ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/03/2021

ನಗರ ಪೊಲೀಸ್ ಠಾಣೆ:- 36/2020 ಕಲಂ: 78(3) ಕೆ.ಪಿ.ಆಕ್ಟ್ : ಇಂದು ದಿನಾಂಕ: 17/03/2021 ರಂದು 4-30 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೆನಂದರೆ ಇಂದು ದಿನಾಂಕ: 17/03/2021 ರಂದು ಸಮಯ ಮಧ್ಯಾಹ್ನ 1-15 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಸಾಯಬಣ್ಣ ಹೆಚ್.ಸಿ 102 ಮತ್ತು ರಾಜಶೇಖರ ಪಿಸಿ 177 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೆನಂದರೆ ಐಕೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 1-30 ಪಿಎಮ್ ಕ್ಕೆ ಹೊರಟು ಸಮಯ 2-05 ಪಿಎಮ್ ಸುಮಾರಿಗೆ ಐಕೂರು ಗ್ರಾಮ ತಲುಪಿ ಐಕೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಬಸ್ ನಿಲ್ದಾಣವನ್ನು ಮರೆಯಾಗಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 2-15 ಪಿಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಂದಯ್ಯ ತಂದೆ ಚನ್ನವೀರಯ್ಯ ಸ್ವಾಮಿ, ವ:53, ಜಾ:ಲಿಂಗಾಯತ, ಉ:ಕೂಲಿ ಸಾ:ಐಕೂರು ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 1060/- ರೂ ಮತ್ತು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 1060/- ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು 6-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 36/2021 ಕಲಂ 78 (3) ಕೆ.ಪಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:- 37/2021 ಕಲಂ: 379 ಐಪಿಸಿ : ಇಂದು ದಿನಾಂಕ: 17/03/2021 ರಂದು 7:45 ಪಿಎಮ್ ಕ್ಕೆ ಶ್ರೀ ಸಂಜೀವ ಕಾವಲಿ ಕಂದಾಯ ನಿರೀಕ್ಷಕರು ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:17/03/2021 ರಂದು 4-30 ಪಿಎಮ್ ಸುಮಾರಿಗೆ ನಾವು ಮತ್ತು ಮಾನ್ಯ ತಹಸೀಲ್ದಾರರು ಕಾರ್ಯಲಯದಲ್ಲಿದ್ದಾಗ ಮಾನ್ಯ ತಹಸೀಲ್ದಾರ ಸಾಹೇಬರಿಗೆ ಕೊಂಕಲ್ ಸೀಮಾಂತರದ ಕೃಷ್ಣಾ ನದಿ ದಡದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ಅವರು ನನಗೆ ಮತ್ತು ವಡಗೇರಾ ಪೊಲೀಸ್ ಠಾಣೆ ಮಹೇಂದ್ರ ಪಿಸಿ 254 ರವರಿಗೆ ಸಂಗಡ ಕರೆದುಕೊಂಡು