ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/04/2021

ವಡಗೇರಾ ಪೊಲೀಸ್ ಠಾಣೆ :- ಗುನ್ನೆ ನಂ:45/2021 ಕಲಂ: 143,147,504,323,354,506 ಸಂ 149 ಐಪಿಸಿ ಮತ್ತು ಸಂಗಡ ಕಲಂ:3(1)(ಆರ್)(ಎಸ್),(ಡಬ್ಲ್ಯೂ) 2(ತ-ಚಿ) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್ 1989: ಇಂದು ದಿನಾಂಕ: 16/04/2021 ರಂದು 3-00 ಪಿಎಮ್ ಕ್ಕೆ ಶ್ರೀ ಮಲ್ಲಪ್ಪ ತಂದೆ ಭೀಮಪ್ಪ ವ:27, ಜಾ:ಎಸ್.ಸಿ ಮಾದಿಗ, ಉ:ಕೂಲಿ ಸಾ:ಬಬಲಾದ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಬಬಲಾದ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಈಗ ಸುಮಾರು 2 ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ಕಬ್ಬೇರ ಜಾತಿಯ ಮಲ್ಲಪ್ಪನ ತಂಗಿಯ ಜೊತೆ ನನಗೆ ಸಂಬಂದ ಇದೆ ಎಂದು ನಮ್ಮ ಹಿರಿಯರ ಸಮಕ್ಷಮ ನ್ಯಾಯ ಪಂಚಾಯತ ಮಾಡಿ ನಮಗೆ ಬುದ್ದಿ ಮಾತು ಹೇಳಿದ್ದು ಇರುತ್ತದೆ. ಅಂದಿನಿಂದ ಇಂದಿನವರೆಗೆ ನಾನು ಯಾರ ತಂಟೆಗೂ ಹೋಗಿಲ್ಲ. ಅಲ್ಲದೆ ಭಯದ ವಾತಾವರಣದಿಂದ ಸುಮಾರು ಒಂದು ವರ್ಷ ನನ್ನ ಹೆಂಡತಿಯ ತವರು ಮನೆಯಲ್ಲಿ ಇದ್ದೆನು. ಇತ್ತಿಚ್ಚೆಗೆ ನಮ್ಮೂರಿಗೆ ಬಂದು ನನ್ನ ಹೆಂಡತಿ ಮತ್ತು ತಂದೆ-ತಾಯಿಯೊಂದಿಗೆ ಉಪಜೀವನ ಮಾಡುತ್ತಿದ್ದೇನೆ. ಹೀಗಿದ್ದು ದಿನಾಂಕ:09/04/2021 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನನ್ನ ಪಾಡಿಗೆ ಸಂಡಾಸಿಗೆ ಹೋದಾಗ ಕರಿಗೌಡ ಇವರ ಗದ್ದೆ ಹತ್ತಿರ ವಿನಾಕಾರಣ ಆ ಹುಡುಗಿ ಸಲುವಾಗಿ ಬಂದಿದ್ದಿಯಾ ಎಂದು ಅನುಮಾನ ಮಾಡಿ ಹುಡುಗಿಯ ಅಣ್ಣ ಮತ್ತು ಕುಟುಂಬದವರಾದ 1) ಮಲ್ಲಪ್ಪ ತಂದೆ ದೇವಪ್ಪ ಬಡಕಣ್ಣೊರ, 2) ಪಾರ್ವತಿ ಗಂಡ ಮಲ್ಲಪ್ಪ, 3) ನರಸಮ್ಮ ಗಂಡ ದೇವಪ್ಪ, 4) ಚಂದಪ್ಪ ತಂದೆ ಸಣ್ಣ ಬಸಪ್ಪ, 5) ಸಿದ್ದಪ್ಪ ತಂದೆ ಸಣ್ಣ ಬಸಪ್ಪ ಮತ್ತು 6) ಸಿದ್ದಪ್ಪ ತಂದೆ ಸಾಬಣ್ಣ ಜಾ:ಕಬ್ಬಲಿಗ ಒಂದೆ ಕುಟುಂಬದವರಿದ್ದು, ಇವರ ಪೈಕಿ ಮಲ್ಲಪ್ಪ ತಂದೆ ದೇವಪ್ಪ ಏಕಾ ಏಕಿ ನನ್ನ ಬಳಿ ಬಂದು ಲೇ ಹಸಿ ಮಾದಿಗ ಸೂಳೆ ಮಗನೆ ಎಂದು ಅವಾಚ್ಯ ಬೈದು ನೀನು ನನ್ನ ತಂಗಿಯ ಸಲುವಾಗಿ ಸಂಡಾಸ ನೆಪ್ ಮಾಡಿ ಬಂದಿದ್ದಿಯಾ ಭೊಸುಡಿ ಮಗನೆ ರಂಡಿ ಮಗನೆ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಾ ನನಗೆ ಹಿಗ್ಗಾ ಮುಗ್ಗಾ ಹೊಡೆದು ಈಗ ಹೊಡೆದಿದ್ದಿನಿ ಏನು ಮಾಡ್ತಿಯಾ ಮಾಡ್ಕೊ ಹೊಗಲೇ ಎಂದನು. ನಾನು ಹೊಡಿಬೇಡ ನಾನು ಸಂಡಾಸಿಗೆ ಬಂದಿದ್ದಿನಿ ಎಂದು ಅವರ ಚಿಕ್ಕಮ್ಮ ಮತ್ತು ಇತರರ ಎದರು ಬೇಡಿಕೊಂಡರು ಮನಸೋ ಇಚ್ಚೆ ಹೊಡೆದಿರುತ್ತಾನೆ. ಉಳಿದವರು ಕೂಡಾ ನನಗೆ ಕೈಯಿಂದ ಹೊಡೆದರು. ನಾನು ಆತನಲ್ಲಿ ಅಂಗಲಾಚಿ ಬೇಡಿಕೊಂಡರು ನನಗೆ ಬಾಯಿಗೆ ಬಂದ ಹಾಗೆ ಬೈದು ಮೇಲ್ಕಂಡವರೆಲ್ಲರೂ ಹೊಡೆದಿರುತ್ತಾರೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಯಾವುದೇ ದುರುದ್ದೇಶ ಹೊಂದಿಲ್ಲ. ಆದ್ದರಿಂದ ತಾವು ದಯಮಾಡಿ ನನಗೆ ಹಸಿ ಮಾದಿಗ ಎಂದು ಬಾಯಿಗೆ ಬಂದ ಹಾಗೆ ಬೈದು ಮನಸೋ ಇಚ್ಛೆ ಹೊಡೆದು ಹಲ್ಲೆ ಮಾಡಿರುವ ಮೇಲ್ಕಂಡವರ ಮೇಲೆ ಜಾತಿ ನಿಂದನೆ ಕೇಸ್ ಹಾಕಬೇಕು. ಹಾಗೂ ನನಗೆ ಕೊಲೆ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಆಗ ಅಲ್ಲಿಯೇ ಹೊಲದ ಕಡೆಯಿಂದ ಬರುತಿದ್ದ ನಮ್ಮ ತಾಯಿ ಯಲ್ಲಮ್ಮ ಮತ್ತು ನಮ್ಮಣ್ಣ ಸಿದ್ದಪ್ಪ ಇವರು ಬಂದು ನನಗೆ ಹೊಡೆಯುವುದು ಬಿಡಿಸಿರುತ್ತಾರೆ. ಆಗ ನಾನು ಅಲ್ಲಿಂದ ಆಸ್ಪತ್ರೆಗೆ ಉಪಚಾರಕ್ಕೆ ಅಂತಾ ಹೋದೆನು. ನಂತರ ಸಾಯಂಕಾಲ 7 ಗಂಟೆ ಸುಮಾರಿಗೆ ಮಲ್ಲಪ್ಪ ತಂದೆ ದೇವಪ್ಪ ಮತ್ತು ಪಾರ್ವತಿ ಗಂಡ ಮಲ್ಲಪ್ಪ ಬಡಕಣ್ಣೊರ ಇಬ್ಬರೂ ಪುನಃ ನಮ್ಮ ಮನೆಗೆ ಬಂದು ನನ್ನ ಹೆಂಡತಿ ಶರಣಮ್ಮ ಇವಳಿಗೆ ಕೂಡಾ ಅವಾಚ್ಯ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ. ನಾನು ಆಸ್ಪತ್ರೆಯಿಂದ ಮನೆಗೆ ಬಂದ ನಂತರ ನನ್ನ ಹೆಂಡತಿ ನಡೆದ ಘಟನೆ ಬಗ್ಗೆ ನನಗೆ ಹೇಳಿರುತ್ತಾಳೆ. ಕಾರಣ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನಗೆ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡಬೆಕೆಂದು ಮಾನ್ಯರವರಲ್ಲಿ ಈ ಮೂಲಕ ವಿನಂತಿಸುತ್ತೇನೆ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2021 ಕಲಂ: 143,147,504,323,354,506 ಸಂ 149 ಐಪಿಸಿ ಮತ್ತು ಸಂಗಡ ಕಲಂ: 3(1)(ಆರ್)(ಎಸ್),(ಡಬ್ಲ್ಯೂ) 2(ತ-ಚಿ) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್ 1989 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ :- 59/2021 ಕಲಂ. 379, 504. 506 ಐಪಿಸಿ : ಇಂದು ದಿನಾಂಕ. 15.04.2021 ರಂದು ಸಾಯಂಕಾಲ ಗಂಟೆಗೆ ಶ್ರೀ ವೆಂಕಟರೆಡ್ಡಿ ತಂದೆ ಮಲ್ಲಿಕಾಜರ್ುನ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಸೈದಾಪ ಇಂದು ದಿನಾಂಕ. 15.04.2021 ರಂದು ಸಾಯಂಕಾಲ 4.00 ಗಂಟೆಗೆ ಶ್ರೀಮತಿ ನಿರ್ಮಲಾದೇವಿ ಗಂಡ ಬಸವರಾಜ ಶಂಕಿನಮಠ ವಯ|| 42 ವರ್ಷ, ಜಾ|| ಜಂಗಮ ಉ|| ಮನೆಕೆಲಸ ಸಾ|| ಕಾಳೇಬೆಳಗುಂದಿ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಬಂದು ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ. 14.04.2021 ರಂದು ರಾತ್ರಿ 10.00 ಗಂಟೆಗೆ ನಾನು, ನನ್ನ ಗಂಡ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿ ಊಟಮಾಡಿಕೊಂಡು ಊಟವಾದ ನಂತರ ಮನೆಯಲ್ಲಿ ಕುದಿಯಾದ ಕಾರಣ ನಾವೆಲ್ಲರೂ ಮನೆಯ ಮಾಳಿಗೆ ಮೇಲೆ ಹೋಗಿ ಮಲಗಿಕೊಂಡಿರುತ್ತೇವೆ. ರಾತ್ರಿ 12.00 ನನ್ನ ಮಗ ಅಭಿಲಾಷ ಮೊಬೈಲದಲ್ಲಿ ಐ.ಪಿ.ಎಲ್. ಮ್ಯಾಚ್ ನೋಡಿ ಮಲಗಿಕೊಂಡಿದ್ದು, ರಾತ್ರಿ 2.30 ಗಂಟೆ ಸುಮಾರಿಗೆ ಮಳೆ ಗಾಳಿ ಬಿಟ್ಟಿದ್ದರಿಂದ ನಾವೆಲ್ಲರು ಎದ್ದಾಗ ಕತ್ತಲಿದ್ದ ಕಾರಣ ಬ್ಯಾಟರಿ ಹಾಕಲು ತಲೆದಿಂಬಿನ ಹತ್ತಿರ ಇಟ್ಟಿದ್ದ ಮೊಬೈಲಗಳನ್ನು ಹುಡುಕಾಡಿದಾಗ 2 ಮೊಬೈಲಗಳು ಇರಲಿಲ್ಲ. ಕತ್ತಲಿನಲ್ಲಿ ಎಲ್ಲಿಯೋ ಬಿದ್ದಿರಬೇಕು ಅಂತ ಸುಮ್ಮನಿದ್ದೆವು. ಬೆಳಿಗ್ಗೆ 7.00 ಗಂಟೆ ಸುಮಾರಿಗೆ ನಮ್ಮ ಮೊಬೈಲಗಳಿಗೆ ನಮ್ಮ ಮೈದುನ ವಿಶ್ವನಾಥ ತಂದೆ ಅಡಿವಯ್ಯ ಇವರ ಮೊಬೈಲದಿಂದ ನಮ್ಮ ಮೊಬೈಲಗೆ ಕಾಲ ಮಾಡಿದಾಗ ಯಾರೋ ಫೋನ ಎತ್ತಿ ನನ್ನ ಮೈದುನನಗೆ ಯಾರೋ ನೀನು ನಾನು ಆ ಮನೆಯ ಮುದುಕನ್ನ, ಮತ್ತು ಅವರ ಮಗ ಮತ್ತು ಮಗಳನ್ನು ಖಲಾಸ ಮಾಡಲು ಬಂದಿದ್ದೇ ಯಾಕೋ ಮನಸ್ಸು