Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19-05-2021

ಶಹಾಪೂರ ಪೊಲೀಸ್ ಠಾಣೆ :- 105/2021 ಕಲಂ 279, 283, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 18/05/2021 ರಂದು ಮುಂಜಾನೆ 08-00 ಗಂಟೆಗೆ ಫಿಯರ್ಾದಿ ಶ್ರೀ ಸಣ್ಣಚಂದ್ರಾಮಪ್ಪ ತಂದೆ ಬಸಲಿಂಗಪ್ಪ ದೊಡ್ಡಮನಿ ಸಾಃ ಅನ್ವರ ತಾಃ ವಡಗೇರಾ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸರಾಂಶವೆನೆಂದರೆ. ನಿನ್ನೆ ದಿನಾಂಕ 17/05/2021 ರಂದು, ಫಿಯರ್ಾದಿಯವರ ಮಗ ದೇವಿಂದ್ರಪ್ಪ ದೊಡ್ಡಮನಿ ಮತ್ತು ಅಣ್ಣ-ತಮ್ಮಕಿಯ ಮಗನಾದ ಬಾಲಪ್ಪ ದೊಡ್ಡಮನಿ ಇಬ್ಬರೂ ಕೂಡಿ ಸಾಯಂಕಾಲದ ಸುಮಾರಿಗೆ ಮೋಟರ್ ಸೈಕಲ್ ನಂಬರ ಕೆಎ-51-ಇ.ಎಮ್-0058 ನೇದ್ದರ ಮೇಲೆ ಅನ್ವರ ಗ್ರಾಮದಿಂದ ಗುಂಡಗುತರ್ಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರಿಗೆ ಆರಾಮ ಇಲ್ಲದ ಕಾರಣ ಮಾತನಾಡಿಸಿಕೊಂಡು ಬರಲು ಮೋಟರ್ ಸೈಕಲ್ ಮೇಲೆ ಹೋಗಿ, ಮರಳಿ ಮೋಟರ್ ಸೈಕಲ್ ಮೇಲೆ ಊರಿಗೆ ಬರುತಿದ್ದಾಗ, ರಾತ್ರಿ 19-30 ಗಂಟೆಯ ಸುಮಾರಿಗೆ ಖಾನಾಪೂರ-ಹತ್ತಿಗೂಡುರ ರೋಡಿನ ಮೇಲೆ ಅಗಸ್ತಾಳ ಗ್ರಾಮದ ಹತ್ತಿರವಿರುವ ಅನ್ವರ ಗ್ರಾಮದ ಖಾಸಿಂಪಟೇಲ್ ತಂದೆ ಲಾಳೇ ಪಟೇಲ ಇವರ ಹೊಲದ ಹತ್ತಿರ ಲಾರಿ ನಂಬರ ಎಪಿ-28-ಟಿಬಿ-7474 ನೇದ್ದರ ಚಾಲಕನು ತನ್ನ ಲಾರಿಯನ್ನು ರೋಡಿನಲ್ಲಿ ಯಾವುದೇ ಇಂಡಿಕೇಟರ್, ಪಾಕರ್ಿಂಗ್ ಲೈಟ್ ಹಾಕದೇ ಅಥವಾ ಇನ್ನಾವುದೇ ರೀತಿಯಲ್ಲಿ ಮುಂಜಾಗ್ರತಾ ಮತ್ತು ಮುನ್ಸೂಚನಾ ಕ್ರಮಗಳನ್ನು ಕೈಗೊಳ್ಳದೇ ಸಂಚಾರಕ್ಕೆ ಅಡತಡೆಯಾಗುವ ರೀತಿಯಲ್ಲಿ ಲಾರಿಯನ್ನು ರಾತ್ರಿ ಕತ್ತಲೆಯಲ್ಲಿ ಹತ್ತಿಗೂಡುರ ಕಡೆಗೆ ಮುಖ ಮಾಡಿ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದು, ಆ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಬಾಲಪ್ಪ ಈತನು ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಲಾರಿಯ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಫಿಯರ್ಾದಿ ಮಗ ದೇವಿಂದ್ರಪ್ಪ ದೊಡ್ಡಮನಿ ಮತ್ತು ಬಾಲಪ್ಪ ದೊಡ್ಡಮನಿ ಇಬ್ಬರು ತಲೆಗೆ ಭಾರಿ ರಕ್ತಗಾಯ ಹಾಗೂ ಅಲ್ಲಲಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಅಂತ ಫಿಯರ್ಾದಿಯವರ ಸಾರಾಂಶದ ಮೇಲಿಂದ ಆರೋಪಿತರ ವಿರುದ್ಧ ಠಾಣೆ ಗುನ್ನೆ ನಂಬರ 105/2021 ಕಲಂ 279, 283, 304(ಎ) ಐ.ಪಿ.ಸಿ ಸಂಗಡ ಕಲಂ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ವಡಗೇರಾ ಪೊಲೀಸ್ ಠಾಣೆ :- 68/2021 ಕಲಂ: 379 ಐಪಿಸಿ : ದಿನಾಂಕ: 18/05/2021 ರಂದು 00-15 ಎಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 17/05/2021 ರಂದು ರಾತ್ರಿ ನಾನು ಮತ್ತು ಸಂಗಡ ಮಹೇಂದ್ರ ಪಿಸಿ 254, ಸುರೇಶ ಪಿಸಿ 238 ರವರೊಂದಿಗೆ ಆದಿ ಬಸವಣ್ಣ, ಹೊರಟೂರು ಹತ್ತಿರ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿದ್ದೆನು. ಗೋಡಿಹಾಳ ಗ್ರಾಮದ ಭೀಮಾ ನದಿಯಿಂದ ಯಾರೋ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಿಕೊಂಡು ಹಾಲಗೇರಾ ಮುಖಾಂತರ ಹೊರಟೂರಿಗೆ ಸಾಗಿಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಮಹೇಂದ್ರ ಪಿಸಿ 254, ಸುರೇಶ ಪಿಸಿ 238 ರವರೊಂದಿಗೆ ರಾತ್ರಿ 11-30 ಪಿಎಮ್ ಸುಮಾರಿಗೆ ಹಾಲಗೇರಾ ಕ್ರಾಸ ಹತ್ತಿರ ಹೋಗಿ ಮಹಿಪಾಲರೆಡ್ಡಿ ಈತನ ಹೊಟೆಲ್ ಮರೆಯಾಗಿ ನಿಂತು ನೋಡಿದಾಗ ಗೋಡಿಹಾಳ ಕಡೆಯಿಂದ ಒಂದು ಟ್ರ್ಯಾಕ್ರ ಮರಳು ತುಂಬಿಕೊಂಡು ಬರುವುದು ಖಚಿತಪಡಿಸಿಕೊಂಡು ಟ್ರ್ಯಾಕ್ಟರ ನಿಲ್ಲಿಸಿದಾಗ ಟ್ರ್ಯಾಕ್ಟರ ಚಾಲಕನು ಕ್ರಾಸಿನಲ್ಲಿ ಟ್ರ್ಯಾಕ್ಟರ ಬಿಟ್ಟು ಓಡಿ ಹೋದನು. ಸದರಿಯವನಿಗೆ ಬೀದಿ ದೀಪದಲ್ಲಿ ನೋಡಿದ್ದು, ಪುನಃ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟ್ರ್ಯಾಕ್ಟರದಲ್ಲಿ ಅರ್ಧ ಟ್ರ್ಯಾಲಿ ಮರಳು ತುಂಬಿತ್ತು. ಟ್ರ್ಯಾಕ್ಟರ ಮತ್ತು ಟ್ರ್ಯಾಲಿಗೆ ನಂಬರ್ ನೋಡಲಾಗಿ ನೋಂದಣಿ ನಂಬರ ಇರುವುದಿಲ್ಲ. ಟ್ರ್ಯಾಕ್ಟರ ಇಂಜನ್ ನಂ. 391358/ಖಃಕ20561 ಚಾಸ್ಸಿ ನಂ. ಒಃಓಂಕ49ಂಃಐಖಿಕ09161 ಇರುತ್ತದೆ. ಟ್ರ್ಯಾಲಿಗೆ ನಂಬರ ಇರುವುದಿಲ್ಲ. ನೀಲಿ ಬಣ್ಣದ ಟ್ರ್ಯಾಲಿ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಭೀಮಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ತುಂಬಿ ಸಾಗಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಮರಳು ತುಂಬಿದ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಟ್ರ್ಯಾಕ್ಟರನ್ನು ಠಾಣೆಗೆ ತಂದು ಈ ದೂರು ನೀಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 68/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 69/2021 ಕಲಂ: 143, 147, 504, 324, 323 ಸಂಗಡ 149 ಐಪಿಸಿ : ದಿನಾಂಕ:18/05/2021 ರಂದು 4-50 ಪಿಎಮ್ಕ್ಕೆ ಶ್ರೀ ನಿಂಗಪ್ಪ ತಂದೆ ಬಸಪ್ಪ ಪೂಜಾರಿ, ವ:22, ಜಾ:ಕುರುಬರು, ಉ:ಒಕ್ಕಲುತನ, ಸಾ:ಅನಕಸೂಗೂರು. ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ದೊಡ್ಡಪ್ಪನ ಮಗನಾದ ಅಣ್ಣ ದೇವಪ್ಪ ತಂದೆ ಅಯ್ಯಪ್ಪ ಪೂಜಾರಿ ಈತನು ತನ್ನ ಮನೆಯ ಹತ್ತಿರ ತನ್ನ ಖಾಲಿ ಜಾಗದಲ್ಲಿ ಹತ್ತಿ ಕಟ್ಟಿಗೆಯನ್ನು ತಂದು ಹಾಕಿರುತ್ತಾನೆ. ದನ-ಕರುಗಳು ಅದನ್ನು ಕೆಡಿಸಿ ಬೀಡುತ್ತವೆ ಅಂತಾ ಅದರ ಸುತ್ತಲು ಮುಳ್ಳಿನ ಕಂಟಿ ಬೇಲಿಯನ್ನು ತಂದು ಹಾಕಿರುತ್ತಾನೆ. ಹೀಗಿದ್ದು ಮೊನ್ನೆ ದಿನಾಂಕ: 16/05/2021 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಮತ್ತು ಅಣ್ಣಂದಿರಾದ ತಾಯಪ್ಪ, ದೇವಪ್ಪ, ಶರಣಪ್ಪ ಎಲ್ಲರೂ ನಮ್ಮ ಮನೆ ಬಾಜು ಖಾಲಿ ಜಾಗದಲ್ಲಿ ಮಾತಾಡುತ್ತಾ ನಿಂತುಕೊಂಡಾಗ ನಮ್ಮ ಅಣ್ಣತಮ್ಮಕಿಯವರಾದ 1)ತಾಯಪ್ಪ ತಂದೆ ಅಯ್ಯಪ್ಪ ಪೂಜಾರಿ, 2)ದೇವಪ್ಪ ತಂದೆ ತಾಯಪ್ಪ ಪೂಜಾರಿ, 3)ರಡ್ಡೆಪ್ಪ ತಂದೆ ತಾಯಪ್ಪ ಪೂಜಾರಿ, 4)ಬಸಪ್ಪ ತಂದೆ ತಾಯಪ್ಪ ಪೂಜಾರಿ, 5)ಯಲ್ಲಪ್ಪ ತಂದೆ ಅಯ್ಯಪ್ಪ ಪೂಜಾರಿ, 6)ನಾಗಪ್ಪ ತಂದೆ ಯಲ್ಲಪ್ಪ ಪೂಜಾರಿ, 7)ಮಲ್ಲಪ್ಪ ತಂದೆ ಯಲ್ಲಪ್ಪ ಪೂಜಾರಿ, 8)ಅಯ್ಯಪ್ಪ ತಂದೆ ಯಲ್ಲಪ್ಪ ಪೂಜಾರಿ, 9)ಶಂಕ್ರಪ್ಪ ತಂದೆ ದಂಡಪ್ಪ ಪೂಜಾರಿ, 10)ಚೆನ್ನಪ್ಪ ತಂದೆ ದಂಡಪ್ಪ ಪೂಜಾರಿ 11)ನಾಗಪ್ಪ ತಂದೆ ಸಿದ್ದಪ್ಪ ಪೂಜಾರಿ, 12)ಮಲ್ಲಿಕಾಜರ್ುನ ತಂದೆ ನಾಗಪ್ಪ ಪೂಜಾರಿ, 13)ಸೋಮಪ್ಪ ತಂದೆ ಸಿದ್ದಪ್ಪ ಪೂಜಾರಿ, 14)ನಿಂಗಮ್ಮ ಗಂಡ ಸೋಮಪ್ಪ ಪೂಜಾರಿ, 15)ಶಂಕ್ರಮ್ಮ ಗಂಡ ತಾಯಪ್ಪ ಪೂಜಾರಿ, 16)ಮಲ್ಲಪ್ಪ ತಂದೆ ಶಿವಪ್ಪ ಪೂಜಾರಿ, 17)ರೆಡ್ಡೆಪ್ಪ ತಂದೆ ಶಿವಪ್ಪ ಪೂಜಾರಿ, 18)ಸೌಭಾಗ್ಯ ಗಂಡ ಹಣಮಂತ ಕುರಿ, 19)ಮಲ್ಲಮ್ಮ ಗಂಡ ಯಲ್ಲಪ್ಪ ಪೂಜಾರಿ, 20)ಶಿವಮ್ಮ ಗಂಡ ನಾಗಪ್ಪ ಪೂಜಾರಿ, 21)ನಾಗಮ್ಮ ಗಂಡ ದಂಡಪ್ಪ ಪೂಜಾರಿ ಎಲ್ಲರೂ ಸಾ:ಅನಕಸೂಗೂರು ಇದ್ದು, ಅಕ್ರಮಕೂಟ ರಚನೆ ಮಾಡಿಕೊಂಡು ಬಂದವರೆ ನಮ್ಮ ಜಾಗಕ್ಕೆ ಬಂದು ಯಾವ ಭೊಸುಡಿ ಮಗ ಮುಳ್ಳಿನ ಬೇಲಿ ತಂದು ಹಾಕಿದ್ದಾನೆ ಎಂದು ಅವ್ಯಾಚವಾಗಿ ಬೈದು ಜಗಳ ತೆಗೆದು ನಮ್ಮಣ್ಣ ದೇವಪ್ಪ ತಂದೆ ಅಯ್ಯಪ್ಪ ಪೂಜಾರಿ ಈತನಿಗೆ ದೇವಪ್ಪ ತಂದೆ ತಾಯಪ್ಪ ಪೂಜಾರಿ ಮತ್ತು ರೆಡ್ಡೆಪ್ಪ ತಂದೆ ತಾಯಪ್ಪ ಪೂಜಾರಿ ಇಬ್ಬರೂ ಹಿಡಿದುಕೊಂಡು ಹೊಡೆಯುತ್ತಿರುವಾಗ ಬಿಡಿಸಲು ಬಂದ ನಮ್ಮ ದೊಡ್ಡಪ್ಪನಾದ ನಿಂಗಪ್ಪ ತಂದೆ ಬುಸಪ್ಪನಿಗೆ ತಾಯಪ್ಪ ತಂದೆ ಅಯ್ಯಪ್ಪ ಪೂಜಾರಿ ಈತನು ಕಲ್ಲಿನಿಂದ ಎಡ ಕಪಾಳಕ್ಕೆ ಜೋರಾಗಿ ಹೊಡೆದು ರಕ್ತಗಾಯ ಮಾಡಿದನು. ಮಲ್ಲಪ್ಪ ತಂದೆ ಅಯ್ಯಪ್ಪ ಪೂಜಾರಿ ಈತನಿಗೆ ಬಸಪ್ಪ ತಂದೆ ತಾಯಪ್ಪ ಪೂಜಾರಿ ಮತ್ತು ಯಲ್ಲಪ್ಪ ತಂದೆ ಅಯ್ಯಪ್ಪ ಪೂಜಾರಿ ಹಿಡಿದುಕೊಂಡಾಗ ನಾಗಪ್ಪ ತಂದೆ ಯಲ್ಲಪ್ಪನು ಕಟ್ಟಗೆಯಿಂದ ತೆಲೆ ರಕ್ತ ಗಾಯವಾಗುವಂತೆ ಹೊಡೆದನು. ಬಿಡಿಸಲು ಹೋದ ಶರಣಪ್ಪ ತಂದೆ ನಿಂಗಪ್ಪ ಈತನಿಗೆ ಮಲ್ಲಪ್ಪ ತಂದೆ ಯಲ್ಲಪ್ಪ ಪೂಜಾರಿ ಈತನು ಜಾಡಿಸಿ ನೆಲಕ್ಕೆ ತಳ್ಳಿ ನುಗ್ಗಿಸಿದಾಗ ಅಯ್ಯಪ್ಪ ತಂದೆ ಯಲ್ಲಪ್ಪ ಪೂಜಾರಿ ಮತ್ತು ಶಂಕ್ರಪ್ಪ ತಂದೆ ದಂಡಪ್ಪ ಪೂಜಾರಿ ಈತನು ಬಲಭುಜಕ್ಕೆ ಕಲ್ಲಿನಿಂದ ಒಳಪೆಟ್ಟಾಗುವಂತೆ ಹೊಡೆದೆನು. ಮಲ್ಲಪ್ಪ ತಂದೆ ನಿಂಗಪ್ಪ ಪೂಜಾರಿಗೆ ಚೆನ್ನಪ್ಪ ತಂದೆ ದಂಡಪ್ಪ ಪೂಜಾರಿ ಮತ್ತು ನಾಗಪ್ಪ ತಂದೆ ಸಿದ್ದ್ಪಪ್ಪ ಪೂಜಾರಿ ತಕ್ಕೆಯಲ್ಲಿ ಹಿಡಿದುಕೊಂಡಾಗ ಮಲ್ಲಿಕಾಜರ್ುನ ತಂದೆ ನಾಗಪ್ಪ ಪೂಜಾರಿಯು ಎದೆ, ಬೆನ್ನಿಗೆ, ಹೊಟ್ಟೆಗೆ ಗುಪ್ತ ಗಾಯವಾಗುವಂತೆ ಹೊಡೆದನು. ನಿಂಗಪ್ಪ ತಂದೆ ಬುಸಪ್ಪನಿಗೆ ಸೊಮಪ್ಪ ತಂದೆ ಸಿದ್ದಪ್ಪ ಪೂಜಾರಿ, ಮತ್ತು ಮಲ್ಲಪ್ಪ ತಂದೆ ಶಿವಪ್ಪ ಪೂಜಾರಿ ಹಿಡಿದುಕೊಂಡಾಗ ರಡ್ಡೆಪ್ಪ ತಂದೆ ಶಿವಪ್ಪನು ಜೋರಾಗಿ ಎದೆಗೆ ಗುದ್ದಿ ಬೆನ್ನಗೆ ಒಳಪೆಟ್ಟಾಗುವಂತೆ ಗುದಿದ್ದರು. ನಿಂಗಪ್ಪನಿಗೆ ಬೀಡಿಸಲು ಬಂದ ರೇಣುಕಮ್ಮ ಗಂಡ ದೇವಪ್ಪ ದಿವಾಳಗುಡ್ಡ ಈಕೆಗೆ ನಿಂಗಮ್ಮ ಗಂಡ ಸೋಮಪ್ಪ ಪುಜಾರಿ ಮತ್ತು ಶಂಕ್ರಮ್ಮ ಗಂಡ ತಾಯಪ್ಪ ಪೂಜಾರಿಗೆ ಹಿಡಿದುಕೊಂಡಾಗ ಸೌಭಾಗ್ಯಳು ಕಪಾಳಕ್ಕೆ ಹೊಡೆದಳು. ರೇಣುಕಮ್ಮಳಿಗೆ ಹೊಡೆಯುವುದು ನೋಡಿ ಬಿಡಿಸಲು ಬಂದ ನಾಗಮ್ಮ ಗಂಡ ದೇವಪ್ಪ ಪೂಜಾರಿ ಈಕೆಗೆ ಶಿವಮ್ಮ ಗಂಡ ನಾಗಪ್ಪ ಪೂಜಾರಿ ಮತ್ತು ನಾಗಮ್ಮ ಗಂಡ ದಂಡಪ್ಪ ಪೂಜಾರಿ ಇಬ್ಬರು ಸೇರಿ ಬೆನ್ನಿಗೆ ಕಪಾಳಕ್ಕೆ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ಹಣಮಂತ ತಂದೆ ಬಸಪ್ಪ ದೊರೆ ಮತ್ತು ನಾಗೇಂದ್ರ ತಂದೆ ಮಲ್ಲಣ್ಣ ಕುಂಬಾರ ಹಾಗೂ ಈಶಪ್ಪ ತಂದೆ ಹಣಮಂತ್ರಾಯ ದೇಸಾಯಿ ಹಾಗೂ ಇತರರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಕಾರಣ ನಮ್ಮ ಜಾಗದಲ್ಲಿ ಯಾಕೆ ಕಟ್ಟಿಗೆ ಮತ್ತು ಮುಳ್ಳು ಬೇಲಿ ಹಾಕಿದ್ರಿ ಅಂತಾ ಜಗಳ ತೆಗೆದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ. ಜಗಳ ಆದ ದಿನ ನಾವು ವಡಗೇರಾ ಸರಕಾರಿ ಆಸ್ಪತ್ರೆಗೆ ಬಂದು ತೋರಿಸಿಕೊಂಡು ಹೋಗಿದ್ದು, ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 69/2021 ಕಲಂ: 143, 147, 148, 504, 324, 323 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ :- 77/2021 ಕಲಂ. 279.338 ಐಪಿಸಿ : ದಿನಾಂಕ: 17-05-2021 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಆಡು ಕಾಯಲು ನಮ್ಮ ಊರಿನ ಅಡವಿಯಲ್ಲಿ ಆಡುಗಳನ್ನು ಕಾಯ್ದುಕೊಂಡು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ಗೊಂದಡಗಿ- ಗೂಡೂರ ರಸ್ತೆಯ ಮೇಲೆ ಗೋಕುಲಸಾಬ ದಗರ್ಾ ಹತ್ತಿರ ಆಡುಗಳನ್ನು ಬಿಟ್ಟು ಬೆಸಿಗೆ ಬಿಸಿಲು ಇರುವದರಿಂದ ನಾನು ರೋಡಿನ ಪಕ್ಕದಲ್ಲಿ ನಿಲ್ಲಿಸಿದ ವಾಟರ ಟ್ಯಾಂಕರ ನೆರಳಿಗೆ ನಿಂತುಕೊಂಡಿರುವಾಗ ಗೂಡೂರ ಕಡೆಯಿಂದ ಒಬ್ಬ ಮೋಟರ ಸೈಕಲ್ ಚಾಲಕನು ತಾನು ನಡೆಸುವ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಅಪಘಾತ ಪಡಿಸಿದನು. ಅಪಘಾತ ಪಡಿಸಿದಾಗ ನನಗೆ ಬಲಗಾಲಿನ ಪಾದದ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಸೊಂಟಕ್ಕೆ ಒಳಪೆಟ್ಟು ಆಗಿರುತ್ತದೆ. ಆಗ ನಾನು ಚೀರಾಡುವ ಸಪ್ಪಳ ಕೇಳಿ ಕವಳಿ ರಾಶಿಯಲಿದ್ದ ನಮ್ಮ ಅಣ್ಣ ಮೋನಪ್ಪ ತಂದೆ ಬಾಲಪ್ಪ ಈತನು ಓಡಿ ಬಂದನು ಆಗ ಮೋಟರ ಸೈಕಲ ಚಾಲನು ಡಿಕ್ಕಿ ಪಡಿಸಿ ಅಲ್ಲೆ ನಿಂತಿದ್ದು ಅವನಿಗೆ ಯಾವುದೆ ಗಾಯಗಳು ಆಗಿರಲಿಲ್ಲ. ಅವನ ಹೆಸರು ವಿಳಾಸ ಕೇಳಲಾಗಿ ಅವನ ಹೆಸರು ಮಲ್ಲಿಕಾಜರ್ುನ ತಂದೆ ಹಣಮಂತ ನಾಯ್ಕೋಡಿ ವ|| 28 ವರ್ಷ ಜಾ|| ಕಬ್ಬಲಿಗ ಉ|| ಚಾಲಕ ಸಾ|| ಟಿ.