ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/04/2021

ಶಹಾಪೂರ ಪೊಲೀಸ್ ಠಾಣೆ :- 81/2021.ಕಲಂ 341.323. 504 506 ಸಂ 34 ಐ.ಪಿ.ಸಿ. : ದಿನಾಂಕ 13/04/2021 ರಂದು 15-45 ಗಂಟೆಗೆ ಪಿಯರ್ಾದಿ ಶ್ರೀ ಶಿವರಾಮ ತಂದೆ ಬದ್ದುಸಿಂಗ್ ಚವ್ಹಾಣ ವ|| 71 ಜಾ|| ಲಂಬಾಣಿ ಉ|| ವ್ಯಾಪಾರ ಸಾ|| ಗಾಂದಿಚೌಕ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಸುಮಾರು ವರ್ಷಗಳಿಂದ ನಮ್ಮ ಆಸ್ತಿಯ ಮತ್ತು ಪೆಟ್ರೋಲ್ ಪಂಪ ಸಲುವಾಗಿ ನನಗು ಮತ್ತು ನನ್ನ ಮಕ್ಕಳಾದ ಶ್ರೀದರ, ಮತ್ತು ವಿನಾಯಕ ಇವರ ಮದ್ಯೆ ತಕರಾರು ಇದ್ದು ನನ್ನ ಇಬ್ಬರು ಮಕ್ಕಳು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತ ಬಂದಿದ್ದು ನಾನು ಹೋಗಲಿ ಅಂತ ಸುಮ್ಮನಾಗಿದ್ದೆನು. ಮತ್ತು ನನ್ನ ವಿನಾಯಕ ಪೆಟ್ರೋಲ್ ಪಂಪ ಸುಮಾರು ದಿನಗಳಿಂದ ಬಂದಮಾಡಿದ್ದು ಇರುತ್ತದೆ. ಹೀಗಿದ್ದು ಇಂದು ಯುಗಾದಿ ಹಬ್ಬ ಇದ್ದು ಮತ್ತು ಒಳ್ಳೆದಿನ ಇದ್ದುದ್ದರಿಂದ ಇಂದು ನಮ್ಮ ಪೆಟ್ರೋಲ್ ಪಂಪ ಪ್ರ್ರಾರಂಬ ಮಾಡಬೆಕು ಅಂತ ತಿಳಿದು, ಇಂದು ದಿನಾಂಕ 13/04/2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ಶಹಾಪೂರ ನಗರದ ಸುರಪೂರ-ಕಲಬುರಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ನನ್ನ ವಿನಾಯ ಫಿಲ್ಲಿಂಗ್ ಸ್ಟೇಷನ್ ( ಪೆಟ್ರೋಲ್ ಪಂಪಗೆ ) ಹೋಗಿ ಪೆಟ್ರೋಲ್ ಪಂಪ ಪ್ರಾರಂಬ ಮಾಡಬೆಕೆನ್ನುಷ್ಟರಲ್ಲಿ ನನ್ನ ಮಕ್ಕಳಾದ 1] ಶ್ರೀಧರ ತಂದೆ ಶಿವರಾಮ ಚವ್ಹಾಣ, 2] ವಿನಾಯಕ @ ಶಶಿ ತಂದೆ ಶಿವರಾಮ ಚವ್ಹಾಣ ಮತ್ತು ನನ್ನ ಸೊಸೆಯಂದಿರಾದ 3] ರಾಣಿಬಾಯಿ @ ರೇಣುಕಾ ಗಂಡ ಶ್ರೀದರ ಚವ್ಹಾಣ, 4] ಜಯಶ್ರೀ ಗಂಡ ವಿನಾಯಕ ಚವ್ಹಾಣ, ಇವರೆಲ್ಲರು ಕೂಡಿಕೊಂಡು ಬಂದವರೆ ಅವರಲ್ಲಿ ಶ್ರೀಧರನು ಲೇ ಶಿವ್ಯಾ ಸೂಳಿಮಗನೆ ನಿನು ನಮಗೆ ಆಸ್ತಿಯಲ್ಲಿ ಪಾಲುಕೊಡದೆ ಇದ್ದುದ್ದರಿಂದ, ಪೆಟ್ರೋಲ್ ಪಂಪ ಬಂದ ಮಾಡಿಸಿದ್ದಿವಿ. ನಮಗೆ ಆಸ್ತಿಯಲ್ಲಿ ಪಾಲು ಕೊಟ್ಟು ಪ್ರಾರಂಬ ಮಾಡು ಅಂತ ಅಂದರು. ಆಗ ನಾನು ಸುಮ್ಮನೆ ಯಾಕ ತಕರಾರು ಮಾಡುತ್ತಿರಿ ಅಂತ ಅಂದಾಗ ನಿನ್ನದು ಬಹಳ ಆಗ್ಯಾದ ಇವತ್ತು ನಿನಗೆ ಬಿಡುವದಿಲ್ಲಾ ಅಂತ ಅಂದವನೆ ಶ್ರೀಧರನು ತನ್ನ ಕೈಯಿಂದ ನನ್ನ ಎಡಕಪಾಳಕ್ಕೆ ಹೋಡೆದನು, ಆಗ ನಾನು ಅಂಜಿ ಹೋಗುತ್ತಿರುವಾಗ ನನ್ನ ಮಗ ವಿನಾಯಕ @ ಶಶಿ ಈತನು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಒತ್ತಿ ಹಿಡಿದುಕೊಂಡನು. ಆಗ ನನ್ನ ಸೊಸೆಯಂದಿರಾದ ರಾಣಿಬಾಯಿ @ ರೇಣುಕಾ ಇವಳು ತನ್ನ ಕೈಯಿಂದ ನನಗೆ ಎದೆಗೆ, ಬೆನ್ನಿಗೆ, ಹೋಡೆದಳು, ಜಯಶ್ರೀ ಈಕೆಯು ತನ್ನ ಕೈಯಿಂದ ನನ್ನ ಹೋಟ್ಟೆಗೆ ಹೋಡೆದಳು. ಆಗ ಅಲ್ಲೆ ಇದ್ದ ಬಸವರಾಜ ತಂದೆ ಮಲ್ಲಪ್ಪ ಹಾಲಬಾವಿ, ನಾಗಪ್ಪ ತಂದೆ ರುದ್ರಪ್ಪ ಹುಲಿಮನಿ, ಇವರು ಸದರಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ನನ್ನ ಮಕ್ಕಳು ಮತ್ತು ಸೊಸೆಯಂದಿರು ಇವತ್ತು ಉಳಿದುಕೊಂಡಿದ್ದಿ ಮಗನೆ ಇಲ್ಲಾಂದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತ ಜೀವದ ಭಯ ಹಾಕಿ ಹಾಕಿದರು. ಆಗ ನಾನು ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದು ಈಗ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 81/2021 ಕಲಂ 341. 323. 504. 506. ಸಂ. 34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು

ಹುಣಸಗಿ ಪೊಲೀಸ್ ಠಾಣೆ:- 20/2021 279 337 338 ಐಪಿಸಿ : ದಿನಾಂಕ:13/04/2021 ರಂದು ಪಿಯರ್ಾದಿ ಹತ್ತಿರ ಕವಳಿ ಮಶೀನ್ ಆಪರೇಟರ್ ಅಂತಾ ಕೆಲಸ ಮಾಡುವ ಗಾಯಾಳು ಚಿರಂಜಿವಿ ಈತನು ತಾನು ನಡೆಯಿಸುವ ಸಿಟಿ-100 ಮೋಟಾರ್ ಸೈಕಲ್ ನಂ:ಟಿಎನ್-61 ಎಮ್-3951 ನೇದ್ದರ ಮೇಲೆ ಹಿಂದೆ ವಾಸು ಮತ್ತು ವಿಗ್ನೇಶ ಇವರಿಗೆ ಕೂಡಿಸಿಕೊಂಡು ಬನ್ನಟ್ಟಿ ಸೀಮಾಂತರದಲ್ಲಿರುವ ತಮ್ಮ ಕವಳಿ ಮಶೀನ್ ಹತ್ತಿರ ಬರುತ್ತಿದ್ದಾಗ, ಸಾಯಂಕಾಲ 5.30 ಗಂಟೆಯ ಸುಮಾರಿಗೆ ಬನ್ನಟ್ಟಿ ಹಳ್ಳದ ಪೂಲಿನ ಮೇಲೆ ಹೊರಟಾಗ ತಾಳಿಕೋಟಿ ಕಡೆಯಿಂದ ಆರೋಪಿತನು ಕಾರ್ನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಗಡೆ ಹೊರಟ ಗಾಯಳು ಚಿರಂಜಿವಿ ನಡೆಯಿಸುತ್ತಿದ್ದ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಮೇಲೆ ಇದ್ದ 3 ಜನರೂ ರೋಡಿನ ಮೇಲೆ ಬಿದ್ದು ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ ಅಂತಾ ಪಿಯರ್ಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 14-04-2021 11:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080