ:- 21/2021 ಕಲಂ 279, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 10/04/2021 ರಂದು ಸಮಯ 6-30 ಎ.ಎಂ.ಕ್ಕೆ ಯಾದಗಿರಿ ಆಸ್ಪತೆಯಿಂದ ಆರ್.ಟಿ.ಎ/ ಡೆತ್ ಎಂ.ಎಲ್.ಸಿ ಪೋನ್ ಮೂಲಕ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆ ಕುರಿತು ಮಾನ್ಯ ಪಿ.ಎಸ್.ಐ-01 ಸಾಹೇಬರ ಸೂಚನೆ ಮೇರೆಗೆ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಮೃತನ ಮಗನಾದ ಪಿಯರ್ಾದಿ ಶ್ರೀ ಇಸ್ಮಾಯಿಲ್ ತಂದೆ ಬಿಕ್ಕನ್ಖಾನ್ ಗಿರಣಿವಾಲೆ ವಯ;19 ವರ್ಷ, ಜಾ;ಮುಸ್ಲಿಂ, ಉ;ಕೂಲಿ, ಸಾ;ಮುಂಡರಗಿ, ತಾ;ಜಿ;ಯಾದಗಿರಿ ಇವರು ಘಟನೆ ಬಗ್ಗೆ ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 7 ಎ.ಎಂ ದಿಂದ 8 ಎ.ಎಂ. ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ತಂದೆ-ತಾಯಿಗೆ ನಾವು ಒಟ್ಟು ನಾಲ್ಕು ಜನ ಮಕ್ಕಳಿರುತ್ತೇವೆ. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ತಂದೆಯಾದ ಬಿಕ್ಕನ್ಖಾನ್ ವಯ;44 ವರ್ಷ ಇವರು ಮತ್ತು ನಾನು ಮುಂಡರಗಿ ಗ್ರಾಮದ ಹತ್ತಿರದ ಇಟ್ಟಂಗಿ ಭಟ್ಟಿಯಲ್ಲಿ ದಿನಾಲು ಕೆಲಸ ಮಾಡಿಕೊಂಡು ಬಂದಿರುತ್ತೇವೆ. ಹೀಗಿದ್ದು ಇಂದು ದಿನಾಂಕ 10/04/2021 ರಂದು ಬೆಳಿಗ್ಗೆ ಅಂದಾಜು 5-15 ಎ,ಎಂ.ದ ಗಂಟೆ ಸುಮಾರಿಗೆ ಎಂದಿನಂತೆ ನಾನು ಮತ್ತು ನನ್ನ ತಂದೆ ಬಿಕ್ಕನ್ಖಾನ್ ಇಬ್ಬರು ಸೇರಿಕೊಂಡು ಮನೆಯಿಂದ ನಮ್ಮ ಮುಂಡರಗಿ ಹತ್ತಿರದ ಇಟ್ಟಂಗಿ ಭಟ್ಟಿಗೆ ಕೆಲಸಕ್ಕೆಂದು ತಯಾರಾಗಿ ನಡೆದುಕೊಂಡು ಹೊರಟಿದ್ದೆವು. ಮಾರ್ಗ ಮದ್ಯೆ ಮುಂಡರಗಿ ಗ್ರಾಮದ ಹತ್ತಿರ ನೂರ್ ರೈಸ್ ಮಿಲ್ ಹತ್ತಿರ ನಾನು ಮೂತ್ರ ವಿಸರ್ಜನೆಗೆಂದು ರಸ್ತೆ ಬದಿಯಲ್ಲಿ ನಿಂತಾಗ ನನ್ನ ತಂದೆಯವರು ಅದೇ ರಸ್ತೆ ಬದಿಯಲ್ಲಿ ಹಾಗೆಯೇ ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ರಾಮಸಮುದ್ರ ಕಡೆಯಿಂದ ಯಾದಗಿರಿ ಕಡೆಗೆ ಒಂದು ಆಟೋ ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಾನು ನೋಡು ನೋಡುತ್ತಿದ್ದಂತೆ ನನ್ನ ತಂದೆಗೆ ಹಿಂದಿನಿಂದ ಜೋರಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಆಗ ನನ್ನ ತಂದೆ ಅಪಘಾತದ ರಭಸಕ್ಕೆ ರಸ್ತೆ ಮೇಲೆ ಹೋಗಿ ಬಿದ್ದಾಗ ಅವರ ಮೇಲಿಂದ ಆಟೋ ಹಾಯ್ದು ಹೋಗಿದ್ದು ಇರುತ್ತದೆ ನಾನು ಆಟೋದವನಿಗೆ ಚೀರುತ್ತಾ ಆಟೋ ನಿಲ್ಲಿಸು, ನಿಲ್ಲಿಸು ಅಂದಾಗ ಸ್ವಲ್ಪ ದೂರ ಹೋಗಿ ನಿಲ್ಲಿಸಿ, ನಮ್ಮ ಹತ್ತಿರ ಬಂದು ನನ್ನ ತಂದೆಗೆ ನೋಡಿ ಗಡಿಬಡಿ ಮಾಡುತ್ತಾ ಮತ್ತೆ ತನ್ನ ಆಟೋವನ್ನು ಚಾಲು ಮಾಡಿಕೊಂಡು ಯಾದಗಿರಿ ಕಡೆಗೆ ಓಡಿ ಹೋಗಿರುತ್ತಾನೆ. ಆಟೋದಲ್ಲಿ ಜನರು ಯಾರು ಇರಲಿಲ್ಲ ತರಕಾರಿ ಚೀಲಗಳು ಅದರಲ್ಲಿ ಇರುತ್ತವೆ. ಆಟೋದ ನಂಬರ ನಾನು ನೋಡಲಾಗಿ ಕೆಎ-33, ಬಿ-2410 ನೇದ್ದು ಇದ್ದು ಅದರ ಚಾಲಕನ್ನು ನಾನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇನೆ ಅದೇ ಸಮಯಕ್ಕೆ ಯಾದಗಿರಿಗೆ ಕಡೆಗೆ ಹೊರಟಿದ್ದ ನಮ್ಮೂರಿನ ದಂಡಪ್ಪ ತಂದೆ ಹಣಮಂತ ದಾಸರ ಇವರು ಬಂದಿದ್ದು ನಾವಿಬ್ಬರು ನಮ್ಮ ತಂದೆಗೆ ನೋಡಲು ಸದರಿ ಅಪಘಾತದಲ್ಲಿ ನನ್ನ ತಂದೆಗೆ ತಲೆಗೆ, ಮುಖಕ್ಕೆ, ಎರಡು ಕೈಗಳಿಗೆ ಭಾರೀ ರಕ್ತಗಾಯ ಮತ್ತು ಎದೆಗೆ, ಹೊಟ್ಟೆಗೆ ಭಾರೀ ಗುಪ್ತಗಾಯವಾಗಿರುತ್ತವೆ ಎರಡು ಕೈಗಳು ಭುಜದಿಂದ ಮುಂಗೈಯವರೆಗೆ ನುಜ್ಜಗುಜ್ಜಾಗಿ ಭಾರೀ ರಕ್ತಗಾಯಗಳು ಆಗಿ ಮುರಿದಿರುತ್ತವೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿ ಗಾಯಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಈ ಘಟನೆಯು ಹೈದ್ರಾಬಾದ್-ಯಾದಗಿರಿ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರದ ನೂರರ್ ರೈಸ್ ಮಿಲ್ ಮುಂದಿನ ಮುಖ್ಯ ರಸ್ತೆ ಮೇಲೆ ಇಂದು ಬೆಳಿಗ್ಗೆ 5-30 ಪಿ,ಎಂ.ಕ್ಕೆ ಜರುಗಿರುತ್ತದೆ. ನನಗೆ ಗಾಬರಿಯಾಗಿ ನಮ್ಮ ಮನೆಗೆ ಪೋನ್ ಮಾಡಿ ನನ್ನ ತಾಯಿಗೆ ನಡೆದ ಘಟನೆ ಬಗ್ಗೆ ವಿವರವಾಗಿ ತಿಳಿಸಿ ಘಟನಾ ಸ್ಥಳಕ್ಕೆ ಬರಲು ಹೇಳಿರುತ್ತೇನೆ. ಸ್ವಲ್ಪ ಸಮಯದ ನಂತರ ಘಟನಾ ಸ್ಥಳಕ್ಕೆ ನನ್ನ ತಾಯಿ ರಜಿಯಾಬೇಗಂ ಮತ್ತು ನಮ್ಮ ಸಂಬಂಧಿ ಸಣ್ಣ ಮಹೀಬೂಬ ತಂದೆ ಸರ್ಪರಾಜ ಅಲಿ ಗಿರಣಿಯೋರ ಇವರುಗಳು ಬಂದು ನೋಡಿರುತ್ತಾರೆ. ನನ್ನ ತಂದೆಯ ಮೃತದೇಹವನ್ನು ನಾನು ಮತ್ತು ನನ್ನ ತಾಯಿ ರಜಿಯಾಬೇಗಂ ಇಬ್ಬರು ಗುತರ್ಿಸಿರುತ್ತೇವೆ. ಹೀಗಿದ್ದು ಇಂದು ದಿನಾಂಕ 10/04/2021 ರಂದು ಬೆಳಿಗ್ಗೆ ಸಮಯ 5-30 ಎ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರ ಬರುವ ನೂರ್ ರೈಸ್ ಮಿಲ್ ಮುಂದಿನ ಮುಖ್ಯ ರಸ್ತೆಯ ಬದಿಯಲ್ಲಿ ಈ ಕೇಸಿನ ಮೃತ ಬಿಕ್ಕನ್ಖಾನ್ ಈತನು ನಡೆದುಕೊಂಡು ಬರುತ್ತಿದ್ದಾಗ ಆಟೋ ನಂಬರ ಕೆಎ-33. ಬಿ-2410 ನೇದ್ದರ ಚಾಲಕನು ತನ್ನ ಆಟೋವನ್ನು