ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/04/2021

ಗುರಮಿಠಕಲ್ ಪೊಲೀಸ್ ಠಾಣೆ:- 58/2021 ಕಲಂ 279, 337, 338, 304(ಎ) ಐಪಿಸಿ : ಇಂದು ದಿನಾಂಕ 12.04.2021 ರಂದು ಬೆಳಿಗ್ಗೆ 7:45 ಗಂಟೆಯ ಸುಮಾರಿ ಫಿರ್ಯದಿಯ ಮಗಳಾದ ಗಾಯಾಳು ವಿಜಯಲಕ್ಷ್ಮಿ @ ಸರೋಜಾ ಈಕೆ ತನ್ನಮಗಳಾದ ಮೃತ ಮೋನಿಕಳೊಂದಿಗೆ ಗುರುಮಠಕಲ್ ಪಟ್ಟಣಕ್ಕೆ ಹೋಗಿ ಯುಗಾದಿ ಹಬ್ಬಕ್ಕಾಗಿ ಬಟ್ಟೆ-ಬರಿಗಳನ್ನು ತಗೊಂಡು ಸಂತೆ ಮಾಡಿಕೊಂಡು ಬರುವ ಸಲುವಾಗಿ ಬೋರಬಂಡಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಜೀಪನ ಪಕ್ಕದಲ್ಲಿ ನಿಂತಿದ್ದಾಗ ಇತರೆ ಗಾಯಾಳುದಾರರು ಕೂಡು ಜೀಪ್ನ ಮುಂದೆ ನಿಂತಿದ್ದ ಆಗ ಆರೋಪಿ ಶಂಕರಗೌಡ ಎಂಬಾತನು ಲಾರಿ ನಂಬರ ಕೆಎ-33-ಸಿ-3422 ನೇದ್ದನ್ನು ಧರ್ಮಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಕ್ತೆಯ ಪಕ್ಕದಲ್ಲಿ ನಿಂತಿದ್ದ ಮೃತಳಿಗೆ ಹಾಗೂ ಗಾಯಾಳು ವಿಜಯಲಕ್ಷ್ಮಿ @ ಸರೋಜಾಳಿಗೆ ಅಪಘಾತಪಡಿಸಿ ಮುಂದೆ ನಿಂತಿದ್ದ ಜೀಪ್ ನಂಬರ ಎಮ್.ಹೆಚ್.-24-ಸಿ-1258 ನೇದ್ದಕ್ಕೆ ಡಿಕ್ಕಿ ಪಡಿಸಿ ಅದರ ಮುಂದೆ ನಿಂತಿದ್ದ ಉಳಿದಾಗ ಗಾಯಾಳುಗಳಿಗೆ ಸಾದಾ ಸ್ವರೂಪದ ಗುಪ್ತಗಾಯಗಳಾಗಿದ್ದು ನಂತರ ಮೃತಳನ್ನು ಹೊರತುಪಡಿಸಿ ಉಳಿದವರನ್ನು ಫಿರ್ಯಾದಿ ಹಾಗೂ ಇತರರು ಕೂಡಿ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ದವಾಖಾನೆಗೆ ತಂದು ಸೇರಿಕೆ ಮಾಡಿದ್ದು ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 58/2021 ಕಲಂ 279, 337, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 22/2021 ಕಲಂ 279 ಐಪಿಸಿ : ಇಂದು ದಿನಾಂಕ 12/04/2021 ರಂದು 2-30 ಪಿ.ಎಂ.ಕ್ಕೆ ಶ್ರೀ ರವಿಕುಮಾರ ತಂದೆ ರಾಮುಲು ಬೊಲ್ಲಿನೇನಿ ವಯ;38 ವರ್ಷ, ಜಾ;ಕಮ್ಮ, ಉ;ಚೈತನ್ ಟ್ರೇಡರ್ಸ ಮಾಲೀಕರು, ಸಾ;ರಾಜೀವಗಾಂಧಿ ನಗರ ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ನೀಡಿದ್ದು, ಪಿಯರ್ಾದಿ ದೂರಿನ ಸಾರಾಂಶವೇನೆಂದರೆ ನಮ್ಮ ಕಂಪನಿಗೆ ಸೇರಿದ ಟಿಪ್ಪರ್ ನಂ. ಕೆಎ-33, ಎ-9499 ನೇದ್ದನ್ನು ನಮ್ಮ ಲಾರಿ ಚಾಲಕನಾದ ಬಾಬು ತಂದೆ ನಾಗಪ್ಪ ಸಾ;ಜಂಗಮರಡ್ಡಿ ಪಲ್ಲಿ ಈತನು ನಮ್ಮ ಟ್ರೇಡರ್ಸನಲ್ಲಿ ಹಲೋ ಬ್ಲಾಕ್ ತಯಾರಿ ಮಾಡುವ ಸಲುವಾಗಿ ಸಿಮೆಂಟ್ ಡಸ್ಟನ್ನು ಆಂದ್ರದಿಂದ ಲೋಡ್ ಮಾಡಿಕೊಂಡು ಮರಳಿ ಯಾದಗಿರಿಗೆ ನಿನ್ನೆ ದಿನಾಂಕ 11/04/2021 ರಂದು ಮದ್ಯಾಹ್ನ 2-45 ನಿಮಿಷಕ್ಕೆ ನಮ್ಮ ಟ್ರೇಡರ್ಸನಲ್ಲಿ ಬಂದು ಟಿಪ್ಪರನಲ್ಲಿದ್ದ ಲೋಡನ್ನು ಖಾಲಿ ಮಾಡಿದ ಟಿಪ್ಪರ್ ಚಾಲಕನು ಖಾಲಿ ಮಾಡಲು ಎತ್ತಿದ್ದ ಹೈಡ್ರೋಲಿಕ್ನ್ನು ಇಳಿಸದೇ ನಾನು ನೋಡು ನೊಡುತ್ತಿದ್ದಂತೆ ಒಮ್ಮೊಲೆ ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮುಂದಕ್ಕೆ ಓಡಿಸಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಎಡಕ್ಕೆ ಪಲ್ಟಿಯಾಗಿದ್ದು ಸದರಿ ಅಪಘಾತದಲ್ಲಿ ಲಾರಿ ಚಾಲಕನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಟಿಪ್ಪರ್ ಜಖಂಗೊಂಡಿದ್ದು ಇರುತ್ತದೆ. ಈ ಘಟನೆಯನ್ನು ನಮ್ಮ ಟ್ರೇಡರ್ಸನಲ್ಲಿ ಕೆಲಸ ಮಾಡುವ ಯಾದಗಿರಿಯ ಅಮರಸಿಂಗ್ ತಂದೆ ಸುಂದರಸಿಂಗ್ ದಾಸನಕೇರಿ ಮತ್ತು ಕೊಲ್ಲುರ ಗ್ರಾಮದ ಶರಣಯ್ಯ ತಂದೆ ಶಿವಯ್ಯ ಸ್ವಾಮಿ ಇವರುಗಳು ಕೂಡ ನೋಡಿರುತ್ತಾರೆ. ಈ ಘಟನೆಯು ನಿನ್ನೆ ದಿನಾಂಕ 11/04/2021 ರಂದು ಮದ್ಯಾಹ್ನ 2-50 ಪಿ.ಎಂ.