Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/05/2021

ನಾರಾಯಣಪೂರ ಪೊಲೀಸ್ ಠಾಣೆ :- 35/2021 ಕಲಂ: 143, 147, 148, 323, 324, 307, 447, 504, 506 ಸಂ 149 ಐಪಿಸಿ : ಪಿಯರ್ಾದಿ ಕಾಶಿನಾಥ ತಂದೆ ಯಮನಪ್ಪ ಕುಳಗೇರಿ ವ|| 44ವರ್ಷ ಜಾ|| ಹಿಂದೂ ಲಿಂಗಾಯತ ಉ|| ಒಕ್ಕಲುತನ ಸಾ|| ಹಗರಟಗಿ ಜಿ||ಯಾದಗಿರಿ ಇವರ ಲಿಖಿತ ದೂರಿನ ಸಾರಾಂಶವೆನೆಂದರೆ ದಿನಾಂಕ:13/05/2021 ರಂದು ಗ್ರಾಮ ಪಂಚಾಯ್ತಿ ಕಾಯರ್ಾಲಯ ಹಗರಟಗಿ ವಾರ್ಡ ನಂ.-1 ಮನೆಯ ಸಂಖ್ಯೆ 74 ಇದ್ದು ಇದರ ಉದ್ದಳತೆಯ ಪ್ರಕಾರ ಅಳೆದುಕೊಡಬೆಕೇಂದು ಅಜರ್ಿ ಸಲ್ಲಿಸಿದ್ದು ಇರುತ್ತದೆ. ದಿನಾಂಕ:15/05/2021 ರಂದು ಮದ್ಯಾಹ್ನ 2 ರಿಂದ 2:30 ರ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಈ ಐದು ಜನ ನಮ್ಮ ಮನೆಯೊಳಗೆ ನುಗ್ಗಿ ನನ್ನನ್ನು ಕೊಳ್ಳಪಟ್ಟಿ ಹಿಡಿದು ಹೊರಗಡೆ ಎಳೆದು ತಂದು 1) ಮಲ್ಲಣ್ಣ ತಂದೆ ಸಂಗಣ್ಣ ಮ್ಯಾಕಲದೊಡ್ಡಿ ವಯಸ್ಸು 35ವರ್ಷ ಸಾ|| ಹಗರಟಗಿ ಇವನು ನನ್ನ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದು ತಗೋರಲೆ ಈ ಸೂಳೆಮಗಂದು ಬಾಳ ಆಗೆದ, ಇವನ ಜೀವನೇ ತೆಗದ ಬಿಡಮರಲೇ ಅನ್ನುತಾ ನನ್ನ ನೇಲಕ್ಕೆ ಕೆಡವಿದರು 2) ಶಂಕರ ತಂದೆ ಸಂಗಣ್ಣ ಮ್ಯಾಕಲದೊಡ್ಡಿ ವಯಸ್ಸು 29 ಸಾ|| ಹಗರಟಗಿ ಇವನು ನನ್ನ ಕುತ್ತಿಗೆಗೆ ಕೈ ಹಾಕಿ ಉಸಿರು ಗಟ್ಟಿಸಿ ಸಾಯಿಸಲು ಪ್ರಯತ್ನಿಸುತ್ನಿಸುತ್ತಾ ಬಿಡದು ಬ್ಯಾಡ ಸೂಳೇ ಮಗನ ತೆಗೆದ ಬಿಡಮ್ ಎನ್ನುತ್ತಿದ್ದ ಅನ್ನುವಷ್ಟರಲ್ಲಿ 3) ಶರಣಪ್ಪ ತಂದೆ ಸಂಗಣ್ಣ ಮ್ಯಾಕಲದೊಡ್ಡಿ ಸಾ|| ಹಗರಟಗಿ ವಯಸ್ಸು 32 ಇವನು ನನ್ನ ಎದೆಗೆ ಬಲವಾಗಿ ಗುದ್ದಿದನು ಜೀವಹೊದಂಗ ಆಯ್ತು ನನಗೆ 4) ತಿಪ್ಪಣ್ಣ ತಂದೆ ಸಂಗಣ್ಣ ಮ್ಯಾಕಲದೊಡ್ಡಿ ವಯಸ್ಸು 38 ಸಾ|| ಹಗರಟಗಿ ಇವನು ಗುಪ್ತಾಂಗಕ್ಕೆ ಬಲವಗಾಗಿ ಒದ್ದನು ಬ್ಯಾನಿ ತಾಳಲಾರದೆ ಚಿಟ್ಟನೆ ಚೀರಿದೆನು 5) ಸಂಗಣ್ಣ ತಂದೆ ಗಂಗಪ್ಪ ಮ್ಯಾಕಲದೊಡ್ಡ ವಯಸ್ಸು 59 ಸಾ|| ಹಗರಟಗಿ ಇತನು ತನ್ನ 4 ಜನ ಮಕ್ಕಳ ಜೊತೆ ಸೇರಿ ಯಾವಾಗ ಈ ಮಗ ಕಾಶ್ಯಾ ಪಂಚಾಯ್ತಿಗೇ ಅಜರ್ಿ ಕೊಟ್ಟಾನ ಅಂದ್ರ ಇವನ ಇಕ್ರಿಸ್ರಿ ಬಿಡ್ರಲೆ ಈ ಸೂಳೆ ಮಗನ್ ತಿಂಡಿನೆ ಬಾಳ ಆಗ್ಯದ್ ಅನ್ನುತ್ತಾ ಹೊಡೆಯುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಐದು ಜನ ಸೇರಿ ಮನೆ ಬಂದರೆ ಹೊಡೆಯುತ್ತಿದ್ದರು ಆವಾಗ ನಾನು ಇವರು ನನ್ನ ಜೀವ ತೆಗೆಯುತ್ತಾರೆ ಎಂದು ಜೋರಾಗಿ ಕೂಗಿಕೊಂಡೆನು ಆವಾಗ ನನ್ನ ದ್ವನಿಯನ್ನು ಕೇಳಿದ 1)ರವಿ ತಂದೆ ಬಸವರಾಜ 2) ಅರುಣಕುಮಾರ ತಂದೆ ಬಸವರಾಜ 3) ನಿಂಗಣ್ಣ ತಂದೆ ಗುರಣ್ಣ ಇವರು ಒಡಿ ಬಂದು ಹೊಡೆಯುತ್ತಿರುವುದನ್ನು ಬಿಡಿಸಿದರು ಇವರು ಬಿಡಿಸಿಕೊಳ್ಳದಿದ್ದರೆ ಈ ಐದು ಮಂದಿ ಕೂಡಿ ನನ್ನನ್ನು ಕೊಲೆ ಮಾಡುತ್ತಿದ್ದರು ಹೋಗುವಾಗ ಈವತು ನಮ್ಮ ಕೈಯಾಗ ಉಳಿದುಕೊಂಡಿ ಮಗನೆ ಇನ್ನೊಂದು ಸಲ ಸಿಗು ಮಗನೆ ಕಡದ ತಿರತಿವಿ ಎಂದು ಬೈದಾಡುತ್ತಾ ಮಗನೆ ನೀನೇನಾದರು