ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/03/2021

ಯಾದಗಿರ ನಗರ ಪೊಲೀಸ್ ಠಾಣೆ:- 37/2021 ಕಲಂ: 143,341.504.506 ಸಂ.149 ಐಪಿಸಿ : ಇಂದು ದಿನಾಂಕ; 16/03/2021 ರಂದು 5-30 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಸುಂದರರಾಜ ತಂದೆ ಯಶವಂತ ಮುಳ್ಳಗಸಿ ವ;35 ಜಾ; ಕ್ರಿಶ್ಚಿಯನ್ ಉ; ಖಾಸಗಿಕೆಲಸ ಸಾ; ಮೈಲಾಪೂರ ಬೇಸ್ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ; 14/03/2021 ರಂದು ನಮ್ಮ ಮನೆಗೆ ಸುನೀಲಕುಮಾರ ರೆಡಸನ್ ಮತ್ತು ಅವರ ಕುಟುಂಬದವರೆಲ್ಲರೂ ಅಂದರೆ ಅವರ ಹೆಂಡತಿ ಮತ್ತು ಮಕ್ಕಳನ್ನು ಉಪ ಆಹಾರಕ್ಕಾಗಿ (ಅನ್ಯೋನ್ಯತೆ ಭೋಜನಕ್ಕಾಗಿ) ನಾನು ನನ್ನ ಕಾರಿನಲ್ಲಿ ಕರೆದುಕೊಂಡು ಬಂದಿರುತ್ತೇನೆ. ಎಲ್ಲರ ಊಟವಾದ ನಂತರ ರಾತ್ರಿ 11-00 ಗಂಟೆ ಸುಮಾರಿಗೆ ಮೈಲಾಪೂರ ಅಗಸಿಯ ನಮ್ಮ ಮನೆಯಿಂದ ಸುನೀಲಕುಮಾರ ರೆಡಸನ್ ಇವರಿಗೆ ಮತ್ತು ಇವರ ಕುಟುಂಬದವರನ್ನು ಅವರ ಮನೆಗೆ ಬಿಡಲು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಹೊಸಳ್ಳಿ ಕ್ರಾಸನ ಹೊಲೆಸ್ಟೆನ್ ಆಸ್ಪತ್ರೆಯ ಹತ್ತಿರ 6-7 ದ್ವಿಚಕ್ರ ವಾಹನ ಹಾಗೂ ಯಾರೋ ಅಪರಿಚಿತ ವ್ಯಕ್ತಿಗಳು 12-15 ಸೇರಿ ಗುಂಪನ್ನು ಕಟ್ಟಿಕೊಂಡು ನಮ್ಮ ಕಾರನ್ನು ತಡೆಯಲು ಯತ್ನಿಸಿ, ನಮಗೆ ಅವಾಚ್ಯ ಬೈಯುತ್ತಿರುವಾಗ ಆಗ ನಾನು ನನ್ನ ಕಾರನ್ನು ಚಲಾಯಿಸುತ್ತಿರುವಾಗ ಅಪರಿಚಿತ ವ್ಯಕ್ತಿಗಳು ನಮ್ಮ ಕಾರಿನ ಸುತ್ತಮುತ್ತಲೂ ತಮ್ಮ ಬೈಕನಲ್ಲಿ ಬಂದು ಮತ್ತೆ ನಮಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದರಿಂದ ಕಾರಿನಲ್ಲಿ ಹೆಣ್ಣುಮಕ್ಕಳು ಹಾಗೂ ಮಕ್ಕಳು ಇರುವುದರಿಂದ ಸದರಿ ಕಾರಿನ ಗ್ಲಾಸನ್ನು ಹಾಕಿಕೊಂಡು, ನಮಗೆ ಹಿಂಬಾಲಿಸುತ್ತಿರುವ ಅಪರಿಚಿತ ವ್ಯಕ್ತಿಗಳು ಇದ್ದಾರೆಂದು ನಾನು ಮಾನ್ಯರಾದ ತಮಗೆ ಫೋನ ಮೂಲಕ ಮಾತನಾಡಿ ವಿಷಯವನ್ನು ತಿಳಿಸಿರುತ್ತೇನೆ. ಆಗ ಸುನೀಲಕುಮಾರ ರೆಡಸನ್ ಇವರ ಮನೆಯು 100 ಮೀಟರ ಅಂತರದಲ್ಲಿ ಬಂದಾಗ ಅಪರಿಚಿತ ವ್ಯಕ್ತಿಗಳು ಗುಂಪನ್ನು ಕಟ್ಟಿಕೊಂಡು ಬಂದು ನನ್ನ ಕಾರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಲೇ ಬೋಸಡೀ ಮಕ್ಕಳೇ, ಲೇ ರಂಡಿ ಮಕ್ಕಳೇ, ಲೇ ಸೂಳೇ ಮಕ್ಕಳೇ ನಿಮ್ಮನ್ನು ಇವತ್ತೇ ಈ ಕಾರಿನಲ್ಲಿಯೇ ಸುಟ್ಟು ಬಿಡುತ್ತೇವೆ ನಮಗೇನು ತಿಳಿದಿರಿ ಮಕ್ಕಳ್ಯಾ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಮಕ್ಕಳ್ಯಾ ಎಂದು ಹೇಳಿ ನಮಗೆ ಹಲ್ಲೇ ಮಾಡಲು ಪ್ರಯತ್ನಿಸುತ್ತಿರುವಾಗ ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ದ್ವಿಚಕ್ರ ವಾಹನದ ಮೇಲೆ ಬಂದಿರುವ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಎಲ್ಲರೂ ಓಡಿ ಹೋದರು. ಆಗ ಓಡಿ ಹೋಗುವಾಗ ಒಬ್ಬ ವ್ಯಕ್ತಿಯನ್ನು ಪೊಲೀಸರು ಹಿಡಿದು, ಅವನನ್ನು ಠಾಣೆಗೆ ಕರೆದುಕೊಂಡು ಹೋಗಿರುತ್ತಾರೆ. ಘಟನೆಯ ಸ್ಥಳದಲ್ಲಿ ದ್ವಿಚಕ್ರ ವಾಹನ ಸಂ.ಕೆಎ.33.ವಾಯ್.0648 ಇದ್ದು ಇದನ್ನು ಜೀಪಿನಲ್ಲಿ ಬಂದಿರುವ ಪೊಲೀಸ ಇಲಾಖೆಯ ಆರಕ್ಷಕರ ಮೌಖಿಕ ಆದೇಶ ಮತ್ತು ಅಪ್ಪಣೆಯ ಮೇರೆಗೆ ಸದರಿ ವಾಹನವನ್ನು ನಾನು ತೆಗೆದುಕೊಂಡು ನಗರ ಪೊಲೀಸ ಠಾಣೆಯಲ್ಲಿ ಕರ್ತವ್ಯದ ಮೇಲೆ ಇರುವ ಎ.ಎಸ್.ಐ ರವರಿಗೆ ಒಪ್ಪಿಸಿರುತ್ತೇನೆ. ಆದ ಕಾರಣ ಮಾನ್ಯರಾದ ತಾವುಗಳು ನನಗೆ ಮತ್ತು ಸುನೀಲಕುಮಾರ ರೆಡಸನ್ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವದ ಬೆದರಿಕೆ ಹಾಕಿ ಹಲ್ಲೆ ಮಾಡಲು ಪ್ರಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಂಡು, ಈ ಅಪರಿಚಿತ ವ್ಯಕ್ತಿಗಳಿಂದ ನಮಗೆ ಜೀವ ಭಯ ಇರುವುದರಿಂದ ನಮಗೆ ಜೀವ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.37/2021 ಕಲಂ.143, 341, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:- 20/2021 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 16/03/2021 ರಂದು 11-30 ಎಎಮ್ ಕ್ಕೆ ಅಜರ್ಿದಾರ ಶ್ರೀ. ವಿಶ್ವರಾಜ ತಂದೆ ತಿರುಪತಿ ನಾಯಕ ಮುನಮುಡಗಾ ಸಾ|| ವನದುಗರ್ಾ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಮನೆಯ ಬಾಜು ನಮ್ಮ ಜಾಗಕ್ಕೆ ಹೊಂದಿಕೊಂಡು ಭೀಮರಾಯ ತಂದೆ ಹಣಮಂತ್ರಾಯ ಹುಣಸಿಗಿಡ, ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ, ನಾಗಪ್ಪ ತಂದೆ ಹಣಮಂತ್ರಾಯ ಹುಣಸಿಗಿಡ ಎನ್ನುವ ಸಹೋದರರ ಮನೆಗಳು ಇರುತ್ತವೆ. ಸದರಿಯವರ ಮನೆಯ ಬಚ್ಚಲು ನೀರು ನಮ್ಮ ಮನೆಯ ಮುಂದೆ ಬಯಲು ಜಾಗದಲ್ಲಿ ಹರಿಯುತ್ತಿದ್ದು, ಇದಕ್ಕೆ ನಾನು ದಿನಾಂಕ: 14/03/2021 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಅವರಿಗೆ ನಮ್ಮ ಮನೆಯ ಮುಂದೆ ಈ ರೀತಿ ಚರಂಡಿ ಹರಿಯುವಂತೆ ಮಾಡಿದರೆ ಹ್ಯಾಂಗ ಅಂತಾ ಕೇಳಿದ್ದು ಅದಕ್ಕೆ ನಮ್ಮ ನಡುವೆ ತಕರಾರು ಆಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 15/03/2021 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಬಯಲು ಜಾಗದಲ್ಲಿ ನಿಂತಾಗ 1) ಜನನಾಯಕ ತಂದೆ ನಾಗಪ್ಪ ಹುಣಸಿಗಿಡ 2) ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ 3) ನಾಗಪ್ಪ ತಂದೆ ಮಹಾದೇವಪ್ಪ ಹುಣಸಿಗಿಡ 4) ಕೃಷ್ಣಾ ತಂದೆ ಭೀಮರಾಯ ಹುಣಸಿಗಿಡ 5) ರಾಮಣ್ಣ ತಂದೆ ಭೀಮರಾಯ ಹುಣಸಿಗಿಡ 6) ವಿಕಾಸ ತಂದೆ ಬಸವರಾಜ ಹುಣಸಿಗಿಡ 7) ವಿನಾಯಕ ತಂದೆ ಬಸವರಾಜ ಹುಣಸಿಗಿಡ 8) ಶಿವು ತಂದೆ ಭೀಮರಾಯ ಹುಣಸಿಗಿಡ 9) ಹಣಮಂತ್ರಾಯ ತಂದೆ ಭೀಮರಾಯ ಹುಣಸಿಗಿಡ ಸಾ|| ಎಲ್ಲರೂ ವನದುಗರ್ಾ ಗ್ರಾಮ ಇವರೆಲ್ಲರೂ ಕೂಡಿಕೊಂಡು ಬಂದವರೇ ' ಲೇ ವಿಶ್ವ್ಯಾ ಸೂಳೆ ಮಗನೆ ನಿನ್ನೆ ನಮ್ಮೊಂದಿಗೆ ತಕರಾರು ಮಾಡುತ್ತನಲೇ ನಿನಗೆ ಸೊಕ್ಕು ಬಹಳ ಆಗ್ಯಾದ ' ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅವರಲ್ಲಿಯ ಜನನಾಯಕ ತಂದೆ ನಾಗಪ್ಪ ಹುಣಸಿಗಿಡ ಈತನು ಅಲ್ಲೆ ಇದ್ದ ಬಡಿಗೆಯಿಂದ ಹೆಡಕಿಗೆ, ಮತ್ತು ಬಲಬುಜದ ಹತ್ತಿರ ಹೊಡೆದು ಗುಪ್ತಗಾಯ ಮಾಡಿದನು. ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ ಇತನು ನನಗೆ ಎದೆಗೆ ಕೈಯಿಂದ ಮುಷ್ಠಿ ಮಾಡಿ ಗುದ್ದಿ ಒಳಪೆಟ್ಟು ಮಾಡಿ, ನನಗೆ ನೆಲಕ್ಕೆ ಕೆಡವಿದ್ದು, ಆಗ ಹಣಮಂತ್ರಾಯ ತಂದೆ ಭೀಮರಾಯ ಇತನು ನನಗೆ ಹೊಟ್ಟೆಗೆ ಜೋರಾಗಿ ಒದ್ದು ಒಳಪೆಟ್ಟು ಮಾಡಿದನು. ಉಳಿದವರು ಕೂಡಾ ನನಗೆ ಕೈಯಿಂದ, ಕಾಲಿನಿಂದ ಮೈಮೇಲೆ ಹೊಡೆದಿರುತ್ತಾರೆ. ಆಗ ನಾನು ಚೀರಾಡುವ ಸಪ್ಪಳ ಕೇಳಿ ಮನೆಯಲ್ಲಿದ್ದ ನಮ್ಮ ಅಣ್ಣ ಅಜೀತನಾಯಕ ತಂದೆ ತಿರುಪತಿ ನಾಯಕ, ಹಾಗೂ ನಮ್ಮೂರ ಸತೀಶ ತಂದೆ ದಶರಥನಾಯಕ ಸೊಂಡರಪಲ್ಲಿ, ಇವರು ಜಗಳ ಬಿಡಿಸಿದರು. ಸದರಿಯವರೆಲ್ಲರೂ ಹೊಡೆದು ಹೋಗುವಾಗ ಮಗನೇ ಇವತ್ತು ಉಳಕೊಂಡಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವದಿಂದ ಹೊಡೆದು ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡು, ಮನೆಯಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 16/03/2021 ರಂದು ಅಜರ್ಿ ನೀಡುತ್ತಿದ್ದೇನೆ. ಕಾರಣ ನನಗೆ ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಆಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 20/2021 ಕಲಂ, 143, 147, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:- 50/2019 ಕಲಂ.379 ಐಪಿಸಿ ಸಂಗಡ 44(1),ಕೆಎಮ್ ಎಮ್ಸಿಆರ್ 1994 : ಇಂದು ದಿನಾಂಕ:16-03-2021 ರಂದು 10 ಎ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ವಿಠ್ಠಲ ತಂದೆ ತುಕ್ಕಪ್ಪ ಬಂದಾಳ ವಯಾ:38 ವರ್ಷ ಕಂದಾಯ ನೀರಿಕ್ಷಕರು ಕಕ್ಕೇರಾ ಇವರು ಒಂದು ಮರಳು ತುಂಬಿದ ಟ್ಯಾಕ್ಟರದೊಂದಿಗೆ ಠಾಣೆಗೆ ಬಂದು ದೂರ ಸಲ್ಲಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:15-03-2021 