ಕ್ಕೆ ಜರುಗಿದ್ದು ಈ ಘಟನೆ ಬಗ್ಗೆ ನಾನು ನಮ್ಮ ಹಿರಿಯರಲ್ಲಿ ಕೇಳಿಕೊಂಡು ಇಂದು ತಡವಾಗಿ ಠಾಣೆಗೆ ಹಾಜರಾಗಿ ಈ ದೂರನ್ನು ಕನ್ನಡದಲ್ಲಿ ಗಣಕೀಕೃತ ಮಾಡಿಸಿ ಕೊಡುತ್ತಿದ್ದು ನಮ್ಮ ಟಿಪ್ಪರ್ ನಂ. ಕೆಎ-33, ಎ-9499 ನೇದ್ದರ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಈ ಘಟನೆ ಜರುಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 22/2021 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ :- 57/2021, ಕಲಂ, 323,324,307, 504.506. ಸಂ.34 ಐ ಪಿ ಸಿ:ದಿನಾಂಕ: 12-04-2021 ರಂದು 04-00 ಪಿ ಎ.ಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಯಾದಗಿರಿಗೆ ಬೇಟಿ ನೀಡಿ ಅಲ್ಲಿ ಗಾಯಾಳುವನ್ನು ವಿಚಾರಿಸಿದ್ದು ಪಿಯರ್ಾಧಿ ನೀಡಿದ್ದೆನೆಂದರೆ ದಿನಾಂಕ 11/04/2021 ರಂದು ಚಾಂದಾಪೂರ ಗ್ರಾಮದ ಜಮೀಯಾ ಮಜೀದದಲ್ಲಿ ನಮಾಜ ಮುಗಿಸಿಕೊಂಡು ಹೊರಗೆ ಬರುವಾಗ ಮಜೀದ ಮುಂದೆ ರಾತ್ರಿ 8.45 ಗಂಟೆಯ ಸುಮಾರಿಗೆ 1) ಮೌಲಾಲಿ ತಂದೆ ಮಹಿಬೂಬ ಹುಸೇನ ಪಟೇದಾರ 2) ಫಜುಲ್ ಹುಸೇನ ತಂದೆ ಮಹಿಬೂಬ ಹುಸೇನ ಪಟೇದಾರ 3) ರಹಿಮತ ಅಲ್ಲಿ ತಂದೆ ಮಹಿಬೂಬ ಹುಸೇನ ಪಟೇದಾರ 4) ಜುಬೇರ ತಂದೆ ಮಹಿಬೂಬ ಹುಸೇನ ಪಟೇದಾರ ಇವರು ಬಂದವರೆ ಕೋಲೆ ಮಾಡಬೇಕೆಂಬ ಉದ್ದೇಶ ದಿಂದ ಮೌಲಾಲಿ ಇತನು ಒಂದು ರಾಡನಿಂದ ನನ್ನ ತಲೆಯ ಮೇಲೆ ಮತ್ತು ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಫಜುಲ್ ಇತನು ಕಟ್ಟಿಗೆಯಿಂದ ಬೆನ್ನಿಗೆ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ರಹಿಮತಲಿ, ಜುಬೇರ ಇವರು ಕೈಯಿಂದ ಹೊಟೆಗೆ ಕಪಾಳಕ್ಕೆ ಹೊಡೆದು ಗುಪ್ತ ಗಾಯ ಮಾಡಿರುತ್ತಾರೆ. ಇವರೆಲ್ಲರು ನನಗೆ ಈ ಚಿಲಾಕ ರಾಂಡಕಾ ಸುಮ್ಮನೆ ಬಿಡಬಾರದು ಇವನಿಗೆ ಜೀವ ಸಮೇತ ಹೋಡೆಯಬೇಕು ಅಂತಾ ಜೀವದ ಬೇದರಿಕೆ ಹಾಕಿದ್ದು ಬಗ್ಗೆ ಪಿಯರ್ಾಧಿ ಸಾರಂಶ