ಬರಲ್ಲಿಲ್ಲ. ಮೊಬೈಲ ಎತ್ತಿಕೊಂಡು ಬಂದಿದ್ದೇನೆ. ಇನ್ನೂ 8 ದಿನದ ಒಳಗಾಗಿ ಅವರನ್ನ ಖಲಾಸ ಮಾಡುತ್ತೇನೆ. ಅವರಿಗೆ ಖಲಾಸ ಮಾಡಲು ನನಗೆ ಒಂದು ಲಕ್ಷ ರೂಪಾಯಿ ಕೊಡುತ್ತಾರೆ ಅಂತ ಬೆದರಿಕೆ ಹಾಕಿ ಫೋನ ಕಟ ಮಾಡಿದನು. ದಿನಾಂಕ. 15.04.2021 ರಂದು ಮಧ್ಯರಾತ್ರಿ 1.00 ಗಂಟೆಯಿಂದ. 2-30 ಗಂಟೆಯ ಅವಧಿಯಲ್ಲಿ ಯಾರೊ ಕಳ್ಳ ನಮ್ಮ 2 ರೆಡಮಿ ಮೊಬೈಲಗಳು ಅ.ಕಿ. 9,000/- ರೂ. ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮೊಬೈಲದಲ್ಲಿ ಕೊಲೆ ಬೆದರಿಕೆ ಹಾಕಿದ ಕಳ್ಳನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಾರಾಂಶ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :- 60/2021 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 16-04-2021 ರಂದು ರಾತ್ರಿ 07-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ರೇಣುಕಾ ವೈನ್ ಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತರಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವರಿಂದ ನಗದು ಹಣ 25600=00 ರೂಪಾಯಿಗಳು, ಎರಡು ಮಟಕಾ ಬರೆದ ಚೀಟಿ ಎರಡು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತರನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.60/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ ಠಾಣೆ:- ಗುನ್ನೆ ನಂ 50/2021 ಕಲಂ: 143,147,323,324,504,506 ಸಂಗಡ 149 ಐಪಿಸಿ: ಇಂದು ದಿನಾಂಕ 16.04.2021 ರಂದು ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಮಾನಮ್ಮ ಗಂಡ ಬಲಭೀಮ ಕಂದಗಲ ವಯಾ|| 28 ಜಾ|| ಯಾದವ ಉ|| ಕೂಲಿಕೆಲಸ ಸಾ|| ಮಂಗಳೂರು ತಾ|| ಸುರಪುರ ಹಾ||ವ|| ಗೋಡ್ರಿಹಾಳ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ತವರು ಮನೆಯು ಗೋಡ್ರಿಹಾಳ ಗ್ರಾಮವಾಗಿದ್ದು ನನಗೆ ಮಂಗಳೂರು ಗ್ರಾಮದ ಬಲಭೀಮ ತಂದೆ ಬಾಲಪ್ಪ ಕಂದಗಲ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಸದ್ಯ ನನಗೆ ಭೂಮಿಕಾ ಅನ್ನುವ 6 ವರ್ಷದ ಹೆಣ್ಣು ಮಗಳು ಹಾಗು ಮಾರುತಿ ಅನ್ನುವ 3 ವರ್ಷದ ಗಂಡು ಮಗನಿರುತ್ತಾನೆ. ಮದುವೆಯಾದ ಸುಮಾರು 5 ವರ್ಷಗಳವರೆಗೆ ನಾನು ಹಾಗು ನನ್ನ ಗಂಡ ಇಬ್ಬರೂ ಚೆನ್ನಾಗಿದ್ದೇವು ನಂತರದ ದಿನಗಳಲ್ಲಿ ನನ್ನ ಗಂಡ ಹಾಗು ಅತ್ತೆ ಮಾವ ಮತ್ತು ಮೈದುನರು ಬಹಾಳ ತೊಂದರೆ ಕೊಡುತ್ತಿದ್ದರಿಂದ ನಾನು ಹಾಗು ನನ್ನ ಗಂಡ ಇಬ್ಬರೂ ಸುಮಾರು ಎರಡು ವರ್ಷಗಳಿಂದ ಬೇರೆ ಬೇರೆಯಾಗಿ ಸಂಸಾರ ಮಾಡಿಕೊಂಡು ಇರುತ್ತೇವೆ. ಹೀಗಿದ್ದು ದಿನಾಂಕ 13.04.2021 ರಂದು ನಾನು ನಮ್ಮ ತಾಯಿಯಾದ ಲಕ್ಷ್ಮೀಬಾಯಿ ಹಾಗು ನಮ್ಮ ಇತರೆ ಸಂಬಂದಿಕರು ಸೇರಿ ಮಂಗಳುರು ಗ್ರಾಮದ ದ್ಯಾವಮ್ಮದೇವಿಯ ಗುಡಿಯಲ್ಲಿ ಮಕ್ಕಳ ಜವಳ ಕಾರ್ಯಕ್ರಮ ಇಟ್ಟುಕೊಂಡಿದ್ದು ಇರುತ್ತದೆ. ಹೀಗಿದ್ದು 12.15 ಪಿಎಮ್ ಸುಮಾರಿಗೆ ನಾವು ಕಾರ್ಯಕ್ರಮ ಮಾಡುತ್ತಿದ್ದಾಗ ನನ್ನ ಗಂಡನಾದ 1] ಬಲಭೀಮ ತಂದೆ ಬಾಲಪ್ಪ ಕಂದಗಲ ಮಾವನಾದ 2] ಬಾಲಪ್ಪ ತಂದೆ ಭೀಮರಾಯ ಕಂದಗಲ ಅತ್ತಿಯಾದ 3] ಭಾಗಮ್ಮ ಗಂಡ ಬಾಲಪ್ಪ ಕಂದಗಲ ಮೈದುನನಾದ 4] ಭೀಮರಾಯ ತಂದೆ ಬಾಲಪ್ಪ ಕಂದಗಲ ನಾದನಿಯಾದ 5] ದೇವಮ್ಮ ಗಂಡ ದೇವಪ್ಪ ತಾಳಿಕೋಟಿ ಇನ್ನೊಬ್ಬ ನಾದಿನಿಯಾದ 6] ರೇಣುಕಾ ಗಂಡ ಅಂಬ್ರೀಶ ಹಾಗು ನಮ್ಮ ಮಾವನ ತಮ್ಮನಾದ 7] ದಶರಥ ತಂದೆ ಭೀಮರಾಯ ಕಂದಗಲ ಹಾಗು ಅವರ ಮಗ 8] ಮಂಜಪ್ಪ ತಮದೆ ದಶರಥ ಕಂದಗಲ ಈ ಎಲ್ಲಾ ಜನರು ಸೇರಿ ನಾವು ಕಾರ್ಯಕ್ರಮ ಮಾಡುವ ಗುಡಿಗೆ ಬಂದು ಏನಲೆ ರಂಡಿ ನಮ್ಮ ಊರಿನಿಂದ ಹೋದವಳು ಮತ್ತೆ ನಮ್ಮ ಊರಿಗೆ ಯಾಕೇ ಬಂದಿದಿ ಅಂತ ಬೈಯುತ್ತಿದ್ದಾಗ ಯಾಕೆ ಸುಮ್ಮನೇ ಬೈಯುತ್ತಿ ಅಂತ ಅಂದಾಗ ಏನಲೆ ರಂಡಿ ನಮಗೆ ಎದುರು ಮಾತನಾಡುತ್ತೀಯಾ ಅಂತ ಎಲ್ಲರು ಅವಾಚ್ಯವಾಗಿ ಬೈಯುತ್ತಾ ನನಗೆ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನನ್ನ ಗಂಡನು ನನಗೆ ಕಲ್ಲಿನಿಂದ ಬೆನ್ನಿಗೆ ಹಾಗು ಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ತಾಯಿಯಾದ ಲಕ್ಷ್ಮೀಬಾಯಿ ಗಂಡ ಭೀಮರಾಯ ಪೂಜಾರಿ ಇವಳು ಬಿಡಿಸಿಕೊಳ್ಳಲು ಬಂದಾಗ ಅವಳಿಗೂ ಸಹ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಬಾಲಪ್ಪ ಕಂದಗಲ ಈತನು ನನ್ನ ತಾಯಿಗೆ ಅಲ್ಲಿಯೇ ಬಿದ್ದ ಕಲ್ಲಿನಿಂದ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ನಂತರ ನಾವಿಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಮಲ್ಲಮ್ಮ ಗಂಡ ಹಣಮಂತ ಹರಿಜನ ಹಾಗು ಮಾನಮ್ಮ ಗಂಡ ಬಸಪ್ಪ ಹರಿಜನ ಇವರು ಬಂದು ಬಿಡಿಸಿಕೊಂಡರು ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಸೂಳಿಯರೇ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಸದ್ಯ ನಮ್ಮ ತಾಯಿಯವರು ತಾಲೂಕಾ ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ನಾನು ನಮ್ಮ ಜನಾಂಗದ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ 08 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 50/2021 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ:- ಗುನ್ನೆ ನಂ, 51/2021 ಕಲಂ: 87 ಕೆಪಿ ಆಕ್ಟ : ಇಂದು ದಿನಾಂಕ: 16.04.2021 ರಂದು ಕೂಡಲಗಿ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಸ್ಥಳಕ್ಕೆ ಹೋಗಿ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 04.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 07 ಜನ ಆರೋಪಿತರು ಸಿಕ್ಕಿದ್ದು ಮತ್ತು ಒಟ್ಟು 6550/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 05.30 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 07.00 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 51/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ:- 52/2021 ಕಲಂ:143.147.148.323,324.326,307,354,504,506 ಸಂಗಡ 149 ಐಪಿಸಿ: ಇಂದು ದಿನಾಂಕ 16.04.2021 ರಂದು 8.