ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/03/2021

ಸೈದಾಪೂರ ಪೊಲೀಸ್ ಠಾಣೆ:- 43/2021 ಕಲಂ 366, 109 ಸಂಗಡ 149 ಐಪಿಸಿ ದಿನಾಂಕ: 11-03-2021 ರಂದು ಮದ್ಯಾಹ್ನ 02-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನನಗೆ 1) ಮೋನೇಶ 2) ಮಹೇಶ 3) ಮಲ್ಲೇಶ 4) ಶ್ರೀದೇವಿ 5) ಸುನಿತಾ ಅಂತಾ 3 ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇದ್ದು ನನ್ನ ಮಗಳಾದ ಶ್ರೀದೇವಿ ಈಕೆಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ನನ್ನ 2 ಜನ ಗಂಡು ಮಕ್ಕಳು ಮತ್ತು ನನ್ನ ಸಣ್ಣ ಮಗಳು ಸುನಿತಾ ಇವರು ಬೆಂಗಳೂರಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡು ಇರುತ್ತಾರೆ, ಮೋನೇಶ ಮಾತ್ರ ಕೂಲಿಕೆಲಸ ಮಾಡಿಕೊಂಡಿರುತ್ತಾನೆ ಈಗ ಸುಮಾರು 3 ತಿಂಗಳಿಂದೆ ಶಾಲೆ ಕಾಲೆಜುಗಳು ರಜೆ ಇದ್ದ ಕಾರಣ ನನ್ನ ಮಗಳು ಸುನಿತಾ ಬೆಂಗಳೂರಿನಿಂದ ನಮ್ಮೂರಾದ ನೀಲಹಳ್ಳಿ ಗ್ರಾಮಕ್ಕೆ ಬಂದಿದ್ದಳು ಮನೆಯಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೆ ಇರುತಿದ್ದೆವು ನನ್ನ ಗಂಡು ಮಕ್ಕಳೇಲ್ಲರು ಬೆಂಗಳೂರಿನಲ್ಲಿ ಇರುತ್ತಾರೆ. ದಿನಾಂಕ: 09-03-2021 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಹೊಲಕ್ಕೆ ಹೋಗಿದ್ದೆನು ಮನೆಯಲ್ಲಿ ನನ್ನ ಮಗಳು ಸುನಿತಾ ಮಾತ್ರ ಮನೆಯಲ್ಲಿ ಇದ್ದಳು, ಆಕೆಗೆ ನಾನು ಮದ್ಯಾಹ್ನ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಊಟ ಟೈಮಿಗೆ ಮನೆಗೆ ಬರುತ್ತೇನೆ ಅಂತಾ ಹೇಳಿ ಹೊಲಕ್ಕೆ ಹೋದೆನು ನಾನು ಮದ್ಯಾಹ್ನದ ವರೆಗೆ ಹೊಲದಲ್ಲಿ ಕೆಲಸ ಮಾಡಿ ಮದ್ಯಾಹ್ನ 02-00 ಗಂಟೆ ಸುಮಾರಿಗೆ ನಾನು ಹೊಲದಿಂದ ಮನೆಗೆ ರೋಡಿನ ಮೇಲೆ ಮಲ್ಲಪ್ಪ ತಂದೆ ಬಸಪ್ಪ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ನನ್ನ ಮಗಳನ್ನು ಸೈದಾಪೂರದ ಬಾಬು ತಂದೆ ಅಂಜಪ್ಪ ಈತನು ಮೋಟರ ಸೈಕಲ ಮೇಲೆ ಕೂಡಿಸಿಕೊಂಡು ವೇಗವಾಗಿ ಮೇನ್ ರೋಡ ಕಡೆಗೆ ಹೋದನು. ಆಗ ನಾನು ಗಾಬರಿಯಾಗಿ ಮನೆಗೆ ಹೋದೆನು ನನ್ನ ಮಗಳನ್ನು ಅಫಹರಣ ಮಾಡಿಕೊಂಡು ಹೋಗಲು ಆ ಹುಡಗ ತಂದೆ ಅಂಜಪ್ಪ ಆತನ ತಾಯಿ ಸಂಜಿವಮ್ಮಆತನ ಅಣ್ಣ ಸುರೇಶ ತಂದೆ ಅಂಜಪ್ಪ ಮತ್ತು ಆ ಹುಡಗನ ಗೆಳೆಯರಾದ ವಿಷ್ಣು, ಸಚಿನ್, ಶಂಕರ ಇವರು ಆತನಿಗೆ ಸಹಾಯ ಮಾಡಿರುತ್ತಾರೆ ಅಂತಾ ಗೊತ್ತಾಗಿರುತ್ತದೆ, ನಾನು ಹೊಲದಿಂದ ಮನೆಗೆ ಹೋದ ನಂತರ ವಿಷಯವನ್ನು ನನ್ನ ಮಕ್ಕಳಿಗೆ ಪೋನ ಮೂಲಕ ನಡೆದ ಘಟನೆ ಬಗ್ಗೆ ತಿಳಿಸಿದೆನು ನನ್ನ ಮಕ್ಕಳು ಬೆಂಗಳೂರಿನಿಂದ ಬಂದ ನಂತರ ಮನೆಯಲ್ಲಿ ಎಲ್ಲರೂ ವಿಚಾರ ಮಾಡಿಕೊಂಡು ಠಾಣೆಗೆ ಬಂದಿರುತ್ತೇವೆ. ಅಂತಾ ಪಿಯಾಧಿ ಸಾರಂಶ
ಕೊಡೇಕಲ್ಲ ಪೊಲೀಸ್ ಠಾಣೆ:- 18/2021 ಕಲಂ: 279,337,338, 304(ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ: ನಿನ್ನೆ ದಿನಾಂಕ 10.03.2021 ರಂದು ಬೆಳಿಗ್ಗೆ 06:00 ಗಂಟೆಗೆ ನನ್ನ ಆದೇಶದ ಮೇರೆಗೆ ಹೆಚಸಿ-27 ರವರು ರಸ್ತೆ ಅಪಘಾತದಲ್ಲಿ ಗಾಯ ಹೊಂದಿದ ಗಾಯಾಳು ಅಮರಯ್ಯ ತಂದೆ ಆಮನಿಂಗಯ್ಯ ಹಿರೇಮಠ ಸಾ||ರಾಜನಕೊಳುರ ಇವರ ಎಮ್.ಎಲ್.ಸಿ ವಿಚಾರಣೆಗಾಗಿ ವಿಜಯಪೂರದ ಸಂಜೀವಿನಿ ಸುಪರ ಸ್ಪೇಷಾಲಿಟಿ ಆಸ್ಪತ್ರೆಗೆ ಕಳುಹಿಸಿದ್ದು ಸದರಿ ಹೆಚಸಿ ರವರು ಆಸ್ಪತ್ರೆಗೆ ಭೇಟೆ ನೀಡಿ ಗಾಯಾಳುವಿಗೆ ನೋಡಲಾಗಿ ಗಾಯಾಳು ಅಮರಯ್ಯ ಇತನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರುವದಿಲ್ಲ ಅಂತ ಸದರಿ ಗಾಯಾಳುವಿಗೆ ಉಪಚರಿಸುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದ್ದರಿಂದ ಹೆಚಸಿ-27 ರವರು ಆಸ್ಪತ್ರೆಯಲ್ಲಿದ್ದ ಗಾಯಾಳುವಿನ ತಮ್ಮನಾದ ಈರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ:40 ವರ್ಷ ಜಾ: ಹಿಂದೂ ಲಿಂಗಾಯತ ಉ: ಕೂಲಿಕೆಲಸ ಸಾ: ರಾಜನಕೊಳುರ ತಾ:ಹುಣಸಗಿ ಇವರಿಗೆ ಅಪಘಾತದ ಬಗ್ಗೆ ವಿಚಾರಿಸಿ ಆಸ್ಪತ್ರೆಯಲ್ಲಿ 11:30 ರಿಂದ 12:30 ರವರೆಗೆ ಸದರಿಯವನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಸದರಿಯವನ ಹೇಳಿಕೆಯೊಂದಿಗೆ ಮರಳಿ ಠಾಣೆಗೆ 5:45 ಪಿಎಮಕ್ಕೆ ಬಂದು ಹೆಚಸಿ-27 ರವರು ಬಂದಿದ್ದು ಸದರಿ ಈರಯ್ಯ ಇವರ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ನಾವು ಸಿದ್ದಯ್ಯ, ಅಮರಯ್ಯ, ಈರಯ್ಯ ಅಂತ 3 ಜನ ಗಂಡು ಮಕ್ಕಳಿದ್ದು ಅಣ್ಣನಾದ ಅಮರಯ್ಯ ಇವರದು ನಮ್ಮೂರ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕಿನ ಎದುರಗಡೆ ಒಂದು ಪಾನಶಾಪ್ ಅಂಗಡಿ ಇಟ್ಟುಕೊಂಡಿದ್ದು ಅಲ್ಲದೇ ನನ್ನ ಅಣ್ಣ ಅಮರಯ್ಯನು ನಮ್ಮೂರಲ್ಲಿ ಪಿಗ್ಮಿ ಏಜೆಂಟ್ ಕೆಲಸ ಮಾಡಿಕೊಂಡಿದ್ದು ದಿನಾಲೂ ಸಾಯಂಕಾಲ ವೇಳೆಯಲ್ಲಿ ನಮ್ಮೂರಲ್ಲಿ ಅಂಗಡಿಗಳಿಗೆ ಹೋಗಿ ಪಿಗ್ಮಿ ಕಲೆಕ್ಟ ಕೆಲಸ ಮಾಡುತ್ತಿರುವನು. ಹೀಗಿದ್ದು ನಿನ್ನೆ ದಿನಾಂಕ 09.03.2021 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಮಲ್ಲಣ್ಣ ತಂದೆ ಭೀಮನಗೌಡ ಯರಕಿಹಾಳ, ಮಹಾದೇವಯ್ಯ ತಂದೆ ಈರಯ್ಯ ಹಿರೇಮಠ 3 ಜನರು ಕೂಡಿ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಗೆ ಹೊಂದಿ ಇರುವ ಪರತಯ್ಯ ಹಿರೇಮಠ ರವರ ಹೋಟೆಲದಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದಾಗ ನನ್ನ ಅಣ್ಣನಾದ ಅಮರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ||45 ವರ್ಷ ಇತನು ಪಿಗ್ಮಿ ಕಲೆಕ್ಟ ಮಾಡುತ್ತಾ ನಮ್ಮೂರ ಹೆಚ.ಸಿ.ಪಾಟೀಲ ರವರ ಬಸವೇಶ್ವರ ಮೆಡಿಕಲ್ ಶಾಪದಲ್ಲಿ ಪಿಗ್ಮಿ ಕಲೆಕ್ಟ ಮಾಡಿಕೊಂಡು ಮುಂದೆ ಮಾಣಿಕಪ್ಪ ಸಾಹುಕಾರ ಇವರ ಕಿರಾಣಿ ಅಂಗಡಿಯ ಕಡೆಗೆ ಹೋಗಲು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯನ್ನು ನಡೆದುಕೊಂಡು ದಾಟುತ್ತಿರುವಾಗ ಬಲಶೆಟ್ಟಿಹಾಳ ಕಡೆಯಿಂದ ಒಬ್ಬ ಮೊಟರ ಸೈಕಲ್ ಸವಾರನು ತನ್ನ ಮೊಟರ ಸೈಕಲನ್ನು ಅತಿ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ನನ್ನ ಅಣ್ಣ ಅಮರಯ್ಯನಿಗೆ ಡಿಕ್ಕಿ ಪಡಿಸಿದ್ದು ಇದರಿಂದ ನನ್ನ ಅಣ್ಣನು ರಸ್ತೆಯ ಮೇಲೆ ಬಿದ್ದಿದ್ದು ಮೊಟರ್ ಸೈಕಲ್ ಸವಾರನು ಮೋಟರ್ ಸೈಕಲನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಓಡಿ ಹೋಗಿದ್ದು, ಇದನ್ನು ನೋಡಿ ಹೋಟೆಲದಲ್ಲಿ ಚಹಾ ಕುಡಿಯುತ್ತಿದ್ದ ನಾನು ಮತ್ತು ನಮ್ಮೂರ ಮಲ್ಲಣ್ಣ ಯರಕಿಹಾಳ, ಮಹಾದೇವಯ್ಯ ಹಿರೇಮಠ ಹಾಗೂ ಹೆಚ.