ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/04/2021

ಶೋರಾಪುರ ಪೊಲೀಸ್ ಠಾಣೆ :- 63/2021 ಕಲಂ 323,324,448,504,506 ಸಂ.34 ಐಪಿಸಿ: ಇಂದು ದಿನಾಂಕ: 18/04/2021 ರಂದು 05-30 ಪಿ.ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಪಿಯರ್ಾದಿದಾರನಾದ ಶ್ರೀ ರಾಜಕೀರಣ ತಂದೆ ಲಕ್ಷ್ಮಿ ನಾರಾಯಣ ರಫುಗಾರ ವಯಾ||33 ವರ್ಷ ಉ||ಒಕ್ಕಲುತನ ಜಾತಿ||ಬೆಸ್ತರ ಸಾ||ಮೊಜಂಪೂರ ಓಣಿ ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ದೂರು ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:18-04-2021 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನನ್ನ ತಂದೆಯಾದ ಲಕ್ಷ್ಮಿ ನಾರಾಯಣ ತಾಯಿಯಾದ ಶ್ರೀ ಶಿವಕುಮಾರಿ ಅಣ್ಣನಾದ ಹರೀಶ ಮೂವರು ಕಲಬುರಗಿಗೆ ಹೋಗಿದ್ದರು. ನಾನು ನನ್ನ ಹೆಂಡತಿಯಾದ ಶೀಮತಿ ವಿಜಯಲಕ್ಷಿಇಬ್ಬರು ಮನೆಯಲ್ಲಿದ್ದೆವು. ನಂತರ ನಾನು ಮಧ್ಯಾಹ್ನ 12 ಗಂಟೆ ಮನೆಯಿಂದ ಹೊರಗಡೆ ಹೋಗಿದ್ದೆನು. ಅಂದಾಜು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಸುರಪೂರ ನರಸಿಂಗ ಗುಡಿಯ ಹತ್ತಿರ ಇರುವಾಗ ನನ್ನ ಹೆಂಡತಿಯಾದ ಶ್ರೀಮತಿ ವಿಜಯಲಕ್ಷ್ಮಿ ಇವಳು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಾನು ಮನೆಯಲ್ಲಿ ಒಬ್ಬಳೆ ಇದ್ದು, ಸುರಪೂರದ 1) ವಿಷ್ಣು ತಂದೆ ಬಾಬುರಾವ, ಅವರ ಅಣ್ಣನಾದ 2) ಗೋಪಾಲ ತಂದೆ ಬಾಬುರಾವ ಮತ್ತು ಅವರ ತಮ್ಮನಾದ 3) ಪವನ ತಂದೆ ಬಾಬುರಾವ ಹಾಗೂ ಅವರ ತಮ್ಮನಾದ 4) ಚಂದ್ರಕಾಂತ ತಂದೆ ಬಾಬುರಾವ ಎಲ್ಲರೂ ಜಾತಿ:ಬೇಡರ ಇವರೆಲ್ಲರೂ ನಮ್ಮ ಕೈಯಲ್ಲಿ ಬಡಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಮನೆಗೆ ಬಂದು ಮನೆಯ ಮುಂದೆ ನಿಂತುಕೊಂಡು ನನಗೆ ಏ ರಂಡಿ ಸುಳೇ ನಿನ್ನ ಗಂಡ ಎಲ್ಲಿದ್ದಾನೆ ಮನೆಗೆ ಕರೆಯಿಸು ಇವತ್ತು ಒಂದು ಕೈ ನೊಡೆ ಬಿಡುತ್ತೆವೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾರೆ ನನಗೆ ಭಯವಾಗುತ್ತಿದೆ ಬೆಗ ಬಾ ಅಂತಾ ವಿಷಯ ತಿಳಿಸಿದಾಗ ನಾನು ಗಾಭರಿಗೊಂಡು ನಾನು ಅಂದಾಜು ಮಧ್ಯಾಹ್ನ 01-15 ಗಂಟೆ ಸುಮಾರಿಗೆ ನಮ್ಮ ಮನೆಗೆ ಹೋಗಲು ಮೇಲೆ ಹೇಳಿದ ನಾಲ್ಕು ಜನರು ನಮ್ಮ ಮನೆಯ ಅಂಗಳದಲ್ಲಿ ನಿಂತುಕೊಂಡು ಅವಾಚ್ಯವಾಗಿ ಬೈಯುತ್ತಿದ್ದನ್ನು ನೋಡಿ ನಾನು ಅವರ ಹತ್ತಿರ ಹೋಗಿ ಯಾಕೇ ನಮ್ಮ ಮನೆಗೆ ಬಂದು ನನ್ನ ಹೆಂಡತಿಗೆ ಅವಾಚ್ಯವಾಗಿ ಬೈಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಅವರೆಲ್ಲರೂ ಬಾ ಸುಳೆ ಮಗನೆ ನಿನಗೆ ಕಾಯುತ್ತಿದೆವು ಅಂತಾ ಅಂದವರೆ ಅವರಲ್ಲಿಯ ವಿಷ್ಣು ಈತನು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಯಿಂದ ನನ್ನ ಬಲಗಾಲಿಗೆ, ಸೊಂಟಕ್ಕೆ ಹಾಗೂ ಬಲಗೈ ಮುಂಗೈಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದಾಗ ನಾನು ಸತ್ತೆನೆಪ್ಪೋ ಅಂತಾ ಕೆಳಗೆ ಬಿದ್ದಾಗ ಗೋಪಾಲ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಸೊಂಟಕ್ಕೆ ಹೊಡೆದನು ಪವನ ಈತನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಸೊಂಟಕ್ಕೆ ಹಾಗೂ ಬಲಗೈ ಮೊಳಕೈಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದನು. ಚಂದ್ರಕಾಂತ ಈತನು ಕಾಲಿನಿಂದ ಒದ್ದು ಎಲ್ಲರೂ ಕೂಡಿ ಹೊಡೆ ಬಡೆ ಮಾಡುತ್ತಿರುವಾಗ ನಮ್ಮ ಓಣಿಯ ಶಸಿಕಾಂತ ಪಂಚಮಗೀರಿ ಹಾಗೂ ನನ್ನ ಹೆಂಡತಿಯಾದ ವಿಜಯಲಕ್ಷ್ಮಿ ಇವರು ಜಗಳವನ್ನು ನೋಡಿ ಬಿಡಿಸಿದರು. ಆಗ ಅವರು ಇವತ್ತು ಉಳದಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಹಾಗೂ ನಿಮ್ಮ ಕುಟುಂಬದವರ ಜೀವ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡ ನಾನು ಒಂದು ಖಾಸಗಿ ಅಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಹೋಗಿ ಉಪಚಾರ ಪಡೆದುಕೊಂಡಿದ್ದು ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಹೋಗಲು ಬರೆದುಕೊಟ್ಟಿದ್ದು ಇರುತ್ತದೆ. ನಮ್ಮ ಅಕ್ಕಳಾದ ರಾಮೇಶ್ವರಿ ಇವಳು ವಿಷ್ಣು ಈತನೊಂದಿಗೆ ಪ್ರಿತಿಸಿ ಓಡಿ ಹೋಗಿ ಮದುವೆ ಆಗಿದ್ದು, ಅಂದಿನಿಂದ ಅವರು ನಮ್ಮ ಕುಟುಂಬದವರೊಂದಿಗೆ ಆಗಾಗ ಜಗಳ ಮಾಡಿ ತಕರಾರು ಮಾಡುತ್ತಾ ವೈಷ್ಯಮ್ಯ ಬೆಳಸಿಕೊಂಡು ಬಂದಿದ್ದು, ಅದೆ ವೈಷ್ಯಮ್ಯದಿಂದ ಅವರೆಲ್ಲರೂ ನನ್ನೊಂದಿಗೆ ಜಗಳ ತಗೆದು ಹೊಡೆ ಬಡೆ ಮಾಡಿದ್ದು ಇರುತ್ತದೆ ಮೇಲೆ ಹೇಳಿದ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂಬರ 82/2021 ಕಲಂ 78(3) ಕೆ.ಪಿ ಆಕ್ಟ: : ಇಂದು ದಿನಾಂಕ 18/04/2021 ರಂದು, ಮುಂಜಾನೆ 10-15 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು ಸುರಪೂರ ಉಪ-ವಿಭಾಗ ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಜ್ಞಾಪನ ಪತ್ರ ನೀಡಿದರ ಸಾರಾಂಶವೆನೆಂದರೆ, ಇಂದು ದಿನಾಂಕ: 18/04/2021 ರಂದು, ಮುಂಜಾನೆ 09-30 ಗಂಟೆಗೆ ಭೀ-ಗುಡಿಯಿಂದ ಶಹಾಪೂರ ಕಡೆಗೆ ಪಟ್ರೋಲಿಂಗ್ ಕುರಿತು ಶಹಾಪೂರ ಕಡೆಗೆ ಬರುತಿದ್ದಾಗ, ಮುಂಜಾನೆ 09-45 ಗಂಟೆಗೆ ಶಹಾಪೂರದ ಹೊಸ ತಹಸೀಲ್ ಕಾಯರ್ಾಲಯದ ಹತ್ತಿರವಿದ್ದಾಗ, ಶಹಾಪೂರ ಪಟ್ಟಣದ ಗ್ಯಾರೇಜ್ ಲೈನದಲ್ಲಿರುವ ಸಿನ್ನೂರ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಶಹಾಪೂರ ಪೊಲೀಸ್ ಠಾಣೆಗೆ ಬಂದು, ಶಹಾಪೂರ ಪೊಲೀಸ್ ಠಾಣೆಯ ಎನ್.ಸಿ ನಂಬರ 23/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಸಿ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಮಟಕಾ ನಂಬರ ಬರೆದುಕೊಳ್ಳುತಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ನೀಡುವ ಕುರಿತು ಪತ್ರ ಬರೆದು ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲಯವು ಅನುಮತಿ ನೀಡಿರುತ್ತದೆ. ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ 82/2021 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.ನಂತರ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುವ ವ್ಯಕ್ತಿಯನ್ನು ಹಿಡಿದು ಅವನಿಂದ ನಗದು ಹಣ 5910=00 ರೂಪಾಯಿಗಳನ್ನು ಹಾಗೂ ಒಂದು ಬಾಲ್ ಪೆನ್ ಎರಡು ಮಟಕಾ ನಂಬರ ಬರೆದುಕೊಂಡ ಚೀಟಿಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 83/2021. ಕಲಂ. 279. 338.ಐ.ಪಿ.ಸಿ.: ಇಂದು ದಿನಾಂಕ: 18/04/2021 ರಂದು 13-30 ಗಂಟೆಗೆ ಪಿಯರ್ಾದಿ ಶ್ರೀಮತಿ ಸತ್ಯಮ್ಮ ಗಂಡ ಸಾಯಬಣ್ಣ ಭಾವಿಮನಿ ವ|| 45 ಜಾ|| ಹೋಲೆಯ ಉ|| ನ್ಯಾಯವಾದಿ ಸಾ|| ಭೀಮರಾಯನ ಗುಡಿ ಹಾ|| ವ|| ಆಶ್ರಯ ಕಾಲೋನಿ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 07/04/2021 ರಂದು ಮದ್ಯಾಹ್ನ 14-30 ಗಂಟೆಗೆ ನಾನು ಮತ್ತು ನನ್ನ ಮಗ ಶಿವಾ ತಂದೆ ಸಾಯಬಣ್ಣ ಭಾವಿಮನಿ, ಇಬ್ಬರು ಕೂಡಿ ಸರಕಾರಿ ಆಸ್ಪತ್ರೆಗೆ ಹೋಗುತ್ತಿರುವಾಗ ಸರಕಾರಿ ಆಸ್ಪತ್ರೆಯ ಹಿಂದಿನ ಕಂಪೌಡ ಪಕ್ಕದಲ್ಲಿ ಇರುವ ರಸ್ತೆಯ ಮೇಲೆ ಹಯ್ಯಾಳಪ್ಪ ವಕಿಲರ ಮನೆಯ ಹತ್ತಿರ ರಸ್ತೆಯ ಎಡಗಡೆ ಸೈಡಿಗೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ ಒಂದು ಸುಜುಕಿ ಆಕ್ಸೆಸ್,125 ಸವಾರನು ತನ್ನ ಸುಜುಕಿ ಆಕ್ಸೆಸ್,125 ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಹಿಂದೆ ಡಿಕ್ಕಿ ಪಡಿಸಿ ಅಪಘಾತಮಾಡಿದು.್ದ ಆಗ ನಾನು ನೆಲಕ್ಕೆ ಬಿದ್ದೆನು. ಸುಜುಕಿ ಆಕ್ಸೆಸ್,125 ಸವಾರನು ನೆಲಕ್ಕೆ ಬಿದ್ದನು. ಸದರಿ ಅಪಘಾತದಲ್ಲಿ ನನಗೆ ಬಲಗೈ ಮೊಳಕೈಗೆ ಮುರಿದು ಭಾರಿ ರಕ್ತಗಾಯ, ಬಲಗೈ ಹಸ್ತದ ಮಣಿಕಟ್ಟಿಗೆ ಗುಪ್ತಗಾಯ, ಬಲಗಾಲು ಮೊಳಕಾಲಿಗೆ ಗುಪ್ತಗಾಯವಾಗಿದ್ದು ಇರುತ್ತದೆ, ಆಗ ನನ್ನ ಮಗನು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ಸುಜುಕಿ ಆಕ್ಸೆಸ್,125 ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ, ತನ್ನ ಹೆಸರು ರಿಯಾಜ್ ತಂದೆ ಹನೀಫ್ ಕಂಠಿ ಸಾ|| ಗುತ್ತಿಪೇಠ ಶಹಾಪೂರ ಅಂತ ತಿಳಿಸಿದನು. ಸದರಿಯವನಿಗೆ ಸಣ್ಣ ಪುಟ್ಟ ಗುಪ್ತಗಾಯ ವಾಗಿದ್ದು ಇರುತ್ತದೆ. ನನಗೆ ಅಪಘಾತ ಮಾಡಿದ ಸುಜುಕಿ ಆಕ್ಸೆಸ್, 125 (ಸ್ಕೂಟಿ) ನಂ ಕೆಎ-33 ವಾಯ್-6204 ನೇದ್ದು ಇದ್ದು ಜಕಂ ಗೊಂಡಿರುತ್ತದೆ. ನನಗೆ ಅಪಘಾತವಾಗಿದೆ ಅಂತ ನನ್ನ ಮಗ ಶಿವಾ ಈತನು ನನ್ನ ಸಣ್ಣಮಗ ಚೇತನ ತಂದೆ ಸಾಯಬಣ್ಣ ಭಾವಿಮನಿ ಈತನಿಗೆ ತಿಳಿಸಿದ್ದರಿಂದ ಚೇತನ ಈತನು ಅಪಘಾತವಾದ ಸ್ಥಳಕ್ಕೆ ಬಂದು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ಆಗ ಶಿವಾ ಮತ್ತು ಚೇತನ ಇಬ್ಬರು ಕೂಡಿ ಅಲ್ಲೆ ಹೋರಟಿದ್ದ ಒಂದು ವಾಹನದಲ್ಲಿ ನನಗೆ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದು. ನಂತರ ನನಗೆ ನೋವು ಜಾಸ್ತಿಯಾಗಿದ್ದರಿಂದ ದಿನಾಂಕ. 08/04/2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿರುತ್ತೆನೆ. ಸದರಿ ಅಪಘಾತವು ದಿನಾಂಕ 07/04/2021 ರಂದು 14-30 ಗಂಟೆಯ ಸುಮಾರಿಗೆ ಜರುಗಿರುತ್ತದೆ, ನಾನು ನಮ್ಮ ಹಿರಿಯರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದುರೂನಿಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 83/2021 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂಬರ 84/2021 ಕಲಂ 87 ಕೆ.