ಕೋಂಕಲ್ ಸೀಮಾಂತರದ ಕೃಷ್ಣಾ ನದಿ ದಡಕ್ಕೆ ಹೋಗಿ ಮರಳು ಸಾಗಾಣಿಕೆ ಪರಿಶೀಲಿಸುತ್ತಿದ್ದಾಗ ಸಮಯ 5-20 ಪಿಎಮ್ ಸುಮಾರಿಗೆ ಕೃಷ್ಣಾ ನದಿಯಲ್ಲಿ ಒಂದು ಟಿಪ್ಪರ ಇದ್ದದ್ದು ಕಂಡು ಬಂತು. ಸದರಿ ಟಿಪ್ಪರ ಪರಿಶೀಲಿಸಿ, ನೋಡಲಾಗಿ ಟಿಪ್ಪರ ಒಳಗಡೆ ಅಂದಾಜು 20 ಪುಟ್ಟಿಯಷ್ಟು ಮರಳು ತುಂಬಿದ್ದು, ಕಂಡುಬಂತು. ಟಿಪ್ಪರ ನಂಬರ ನೋಡಲಾಗಿ ನೊಂದಣಿ ನಂಬರ ಇರುವುದಿಲ್ಲ. ಚೆಸ್ಸಿ ನಂ. ನೋಡಲಾಗಿ ಒಇಅ2416ಃಏಎಕಔ74108 ಇರುತ್ತದೆ. ಸದರಿ ಟಿಪ್ಪರನಲ್ಲಿ ಮರಳು ತುಂಬಲು ಪ್ರಯತ್ನಿಸುತ್ತಿದ್ದು, ನಾವು ದಾಳಿ ಮಾಡಿದಾಗ ಟಿಪ್ಪರ ಚಾಲಕನು ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಚಾಲಕನಿಗೆ ನೋಡಲಾಗಿ ಗುರುತಿಸುತ್ತೇನೆ. ಸದರಿ ಟಿಪ್ಪರನ್ನು ಬೇರೊಬ್ಬ ಚಾಲಕರ ಸಹಾಯದಿಂದ ಠಾಣೆಗೆ ತಂದು ಹಚ್ಚಲಾಯಿತು. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 37/2021 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀಗುಡಿ ಪೊಲೀಸ್ ಠಾಣೆ:- 21/2021 ಕಲಂ 78(3) ಕೆಪಿ ಯ್ಯಾಕ್ಟ: ಇಂದು ದಿನಾಂಕ 17/03/2021 ರಂದು 03.00 ಪಿ.ಎಮ್.ಕ್ಕೆ ಮದ್ರಕಿ ಗ್ರಾಮದ ವಾಲ್ಮಿಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 04.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1450=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಸುರಪೂರ ಪೊಲೀಸ್ ಠಾಣೆ:- 51/2021 ಕಲಂ: 143, 147, 148, 323, 324, 504, 506 ಸಂ. 149 ಐಪಿಸಿ ಮತ್ತು ಕಲಂ:3(1)(ಆರ್)(ಎಸ್), 3(2)(ಗಿ ಂ) 1989 ಎಸ್ಸಿ/ಎಸ್ಟಿ ಯ್ಯಾಕ್ಟ: ಇಂದು ದಿನಾಂಕ: 17/03/2021 ರಂದು 3 ಪಿ.ಎಂ ಕ್ಕೆ ಠಾಣೆಯಲ್ಲಿದಾಗ ಪಿಯರ್ಾದಿ ಬಸವರಾಜ ತಂದೆ ಪರಮಪ್ಪ ತೆಳಗಿನಮನಿ ವ|| 48 ವರ್ಷ ಜಾ|| ಹೊಲೆಯ ಉ|| ಗ್ರಾಮ ಪಂಚಾಯತ ಕಂಪ್ಯೂರಟ ಆಪರೇಟರ ಸಾ|| ದೇವತ್ಕಲ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಾರಾಂಶವೆನಂದರೆ, ನಾನು ಸುಮಾರು 2006 ನೇ ಸಾಲಿನಿಂದ ದೇವತ್ಕಲ್ ಗ್ರಾಮ ಪಂಚಾಯತಯಲ್ಲಿ ಕ್ಲರ್ಕ ಕಂ ಡಾಟಾ ಎಂಟರಿ ಆಪರೇಟರ್ ಅಂತಾ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತೇನೆ. ಆಗಾಗ ನಾನು ಪಂಚಾಯತ ಆಫೀಸ್ನಲ್ಲಿ ಸರ್ವರ ಇಲ್ಲದ ಕಾರಣ ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದೇನು. ಆ ಪ್ರಕಾರ ನಿನ್ನೆ ದಿನಾಂಕ:16/03/2021 ರಂದು ರಾತ್ರಿ 10:15 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಹೊಗುವಾಗ ರೋಡ ಲೈಟ್ನ ಬೆಳಕಿನಲ್ಲಿ ದೇವತ್ಕಲ್-ಹುಣಸಗಿ ಮುಖ್ಯ ರಸ್ತೆಯ ದೇವತ್ಕಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬನ್ನಪ್ಪ ಸಾಹುಕಾರ ರವರ ಬಳೆ ಅಂಗಡಿಯ ಮುಂದೆ ಹೊಗುತ್ತಿದ್ದಾಗ ನಮ್ಮೂರಿನ 1) ಭೀಮರಾಯ ತಂದೆ ಮಾಳಪ್ಪ ಮೇಟಿ ಜಾ|| ಕುರಬರ, 2) ಭೀಮಣ್ಣ ತಂದೆ ರತ್ನಪ್ಪ ಮಾರ್ಲಬಾವಿ ಜಾ|| ಕುರಬರ, 3) ಕರೆಪ್ಪ ತಂದೆ ಭೀಮಣ್ಣ ಮೇಟಿ ಜಾ|| ಕುರಬರ, 4) ಸಾಬಣ್ಣ ತಂದೆ ಜಟ್ಟೆಪ್ಪ ಬಾಯಿಹೊಲ ಜಾ|| ಕುರಬರ, 5) ನಾಗರಾಜ ತಂದೆ ತಿಪ್ಪಣ್ಣ ಬಾಯಿಹೊಲ ಜಾ|| ಕುರಬರ, 6) ನಾಗರಾಜ ತಂದೆ ಬಲಭೀಮರಾಯ ಗಂಟಿ ಜಾ|| ಬೇಡರು, 7) ಲಕ್ಷ್ಮಣ ತಂದೆ ಸಂಜೀವಪ್ಪ ನಾವದಗಿ ಜಾ|| ಬೇಡರು, 8) ಕೃಷ್ಣಪ್ಪಗೌಡ ತಂದೆ ಬಸವಂತ್ರಾಯಗೌಡ ಮಾಲಿ ಪಾಟೀಲ್ ಜಾ|| ಬೇಡರು ಎಲ್ಲರು ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಜಗಳ ತಗೆದು ಏಲೇ ಹೊಲೆಯ ಸುಳಮಗನೆ ನಾವು ಯಾವುದೇ ಮಾಹಿತಿ ಕೇಳಿದರೆ ಕೊಡಲಂತಿಯಾ ಸುಳೇಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಕೊಡುತ್ತೇನೆ ಗೌಡ್ರೆ ಸರ್ವರ ಇಲ್ಲದಕ್ಕೆ ತಡವಾಗಿದೆ ನಂತರ ಕೊಡುತ್ತೇನೆ ಅಂತಾ ಹೇಳಿದರೂ ಸಹ ಕೇಳದೆ ಇಲ್ಲಲೆ ಸೂಳೆಮನಗೆ ನೀನ್ನ ಸೊಕ್ಕು ಬಹಳ ಆಗಿದೆ ಅಂತಾ ಅವರಲ್ಲಿಯ ಭೀಮರಾಯ ಮೇಟಿ, ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು, ಭೀಮಣ್ಣ ಮಾರ್ಲಬಾವಿ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹೆಡಕಿಗೆ ಹೊಡೆದು ಗುಪ್ತಗಾಯ ಮಾಡಿದನು, ನಾಗರಾಜ ಗಂಟಿ ಇತನು ಬಡಿಗಯಿಂದ ಎಡ ಪಕ್ಕಡಿಗೆ ಹೊಡೆದು ಗುಪ್ತಗಾಯ ಮಾಡಿದನು, ಕರೆಪ್ಪ ಮೇಟಿ ಮತ್ತು ಸಾಬಣ್ಣ ಬಾಯಿಹೊಲ ಇಬ್ಬರು ಕೂಡಿ ಕೈಯಿಂದ ಹೊಡೆದು ನೆಲಕ್ಕೆ ಕೆಡವಿದಾಗ, ನಾಗರಾಜ ಬಾಯಿಹೊಲ, ಲಕ್ಷ್ಮಣ ನಾವದಗಿ, ಕೃಷ್ಣಪ್ಪಗೌಡ ಮಾಲಿಪಾಟೀಲ್ ಎವರು ಕಾಲಿನಿಂದ ತೊಡೆಗೆ, ಮೈಕೈಗೆ ಒದ್ದರು. ಆಗ ಅಲ್ಲಿಯೇ ಹೊರಟಿದ್ದ ನಮ್ಮೂರಿನ ಮಾಳಪ್ಪ ತಂದೆ ನಂದಪ್ಪ ನಾಯ್ಕೋಡಿ, ಬಾಬುಗೌಡ ತಂದೆ ಜಡೆಪ್ಪಗೌಡ ಪಾಟೀಲ್, ಪರಮಣ್ಣಗೌಡ ತಂದೆ ಕುಪ್ಪಗೌಡ ಪೊಲೀಸ್ ಪಾಟೀಲ್, ಪರಮಪ್ಪ ತಂದೆ ಬಸಪ್ಪ ತಳವಾರ ಇವರು ಜಗಳವನ್ನು ನೋಡಿ ಬಿಡಿಸಿಕೊಂಡರು. ನಂತರ ಅವರು ನನಗೆ ಸುಳೆ ಮಗನೆ ಇವತ್ತು ಉಳಕೊಂಡಿ ಇನ್ನೊಂದು ಸಲ ನೀನು ಸಿಕ್ಕರು ನಿನ್ನ ಜೀವ ಹೊಡೆಯದೇ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊದರು. ಆಗ ರಾತ್ರಿಯಾಗಿದ್ದರಿಂದ ಮತ್ತು ಮನೆಯಲ್ಲಿ ದೊಡ್ಡಪ್ಪನ ಮಕ್ಕಳಾದ ಬಸಪ್ಪ ತಂದೆ ಚನ್ನಬಸಪ್ಪ ತೆಳಗಿನಮನಿ, ಮಾನಪ್ಪ ತಂದೆ ಬಸಪ್ಪ ತೆಲಗಿನಮನಿ ಇವರ ಜೊತೆ ವಿಚಾರ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ಇಂದು ತಡವಾಗಿ ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೇದರಿಕೆ ಹಾಕಿ ಜಾತಿನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯ ರವರಲ್ಲಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 51/2021 ಕಲಂ 143, 147, 148, 323, 324, 504, 506 ಸಂ. 149 ಐಪಿಸಿ ಮತ್ತು ಕಲಂ:3(1)(ಆರ್)(ಎಸ್), 3(2)(ಗಿಂ) 1989 ಎಸ್ಸಿ/ಎಸ್ಟಿ ಯ್ಯಾಕ್ಟ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಭೀಗುಡಿ ಪೊಲೀಸ್ ಠಾಣೆ :- 02/2021 ಕಲಂ 174 ಸಿ.ಆರ್.ಪಿಸಿ: ಇಂದು ದಿನಾಂಕ:17/03/2021 ರಂದು 5.30 ಪಿ.ಎಮ್. ಸುಮಾರಿಗೆ ಮೃತ ಭೀಮಾಶಂಕರ ಈತನು ಹೊತಪೇಟ ಗ್ರಾಮದ ಶಂಕ್ರಪ್ಪ ತೆಳಗೇರಿ ಇವರ ಮನೆ ಹತ್ತಿರದ ಕೆ.ಇ.ಬಿ ಕಂಬ ಹತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕಂಬದಿಂದ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ದೂರು ವಗೈರೆ ಇರುವುದಿಲ್ಲಾ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:02/2021 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:- 42/2021 ಕಲಂ 143, 147, 148, 324, 504, 506, 109 ಸಂ 149 ಐಪಿಸಿ : ಇಂದು ದಿನಾಂಕ 17/03/2021 ರಂದು ಮಧ್ಯಾಹ್ನ 2-15 ಗಂಟೆಗೆ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಫಿರ್ಯಾಧಿದಾರನಾದ ಶ್ರೀ ಗೋವಿಂದಪ್ಪ ತಂದೆ ಮುಕ್ಕಣ್ಣ ಠಾಣಾಗುಂಧಿ ಸಾಃ ಬಸವಂತಪೂರ ಇವರ ತಮ್ಮನಾದ ದೇವಿಂದ್ರಕುಮಾರ ತಂದೆ ಮುಕ್ಕಣ್ಣ ಠಾಣಾಗುಂಧಿ ಸಾಃ ಬಸವಂತಪೂರ ಇವರು ಒಂದು ಲಿಖಿತ ಅಜರ್ಿ ತಂದು ಹಾಜರಪಡಿಸಿದ್ದೆನೆಂದರೆ ನಾನು