ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/02/2021

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 14/2021 279, 337, 338, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ : ಇಂದು ದಿನಾಂಕ: 15/02/2021 ರಂದು 7-45 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ 8-10 ಪಿಎಮ್ ಕ್ಕೆ ಆಸ್ಪತ್ರೆಗೆ ಬೇಟಿ ನೀಡಿ ಎಮ್.ಎಲ್.ಸಿ ಪಡೆದುಕೊಂಡು ಮೃತಳ ಮಗನಾದ ಮರೆಪ್ಪ ತಂದೆ ಅಮೋಗೆಪ್ಪ ಈತನ ಅಜರ್ಿಯನ್ನು ಪಡೆದುಕೊಂಡು 9-00 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 15/02/2021 ರಂದು ಮದ್ಯಾಹ್ನ 3-00 ಪಿ.ಎಮ್. ಕ್ಕೆ ನಾನು ಮನೆಯಲ್ಲಿ ಇದ್ದಾಗ ನಾಗನಗಿ ಗ್ರಾಮದಲ್ಲಿ ನಾಗಪ್ಪ ತಂದೆ ನಿಂಗಪ್ಪ ಗೋನಾಲ ಇವರ ಹೊಲಕ್ಕೆ ತೊಗರಿ ರಾಶಿ ಮಾಡಲು ಕೂಲಿ ಕೆಲಸಕ್ಕೆ ಬರಲು ನಮ್ಮ ಊರ ಹಣಮಂತ ತಂದೆ ಧರ್ಮಣ್ಣ ರೈಯಲ ಇತನು ಹೇಳಿದಾಗ ನಾನು ನಮ್ಮ ಮನೆಯಲ್ಲಿ ಇದ್ದಾಗ ನನ್ನ ತಾಯಿ ನಾಗಮ್ಮ ಗಂಡ ಅಮೋಗಪ್ಪ ಕಲ್ಲೂರ ಹಾಗೂ ನಮ್ಮ ಓಣಿಯ ಜಯಮ್ಮ ಗಂಡ ರವಿ ಹೊಸಮನಿ, ಯಲ್ಲಮ್ಮ ಗಂಡ ಆಶಪ್ಪ, ಅಯ್ಯಮ್ಮ ತಂದೆ ಭೀಮಣ್ಣ ಯಾದವ, ಭೀಮಣ್ಣ ತಂದೆ ಧರ್ಮಣ್ಣ, ದೇವಮ್ಮ ಗಂಡ ಭೀಮಣ್ಣ, ಹಣಮಂತಿ ಗಂಡ ಮಲ್ಲಣ್ಣ, ಮರೆಮ್ಮ ಗಂಡ ನಿಂಗಪ್ಪ, ಆಶಾಬಾಯಿ ಗಂಡ ಧರ್ಮಣ್ಣ, ಇವರೆಲ್ಲರೂ ಕೂಡಿ ತೊಗರಿ ರಾಶಿ ಮಾಡಲು ಕೂಲಿ ಕೆಲಸಕ್ಕೆ ಟ್ರ್ಯಾಕ್ಟರ ಇಂಜಿನ ನಂ: ಕೆಎ-33 ಟಿಎ-4991 ಟ್ರ್ಯಾಲಿ ನಂಬರ ಇರುವುದಿಲ್ಲಾ ಇದರಲ್ಲಿ ಕುಳಿತು ಹೋಗಲು ಅದರ ಚಾಲಕ ಹಣಮಂತ ತಂದೆ ಧರ್ಮಣ್ಣ ರೈಯಲ ಸಾ|| ಹೋತಪೇಟ ಇತನು ತನ್ನ ಟ್ರ್ಯಾಕ್ಟರ್ ತೆಗೆದುಕೊಂಡು ನಮ್ಮ ಊರಿನ ರಸ್ತೆ ಮೇಲೆ ನಿಲ್ಲಿಸಿದಾಗ ಮೇಲಿನ ಎಲ್ಲರೂ ಸದರಿ ಟ್ರ್ಯಾಕ್ಟರದಲ್ಲಿ ಕುಳಿತು ನಾಗನಟಗಿ ಗ್ರಾಮಕ್ಕೆ ಹೋದರು. ನಾನು ಮನೆಯಲ್ಲಿ ಇದ್ದೇನು. ನಂತರ ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿ ಇದ್ದಾಗ ಇಂದು ಸಾಯಂಕಾಲ 4-45 ಪಿಎಮ್ ಸುಮಾರಿಗೆ ನಾಗಪ್ಪ ತಂದೆ ನಿಂಗಪ್ಪ ಸಾ|| ನಾಗನಟಗಿ ಇತನು ನಮಗೆ ಪೋನ್ ಮಾಡಿ ನಮ್ಮ ಹೊಲಕ್ಕ ತೊಗರಿ ರಾಶಿ ಮಾಡಲು ಬರುತ್ತಿದ್ದ ಟ್ರ್ಯಾಕ್ಟರ ಅದರ ಚಾಲಕನಾದ ಹಣಮಂತನು ಸುಮಾರು 4-30 ಪಿಎಮ್ ಸುಮಾರಿಗೆ ಬಾಣತಿಹಾಳ-ನಾಗನಟಗಿ ರೋಡಿನ ಮಧ್ಯ ಮರೆಮ್ಮ ಗಡಿಯ ಹತ್ತಿರ ಟ್ರ್ಯಾಕ್ಟರ್ ಚಾಲಕನು ಅತಿವೇಗದಲ್ಲಿ ಹಾಗೂ ನಿಷ್ಕಾಳಜಿತನದಿಂದ ನಡೆಸಿ ಮರೆಮ್ಮ ಗುಡಿಯ ಹತ್ತಿರ ಎಡಗಡೆ ಬಾಜು ಪಲ್ಟಿ ಮಾಡಿ ಅಪಘಾತ ಮಾಡಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ ಎಲ್ಲರಿಗೂ ಗಾಯಗಳು ಆಗಿವೆ ಆಸ್ಪತ್ರೆಗೆ ಕರೆದುಕೊಂಡು ಬೇರೆ ಆಟೋದಲ್ಲಿ ಬರುತ್ತೇವೆ ಅಂತಾ ನಮಗೆ ವಿಷಯ ತಿಳಿಸಿದಾಗ ನಾನು ನನ್ನ ಹೆಂಡತಿ ನಮ್ಮ ಊರ ಭೀರಪ್ಪ ಶಾಬರಿ, ಧರ್ಮಣ್ಣ ತಂದೆ ಶರಣಪ್ಪ ಕಲ್ಲೂರ, ಶರಣಪ್ಪ ತಂದೆ ಧರ್ಮಣ್ಣ ಇವರೊಂದಿಗೆ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಾಯಿ ಹಾಗೂ ಕೂಲಿ ಕೆಲಸಕ್ಕೆ ಹೋದ ಹೆಣ್ಣು ಮಕ್ಕಳು ಗಾಯ ಹೊಂದಿ ಆಸ್ಪತ್ರೆಗೆ ಸೇರಿಕೆ ಆಗಿದ್ದರು. ನಮ್ಮ ತಾಯಿಗೆ ನೋಡಲಾಗಿ ತಲೆಯ ಹಿಂದೆ ಭಾರೀ ರಕ್ತಗಾಯ, ಬಲ ಕಪಾಳಕ್ಕೆ, ಮತ್ತು ಬಲಮೊಳಕೈಗೆ ರಕ್ತಗಾಯವಾಗಿದ್ದು ಇರುತ್ತದೆ. ಉಳಿದಂತೆ ಎಲ್ಲರಿಗೂ ರಕ್ತಗಾಯ ಮತ್ತು ಭಾರೀ ರಕ್ತಗಾಯಗಳು ಆಗಿದ್ದವು. ನಂತರ ನನ್ನ ತಾಯಿ ನಾಗಮ್ಮ ಇವಳಿಗೆ ಹೆಚ್ಚಿನ ಉಪಚಾರ ಕುರಿತು ವೈದ್ಯಾಧಿಕಾರಿಗಳು ಶಹಾಪೂರ ರವರ ಸಲಹೆ ಮೇರೆಗೆ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ ಜೇವಗರ್ಿ ಹತ್ತಿರ ಮಾರ್ಗ ಮಧ್ಯೆ ಸಮಯ 6-45 ಪಿಎಮ್ ಸುಮಾರಿಗೆ ನನ್ನ ತಾಯಿ ನಾಗಮ್ಮ ಇವಳು ಮೃತಪಟ್ಟಿದ್ದು, ಅಲ್ಲಿಂದ ನೇರವಾಗಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ಆದಕಾರಣ ಟ್ರ್ಯಾಕ್ಟರ ನಂ: ಕೆಎ-33 ಟಿಎ-4491 ಟ್ರ್ಯಾಲಿ ನಂಬರ ಇರುವುದಿಲ್ಲಾ ಇದರ ಚಾಲಕ ಹಣಮಂತ ತಂದೆ ಧರ್ಮಣ್ಣ ಸಾ|| ಹೋತಪೇಟ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 14/2021 ಕಲಂ, 279, 337, 338, 304(ಎ) ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 40/2021 ಕಲಂ: 381, 406 ಐಪಿಸಿ : ಇಂದು ದಿನಾಂಕ:15/02/2021 ರಂದು 11 ಎ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಗೋಪಾಲದಾಸ್ ತಂದೆ ಗೋವರ್ದನದಾಸ ಲಡ್ಡಾ ವ|| 58 ವರ್ಷ ಜಾ|| ಮಾರವಾಡಿ ಉ|| ವ್ಯಾಪಾರ ಸಾ|| ಮುತರ್ಿ ಕಟ್ಟಾ ಹತ್ತಿರ ಸುರಪುರ ತಾ|| ಸುರಪುರ ಜಿ|| ಯಾದಗಿರಿ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಮ್ಮದು ಸುರಪೂರ ನಗರದ ನರಸಿಂಗಪೇಟೆಯಲ್ಲಿ ಸಂಪದಾ ರೈಸ್ ಇಂಡಸ್ಟ್ರೀಜ್ ಇದ್ದು, ಸದರಿ ರೈಸ್ ಇಂಡಸ್ಟ್ರಿಯಲ್ಲಿ ಶಿವಮೊಹನ ಶುಕ್ಲಾ ತಂದೆ ರಾಘವಶರಣ ಶುಕ್ಲಾ ವ|| 33 ವರ್ಷ ಸಾ|| ಕರಸರಾ ತಾ|| ರಘುರಾಜ ನಗರ ಜಿ|| ಸತ್ನಾ ರಾಜ್ಯ|| ಮದ್ಯಪ್ರದೇಶ ಇವರು ಸುಮಾರು 6 ವರ್ಷಗಳಿಂದ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದು, ಆತನೇ ರೈಸ್ ಇಂಡಸ್ಟ್ರಿಯಲ್ಲಿ ದುಡ್ಡಿನ ವ್ಯವಹಾರ ನಿಬಾಯಿಸಿಕೊಂಡು ಇದ್ದನು. ದಿನಾಂಕಃ 30/11/2020 ರಂದು ನಮ್ಮ ರೈಸ್ ಇಂಡಿಸ್ಟ್ರಿ ಗುಮಾಸ್ತಾದ ಶಿವಮೋಹನ ಶುಕ್ಲಾ ಇವರು ನನಗೆ ಊರಿಗೆ ಹೋಗಿಬರುತ್ತೇನೆ ಅಂತ ಹೇಳಿ ಹೋಗಿದ್ದು, ಮರುದಿವಸ ದಿನಾಂಕಃ 01/12/2020 ರಂದು ಮುಂಜಾನೆ 10-00 ಗಂಟೆಗೆ ನಾನು ನಮ್ಮ ರೈಸ್ ಇಂಡಸ್ಟ್ರಿಗೆ ಹೋಗಿ ನೋಡಲಾಗಿ ಗಲ್ಲೆಯಲ್ಲಿದ್ದ 50,000/- ರೂ.ಗಳು ಇರಲಿಲ್ಲ. ಈ ಬಗ್ಗೆ ನನ್ನ ಮಗ ಅಕ್ಷಯ ಮತ್ತು ಶ್ರೀಕಾಂತ ತಂದೆ ಗೋವರ್ದನ್ ರತವಾ ಇವರಿಗೆ ವಿಚಾರಿಸಲಾಗಿ ನಿನ್ನೆ ದಿನಾಂಕ: 01/12/2020 ರಂದು ಶಿವಮೊಹನ ಶುಕ್ಲಾ ಇವರು ತಗೆದುಕೊಂಡು ಹೋಗಿರುವ ಬಗ್ಗೆ ತಿಳಿಸಿದ್ದು, ನಾನು ಆತನಿಗೆ ಫೋನ್ ಮಾಡಿ ವಿಚಾರಿಸಲಾಗಿ ಮನೆಯಲ್ಲಿ ಹಣದ ಅವಶ್ಯಕತೆ ಇದ್ದುದ್ದರಿಂದ ಹೇಳದೇ ತಗೆದುಕೊಂಡು ಬಂದಿದ್ದೇನೆ, ಮರಳಿ ಬಂದು ಕೊಡುವದಾಗಿ ತಿಳಿಸಿದ್ದನು. ಅಲ್ಲದೇ ನಮ್ಮ ರೈಸ್ ಇಂಡಸ್ಟ್ರಿಯಿಂದ ಎಮ್.ಪಾಷಾ ಕಿರಾಣಿ ಮಾಚರ್ೆಂಟ ಸುರಪೂರ ರವರಿಗೆ 46,000/- ರೂ.ಗಳು ಕಿಮ್ಮತ್ತಿನ ಅಕ್ಕಿ ತುಂಬಿದ ಚೀಲಗಳನ್ನು ಮಾರಾಟ ಮಾಡಿದ್ದು, ನಿನ್ನೆ ದಿನಾಂಕ: 13/02/2021 ರಂದು ಬಾಕಿ ಕೇಳಲು ಹೋದಾಗ ಅವರು ನಮ್ಮ ಗುಮಾಸ್ತನಾದ ಶಿವಮೊಹನ ಶುಕ್ಲಾ ಇವರಿಗೆ ದಿನಾಂಕ: 01/12/2020 ರಂದು 46,000/- ರೂ.ಗಳು ಕೊಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ನಾನು ವಿಚಾರಿಸಬೆಕೆಂದು ಫೋನ್ ಮಾಡಿದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲಾ ಆದ ಕಾಣರ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ನನ್ನ ರೈಸ್ ಇಂಡಸ್ಟರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಶಿವಮೊಹನ ಶುಕ್ಲಾ ಇವರು ದಿನಾಂಕಃ 30/11/2020 ರಂದು ಮುಂಜಾನೆ 11-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯ ಮದ್ಯದ ಅವಧಿಯಲ್ಲಿ ನನ್ನ ಇಂಡಸ್ಟ್ರಿ ಗಲ್ಲೆಯಲ್ಲಿದ್ದ 50,000/- ರೂ.