ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/02/2021

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 22/2021 ಕಲಂ: 379, 511 ಐಪಿಸಿ : ಇಂದು ದಿನಾಂಕ: 11/02/2021 ರಂದು 2-15 ಪಿಎಮ್ ಕ್ಕೆ ಶ್ರೀ ಸಂಜೀವ ಕವಲಿ ಕಂದಾಯ ನಿರೀಕ್ಷಕರು ವಡಗೇರಾ ತಹಶೀಲ್ದಾರ ಕಛೇರಿ ಇವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 11/02/2021 ರಂದು ಬೆಳ್ಳಗೆ 5-00 ಗಂಟೆ ಸುಮಾರಿಗೆ ವಡಗೇರಾದಲ್ಲಿ ನಾನು ಮತ್ತು ನಮ್ಮ ತಹಶೀಲ್ದಾರರಾದ ಸುರೇಶ ಅಂಕಲಗಿ, ಮಲ್ಲಿಕಾಜರ್ುನ ಕೋಡಾಲ ಗ್ರಾಮ ಲೆಕ್ಕಾಧಿಕಾರಿರವರು ಇದ್ದಾಗ ತಹಶೀಲ್ದಾರರಿಗೆ ಕೊಡಾಲ ಗ್ರಾಮದ ಕೃಷ್ಣ ನದಿ ದಡದ ಗಡ್ಡೆ ಬಸವೇಶ್ವರ ದೇವಸ್ಥಾನದ ಹತ್ತಿರ ಯಾರೋ ಕೆಲವರು ಟ್ಯ್ರಾಕ್ಟರಗಳಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ ವಡಗೇರಾ ಠಾಣೆಯ ಕೊಡಾಲ ಗ್ರಾಮದ ಬೀಟ್ ಪಿಸಿ ಮಾಳಪ್ಪ ಇವರಿಗೆ ಕರೆಸಿಕೊಂಡು ಎಲ್ಲಾರೂ ಸೇರಿ ತಹಶೀಲ್ದಾರರ ಸಕರ್ಾರಿ ಜೀಪ ನಂಬರ ಕೆಎ. 33 ಜಿ 4567 ರಲ್ಲಿ ಹೊರಟು ಎಲ್ಲಾರೂ 5-45 ಎಎಮ್ ಸುಮಾರಿಗೆ ಕೃಷ್ಣನದಿಯ ಗಡ್ಡೆ ಬಸವೇಶ್ವರ ದೇವಸ್ಥಾನದ ಹತ್ತಿರ ಎರಡು ಟ್ಯಾಕ್ಟರಗಳಲ್ಲಿ ಮರಳು ತುಂಬಲು ಪ್ರಯತ್ನಿಸ್ಮತ್ತಿರುವುದನ್ನು ನೋಡಿ ನಾವು ಒಮ್ಮಲೇ ದಾಳಿ ಮಾಡಿದಾಗ ಟ್ಯ್ರಾಕ್ಟರ ಚಾಲಕರು ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು. ಸದರಿ ಚಾಲಕರಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟ್ರ್ಯಾಕ್ಟರಗಳನ್ನು ನೋಡಲಾಗಿ ಒಂದು ಮಹೇಂದ್ರ ಕೆಂಪು ಬಣ್ಣದ ಟ್ರಾಕ್ಟರ ಇದ್ದು ನೋಂದಣಿ ಇರುವುದಿಲ್ಲ. ಟ್ರ್ಯಾಕ್ಟರ ಚೆಸ್ಸಿ ನಂ. ಒಃಓಂಆಂಎಘಿಂಊಓಉಔ1425 ಇದ್ದು ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಸದರಿ ಟ್ರ್ಯಾಲಿಯಲ್ಲಿ ನಾಲ್ಕು-ಐದು ಪುಟ್ಟಿ ಮರಳು ಇತ್ತು ಮತ್ತೊಂದು ಟ್ಯ್ರಾಕ್ಟರ ನೋಡಲಾಗಿ ಹಸಿರು ಬಣ್ಣದ ಎಲ್ಎನ್ಟಿಕಂಪನಿಯಿದ್ದು ನೊಂದಣಿ ಇರುವುದಿಲ್ಲ ಟ್ರ್ಯಾಕ್ಟರ ಚೆಸ್ಸಿ ನಂ. 3029ಆ186147 ಇದ್ದು ಟ್ರ್ಯಾಲಿಗೆ ಕೂಡ ನಂಬರ ಇರುವುದಿಲ್ಲ ಸದರಿ ಟ್ರ್ಯಾಲಿಯಲ್ಲಿ ಕೂಡ ಅಂದಾಜು 6-7 ಪುಟ್ಟಿ ಮರಳು ಇರುತ್ತದೆ. ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಕೃಷ್ಣನದಿಯಿಂದ ಮರಳು ಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದಾಗ ನಾವು ದಾಳಿ ಮಾಡಿದ್ದು ನೋಡಿ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿ ಟ್ರ್ಯಾಕ್ಟರಗಳನ್ನು ಬೇರೆ ಚಾಲಕರ ಸಹಾಯದಿಂದ ಚಲಾಯಿಸಿಕೊಂಡು ಠಾಣೆಗೆ ಬಂದು 2-15 ಪಿಎಮ್ ಕ್ಕೆ ನಿಮಗೆ ದೂರು ನೀಡುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.22/2021 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2021, ಕಲಂ. 323, 324, 504. 506 ಸಂಗಡ 149 ಐ ಪಿ ಸಿ : ಇಂದು ದಿನಾಂಕ 11-02-2021 ರಂದು 7-15 ಎ ಎಮ್ ಕ್ಕೆ ಪಿಯರ್ಾದಿ ಶ್ರೀ ದೇವದತ್ತ ತಂದೆ ದಿ: ರಾಮಸಿಂಗ್ ಜಾದವ್ ವಯಾ|| 30 ವರ್ಷ ಜಾ|| ಲಂಬಾಣಿ ಉ|| ದ್ವಿತೀಯ ದಜರ್ೆಯ ಸಹಾಯಕ ಅರಕೇರಾ ಶಿಕ್ಷಣ ಇಲಾಖೆ ತಾ|| ದೇವದುಗರ್ಾ ಜಿಲ್ಲಾ|| ರಾಯಚೂರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶವೇನಂದರೆ. ದಿನಾಂಕ 08-02-2021 ರಂದು ಸಾಯಂಕಾಲ ಸಮಯ 6-35 ನನ್ನ ಹೆಂಡತಿಯ ತವರು ಮನೆಯಾದ ಸೈದಾಪೂರ ಗ್ರಾಮಕ್ಕೆ ನನ್ನ ಹೆಂಡತಿ ಮಕ್ಕಳನ್ನು ಕರೆತರಲು ಬಂದಾಗ ಈ ಕೆಳಗಿನಂತೆ ವಿವರಿಸಲಾದ ಘಟನೆ ನಡೆದಿರುತ್ತದೆ. ನನ್ನ ಹೆಂಡತಿಯಾದ ಭವಾನಿ ಗಂಡ ದೇವದತ್ತ ಇವರಿಗೆ ನನ್ನ ಸ್ವ- ಸ್ಥಳಕ್ಕೆ ನನ್ನ ಜೊತೆ ಬರುವಂತೆ ತಿಳಿಸಿದಾಗ ನನ್ನ ಹೆಂಡತಿ ಬರಲು ತಿರಸ್ಕರಿಸಿದ್ದು. ಪದೆ ಪದೇ ವಿನಂತಿಸಿದರು ಬರಲು ನಿರಾಕರಿಸಿ ಬಹಾಳ ಒತ್ತಾಯ ಮಾಡಿದರೆ ನಿನ್ನ ಮೇಲೆ ಡೌರಿ ಕೇಸ ಹಾಕುತ್ತೇನೆಂದು ಮತ್ತು ನನ್ನ ತಂದೆ ತಾಯಿ ಚಿಕ್ಕಪ್ಪ ದೊಡ್ಡಪ್ಪರವರಿಂದ ಕೈಕಾಲು ಮುರಿಸಿ ಕೊಲೆ ಮಾಡಿಸುತ್ತೇನೆಂದು ಧಮಕಿ ಹಾಕಿರುತ್ತಾಳೆ ಇದೆ ಸಮಯದಲ್ಲಿ ನನ್ನ ಮಾವನಾದ 1) ಧರ್ಮರಾಜ ರಾಠೋಡ. ಅತ್ತೆಯಾದ 2) ಬಸಮ್ಮ ಗಂಡ ಧರ್ಮರಾಜ. ನನ್ನ ಹೆಂಡತಿಯಾದ 3) ಭವಾನಿ. ಸಣ್ಣ ಮಾವಂದಿರಾದ 4) ಶಂಕರ ರಾಠೋಡ. 5) ವಸಂತ ರಾಠೋಡ. ಹೆಂಡತಿ ತಮ್ಮನಾದ 6) ಅಂಬ್ರೇಶ ರಾಠೋಡ. ಇವರೆಲ್ಲಾರು ಸೇರಿ ನನ್ನ ಮೇಲೆ ಏಕಾಏಕಿ ದಾಳಿ ಮಾಡಿ ನನ್ನ ಕಣ್ಣು ಮುಖ ಮೈಮೇಲೆ ಬರೆ ಮೂಡುವಂತೆ ಹೊಡೆದು