ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/04/2021

ಶಹಾಪೂರ ಪೊಲೀಸ್ ಠಾಣೆ :- 80/2021. ಕಲಂ. 279.338.ಐ.ಪಿ.ಸಿ. : ದಿನಾಂಕ : 09-04-2021 ರಂದು 3:00 ಪಿ.ಎಮ್.ಕ್ಕೆ ಶಹಾಪುರ ನಗರದ ಹಳೇ ಬಸ್ ನಿಲ್ದಾಣದ ಎದುರುಗಡೆ ಮೈಸೂರ ಮೆಡಿಕಲ್ ಮುಂದೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಫಿರ್ಯಾದಿಯ ತಂದೆಗೆ ಸೀತಾರಾಮ ಚವ್ಹಾಣ ಎಂಬುವವರಿಗೆ ಕಾರ ನಂ. ಕೆ.ಎ.-32-ಪಿ.3825 ನೇದದರ ಚಾಲಕ ವೀರಣ್ಣ ತಂದೆ ಗುಂಡಪ್ಪ ನಾಯ್ಕೋಟಿ ಸಾ: ದೇವಾನಗರ ಕಲಬುರಗಿ ಈತನು ತನ್ನ ಕಾರನನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಮಡು ಬಂದು ಡಿಕ್ಕಿಪಟಿಸಿ ಅಫಘಾತ ಪಡಿಸಿ ಭಾರೀಗಾಯ ಪಡಿಸಿದ್ದು ಇದೆ ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿರ್ಯಾದಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.80/2021 ಕಲಂ 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು

ನಾರಾಯಣಪೂರ ಪೊಲೀಸ್ ಠಾಣೆ:- 19/2021 ಕಲಂ: 323,324, 504, 506, ಸಂಗಡ 34 ಐಪಿಸಿ : ಇಂದು ದಿನಾಂಕ 11/04/2021 ರಂದು 5:00 ಪಿ.ಎಂ ಕ್ಕೆ ಶ್ರೀ ನಾರಾಯಣ ತಂದೆ ಮೇಘಪ್ಪ ರಾಠೊಡ ವ:65 ವರ್ಷ ಉ:ಕೂಲಿ ಕೆಲಸ ಜಾ:ಲಮಾಣಿ ಸಾ: ಮಾರನಾಳ ದೊಡ್ಡತಾಂಡಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ನನಗೆ ಸೂರಪ್ಪ ಅಂತಾ ಒಬ್ಬ ತಮ್ಮನಿದ್ದು ಇಬ್ಬರು ಬೇರೆಬೇರೆಯಾಗಿದ್ದು ಇರುತ್ತದೆ ನಮ್ಮ ತಾಂಡಾದ ಸೀಮಾಂತರದಲ್ಲಿ ಸವರ್ೆ ನಂ 15 ರಲ್ಲಿ ನಮ್ಮ ತಾಂಡಾದ ಮುಂದೆ ನನಗೆ ಮತ್ತು ನನ್ನ ತಮ್ಮ ಸೂರಪ್ಪನಿಗೆ 1 ಎಕರೆ 25 ಗುಂಟೆ ಜಮೀನು ಬಂದಿದ್ದು ಇರುತ್ತದೆ. ಈ ಜಮೀನಿನಲ್ಲಿ ನಮ್ಮ ಹಿರಿಯರು ನಮ್ಮೂರ ಶಾಲೆಗೆ, ಹಾಗೂ ಅಂಗನವಾಡಿಗೆ ಜಮೀನುನನ್ನು ಕೊಟ್ಟಿದ್ದು ಉಳಿದ ಜಮೀನಿನಲ್ಲಿ ನಮ್ಮ ತಾಂಡಾದ ಹಿರಿಯರು ಇಬ್ಬರಿಗೆ ಸಮಾನಾಗಿ ಹಂಚಿಕೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ತಮ್ಮ ಸೂರಪ್ಪನು ತನಗೆ ಹಂಚಿಕೆ ಮಾಡಿದ ಜಮೀನನ ಪ್ಲಾಟಗಳನ್ನು ಮಾರಟಮಾಡಿಕೊಂಡಿದ್ದು ನನ್ನ ಪಾಲಿಗೆ ಬಂದ ಪ್ಲಾಟನಲ್ಲಿ ಮನೆಯನ್ನು ಕಟ್ಟಲು ಪಾಯಹಾಕಿದ್ದನು. ನಿನ್ನೆ ದಿನಾಂಕ 10/04/2021 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಮ್ಮ ತಮ್ಮ ಸೂರಪ್ಪ ಹಾಗೂ ಅವನ ಹೆಂಡತಿ ಲಕ್ಷ್ಮೀಬಾಯಿ ಗಂಡ ಸೂರಪ್ಪ ಹಾಗೂ ಅವರ ಮಕ್ಕಳಾದ ತಿರುಪತಿ ತಂದೆ ಸೂರಪ್ಪ ಮತ್ತು ವೆಂಕಟೇಶ ತಂದೆ ಸೂರಪ್ಪ ರವರು ಹಿರಿಯರು ನಮಗೆ ಹಂಚಿಕೆ ಮಾಡಿದ ಪ್ಲಾಟದಲ್ಲಿ ಮನೆಯನ್ನು ಕಟ್ಟುವ ಸಲುವಾಗಿ ಕಲ್ಲುಗಳನ್ನು ಹಾಕುತ್ತಿದ್ದರು ಹಾಗ ನಾನು ಹಾಗೂ ನನ್ನ ಹೆಂಡತಿ ಗೂರಿಬಾಯಿ ಗಂಡ ನಾರಾಯಣ ರಾಠೋಡ ವ: 55 ವರ್ಷ ಉ:ಕೂಲಿ ಕೆಲಸ ಜಾ:ಲಮಾಣಿ ಸಾ:ಮಾರನಾಳ ದೊಡ್ಡತಾಂಡಾ ಇಬ್ಬರು ಕೂಡಿಕೊಂಡು ನಮ್ಮ ತಾಂಡಾದಲ್ಲಿ ನಮ್ಮೂರ ಶಾಲೆಯ ಮುಂದೆ ಇರುವ ನಮ್ಮ ಪ್ಲಾಟದಲ್ಲಿ ಹೋಗಿ ಕಲ್ಲುಗಳನ್ನು ಹಾಕುತ್ತಿದ್ದ ನಮ್ಮ ತಮ್ಮ ಸೂರಪ್ಪನಿಗೆ ನಾನು ಯಾಕೆ ನಮ್ಮ ಜಾಗದಲ್ಲಿ ಮನೆಯನ್ನು ಕಟ್ಟುತ್ತಿದ್ದಿರಿ ಅಂತಾ ಕೇಳಿದೇನು, ಆಗ ನಮ್ಮ ತಮ್ಮ ಸೂರಪ್ಪನು ಬೋಸುಡಿ ಮಗನೇ ಇದು ನಮ್ಮ ಜಾಗೆ ಇದ್ದು ಇದರಲ್ಲಿ ನಾವು ಮನೆಯನ್ನು ಕಟ್ಟುತ್ತೇವೆ, ಅದನ್ನು ಕೇಳಲು ನೀನು ಯಾರು ಅಂತಾ ಅಂದನು ಆಗ ನನ್ನ ಹೆಂಡತಿ ಗೂರಿಬಾಯ ಇವಳು ನನ್ನ ತಮ್ಮ ಸೂರಪ್ಪನಿಗೆ ಅಲ್ಲಪ್ಪ ಊರಿನ ಹಿರಿಯರು ಈ ಜಾಗವನ್ನು ನಮಗೆ ಅಂತಾ ತಿಳಿಸಿರುತ್ತಾರೆ ಇದರಲ್ಲಿ ನೀವು ಯಾಕೆ ಮನೆಯನ್ನು ಕಟ್ಟುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಆಗ ಅಲ್ಲಿ ಇದ್ದ ಸೂರಪ್ಪನ ಹೆಂಡತಿ ಲಕ್ಷ್ಮಿಬಾಯಿ ಇವಳು ನನ್ನ ಹೆಂಡತಿ ಗೂರಿಬಾಯಿಗೆ ಎಲೆ ಸೂಳಿ ಇದು ನಮ್ಮ ಜಾಗ ಇಲ್ಲಿ ನಾವು ಮನೆಯನ್ನು ಕಟ್ಟುತ್ತೆವೆ ಅದನ್ನು ಕೇಳಲು ನಿವು ಯಾರು ಅಂದಳು ಆಗ ನನ್ನ ಹೆಂಡತಿ ಗೂರಿಬಾಯಿ ಇವಳು ಇದು ನಮ್ಮ ಜಾಗೆ ಇಲ್ಲಿ ನಾವು ಮನೆಯನ್ನು ಕಟ್ಟುಲು