ಕೇಸ್-ಗೀಸ್ ಅಂತ ಸ್ಟೇಷನಗೆ ಹೋದರೆ ನಿನ್ನ ಸ್ಟೇಷನ್ನಿಂದ ಬಂದ ಕೂಡಲೆ ಕಡೆದ ಗ್ಯಾರಣಟಿ ಎಂದು ಜೀವ ಬೆದರಿಕೆ ಹಾಕಿದರು. ಮಹಾದೇವಿ ಗಂಡ ಸಂಗಣ್ಣ ಮ್ಯಾಕಲದೊಡ್ಡಿ ವಯಸ್ಸು 53ವರ್ಷ, ಶಾಂಭವಿ ಗಂಡ ಮಲ್ಲಣ್ಣ ಮ್ಯಾಕಲದೊಡ್ಡಿ ವ: 28ವರ್ಷ ಇವರು ಈ ಸೂಳಿ ಮಗಂದು ಬಹಳ ಆಗ್ಯಾದ ಬಿಡಬ್ಯಾಡ್ರಿ ಅವಾಚ್ಯ ಶಬ್ದಗಳಿಂದ ಬೈದರು. ಕಾರಣ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ, ಕಾಲಿನಿಂದ, ಕೈಯಿಂದ ಹೊಡೆ-ಬಡೆ ಮಾಡಿ ಕೊಲೆಗೆ ಪ್ರಯತ್ನಿಸಿದರ ಮೇಲೆ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಿ ಕೊಡಲು ಮಾನ್ಯರಲ್ಲಿ ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.35/2021 ಕಲಂ: 143, 147, 148, 323, 324, 307, 447, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ :- 36/2021 ಕಲಂ: 143, 147, 148, 323, 324, 307 354, 355 504, 506 ಸಂ 149 ಐಪಿಸಿ : ಇಂದು ದಿನಾಂಕ 17/05/2021 ರಂದು 6:00 ಪಿ.ಎಂ ಕ್ಕೆ ಶ್ರೀಮತಿ ಮಹಾದೇವಿ ಗಂಡ ಸಂಗಣ್ಣ ಮ್ಯಾಕಲದೊಡ್ಡಿ ವ:55 ವರ್ಷ ಉ:ಕೂಲಿಕೆಲಸ ಜಾ:ಹಿಂದು ಕಬ್ಬಲಿಗ ಸಾ:ಹಗರಟಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ಹಗರಟಗಿ ಗ್ರಾಮದಲ್ಲಿ ನಮ್ಮ ಮನೆಯ ಪಕ್ಕದಲ್ಲಿ ನಮ್ಮೂರ ಕಾಶಿನಾಥ ತಂದೆ ಯಮನಪ್ಪ ಕುಳಗೇರಿ ರವರ ಮನೆ ಇದ್ದು ನಮ್ಮ ಮನೆ ಮತ್ತು ಕಾಶೀನಾಥ ರವರ ಮನೆಯ ಗೋಡೆಗಳು ಹತ್ತಿದ್ದು ಇರುತ್ತದೆ. ಈ ಮುಂಚೆ ಕಾಶೀನಾಥನು ಮನೆಯನ್ನು ಕಟ್ಟುತ್ತಿದ್ದು ಅವನು ತಮ್ಮ ಮನೆಯೆ ಸೈಡಿನ ಗೊಡೆಗ ಪ್ಲಾಸ್ಟರ ಮಾಡಿಸಿದ್ದನು ದಿನಾಂಕ 15/05/2021 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ಕಾಶಿನಾಥನು ಅಲ್ಲಿಗೆ ಬಂದು ನಮ್ಮ ಮನೆಯ ಗೊಡೆಯು ಸಹ ತಂದೆ ಇದ್ದು ಇದನ್ನು ತಾನು ಪ್ಲಾಸ್ಟರ ಮಾಡಿಸುತ್ತೇನೆ ಅಂತಾ ಬಂದಿದ್ದು ಆಗ ನಾನು ಈ ಗೊಡೆ ನಮ್ಮದು ಇರುತ್ತದೆ ಇದಕ್ಕೆ ನೀವು ಯಾಕೆ ಪ್ಲಾಸ್ಟರ ಮಾಡಿಸುತ್ತಿರಿ ಅಂತಾ ಕೇಳಿದಾಗ ಕಾಶಿನಾಥನು ಈ ಗೋಡೆ ನಮ್ಮದೆ ಇರುತ್ತದೆ ಇಲ್ಲಿ ನಿಮ್ಮ ಜಾಗೆ ಇರುವದಿಲ್ಲ ಅಂತಾ ಅಂದೇನು ಆಗ ಕಾಶಿನಾಥನು ಬೋಸುಡಿ ಸೂಳಿ ಇದು ನಮ್ಮ ಜಾಗೆ ಇರುತ್ತದೆ ಇಲ್ಲಿ ನಿಮ್ಮ ಜಾಗೆ ಇರುವದಿಲ್ಲ ಅಂತಾ ಜೋರಾಗಿ ಬೈಯತೊಡಗಿದನು ಅವನು ಬೈಯುವ ದ್ವನಿ ಕೇಳಿ ಕಾಶಿನಾಥನ ತಂದೆಯಾದ ಯಮನಪ್ಪ ತಂದೆ ಮುದ್ದಪ್ಪ ಕುಳಗೇರಿ, ಕಾಶಿನಾಥ ಅಳಿಯನಾದ ರವಿ ತಂದೆ ಬಸವರಾಜ ಗೋಗಿ, ಕಾಶಿನಾಥನ ತಾಯಿಯಾದ ಶಾಂತಮ್ಮ ಗಂಡ ಯಮನಪ್ಪ ಕುಳಗೇರಿ, ಕಾಶಿನಾಥನ ಹೆಂಡತಿಯಾದ ಸಂಗಮ್ಮ ಗಂಡ ಕಾಶಿನಾಥ ಕುಳಗೇರಿ ರವರು ಅಲ್ಲಿಗೆ ಬಂದು ಅವರೆಲ್ಲರೂ ಕೂಡಿ ನನಗೆ ಬೋಸುಡಿ ಸೂಳಿ ನಮ್ಮ ಜಾಗದಲ್ಲಿ ಮನೆಯನ್ನು ಕಟ್ಟಿ ಈಗ ಮತ್ತೆ ನಮಗೆ ಎದುರು ಮಾತನಾಡುತ್ತಿಯಾ ಅಂತಾ ಅಂದರು. ಆಗ ನಾನು ಇದು ನಮ್ಮ ಜಾಗೆ ಇರುತ್ತದೆ ಇಲ್ಲಿ ನೀವು ಯಾಕೆ ಬರುತ್ತಿರಿ ಅಂತಾ ಅಂದೇನು. ಆಗ ಅವರಲ್ಲಿಯ ಕಾಶಿನಾಥ ಈತನು ನೀನು ಜೀವಂತ ಇದ್ದರೆ ತಾನೆ ಈ ಜಾಗಕ್ಕೆ ಬರುತ್ತಿಯಾ ಇವತ್ತು ನಿನ್ನನ್ನು ಇಲ್ಲಿಯೇ ಖಲಾಸ ಮಾಡಿ ಬಿಡುತ್ತನೆ ಅಂತಾ ನನಗೆ ಖಲಾಸ (ಕೊಲೆ) ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಇದ್ದ ರಾಡಿನಿಂದ ನನ್ನ ತಲೆಗೆ ಹೊಡೆಯಲು ನಾನು ಸತ್ತಿನೆಪ್ಪೊ ಅಂತಾ ಬಾಗಿದಾಗ ರಾಡಿನ ಏಟು ನನ್ನ ತಲೆಗೆ ಬಡಿಯದೆ ನನ್ನ ಸೊಂಟಕ್ಕೆ ಬಿದ್ದು ನನ್ನ ಸೊಂಟಕ್ಕೆ ಒಳಪೆಟ್ಟಾಯಿತು, ಒಂದು ವೇಳೆ ಆ ರಾಡಿನ ಏಟು ನನ್ನ ತಲೆಗೆ ಬಿದ್ದಿದ್ದರೆ ನಾನು ಜಾಗದಲ್ಲಿಯೇ ಸಾಯುತ್ತಿದ್ದೆನು. ನಂತರ ನಾನು ಅವನಿಂದ ತಿಪ್ಪಿಸಿಕೊಂಡು ಹೋಗುತ್ತಿರುವಾಗ ಅವರಲ್ಲಿಯ ರವಿ ತಂದೆ ಬಸವರಾಜ ಗೋಗಿ ಈತನು ತನ್ನ ಕಾಲಲ್ಲಿಯ ಚಪ್ಪಲಿಯಿಂದ ನನ್ನ ತಲೆಗೆ ಹೊಡೆದಿದ್ದು ಇರುತ್ತದೆ, ನಂತರ ಅವರಲ್ಲಿಯ ಯಮನಪ್ಪ ಕುಳಗೇರಿ ಈತನು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಕುತ್ತಿಗೆ ಹೊಡೆದು ಒಳಪೆಟ್ಟು ಮಾಡಿದ್ದು ಇರುತ್ತದೆ. ಕಾಶಿನಾಥನು ನನಗೆ ಸೊಂಟದ ಕೆಳಗಿನ ಶಬ್ದವನ್ನು ಬೈದು ನನಗೆ ಅವಮಾನ ಮಾಡಿದ್ದು ಇರುತ್ತದೆ. ನಂತರ ಅವರಲ್ಲಿಯ ಸಂಗಮ್ಮ ಮತ್ತು ಶಾಂತಮ್ಮ ರವರು ಬಂದು ನನ್ನ ಜೊತೆ ತೆಕ್ಕೆ ಕುಸ್ತಿಗೆ ಬಿದ್ದು ನನಗೆ ಕೈಯಿಂದ ಕಪಾಳಕ್ಕೆ ಹೊಡೆಯತೊಡಗಿದರು ಆಗ ನಾನು ಚೀರಾಡಹತ್ತಿದ್ದು ಆಗ ಅಲ್ಲಿಯೇ ಇದ್ದ ಕಾಶಪ್ಪ ತಂದೆ ಜುಮ್ಮಣ್ಣ ಬಿದರಕುಂದಿ, ಹಾಗೂ ಯಮನೂರಿ ತಂದೆ ಸಂಗನಬಸಪ್ಪ ಚಿತ್ತಾಪೂರ ರವರು ಬಂದು ಬಿಡಿಸಿಕೊಂಡು ನನಗೆ ನೀರು ಕುಡಿಸಿದ್ದು ಇರುತ್ತದೆ. ಆಗ ಕಾಶನಾಥನು ಬೋಸುಡಿ ಸೂಳಿ ಇವತ್ತು ಇವರು ಬಂದು ಬಿಡಿಸಿಕೊಂಡರು ಅಂತಾ ನೀನು ಉಳದಿದಿ ಇನ್ನೊಮ್ಮೆ ಈ ಜಾಗದ ವಿಷಯಕ್ಕೆ ಬಂದರೆ ನೀನಗೆ ಹೊಡೆದು ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದುಇರುತ್ತದೆ. ಆಗ ನನ್ನ ಮಗ ಶಂಕ್ರು ಬಂದು ಅಳುತ್ತಾ ನಡೆಯಮ್ಮ ದವಾಖಾನೆಗೆ ಹೋಗೊಣಾ ಅಂತಾ ಅಂದನು ಆಗ ನಾನು ಬೇಡಪ್ಪ ಈಗ ಕೋರೊನಾ ಇದೆ ನಾನು ದವಾಖಾನೆಗೆ ಬರುವದಿಲ್ಲ ಅಂತಾ ಅಂದೆನು ನಂತರ ನಾನು ಮನೆಯಲ್ಲಿ ಇದ್ದಾಗ ನನಗೆ ಎರಡು ಸಲ ವಾಂತಿಯಾಗಿದ್ದು ಇರುತ್ತದೆ ಈಗ ಕೊರೊನಾ ಇರುವರಿಂದ ಲಾಕ ಡೌನ ಇದ್ದ ಪ್ರಯುಕ್ತ ಹೊರಗಡೆ ಹೋಗಬಾರದು ಅಂತಾ ತಿಳಿದುಕೊಂಡು ಮನೆಯಲ್ಲಿ ಇದ್ದು ಹಾಗೂ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿಕೊಂಡು ಬಂದು ಇಂದು ಪಿಯರ್ಾದಿ ಸಲ್ಲಿಸಿದ್ದು ಇರುತ್ತದೆ ಆದ್ದರಿಂದ ನನಗೆ ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ ಮತ್ತು ಕಟ್ಟಿಗೆಯಿಂದ ಹೊಡೆದು ನನಗೆ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯಾದಿ ಕೊಟ್ಟಿದ್ದು ಇರುತ್ತದೆ ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 36/2021 ಕಲಂ 143, 147, 148, 323, 324, 307 354, 355 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 65/2021 ಕಲಂ: 143, 147, 504, 324, 323 ಸಂಗಡ 149 ಐಪಿಸಿ : ದಿನಾಂಕ:17/05/2021 ರಂದು 4-30 ಪಿಎಮ್ ಕ್ಕೆ ಶ್ರೀ ಶರಣಪ್ಪಗೌಡ ತಂದೆ ಗೂಳಪ್ಪಗೌಡ ಬಿರೆದಾರ ಪಾಟೀಲ್, ವ:60, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ತಡಿಬಿಡಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಮನೆ ಮುಂದೆ ನಮ್ಮೂರ ನಿಂಗಣ್ಣಗೌಡ ತಂದೆ ರುದ್ರಪ್ಪಗೌಡ ಇವರು ಹೊಸ ಮನೆ ಕಟ್ಟುತ್ತಿದ್ದಾರೆ. ನಮಗೆ ತಿರುಗಾಡಲು ಅವರ ಮನೆ ಬಾಜು ಹಳೆ ದಾರಿ ಇದ್ದು, ಈಗ ಅವರು ಮನೆ ಕಟ್ಟುತ್ತಿರುವುದರಿಂದ ಸುಮಾರು 8 ಫಿಟ್ ದಾರಿ ಬಿಟ್ಟು ಮನೆ ಕಟ್ಟಿರಿ ಎಂದು ನಾವು ಹೇಳಿದ್ದೇವು. ಅದಕ್ಕೆ ಅವರು ನಾವು ಕೇವಲ 4 ಫಿಟ್ ಮಾತ್ರ ದಾರಿ ಬಿಡುತ್ತೇವೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಅದಕ್ಕೆ ನಾವು ಗ್ರಾಮ ಪಂಚಾಯತಿಗೆ ಸದರಿಯವರು ದಾರಿ ಬಿಟ್ಟು ಮನೆ ಕಟ್ಟುತ್ತಿಲ್ಲ ಪಂಚಾಯತಿಯಿಂದ ಕೊಟ್ಟ ಅನುಮತಿ ರದ್ದುಪಡಿಸಿರಿ ಎಂದು ಗ್ರಾಮ ಪಂಚಾಯತಿಗೆ ಅಜರ್ಿ ಸಲ್ಲಿಸಿದ್ದೆವು. ಇಂದು ದಿನಾಂಕ:17/05/2021 ರಂದು ಬೆಳಗ್ಗೆ ಬಸವಣ್ಣ ಕಟ್ಟೆ ಹತ್ತಿರ ನಮ್ಮ ಮತ್ತು ಅವರ ಹಿರಿಯರು ಕೂಡಿ ಸದರಿ ದಾರಿ ಬಗ್ಗೆ ನ್ಯಾಯ ಪಂಚಾಯತಿ ಮಾಡೊಣ ಎಂದು ಹೇಳಿದಾಗ ನಾನು ಮತ್ತು ನಮ್ಮ ಅಣ್ಣ ಶೇಖರಪ್ಪಗೌಡ ತಂದೆ ಗೂಳಪ್ಪಗೌಡ, ನನ್ನ ಮಗ ಮಲ್ಲಿಕಾಜರ್ುನ ಮತ್ತು ಇತರರು ಸೇರಿ ಅಲ್ಲಿಗೆ ಹೋಗಿದ್ದೇವು. ನಮ್ಮ ಎದುರಿನವರಾದ ನಿಂಗಣ್ಣಗೌಡ ತಂದೆ ರುದ್ರಪ್ಪಗೌಡ ಮಾಲಿಪಾಟಿಲ್ ಈತನು ಕೂಡಾ ತನ್ನ ಸಂಗಡಿಗರರನ್ನು ಕರೆದುಕೊಂಡು ಮಾತುಕತೆಗೆ ಬಂದಿದ್ದನು. ಬೆಳಗ್ಗೆ 11-00 ಗಂಟೆ ಸುಮಾರಿಗೆ ಮಾತುಕತೆ ನಡೆದಾಗ ನಾನೊಂದು ನಿನೊಂದು ಎಂದು ಮಾತಾಡುತ್ತಿದ್ದಾಗ 1) ರಾಜವರ್ಧನ ತಂದೆ ಶರಣಪ್ಪಗೌಡ ಮಾಲಿಪಾಟಿಲ್, 2) ಸಿದ್ದಲಿಂಗಪ್ಪ ತಂದೆ ನಿಂಗಣ್ಣಗೌಡ ಮಾಲಿಪಾಟಿಲ್, 3) ಬಸವರಾಜ ತಂದೆ ನಿಂಗಣ್ಣಗೌಡ ಮಾಲಿಪಾಟಿಲ್, 4) ನಿಂಗಣ್ಣಗೌಡ ತಂದೆ ರುದ್ರಪ್ಪಗೌಡ ಮಾಲಿಪಾಟಿಲ್, 5) ಮಹಾಂತಗೌಡ ತಂದೆ ಶರಣಪ್ಪಗೌಡ ಮಾಲಿಪಾಟಿಲ್, 6) ಬಾಪುಗೌಡ ತಂದೆ ನಿಂಗಣ್ಣಗೌಡ ಮಾಲಿಪಾಟಿಲ್ ಮತ್ತು ಇತರರು ಸೇರಿ ಬಂದವರೆ ನಮಗೆ ಏ ಮಕ್ಕಳೆ ನಮಗೆ ಪಂಚಾಯಿತಿಯಿಂದ ಕೊಟ್ಟ ಕಟ್ಟಡ ಪರವಾನಿಗೆ ರದ್ದು ಮಾಡಿಸುತ್ತಿರಿ ಭೋಸುಡಿ ಮಕ್ಕಳೆ ನಿಮಗೆ ದಾರಿ ಬಿಡುವುದಿಲ್ಲ. ಬಂದ ಮಾಡುತ್ತೇವೆ ಏನು ಸೆಂಟಾ ಕಿತ್ತಕೊಳ್ಳತ್ತಿರಿ ಕಿತ್ತಕೊಳ್ಳಿರಿ ಸೂಳೆ ಮಕ್ಕಳೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ಅವರಲ್ಲಿ ರಾಜವರ್ಧನನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ನಡು ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಬಂದ ನಮ್ಮಣ್ಣ ಶೇಖರಪ್ಪಗೌಡನಿಗೆ ಬಾಪುಗೌಡ ಮತ್ತು ಮಹಾಂತಗೌಡ ಹಿಡಿದುಕೊಂಡಾಗ ಸಿದ್ದಲಿಂಗಪ್ಪನು ಕೈಯಿಂದ ಮುಖಕ್ಕೆ ಮತ್ತು ಎದೆಗೆ ಗುದ್ದಿದ್ದನು. ನನ್ನ ಮಗ ಮಲ್ಲಿಕಾಜರ್ುನನಿಗೆ ನಿಂಗಣ್ಣಗೌಡನು ಹಿಡಿದುಕೊಂಡಾಗ ಬಸವರಾಜನು ತೆಕ್ಕೆ ಕುಸ್ತಿಗೆ ಬಿದ್ದು, ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿರುತ್ತಾನೆ. ಆಗ ಜಗಳವನ್ನು ಅಲ್ಲಿಯೇ ನ್ಯಾಯಪಂಚಾಯತಿಗೆ ಬಂದಿದ್ದ ನಾಗಪ್ಪ ತಂದೆ ಈರಪ್ಪ, ಮಲ್ಲಪ್ಪ ತಂದೆ ಸೋಮಪ್ಪ ಅನವಾರ, ಹೊನ್ನಪ್ಪ ದಳಪತಿ ಮತ್ತು ಇತರರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಬಿಡಿಸಿರುತ್ತಾರೆ. ಕಾರಣ ದಾರಿ ವಿಷಯದಲ್ಲಿ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2021 ಕಲಂ:143, 147, 504, 324, 323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 66/2021 ಕಲಂ: 504, 324, 323 ಸಂಗಡ 34 ಐಪಿಸಿ : ದಿನಾಂಕ:17/05/2021 ರಂದು 6-30 ಪಿಎಮ್ಕ್ಕೆ ಶ್ರೀ ಅನಿಲಕುಮಾರ ತಂದೆ ಸಿದ್ದಪ್ಪ ನಾಲ್ವಡಗಿ, ವ:27, ಜಾ:ಕುರುಬರ, ಉ:ಖಾಸಗಿ ಕೆಲಸ ಸಾ:ತಡಿಬಿಡಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ಬ್ಲ್ಯೂ ಡಾರ್ಟ ಕೋರಿಯರ ಸವರ್ಿಸ ಶಹಾಪೂರದಲ್ಲಿ ಖಾಸಗಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಈಗ ಸುಮಾರು 2 ದಿವಸಗಳ ಹಿಂದೆ ರಮಜಾನ ಹಬ್ಬದ ದಿನದಂದು ನಮ್ಮಣ್ಣ ಸುನೀಲ್ ನಿಗೆ ನಮ್ಮೂರ ಅಬುಬಕರ್ ಮತ್ತು ಇಮ್ರಾನ ಇವರಿಬ್ಬರೂ ವಿನಾಕಾರಣ ತಕರಾರು ಮಾಡಿ ಕೈಯಿಂದ ಹೊಡೆದಿದ್ದರು. ನಾವು ಇರಲಿ ಎಂದು ಸುಮ್ಮನಾಗಿದ್ದೇವು. ಹೀಗಿದ್ದು ನಿನ್ನೆ ದಿನಾಂಕ:16/05/2021 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರಾದ ಸಾಬಣ್ಣ, ಮಾಳಪ್ಪ ಮತ್ತು ಇತರರು ಕೂಡಿ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಬಜ್ಜಿ ತಿನ್ನುತ್ತಿರುವಾಗ ನಮ್ಮೂರ 1) ಅಬುಬಕರ್ ತಂದೆ ಗುಲಾಮ ಹುಸೇನ ಖುರೇಷಿ, 2) ಇಮ್ರಾನ ತಂದೆ ಗುಲಾಮ ಹುಸೇನ ಖುರೇಷಿ, 3) ದಾವೂದ ತಂದೆ ಗುಲಾಮ ಹುಸೇನಿ ಖುರೇಷಿ ಮತ್ತು 4) ಸುಭಾನಿ ತಂದೆ ಮೊಹ್ಮದ ಹುಸೇನಿ ಎಲ್ಲರೂ ಸಾ:ತಡಿಬಿಡಿ ಇವರೆಲ್ಲರೂ ಭಜಿ ತಿನ್ನಲು ಅಲ್ಲಿಗೆ ಬಂದವರೆ ನಮಗೆ ನೋಡಿ ನಗುವುದು ಚೆಷ್ಟೆ ಮಾಡುವುದು ಮಾಡುತ್ತಿದ್ದರು. ಆಗ ನಾವು ಹೀಗೆಕೆ ಮಾಡುತ್ತಿರಿವಿರಿ ಎಂದು ಹೇಳಿದಾಗ ಮಾಡತಿವಿ ನೋಡಲೇ ಭೋಸುಡಿ ಮಗನೆ ಮೊನ್ನೆ ನಿಮ್ಮಣ್ಣನಿಗೆ ನಾಯಿಗೆ ಹೊಡೆದಂಗೆ ಹೊಡೆದರೆ ಯಾರೂ ಕೇಳಿಲ್ಲ. ಈಗ ನೀ ಏನು ಸೆಂಟಾ ಕೇಳುತಿಲೆ ಹರಾಮಖೋರ ಸೂಳಿ ಮಗನೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ನನಗೆ ದಾವೂದ ಮತ್ತು ಸುಭಾನಿ ಹಿಡಿದುಕೊಂಡಾಗ ಅಬುಬಕರ ಈತನು ಅಲ್ಲೆ ಬಿದ್ದ ಕಟ್ಟಿಗೆ ತೆಗೆದಕೊಂಡು ನನ್ನ ಎಡ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಆಗ ಜಗಳ ಬಿಡಿಸಲು ಬಂದ ಮಾಳಪ್ಪನಿಗೆ ಇಮ್ರಾನನು ಶಟರ್ಿನ ಕಾಲರ ಹಿಡಿದು ನಿಲ್ಲಿಸಿ, ಕೈ ಮುಷ್ಠಿ ಮಾಡಿ ಮುಖಕ್ಕೆ ಗುದ್ದಿ ಒಳಪೆಟ್ಟು ಮಾಡಿದನು. ಸಾಬಣ್ಣನಿಗೆ ಇಮ್ರಾನನು ಕಾಲಿನಿಂದ ಒದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಸಿದ್ದಲಿಂಗಪ್ಪ ತಂದೆ ಮರಲಿಂಗಪ್ಪ ಈತನು ಬಿಡಿಸಿದಾಗ ಹೊಡೆಯವುದು ಬಿಟ್ಟು ಹೊದರು. ವಿನಾಕಾರಣ ನಮ್ಮಣ್ಣನಿಗೆ ಹೊಡೆದಿದ್ದಲ್ಲದೆ, ನಮಗೆ ನೋಡಿ ನಗೆ ಚೇಷ್ಟೆ ಮಾಡಿ, ನಮ್ಮೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 66/2021 ಕಲಂ: 504, 324, 323 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:- 67/2021 ಕಲಂ: 504, 341, 323 ಸಂಗಡ 34 ಐಪಿಸಿ : ದಿನಾಂಕ:17/05/2021 ರಂದು 8-15 ಪಿಎಮ್ ಕ್ಕೆ ಶ್ರೀ ಸಿದ್ದಲಿಂಗಪ್ಪಗೌಡ ತಂದೆ ಲಿಂಗಣ್ಣಗೌಡ ಮಾಲಿಪಾಟಿಲ್, ವ:30, ಜಾ:ಲಿಂಗಾಯತ, ಉ:ಖಾಸಗಿ ಕೆಲಸ ಸಾ:ತಡಿಬಿಡಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಮೇಲ್ಕಂಡ ವಿಳಾಸದ ನಿವಾಸಿಯಾದ ನಾನು ಖಾಸಗಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮೂರಲ್ಲಿ ನಾವು ಹೊಸ ಮನೆ ಕಟ್ಟುತ್ತಿದ್ದೇವೆ. ಸದರಿ ನಮ್ಮ ಮನೆ ಹಿಂದುಗಡೆ ಖುಲ್ಲಾ ಜಾಗ ಅದರಾಚೆ ಶರಣಪ್ಪಗೌಡ ತಂದೆ ಗೂಳಪ್ಪಗೌಡ ಇವರ ಮನೆ ಇರುತ್ತದೆ. ಸದರಿಯವರಿಗೆ ತಿರುಗಾಡಲು ದಾರಿ ಬಿಟ್ಟಿರುತ್ತೇವೆ. ಆದರೆ ಅವರು ನಮಗೆ ತಿರುಗಾಡಲು 8 ಫಿಟ್ ದಾರಿ ಬಿಡಬೇಕು ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಆಗ ನಾವು ಅವರಿಗೆ ಮೊದಲಿನಿಂದಲೂ ತಿರುಗಾಡಲು ಎಷ್ಟು ದಾರಿ ಇದೆ ಅಷ್ಟನ್ನು ಬಿಟ್ಟಿದ್ದೇವೆ ಎಂದು ಹೇಳಿದರು ಕೂಡಾ ಕೇಳದೆ ಗ್ರಾಮ ಪಂಚಾಯತಿಗೆ ದಾರಿ ಸಂಬಂಧ ಅಜರ್ಿ ಸಲ್ಲಿಸಿದ್ದರು. ಅದಕ್ಕೆ ಇಂದು ದಿನಾಂಕ: 17/05/2021 ರಂದು ಬೆಳಗ್ಗೆ ನಮ್ಮ ಗ್ರಾಮದ ಬಸವಣ್ಣ ಕಟ್ಟೆ ಹತ್ತಿರ ನಮ್ಮ ಮತ್ತು ಅವರ ಹಿರಿಯರ ಸಮಕ್ಷಮ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳೊಣ ಎಂದು ಹೇಳಿದ್ದರಿಂದ ಸದರಿ ಮಾತುಕತೆ ನಾನು ಮತ್ತು ನಮ್ಮ ತಂದೆಯಾದ ಲಿಂಗಣ್ಣಗೌಡ, ಅಣ್ಣತಮ್ಮಂದಿರಾದ ಮಹಾಂತಗೌಡ, ಬಸವರಾಜಪ್ಪಗೌಡ ಮತ್ತು ಇತರರು ಸೇರಿ ಹೋಗಿದ್ದೇವು. ಬೆಳಗ್ಗೆ 11-00 ಗಂಟೆ ಸುಮಾರಿಗೆ ದಾರಿ ವಿಷಯದಲ್ಲಿ ಮಾತಾಡುತ್ತಿದ್ದಾಗ ನಾವು ಮೊದಲು ಎಷ್ಟು ಇದೆ ಅಷ್ಟು ಬಿಟ್ಟಿದ್ದೆವೆ ಎಂದು ಹೇಳಿ ನಮ್ಮ ಕೆಲಸ ನಡೆದ ಸ್ಥಳಕ್ಕೆ ಮರಳಿ ಹೋಗುತ್ತಿದ್ದಾಗ 1) ಶೇಖರಪ್ಪಗೌಡ ತಂದೆ ಗೂಳಪ್ಪಗೌಡ ಬಿರೆದಾರ ಪಾಟಿಲ್, 2) ಶರಣಪ್ಪಗೌಡ ತಂದೆ ಗೂಳಪ್ಪಗೌಡ ಬಿರೆದಾರ ಪಾಟಿಲ್, 3) ಮಲ್ಲಣ್ಣಗೌಡ ತಂದೆ ಶರಣಪ್ಪಗೌಡ ಬಿರೆದಾರ ಪಾಟೀಲ್ ಎಲ್ಲರೂ ಸಾ:ತಡಿಬಿಡಿ ಈ ಮೂರು ಜನ ಸೇರಿ ಬಂದವರೆ ನಮಗೆ ತಡೆದು ನಿಲ್ಲಿಸಿ, ದಾರಿ ಬಿಡು ಎಂದರೆ ಬಿಡುತ್ತಿಲ್ಲ ಸೂಳೆ ಮಕ್ಕಳೆ ಮತ್ತೆ ನ್ಯಾಯಪಂಚಾಯತಿಗೆ ಯಾಕೆ ಕರೆದಿರಿ ಎಂದು ಅವಾಚ್ಯ ಬೈದು ಮಲ್ಲಣ್ಣಗೌಡ ಈತನು ಬಂದು ನನ್ನ ಬಲಗೈ ಹಿಡಿದು ಒಡ್ಡು ಮುರಿದು, ಒಳಪೆಟ್ಟು ಮಾಡಿದನು. ಶೇಖರಪ್ಪಗೌಡ ಮತ್ತು ಶರಣಪ್ಪಗೌಡ ಇಬ್ಬರೂ ಬಂದು ನನ್ನೊಂದಿಗೆ ತಕ್ಕೆ ಕುಸ್ತಿಗೆ ಬಿದ್ದು, ಕೈಯಿಂದ ಮುಖಕ್ಕೆ ಎದೆಗೆ ಗುದ್ದಿದರು. ಬಿಡಿಸಲು ಬಂದ ಮಹಾಂತಗೌಡನಿಗೆ ಶೇಖರಪ್ಪಗೌಡನು ಎದೆ ಮೇಲಿನ ಅಂಗಿ ಹಿಡಿದು ಕಾಲಿನಿಂದ ಹೊಟ್ಟೆಗೆ ಒದ್ದರು. ಬಿಡಿಸಲು ಬಂದ ಬಸವರಾಜಪ್ಪಗೌಡನಿಗೆ ಮಲ್ಲಣ್ಣಗೌಡನು ಅಂಗಿ ಹಿಡಿದು ಎಳೆದಾಡಿ ಕೈಯಿಂದ ಬೆನ್ನಿಗೆ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಹೊನ್ನಪ್ಪ ತಂದೆ ಹಣಮಂತ, ಬಸವರಾಜ ಹೊಕ್ರಾಣಿ ಇವರು ಬಂದು ಬಿಡಿಸಿರುತ್ತಾರೆ. ಕಾರಣ ದಾರಿ ವಿಷಯದಲ್ಲಿ ಮಾತುಕತೆ ಆಡೋಣ ಎಂದು ಕರೆದು ನಮಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಹೊಡೆದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ. ನನಗೆ ಬಲಗೈ ನೋವಾಗಿ ಸಹಿ ಮಾಡಲು ಬರುತ್ತಿಲ್ಲದ್ದರಿಂದ ನನ್ನ ಎಡಗೈ ಹೆಬ್ಬೆಟ್ಟಿನ ಸಹಿ ಮಾಡಿರುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 67/2021 ಕಲಂ: 504, 341, 323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ :- 68/2021 ಕಲಂ: 188,269.270.353,323,504,506 ಐಪಿಸಿ : ಇಂದು ದಿನಾಂಕ 17/05/2021 ರಂದು 08.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶರಣಗೌಡ ತಂದೆ ಬಸನಗೌಡ ಉಳ್ಳೆಸುಗೂರ ವಯಸ್ಸು||39 ಜಾ|| ಹಿಂದೂ ರಡ್ಡಿ ಉ|| ಮುದನೂರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸದ್ಯ ಕೋವಿಡ್ -19 ಪ್ರಭಾರಿ ಸಾ|| ರಾಜನಕೋಳೂರ ತಾ|| ಹುಣಸಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನೆಂದರೆ, ಇಂದು ದಿನಾಂಕ: 17.05.2021 ರಂದು ಮುಂಜಾನೆ 09.30 ಗಂಟೆಗೆ ನಾನು ನನ್ನ ಕರ್ತವ್ಯದ ಮೇಲೆ ನಮ್ಮ ಪಂಚಾಯತಿಯ ಕಾಮರ್ಿಕರಾದ ದೇವರಾಜ ತಂದೆ ಶಿವಣಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಹಣಮಂತ್ರಾಯ ಜಾಗೀರದಾರ, ಬಸವರಾಜ ತಂದೆ ಹಣಮಂತ್ರಾಯ ಅಗಸರ, ಭೀಮಪ್ಪ ತಂದೆ ಸಾಬಪ್ಪ ಮಾದರ, ಹಾಗು ಗ್ರಾಮ ಪಂಚಾಯತಿ ಸದಸ್ಯರಾದ ಮಾನಯ್ಯ ತಂದೆ ತಿಪ್ಪಣ್ಣ ಸೈಕಲ ನಾವೆಲ್ಲರೂ ಕೂಡಿಕೊಂಡು ಯಡಿಯಾಪೂರ ಗ್ರಾಮದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸೊಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದ್ದಾಗ ಅದೇ ಸಮಯಕ್ಕೆ ಸದರಿ ಗ್ರಾಮದ ಹಣಮಂತ್ರಾಯಗೌಡ @ ರಡ್ಡಿಗೌಡ ತಂದೆ ಈರಣಗೌಡ ಕಾರನೂರ ಈತನು ನಾವು ಮಾಡುವ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾಗ ನಾನು ಯಾಕೇ ಸುಮ್ಮನೇ ಈ ರೀತಿ ಮಾಡುತ್ತೀ ಅಂತ ಅಂದಾಗ ಸದರ ಹಣಮಂತ್ರಾಯಗೌಡ ಈತನು ನೀವು ಊರಲ್ಲಿ ಏನೂ ಮಾಡುವಂತಿಲ್ಲ ಸೂಳೇ ಮಕ್ಕಳೆ ಅಂತ ನಮ್ಮ ಸರಕಾರಿ ಕೆಲಸಕ್ಕೆ ಅಡ್ಡಪಡಿಸಿ ನಮ್ಮ ಕಾಮರ್ಿಕರಾದ ದೇವರಾಜ ಇವರಿಗೆ ಕೈಯಿಂದ ಹೊಡೆಬಡೆ ಸಹ ಮಾಡಿದ್ದು ಅದನ್ನು ಕೇಳಲು ಹೋದ ನನಗೂ ಸಹ ಅವಾಚ್ಯವಾಗಿ ಮಾತನಾಡಿದ್ದು ಇರುತ್ತದೆ. ಅಲ್ಲದೇ ಸದರಿ ಸಮಯದಲ್ಲಿ ಹಣಮಂತ್ರಾಯಗೌಡ ಕಾರನೂರ ಈತನು ತಾನೂ ಯಾವದೇ ಮಾಸ್ಕ ಧರಿಸದೇ ನಿಯಮ ಬಾಹಿರವಾಗಿ ತಿರುಗಾಡಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿ ಜೀವದ ಭಯ ಹಾಕಿದ್ದು ಇರುತ್ತದೆ. ನಂತರ ನಾನು ಸದರ ವಿಷಯವನ್ನು ನಮ್ಮ ಮೇಲಾಧಿಕಾರಿಯವರಲ್ಲ್ಲಿ ತಿಳಿಸಿ ತಡವಾಗಿ ಬಂದು ಈ ದೂರ ಅಜರ್ಿ ನೀಡಿದ್ದು ಕಾರಣ ನನ್ನ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ ನಮ್ಮ ಕಾಮರ್ಿಕನ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ ಮೇಲ್ಕಾಣಿಸಿದ ಹಣಮಂತ್ರಾಯಗೌಡ ಕಾರನೂರ ಸಾ|| ಯಡಿಯಾಪೂರ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಗುನ್ನೆ ನಂಬರ 68/2021 ಕಲಂ 188,269,270,353,323,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ :- 52/2021 32, 34 ಕೆ.ಇ ಆ್ಯಕ್ಟ್ ಮತ್ತು ಕಲಂ: 188 ಐಪಿಸಿ : ಇಂದು ದಿನಾಂಕ: 17/05/2021 ರಂದು 07.15 ಪಿಎಮ್ ಕ್ಕೆ ಶ್ರೀ. ಸೋಮಲಿಂಗ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಸಿಂದಗಿ-ಶಹಾಪುರ ಮೇನ್ ರೋಡಿನ ರಬ್ಬನಳ್ಳಿ ಗ್ರಾಮದ ಹತ್ತಿರ ಕೆನಾಲ ಹತ್ತಿರ ಜೈಭವಾನಿ ದಾಬಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ 05.15 ಪಿಎಂ ಕ್ಕೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಕಾರದ ಪರವಾನಿಗೆ ಇಲ್ಲದಯೇ, ಸರಕಾರದ ಲಾಕಡೌನ್ ಆದೇಶ ಉಲ್ಲಂಗಣೆ ಮಾಡಿ ದಾಬಾದಲ್ಲಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾರುತ್ತಿರುವ ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೋಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿತನು ಪರಾರಿ ಆಗಿ ತಪ್ಪಿಸಿಕೊಂಡು ಮದ್ಯವನ್ನು, ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಮುದ್ದೆಮಾಲನ್ನು ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 52/2021 ಕಲಂ, 32, 34 ಕೆ.ಇ ಆ್ಯಕ್ಟ್ ಮತ್ತು ಕಲಂ: 188 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ :-. 76/2021 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 17.05.2021 ರಂದು 6.30 ಪಿಎಮ್ ಕ್ಕೆ ಸ.ತಪರ್ೇ ಶ್ರೀ ಹಣಮಂತ್ರಾಯ ಪಿ.ಎಸ್.ಐ (ಅ.ವಿ)ರವರು ಠಾಣೆಗೆ ಹಾಜರಾಗಿ ಸಾಯಂಕಾಲ 05-00 ಗಂಟೆಗೆ ಸೈದಾಪೂರ ಗ್ರಾಮದಲ್ಲಿ ಬಾಡಿಯಾಳಕ್ಕೆ ಹೋಗುವ ದಾರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿತರು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.76/2021 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

Last Updated: 19-05-2021 11:18 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080