ಗಳು ಕಳ್ಳತನ ಮಾಡಿಕೊಂಡಿದ್ದು ಮತ್ತು ಎಮ್.ಪಾಶಾ ಕಿರಾಣಿ ಅಂಗಡಿಯವರು ನಮಗೆ ಕೊಡಬೇಕಾಗಿದ್ದ 46,000/- ರೂ.ಗಳನ್ನು ವಸೂಲಿ ಮಾಡಿ, ನನಗೆ ಕೊಡದೇ ನಂಬಿಕೆದ್ರೋಹದಿಂದ ತಗೆದುಕೊಂಡು ಹೋಗಿರುವ ಕಾರಣ ಸದರಿಯವ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ.ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2021 ಕಲಂ: 381, 406 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 42/2021 ಕಲಂಃ 143,147,148,323,324,341, 354,504,506 ಸಂ.149 ಐಪಿಸಿ : ಇಂದು ದಿನಾಂಕ:15/02/2021 ರಂದು 2-15 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಅಯ್ಯಪ್ಪ ತಂದೆ ಶಿವರಾಯ ನಿಲವಂಜಿ ವಯಾ:60 ವರ್ಷ ಜಾತಿ:ಕುರುಬರ ಉ:ಒಕ್ಕಲುತನ ಸಾ:ಚಂದ್ಲಾಪೂರ ಈತನು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 15-02-2021 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಬೀಮವ್ವ ಇಬ್ಬರು ಮನೆಯಲ್ಲಿರುವಾಗ ನಮ್ಮ ಅಣತಮಕಿಯವರಾದ 1) ಹವಳಪ್ಪ ತಂದೆ ಮಲ್ಲಪ್ಪ ನಿಲವಂಜಿ 2) ನಿಂಗಪ್ಪ ತಂದೆ ಮಲ್ಲಪ್ಪ ನಿಲವಂಜಿ 3) ಕಾಂತಪ್ಪ ತಂದೆ ಮಲ್ಲಪ್ಪ ನಿಲವಂಜಿ 4) ಶಿವಪ್ಪ ತಂದೆ ಮಲ್ಲಪ್ಪ ನಿಲವಂಜಿ 5) ಮಲ್ಲಪ್ಪ ತಂದೆ ಶಿವರಾಯ ನಿಲವಂಜಿ 6) ರಾಮಣ್ಣ ತಂದೆ ಮಲ್ಲಪ್ಪ ನಿಲವಂಜಿ 7) ಮಲ್ಲಮ್ಮ ಗಂಡ ಮಲ್ಲಪ್ಪ ನಿಲವಂಜಿ 8) ರೇಣುಕಮ್ಮ ಗಂಡ ಹವಳಪ್ಪ ನಿಲವಂಜಿ 9) ಹಣಮಂತಿ ಗಂಡ ನಿಂಗಪ್ಪ ನಿಲವಂಜಿ 10) ಲಕ್ಷ್ಮಿ ಗಂಡ ಕಾಂತಪ್ಪ ನಿಲವಂಜಿ 11) ನಾಗರಾಜ ತಂದೆ ನಿಂಗಪ್ಪ ನಿಲವಂಜಿ 12) ಮರೆಪ್ಪ ತಂದೆ ದೇವಿಂದ್ರಪ್ಪ ವಂಟೂರ 13) ನಿಂಗಮ್ಮ ಗಂಡ ಮರೆಪ್ಪ ವಂಟೂರ 14) ದೇವಿಂದ್ರವ್ವ ಗಂಡ ದೇವಿಂದ್ರಪ್ಪ ವಂಟೂರ ಇವರೆಲ್ಲರೂ ಗುಂಪೂ ಕಟ್ಟಿ ಕೊಂಡು ನಮ್ಮ ಮನೆಗೆ ಬಂದವರೆ ಎಲೇ ಸುಳಿ ಮಗನೆ ಅಯ್ಯಣ್ಣ ನಿಮ್ಮ ಸಜ್ಜಿ ಹೊಲದಲ್ಲಿ ಬಿಟ್ಟ ನೀರು ನಮ್ಮ ಹೊಲದಲ್ಲಿ ಬಂದಿವೆ ನೀರು ನೀವು ಬೆಕಂತ ಬಿಟ್ಟಿರಿ ಸುಳೇ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ನನ್ನ ಹೆಂಡತಿ ಬೀಮವ್ವ ಇಬ್ಬರು ಹೊರಗಡೆ ಬಂದು ಯಾಕೇ ಬೈಯುತ್ತಿರಿ ನಾವು ನಿಮ್ಮ ಹೊಲಕ್ಕೆ ನೀರು ಬಿಟ್ಟಿರುವದಿಲ್ಲ ನಮಗೆ ಬೈಯ್ಯ ಬೇಡಿರಿ ಅಂದಿದ್ದಕ್ಕೆ ಅವರಲ್ಲಿಯ ಹವಳಪ್ಪ ಈತನು ಅಲ್ಲೆ ಬಿದ್ದ ಒಂದು ಬಡಿಗೆಯನ್ನು ತಗೆದುಕೊಂಡು ನನ್ನ ಮೂಗಿಗೆ ಹೊಡೆದು ತೆರಚಿದ ಗಾಯ ಮಾಡಿ ಬೆನ್ನಿಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡು ಹೋಗುವಾಗ ಪುನ: ನನ್ನನ್ನು ತಡೆದು ನಿಲ್ಲಿಸಿ ಹೊಡೆ ಬಡೆ ಮಾಡುತ್ತಿರುವಾಗ ನಾನು ಚಿರಾಡುವ ಶಬ್ದ ಕೇಳಿ ಜಗಳ ಬಿಡಿಸಲು ಬಂದ ನಮ್ಮ ಅಳಿಯ ಬಸವರಾಜ ತಂದೆ ನಿಂಗಪ್ಪ ದೊಡ್ಡಮನಿ ಈತನಿಗೆ ಹವಳಪ್ಪನು ಅವನ ಎಡಗಡೆ ಕೈ ರಟ್ಟೆಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಮಾಡಿದನು. ನಮ್ಮ ಅಣ್ಣನ ಮಗನಾದ ಮಾನಪ್ಪ ತಂದೆ ಹವಳಪ್ಪ ನಿಲವಂಜಿ ಈತನಿಗೆ ನಿಂಗಪ್ಪ ಮತ್ತು ಕಾಂತಪ್ಪ ಇಬ್ಬರು ಬಡಿಗೆಗಳಿಂದ ಅವನ ತಲೆಯ ಹಣೆಗೆ ಮತ್ತು ಎಡಗೈ ಹಸ್ತದ ಹತ್ತಿರ, ಬಲಗಡೆ ತೊಡೆಯ ಹತ್ತಿರ ಹೊಡೆದು ರಕ್ತಗಾಯ ಮಾಡಿದರು, ಶಿವಪ್ಪ ತಂದೆ ಮಲ್ಲಪ್ಪ ನಿಲವಂಜಿ ಮತ್ತು ಮಲ್ಲಪ್ಪ ನಿಲವಂಜಿ ಈ ಇಬ್ಬರು ಬಡಿಗೆಗಳಿಂದ ಹಾಗೂ ರಾಮಣ್ಣ ನಿಲವಂಜಿ ಈತನು ಕಲ್ಲಿನಿಂದ ನಮ್ಮ ಅಣ್ಣನ ಮಗನಾದ ಶಿವಪ್ಪ ತಂದೆ ಹವಳಪ್ಪ ನಿಲವಂಜಿ ಈತನ ಎಡಗಡೆ ಹಣೆಯ ಹತ್ತಿರ ಹಾಗೂ ತಲೆಗೆ ಹೊಡೆದು ರಕ್ತಗಾಯ ಮಾಡಿದರು. ನಾಗರಾಜ ಮತ್ತು ಮರೆಪ್ಪ ಇಬ್ಬರು ನಿಂಗಣ್ಣ ತಂದೆ ಸಿದ್ದಪ್ಪ ದೊಡ್ಡಮನಿ ಈತನ ತಲೆಗೆ ಹಾಗೂ ಬಲಗಡೆ ಕೈಗೆ ಕಲ್ಲುಗಳಿಂದ ಹೊಡೆದು ರಕ್ತಗಾಯ ಮಾಡಿದರು, ನಿಂಗಪ್ಪ ಮತ್ತು ಕಾಂತಪ್ಪ ಇಬ್ಬರು ನನ್ನ ಅಳಿಯನಾದ ಶಿವಣ್ಣ ತಂದೆ ಸಿದ್ದಪ್ಪ ದೊಡ್ಡಮನಿ ಈತನಿಗೆ ಬೆನ್ನಿಗೆ ಹೊಟ್ಟೆಗೆ ಕಲ್ಲಿನಿಂದ ಹೊಡೆದು ತೆರಚಿದ ಹಾಗೂ ಗುಪ್ತಗಾಯ ಪಡಿಸಿದವರೆ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಬೀಮವ್ವಳ ಕೈ ಹಿಡಿದು ಜಗ್ಗಾಡಿ ತಲೆಯ ಮೇಲಿನ ಸಿರೆ ಸೇರಗು ಹಿಡಿದು ಎಳೆದಾಡಿ ಅವಮಾನ ಮಾಡಿದ್ದು, ಮಲ್ಲಮ್ಮ ಗಂಡ ಮಲ್ಲಪ್ಪ ನಿಲವಂಜಿ, ರೇಣುಕಮ್ಮ ಗಂಡ ಹವಳಪ್ಪ ನಿಲವಂಜಿ, ಹಣಮಂತಿ ಗಂಡ ನಿಂಗಪ್ಪ ನಿಲವಂಜಿ, ಲಕ್ಷ್ಮಿ ಗಂಡ ಕಾಂತಪ್ಪ ನಿಲವಂಜಿ, ನಿಂಗಮ್ಮ ಗಂಡ ಮರೆಪ್ಪ ವಂಟೂರ, ದೇವಿಂದ್ರವ್ವ ಗಂಡ ದೇವಿಂದ್ರಪ್ಪ ಇವರು ಹೆಂಡತಿ ಬೀಮವ್ವಳ ತಲೆಯ ಮೇಲಿನ ಕುದಲು ಹಿಡಿದು ಕೈಯಿಂದ ಹೊಡೆದು ಅವರೆಲ್ಲರೂ ಇನ್ನೊಮ್ಮೆ ಮಕ್ಕಳೆ ನಮ್ಮ ಹೊಲದಲ್ಲಿ ನೀರು ಬಿಟ್ಟರೆ ನೀಮಗೆ ಜೀವ ಸಹೀತ ಹೊಡೆದು ಬಿಡುತ್ತೆವೆ ಅಂತಾ ಬೈದು ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಸದರಿ ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ 14 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 43/2021 ಕಲಂಃ 143,147,148,323,324,341,354,504,506 ಸಂ.149 ಐಪಿಸಿ : ಇಂದು ದಿನಾಂಕ: 15/02/2021 ರಂದು 3-30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಕಾಂತಪ್ಪತಂದೆ ಮಲ್ಲಪ್ಪ ನಿಲವಂಜಿ ವಯಾ:24 ವರ್ಷಜಾತಿ:ಕುರುಬರ ಉ:ಒಕ್ಕಲುತನ ಸಾ:ಚಂದ್ಲಾಪೂರಇವರುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿದಅಜರ್ಿತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆಇಂದು ದಿನಾಂಕ:15-02-2021 ರಂದು ಬೆಳಿಗ್ಗೆ 10-15 ಗಂಟೆ ಸುಮಾರಿಗೆ ನಾನು ನನ್ನತಂದೆಯಾದ ಮಲ್ಲಪ್ಪತಂದೆ ಶಿವರಾಯ ನಿಲವಂಜಿ ಹಾಗೂ ಅಣ್ಣಂದಿರರಾದ ನಿಂಗಪ್ಪತಂದೆ ಮಲ್ಲಪ್ಪ ನಿಲವಂಜಿ, ಹವಳಪ್ಪ ತಂದೆ ಮಲ್ಲಪ್ಪ ನಿಲವಂಜಿ, ಶಿವಪ್ಪ ತಂದೆ ಮಲ್ಲಪ್ಪ ನಿಲವಂಜಿಎಲ್ಲರೂ ನಮ್ಮ ಹೊಲಕ್ಕೆ ಹೋಗುವ ಕುರಿತು ನಮ್ಮಗ್ರಾಮದ ಬೀರಲಿಂಗೇಶ್ವರಗುಡಿಯ ಮುಂದಿನ ರಸ್ತೆಯ ಮುಖಾಂತರ ನಡೆದುಕೊಂಡು ಹೋಗುತ್ತಿರುವಾಗ ನಮ್ಮಅಣ್ಣತಮಕಿಯವರಾದ 1) ಅಯ್ಯಪ್ಪತಂದೆ ಶಿವರಾಯ ನಿಲವಂಜಿ 2) ಮಾಳಪ್ಪ ತಂದೆಅಯ್ಯಪ್ಪ ನಿಲವಂಜಿ 3) ಹಣಮಂತತಂದೆಅಯ್ಯಪ್ಪ ನಿಲವಂಜಿ 4) ಹವಳಪ್ಪ ತಂದೆ ಶಿವರಾಯ ನಿಲವಂಜಿ 5) ಬಸವರಾಜತಂದೆ ನಿಂಗಪ್ಪದೊಡ್ಡಮನಿ 6) ಶಿವಪ್ಪ ತಂದೆ ಹವಳಪ್ಪ ನಿಲವಂಜಿ 7) ಕುಶಪ್ಪತಂದೆ ಹವಳಪ್ಪ ನಿಲವಂಜಿ 8) ಮಾನಪ್ಪತಂದೆ ಹವಳಪ್ಪ ನಿಲವಂಜಿ 9) ನಿಂಗಪ್ಪತಂದೆ ಸಿದ್ದಪ್ಪ ದೊಡ್ಡಮನಿ 10) ಬೀಮವ್ವಗಂಡಅಯ್ಯಪ್ಪ ನಿಲವಂಜಿ 11) ಅಯ್ಯಮ್ಮಗಂಡ ಹಣಮಂತ ನಿಲವಂಜಿ 12) ಬಸಮ್ಮಗಂಡಆದಪ್ಪದೊಡ್ಡಮನಿ 13) ಮಗ್ಗೆಮ್ಮಗಂಡ ಶಿವಪ್ಪ ನಿಲವಂಜಿ 14) ಬಸಮ್ಮಗಂಡಆದಪ್ಪದೊಡ್ಡಮನಿ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದವರೆ ಸುಮ್ಮನೆ ಹೋಗುತ್ತಿದ್ದ ನಮಗೆ ಅಡ್ಡಗಟ್ಟಿತಡೆದು ನಿಲ್ಲಿಸಿದವರೆ ಎಲೇ ಸುಳೆ ಮಕ್ಕಳೆ ನೀವು ಬಹಳ ಜನಇದ್ದಿರಿಅಂತಾಎಲ್ಲಾ ಕೆನಾಲ ನೀರೆಲ್ಲ ನಿವೇ ಬಿಟಗೋತಿರಿಇವತ್ತುಒಂದು ಕೈ ನೊಡೆ ಬಿಡುತ್ತೆವೆಅಂತಾ ಏಕಾ ಏಕಿ ನಮ್ಮೊಂದಿಗೆ ಜಗಳ ತಗೆದವರೆಅವರಲ್ಲಿಯಅಯ್ಯಪ್ಪಈತನುತನ್ನಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದ ನಮ್ಮಅಣ್ಣನಾದ ನಿಂಗಣ್ಣತಂದೆ ಮಲ್ಲಪ್ಪ ನಿಲವಂಜಿಈತನತಲೆಗೆ ಬಲಗಾಲಿನ ತೊಡೆಗೆ, ಬಲಗಡೆ ಮುಂಗೈಗೆ ಹೊಡೆದುರಕ್ತಗಾಯ ಮಾಡಿದನು. ಮಾಳಪ್ಪ ಮತು ಹಣಮಂತಇಬ್ಬರುಅಲ್ಲೆ ಬಿದ್ದ ಬಡಿಗೆಗಳಿಂದ ಅಣ್ಣಂದಿರರಾದ ಶಿವಪ್ಪ ತಂದೆ ಮಲ್ಲಪ್ಪ ನಿಲವಂಜಿ ಹಾಗೂ ಹವಳಪ್ಪ ತಂದೆ ಮಲ್ಲಪ್ಪ ನಿಲವಂಜಿಇಬ್ಬರಿಗೂತಲೆಗೆ ಕೈ ಕಾಲುಗಳಿಗೆ ಹೊಡೆದುರಕ್ತಗಾಯ ಮಾಡಿದರು. ಹವಳಪ್ಪ ತಂದೆ ಶಿವರಾಯ ನಿಲವಂಜಿ ಮತ್ತು ಬಸವರಾಜದೊಡ್ಡಮನಿ ಹಾಗೂ ಶಿವಪ್ಪ ನಿಲವಂಜಿಇವರು ನನಗೆ ಹಾಗೂ ನನ್ನತಂದೆಯಾದ ಮಲ್ಲಪ್ಪಇಬ್ಬರಿಗೂತಕ್ಕೆಯಲ್ಲಿ ಹಿಡಿದುಕೊಂಡುಕೈಯಿಂದ ಮುಸ್ಟಿ ಮಾಡಿ ಬೆನ್ನಿಗೆಗುಮ್ಮಿಅಲ್ಲೆ ಬಿದ್ದ ಕಲ್ಲುಗಳಿಂದ ನನ್ನ ಸೊಂಟಕ್ಕೆ ಹಾಗೂ ನನ್ನತಂದೆ ಮಲ್ಲಪ್ಪನಿಗೆಎಡಗಡೆ ಬುಜ, ಮೊಳಕಾಲಿಗೆ, ಎಡಕಪಾಳದ ಹತ್ತಿರ ಹೊಡೆದುತೆರಚಿದಗಾಯ ಪಡಿಸಿದರು. ನಮ್ಮೆಲ್ಲರಿಗೂ ಹೊಡೆ ಬಡೆ ಮಾಡುತ್ತಿರುವಾಗ ಸುದ್ದಿ ತಿಳಿದು ಜಗಳ ಬಿಡಿಸಲು ಬಂದ ನನ್ನತಮ್ಮರಾಮಣ್ಣತಂದೆ ಮಲ್ಲಪ್ಪ ನಿಲವಂಜಿಈತನಿಗೆ ಶಿವಪ್ಪ ತಂದೆ ಹವಳಪ್ಪ ನಿಲವಂಜಿ, ಕುಶಪ್ಪ ನಿಲವಂಜಿ, ಮಾನಪ್ಪ ನಿಲವಂಜಿ, ನಿಂಗಪ್ಪದೊಡ್ಡಮನಿ ಇವರೆಲ್ಲರೂಕೈಯಿಂದ ಹೊಡೆದು ಕಾಲಿನಿಂದಒದ್ದರು. ತಾಯಿಯಾದ ಮಲ್ಲಮ್ಮ ಇವಳಿಗೆ ಅಯ್ಯಪ್ಪ ನಿಲವಂಜಿ ಮತ್ತು ಬಸವರಾಜದೊಡ್ಡಮನಿ ಇಬ್ಬರು ಅವಳ ಕೈ ಹಿಡಿದುಜಗ್ಗಾಡಿದವರೆ ಸಿರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿ ಕಾಲಿನಿಂದಒದ್ದರು. ಬೀಮವ್ವ ಗಂ ಅಯ್ಯಪ್ಪ ನಿಲವಂಜಿ, ಅಯ್ಯಮ್ಮ ನಿಲವಂಜಿ, ಬಸಮ್ಮದೊಡ್ಡಮನಿ ಇವರೆಲ್ಲರೂಕೈಯಿಂದ ಹೊಡೆದು ಕಾಲಿನಿಂದಒದ್ದುಎಲ್ಲರೂಕೂಡಿ ಸುಳೆ ಮಕ್ಕಳೆ ನಮ್ಮತಂಟೆಗೆ ಬಂದರೆ ನಿಮಗೆ ಜೀವ ಸಹೀತ ಹೊಡೆಯದೆ ಬಿಡುವದಿಲ್ಲ ಅಂತಾ ನಮ್ಮೆಲ್ಲರಿಗೂ ಹೊಡೆ ಬಡೆ ಮಾಡುತ್ತಿರುವಾಗ ನಮ್ಮ ಅಳಿಯನಾದ ನಿಂಗಪ್ಪತಂದೆಚಂದ್ರಾಮ ವಾರಿ, ಅಣ್ಣತಮಕಿಯಾದ ಮರಲಿಂಗತಂದೆದೇವಿಂದ್ರಪ್ಪಒಂಟೂರಇವರು ಬಂದು ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ, ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ 14 ಜನರ ಮೇಲೆ ಕಾನುನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 41/2021 ಕಲಂ. ಮನುಷ್ಯ ಕಾಣಿಯಾದ ಬಗ್ಗೆ : ಇಂದು ದಿನಾಂಕ:15/02/2021 ರಂದು 12:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿಬಾಬನಬಿ ಗಂಡ ಉಸ್ಮಾನಸಾಬ ಶೇಖ್ ವ|| 55 ವರ್ಷ ಜಾ|| ಮುಸ್ಲಿಂ ಉ|| ಮನೆಗೆಲಸ ಸಾ|| ಶೆಟ್ಟಿ ಓಣಿ ಸುರಪುರ ಜಿ|| ಯಾದಗಿರಿಇದ್ದು ಫಿಯರ್ಾದಿ ಸಾರಾಂಸವೆನೆಂದರೆ, ಹಿಗಿದ್ದು ದಿನಾಂಕ:06/02/2021 ರಂದು ಮುಂಜಾನೆ ಅಂದಾಜು 8 ಗಂಟೆಗೆ ನನ್ನ ಗಂಡ ಉಸ್ಮಾನಸಾಬ ಇತನು ಗಾಂದಿಚೌಕ ಕಡೆಗೆ ಹೊಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊದರು. ನಂತರ ಮದ್ಯಹ್ನ 3 ಗಂಟೆ ಆದರೂ ನನ್ನ ಗಂಡ ಮನೆಗೆ ಬರೆದೆ ಇದ್ದ ಕಾರಣ ನಾನು ಮತ್ತು ನನ್ನ ಮಗಳು ಮುಬಿನಾ ಆಶಾ ಇಬ್ಬರು ಕೂಡಿ ಗಾಂದಿಚೌಕ, ದಬರ್ಾರ ರೋಡ, ನಮ್ಮ ಮನೆಯ ಸುತ್ತಮುತ್ತಾ ಹುಡುಕಾಡಿದರು ನನ್ನಗಂಡ ಮನೆಗೆ ಬರೆದಿದ್ದುದರಿಂದ ನಾನು ಗಾಭರಿಯಾಗಿ ನನ್ನ ದೊಡ್ಡ ಮಗಳಾದ ಗೌಸಿಯಾಬೆಗಂ ಇವಳಿಗೆ ಪೊನ ಮಾಡಿ ವಿಷಯ ತಿಳಿಸಿದಾಗ ನನ್ನ ಮಗಳು ಮತ್ತು ಅಳಿಯನಾದ ಖಾಸಿಂ ತಂದೆ ಅಬ್ದುಲ್ಸಾಬ ನಾಯ್ಕೋಡಿ ಇಬ್ಬರು ಮರುದಿನ ನಮ್ಮ ಊರಿಗೆ ಬಂದು ಅವರು ಕೂಡಾ ನಮ್ಮ ಜೊತೆ ನಮ್ಮ ಸಂಬಂದಿಗಳ ಮನೆಗೆ ಪೊನ್ ಮತ್ತು ಸುತ್ತ ಮುತ್ತಲಿನ ಊರುಗಳಾದ ವಡಗೇರಾ, ಹೈಯ್ಯಾಳ, ಬೆಂಡೆಗುಂಬಳಿ ಇನ್ನೂ ಮುಂತಾದ ಊರುಗಳಲ್ಲಿ ಹೂಡುಕಾಡಿದರು ನನ್ನ ಗಂಡ ಸಿಕ್ಕಿರುವದಿಲ್ಲ. ಕಾರಣ ನಾನು ಮನೆಯಲ್ಲಿ ವಿಚಾರ ಮಾಡಿ ಹುಡಕಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ. 41/2021 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 34/2021.ಕಲಂ 416, 420, 423, 461, 463 ಐ.ಪಿ.ಸಿ. : ಇಂದು ದಿನಾಂಕ 15/02/2021 ರಂದು 8.00 ಪಿಎಂ ಕ್ಕೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಶ್ರೀ ರಾಮಣ್ಣ ಪಿ.ಸಿ 424 ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಪಿಯರ್ಾದಿ ಶ್ರೀಮತಿ ಸೀತಾ ಗಂಡ ಮಧುಸೂದನ ಆಚಾರ್ ತಂದೆ ನಾರಾಯಣರಾವ್ ವ|| 47ವರ್ಷ ಉ|| ಸಕರ್ಾರಿ ನೌಕರರು ಸಾ|| ವಡಗೇರಾ ಹಾ|| ವ|| ಟಿ.ನಿರಜಕುಮಾರ, ಬಾಲಾಜಿ ನಿಲಯ ಸತ್ಯ ಸಾಯಿ ಕಾಲೋನಿ 2ನೇ ಕ್ರಾಸ್ ಪಟೇಲ್ ನಗರ ಎಕ್ಸಟೆನ್ಷನ್ ಬಳ್ಳಾರಿ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಪೂರ ರವರಲ್ಲಿ ಇಂಗ್ಲೀಷದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 140/2020 ನೇದ್ದನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ವಡಗೇರಾ ತಾಲೂಕಿನ ವಡಗೇರಾ ಗ್ರಾಮದ ನಾರಾಯಣರಾವ ತಂದೆ ಗುರುರಾವ್ ರವರಿಗೆ ನಾವು ಇಬ್ಬರು ಪುತ್ರಿಯರಿದ್ದು ನಾನು ಸೀತಾ ಹಾಗೂ ನಮ್ಮ ಅಕ್ಕಳಾದ ವೆಂಕಮ್ಮ ಇಬ್ಬರು ಇರುತ್ತೇವೆ. ನಮ್ಮ ತಂದೆ ತಾಯಿಯರಿಗೆ ಗಂಡು ಮಕ್ಕಳಿರುವುದಿಲ್ಲ, ನಾವು ಇಬ್ಬರೇ ಮಕ್ಕಳಿರುತ್ತೇವೆ. ನಮ್ಮ ತಂದೆಯವರಾದ ನಾರಾಯಣರಾವ ರವರ ಸ್ವಂತ ಆಸ್ತಿಯು ವಡಗೇರಾ ಸೀಮಾಂತರದ ಸವರ್ೆ ನಂ 674 ರಲ್ಲಿ ಒಟ್ಟು 25 ಎಕರೆ 25 ಗುಂಟೆ ಜಮೀನು ನಮ್ಮ ತಂದೆಯವರ ಹೆಸರಿನಲ್ಲಿರುತ್ತದೆ. ನಮ್ಮ ತಂದೆಯವರು ಸುಮಾರು 24 ವರ್ಷಗಳ ಹಿಂದೆ ಅಂದರೆ ದಿನಾಂಕ 05/06/1996 ರಂದು ಭಾಲ್ಕಿ ತಾಲೂಕಿನಲ್ಲಿ ಸಕರ್ಾರಿ ನೌಕರಿ ಮಾಡುತ್ತಿರುವಾಗ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ನಮ್ಮ ಹೆಸರಿಗೆ ವಗರ್ಾವಣೆ ಮಾಡಿಕೊಳ್ಳಬೇಕಾಗಿದ್ದು ನಾವು ನಮ್ಮ ಕರ್ತವ್ಯದಲ್ಲಿ ಬಿಡುವು ಸಿಗದ ಕಾರಣ ನಂತರ ಮಾಡಿಕೊಂಡರಾಯಿತು ಅಂತಾ ಹಾಗೆಯೇ ಬಿಟ್ಟಿದ್ದು ಇರುತ್ತದೆ. ಹೀಗಿದ್ದು ನಮ್ಮ ದೂರದ ಸಂಬಂಧಿಯಾದ ಶ್ರೀನಿವಾಸರಾವ್ ತಂದೆ ರಾಘವೇಂದ್ರರಾವ್ ಕುಲಕಣರ್ಿ ಸಾ|| ವಡಗೇರಾ ಇವರು ನಮ್ಮ ತಂದೆಯವರು ದಿನಾಂಕ 24/06/2008 ರಂದು ಮೃತಪಟ್ಟಿರುತ್ತಾರೆ ಅಂತಾ ಸುಳ್ಳು ಮರಣ ಪ್ರಮಾಣಪತ್ರ ತಯಾರಿಸಿ ನಾರಾಯಣರಾವ ರವರ ಮಗನು ನಾನು ಶ್ರೀನಿವಾಸರಾವ ಇದ್ದು ನಾರಾಯಣರಾವ ರವರ ಆಸ್ತಿಯನ್ನು ನಮ್ಮ ತಂದೆಯ ತರುವಾಯ ನನಗೆ ವಗರ್ಾವಣೆ ಮಾಡಬೇಕಾಗಿದ್ದು ನನಗೂ ವಯಸ್ಸಾಗಿದ್ದ ಕಾರಣ ನಮ್ಮ ತಂದೆಯವರಾದ ನಾರಾಯಣರಾವ ರವರ ಆಸ್ತಿಯನ್ನು ನನ್ನ ಬದಲಾಗಿ ನಮ್ಮ ಮಗನಾದ ಹೃಷಿಕೇಶ ತಂದೆ ಶ್ರೀನಿವಾಸರಾವ ಕುಲಕಣರ್ಿ ಇವರ ಹೆಸರಿಗೆ ವಗರ್ಾವಣೆ ಮಾಡಿಕೊಡಬೇಕೆಂದು ತಹಸೀಲ್ದಾರರ ಕಾಯರ್ಾಲಯ ವಡಗೇರಾದಲ್ಲಿ ಅಜರ್ಿ ಸಲ್ಲಿಸಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ನಮ್ಮ ತಂದೆಯವರಾದ ನಾರಾಯಣರಾವ ರವರಿಗೆ ನೇರ ಸಂಬಂಧ ಇಲ್ಲದವರು ಅವರ ಆಸ್ತಿಯನ್ನು ಶ್ರೀನಿವಾಸ ರವರು ತಮ್ಮ ಮಗನಾದ ಹೃಷಿಕೇಶ ರವರ ಹೆಸರಿಗೆ ವಗರ್ಾವಣೆ ಮಾಡಿಸಿ ದಿನಾಂಕ 17/08/2020 ರಂದು ಉಪನೋಂದಣಾಧಿಕಾರಿಗಳ ಕಾಯರ್ಾಲಯ ಶಹಾಪೂರದಲ್ಲಿ ನೋಂದಣಿ ಮಾಡಿಸಿಕೊಂಡು ಮೂಲ ಆಸ್ತಿಯ ಮಾಲೀಕರಾದ ನಾರಾಯಣರಾವ ತಂದೆ ಗುರುರಾವ್ ರವರ ಕೇವಲ ಇಬ್ಬರೇ ಪುತ್ರಿಯರಾದ ನನಗಾಗಲೀ ಅಥವಾ ನಮ್ಮ ಅಕ್ಕಳಾದ ವೆಂಕಮ್ಮಳಿಗಾಗಲೀ ಬರಬೇಕಾಗಿದ್ದು ಸಂಬಂಧವಿಲ್ಲದವರು ತಮ್ಮ ಹೆಸರಿಗೆ ವಗರ್ಾಯಿಸಿ ನೋಂದಣಿ ಮಾಡಿಸಿಕೊಂಡು ನಮಗೆ ಮೋಸ ಮಾಡಿದ್ದು, ಸದರಿ 1) ಶ್ರೀನಿವಾಸ ತಂದೆ ರಾಘವೇಂದ್ರರಾವ ಕುಲಕಣರ್ಿ ಸಾ|| ವಡಗೇರಾ ಮತ್ತು 2) ಹೃಷಿಕೇಶ ತಂದೆ ಶ್ರೀನಿವಾಸರಾವ ಕುಲಕಣರ್ಿ ಸಾ|| ವಡಗೇರಾ ಇವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 34/2021 ಕಲಂ 416, 420, 423, 463, 461 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 33/2021 ಕಲಂ 78[3] ಕೆ.ಪಿ ಆಕ್ಟ :ಇಂದು ದಿನಾಂಕ 15/02/2021 ರಂದು 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪುರ ಪೊಲಿಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ಇಂದು ದಿನಾಂಕ: 15/02/2021 ರಮದು ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 33/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 580=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ :- 08/2021 279 337 338 ಐಪಿಸಿ : ದಿನಾಂಕ:15/02/2021 ರಂದು 10.30 ಗಂಟೆಯ ಸುಮಾರಿಗೆ ಶ್ರೀ. ಪರಮಣ್ಣ ತಂದೆ ಬಸಪ್ಪ ಗಿಂಡಿ ವಯಾ-38 ವರ್ಷ, ಜಾ:ಕುರುಬರ ಉ:ಒಕ್ಕಲುತನ ಸಾ:ವಜ್ಜಲ ತಾ:ಹುಣಸಗಿ ಯಾದಗಿರ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದೇನೆಂದರೇ, ಫಿರ್ಯಾದಿಯ ತಮ್ಮನ ಮಗನಾದ ಸಿದ್ರಾಮಪ್ಪ ಈತನು ದಿನಾಂಕ:08/02/2021 ರಂದು ವಜ್ಜಲ ಗ್ರಾಮದ ಸಿದ್ರಾಮಪ್ಪ ಗಿಂಡಿ ಇವರ ಗೋಡಾವನ್ ಹತ್ತಿರ ಆಟ ಆ ಡುತ್ತಿರುವಾಗ ಟ್ರ್ಯಾಕ್ಟರ್ ಇಂಜಿನ್ ನಂ: ಕೆಎ-33 ಟಿಬಿ-2812 ನೆದ್ದರ ಚಾಲಕನಾದ ಕರೆಪ್ಪ ತಂದೆ ಹಣಮಂತ್ರಾಯ ಮೇಟಿ ಸಾ:ವಜ್ಜಲ ಈತನು ಟ್ರ್ಯಾಕ್ಟರ ಇಂಜಿನನ್ನು ಅತೀ ವೇಗ ಹಾಗೂ ನಿಷ್ಕಳಜಿತನದಿಂದ ಚಲಾಯಿಸಿಕೊಂಡು ಬಂದು ಸಿದ್ರಾಮಪ್ಪನಿಗೆ ಡಿಕ್ಕಿಪಡಿಸಿದ್ದರಿಂದ ಸಿದ್ರಾಮಪ್ಪನು ಕೆಳಗಡೆ ಬಿದ್ದಾಗ ಟ್ರ್ಯಾಕ್ಟರ ಇಂಜಿನಿನ ಮುಂದಿನ ಗಾಲಿ ಸಿದ್ರಾಮಪ್ಪನ ಎಡಗೈ ಮೇಲೆ ಹಾಯ್ದು ಹೋಗಿದ್ದರಿಂದ ಸಿದ್ರಾಮಪ್ಪನ ಎಡಗೈಗೆ ಭಾರಿ ರಕ್ತಗಾಯವಾಗಿದ್ದು, ಸದರಿ ಸಿದ್ರಾಮಪ್ಪನಿಗೆ ವಿಜಯಪೂರ ದನ್ವಂತರಿ ಆಸ್ಪತ್ರೆಗೆ ಒಯ್ದು ಪ್ರಥಮೋಪಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕಾಗಿ ಅಂದೆ ಬೆಳಗಾಂವ ಕೆ.ಎಲ್.