ಥಳಿಸಿರುತ್ತಾರೆ. ಹಾಗೂ ಮಾನಸಿಕವಾಗಿ ಅವಾಚ್ಚ ಶಬ್ದಗಳಿಂದ ನಿಂದಿಸಿರುತ್ತಾರೆ. ಆದ್ದರಿಂದ ದಯಾಳುಗಲಾದ ಇವರುಗಳ ಮೇಲೆ ಸೂಕ್ತ ಕ್ರಮಜರುಗಿಸಿ ನನಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ಮನವಿ ಅಂತಾ ಪಿಯರ್ಾದಿ ಸಾರಾಂಶವಿದ್ದು. ಸದರಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂಬರ 22/2021 ಕಲಂ. 323.324.504.506. ಸಂ 149 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 23/2021 ಕಲಂ ಬಾಲಕ ಕಾಣೆಯಾದ ಬಗ್ಗೆ : ಇಂದು ದಿನಾಂಕ. 11.02.2021 ರಂದು ಮಧ್ಯಾಹ್ನ 2-30 ಗಂಟೆಗೆ ಶ್ರೀ ಅಂಜಪ್ಪ ತಂದೆ ಈರಪ್ಪ ಬಾಲಚೇಡದೋರ ವ|| 45 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಕಾಳೇಬೇಳಗುಂದಿ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ದೂರು ಅಜರ್ಿ ಹಾಜರಪಡಸಿದ್ದರ ಸಾರಾಂಶವೇನೆಂದರೆ, ದಿನಾಂಕ. 10.02.2021 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗ ಬನಶಂಕರ ಇವನು ಆಧಾರ ಕಾರ್ಡ ಮಾಡಿಸಿಕೊಂಡು ಬರಲು ಸೈದಾಪೂರಕ್ಕೆ ಹೋಗಿ ಬರುವದಾಗಿ ಹೇಳಿ ಮನೆಯಿಂದ ಹೋದವನು. ರಾತ್ರಿಯಾದರೂ ಮರಳಿ ಮನೆಗೆ ಬರದ ಕಾರಣ ನಾನು, ನನ್ನ ಹೆಂಡತಿ ಸಂಗೀತಾ, ನನ್ನ ಅಳಿಯ ಮಲ್ಲಿಕಾಜರ್ುನ ಎಲ್ಲರು ಕೂಡಿ ಸೈದಾಪೂರಕ್ಕೆ ಬಂದು ನಮ್ಮ ಪರಿಚಯಸ್ಥರಿಗೆ ವಿಚಾರಣೆ ಮಾಡಿ ಹುಡುಕಾಡಿದ್ದು ನನ್ನ ಮಗ ಸಿಕ್ಕಿರುವದಿಲ್ಲ. ನಂತರ ನಮ್ಮ ಸಂಬಂಧಿಕರಿಗೆ ಎಲ್ಲಾ ಕಡೆಗೂ ಫೋನ ಮಾಡಿ ವಿಷಯ ತಿಳಿಸಿದ್ದು ಎಲ್ಲಿಯೂ ನನ್ನ ಮಗ ಇರುವ ಸುಳಿವು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ಮಗನ ಚಹರೆ ಸಾದಾರಣ ಗೋಧಿ ಮೈಬಣ್ಣ, ನೆಟ್ಟನೆಯ ಮೂಗು. ದುಂಡುಮುಖ, ಎತ್ತರ 4' 1'' ಇರುತ್ತಾನೆ. ನನ್ನ ಮಗ ಕಾಣೆಯಾದಾಗ ಮೈಮೇಲೆ ಬ್ಲೂ ಕಲರ ಕಾಟನ ಹಾಫ್ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಕೊರಳಲ್ಲಿ ರುದ್ರಾಕ್ಷಿ ಧರಿಸಿರುತ್ತಾನೆ. ಸದರಿಯವನು ಎಲ್ಲಾದರೂ ಕಂಡುಬಂದಲಿ ನಮಗೆ ಹುಡುಕಿ ಕೊಡಬೇಕು ಅಂತ ನಾವು ಎಲ್ಲಾ ಕಡೆ ಹುಡಕಾಡಿ ಇಂದು ದಿನಾಂಕ: 11.02.2021 ರಂದು ಠಾಣೆಗೆ ತಡವಾಗಿ ಬಂದು ನನ್ನ ಮಗ ಬನಶಂಕರ ತಂದೆ ಅಂಜಪ್ಪ ಬಾಲಚೇಡದೋರ ವಯ|| 15 ವರ್ಷ, ಜಾ|| ಬೇಡರ ಉ|| ವಿದ್ಯಾಥರ್ಿ ಸಾ|| ಕಾಳೇಬೆಳಗುಂದಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. ಕಲಂ. ಬಾಲಕ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆ

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 19/2020 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಹೆಸರಿನ ಮೇಲೆ ನನ್ನದೊಂದು ಟ್ರ್ಯಾಕ್ಟರ್ ಇದ್ದು ಅದರ ಇಂಜಿನ್ ನೊಂದಣಿ ಸಂಖ್ಯೆ ಕೆ.ಎ 33 ಟಿ 5671, ಹಾಗೂ ಟ್ರ್ಯಾಲಿ ನೊಂದಣಿ ಸಂಖ್ಯೆ ಕೆ.ಎ 33 ಟಿ 5672 ಅಂತಾ ಇರುತ್ತದೆ. ಈ ಟ್ರ್ಯಾಕ್ಟರ್ ಮೇಲೆ ತಾಯಪ್ಪ ತಂದೆ ಶಿವಪ್ಪ ಹೆಂಡೆರ್ ಸಾ|| ಹೆಡಗಿಮದ್ರಿ ಇವರು ಚಾಲಕ ಅಂತಾ ಕೆಲಸ ಮಾಡುತ್ತಾನೆ. ಸುಮಾರು 15 ದಿವಸಗಳಿಂದ ಹಣಮಂತರೆಡ್ಡಿ ಮುದ್ನಾಳ ಇವರು ಕೆಲಸ ಮಾಡುವ ಸುಭಾಷ ವೃತ್ತದಿಂದ-ಹಳ್ಳದ ವರೆಗೆ ನಡೆದ ಡ್ರ್ಯಾನೇಜ್ ವಕರ್್ಗಾಗಿ ನನ್ನ ಟ್ರ್ಯಾಕ್ಟರ್ ಕೆಲಸ ಮಾಡುವ ಬಾಡಿಗೆ ಬಿಟ್ಟಿದ್ದು ಇರುತ್ತದೆ. ಹೀಗಿದ್ದು ದಿನಾಂಕ 09/02/2021 ರಂದು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ನಮ್ಮ ಟ್ರ್ಯಾಕ್ಟರ್ದಲ್ಲಿ ಚಾಲಕ ಕಂಕರ್ ಹೊಡೆದು ನಮ್ಮ ಚಾಲಕ ಟ್ರ್ಯಾಲಿ ನೊಂದಣಿ ಸಂಖ್ಯೆ ಕೆ.ಎ 33 ಟಿ 5672, ಚೆಸ್ಸಿ ನಂ 46/2005 ನೇದ್ದು, ಸಾಯಂಕಾಲ 06-30 ಗಂಟೆಯ ಸುಮಾರಿಗೆ ವಾಡಿ-ಯಾದಗಿರಿ ರೋಡ ಶ್ರೀಸಾಯಿ ಕಾರ್ ಕೇರ್ ಹತ್ತಿರ ರೋಡಿನ ಮೇಲೆ ನಿಲ್ಲಿಸಿ, ಇಂಜಿನ್ ನೀರಿನ ಟ್ಯಾಂಕ್ ತೆಗೆದುಕೊಂಡು ಬೇರೆ ಸೈಟಿಗೆ ಬಿಟ್ಟು ಮನೆಗೆ ಹೋಗಿದ್ದು ಇರುತ್ತದೆ. ನಂತರ ಮರಳಿ ದಿನಾಂಕ 10/02/2021 ರ ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ನೋಡಿದಾಗ ನನ್ನ ಟ್ರ್ಯಾಲಿ ಇಲ್ಲದ್ದು ನೋಡಿ ಚಾಲಕ ನನಗೆ ಪೋನ್ ಮಾಡಿ ಹೇಳಿದನು. ನಂತರ ನಾನು ಹಾಗೂ ನಮ್ಮಲ್ಲಿ ಸುಪ್ರವೈಜರ್ ಕೆಲಸ ಮಾಡುವ ರಾಜು ತಂದೆ ರಂಗಯ್ಯ ಇಳಿಗೇರ ಮತ್ತು ಆನಂದ ತಂದೆ ಶಿವಪ್ಪ ಸುರಪೂರ ಇವರು ಬಂದು ನೋಡಿದರು ಎಲ್ಲರು ಕೂಡಿ ಅಲ್ಲಿ ಅಲ್ಲಿ ನೋಡಿದರು ನಮ್ಮ ಟ್ರ್ಯಾಲಿ ಕಾಣಲಿಲ್ಲ. ಸದರಿ ಟ್ರ್ಯಾಲಿಯ ಅಂದಾಜು ಕಿಮ್ಮತ್ತು 50,000/-ರೂ|| ಗಳು. ಯಾರೋ ಕಳ್ಳರು ಸದರಿ ಟ್ರ್ಯಾಲಿ ತೆಗೆದುಕೊಂಡು ಹೋಗಿರುತ್ತಾರೆ. ಅದನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 19/2021 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 20/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 11/02/2021 ರಂದು 5-45 ಪಿಎಮ್ ಕ್ಕೆ ಶ್ರೀ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ.11/02/2021 ರಂದು 5-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆತ್ಮಲಿಂಗೇಶ್ವರ ದೇವಸ್ಥಾನದ ಮುಂದುಗಡೆ ರೋಡಿನ ಮೇಲೆ ಸಾರ್ವಜನಿಕ ರಸ್ತೆಯ ಮೇಲೆ ಕೆಲವರು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 5-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 5-45 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.20/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 39/2021 ಕಲಂ:323, 504, 506, 498(ಎ) ಐಪಿಸಿ : ಇಂದು ದಿನಾಂಕ:11/02/2021 ರಂದು 2:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀಮತಿ ಜಯಲಕ್ಷ್ಮಿ ಗಂಡ ಬಸವರಾಜ ತಣಕೆದಾರ ವ|| 35 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಪೇಠ ಅಮ್ಮಾಪುರ ತಾ|| ಸುರಪುರ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಾನು ಕೂಲಿ ನಾಲಿ ಮಾಡಿಕೊಂಡು ನನ್ನ ತಾಯಿಯೊಂದಿಗೆ ವಾಸವಾಗಿರುತ್ತೆನೆ. ಮೂರು ವರ್ಷಗಳ ಹಿಂದೆ ನಮ್ಮೂರಿನ ಬಸವರಾಜ ಇತನೊಂದಿಗೆ ಪ್ರೇಮ ಬೆಳೆದ ನಂತರ ಆತನು ನನಗೆ ವಿವಾಹ ಮಾಡಿಕೊಳ್ಳೋಣ ಎಂದು ಪ್ರಚೋದನೆ ಮಾಡುತ್ತಿದ್ದನು, ಈ ವಿವಾಹಕ್ಕೆ ನಿಮ್ಮ ಮನೆಯವರು ಒಪ್ಪವರು ಇಲ್ಲಾ ಕೇಳು ನಂತರ ಮದುವೆ ಮಾಡಿಕೊಳ್ಳೋಣ ಎಂದಾಗ ಬಸವರಾಜ ಇತನು ಯಾರೂ ಒಪ್ಪಲಿ ಬಿಡಲಿ ನಾನು ಮಾತ್ರ ಒಪ್ಪಿತ್ತೇನೆ. ಅಂತಾ ಹೇಳಿ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ನಾನು ಮತ್ತು ಬಸವರಾಜ ತಣಕೇದಾರ ಇತನೊಂದಿಗೆ ದಿನಾಂಕ:01/01/2018 ರಂದು ಮದುವೆ ಮಾಡಿಕೊಂಡಿದ್ದು ಇರುತ್ತದೆ. ನಂತರ ನಾನು ಮತ್ತು ಬಸವರಾಜ ಇಬ್ಬರು ಪ್ರೀತಿಯಿಂದ ಇದ್ದು ಶಹಾಪುರದಲ್ಲಿ ಮನೆ ಮಾಡಿಕೊಂಡು ಇದ್ದೇವು, ನನಗೆ ಮಕ್ಕಳು ಆಗದೆ ಇದ್ದರಿಂದ ಈಗ ಒಂದು ವರ್ಷದಿಂದ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದನು. ನಾನು ಸರಿ ಹೊಗಬಹುದು ಅಂತಾ ತಿಳಿದು ಸುಮ್ಮನಿದ್ದೇನು. ನಾನು ಆಗಾಗ ನನ್ನ ತವರು ಮನೆಯಾದ ಪೇಠ್ಅಮ್ಮಾಪುರಕ್ಕೆ ಬಂದಾಗ ನನ್ನ ತಾಯಿ ಮರೆಮ್ಮ ಇವರಿಗೆ ಹೇಳಿದಾಗ ಸಂಸಾರದಲ್ಲಿ ಇದು ಇದ್ದಿದೆ ಹೊಂದಿಕೊಂಡು ಹೊಗ ಬೇಕು ಅಂತಾ ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದಳು. ಈಗ ಸುಮಾರು ಆರು ತಿಂಗಳ ದಿಂದ ಶಹಾಪುರಕ್ಕ ಬರುತ್ತಿರಲಿಲ್ಲ ಆತನು ಪೇಠ ಅಮ್ಮಾಪುರದಲ್ಲಿಯೇ ಇರುತ್ತದ್ದನು. ನಾನು ಬಾ ಅಂತಾ ಹೇಳಿದರು ಬಂದಿರುವದಿಲ್ಲ. ನಾನು ಪೇಠ ಅಮ್ಮಾಪುರದಲ್ಲಿರುವ ನನ್ನ ತಾಯಿಯ ಬಳಿ ಬಂದು ಇದ್ದೇನು. ಹಿಗಿದ್ದು ದಿನಾಂಕ:08/02/2021 ರಂದು ರಾತ್ರಿ ಅಂದಾಜು 8:00 ಗಂಟೆಗೆ ನಾನು ಮತ್ತು ನನ್ನ ತಾಯಿಯಾದ ಮರೆಮ್ಮ ಗಂಡ ಭೀಮಣ್ಣ ಲಿಂಗದಳ್ಳಿ ಇಬ್ಬರು ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ನನ್ನ ಗಂಡ ಬಸವರಾಜ ತಂದೆ ಮಾನಪ್ಪ ತಣಕೇದಾರ ಇತನು ಮನೆಯ ಮುಂದೆ ಬಂದು ಏಲೇ ಸೂಳೆ ನೀನು ಶಹಾಪುರದಲ್ಲಿ ಇರು ಅಂತಾ ಹೇಳಿದರೂ ಇಲ್ಲಿಗೆ ಏಕೆ ಬಂದಿವರು ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಕೈಯಿಂದೆ ಕಪಾಳಕ್ಕೆ ಬೆನ್ನಿಗೆ ಹೊಟ್ಟೆಗೆ ಹೊಡೆಯುತ್ತಿರುವಾಗ ಮನೆಗೆ ಬರುತ್ತಿದ್ದ ನನ್ನ ಅಣ್ಣ ತಿಮ್ಮಣ್ಣ ತಂದೆ ಭೀಮಣ್ಣ ಲಿಂಗದಳ್ಳಿ ಮತ್ತು ನನ್ನ ತಾಯಿ ಮರೆಮ್ಮ ಇಬ್ಬರು ಕೂಡ ಜಗಳನ್ನು ನೋಡಿ ಬಿಡಿಸಿಕೊಂಡುರು. ಇವರು ಬಂದು ಜಗಳ ಬಿಡಿಸಿದ್ದಾರ ಬಿಟ್ಟಿದಿನಿ ಸೂಳಿ ಇಲ್ಲ ಅಂದರ ನಿನ್ನ ಜೀವ ಹೊಡೆಯದೆ ಬಿಡುತ್ತಿರಲ್ಲ ಸೂಳಿ ಅಂತಾ ಜೀವದ ಬೇದರಿಕೆ ಹಾಕಿ ಹೊದನು. ನಂತರ ನಾನು ಮನೆಯಲ್ಲಿ ನನ್ನ ತಾಯಿ ಮತ್ತು ಅಣ್ಣನ ಜೋತೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸುಮಾರು 1 ವರ್ಷದಿಂದ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದಿದ್ದರಿಂದ ನಾನು ತವರು ಮನೆಗೆ ಬಂದರೂ ಸಹ ಇಲ್ಲಿಗೆ ಬಂದು ಹೊಡೆಬಡೆ ಮಾಡಿರುವ ಬಸವರಾಜ ತಣಕೆದಾರ ಇತನ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ದಯಾಪರರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 39/2021 ಕಲಂ: 323, 504, 506 498(ಎ) ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ :- 13/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 11/02/2021 ರಂದು 04.00 ಪಿ.ಎಮ್.ಕ್ಕೆ ಹೊಸೂರ ಗ್ರಾಮದ ಗುರುಲಿಂಗೇಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 05.30 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.20 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1610=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 05/2020 ಕಲಂ:110 (ಇ) ಮತ್ತು (ಜಿ) ಸಿಆರ್ಪಿಸಿ : ಇಂದು ದಿನಾಂಕ: 11/02/2021 ರಂದು ನಾನು ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ್ ಕರ್ತವ್ಯ ಕುರಿತು ಹಾರಣಗೇರಾ, ದರ್ಶನಾಪೂರ ಮತ್ತು ರಬ್ಬನಳ್ಳಿ ಗ್ರಾಮದ ಬೇಟಿ ಮಾಡಿ ಗೋಗಿ ಕೆ ಗ್ರಾಮದ ವನದುಗರ್ಾ ಕ್ರಾಸ್ ಹತ್ತಿರ ಬರುತ್ತಿದ್ದಾಗ, ವನದುಗರ್ಾ ಕ್ರಾಸ್ನ ಸಾರ್ವಜನಿಕ ರಸ್ತೆಯ ಮೇಲೆ 03.40 ಪಿ.ಎಂ ಸುಮಾರಿಗೆ ದಾರಿಯಲ್ಲಿ ಮೂರು ಜನ ವ್ಯಕ್ತಿಗಳು ಹೊಗಿ ಬರುವ ಜನರೊಂದಿಗೆ ಅಸಬ್ಯ ರೀತಿಯಿಂದ ವರ್ತನೆ ಮಾಡುತ್ತಾ ಹೆಣ್ಣು ಮಕ್ಕಳಿಗೆ ಬೈಯುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವಜನರಿಗೆ ಹೇದರಿಸುವದು ಬೇದರಿಸುವದು ಮಾಡವದನ್ನು ಕಂಡು ಸದರಿಯವನನ್ನು ಹೀಗೆ ಬಿಟ್ಟರೆ ಸಾರ್ವಜನಿಕರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗಉಂಟು ಮಾಡುವ ಸಂಬವ ಹೆಚ್ಚಾಗಿ ಕಂಡು ಬಂದಿದ್ದರಿಂದ ಸದರಿಯವರನ್ನು 3-50 ಪಿಎಂಕ್ಕೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 04.15 ಪಿಎಂ.ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ಆರೋಪಿತರ ವಿರುದ್ದ ಠಾಣೆಯ ಪಿ.ಎ.ಆರ್ ನಂ:05/2021 ಕಲಂ, 110 (ಇ) (ಜಿ) ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 19/2021 ಕಲಂ: 379 ಐ.