ಗೋವಿಂದಪ್ಪ ತಂದೆ ಮುಕ್ಕಣ್ಣ ಠಾಣಾಗುಂಧಿ ಸಾಃ ಬಸವಂತಪೂರ ವಯಾಃ 36 ವರ್ಷ ಸಜಾಃ ಬೇಡರು ನನಗೆ ದಿನಾಂಕ 16/03/2021 ರಂದು (ಮಂಗಳವಾರ) ದಂದು ಸಾಯಂಕಾಲ 9-20 ಗಂಟೆಗೆ ಯಾದಗಿರಿಯಿಂದ ಬಸವಂತಪೂರಕ್ಕೆ ಹೋಗುವಾಗ ಮುದ್ನಾಳ ಕೆರೆ ಹತ್ತಿರ ಅಪರಿಚಿತ ವ್ಯಕ್ತಿಯಿಂದ ನನಗೆ ಚಾಕು ಇರಿತ ಆಗಿರುತ್ತದೆ, ಆದರೆ ಕಳೆದ 10 ವರ್ಷದಿಂದ ಮತ್ತು ಪ್ರಸ್ತುತ 3 ದಿನದಿಂದ ನಮ್ಮ ಊರಿನ ಕೆಲವು ವ್ಯಕ್ತಿಗಳು ನನಗೆ ಜೀವಭೆದರಿಕೆ ಹಾಕಿರುತ್ತಾರೆ, ಹಾಗೂ ಸುಪಾರಿ ಕೊಟ್ಟು ಅನುಮಾನ ವ್ಯಕ್ತಿಯಿಂದ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ, ನನಗೆ ವೆಂಕಟೇಶ ಪೊಲೀಸ್ ಹಾಗೂ ಹಾಗೂ ಅವರ ಅಣ್ಣ, ತಮ್ಮ ಮತ್ತು ಅಣ್ನನ ಮಕ್ಕಳು ಚುನಾವಣೆ ನಾವು ಗೆದ್ದಿರುವದರಿಂದ ಇವರು ಎಲ್ಲರೂ ಗೋವಿಂದಪ್ಪನನ್ನು ಅಂದರೆ ನನ್ನನ್ನು ಕೊಲೆ ಮಾಡಿದರೆ ನಾವು ಮನೆಯಲ್ಲಿ ನಮ್ಮದೆ ಆದ ರಾಜಕೀಯ ನಡೆಯುತ್ತದೆ, ಎಂದು ಚಚರ್ೆ ಮಾಡಿದ್ದಾರೆ, ಅಲ್ಲದೇ ನನಗೆ 3 ದಿನದಿಂದ ಇವರು ಎಲ್ಲರೂ ಮನೆ ಹತ್ತಿರ ಬಂದು ಕೊಲೆ ಮಾಡುತತೆವೆ ಎಂದು ನಮಗೆ ಕಾಲ್ ಮಾಡಿ ಜೀವಬೇದರಿಕೆ ಹಾಕಿ ಆ ಸಮಯದಲ್ಲಿ ನಮ್ಮ ಅಣ್ಣ ಮತ್ತು ನಾನು ಹೋಗಿ ಚಚರ್ೆ ಮಾಡಿ ನಮ್ಮ ಮೇಲೆ ಇಲ್ಲದೇ ಅಪರಾಧ ವರಸಿ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪ ವರಸಿರುತ್ತಾರೆ, ಅದೇ ವಿಷಯವನ್ನು ಇಟ್ಟುಕೊಂಡು ಕೆಲಸದಲ್ಲಿ ನನ್ನ ವಿಷಯ ತೆಗೆದುಕೊಂಡು ಕೆಲಸ ನಿಲ್ಲಿಸಿರುತ್ತಾರೆ, ಆದರೆ ನಾನು ಅದರಲ್ಲಿ ಕೆಲಸದಲ್ಲಿ ಪಾಲು ಇಲ್ಲ, ಸುಳ್ಳು ಆರೋಪ ಮಾಡಿ ನನಗೆ ಹೊಡೆಯಬೇಕೆಂದು ಗ್ರಾಮ ಪಂಚಾಯತಿ ಸದಸ್ಯರನ್ನು ನೀವು ಬರುವದು ಬೇಡ ನಮ್ಮ ಹತ್ತಿರ ಅವನ ಮುಗಿಸಿ ನೀವು ಕೆಲಸವನ್ನು ಚಾಲು ಮಾಡಬೇಕೆಂದು ಮಾತಾಡಿದ್ದು, ನಮ್ಮ ಹತ್ತಿರ ವಿಡಿಯೋ ಇದೆ, ಆದ್ದರಿಂದ ಇನ್ನು ಮುಂದೆ ನಮಗೆ ಜೀವ ಬೆದರಿಕೆ ಇದೆ, ನಮಗೆ ಕಾನೂನು ರಕ್ಷಣೆ ಕೋಡಬೇಕಾಗಿ ವಿನಂತಿ. ನಾನು ಕೇಳಿಕೊಳ್ಳುವುದು ಏನೆಂದರೆ ಬಸವಂತಪೂರ ಗ್ರಾಮದ ವೆಂಕಟೇಶ ಪೊಲೀಸ್ ಇವರು 10 ವರ್ಷ ದಿಂದ ಸರಕಾರಿ ಕೆಲಸಗಳನ್ನು ಪಾಲುಗಾರನ್ನಾಗಿ ತಮ್ಮ ಅಣ್ಣನ ಮಕ್ಕಳನ್ನು ಮುಂದಿದ್ದು ಸರಕಾರಿ ಕೆಲಸ ಪೊಲೀಸ್ ಕೆಲಸ ಬಿಟ್ಟು ಪಂಚಾಯಿತಿಕೆಲಸವನ್ನು ಮಾಡುತ್ತಾ ಬರುತ್ತಾನೆ ಹಾಗೂ ಊರು ಜನರಿಗೆ ಜೀವಬೆದರಿಕೆ ಹಾಕುತ್ತಾನೆ, ಗ್ರಾಮ ಪಂಚಾಯತ ಸದಸ್ಯರನ್ನು ಅವಾಚ್ಯ ಶಬ್ದದಿಂದ ನಿಂದಿಸುತ್ತಾ ಹಾಗೂ ಕೊಲೆ ಬೆದರಿಕೆಯನ್ನು ಹಾಕುತ್ತಾನೆ, ಆದ್ದರಿಂದ ಇವನನ್ನು ಈಗ ವೆಂಕಟೇಶ ತಂದೆ ಸಾಬಣ್ಣ ಚಾಮನೊರ ಪೊಲೀಸ್ ಸಿಪಿಸಿ ಗುರುಮಠಕಲ್ ಇವನೇ ಸುಪಾರಿ ಇರುವದರಿಂದ ಇವನ ಮೇಲೆ ಎಫ್.