ಬಿಡುವದಿಲ್ಲ ಅಂತಾ ಅಂದಾಗ ಲಕ್ಷ್ಮೀಬಾಯಿ ಈತಳು ನನ್ನ ಹೆಂಡತಿಯೊಂದಿಗೆ ಜಗಳಕ್ಕೆ ಬಿದ್ದು ನನ್ನ ಹೆಂಡತಿಗೆ ಅಲ್ಲಿಯೆ ಬಿದ್ದಿದ್ದ ಕಲ್ಲಿನಿಂದ ಬಲಗಡೆ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಆಗ ನಾನು ಬಿಡಿಸಿಕೊಳ್ಳಲು ಹೋದಾಗ ನನ್ನ ತಮ್ಮ ಸೂರಪ್ಪನು ನನಗೆ ಬೋಸುಡಿ ಮಗನೆ ಬಿಡಿಸಿಕೊಳ್ಳುಲು ಹೋಗುತ್ತಿಯಾ ಅಂತಾ ಅಂದು ನನ್ನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು ಆಗ ಅಲ್ಲಿಯೆ ಇದ್ದ ತಿರುಪತಿ ಈತನು ಅಲ್ಲಿಯೆ ಬಿದ್ದಿದ್ದ ಕಲ್ಲಿನಿಂದ ನನ್ನ ಹಣೆಯ ಮೇಲಗಡೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ ಆಗ ನಾನು ಮತ್ತು ನನ್ನ ಹೆಂಡತಿ ಗೂರಿಬಾಯಿ ಇಬ್ಬರು ಚೀರಾಡುಹತ್ತಿದಾಗ ಅಲ್ಲಿಯೆ ಇದ್ದ ಶಿಲ್ಪಾಬಾಯಿ ಗಂಡ ಗೋಪಾಲ ರಾಠೊಡ ಹಾಗೂ ರಾಜ ತಂದೆ ಗೋವಿಂದರಾವ ರಾಠೊಡ ರವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಹೋಗುವಾಗ ಅವರಲ್ಲಿಯ ವೆಂಕಟೇಶ ಈತನು ಬೋಸುಡಿ ಮಕ್ಕಳೆ ಇವತ್ತು ಇವರು ಬಂದು ಬಿಡಿಸಿಕೊಂಡರು ಅಂತಾ ಬಿಟ್ಟಿದ್ದೆವೇ ಇನ್ನೊಮ್ಮೆ ಈ ಜಾಗಕ್ಕೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಆಗ ನಾನು ಮತ್ತು ನನ್ನ ಹೆಂಡತಿ ನಿನ್ನೆ ದಿನಾಂಕ 10/04/2021 ರಂದು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆ ಆದಗ ನಾರಾಯಣಪೂರ ಪೊಲೀಸ್ರು ಬಂದು ನಮಗೆ ವಿಚಾರಮಾಡಿದ್ದು ನಾನು ಅವರಿಗೆ ನನ್ನ ಮಕ್ಕಳು ದುಡಿಯಲು ದೇಶಕ್ಕೆ ಹೋಗಿರುತ್ತಾರೆ ಈ ಬಗ್ಗೆ ನಮ್ಮ ಮನೆಯಲ್ಲಿ ಅವರೊಂದಿಗೆ ವಿಚಾರ ಮಾಡಿ ನಾಳೆಗೆ ಹೇಳುವದಾಗಿ ಹೇಳಿದ್ದು ಇರುತ್ತದೆ. ನಾನು ಹಾಗೂ ನನ್ನ ಹೆಂಡತಿ ಇಂದು ನನ್ನ ಮಗನನ್ನು ಕರೆಯಿಸಿಕೊಂಡು ವಿಚಾರ ಮಾಡಿ ಇಂದು ತಡವಾಗಿ ಬಂದು ಪಿಯರ್ಾದಿಕೊಡುತ್ತಿದ್ದು ನಮಗೆ ಹೊಡೆದವರ ಮೇಲೆ ಕೇಸು ಮಾಡಲು ಅಜರ್ಿ ಇರುತ್ತದೆ.ಅಂತಾ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 19/2021 ಕಲಂ 323,324,504,506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ :- 57/2021 ಕಲಂ 379 ಐಪಿಸಿ : ಇಂದು ದಿನಾಂಕ 11.04.2021 ರಂದು ಬೆಳಿಗ್ಗೆ 6:30 ಗಂಟೆಗೆ ಪಿ.ಎಸ್.ಐ(ಕಾ&ಸು) ರವರು ವಿಶ್ರಾಂತಿಯಲ್ಲಿದ್ದಾಗ ಯಾದಗಿರಿಯ ಕಂಟ್ರೋಲ್ ರೂಮ್ ನಿಂದ ಫೋನ್ ಮಾಡಿ ಇಖಖಖ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರು ಮೂರು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಹಿಡಿದುಕೊಂಡು ನಿಂತಿದ್ದ ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ತಿಳಿಸಿದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಕರೆದುಕೊಂಡು ಇಖಖಖ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರನ್ನು ಸಂಪಕರ್ಿಸುತ್ತ ಸ್ಥಳಕ್ಕೆ ಭೇಟಿ ನೀಡಿ ಆ ಬಗ್ಗೆ ಅಲ್ಲಿದ್ದ ಇಖಖಖ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರಾದ ಪಿಸಿ-170, 154 ರವರನ್ನು ವಿಚಾರಿಸಿದ್ದು ಆಗ ಅವರು ಅಲ್ಲಿಗೆ ಹೋಗುವಸ್ಠರಲ್ಲಿ ಇಖಖಖ ವಾಹನವನ್ನು ನೋಡಿ ಸ್ಥಳದಲ್ಲಿದ್ದ ಮೂರು ಮರಳು ತುಂಬಿದ ಟ್ರ್ಯಾಕ್ಟರಗಳ ಚಾಲಕರು 03 ಟ್ರ್ಯಾಕ್ಟರ ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದ ಬಗ್ಗೆ ತಿಳಿಸಿದ ನಂಬರ ಪಿ.ಎಸ್.ಐ ರವರು ಆ ಮೂರು ಟ್ರ್ಯಾಕ್ಟರಗಳನ್ನು ಪರಿಶೀಲಿಸಿದ ಸದರಿ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡ ನಂತರ ಮರಳಿ ಠಾಣೆಗೆ ಬಂದು ದಾಳಿಯ ಕಾಲಕ್ಕೆ ಓಡಿ ಹೋದ ಮೂರು ಟ್ರ್ಯಾಕ್ಟರಗಳ ಚಾಲಕರು ಹಾಗೂ ಸಂಬಂದಪಟ್ಟ ಮಾಲೀಕರ ಮೇಲೆ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 57/2021 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 12-04-2021 10:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080