ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/02/2021

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ.23/2021 ಕಲಂ:279,337,338 ಐಪಿಸಿ: ಇಂದು ದಿನಾಂಕ: 14/02/2021 ರಂದು 5-15 ಪಿಎಮ್ ಕ್ಕೆ ಶ್ರೀ ಮಹಿಬೂಬ ತಂದೆ ಬುರಾನಸಾಬ ಇನಾಮದಾರ, ವ:23, ಜಾ:ಮುಸ್ಲಿಂ, ಉ:ವ್ಯಾಪಾರ ಸಾ:ಹೊರಟೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಚಿಕನ ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 13/02/2021 ರಂದು ನಮ್ಮ ತಂದೆಯಾದ ಬುರಾನಸಾಬ ತಂದೆ ಹಸನಸಾಬ ಈತನು ತನ್ನ ಸ್ನೇಹಿತ ಗಂಗಪ್ಪ ತಂದೆ ಬಸವರಾಜ ಸಾ:ಹೊರಟೂರು ಈತನೊಂದಿಗೆ ಶಹಾಪೂರದಲ್ಲಿ ಕೆಲಸ ಇದೆ ಎಂದು ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಎಲ್ 7626 ನೇದ್ದರ ಮೇಲೆ ಶಹಾಪೂರಕ್ಕೆ ಹೋದರು. ನಮ್ಮ ತಂದೆಯು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ಗಂಗಪ್ಪನು ಹಿಂದೆ ಕುಳಿತುಕೊಂಡಿದ್ದನು. ನಾನು ಚಿಕನ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದೇನು. ಮದ್ಯಾಹ್ನ 12-45 ಗಂಟೆ ಸುಮಾರಿಗೆ ನಮ್ಮ ತಂದೆಯು ನನಗೆ ಫೋನ ಮಾಡಿ ನಾನು ಮತ್ತು ಗಂಗಪ್ಪ ಇಬ್ಬರು ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ಖಾನಾಪೂರ-ಕುರುಕುಂದಾ ರೋಡ ಕ್ಯಾತ್ನಳ ಕ್ರಾಸ ಹತ್ತಿರ ನಮಗೆ ಕಾರ ಡಿಕ್ಕಿಯಾಗಿದೆ ನೀನು ಬೇಗ ಬಾ ಎಂದು ಹೇಳಿದಾಗ ನಾನು ತಕ್ಷಣ ಕ್ಯಾತ್ನಳ ಕ್ರಾಸ ಹತ್ತಿರ ಹೊಗಿ ನೋಡಿದೆನು. ನಮ್ಮ ತಂದೆ ಬುರಾನಸಾಬ ಮತ್ತು ಹಿಂದೆ ಕುಳಿತ್ತಿದ್ದ ಗಂಗಪ್ಪ ಇಬ್ಬರಿಗೆ ಕಾರ ಅಪಘಾತವಾಗಿತ್ತು. ನಮ್ಮ ತಂದೆಗೆ ತೆಲೆಗೆ ಗುಪ್ತಗಾಯ, ಮುಖಕ್ಕೆ ತರಚಿದ ಗಾಯ, ಬಲಗಾಲಿನ ತೊಡೆ ಮುರಿದಿತ್ತು ಮತ್ತು ಎಡಗಾಲ ಹಿಂಬಡಿಗೆ ತರಚಿದ ಗಾಯವಾಗಿತ್ತು. ಗಂಗಪ್ಪನಿಗೆ ಹೊಟ್ಟೆಗೆ ಮತ್ತು ಟೊಂಕಕ್ಕೆ ಒಳಪೆಟ್ಟಾಗಿದ್ದವು. ಅಪಘಾತಪಡಿಸಿದ ಕಾರ ನೋಡಲಾಗಿ ಅದರ ನಂ. ಕೆಎ 04 ಡಿ 