ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/02/2021

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 22/2021 ಕಲಂ: 279,338, 304[ಎ] ಐ.ಪಿ.ಸಿ : ಇಂದು ದಿನಾಂಕ: 16/02/2021 ರಂದು 10.00 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ರೇಣುಕಮ್ಮ ಗಂಡ ಶರಣಪ್ಪ ಜಾಲಿಬೆಂಚಿ ಸಾ|| ಐನಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ, ನನ್ನ ಗಂಡನಾದ ಶರಣಪ್ಪ ತಂದೆ ಮಲಕಪ್ಪ ಜಾಲಿಬೆಂಚಿ ಈತನು ಅಲ್ಲಿ ಇಲ್ಲಿ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದನು. ನಮ್ಮ ಒಬ್ಬಳು ನಾದಿನಿಗೆ ತಳ್ಳಳ್ಳಿ[ಬಿ] ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು ಕಾರಣ ನನ್ನ ಗಂಡನಾದ ಶರಣಪ್ಪ ತಂದೆ ಮಲಕಪ್ಪ ಜಾಲಿಬೆಂಚಿ ಈತನು ನಿನ್ನೆ ದಿನಾಂಕ 15.02.2021 ರಂದು ರಾತ್ರಿ 9 ಗಂಟೆ ಸುಮಾರಿಗೆ ತಳ್ಳಳ್ಳಿ (ಬಿ) ಗ್ರಾಮದ ತನ್ನ ತಂಗಿಯ ಹತ್ತಿರ ಹೋಗಿ ಬರುವದಾಗಿ ನನ್ನ ಮುಂದೆ ಹೇಳಿ ಮೋಟರ ಸೈಕಲ್ ನಂಬರ ಕೆಎ 33 ಇ 8105 ನೇದ್ದನ್ನು ತೆಗೆದುಕೊಂಡು ಹೋದನು. ರಾತ್ರಿ 11 ಗಂಟೆಯಾದರೂ ಮನೆಗೆ ಬರಲಿಲ್ಲ ಬೆಳಿಗ್ಗೆ ಬರಬಹುದು ಅಂತ ತಿಳಿದು ನಾನು ನನ್ನ ಮಕ್ಕಳು ಊಟ ಮಾಡಿ ಮಲಗಿಕೊಂಡೆವು. ಹೀಗಿದ್ದು, ಇಂದು ದಿನಾಂಕ: 16/02/2021 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಯಾರೋ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನನ್ನ ಗಂಡನು ತಾಳಿಕೋಟಿ ಕೆಂಭಾವಿ ಮುಖ್ಯ ರಸ್ತೆಯ ಗುತ್ತಿಬಸವಣ್ಣ ಕ್ರಾಸ್ ದಾಟಿ ನಮ್ಮೂರ ಕ್ರಾಸಿಗೆ ಬರುವ ರೋಡಿನ ಮದ್ಯದಲ್ಲಿ ಶಿವರಾಜ ತಂದೆ ಚನ್ನಮಲ್ಲಪ್ಪ ಬಿರಾದಾರ ಸಾ|| ಮಲ್ಕಾಪೂರ ಇವರ ಹೊಲದಲ್ಲಿ ತನ್ನ ಮೋಟರ ಸೈಕಲ್ ಸಮೇತ ಬಿದ್ದಿರುತ್ತಾನೆ ಅಂತ ತಿಳಿಸಿದಾಗ ನಾನು ಗಾಬರಿಯಾಗಿ ಸದರಿ ಸ್ಥಳಕ್ಕೆ ಹೋಗಿ ನೋಡಲು ಶಿವರಾಜ ಮಲ್ಕಾಪೂರ ಇವರ ಹೊಲದಲ್ಲಿ ನನ್ನ ಗಂಡನು ತನ್ನ ಮೋಟರ ಸೈಕಲ್ ಸಮೇತ ಬಿದ್ದಿದ್ದು, ವಿಚಾರಿಸಲು ಇಂದು ದಿನಾಂಕ: 