ಪಿ.ಸಿ : ಇಂದು ದಿನಾಂಕ: 11/02/2021 ರಂದು 7.45 ಪಿಎಮ್ಕ್ಕೆ ಫಿಯರ್ಾದಿ ಶ್ರೀ. ಸತೀಶ ತಂದೆ ಸವರ್ೇಶರಾವ್ ಪಾತೂರಿ ವಯಾ|| 32 ವರ್ಷ ಜಾ|| ಕಮ್ಮಾ ಉ|| ಒಕ್ಕಲುತನ ಸಾ|| ಲಕ್ಷ್ಮೀನಗರ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಸುಮಾರು 18 ವರ್ಷಗಳಿಂದ ನಾನು ಕೆಂಭಾವಿಯ ಶಾಂತಗೌಡ ಬಿರಾದಾರ (ನೀರಲಗಿ) ಇವರ ಕೆಂಭಾವಿ ಸೀಮಾಂತರದ ಸಾಯಿನಗರದ ಹತ್ತಿರ ಇರುವ ಹೊಲವನ್ನು ಲೀಜಿಗೆ ಹಾಕಿಕೊಂಡಿರುತ್ತೇನೆ. ಸದರಿ ಹೊಲಕ್ಕೆ ನೀರುಣಿಸುವ ಸಲುವಾಗಿ ಹೊಲಕ್ಕೆ ಹತ್ತಿರುವ ಹಳ್ಳದಿಂದ ನೀರು ತೆಗೆದುಕೊಳ್ಳುವ ಸಲುವಾಗಿ, ಸದರ ಹಳ್ಳಕ್ಕೆ 2 ಹೆಚ್ಪಿಯ ಖಿಇಘಿಒಔ ಕಂಪನಿಯ ನೀಲಿ ಬಣ್ಣದ ನೀರು ಎತ್ತುವ ಮೊಟಾರ ಕೂಡಿಸಿದ್ದು ಅದರ ಅ.ಕಿ. 13,000/ ರೂ.ಗಳು ಇರುತ್ತದೆ. ಹೀಗಿದ್ದು ಎಂದಿನಂತೆ ದಿನಾಂಕ 11.02.2021 ರಂದು ಬೆಳಿಗ್ಗೆ 06.00 ಗಂಟೆ ಸುಮಾರಿಗೆ ನಾನು ಲೀಜಿಗೆ ಮಾಡಿದ ಹೊಲದ ಕಡೆಗೆ ತಿರುಗಾಡುತ್ತಾ ಹೋದಾಗ ಹಳ್ಳಕ್ಕೆ ಕೂಡಿಸಿದ ನನ್ನ 2 ಹೆಚ್.ಪಿ ನೀರು ಎತ್ತುವ ಮೊಟಾರ ಕಾಣಿಸಲಿಲ್ಲ, ಆಗ ನಾನು ಗಾಬರಿಯಾಗಿ ಹೊಲದ ತುಂಬೆಲ್ಲಾ ಹಾಗೂ ಹಳ್ಳದ ಬದುವಿನಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ. ನಮ್ಮ 2 ಹೆಚ್.ಪಿ ನೀರು ಎತ್ತುವ ಮೊಟಾರ ಅ;ಕಿ: 13000/ ರೂಗಳು. ನೇದ್ದನ್ನು ದಿನಾಂಕ 10.02.2021 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ 11.02.2021 ರ ಬೆಳಗಿನ ಜಾವ 06.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಮೊಟಾರ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ಸಲ್ಲಿಸಿದ್ದು, ಕಾರಣ ನನ್ನ 2 ಹೆಚ್.ಪಿ ನೀರು ಎತ್ತುವ ಖಿಇಘಿಒಔ ಮೊಟಾರ ಅ;ಕಿ: 13,000/ ರೂ. ಕಿಮ್ಮತ್ತಿನ ಮೊಟಾರನ್ನು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಬೇಕು ಅಂತ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:19/2021 ಕಲಂ: 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಇತ್ತೀಚಿನ ನವೀಕರಣ​ : 12-02-2021 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080