ಇ.ಆಸ್ಪತ್ರೆಗೆ ಒಯ್ದು ಸೆರಿಕೆ ಮಾಡಿ ಉಪಚಾರ ಮಾಡಿಸಿ ಇಂದು ಠಾಣೆಗೆ ಬಂದು ತಡವಾಗಿ ದುರು ಕೊಡುತ್ತಿದ್ದೇನೆ ಅಂತಾ ಕೊಟ್ಟ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ: 279, 337,338 ಐ.ಪಿ.ಸಿ : ಇಂದು ದಿನಾಂಕ 15.02.2021 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಠಾಣೆಯ ತಿರುಪತಿ ಹೆಚ್ಸಿ-140 ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಬಸವರಾಜ ತಂದೆ ಸುಭಾಶ್ಚಂದ್ರ ಗುಡಿಮನಿ ಸಾ|| ಏವೂರ ಇವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 06.45 ಪಿ ಎಮ್ ಕ್ಕೆ ತಂದು ಹಾಜರಪಡಿಸಿದ್ದು ಸದರ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ 14.02.2021 ರಂದು ಮುಂಜಾನೆ ತಾನು ಹಾಗು ತಮ್ಮ ಸಂಬಂದಿ ಭಿಮರಾಯ ಗುಡಿಮನಿ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ನಂಬರ ಕೆಎ- 33 ವಾಯ್- 0862 ನೇದ್ದರಲ್ಲಿ ಯಾಲಘಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಯಾಳಗಿಯಿಂದ ನಾಗರಾಳ ಗ್ರಾಮಕ್ಕೆ ಹೀಗುವ ರೋಡಿನ ಮೂಲಕ ಹೋಗುತ್ತಾ ಡಿ-05 ಕೆನಾಲ ಪಕ್ಕದ ರೋಡಿನಲ್ಲಿ ಹೋಗುತ್ತಿದ್ದಾಗ ಅಂದಾಜು 2 ಗಂಟೆಯ ಸುಮಾರಿಗೆ ನಮ್ಮ ಮೋಟರ ಸೈಕಲ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮಲೇ ಒಂದು ಎಮ್ಮೆ ಅಡ್ಡ ಬಂದಿದ್ದು ಆಗ ನಮ್ಮ ಮೋಟರ ಸೈಕಲ ನಿಯಂತ್ರಣ ತಪ್ಪಿ ನಾವಿಬ್ಬರೂ ಮೋಟರ ಸೈಕಲ ಸಮೇತ ರೋಡಿನ ತಗ್ಗಿನಲ್ಲಿ ಬಿದ್ದಿದ್ದು ಕಾರಣ ನನಗೆ ಎಡಗಣ್ಣಿನ ಮೇಲೆ, ಎರಡು ತುಟಿಗಳಿಗೆ, ಹಾಗು ಎಡಗಣ್ಣಿನ ಕೆಳಗೆ ತರಚಿದ ರಕ್ತಗಾಯಗಳಾಗಿ ಬಲಗೈ ಮುಂಗೈ ಹತ್ತಿರ ಕೈಮುರಿದಂತಾಗಿರುತ್ತದೆ. ಹಾಗು ನಮ್ಮ ಮೋಟರ ಸೈಕಲ ಚಾಲಕ ಭಿಮರಾಯ ಗುಡಿಮನಿ ಈತನಿಗೆ ಎರಡು ತುಟಿಗಳಿಗೆ, ಮುಖದ ತುಂಬಾ ತರಚಿದ ಗಾಯಗಳಾಗಿ ಟೊಂಕಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನಾವು ಅಂಬ್ಯೂಲೆನ್ಸದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುಗರ್ಿಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 21/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಪೊಲೀಸ್ ಠಾಣೆ ಗುನ್ನೆ ನಂ :- 13/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 15/02/2021 ರಂದು 3-20 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ (ಕಾಸು) ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 15/02/2021 ರಂದು ವನದುಗರ್ಾ ಗ್ರಾಮದ ಚಂದ್ರಾಮಪ್ಪ ಕುಂಬಾರ ಇವರ ಹೊಟೇಲ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ನಾಗಪ್ಪ ತಂದೆ ಹುಲಗಪ್ಪ ವಡ್ಡರ ವಯ|| 45 ವರ್ಷ ಜಾ|| ವಡ್ಡರ ಉ|| ಕೂಲಿಕೆಲಸ ಸಾ|| ವನದುಗರ್ಾ ತಾ|| ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 1-50 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1950/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿ ವರದಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 16-02-2021 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080