16/02/2021 ರಂದು ರಾತ್ರಿ 00.15 ಎಎಮ್ಕ್ಕೆ ನಾನು ನನ್ನ ತಂಗಿಗೆ ಭೇಟಿಯಾಗಿ ಮರಳಿ ಊರಿಗೆ ಬರುವ ಕುರಿತು ನನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ಒಮ್ಮೆಲೆ ಒಂದು ಎಮ್ಮೆ ರೋಡಿಗೆ ಅಡ್ಡ ಬಂದಾಗ ಅದನ್ನು ತಪ್ಪಿಸಲು ಹೋಗಿ ನನ್ನ ಮೋಟರ ಸೈಕಲ್ ಸಮೇತ ರೋಡಿನ ಕೆಳಗೆ ಬಿದ್ದಿರುತ್ತೇನೆ ಅಂತ ತಿಳಿಸಿದಾಗ ನಾನು ನನ್ನ ಗಂಡನಿಗೆ ನೋಡಲಾಗಿ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಂತಾಗಿದ್ದು, ಅಲ್ಲದೆ ತಲೆಯ ಹಿಂಭಾಗದಲ್ಲಿಯೂ ಸಹ ಭಾರಿ ರಕ್ತಗಾಯವಾಗಿದ್ದು, ಇಡೀ ರಾತ್ರಿ ರಕ್ತಸ್ರಾವವಾಗಿ ತೊದಲು ನುಡಿಯಲ್ಲಿ ಮಾತನಾಡುತ್ತಿದ್ದವನಿಗೆ ಕೂಡಲೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ನನ್ನ ಗಂಡನು ತನ್ನ ಮೋಟರ ಸೈಕಲ್ ನಂ ಕೆಎ 33 ಇ 8105 ನೇದ್ದನ್ನು ಅತಿವೇಗ ಮತ್ತು ಅಲಕ್ಷತನಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿಗೆ ಒಂದು ಎಮ್ಮೆ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರೋಡಿನ ಕೆಳಗೆ ಹೊಲದಲ್ಲಿ ಬಿದ್ದು, ಕಾಲಿಗೆ ಹಾಗೂ ತಲೆಗೆ ಭಾರಿ ರಕ್ತಗಾಯ ಹೊಂದಿದ್ದು, ಕಾರಣ ಸದರಿಯವನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದು ತಾವು ಕಾನೂನು ಪ್ರಕಾರ ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2021 ಕಲಂ:279,338 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರ ಇಂದೇ ದಿ: 16.02.2021 ರಂದು 3 ಪಿಎಮ್ಕ್ಕೆ ಸರಕಾರಿ ಆಸ್ಪತ್ರೆ ಕಲಬುಗರ್ಿಯಿಂದ ಡೆತ್ ಎಮ್ ಎಲ್ ಸಿ ವಸೂಲಾಗಿದ್ದೇನಂದರೆ ಸದರ ಪ್ರಕರಣದಲ್ಲಿಯ ಗಾಯಾಳು ಶರಣಪ್ಪ ತಂದೆ ಮಲಕಪ್ಪ ಜಾಲಿಬೆಂಚಿ ವ|| 48 ಈತನು ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದವನು ಉಪಚಾರ ಫಲಕಾರಿಯಾಗದೆ ಇಂದು ದಿ: 16.02.2021 ರಂದು 1.30 ಪಿಎಮ್ಕ್ಕೆ ಮೃತಪಟ್ಟಿದ್ದು ಇರುತ್ತದೆ ಅಂತ ಎಮ್ ಎಲ್ ಸಿ ವಸೂಲಾಗಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ 304[ಎ] ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 44/2021 ಕಲಂ: 302, 109 ಸಂಗಡ 149 ಐಪಿಸಿ : ಇಂದು ದಿನಾಂಕಃ 16-02-2021 ರಂದು 12-15 ಪಿ.ಎಮ್ ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ನಿಂಗಪ್ಪ ಕೊಳ್ಳಿ ಸಾಃ ದಿವಳಗುಡ್ಡಾ ಸುರಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನಿಗೆ ತಾತಪ್ಪ ಹಾಗು ಮರೆಪ್ಪ ಅಂತ ಇಬ್ಬರೂ ತಮ್ಮಂದಿರು ಇದ್ದು ಮೂವರು ಬೇರೆಯಾಗಿರುತ್ತಾರೆ. ಅವರು ಮೂವರು ಅಣ್ಣ-ತಮ್ಮಂದಿರಿಗೆ ಹಸನಾಪೂರ ಸಿಮಾಂತರದ ಸವರ್ೆ ನಂ. 22/4 ರಲ್ಲಿ ಪಿತ್ರಾಜರ್ಿತವಾದ 21 ಗುಂಟೆ ಜಮೀನು ಇದ್ದು, ಸದರಿ ಹೊಲವನ್ನು ನನ್ನ ಮೈದುನನಾದ ತಾತಪ್ಪ ತಂದೆ ಪಿಡ್ಡಪ್ಪ ಕೊಳ್ಳಿ ಇವರು ನಮಗೆ ಗೊತ್ತಾಗದ ಹಾಗೆ ತಮ್ಮ ಹೆಸರಿಗೆ ಮಾಡಿಸಿಕೊಂಡಿರುತ್ತಾರೆ. ನಂತರ ಈ ವಿಷಯ ಗೊತ್ತಾಗಿ ನನ್ನ ಗಂಡ ಹಾಗು ಮೈದುನ ಮರೆಪ್ಪ ಇಬ್ಬರೂ 21 ಗುಂಟೆ ಜಮೀನಿನಲ್ಲಿ ನಮಗೂ ಪಾಲು ಬರುತ್ತದೆ ಅಂತ ಸಿವಿಲ್ ದಾವೆ ಹಾಕಿದ್ದು, ಇನ್ನು ಕೇಸ್ ವಿಚಾರಣೆಯಲ್ಲಿರುತ್ತದೆ. ನಂತರ ಸದರಿ 21 ಗುಂಟೆ ಜಮೀನಿನಲ್ಲಿ ನನ್ನ ಮೈದುನ ತಾತಪ್ಪ ಇತನು 34 ಪ್ಲಾಟಗಳನ್ನು ಮಾಡಿದ್ದು, ನನ್ನ ಗಂಡ ಹಾಗು ಮೈದುನ ಮರೆಪ್ಪ ಇಬ್ಬರೂ ತಾತಪ್ಪನಿಗೆ ನಮಗೂ ಪ್ಲಾಟಗಳಲ್ಲಿ ಪಾಲು ಬರುತ್ತದೆ ಮೂವರು ಅಣ್ಣ-ತಮ್ಮಂದಿರು ತಲಾ 11 ಪ್ಲಾಟಗಳನ್ನು ಹಂಚಿಕೊಳ್ಳೋಣಾ ಅಂತ ಹೇಳಿದಾಗ ತಾತಪ್ಪನು ಆಯ್ತು ನಿಮಗೂ ಪ್ಲಾಟಗಳನ್ನು ಕೊಡುತ್ತೇನೆ ಅಂತ ಹೇಳಿದ್ದಾನೆ ಹೊರತು ನಮ್ಮ ಹೆಸರಿಗೆ ಮಾಡಿಸಿ ಕೊಡುತ್ತಿಲ್ಲಾ. ಸದರಿ ಹೊಲದಲ್ಲೆ ನಾವು ಒಂದು ಪ್ಲಾಟಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ನನ್ನ ಮೈದುನ ಮರೆಪ್ಪನು ಸಹ ಮುಖ್ಯರಸ್ತೆ ಪಕ್ಕದ ಒಂದು ಪ್ಲಾಟಿನಲ್ಲಿ ಶೆಡ್ ಹಾಕಿ ಖಾನಾವಳಿ ನಡೆಸುತ್ತ ಕುಟುಂಬದೊಂದಿಗೆ ವಾಸವಾಗಿರುತ್ತಾನೆ. ಈ ಮದ್ಯೆ ಕಳೆದ 6 ತಿಂಗಳ ಹಿಂದೆ ನನ್ನ ಗಂಡ ನಿಂಗಪ್ಪನು ಮೃತಪಟ್ಟಿರುತ್ತಾನೆ. ನನ್ನ ಗಂಡ ಮೃತಪಟ್ಟ ನಂತರ ಒಂದು ತಿಂಗಳ ಬಳಿಕ ನಾನು ಮತ್ತು ನನ್ನ ಹಿರಿಯ ಮಗನಾದ ಶಿವರಾಜ ತಂದೆ ನಿಂಗಪ್ಪ ಕೊಳ್ಳಿ ವಯಃ 21 ವರ್ಷ ಇಬ್ಬರೂ ನನ್ನ ಮೈದುನ ತಾತಪ್ಪನಿಗೆ ನನ್ನ ಗಂಡನ ಪಾಲಿಗೆ ಬರಬೇಕಾದ 11 ಪ್ಲಾಟಗಳನ್ನು ನಮ್ಮ ಹೆಸರಿಗೆ ಮಾಡಿಕೊಡು ಅಂತ ಕೇಳಲು ಅವರ ಮನೆಗೆ ಹೋದಾಗ ತಾತಪ್ಪ ಹಾಗು ಆತನ ಮಕ್ಕಳಾದ ರಾಘವೇಂದ್ರ ಮತ್ತು ರಾಜು ಮೂವರು ನಿಮಗೆ ಆ ಹೊಲದಲ್ಲಿ ಪಾಲು ಬರುವದಿಲ್ಲ, ಇನ್ನೊಮ್ಮೆ ಹೊಲ, ಪ್ಲಾಟ ಕೇಳಿದರೆ ಸುಮ್ಮನೇ ಬಿಡುವದಿಲ್ಲ ಅಂತ ನಮಗೆ ಬೈದು ಕಳಿಸಿರುತ್ತಾರೆ. ಅಲ್ಲದೇ ದಿನಾಂಕ: 12/02/2021 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನನ್ನ ಮೈದುನ ತಾತಪ್ಪ ಹಾಗು ಆತನ ಮಕ್ಕಳಾದ ರಾಘವೇಂದ್ರ, ರಾಜು ಮೂವರು ಪ್ಲಾಟ ನಂ. 3 ರಲ್ಲಿ ಅಂಗಡಿ ಇಡಲು ಶೆಡ್ ಹಾಕಲು ಬಂದಾಗ ನಾನು ಮತ್ತು ನನ್ನ ಮಗ ಶಿವರಾಜ ಹಾಗು ನನ್ನ ಮೈದುನ ಮರೆಪ್ಪ ಎಲ್ಲರೂ ಅವರಿಗೆ ನಮ್ಮ ಪಾಲಿಗೆ ಬರಬೇಕಾದ ಪ್ಲಾಟುಗಳನ್ನು ನಮ್ಮ ಹೆಸರಿಗೆ ಮಾಡಿಸಿ ನಂತರ ನೀವು ಶೇಡ್ ಹಾಕಿರಿ, ಅಲ್ಲಿಯವರೆಗೆ ನಿಮಗೆ ಶೇಡ್ ಹಾಲು ಬಿಡುವದಿಲ್ಲ ಅಂತ ಹೇಳಿ ತಡೆದಾಗ ಅವರು ಮಕ್ಕಳೇ ನಮ್ಮ ಹೊಲದಲ್ಲಿ ನಮಗೆ ಅಂಗಡಿ ಹಾಕಲು ಬಿಡುತ್ತಿಲ್ಲಾ, ಹೀಗೆ ನಮ್ಮೊಂದಿಗೆ ತಕರಾರು ಮಾಡುತ್ತಿದ್ದರೆ, ನಿಮ್ಮಲ್ಲಿ ಒಬ್ಬರಿಗಾದರೂ ಖಲಾಸ ಮಾಡದೇ ಬಿಡುವದಿಲ್ಲ ಸೂಳೆ ಮಕ್ಕಳೇ ಅಂತ ಬೈದು ಹೋಗಿರುತ್ತಾರೆ. ಹೀಗಿದ್ದು ಇಂದು ದಿನಾಂಕ: 16/02/2021 ರಂದು ಮುಂಜಾನೆ ನನ್ನ ಮೈದುನ 1) ತಾತಪ್ಪ ತಂದೆ ಪಿಡ್ಡಪ್ಪ ಕೊಳ್ಳಿ ಹಾಗು ಆತನ ಮಕ್ಕಳಾದ 2) ರಾಘವೇಂದ್ರ ತಂದೆ ತಾತಪ್ಪ ಕೊಳ್ಳಿ, 3) ರಾಜು ತಂದೆ ತಾತಪ್ಪ ಕೊಳ್ಳಿ ಮೂವರು ಸವರ್ೆ ನಂ. 22/4 ರಲ್ಲಿ ಮಾಡಿರುವ ಪ್ಲಾಟ ನಂ. 3 ರಲ್ಲಿ ಬಂದು ಶೇಡ್ ಹಾಕುವ ಸಲುವಾಗಿ ಕಬ್ಬಿಣದ ಆಂಗಲರಗಳನ್ನು ಇಳಿಸಿದ್ದರಿಂದ ನನ್ನ ಮಗನಾದ ಶಿವರಾಜ ತಂದೆ ನಿಂಗಪ್ಪ ಕೊಳ್ಳಿ ಇತನು ಹೋಗಿ ನಮ್ಮ ಹೆಸರಿಗೆ 11 ಪ್ಲಾಟಗಳನ್ನು ಬರೆದುಕೊಡುವ ತನಕ ನಿಮಗೆ ಇಲ್ಲಿ ಶೆಡ್ ಹಾಕಲು ಬಿಡುವದಿಲ್ಲ ಅಂತ ಹೇಳಿದ್ದು, ಆಗ ಅವರು ಮೂವರು ಮಗನೇ ನಮ್ಮ ಪ್ಲಾಟಿನಲ್ಲಿ ನಮಗೆ ಶೆಡ್ ಹಾಕಲು ಬಿಡುತ್ತೀಲ್ಲಾ ಏನಲೇ ಇವತ್ತು ನಿನಗೆ ಸುಮ್ಮನೇ ಬಿಡುವದಿಲ್ಲ ಅನ್ನುತ್ತ 8-40 ಎ.