ರಾಮಸಮುದ್ರ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ತಂದೆಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ನನ್ನ ತಂದೆಯವರು ಅಪಘಾತದಲ್ಲಾದ ಗಂಭೀರ ಸ್ವರೂಪದ ಗಾಯಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಪಘಾತಪಡಿಸಿ ಆಟೋ ಸಮೇತ ಓಡಿ ಹೋದ ಆಟೋ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 8-15 ಎ.ಎಂ.ಕ್ಕೆ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2021 ಕಲಂ 279, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 78/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ: 10-04-2021 ರಂದು 3:30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ (ಅ.ವಿ.) ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 10-04-2021 ರಂದು 3:00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪುರ ನಗರ ಗುತ್ತಿಪೇಠ ಏರಿಯಾದ ಕಾಳಮ್ಮ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಖಚಿತ ಬಂದಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 22/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಮಟಕಾ ಜೂಚಾಟ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ. 78 (3) ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.78/2021 ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 79/2021. ಕಲಂ. 279.338.ಐ.ಪಿ.ಸಿ : ಇಂದು ದಿನಾಂಕ: 10/04/2021 ರಂದು 20-30 ಗಂಟೆಗೆ ಪಿಯರ್ಾದಿ ಶ್ರೀ ಸೋಮಶೇಖರ್ ತಂದೆ ಸಿದ್ದಪ್ಪ ಗೋಗಿ ವ|| 59 ಜಾ|| ದೇವಾಂಗ ಉ|| ನೇಕಾರಿಕೆ ಸಾ|| ರುಕ್ಮಾಪೂರ ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 08/04/2021 ರಂದು ಬೆಳಿಗ್ಗೆ ನನ್ನ ಮಗ ಸಿದ್ದಪ್ಪನು ನಮ್ಮ ಮೋಟರ್ ಸೈಕಲ್ ನಂ ಕೆಎ-28 ಇಎಲ್-4625 ನೇದ್ದನ್ನು ತೆಗೆದುಕೊಂಡು ಶಹಾಪೂರದ ಚಿಂತಮ್ಮ ಗೌಡ್ತಿ ಕಾಲೇಜಗೆ ಹೋದನು. ನಂತರ ಸಾಂಯಕಾಲ 6-50 ಗಂಟೆಯ ಸುಮಾರಿಗೆ ನನ್ನ ಮಗ ಸಿದ್ದಪ್ಪನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ಶಹಾಪೂರದಲ್ಲಿ ನಾನು ಇದ್ದಾಗ ನನ್ನ ಗೇಳೆಯ ಸಂತೋಷ ತಂದೆ ಅಂಬ್ರಪ್ಪ ಪಡಚೇಂಡಿ ಈತನು ಸೂರಪೂರಿಗೆ ಬರುತ್ತೇನೆ ಅಂತ ಹೇಳಿ ನನ್ನ ಮೋಟರ್ ಸೈಕಲ್ನ್ನು ಸಂತೋಷನೆ ನಡೆಸುತ್ತೆನೆ ಅಂತ ಹೇಳಿದನು. ಆಗ ನಾನು ಸರಿ ನಡೆಸು ಅಂತ ಹೇಳಿದೆನು. ನಮ್ಮ ಮೋಟರ್ ಸೈಕಲ್ ಮೇಲೆ ನನ್ನ ಗೇಳೆಯ ಸಂತೋಷ ಮತ್ತು ನಾನು ಇಬ್ಬರು ರುಕ್ಮಾಪೂರಕ್ಕೆ ಬರುತ್ತಿದ್ದಾಗ ನನ್ನ ಮೋಟರ್ ಸೈಕಲ್ ನಂ ಕೆಎ-28 ಇಎಲ್-4625 ನೇದ್ದನ್ನು ಸಂತೋಷನು ಚಲಾಯಿಸುತ್ತಿದ್ದನು. ನಾನು ಸಂತೋಷನ ಹಿಂದೆ ಕುಳಿತುಕೊಂಡಿದ್ದೆನು, ಸಂತೋಷನು ಮೋಟರ್ ಸೈಕಲ್ನ್ನು ಸುರಪೂರ-ಶಹಾಪೂರ ಮುಖ್ಯ ರಸ್ತೆಯ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತಾಪೂರ ಕಮಾನು ಇನ್ನು ಅಂದಾಜು 100 ಮೀಟರ್ ಮುಂದೆ ಇರುವಾಗ ಅಂದಾಜು 6-40 ಗಂಟೆಗೆ ಬ್ಯಾರಲ್ಗೆ (ಡ್ರಮ್ಗೆ) ಡಿಕ್ಕಿಪಡಿಸಿ ಅಪಘಾತಮಾಡಿರುತ್ತಾನೆ, ನಮಗಿಬ್ಬರಿಗು ಗಾಯವಾಗಿದೆ ಅಂತ ತಿಳಿಸಿದ್ದರಿಂದ. ನಾನು ಮತ್ತು ನನ್ನ ಹೆಂಡತಿ ಸರೋಜ ಗಂಡ ಸೋಮಶೇಖರ್ ಗೋಗಿ ಇಬ್ಬರು ಕೂಡಿ ನಮ್ಮೂರ ಮಂಜು ತಂದೆ ಮಲ್ಲಪ್ಪ ಮಡಿವಾಳ ಈತನ ಕಾರನ್ನು ತೆಗೆದುಕೊಂಡು ನಾನು ಮತ್ತು ನನ್ನ ಹೆಂಡತಿ ಹಾಗೂ ಮಂಜು ಕಾರ ಡ್ರೈವರ ಎಲ್ಲರು ಕೂಡಿ ಅಪಘಾತವಾಗಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಸಿದ್ದಪ್ಪನಿಗೆ, ಮುಕದ ಮೇಲೆ, ತುಟಿಗೆ ರಕ್ತಗಾಯ, ಬಲಗಾಲು ಮೋಳಕಾಲು ಮೇಲೆ ಭಾರಿ ಗುಪ್ತಗಾಯ. ಬಲಗಾಲು ಮೋಳಕಾಲು ಕೇಳಗೆ ರಕ್ತಗಾಯ. ಎಡಗಡೆ ಬುಜಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ ಸಂತೋಷನಿಗೆ ನೋಡಲಾಗಿ ಬಲಗಾಲು ಪಾದದ ಕಿಲಿಗೆ ಭಾರಿ ಗುಪ್ತಗಾಯ, ಬಲಗೈ ಮೋಳಕೈಗೆ ತರಚಿದಗಾಯವಾಗಿದ್ದು ಇರುತ್ತದೆ. ಅಪಘಾತವಾದ ನಮ್ಮ ಮೋಟರ್ ಸೈಕಲ್ ನಂ ಕೆಎ-28 ಇಎಲ್-4625 ನೇದ್ದು ಜಕಂ ಗೊಂಡಿರುತ್ತದೆ. ನನ್ನ ಮಗ ಸಿದ್ದಪ್ಪನಿಗೆ ಮತ್ತು ಸಂತೋಷನಿಗೆ, ಉಪಚಾರ ಕುರಿತು ನಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಶೆರಿಕೆಮಾಡಿದ್ದು ಇರುತ್ತದೆ. ಸಿದ್ದಪ್ಪನಿಗೆ ಮತ್ತು ಸಂತೋಷನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ನನ್ನ ಹೆಂಡತಿ ಸರೋಜ ಇಬ್ಬರು ಕೂಡಿಕೊಂಡು ಒಂದು ಅಂಬುಲೇನ್ಸದಲ್ಲಿ ಕಲಬುರಗಿಯ ಧನವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಮಗ ಸಿದ್ದಪ್ಪನಿಗೆ ಉಪಚಾರ ಮಾಡಿಸುವದು ಅವಶ್ಯವಾಗಿದ್ದರಿಂದ ಉಪಚಾರ ಮಾಡಿಸಿ ನಮ್ಮ ಹಿರಿಯರಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಅಂತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 79/2021 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ :- 55/2021 ಕಲಂ: 00 ಒಕ ಕಅ : ಸುಮಾರು 35 ವರ್ಷಗಳ ಹಿಂದೆ ಕಾಣೆಯಾದ ಮನುಷ್ಯನಾದ ನಾಗಪ್ಪನೊಂದಿಗೆ ಫಿರ್ಯಾದಿಯ ಮದುವೆಯಾಗಿದ್ದು ಅವರಿಗೆ ಮಕ್ಕಳಾಗದೇ ಇರುವುದರಿಂದ ಫಿರ್ಯಾದಿಯೇ ಖುದ್ದಾಗಿ ಸುಮಾರು 20 ವರ್ಷಗಳ ಹಿಂದೆ ಮರೆಮ್ಮ ಎಂಬಾಕೆಯೊಂದಿಗೆ 2ನೇ ಮದುವೆ ಮಾಡಿದ್ದು ಅವರ ದಾಂಪತ್ಯ ಜೀವನದಲ್ಲಿ ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಾಕೆ ಹೆಣ್ಣುಮಕ್ಕಳಿರುತ್ತಾರೆ. ಕಾಣೆಯಾದವನ 2ನೇ ಹೆಂಡತಿ ಹಾಗೂ ಇಬ್ಬರು ಮಕ್ಕಳು ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಅರಕೇರಾ(ಕೆ) ಗ್ರಾಮದಲ್ಲಿ ಮೊದಲನೇ ಹೆಂಡತಿ ಮತ್ತು ಇಬ್ಬರು ಮಕ್ಕಳು ಇರುತ್ತಾರೆ. ಹೀಗಿದ್ದು ದಿನಾಂಕ 03.04.2021 ರಂದು ಸಂಜೆ 4:00 ಗಂಟೆಯ ಸುಮಾರಿಗೆ ಎಂದಿನಿಂತೆ ಚಹಾ ಕುಡಿದು ಬರುತ್ತೇನೆಂದು ಮನೆಯಿಂದ ಗೇಟ್ ಕಡೆಗೆ ಹೋದನು ಮರಳಿ ಬಾರದೇ ಇರುವುದರಿಂದ ಫಿರ್ಯಾದಿ ಮತ್ತು ಆಕೆಯ ಮಗ ಊರಲ್ಲಿ ಹಾಗೂ ಸಂಬಂದಿಕರು ಇರುವ ಕಡೆಗಳಲ್ಲಿ ಹುಡುಕಾಡಿ ಫೋನ್ ಮಾಡಿ ವಿಚಾರಿಸಿದರು ಸಹ ಪತ್ತೆಯಾಗದೇ ಇರುವದರಿಂದ ತಡವಾಗಿ ಇಂದು ದಿನಾಂಕ 10.04.2021 ರಂದು ಸಂಜೆ 4:00 ಗಂಟೆಗೆ ಠಾಣೆಗೆ ಬಂದು ಕಾಣೆಯಾಗಿದ್ದ ತನ್ನ ಗಂಡನನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 55/2021 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ :- 56/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 10.04.2021 ರಂದು ಸಾಯಂಕಾಲ 7:30 ಗಂಟೆಗೆ ಗುರುಮಠಕಲ್ ಪಟ್ಟಣದ ಬಸ್-ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 11/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 10:00 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ರಾತ್ರಿ 11:15 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಪರಮೇಶ ಹೆಚ್ಸಿ-215 ಗುರುಮಠಕಲ್ ಠಾಣೆ ಗುನ್ನೆ ನಂಬರ 56/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ :- 18/2021 ಕಲಂ: 32, 34 ಕೆ.