ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/02/2021

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 02/2021 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ : ಈ ಮೂಲಕ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ನಾನು ಭಗವಾನ್ಎ.ಎಸ್.ಐ. ಸುರಪೂರ ಪೊಲೀಸ ಠಾಣೆ, ಸರಕಾರಿತಪರ್ೆ ಫಿರ್ಯಾದಿ ನೀಡುವುದೆನೆೆಂದರೆ, ಇಂದು ದಿನಾಂಕ: 17/02/2021 ರಂದು 3 ಪಿ.ಎಂ. ಸುಮಾರಿಗೆ ಹಳ್ಳಿ ಬೇಟಿಕುರಿತು ಶಾಖಾಪೂರಗ್ರಾಮಕ್ಕೆ ಬೀಟ್ ಸಿಬ್ಬಂದಿಯಾದ ಹೊನ್ನಪ್ಪ ಸಿಪಿಸಿ-427 ರವರನ್ನು ಸಂಗಡಕರೆದುಕೊಂಡು ಶಾಖಾಪೂರಗ್ರಾಮಕ್ಕೆ ಬೇಟಿ ನೀಡಿದ ಸಮಯದಲ್ಲಿಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನುರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿಕಲ್ಲು ಹಿಡಿದುಕೊಂಡುಇವತ್ತುಧಮ್ಮಿದ್ದರೆ ನನ್ನ ಹತ್ತಿರ ಬನ್ನಿ ಅಂತಾಅನ್ನುತ್ತಾ, ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾಗ್ರಾಮದಲ್ಲಿಗುಂಡಾಗಿರಿ ವರ್ತನೆ ಪ್ರದಶರ್ಿಸಿ, ಗ್ರಾಮದಜನರಿಗೆಕಿರಕಿರಿ ಮಾಡುತ್ತಿದ್ದು, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಶಾಖಾಪೂರಗ್ರಾಮದಲ್ಲಿಕಿರಿಕರಿ ಮಾಡಿಗ್ರಾಮದ ಶಾಂತತೆಗೆ ಭಂಗಉಂಟು ಮಾಡುವ ಸಾದ್ಯತೆಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡುಠಾಣೆಗೆತಂದಿದ್ದುಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗಉಂಟು ಮಾಡುವ ಸಾದ್ಯತೆಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾಕ್ರಮದಅಡಿಯಲ್ಲಿಕ್ರಮಜರೂಗಿಸುವಕುರಿತು ಸರಕಾರದತಪರ್ೆಯಾಗಿಠಾಣೆ ಪಿ.ಎ.ಆರ್ ನಂ. 02/2021 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣದಾಖಲು ಮಾಡಿ ಬಂಧನಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 11/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 17/02/2021 ರಂದು 6:10 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು, ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ತಾವು ಠಾಣೆಯಲ್ಲಿ ಇದ್ದಾಗ 5:00 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 11/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 8:15 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1120/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ಜಗಧೀಶ ತಂದೆ ಅಂಬ್ರಪ್ಪ ಆನಂದಗಲ್ ವಯ:36 ವರ್ಷ, ಜಾ:ಹಿಂದೂ ರೆಡ್ಡಿ, ಉ:ವ್ಯಾಪಾರ, ಸಾ:ನಾರಾಯಣಪೂರ ತಾ:ಹುಣಸಗಿ, ಜಿ:ಯಾದಗಿರಿ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ.06/2021 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 17/02/2021 ರಂದು 11:30 ಎ..ಎಂ ಕ್ಕೆ ಪಿರ್ಯಾದಿ ಅಂಬ್ರೇಶ ತಂದೆ ಮಲ್ಲೇಶ ವ|| 28 ವರ್ಷ ಉ|| ವ್ಯಾಪಾರ ಜಾ|| ಬುಡ್ಗಜಂಗಮ ಸಾ|| ಆಶ್ರಯ ಕಾಲೋನಿ ಇದ್ದು, ನನಗೆ ನಾಲ್ಕು ಜನ ಮಕ್ಕಳಿದ್ದು 1] ಅಂಜಲಿ ವ|| 10 ವರ್ಷ, 2] ಶ್ರೀಕಾಂತ ವ|| 8 ವರ್ಷ, 3] ಹರಿಶ ವ|| 6 ವರ್ಷ, 4] ರುದ್ರಪ್ಪ ವ|| 4 ವರ್ಷ ರವರಿದ್ದು, ವ್ಯಾಪಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದು. ಹೀಗಿದ್ದು ದಿನಾಂಕ 17/02/2021 ರಂದು 10:30 ಎ.ಎಂ ಕ್ಕೆ ನಾನು ಮನೆಯಲ್ಲಿದ್ದಾಗ ನನ್ನ ಮಗ ಶ್ರೀಕಾಂತನಿಗೆ ಪ್ಯಾನಿನ ಸ್ವೀಚ್ ಹಾಕಲು ತಿಳಿಸಿದ್ದು, ಸದರಿ ಶ್ರೀಕಾಂತನು ಪ್ಯಾನಿನ ಸ್ವೀಚ್ ಹಾಕಲು ತಿಳಿಸಿದ್ದು ಸದರಿ ಶ್ರೀಕಾಂತನು ಸ್ವೀಚ ಹಾಕಲು ಹೋದಾಗ, ಒಮ್ಮಿ ದೋಮ್ಮಲಿಗೆ ಕರೇಂಟ್ ಶಾಕ್ ಹೋಡೆದು ಕೇಳಗೆ ಬಿದ್ದನ, ಕೂಡಲೇ ನಾನು ಮತ್ತು ಬಸವರಾಜ ಹೋಸಮನಿ, ಮಾಹದೇವಪ್ಪ ಕುಚುರೋಡ ಇವರೋಂದಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಶಹಾಪೂರಕ್ಕೆ ಕರೆದುಕೊಂಡು ಬಂದು, ಸೇರಿಕೆ ಮಾಡಿದ್ದು, ಅಂದಾಜು ಸಮಯ 10:50 ನನ್ನ ಮಗನ್ನು ನೋಡಿದ ವೈದ್ಯಾದೀಕಾರಿಗಳು ಉಪಚಾರ ಕುರಿತು ಆಸ್ಪತ್ರೆಗೆ ಬರುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ಕಾರಣ ನನ್ನ ಮಗ ಶ್ರೀಕಾಂತ ತಂಧೆ ಅಂಬ್ರೇಶ ಈತನು ಮನೆಯಲ್ಲಿ ಪ್ಯಾನಿನ ಸ್ವೀಚ ಹಾಕಲು ಹೋದಾಗ ಆಕಸ್ಮಿಕವಾಗಿ ಕರೆಂಟ ಶಾಖ್ ಹೋಡಿದು ಉಪಚಾರ ಕುರಿತು ಆಸ್ಪತ್ರೆ ಹೋಗುವಾಗ ಮೃತಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ, ದೂರು ಇರುವದಿಲ್ಲಾ ಅಂತಾ ಭೀಮರಾಯ ತಂದೆ ಹಣಮಂತ ಇವರ ಕೈಯಿಂದ ಹೇಳಿ ಬರೆಯಿಸಿ ಹೇಳಿಕೆ ನಿಜವಿರುತ್ತದೆ ಮುಂದಿನ ಕ್ರಮ ಕೈಗೊಳ್ಳಲು ವಿನಂತಿ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 06/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 18/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 17.02.2021 ರಂದು ಸಮಯ ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಕೆಲಸ ಮುಗಿಸಿಕೊಂಡು ಊರಿಗೆ ಹೋಗುವ ಸಲುವಾಗಿ ಬೆಟ್ಟದಳ್ಳಿ ಗ್ರಾಮದ ಜೀಪ್ಗಳು ನಿಲ್ಲುವ ಜಾಗದಲ್ಲಿ ನಿಂತಿದ್ದಾಗ ಗಾಯಾಳು ವಿಜಯಕುಮಾರ ಈತನು ತನ್ನ ಮೋಟಾರು ಸೈಕಲ್ ಮೇಲೆ ಹೋಗುತ್ತಿರುವುದನ್ನು ಕಂಡು ಫಿರ್ಯಾದಿ ಕೈ ಸನ್ನೆ ಮಾಡಿ ನಿಲ್ಲಿಸಿ ಊರಿಗೆ ತನಗೂ ಕೂಡ ಕರೆದುಕೊಂಡು ಹೋಗುವಂತೆ ಕೇಳಿಕೊಂಡು ಆತನ ಮೋಟಾರು ಸೈಕಲ್ನ ಹಿಂಬದಿಯ ಶೀಟ್ನಲ್ಲಿ ಕುಳಿತು ಗುರುಮಠಕಲ್ದಿಂದ ಹೋಗುತ್ತಿದ್ದಾಗ ಸದರಿ ಮೋಟಾರು ಸೈಕಲ್ನ್ನು ಗಾಯಾಳು ವಿಜಯಕುಮಾರ ಈತನು ಚಲಾಸಿತ್ತಿದ್ದನು. ಮಧ್ಯಾಹ್ನ 2:10 ಗಂಟೆಯ ಸುಮಾರಿಗೆ ಗಾಯಾಳು ಮತ್ತು ಫಿರ್ಯಾದಿ ಧರ್ಮಪೂರ ಗೇಟ್ಗಳ ಮಾರ್ಗವಾಗಿ ಬೆಟ್ಟದಳ್ಳಿಗೆ ಹೋಗುತ್ತಿದ್ದಾಗ ಬೆಟ್ಟದಳ್ಳಿ ಕಡೆಯಿಂದ ಆರೋಪಿ ಹಣಮ್ಯಾ ನಾಯಕ ಈತನು ರಸ್ತೆಯ ಇಳಿಜಾರನ್ನು ಲೆಕ್ಕಿಸದೇ ಅಂಕು-ಡೊಂಕಾಗಿ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಗಾಯಾಳುವಿಗೆ ಮೇಲ್ನೋಟಕ್ಕೆ ತರಚಿದ ಸಾದಾ ಸ್ವರೂಪದ ರಕ್ತಗಾಯ ಹಾಗೂ ಭಾರಿ ಸ್ವರೂಪದ ಗುಪ್ತಗಾಯವಾಗಿದ್ದರಿಂದ ಆರೋಪಿ ಮತ್ತು ಫಿರ್ಯಾದಿ ಇಬ್ಬರು ಚಿಕಿತ್ಸೆ ಕುರಿತು ಗುರುಮಠಕಲ್ಗೆ ನಂತರ ಯಾದಗಿರಿ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ ನಂತರ ತಡವಾಗಿ ಠಾಣೆ ಬಂದು ಫಿರ್ಯಾದಿ ನಿಡಿದ ಬಾಯಿ ಮಾತಿನ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 18/2021 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 18-02-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