8680 ಇತ್ತು. ಅಲ್ಲಿಯೇ ಇದ್ದ ಕಾರಿನ ಚಾಲಕನಿಗೆ ವಿಚಾರಿಸಿದಾಗ ಅವನು ತನ್ನ ಹೆಸರು ಲಕ್ಷ್ಮಣ ತಂದೆ ಮಲ್ಲಪ್ಪ ಅಂಚಿ ಸಾ:ಕೊಪ್ಪಳ ಎಂದು ಹೇಳಿದನು. ಸದರಿ ಅಪಘಾತದ ಬಗ್ಗೆ ನಮ್ಮ ತಂದೆಗೆ ಕೇಳಿದಾಗ ಹೇಳಿದ್ದೆನಂದರೆ ನಾನು ಮತ್ತು ಗಂಗಪ್ಪ ಇಬ್ಬರೂ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಹೋಗುತ್ತಿದ್ದೇವು. ಗಂಗಪ್ಪನು ಹಿಂದೆ ಕುಳಿತ್ತಿದ್ದು, ಖಾನಾಪೂರ-ಕುರುಕುಂದಾ ರೋಡ ಕ್ಯಾತ್ನಳ ಕ್ರಾಸ ಹತ್ತಿರ ಹೋಗುತ್ತಿದ್ದಾಗ 12-30 ಪಿಎಮ್ ಸುಮಾರಿಗೆ ಎದುರುಗಡೆಯಿಂದ ಕಾರ ನಂ. ಕೆಎ 04 ಡಿ 8680 ನೇದ್ದನ್ನು ಅದರ ಚಾಲಕ ಲಕ್ಷ್ಮಣ ತಂದೆ ಮಲ್ಲಪ್ಪ ಅಂಚಿ ಸಾ:ಕೊಪ್ಪಳ ಎಂಬುವನು ತನ್ನ ಕಾರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿದನು. ಅಪಘಾತದಲ್ಲಿ ನಮಗಿಬ್ಬರಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ ಎಂದು ಹೇಳಿದನು. ಅಷ್ಟರಲ್ಲಿ ಯಾರೋ ದಾರಿ ಮೇಲೆ ಹೋಗುವವರು 108 ಅಂಬ್ಯೂಲೇನ್ಸಗೆ ಫೋನ ಮಾಡಿ ಹೇಳಿದ್ದು, 108 ಅಂಬುಲೇನ್ಸ ಬಂದಿತು. ಗಾಯಾಳುಗಳಾದ ನಮ್ಮ ತಂದೆ ಬುರಾನಸಾಬ ಮತ್ತು ಗಂಗಪ್ಪ ಇಬ್ಬರಿಗೆ 108 ಅಂಬ್ಯುಲೇನ್ಸದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿದ್ದು, ವೈದ್ಯಾಧಿಕಾರಿಗಳು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಗೆ ಶಿಫಾರಸ್ಸು ಮಾಡಿದರು. ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಅಪಘಾತದ ಬಗ್ಗೆ ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದರಿಂದ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ಅವರಿಗೆ ನಾವು ಸದ್ಯ ನಮ್ಮ ತಂದೆಗೆ ತೋರಿಸುವವರು ಯಾರೂ ಇಲ್ಲ ಆದ್ದರಿಂದ ನಮ್ಮ ತಂದೆ ಮತ್ತು ಗಂಗಪ್ಪ ಇಬ್ಬರಿಗೆ ಕಲಬರುಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿದೆವು. ಈಗ ನಮ್ಮ ತಂದೆ ಮತ್ತು ಗಂಗಪ್ಪ ಇಬ್ಬರಿಗೆ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಆದ್ದರಿಂದ ಸದರಿ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ತಂದೆ ಮತ್ತು ಗಂಗಪ್ಪ ಇಬ್ಬರಿಗೆ ಆಸ್ಪತ್ರೆಗೆ ಸೇರಿಕೆ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/2021 ಕಲಂ:279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.05/2021 ಕಲಂ 174 ಸಿ.ಆರ್.ಪಿ.ಸಿ: ಇಂದು ದಿನಾಂಕ 14/02/2021 ರಂದು 15:30 ಪಿ.ಎಂ ಕ್ಕೆ ಪಿರ್ಯಾದಿ ವಿಠ್ಠಲ ತಂದೆ ಸೀತು ಪವ್ಹಾರ ವ|| 30 ವರ್ಷ ಜಾ|| ಲಂಬಾಣಿ, ಉ|| ಕೂಲಿ ಸಾ|| ಶಾಂಪರಹಳ್ಳಿ ತಾ|| ಚಿತ್ತಾಪುರ ಜಿ|| ಕಲಬುರಗಿ ಇದ್ದು ನಾನು ಶಹಾಪೂರ ತಾಲೂಕಿನ ಹೋತಪೇಟ ಮುಂದಿನ ತಾಂಡದ ತಿಪ್ಪಣ್ಣ ಇವರ ಮಗಳಾದ ಲಲ್ಲಿಬಾಯಿಯನ್ನು, ಸುಮಾರು 11 ವರ್ಷಗಳಿಂದೆ ಆಗಿದ್ದು, ನಮಗೆ ರೋಹನ 9 ವರ್ಷ, ರನ್ವೀತ 6 ವರ್ಷ ಇಬ್ಬರೂ ಮಕ್ಕಳಿದ್ದು, ನಾವೂ ಗೌಂಡಿ ಕೇಲಸ ಮಾಡಿಕೊಂಡು ಉಪಜೀವಿಸುತ್ತಿದ್ದು,ಹೀಗಿದ್ದು ದಿನಾಂಕ 04/02/2021 ರಂದು ಶಹಾಪೂರ ತಾಲೂಕಿನ ಇಬ್ರಾಹಿಂಪೂರದ ಶ್ರೀ ಅಬ್ದುಲ ಭಾಷ ಕೇರಿಯಲ್ಲಿ ದೇವರ ಕಾರ್ಯಕ್ರಮದ ನಿಮಿತ್ಯಾ ನಾನು ಮತ್ತು ನನ್ನ ಹೆಂಡತಿ ಲಲ್ಲಿಬಾಯಿ ಮತ್ತು ನಮ್ಮ ಮಕ್ಕಳೊಂದಿಗೆ ಬಂದಿದ್ದು, ಅಲ್ಲಿಗೆ ನಮ್ಮ ಮಾವ ತಿಪ್ಪಣ್ಣ ಇವರು ಕೂಡ ಅಲ್ಲಿಗೆ ಬಂದಿದ್ದು, ನಾನು ಮತ್ತು ನನ್ನ ಹೆಂಡತಿ, ಮಗ ರನ್ವಿತ ಮರಳಿ ಊರಿಗೆ ಹೋಗಿದ್ದು, ನನ್ನ ಹೀರಿಯ ಮಗ ರೋಹನ ಅವರ ಅಜ್ಜಿ ಊರಾದ ಹೋತಪೇಠ ಮುಂದಿನ ತಾಂಡಕ್ಕೆ ಅವರ ಅಜ್ಜ ತಿಪ್ಪಣ್ಣ ಇವರ ಸಂಗಡ ಹೋಗಿದ್ದನು. ದಿನಾಂಕ 13/02/2021 ರಂದು ಮುಂಜಾನೆ 08:45 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿದ್ದಾಗ ಹೋತಪೇಠ ಮುಂದಿನ ತಾಂಡದ ನಮ್ಮ ಮಾವ ತಿಪ್ಪಣ್ಣ ಈತನು ಪೋನ ಮಾಡಿ ತಿಳಿಸಿದ್ದೇನಂದರೆ, ದಿನಾಂಕ 13/02/2021 ರಂದು ನಾವೂ ನಮ್ಮ ಹೋಲಕ್ಕೆ ನೀರು ಬಿಡುವ ಕುರಿತು ಹೋಲಕ್ಕೆ ಹೋದಗ ರೋಹನ ಕೂಡ ನಮ್ಮ ಜೋತೆಯಲ್ಲಿ ಬಂದಿದ್ದು, ನಾನು ಹೋಲಕ್ಕೆ ನೀರು ಬಿಡವಾಗ ಸದರ ರೋಹನ ಈತನು ನಮ್ಮ ಗ್ರಾಮದ ಚಂದ್ರ ತಂದೆ ಶಂಕರ ಇವರ ಮಗ ದಶರಥ ಇವರು ಕೂಡಿ ಆಟ ಆಡುತ್ತಾ ಮೇನ ಕ್ಯಾನೇಲ ಹತ್ತಿರ ಬಂದಿದ್ದು. ಅಂದಾಜು ಸಮಯ08:30 ಎ.