ಸಿ.ಪಾಟೀಲ ರವರ ಮೆಡಿಕಲ್ ಶಾಪನಲ್ಲಿದ್ದ ಬಸನಗೌಡ ತಂದೆ ಚಂದ್ರಶೇಖರಗೌಡ ಪಾಟೀಲ ಹಾಗೂ ದಾವಲಸಾಬ ತಂದೆ ಮಹಮ್ಮದಸಾಬ ಆವಂಟಿ ರವರು ನಮ್ಮ ಅಣ್ಣನಿಗೆ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣ ಅಮರಯ್ಯನ ತಲೆಯ ಮೇಲೆ ಹಾಗೂ ಎಡಗಡೆ ಸೊಂಟದ ಮೇಲೆ ಭಾರಿ ಗುಪ್ತ ಪೆಟ್ಟು ಆಗಿದ್ದು ಹಾಗೂ ಬಲಗಾಲಿನ ಪಾದದ ಕಿರುಬೆರಳಿನಿಂದ ಮೂರು ಬೆರಳುಗಳ ವರೆಗೆ ತರಚಿದ ನಮೂನೆಯ ರಕ್ತಗಾಯವಾಗಿದ್ದು ನನ್ನ ಅಣ್ಣನಿಗೆ ಸೊಂಟದ ಮೇಲೆ ಭಾರಿ ಪೆಟ್ಟಾಗಿದ್ದರಿಂದ ನಡೆಯಲಿಕ್ಕೆ ಬರದಂತೆ ಆಗಿದ್ದು ನನ್ನ ಅಣ್ಣನಿಗೆ ಅಪಘಾತಪಡಿಸಿದ ಮೋಟರ್ ಸೈಕಲ ನೋಡಲಾಗಿ ಅದು ಕೆಂಪು ಬಣ್ಣದ ಪ್ಲಾಟಿನಾ ಮೊಟರ್ ಸೈಕಲ ಆಗಿದ್ದು ಅದರ ನಂಬರ ಕೆಎ-33 ಇಎ-5175 ಇದ್ದು ಅಪಘಾತಪಡಿಸಿದ ಮೋಟರ ಸೈಕಲ ಸವಾರನ ಹೆಸರು ಹುಲಗಪ್ಪ ತಂದೆ ಬಸಣ್ಣ ಬಂಗಿ ಸಾ||ಹಣಮಸಾಗರ ಅಂತ ಗೊತ್ತಾಗಿದ್ದು ನಂತರ ನನ್ನ ಅಣ್ಣ ಅಮರಯ್ಯನಿಗೆ ಉಪಚಾರಕ್ಕಾಗಿ ನಾನು ಮತ್ತು ನಮ್ಮೂರ ಮಲ್ಲಣ್ಣ ತಂದೆ ಭೀಮನಗೌಡ ಯರಕಿಹಾಳ ಹಾಗೂ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ನನ್ನ ಅಣ್ಣನ ಹೆಂಡತಿ ಶಾಂತಮ್ಮ ರವರು ಕೂಡಿ ಒಂದು ವಾಹನದಲ್ಲಿ ತಾಳಿಕೋಟಿಯ ಸಿದ್ದಬಸವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಿದ್ದಬಸವ ಆಸ್ಪತ್ರೆಯ ವೈದ್ಯರು ನನ್ನ ಅಣ್ಣನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರದ ಸಂಜೀವಿನಿ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮತ್ತೆ ನಾವೆಲ್ಲರೂ ಕೂಡಿ ನನ್ನ ಅಣ್ಣನಿಗೆ ನಿನ್ನೆ ದಿನ ರಾತ್ರಿ 10:00 ಗಂಟೆಯ ಸುಮಾರಿಗೆ ಇಲ್ಲಿಗೆ ಕರೆದುಕೊಂಡು ಬಂದು ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ನನ್ನ ಅಣ್ಣನು ಇನ್ನೂ ಈ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಅವನು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ನನ್ನ ಅಣ್ಣನಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವನ ಜೊತೆ ಆಸ್ಪತ್ರೆಯಲ್ಲಿ ಇದ್ದುದರಿಂದ ದೂರು ಕೊಡಲು ತಡವಾಗಿದ್ದು ಈ ಅಪಘಾತವು ಮೋಟರ್ ಸೈಕಲ ನಂ: ಕೆಎ-33 ಇಎ-5175 ನೇದ್ದರ ಸವಾರ ಹುಲಗಪ್ಪ ತಂದೆ ಬಸಣ್ಣ ಬಂಗಿ ಸಾ||ಹಣಮಸಾಗರ ಇತನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:18/2021 ಕಲಂ:279, 337, 338 ಐಪಿಸಿ ಸಂಗಡ 187 ಐಎಮವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಇಂದು ನಾನು ಸದರ ಪ್ರಕರಣದ ಕಡತವನ್ನು ಹೆಚಸಿ-27 ರವರಿಂದ ಪಡೆದುಕೊಂಡಿದ್ದು ಈ ಪ್ರಕರಣದಲ್ಲಿಯ ಫಿಯರ್ಾದಿ ಈರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ||40 ವರ್ಷ ಜಾ||ಹಿಂದೂ ಲಿಂಗಾಯತ ಸಾ||ರಾಜನಕೊಳುರ ಇವರು ಇಂದು ಸಾಯಂಕಾಲ 7:00 ಗಂಟೆಗೆ ಠಾಣೆಗೆ ಹಾಜರಾಗಿ ತನ್ನ ಪುರವಣಿ ಹೇಳಿಕೆಯನ್ನು ನೀಡಿದ್ದು ಅದರಲ್ಲಿ ತನ್ನ ಅಣ್ಣನಾದ ಗಾಯಾಳು ಅಮರಯ್ಯ ತಂದೆ ಆಮನಿಂಗಯ್ಯ ಹಿರೇಮಠ ವ||45 ವರ್ಷ ಜಾ||ಹಿಂದೂ ಲಿಂಗಾಯತ ಸಾ||ರಾಜನಕೊಳುರ ಇವರಿಗೆ ಅಪಘಾತದಲ್ಲಿ ಭಾರಿ ಒಳಪೆಟ್ಟಾಗಿದ್ದರಿಂದ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರದ ಸಂಜೀವಿನಿ ಆಸ್ಪತ್ರೆಯಿಂದ ಕಲಬುರಗಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ 5:00 ಪಿಎಮಕ್ಕೆ ಬಸವನ ಬಾಗೇವಾಡಿ ಹತ್ತಿರ ಮೃತ ಪಟ್ಟಿದ್ದು ತನ್ನ ಅಣ್ಣನ ಶವವನ್ನು ಹುಣಸಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತೇವೆ ಅಂತ ಪುರವಣಿ ಹೇಳಿಕೆ ನೀಡಿದ್ದರ ಆಧಾರದ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 12-03-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080