ಎಮ್ ಸುಮಾರಿಗೆ ಅವರಲ್ಲಿ ತಾತಪ್ಪ ಹಾಗು ರಾಜು ಇಬ್ಬರೂ ಹಿಂದಿನಿಂದ ನನ್ನ ಮಗ ಶಿವರಾಜನ ಎರಡು ಕೈಗಳು ಹಾಗು ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ರಾಘವೇಂದ್ರನಿಗೆ ಇವನದು ಬಹಳ ಆಗಿದೆ ಚಾಕುದಿಂದ ಚುಚ್ಚಿ ಖಲಾಸ ಮಾಡು ಸೂಳೆ ಮಗನಿಗೆ ಅಂತ ಹೇಳಿದ್ದರಿಂದ ರಾಘವೇಂದ್ರನು ತನ್ನ ಟೊಂಕದಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದ ಚಾಕು ತಗೆದುಕೊಂಡು ನನ್ನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ಎಡಕಿವಿಗೆ ಹಾಗು ಎಡಕುತ್ತಿಗೆಯ ಮೇಲೆ 3 ಸಲ ಚುಚ್ಚಿ ಭಾರಿ ರಕ್ತಗಾಯ ಪಡಿಸಿದ್ದರಿಂದ ತಕ್ಷಣ ನಾನು ಮತ್ತು ಅಲ್ಲೆ ಇದ್ದ ನನ್ನ ಮೈದುನ ಮರೆಪ್ಪ, ನನ್ನ ಅಳಿಯ ಹಣಮಂತ ಮತ್ತು ಸಮೀಪದ ಖಾನಾವಳಿಯವರಾದ ರಾಜು ಬಿರೇದಾರ ಎಲ್ಲರೂ ಹೋಗಿ ಬಿಡಿಸಿರುತ್ತೇವೆ. ಆಗ ಅವರೆಲ್ಲರೂ ನನ್ನ ಮಗನಿಗೆ ಬೈದು ಅಲ್ಲಿಂದ ಚಾಕು ಸಮೇತ ಹೋದರು. ಆಗ ನನ್ನ ಮಗನಿಗೆ ಭಾರಿ ಗಾಯಗಳಾಗಿ ರಕ್ತಸ್ರಾವ ಆಗುತ್ತಿದ್ದಾಗ ನನ್ನ ಅಳಿಯ ಹಣಮಂತ ವಗ್ಗರ ಇತನ ಅಟೋರಿಕ್ಷಾದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿ ಪ್ರಥಮೋಪಚಾರ ಮಾಡಿಸಿ, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯೂಲೇನ್ಸ್ದಲ್ಲಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಗ ಬಿಜಾಸಪೂರ ಗ್ರಾಮದ ಹತ್ತಿರ 10-30 ಎ.ಎಮ್ ಸುಮಾರಿಗೆ ನನ್ನ ಮಗನು ಮೃತಪಟ್ಟಿದ್ದರಿಂದ ಮರಳಿ ಆತನ ಶವವನ್ನು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ನನ್ನ ಗಂಡನಿಗೆ ಕೊಲೆ ಮಾಡಿದ ಮತ್ತು ಕೊಲೆ ಮಾಡಲು ಪ್ರಚೋದನೆ ನೀಡಿರುವವವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 44/2021 ಕಲಂ: 302, 109 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಇತ್ತೀಚಿನ ನವೀಕರಣ​ : 17-02-2021 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080