Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/03/2021

ವಡಗೇರಾ ಪೊಲೀಸ್ ಠಾಣೆ:- 35/2021 ಕಲಂ: 279, 337, 304(ಎ) ಐಪಿಸಿ ಸಂ 187 ಐಎಮ್ಐ ಆಕ್ಟ: ದಿನಾಂಕ: 14/03/2021 ರಂದು ಶ್ರೀ ಸೂರ್ಯಕಾಂತ ತಂದೆ ಅಜರ್ುನ ಡಿಸೋಜಾ ವ:55, ಜಾ:ಕ್ರಿಶ್ಚನ, ಉ:ಒಕ್ಕಲುತನ ಸಾ:ಚಿಟಗುಪ್ಪ ಜಿ:ಬೀದರ ಇವರು ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಮಗಳಾದ ರಬೇಕಾ ಇವಳು ಖಾನಾಪೂರ ಗ್ರಾಮದಲ್ಲಿ ಎ.ಎನ್.ಎಮ್ ಎಂದು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ದಿನಾಂಕ: 13/03/2021 ರಂದು ಖಾನಾಪೂರ ಗ್ರಾಮದಿಂದ ರಾತ್ರಿ ಡೆಲಿವರಿ ಕೇಸ್ (ಹೆರಿಗೆ) ಅನ್ನು ಯಾದಗಿರಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ರಿಯರ್ ಅಟೋ ನಂ. ಕೆಎ 33 ಎ 6316 ನೇದ್ದರಲ್ಲಿ ಅಟೋ ಚಾಲಕ ಮೌಲಾನಾ ಮತ್ತು ಸಹ ಪ್ರಯಾಣಿಕ ಭಾಗಪ್ಪ ಇವರೊಂದಿಗೆ ಮರಳಿ ಖಾನಾಪೂರಕ್ಕೆ ಹೋಗುತ್ತಿದ್ದಾಗ ರಾತ್ರಿ 11-30 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಖಾನಾಪೂರ ಕಬ್ಬಿಣದ ಬ್ರಿಡ್ಜ್ ಹತ್ತಿರ ಎದುರುಗಡೆಯಿಂದ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಿಯರ್ ಅಟೋಕ್ಕೆ ಬಲಗಡೆಯಿಂದ ಬಲವಾಗಿ ಡಿಕ್ಕಿಪಡಿಸಿದ್ದರಿಂದ ಅಟೋದಲ್ಲಿ ಬಲ ಸೈಡಿಗೆ ಕುಳಿತ್ತಿದ್ದ ರಬೆಕಾ ಇವಳ ಎಡಗಣ್ಣು ಮತ್ತು ಎಡಗಣ್ಣಿನ ಹಿಬ್ಬಿನ ಮೇಲೆ ಭಾರಿ ರಕ್ತಗಾಯಗಳಾಗಿ, ಅಟೋದಿಂದ ಜಾರಿ ಕೆಳಗಡೆ ಬಿದ್ದಾಗ ಅವಳ ಬಲಗಾಲ ಮೇಲೆ ಲಾರಿಯ ಗಾಲಿ ಹಾಯ್ದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಟೋ ಚಾಲಕ ಮೌಲಾನಾ ಮತ್ತು ಹಿಂದೆ ಕುಳಿತ್ತಿದ್ದ ಭಾಗಪ್ಪ ಇವರಿಗೆ ಅಪಘಾತದಲ್ಲಿ ಬಲಗೈಗೆ ಗುಪ್ತ ಮತ್ತು ಗದ್ದಕ್ಕೆ ತರಚಿದ ಗಾಯಗಳಾಗಿರುತ್ತವೆ. ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದಂತೆ ಮಾಡಿ, ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 35/2021 ಕಲಂ: 279, 337, 304(ಎ) ಐಪಿಸಿ ಸಂ 187 ಐಎಮ್ಐ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 39/2021 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 14-03-2021 ರಂದು 1 ಪಿ.ಎಮ್ ಕ್ಕೆ ಆರೋಪಿತನಾದ ಅಬ್ದುಲ್ ಆಶೀಫ್ ತಂದೆ ಅಬ್ದುಲ್ ಹಕೀಮ್ ವಯಾ:32 ಉ:ಕೂಲಿ ಜಾ: ಮುಸ್ಲಿಂ ಸಾ: ಕೃಷ್ಣಾ ತಾ: ಮಕ್ತಾಲ್ ಇತನು ಹೆಡಗಿಮುದ್ರಾ ಗ್ರಾಮದ ಶ್ರೀ ಶಾಂತವೀರ ಗುಡಿಯ ಹತ್ತಿರ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತನಿಂದ 6400/-ರೂ ನಗದು ಹಣ ಮತ್ತು ಮಟಕಾ ಎರಡು ಚೀಟಿಗಳನ್ನು ಹಾಗೂ ಒಂದು ಬಾಲಪೆನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 40/2021 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ 07/03/2021 ರಂದು ರಾತ್ರಿ 9-20 ಪಿ.ಎಂ. ಕ್ಕೆ ಶ್ರೀ ದೇವಿಂದ್ರ ಸಿಹೆಚಸಿ-52 ರವರು ಮಾನ್ಯ ನ್ಯಾಯಾಲಯದಿಂದ ಅಸಂಜ್ಞೇಯ ಅಪರಾಧ ದಾಖಲು ಮಾಡಲು ಪರವಾನಿಗೆ ಪಡೆದುಕೊಂಡು ಬಂದು ಹಾಜರಪಡಿಸಿದ್ದೆನೆಂದರೆ ಮಾನ್ಯರವರಲ್ಲಿ ಈ ಮೇಲ್ಕಂಡ ವಿಷಯದನುಸರವಾಗಿ ವಿನಂತಿಸಿಕೊಳ್ಳುವುದೆನೆಂದರೆ ಇಂದು ದಿನಾಂಕ. 14-03-2021 ರಂದು 3-15 ಪಿ.ಎಮ್ ಕ್ಕೆ ನಾನು ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-361, 263, 55 ಮತ್ತು 312 ರವರ ಜೋತೆಯಲ್ಲಿ ಹಳಗೇರಾ ಗ್ರಾಮದಲ್ಲಿದ್ದಾಗ ನನಗೆ ಮಾಹಿತಿ ಬಂದಿದ್ದೆನೆಂದರೆ ವರ್ಕನಳ್ಳಿ ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಿಡದ ಕೆಳಗಡೆ ಯಾರೋ ಕೆಲವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಹಳಗೇರಾ ಗ್ರಾಮದಿಂದ ಎಲ್ಲಾ ಸಿಬ್ಬಂದಿಯವರನ್ನು ಜೊತೆಯಲ್ಲಿಯೇ ಕರೆದುಕೊಂಡು ವರ್ಕನಳ್ಳಿ ಗ್ರಾಮದ ಸರಕಾರಿ ಗುಡ್ಡದ ಕಡೆಗೆ ಹೊರಟು ಮಧ್ಯಾಹ್ನ 3-45 ಗಂಟೆ ಸುಮಾರಿಗೆ ಸರಕಾರಿ ಗುಡ್ಡದ ಹತ್ತಿರ ಬಂದು ಗಿಡಗಳ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಇಸ್ಪೀಟ ಜೂಜಾಟದ ದಾಳಿ ಬಗ್ಗೆ ತಿಳಿಸಿ ಎಲ್ಲರೂ ಕೂಡಿಕೊಂಡು ಮುಂದೆ ಹೋಗಿ ಎಲ್ಲರೂ ಅವಿತುಕೊಂಡು ನೋಡಲಾಗಿ ಒಂದು ಗಿಡದ ಕೆಳಗಡೆ ಇದ್ದ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಚಿತ ಪಡಿಸಿಕೊಂಡು ಎಲ್ಲರೂ ಅವರನ್ನು ಸುತ್ತಿವರೆದು 5 ಜನರನ್ನು ಸಾಯಂಕಾಲ 4-15 ಗಂಟೆಗೆ ಹಿಡಿದುಕೊಂಡೆವು, ಅವರ ಹೆಸರು 1)ಲಿಂಗರಾಜ ತಂದೆ ಮೌನೇಶ ಪತ್ತಾರ ವಯಾಃ 26 ವರ್ಷ ಜಾಃ ವಿಶ್ವಕರ್ಮ ಉಃ ವ್ಯಾಪಾರ ಸಾಃ ಮೌನೇಶ್ವರ ಗುಡಿ ಹತ್ತಿರ ಯಾದಗಿರಿ 2)ಪ್ರಶಾಂತ ತಂದೆ ನಾರಾಯಣ ಹಂಚಾಟೆ ವಯಾಃ 32 ವರ್ಷ ಜಾಃ ಸಿಂಪಿಗೇರ ಉಃ ಕ್ಯಾಶಿಯರ್ ಸಾಃ ಗೋಲ್ಡನ ಬೇಕರಿ ಹಿಂದೆ ಗಾಂಧಿ ಚೌಕ ಯಾದಗಿರಿ 3)ಮಲ್ಲಿಕಾಜರ್ುನ ತಂದೆ ಸಿದ್ರಾಮಯ್ಯ ಮಠಪತಿ ವಯಾಃ 