ಪಿ ಆಕ್ಟ: : ಮಾನ್ಯರೆ, ಇಂದು ದಿನಾಂಕ 18/04/2021 ರಂದು 2.40 ಪಿಎಂ ಕ್ಕೆ ಸ|| ತ|| ಫಿಯರ್ಾದಿ ಶ್ರೀ ವೆಂಕಟೇಶ ಡಿ.ವೈ.ಎಸ್.ಪಿ ಸಾಹೇಬರು ಸುರಪೂರ ಉಪವಿಭಾಗ ರವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಪರವಾನಗಿ ಪತ್ರ ಹಾಜರ ಪಡಿಸಿ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 18/04/2021 ರಂದು 1.00 ಪಿಎಂ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ನಗರದ ಎಪಿಎಂಸಿ ಆವರಣದಲ್ಲಿನ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 24/2021 ನೇದ್ದು ದಾಖಲಿಸಿಕೊಂಡು ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ ಅಂತ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 84/2021 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ 6 ಜನ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 18810=00 ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಬಂದು ಮುಂದಿನ ಕ್ರಮ ಕುರಿತು ಹಾಜರ ಪಡಿಸಿದ್ದು ಇರುತ್ತದೆ,.
ಶಹಾಪೂರ ಪೊಲೀಸ್ ಠಾಣೆ ೆ:- ಗುನ್ನೆ ನಂ 85/2021 ಕಲಂ 87 ಕೆ.ಪಿ ಆಕ್ಟ್: ಇಂದು ದಿನಾಂಕ 18/04/2021 ರಂದು, ರಾತ್ರಿ 20-15 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 18/04/2021 ಸಾಯಂಕಾಲ 19-00 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರದ ದೇವಿನಗರ ಏರಿಯಾದ ಮರೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಲೈಟಿನ ಬೆಳಕಿನಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಠಾಣೆಯ ಎನ್.ಸಿ ನಂಬರ 25/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ರಾತ್ರಿ 20-00 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಜೂಜಾಟ ಆಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿ ಅಂತ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 85/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 7 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 2140=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿರುತ್ತದೆ.

ಇತ್ತೀಚಿನ ನವೀಕರಣ​ : 19-04-2021 12:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080