ಐ.ಆರ್. ಮಾಡಿ ಅರೇಸ್ಟ ಮಾಡಬೇಕೆಂದು ಮತ್ತು ಸರಕಾರಿ ಕೆಲಸದಿಂದ ಅಮಾನತು ಮಾಡಬೇಕಾಗಿ ವಿನಂತಿ ಹಾಗೂ ಇನ್ನು ಕೆಳಗೆ ಕೊಟ್ಟಿರುವದ ಸಂಶಯವಾದ ವ್ಯಕ್ತಿಗಳ ಹೆಸರನ್ನು ಕೆಳಗೆ ನಮೂಧಿಸಿರುತ್ತೆನೆ, ಇವರ ಮೇಲೆ ಕೂಡಾ ಎಫ್.ಐ.ಆರ್. ಆಗಬೇಕು ಎಂದು ಮತ್ತು ಅರೇಸ್ಟ ಮಾಡಿ ತನಿಖೆ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆನೆ, ಹೆಸರುಗಳು 1)ವೆಂಕಟೇಶ ತಂದೆ ಸಾಬಣ್ಣ ಚಾಮನೊರ ಸಿಪಿಸಿ ಗುರುಮಿಟಕಲ್ ಠಾಣೆ ಬಸವಂತಪೂರ, 2)ಲಕ್ಷ್ಮಣಕುಮಾರ ತಂದೆ ಶಿವಪ್ಪ ಚಾಮನೋರ ಬಸವಂತಪೂರ 3)ದ್ಯಾವಪ್ಪ ತಂದೆ ಸಾಬಣ್ಣ ತೆಳಗೇರಿ ಬಸವಂತಪೂರ 4)ರಾಮಕುಮಾರ ತಂದೆ ಶಿವಪ್ಪ ಚಾಮನೊರ ಬಸವಂತಪೂರ 5)ಶಿವಪ್ಪ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 6)ಚಂದ್ರಾಮ ತಂದೆ ಸಾಬಣ್ಣ ಚಾಮನೊರ ಬಸವಂತಪೂರ 7)ಭಾಗಣ್ಣ ತಂದೆ ಭೀಂರಾಯ ಗೋಪಾಳೆ ಬಸವಂತಪೂರ 8)ಹಣಮಂತ ತಂದೆ ಭಾಗಣ್ಣ ಗೋಪಾಳೆ ಬಸವಂತಪೂರ 9)ಹಣಮಂತ ತಂದೆ ದೇವಿಂದ್ರ ಗೋಪಾಳೆ ಬಸವಂತಪೂರ 10)ಸಾಬಣ್ಣ ತಂದೆ ಭಾಗಣ್ಣ ಠಾಣಾಗುಂಧಿ ಬಸವಂತಪೂರ ಎಷ್ಟು ಜನರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ 10 ವರ್ಷದಿಂದ ಜೀವ ಬೆದರಿಕೆ ಇದೆ, ಇನ್ನು ಮುಂದೆ ಯಾದಗಿರಿಯಲ್ಲಿ ಮತ್ತು ಎಲ್ಲಿಯಾದರೂ ನನಗೆ ಮತ್ತು ನನ್ನ ಕುಟುಂಬಕ್ಕೆ ಏನೇ ಆದರೂ ಇವರುಗಳೇ ಕಾರಣ ಅಂತಾ ಲಿಖಿತ ಅಜರ್ಿ ತಂದು ಹಾರಪಡಿಸಿದ್ದು, ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2021 ಕಲಂ 143, 147, 148, 324, 504, 506, 109 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ಶೋರಾಪುರ ಪೊಲೀಸ್ ಠಾಣೆ:- 52/2020 ಕಲಂ: 78 () ಕೆ.ಪಿ. ಕಾಯ್ದೆ: : ಇಂದು ದಿನಾಂಕ: 17/03/2021 ರಂದು 6:30 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ. ಪಾಟೀಲ್ ಪಿಐ ಸಾಹೇಬರು ಇಬ್ಬರು ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೆಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ದಿನಾಂಕ: 17/03/2021 ರಂದು 4:15 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ಪಟ್ಟಣದ ಡೊಣ್ಣಿಗೇರಾ ಓಣಿಯ ಶ್ರೀ ವಾಲ್ಮೀಕಿ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕೂಡಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ, ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಪಿಸಿ-271 3) ಶ್ರೀ ಸೋಮಯ್ಯ ಸಿಪಿಸಿ-235 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಲೋಹಿತಕುಮಾರ ತಂದೆ ಬಸವರಾಜ ಡಿ.ಎಮ್ ವಯಾ:31 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಡೊಣ್ಣಿಗೇರಾ ಸುರಪೂರ ತಾ:ಸುರಪೂರ 2) ಶ್ರೀ ಪರಶುರಾಮ ತಂದೆ ತುಳಜಾ ನಾಯಕ ವಯಾ:26 ವರ್ಷ ಜಾ:ಲಂಬಾಣಿ ಉ:ಒಕ್ಕಲುತನ ಸಾ:ನಡಗೇರಿ ಓಣಿ ಸುರಪೂರ ತಾ:ಸುರಪೂರ ಇವರನ್ನು 4:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 4:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 5 ಪಿ.ಎಮ್ ಕ್ಕೆ ಸುರಪುರ ಪಟ್ಟಣದ ಡೊಣ್ಣಿಗೇರಾ ಓಣಿಯ ಶ್ರೀ ವಾಲ್ಮೀಕಿ ಗುಡಿಯ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ವಾಲ್ಮೀಕಿ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೋಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:05 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಇಬ್ಬರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ಬಸವರಾಜ ತಂದೆ ಕನಕಪ್ಪ ಕ್ಯಾದಿಗೊಂಡ ವಯಾ:24 ವರ್ಷ ಜಾ:ಬೇಡರ ಉ:ವ್ಯಾಪಾರ ಸಾ:ಡೊಣ್ಣಿಗೇರಾ ಸುರಪೂರ ಅಂತಾ ತಿಳಿಸಿದ್ದು, 2) ಅಂಬ್ರೇಶ ತಂದೆ ಹಣಮಂತ ಕೊಂಡಡಗಿ ವಯಾ:27 ವರ್ಷ ಜಾ:ಬೇಡರ ಉ:ಡ್ರೈವರ್ ಸಾ:ಡೊಣ್ಣಿಗೇರಾ ಸುರಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 6480=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:05 ಪಿ.ಎಮ್ ದಿಂದ 6:05 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಇಬ್ಬರು ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 18-03-2021 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080