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ನಂದಿನಿ ಗಂಡ ಶಂಕ್ರಪ್ಪ ಸಾ|| ಮಾವಿನವ್ಮಟ್ಟಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿನಾಂಕ 14.04.2021 ರಂದು 12.30 ಪಿಎಮ್ಕ್ಕೆ ಅಂಬ್ಭೆಡ್ಕರ ಜಯಂತಿ ಆಚರಣೆ ವೇಳೆ ಆರೋಪಿತರು ಅವಾಚ್ಯವಾಗಿ ಬೈಯುತ್ತಾ ನಮ್ಮನ್ನು ಬಿಟ್ಟು ಅಂಬೇಡ್ಕರ ಜಯಂತಿ ಮಾಡುತ್ತೀರಾ ಬೈಯುತ್ತಾ ಪಿರ್ಯಾದಿ ಅತ್ತೆಗೆ ಕಬ್ಬಿಣದ ರಆಡಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ ಸೀರೆ ಹಿಡಿದು ಜಗ್ಗಾಡಿ ಎಲ್ಲರು ಸೇರಿ ಹ್ರೆಟ್ಟೆ ಬೆನ್ನು ಎದೆಗೆ ಒದ್ದು ಜೀವದ ಬೆದರಿಕೆ ಹಾಕಿದ್ದು ಸದರಿ 6 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 52/2021 ಕಲಂ 143, 147, 148, 323, 324, 326, 307, 354, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ ಠಾಣೆ:- ಯು.ಡಿ.ಆರ್ ನಂ. 11/2021: ಕಲಂ174 ಸಿ.ಆರ್.ಪಿ.ಸಿ: ಇಂದು ದಿನಾಂಕ: 16/04/2021 ರಂದು 5:00 ಪಿಎಮ್ ಕ್ಕೆ ಶ್ರೀಮತಿ ತಾಯಮ್ಮ ಗಂಡ ಭೀಮಣ್ಣ ಬಾಗ್ಲಿ ಸಾ: ಶಿವನೂರು ಠಾಣೆಗೆ ನೀಡಿದ ಸಾರಾಂಶದ ಮೇಲಿಂದ ನನ್ನ ಗಂಡು ಸುಮಾರು 4-5 ತಿಂಗಳಿಂದ ರಸ್ತೆ ಅಪಘಾತದಲ್ಲಿ ಎರಡು ಕಾಲಿನ ಮೊಳಕಾನಿನ ಕೆಳಗೆ ಹಳೆಯ ಸುಟ್ಟ ಸಣ್ಣ ಪುಟ್ಟ ಗಾಯಳಾಗಿದ್ದು ನನ್ನ ಗಂಡನು ಅದೇ ವಿಚಾರವಾಗಿ ದಿನಾಲು ಸೆರೆ ಕುಡಿಯು ಅಭ್ಯಾಸ ಮಾಡಿಕೊಂಡಿದ್ದು ಹೀಗಿದ್ದು ದಿನಾಂಕ:15/04/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ವಿಪರೀತ ಸೆರೆ ಕುಡಿದು ಮನಗೆ ಬಂದು ಮನೆಯಲ್ಲಿ ನಮ್ಮ ಜೊತೆ ಊಟ ಮಾಡಿ ರಾತ್ರಿ 10-30 ಗಂಟೆ ಸುಮಾರಿಗೆ ಮಲಗಿಕೊಂಡಾಗ ನನ್ನ ಗಂಡ ಭೀಮಣ್ಣ ಬೆಳಗಾಗುವಷರಲ್ಲಿಯೇ ಮೃತಪಟ್ಟಿರುತಾನೆ. ಮೃತನ ಮರಣದಲ್ಲಿ ನಮಗೆ ಯಾರ ಮೇಲೆ ಯಾವುದೇ ರೀತಯ ಫಿರ್ಯಾದಿ - ಸಂಶಯ ವೈರ್ಯಾಗ ಇರುವುದಿಲ್ಲ ಎಂದು ಮುಂದಿನ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 11/2021 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 17-04-2021 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