ಸೈದಾಪೂರ ಪೊಲೀಸ್ ಠಾಣೆ :- 58/2021, ಕಲಂ, 341, 323, 504.506. ಸಂ.34 ಐ ಪಿ ಸಿ : ದಿನಾಂಕ: 12-04-2021 ರಂದು 06-00 ಪಿ ಎ.ಎಮ್ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 11-04-2021 ರಂದು ರಾತ್ರಿ 08-45 ಗಂಟೆ ಸುಮಾರಿಗೆ ನಾನು ನನ್ನ ಮಗ ಪೈಜುಲ್ ಹುಸೇನ ಇಬ್ಬರು ನಮಾಜ ಮುಗಿಸಿಕೊಂಡು ಮಸೀದಿಯ ಹತ್ತಿರ ಬರುತ್ತಿರುವಾಗ ನಮ್ಮೂರಿನ 1) ಮಹ್ಮದ ಹುಸೇನ ತಂದೆ ಅಬ್ದುಲ್ ನಬೀ 2) ಚಾಂದಪಾಷ ತಂದೆ ಅಬ್ದುಲ್ ನಬೀ 3) ಖಾಸಿಂಅಲಿ ತಂದೆ ಮೌಲಾನಸಾಬ 4) ರಜಾಕ್ ತಂದೆ ಅಬ್ದುಲ್ ನಬೀ ಇವರೆಲ್ಲರು ಕೂಡಿಕೊಂಡು ಬಂದು ನಮಗೆ ಲೇ ಸೂಳೆ ಮಕ್ಕಳೆ ನಿಮ್ಮದು ಎನಲೆ ತಿಂಡಿ ಸೂಳೆ ಮಕ್ಕಳೆ ನಮ್ಮ ಸಂಬಂದಿಕರ ಹೊಲ ನಮಗೆ ಹೇಳದೆ ತೆಗೆದುಕೊಳ್ಳಬೇಡಿರಿ ಅಂದರು ನಮ್ಮ ಮಾತು ಕೆಳದೆ ನೀವು ಹೊಲವನ್ನು ತೆಗೆದುಕೊಂಡಿರಿ ಸೂಳೆ ಮಕ್ಕಳೆ ಅಂತಾ ಬೈದು ಮಹ್ಮದ ಹುಸೇನ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಎಳದಾಡಿ ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಕಪಾಳಕ್ಕೆ ಮತ್ತು ಎದೆಗೆ ಹೊಡೆದನು ಆಗ ನನ್ನ ಮಗ ಪೈಜುಲ್ ಹುಸೆನ ಇತನು ಅಡ್ಡ ಬಂದಾಗ ಆತನಿಗೆ ಚಾಂದಪಾಷ ಈತನು ಲೇ ಸುಳೆ ಮಗನೆ ಆ ಹೊಲ ನಮಗೆ ಬಿಡಿದಿದ್ದರೆ ನಿಮಗೆ ಖಲಾಸ ಮಾಡುತ್ತೇವೆ ನೋಡು ಅಂದು ನನ್ನ ಮಗನಿಗೆ ಎದೆಯ ಮೇಲಿನ ಅಂಗಿ ಹಿಡಿದು ನೆಕ್ಕೆ ಬಿಳಿಸಿ ಕಾಲಿನಿಂದ ಸೊಂಟಕ್ಕೆ ಒದ್ದನು ಖಾಸಿಂಅಲಿ ಮತ್ತು ರಜಾಕ್ ಇವರು ನಮಗೆ ಲೇ ಸೂಳೆ ಮಕ್ಕಳೆ ನೀವು ಎಷ್ಟು ಗಳಿಸಿದ್ದರಿ ಮಕ್ಕಳೆ ನಮ್ಮ ಸಂಬಂದಿಕರ ಹೊಲವನ್ನು ತೆಗೆದುಕೊಳಕೆ ಎಷ್ಟು ಸೊಕ್ಕು ಬಂದಾದ ಮಕ್ಕಳೆ ನಿಮಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ನಿಮಗೆ ಇವತ್ತು ಒಂದು ಗತಿ ಕಾಣಿಸಿಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 13-04-2021 11:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080