ಎಂ ಕ್ಕೆ ಸದರಿ ದಶರಥನು ಅಳುತ್ತಾ ನಮ್ಮ ಹತ್ತಿರ ಬಂದು, ಕೇನಾಲ ದಡದಲ್ಲಿ ಒಂದು ಏಡಿ ಕಂಡಿದ್ದು ಅದನ್ನು ಹೀಡಿಯಲು ರೋಹನ ಈತನು ಕೇನಲಗೆ ಇಳಿದಾಗ ಕಾಲು ಜಾರಿ ನೀರಿನಲ್ಲಿ ಮುಳಿಗಿದ್ದಾನೆ, ಅಂತಾ ಆಳುತ್ತಾ ಹೇಳಿದ್ದು ನಾವೂ ಕೂಡಲೇ ಸ್ಥಳಕ್ಕೆ ಬಂದು ಹುಡಕಾಡಲಾಗಿ ಸಿಕ್ಕಿರುವದಿಲ್ಲಾ, ನೀವು ಬೇಗ ಬನ್ನಿ ಅಂತಾ ತಿಳಿಸಿದ ಕೂಡಲೇ, ನಾನು ಮತ್ತು ನನ್ನ ಹೆಂಡತಿ ಶಹಾಪೂರ ಮುಂದಿನ ತಾಂಡಕ್ಕೆ ಬಂದು, ನಾವೂ ಮತ್ತು ನಮ್ಮ ಮಾವ ತಿಪ್ಪಣ್ಣ, ಅಳಿಯಾ ರವಿ, ಚಂದ್ರ ತಂದೆ ಶಂಕರ, ಸಂಜೂ ತಂದೆ ಶರಣಪ್ಪ ಪುಜಾರಿ ಮೋಹನ ತಂದೆ ಚಂದ್ರ ರಾಠೋಡ, ನಾವೇಲಾ ಸದರಿ ಕೇನಲ್ ನಲ್ಲಿ ಹುಡಕಾಡಲಾಗಿ ಇಂದು ದಿನಾಂಕ 14/02/2021 ರಂದು ಮದ್ಯಾಹ್ನ 02:30 ಪಿ.ಎಂ ಸುಮಾರಿಗೆ ನನ್ನ ಮಗ ರೋಹನ ಈತನ ಮೃತ ದೇಹವು ಮಡ್ನಾಳ ಸೀಮಾಂತರದ ಬಸವರಾಜ ತಂದೆ ಮಾರ್ಥಂಡಪ್ಪ ಇವರ ಹೋಲದ ಹತ್ತಿರ ಕೇನಾಲನಲ್ಲಿ ಸಿಕ್ಕಿದ್ದು ಇರುತ್ತದೆ, ಕಾರಣ ನನ್ನ ಮಗ ರೋಹನ ತಂದೆ ವಿಠ್ಠಲ ಪವ್ಹಾರ ವ|| 9 ವರ್ಷ, ಜಾ|| ಲಂಬಾಣಿ, ಉ|| ವಿದ್ಯಾಥರ್ಿ ಸಾ|| ಶಾಂಪರಹಳ್ಳಿ ಈತನು ಶಹಾಪೂರ ಮೇನ ಕಾಲುವೇಯಲ್ಲಿ ಏಡಿ ಹಿಡಿಯಲು ಹೋಗಿ ಕಾಲು ಜಾರಿ ನೀರಿನಲ್ಲಿ ಮುಳಗಿ ದಿನಾಂಕ 13/02/2021 ರಂದು 8:30 ಎ.ಎಂ ದಿಂದ ದಿನಾಂಕ 14/02/2021 ರಂದು 14:30 ಪಿ.ಎಂ ದೋಳಗೆ ಮೃತಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ದೂರು ಸಂಶಾಯ ಇರುವದಿಲ್ಲಾ, ಕಾರಣ ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಅದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 05/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 15-02-2021 11:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080