ರಂದು ರಾತ್ರಿ 10 ಗಂಟೆಗೆ ಸುಮಾರಿಗೆ ಸುರಪೂರ ತಹಸೀಲ್ದಾರ ಸಾಹೇಬರಾದ ಶ್ರೀ ಸುಬ್ಬಣ್ಣ ಜಮಖಂಡಿ ಇವರು ಬರಲು ಹೇಳಿದ ಪ್ರಕಾರ ನಾನು ಸುರಪೂರ ತಹಸೀಲ ಕಾರ್ಯಲಯಕ್ಕೆ ಬರಲು ತಹಸೀಲ್ದಾರ ಸಾಹೇಬರಾದ ಶ್ರೀ ಸುಬ್ಬಣ್ಣ ಜಮಖಂಡಿ ಸಾಹೇಬರು ನನಗೂ ಮತ್ತು ತಮ್ಮ ಸಂಗಡ ಹಾಜರಿದ್ದ ಶ್ರೀ ಗುರುಬಸಪ್ಪ ಪಾಟೀಲ ಕಂದಾಯ ನೀರಿಕ್ಷಕರು ಸುರಪೂರ ಹಾಗೂ ಶ್ರೀ ಶಿವಕುಮಾರ ಗ್ರಾಮ ಲೇಖ ಪಾಲಕರು ತಿಂಥಣಿ ಮೂವರಿಗೂ ವಿಷಯ ತಿಳಿಸಿದ್ದೆನೆಂದರೆ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿ ತೀರದಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ ಸರಕಾರದಿಂದ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ತುಂಬಿಕೊಂಡು ಹುಣಸಿಹೊಳೆ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಇದ್ದು ದಾಳಿ ಕುರಿತು ಹೋಗೊಣ ನಡೆಯಿರಿ ಅಂತಾ ತಿಳಿಸಿದಾಗ ತಹಸೀಲ್ದಾರ ಸಾಹೇಬರೊಂದಿಗೆ ತಹಸೀಲ ಕಾಯರ್ಾಲಯದ ಜೀಪ ನಂಬರ ಕೆಎ-33 ಜಿ 0233 ನೇದ್ದರಲ್ಲಿ ಕುಳಿತುಕೊಂಡಿದ್ದು ಜೀಪ ಚಾಲಕನಾದ ಹಣಮಂತ ಈತನು ಜೀಪನು ನಡೆಸುತ್ತಿದ್ದನು. ರಾತ್ರಿ ಸಮಯದಲ್ಲಿ ಬಂಡೊಳ್ಳಿ, ಶೇಳ್ಳಗಿ ಕಡೆಗೆ ಪೆಟ್ರೊಲಿಂಗ ಮಾಡುತ್ತಾ ಅಂದಾಜು ದಿನಾಂಕ:16/03/2021 ರಂದು 4-45 ಎ.ಎಂ. ಸುಮಾರಿಗೆ ಶಾಂತಪೂರ ಕ್ರಾಸ ಹತ್ತಿರ ಜೀಪ ನಿಲ್ಲಿಸಿ ಕಾಯುತ್ತಾ ನಿಂತುಕೊಂಡಾಗ 5 ಎ.ಎಂ. ಸುಮಾರಿಗೆ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ ನಮ್ಮ ಹತ್ತಿರ ಇದ್ದ ಬ್ಯಾಟರಿ ಟಾರ್ಚ ಬೆಳಕಿನಿಂದ ನೋಡಿ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ತಿಳಿಸಿದಾಗ ಟ್ಯಾಕ್ಟರ ಚಾಲಕನು ಟ್ಯಾಕ್ಟರನ್ನು ನಿಲ್ಲಿಸಿದ್ದು, ಆಗ ತಹಸೀಲ್ದಾರ ಸಾಹೇಬರು ಚಾಲಕನಿಗೆ ಮರಳು ತುಂಬಿದ ಬಗ್ಗೆ ನಿನ್ನ ಹತ್ತಿರ ಪರವಾಣಿಗೆ ಇದೇಯಾ ಎಮ್ ಡಿ ಪಿ ಪಡೆದುಕೊಂಡಿದ್ದಿಯಾ ನೀನ್ನ ಹೆಸರು ಏನು ಅಂತಾ ವಿಚಾರ ಮಾಡುತ್ತಿರುವಾಗ ಅವನು ನನ್ನ ಹತ್ತಿರ ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ಟ್ಯಾಕ್ಟರ ಇಳಿದು ಓಡಿ ಹೋದನು. ಅಗ ತಹಸೀಲ್ದಾರ ಸಾಹೇಬರು ನಾವು ಪರೀಶಿಲಿಸಿ ನೋಡಲು ಒಂದು ಮಹೇಂದ್ರ ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-33 ಟಿಎ-4923 ನೇದ್ದು ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ ಸದರಿ ಟ್ಯಾಕ್ಟರ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರು ಮರಳು ತುಂಬಿದ್ದು ಅದರ ಅಂದಾಜು ಕಿಮತ್ತು 1600/-ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಡೈವರನ ಹೆಸರು ವಿಳಾಸ ಗೊತ್ತಿರುವದಿಲ್ಲ ಅವನನ್ನು ನೋಡಿದಲ್ಲಿ ಗುರುತಿಸುತ್ತೆವೆ. ಸದರಿ ಟ್ಯಾಕ್ಟರನ್ನು ಕಂದಾಯ ನಿರೀಕ್ಷರಾದ ಶ್ರೀ ಗುರುಬಸಪ್ಪ ಸರ್ ಇವರ ಮುಖಾಂತರ ಇಂದು ದಿನಾಂಕ:16/03/2021 ರಂದು 10 ಎ.