28 ವರ್ಷ ಜಾಃ ಲಿಂಗಾಯತ ಉಃ ಗುಮಾಸ್ತ ಸಾಃ ಅಲ್ಲಿಪೂರ ಹಾಃವಃ ಕಾಜಗಾರವಾಡಿ ಯಾದಗಿರಿ 4)ಸುರೇಶ ತಂದೆ ಶರಣಪ್ಪ ಪೂಜಾರಿ ವಯಾಃ 39 ವರ್ಷ ಜಾಃ ಕಬ್ಬಲೀಗ ಉಃ ಟೇಲರ ಕೆಲಸ ಸಾಃ ಕೋಳೀವಾಡ ಯಾದಗಿರಿ ಮತ್ತು 5)ಬಾಬು ತಂದೆ ಮಲ್ಲಿಕಾಜರ್ುನ ಮಡಿವಾಳ ವಯಾಃ 34 ವರ್ಷ ಜಾಃ ಮಡಿವಾಳ ಉಃ ಕುಲಕಸುಬು ಸಾಃ ಕಮಲ ನೆಹರು ಪಾರ್ಕ ಯಾದಗಿರಿ ಈ 5 ಜನರಿಂದ ಇಸ್ಪಿಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 12,170/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡೆವು, 6)ವೆಂಕಟೇಶ ಸಾಃ ಯಾದಗಿರಿ ಇತನು ಸ್ಥಳದಿಂದ ಓಡಿ ಹೋಗಿರುತ್ತಾನೆ, ಈ ಸವಿಸ್ತಾರವಾದ ಪಂಚನಾಮೆಯನ್ನು ಇಂದು ದಿನಾಂಕ 14-03-2021 ರಂದು 4-15 ಪಿ.ಎಮ ದಿಂದ 5-15 ಪಿ.ಎಮ್ ದವರೆಗೆ ಮಾಡಿ ಮರಳಿ ಠಾಣೆಗೆ 6-15 ಪಿಎಂ. ಕ್ಕೆ ಬಂದು ಜಪ್ತಿ ಪಂಚನಾಮೆ, 5 ಜನ ಆರೋಪಿತರು, ಮುದ್ದೆಮಾಲು ಮತ್ತು ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜುರಪಡಿಸಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಎನ್.ಸಿ.ಆರ್ ನಂ: 10/2021 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ದಾಖಲಿಸಿದ್ದು ಇರುತ್ತದೆ. ಆದ್ದರಿಂದ ಈ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯರವರು ಗುನ್ನೆ ದಾಖಲಿಸಲು ಪರವಾನಿಗೆ ನೀಡಲು ವಿನಂತಿ. ಸದರಿ ಪರವಾನಿಗೆ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 40/2021 ಕಲಂ 87 ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 41/2021 ಕಲಂ ಕಲಂ 143, 147, 148, 323, 324, 504, 506ಸಂ 149 ಐ.ಪಿ.ಸಿ : ಇಂದು ದಿನಾಂಕ 14-03-2021 ರಂದು 9-40 ಪಿ.ಎಮ ಕ್ಕೆ ಅಜರ್ಿದಾರರಾದ ಶ್ರೀ ಅನಂತಪ್ಪ ತಂದೆ ಶೇಖಪ್ಪ ಓರುಣಚಿ ವಯ:32 ಜಾತಿ: ಬೇಡರ ಉ: ಒಕ್ಕಲುತನ ಸಾ: ಹೆಡಗಿಮದ್ರಾ ಇವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ಸಲ್ಲಿಸಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ 14-03-2021 ರಂದು ಸಆಯಂಕಾಲ 6 ಗಂಟೆಗೆ ನಾನು ಮತ್ತು ಸಣ್ಣ ಶರಣಪ್ಪ ತಂದೆ ಚಂದ್ರಾಮ ಬಂಗಾರಿ (ಕಿರಾಣಿ ಅಂಗಡಿ) ಮತ್ತು ಸಣ್ಣಸಾಬಯ್ಯ ತಂದೆ ಶರಣಪ್ಪ ಹಯ್ಯಾಳಿ, ತಿಮ್ಮಪ್ಪ ತಂದೆ ಚಂದ್ರಾಮ ಬಂಗಾರಿ ಎಲ್ಲರು ಕೂಡಿ ಶರಣಪ್ಪನ ಕಿರಾಣಿ ಅಂಗಡಿ ಹತ್ತಿರ ಮಾತಾಡುತ್ತಾ ಕುಳಿತಾಗ ಅದೇ ವೇಳೆಗೆ ನಮ್ಮ ಸಮಾಜದ 1} ಸಣ್ಣ ಮರೆಪ್ಪ ತಂದೆ ಮರಿಲಿಂಗಪ್ಪ ಕಟಕಟಿ 2} ಸದಾಶಿವ ತಂದೆ ಮರಿಲಿಂಗಪ್ಪ ಕಟಕಟೆ 3} ಅಶೋಕ ತಂದೆ ಮರಿಲಿಂಗಪ್ಪ ಕಟಕಟೆ 4} ವಿಶ್ವರಾಧ್ಯ ತಂದೆ ಮರಿಲಿಂಗಪ್ಪ ಕಟಕಟೆ ಮತ್ತು 5} ಶಿವರಾಜ ತಂದೆ ಮರಿಲಿಂಗಪ್ಪ ಕಟಕಟೆ ಇವರೆಲ್ಲರೂ ಕೂಡಿಕೊಂಡು ನಮ್ಮ ಹತ್ತಿರ ಬಂದು ನನಗೆ ಎಲೇ ಬೋಸಡಿ ಮಗನೇ ಊರಲ್ಲಿ ಹ್ಯಾಂಗ ಜೀವನ ಮಾಡುತ್ತಿ ನೋಡಿಕೊಳ್ಳುತ್ತೇವೆ ಅಂತಾ ಬೈಯುತ್ತಿದ್ದಾಗ ನಾನು ಅವರಿಗೆ ಸುಮ್ಮನೇ ನನಗೆ ಏಕೆ ಬೈಯುತ್ತಿದ್ದಿರಿ ನಾನು ಏನು ತಪ್ಪು ಮಾಡಿದೇನೆ ಅಂತಾ ಅಂದಾಗ ಅವರೆಲ್ಲರೂ ಕೂಡಿಕೊಂಡು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೂಗಾಡಿ ಈ ಸೂಳೇ ಮಗನಿಗೆ ಕಾಲು ಕಡಿತಿವಿ ಅಂತಾ ಅಂದವರೇ ಅವರಲ್ಲಿ ಸಣ್ಣಮರೆಪ್ಪ ತಂದೆ ಮರಿಲಿಂಗಪ್ಪ ಕಟಕಟೆ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗೈ ಹಿಡಕಿ ಹತ್ತಿರ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಸದಾಶಿವ ತಂದೆ ಮರಿಲಿಂಗಪ್ಪ ಕಟಕಟೆ ಈತನು ಬಡಿಗೆಯಿಂದ ನನ್ನ ಎಡಗೈ ಕಿರುಬೆರಳಿಗೆ ಹೊಡೆದು ಗಾಯ ಮಾಡಿದನು. ಇನ್ನೂಳಿದ ಮೂರು ಜನರು ನನಗೆ ಕೈ ಮುಷ್ಟಿ ಮಾಡಿ ಎದೆಗೆ ಮತ್ತು ಬೆನ್ನಿಗೆ ಗುದ್ದಿದ್ದಾರೆ. ಮತ್ತೆ ನೆಲದ ಮೇಲೆ ಹಾಕಿ ಕಾಲಿನಿಂದ ಬೆನ್ನಿಗೆ ಒದ್ದರು ಆಗ ನಾನು ನೆಲದ ಮೇಲೆ ಬಿದ್ದು ಚಿರಾಡುತ್ತಿರುವಾಗ ಶರಣಪ್ಪ ಅಂಗಡಿ ಮತ್ತು ಭೀಮಶಪ್ಪ ಹುಲಕಲ್, ಸಿದ್ದಲಿಂಗ ಬಾವರ ಇವರೆಲ್ಲರೂ ಜಗಳ ಬಿಡಿಸಿರುತ್ತಾರೆ. ಆಗ ಮತ್ತೆ ಅವರು ಈಗ ಉಳಿದಿ ಸೂಳೆ ಮಗನೇ ಇನ್ನೊಮ್ಮೆ ಸಿಗು ನಿನಗೆ ಉಳಿಸುವದಿಲ್ಲ ಅಂತಾ ಅಂಜಿಸಿ ಹೋದರು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಲಿಖಿತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 41/2021 ಕಲಂ 143, 147, 148, 323, 324, 504, 506 ಸಂ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೋಮಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಯಾದಗಿರಿ:- 36/2021 ಕಲಂ 379 ಐಪಿಸಿ : ಇಂದು ದಿನಾಂಕ 14.03.2021 ರಂದು ಸಮಯ ಸಾಯಂಕಾಲ 06:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಕೆಎ-33-ಟಿಬಿ-1038 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಸಿ.ಪಿ.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 36/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ :- ಯುಡಿಆರ್ ನಂ 03/2021 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ 14.03.2021 ರಂದು 7.00 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಯಲ್ಲಮ್ಮ ಗಂಡ ಮಾನಪ್ಪ ಭೋವಿ ವಡ್ಡರ ವಯಾ|| 50 ಜಾ||ವಡ್ಡರ ಉ|| ಕೂಲಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ 02 ಜನ ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣುಮಕ್ಕಳಿದ್ದು, ಎರಡೂ ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಹಾಗೂ ಹಿರಿಯ ಮಗನಾದ ಪರಶುರಾಮ ಈತನು ದುಡಿಯಲೆಂದು ಬೇರೆ ಕಡೆ ಹೋಗಿರುತ್ತಾನೆ. ನನ್ನ ಗಂಡನು ಸುಮಾರು ವರ್ಷಗಳ ಹಿಂದೆ ತೀರಿಹೋಗಿರುತ್ತಾನೆ. ಮನೆಯಲ್ಲಿ ನಾನು ಹಾಗೂ ನನ್ನ ಕೊನೆಯ ಮಗ ಸಿದ್ದು ಇಬ್ಬರೇ ಇರುತ್ತಿದ್ದೆವು. ಕೊನೆಯ ಮಗನಾದ ಸಿದ್ದು ತಂದೆ ಮಾನಪ್ಪ ಭೋವಿ ವಡ್ಡರ ವಯಾ|| 19 ವರ್ಷ ಈತನು ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡು ಇದ್ದನು. ಇಂದು ದಿನಾಂಕ: 14/03/2021 ರಂದು ಬೆಳಿಗ್ಗೆ ನಾನು ಕೂಲಿ ಕೆಲಸಕ್ಕೆಂದು ಹೋಗುವಾಗ ಕಾಲೇಜು ರಜೆ ಇದ್ದ ಕಾರಣ ಮಗ ಸಿದ್ದು ಈತನು ಒಬ್ಬನೆ ಮನೆಯಲ್ಲಿ ಇದ್ದನು. ಹೀಗಿದ್ದು ಸಾಯಂಕಾಲ 6 ಗಂಟೆಗೆ ನಾನು ಕೂಲಿ ಕೆಲಸದಿಂದ ಮನೆಗೆ ಬಂದು ಮನೆಯ ಒಳಗಿನ ಕೋಣೆಯಲ್ಲಿ ಹೋಗಿ ನೋಡಲು ಮಗ ಸಿದ್ದು ಈತನು ಮನೆಯಲ್ಲಿ ಪತ್ರಾಸಿಗೆ ಹಾಕಿದ ಕಬ್ಬಿಣದ ಪೈಪಿಗೆ ನಾನು ಉಡುವ ಪತ್ತಲದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದನು. ನನ್ನ ಮಗನು ಯಾವುದೋ ಒಂದು ವಿಷಯ ಮನಸ್ಸಿಗೆ ಹಚ್ಚಿಕೊಂಡು ಅಂದಾಜು ಸಾಯಂಕಾಲ 5.00 ಗಂಟೆ ಸುಮಾರಿಗೆ ಮನೆಯಲ್ಲಿಯೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ನನ್ನ ಮಗನ ಸಾವಿನ ವಿಷಯದಲ್ಲಿ ನನ್ನದು ಯಾರ ಮೇಲೂ ಯಾವದೇ ರೀತಿಯ ಸಂಶಯ ವಗೈರೆ ಇರುವದಿಲ್ಲ ತಾವು ಬಂದು ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 03/2021 ಕಲಂ 174 ಸಿಆರ್ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 15-03-2021 10:55 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080