ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/03/2021

ಯಾದಗಿರ ನಗರ ಪೊಲೀಸ್ ಠಾಣೆ:- 36/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ದಿನಾಂಕ 01-03-2021 ರಂದು ನಾನು ಮತ್ತು ನನ್ನ ಮಗಳು ಮತ್ತು ನನ್ನ ಅಳಿಯನಾದ ಹಣಮಂತ ಮುನಗಲ ಇವರನ್ನು ಹೈದ್ರಾಬಾನ ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಅಂತಾ ಎಲ್ಲರು ತಮ್ಮ ತಮ್ಮ ಸಾಮಾನುಗಳನ್ನು ಎರಡು ಬ್ಯಾಗದಲ್ಲಿ ತುಂಬಿ ನನ್ನ ಕಡೆಯಿದ್ದ 2 ತೋಲೆಯ ಬಂಗಾರದ ನಕ್ಲೇಸ್, 5 ಮಾಸಿ ಬಂಗಾರದ ಜುಮಕ್ಕೆ ಮತ್ತು 90,000/- ಹಣವನ್ನು ಕೈಚೀಲದಲ್ಲಿ ಹಾಕಿಕೊಂಡು ಮನೆಯಿಂದ ನಮ್ಮೂರ ಗೇಟಗೆ ಬಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಸರಕಾರಿ ಬಸ್ ಹಿಡಿದುಕೊಂಡು ಯಾದಗಿರಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಇಳಿದೆವು. ನಂತರ ಬಸ್ ನಿಲ್ದಾಣದಲ್ಲಿ ಎಲ್ಲರು ಒಂದು ಕಡೆ ಹೈದ್ರಾಬಾದ ಬಸ್ ಸಲುವಾಗಿ ಕಾಯಿಕೊಂಡು ಇದ್ದಾಗ ಮದ್ಯಾಹ್ನ 02-30 ಗಂಟೆ ಸುಮಾರಿಗೆೆ ಹೈದ್ರಾಬಾದ ಬಸ್ ಬಂತು ಅವಾಗ ನಾವು ಎಲ್ಲರು ಗಡಿಬಿಡಿಯಿಂದ ಸಾಮಾನುಗಳನ್ನು ತಗೋಂಡು ಬಸ್ ಹತ್ತುವಾಗ ನನ್ನ ಕೈಯಲ್ಲಿದ್ದ ಕೈಚೀಲವನ್ನು ಯಾರೋ ಕಳ್ಳರು ಬ್ಲೇಡ್ದಿಂದ ಕಟ್[ಹರಿದು] ಮಾಡಿ ನನ್ನ ಕೈಚೀಲದಲ್ಲಿದ್ದ ಒಂದು 2 ತೋಲೆಯ ಬಂಗಾರದ ನಕ್ಲೇಸ್, ಅ.ಕಿ 80,000/-, ಮತ್ತು 5 ಗ್ರಾಂ ಬಂಗಾರದ ಜುಮಕ್ಕೆ ಅ|| ಕಿ|| 20,000/- ಹಾಗೂ ನಗದು ಹಣ 90,000/- ರೂಪಾಯಿ, ಹೀಗೆ ಒಟ್ಟು ಅ|| ಕಿ|| 1,90,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಒಡವೆ ಹಾಗೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೋಂಡು ಹೋಗಿದ್ದು, ನಾನು ಬಸ್ ಹತ್ತಿ ಸೀಟನಲ್ಲಿ ಕುಳಿತುಕೊಂಡು ನೋಡಿದಾಗ ನನ್ನ ಕೈಚೀಲದಲ್ಲಿದ್ದ ಬಂಗಾರ ಮತ್ತು ಹಣ ಕಳ್ಳತನವಾಗಿದ್ದು ಗೋತ್ತಾಗಿರುತ್ತದೆ. ಕಾರಣ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 36/2021 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯಾದಗಿರ ನಗರ ಪೊಲೀಸ್ ಠಾಣೆ:- 35/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 15/03/2021 ರಂದು 12-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.15/03/2021 ರಂದು 11-00 ಎಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಾಪೂರ ಅಗಸಿಯ ಮರೆಪ್ಪ ಟೆಂಟ್ ಹೌಸ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 12-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 12-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.35/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 37/2021 ಕಲಂ 379 ಐಪಿಸಿ : ಇಂದು ದಿನಾಂಕ 15.03.2021 ರಂದು ಸಮಯ ರಾತ್ರಿ 08:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಕೆಎ-33-ಟಿಎ-1202 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 37/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:- 19/2020 ಕಲಂ341, 323, 324, 504, 506 ಸಂ: 34 ಐಪಿಸಿ : ಇಂದು ದಿನಾಂಕ: 15/03/2021 ರಂದು 09.35 ಪಿಎಂ ಕ್ಕೆ ಅಜರ್ಿದಾರ ಶ್ರೀ. ಜನನಾಯಕ ತಂದೆ ನಾಗಪ್ಪ ಹುಣಸಿಗಿಡ ವಯಾ:32 ವರ್ಷ ಉ: ಡ್ರೈವರ ಜಾ: ಬೇಡರ ಸಾ: ವನದುಗರ್ಾ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ನೀಡಿದ್ದು, ಅದರ ಸಾರಂಶ ಏನಂದರೆ, ನಿನ್ನೆ ದಿನಾಂಕ: 14/03/2021 ರಂದು ಮದ್ಯಾಹ್ನ 12.00 ಪಿಎಂ ಸುಮಾರಿಗೆ ನಮ್ಮ ಮನೆಯ ಹತ್ತಿರದವರಾದ ವಿಶ್ವಕರ್ಮ ತಂದೆ ತಿರುಪತಿನಾಯ್ಕ ಮುನಮುಟಗಿ ಮತ್ತು ಅಜೀತಕುಮಾರ ತಂದೆ ತಿರುಪತಿನಾಯ್ಕ ಮುನಮುಟಗಿ ಇವರುಗಳು ನಮ್ಮ ದೊಡ್ಡಪ್ಪನವರಾದ ಭೀಮರಾಯ ತಂದೆ ಹಣಮಂತ್ರಾಯ ಹುಣಚಿಗಿಡ ಇವರೊಂದಿಗೆ ಏಕವಚನದಲ್ಲಿ ಮಾತಾಡಿದಾಗ ನಾನು ಹಾಗೇಲ್ಲ ಮಾತಾಡ ಬಾರದು ದೊಡ್ಡವರೊಂದಿಗೆ ಅಂತಾ ಬುದ್ದಿ ಹೇಳಿ ಕಳುಹಿಸಿದ್ದೇನು. ಹೀಗಿದ್ದು, ಇಂದು ದಿನಾಂಕ: 15/03/2021 ರಂದು 07.00 ಪಿಎಂ ಸುಮಾರಿಗೆ ನಾನು ಅಂಗಡಿಗೆ ಹೋಗಿ ಮರಳಿ ಬರುವಾಗ ನಮ್ಮೂರಿನ ಸುಭಾಸಗೌಡ ಖಲಾಲ ಇವರ ಹಿಟ್ಟಿನ ಗಿರಣಿ ಮುಂದೆ ದಾರಿಯಲ್ಲಿ 1) ವಿಶ್ವಕರ್ಮ ತಂದೆ ತಿರುಪತಿನಾಯ್ಕ ಮುನಮಟಗಿ 2) ಅಜೀತನಾಯ್ಕ ತಂದೆ ತಿರುಪತಿನಾಯ್ಕ ಮುನಮಟಗಿ 3) ಗೋಪಾಲನಾಯ್ಕ ತಂದೆ ಮಾದಪ್ಪನಾಯ್ಕ ಮುನಮುಟಗಿ ಮತ್ತು 4) ವೆಂಕಟೇಶ ತಂದೆ ಮಾದಪ್ಪನಾಯ್ಕ ಮುನಮುಟಗಿ ಎಲ್ಲರೂ ಜಾ: ಬೇಡರ ಸಾ:ವನದುಗರ್ಾ ಇವರುಗಳು ಕೂಡಿ ಬಂದವರೆ, ಸೂಳೆ ಮಗನೆ ಜನ್ಯಾ ನಿನ್ನೆ ನಮಗೆ ಪಟ್ಯಾ ಆಂತ್ಯಾ ಮಗನ ಇವತ್ತು ಬಾರಲೆ ಅಂತಾ ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆಯುತ್ತಾ ಎಳೆದಾಡತೋಡಗಿದರು. ಆಗ ನಮ್ಮ ಚಿಕ್ಕಪ್ಪನವರಾದ ಬಸವರಾಜ ತಂದೆ ಹಣಮಂತ್ರಾಯ ಮತ್ತು ಭಾಗಪ್ಪ ತಂದೆ ಹಣಮಂತ್ರಾಯ ಇವರುಗಳು ಬಿಡಿಸಲು ಬಂದಾಗ ವಿಶ್ವಕರ್ಮ ಈತನು ಒಂದು ಮಚ್ಚನ್ನು ತಗೆದುಕೊಂಡು ಬಂದು ಮಚ್ಚಿನ ತುಂಬಿನಿಂದ ಬಸವರಾಜ ಈತನ ತೆಲೆಗೆ ಹೊಡೆದು ಗುಪ್ತಗಾಯ ಮಾಡಿದ, ಮತ್ತು ಕೈಯಿಂದ ಬಲಗಣ್ಣಿಗೆ ಹೊಡೆದು ಗುಪ್ತಗಾಯ ಮಾಡಿದನು. ಅಜೀತನಾಯ್ಕ ಈತನು ನಮ್ಮ ಚಿಕ್ಕಪ್ಪನಾದ ಬಾಗಪ್ಪ ಈತನಿಗೆ ಕೆಳಗೆ ಕಡೆವಿ ಕೈಯಿಂದ ಹೊಡೆದಿದ್ದು, ಭಾಗಪ್ಪನ ಎಡಗೈ ಬೆರಳಿಗೆ, ಎಡ ಮೋಳಕೈಗೆ ಮತ್ತು ಎರಡು ಮೋಳಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಎಡಕಿವಿಗೆ ತರಚಿದ ಗಾಯ ಆಗಿರುತ್ತದೆ. ಗೋಪಾಲನಾಯ್ಕ ಮತ್ತು ವೆಂಕಟೇಶ ಇವರುಗಳು ನನಗೆ ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ ಅಷ್ಟರಲ್ಲಿ, ನಾಗಪ್ಪ ತಂದೆ ಮಹಾದೇವಪ್ಪ ಹುಣಸಿಗಿಡ, ವೆಂಕೋಬಾ ತಂದೆ ನಿರಂಜಪ್ಪ ಹುಣಸಿಗಿಡ ಇವರುಗಳು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು ಸದರಿ ನಾಲ್ಕು ಜನರು ನಮಗೆ ಹೊಡೆದು ಹೋಗುವಾಗ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ್ ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಸದರಿ ಅಜರ್ಿಯನ್ನು ನಮ್ಮ ಸಂಬಂದಿಕರಾದ ಶ್ರೀ. ಹಣಮಂತ್ರಾಯ ತಂದೆ ಭೀಮಣ್ಣ ಮರಾಠಿ ಸಾ: ವನದುಗಾ ಇವರ ಕಡೆಯಿಂದ ಬರೆಯಿಸಿರುತ್ತನೆ. ಕಾರಣ ನಮಗೆ ಹೊಡೆದು ಹಲ್ಲೆ ಮಾಡಿ, ಅವಾಚ್ಯವಗಿ ಬೈಯ್ದು ಜೀವದ ಬೆದರಿಕೆ ಹಾಕಿದ ಮೇಲಿನ 4 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಪಿಯರ್ಾದಿ ಅಜರ್ಿ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 19/2021 ಕಲಂ: 341, 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಯಾದಗಿರಿ:- 14/2021 ಕಲಂ: 323, 354, 379, 447, 504, 506, ಸಂಗಡ 34 ಐಪಿಸಿ : ನ್ಯಾಯಾಲಯದ ಉಲ್ಲೇಖಿತ ಪ್ರಕರಣವಾಗಿದ್ದು ಹಗರಟಗಿ ಗ್ರಾಮದ ದಿ:ಕಲ್ಲಪ್ಪ ರವರಿಗೆ 4 ಜನ ಹೆಣ್ಣುಮಕ್ಕಳಿದ್ದು ಕಲ್ಲಪ್ಪ ರವರ ಹೆಸರಿನಲ್ಲಿ ಹಗರಟಗಿ ಸೀಮಾಂತರದ ಸವರ್ೆ ನಂ 266/ಅ ದಲ್ಲಿ 9 ಎಕರೆ 9 ಗುಂಟೆ ಜಮೀನು ಇದ್ದು ಆ ಜಮೀನನ ಮಾಲಿಕರು ದಿ: ಕಲ್ಲಪ್ಪ ರವರು ಇದ್ದು ಆ ಜಮೀನಿನಲ್ಲಿ ಬೇಳೆದ ಎಳ್ಳು ಬೆಳೆಯನ್ನು ದಿನಾಂಕ 06/11/2019 ರಂದು ಬೆಳಿಗ್ಗೆ 5:30 ಗಂಟೆಯ ಸುಮಾರಿಗೆ ಅಕ್ರಮ ಪ್ರವೇಶ ಮಾಡಿ ಕಳುವನಿಂದ ಬೆಳೆಯನ್ನು ರಾಶಿಮಾಡಿಕೊಂಡು ಹೋಗಿದ್ದು ಇದನ್ನು ನೋಡಿದ ಸಾಕ್ಷಿದಾರರು ಸದರಿ ವಿಷಯವನ್ನು ಪಿಯರ್ಾದಿದಾರರಿಗೆ ಹೇಳಿದ್ದು ಪಿಯರ್ಾದಿದಾರರು ದಿನಾಂಕ 