ಇ ಆಕ್ಟ್ ಮತ್ತು 273, 284 ಐಪಿಸಿ : ಇಂದು ದಿನಾಂಕ 10/04/2021 ರಂದು 6:30 ಪಿ.ಎಂ ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜಪ್ತಿ ಪಂಚನಾಮೆ ಹಾಗೂ ಜ್ಞಾಫನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ: 10/04/2021 ರಂದು 4:20 ಪಿ.ಎಂ ಕ್ಕೆ ಠಾಣೆಯಲ್ಲಿ ಇದ್ದಾಗ ರಾಯನಗೋಳ ಗ್ರಾಮದ ಹುಸೇನಸಾಬ ಇವರ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಒಬ್ಬ ವೆಕ್ತಿಯು ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಢುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 5:05 ಪಿ.ಎಂಕ್ಕೆ ಹೋಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವನ ಮೇಲೆ ದಾಳಿಮಾಡಲು ಹೋದಾಗ ಸಮವಸ್ತ್ರದಲ್ಲಿ ಇದ್ದ ಪಿ.ಎಸ್.ಐ ಸಾಹೇಬರಿಗೆ ನೋಡಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುವವನು ಓಡಿ ಹೋಗಿದ್ದು ಪೊಲೀಸ್ ಬಾತ್ಮಿದಾರರಿಗೆ ಓಡಿಹೋದವನ ಹೆಸರು ವಿಚಾರಿಸಲಾಗಿ ಅವರು ಅವನ ಹೆಸರು ಹುಸೇನಸಾಬ ತಂದೆ ರಾಜೇಸಾಬ ಮುಕ್ತೆದಾರ ವ:38 ವರ್ಷ ಉ:ಕೂಲಿ ಕೆಲಸ ಜಾ:ಮುಸ್ಲಿಂ ಸಾ:ರಾಯನಗೋಳ ಅಂತಾ ತಿಳಿಸಿದ್ದು ಆರೋಪಿತನು ತಮ್ಮ ಮನೆಯ ಮುಂದಿನ ಖುಲ್ಲಾಜಾಗದಲ್ಲಿ ಕುಳಿತು ಸಾರ್ವಜನಿಕರಿಗೆ ಕಳ್ಳಬಟ್ಟಿ ಸಾರಾಯಿ ಮಾರಟಮಾಡುತ್ತಿದ್ದನು ಅಂತಾ ತಿಳಿಸಿದ್ದು ಇರುತ್ತದೆ. ನಂತರ ಸ್ಥಳ ಪರೀಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಅಂದಾಜು 05 ಲೀಟರ್ ಅಳತೆಯ ಒಂದು ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 4 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು 400/- ರೂ ಆಗುತ್ತಿದ್ದು ಹಾಗೂ ಕ್ಯಾನಿನ ಪಕ್ಕದಲ್ಲಿ ಒಂದು ಸ್ಟಿಲನ ಗ್ಲಾಸ ಇದ್ದು ಸದರಿಯವುಗಳನ್ನು ವಶಕ್ಕೆ ಪಡೆದುಕೊಂಡು 5:05 ಪಿ.ಎಂ ದಿಂದ 6:05 ಪಿ.ಎಂ ದ ವರೆಗೆ ಜಪ್ತಿ ಪಂಚನಾಮೆಯನ್ನು ಪೂರೈಸಿ ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 11-04-2021 01:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080