ಎಂ.ಕ್ಕೆ ಠಾಣೆಗೆ ತಂದ್ದಿದ್ದು ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರು ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯ ಪಾತ್ರದಿಂದ ಸರಕಾರಕ್ಕೆ ರಾಜಧನ ಕಟ್ಟದೆ ತಮ್ಮ ಟ್ಯಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು ಇರುತ್ತದೆ.ಟ್ಯಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ತಮಗೆ ಮರಳು ತುಂಬಿದ ಟ್ಯಾಕ್ಟರ ಒಪ್ಪಿಸಿ ದೂರು ಸಲ್ಲಿಸಿದ್ದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾನೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ್ ಠಾಣೆ:- ಯು.ಡಿ.ಆರ್ ನಂ.03/2021 ಕಲಂ: 174 (ಸಿ) ಸಿ.ಆರ್.ಪಿ.ಸಿ : ದಿನಾಂಕ 15.03.2021 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮೃತಳು ತನ್ನ ಮನೆಯಲ್ಲಿ ಯಾವೂದೋ ಔಷಧ ಕುಡಿದು ಉಪಚಾರಕ್ಕಾಗಿ ಗುರುಮಠಕಲ್ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಯಾದಗಿರಿಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಿರುವಾಗ ನಿನ್ನೆ ದಿನಾಂಕ 15.03.2021 ರಂದು ರಾತ್ರಿ 11:40 ಗಂಟೆಗೆ ಉಪಚಾರ ಫಲಿಸದೇ ಮೃತ ಪಟ್ಟಿದ್ದು ನನ್ನ ಮಗಳ ಮರಣದಲ್ಲಿ ಸಂಶಯ ಕಂಡುಬರುತ್ತಿದ್ದು. ಅಂತ ಪಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ಯು.ಡಿ.ಆರ್. ನಂಬರ 03/2021 ಕಲಂ: 174(ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.

ಭೀಗುಡಿ ಪೊಲೀಸ್ ಠಾಣೆ ಯಾದಗಿರಿ:- 20/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 16/03/2021 ರಂದು 07.00 ಪಿ.ಎಮ್.ಕ್ಕೆ ಶಿರವಾಳ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 08.10 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 8.45 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1950=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಇತ್ತೀಚಿನ ನವೀಕರಣ​ : 17-03-2021 11:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080