07/11/2019 ರಂದು ತಮ್ಮ ಸಹೋದರಿಯರೊಂದಿಗೆ ಹಗರಟಗಿ ಗ್ರಾಮಕ್ಕೆ ಹೋಗಿ ಆರೋಪಿತರಿಗೆ ಘಟನೆಯ ಬಗ್ಗೆ ವಿಚಾರಿಸಿದಾಗ ಆರೋಪಿತರಲ್ಲಿಯ ರೇಣುಕಾ ಇವಳು ಪಿಯರ್ಾದಿಗೆ ಏ ಬೊಸುಡಿ ರಂಡಿ ನೀವು ಬಿತ್ತಿದ ಎಳ್ಳನ್ನು ಕೊಯ್ದುಕೊಂಡು ಬಂದಿವಿ ಏನು ಮಾಡುತ್ತಿರಿ ಮಾಡು ಎಂದು ಅವಾಚ್ಯ ಶಬ್ದಗಳಿಂದ ಬೈದಳು ಹಾಗೂ ಆರೋಪಿ ಸಾಬಣ್ಣ ಈತನು ಪಿಯರ್ಾದಿ ಸೀರಿ ಸೆರಗನ್ನು ಹಿಡಿದು ಜಗ್ಗಾಡಿದನು ಆರೋಪಿ ಹುಲಗಮ್ಮಳು ಪಿಯರ್ಾದಿ ಕಪಾಳಕ್ಕೆ ಹೊಡೆದಳು ಆಗ ಪಿಯರ್ಾದಿದಾರರು ಚೀರಾಡಿದಾಗ ಪಿಯರ್ಾದಿ ಅಕ್ಕತಂಗಿಯರು ಜಗಳ ಬಿಡಿಸಿಕೊಂಡರು ಹುಲಗಮ್ಮ ಗಂಡ ರಾಜಪ್ಪ ಇವಳು ಪಿಯರ್ಾದಿಗೆ ನಿಮ್ಮನ್ನು ಖಲಾಸ ಮಾಡತಿವಿ ಎಮದು ಜೀವ ಬೆದರಿಕೆ ಹಾಕಿರುತ್ತಾಳೆ ಅಂತಾ ಇದ್ದ ಪಿಯರ್ಾದಿಯ ಅಜರ್ಿಯ ಸಾರಾಂಶದವ ಮೇಲಿಂದ ಠಾಣೆಯ ಗುನ್ನೆ ನಂ 14/2021 ಕಲಂ 323, 354, 379, 447, 504, 506, ಸಂಗಡ 34 ಐಪಿಸಿ ಅಡಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ನಾರಾಯಣಪೂರ ಪೊಲೀಸ್ ಠಾಣೆ :- 15/2021 ಕಲಂ: 87 ಕೆ.ಪಿ ಯಾಕ್ಟ್ : ದಿನಾಂಕ: 15/03/2021 ರಂದು 8:40 ಪಿ .ಎಂ. ಕ್ಕೆ ಶ್ರೀ ಸಿದ್ದೇಶ್ವರ ಗೆರೆಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಫನ ಪತ್ರ ನೀಡಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 15/03/2021 ರಂದು 8:20 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ರಾಯನಗೋಳ ಗ್ರಾಮದ ಅಂಗನವಾಡಿ ಕೇಂದ್ರದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಿ ದಾಳಿಮಾಡುವ ಕುರಿತು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ನೀಡುವಂತೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರು ಸದರಿ ಇಸ್ಪೀಟ್ ಜೂಜಾಟ ಆಡುವವರ ಮೇಲೆ ಪ್ರಕರಣ ದಾಖಲಿಸಿ ದಾಳಿಮಾಡಲು ಪರವಾನಿಗೆ ನೀಡಿದ್ದು ಕಾರಣ ನಿಮಗೆ ಎಪ್.ಐ.ಆರ್ ದಾಖಲಿಸಲು ಸೂಚಿಸಿಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 15/2021 ಕಲಂ: 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 11:00 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 7 ಜನ ಆರೋಪಿತರು ನಗದು ಹಣ 3300/- ರೂ, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 16-03-2021 11:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080