ವಡಗೇರಾ ತಾ|| ಶಹಾಪೂರ ಅಂತಾ ತಿಳಿಸಿದನು ಅಪಘಾತ ಪಡಡಿಸಿದ ಮೋಟರ ಸೈಕಲ್ ಪರಿಸಿಶಿಲಿಸಿ ನೋಡಲಾಗಿ ಅದರ ನಂ. ಕೆಎ-33 ಕೆ-9239 ಅಂತಾ ಇತ್ತು ಅಷ್ಟರಲ್ಲಿ ನಮ್ಮ ತಂದೆ ಬಂದನು ಆಗ ನನಗೆ ವೈದ್ಯಕೀಯ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ನಮ್ಮ ತಂದೆ ಮತ್ತು ನಮ್ಮ ಅಣ್ಣ ಇಬ್ಬರೂ ಕೂಡಿ ರಾಯಚೂರ ಬಾಲಂಕು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 67/2021 ಕಲಂ 379 ಐಪಿಸಿ : ಇಂದು ದಿನಾಂಕ 18/05/2021 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಕುಮಾರ ತಂದೆ ಅಮೃತ ಹೂಗಾರ ಸಾಃ ಯರಗೋಳ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಹೂವಿನ ವ್ಯಾಪಾರ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ನನ್ನದೊಂದು ಸ್ಪ್ಲೇಂಡರ ಪ್ಲಸ್ ಮೋಟಾರ ಸೈಕಲ್ ಇದ್ದು ಅದರ ನಂ ಕೆ.ಎ-33-ಇಎ-4151 ಅಂತಾ ಇದ್ದಿರುತ್ತದೆ, ಆ ಮೋಟಾರ ಸೈಕಲನ್ನು ದಿನಾಲು ನನ್ನ ಮನೆಯ ಅಂಗಳದಲ್ಲಿ ನಿಲ್ಲಿಸುತ್ತೆನೆ, ನಮ್ಮ ಹೊಲದಲ್ಲಿ ಹೂವಿನ ಗಿಡಗಳು ಹಚ್ಚಿರುತ್ತೆನೆ, ದಿನಾಲೂ ನಾನು ನನ್ನ ಮೋಟಾರ ಸೈಕಲ್ ಮೇಲೆ ಹೊಲಕ್ಕೆ ಹೋಗಿ ನಮ್ಮ ಹೊಲದಲ್ಲಿಯ ಹೂವುಗಳನ್ನು ಕಡಿದುಕೊಂಡು ಬಂದು ವ್ಯಾಪಾರ ಮಾಡುತ್ತೆನೆ,ಹೀಗಿರುವಾಗ ದಿನಾಂಕ 12/05/2021 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನಮ್ಮೂರಿನ ಯಂಕಣ್ಣ ತಂದೆ ಮಲ್ಲಪ್ಪ ವಡ್ಡರ ಇಬ್ಬರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೂವುಗಳನ್ನು ಕಡಿದುಕೊಂಡು ಬರುವ ಕುರಿತು ನನ್ನ ಮೋಟಾರ ಸೈಕಲದ ಮೇಲೆ ಹೋಗಿದ್ದೆವು, ನನ್ನ ಮೋಟಾರ ಸೈಕಲನ್ನು ಯರಗೋಳ-ನಾಲವಾರ ರೋಡಿನ ಪಕ್ಕದಲ್ಲ ನಿಲ್ಲಿಸಿ ನನ್ನ ಹೊದಲ್ಲಿ ಹೋಗಿ ಇಬ್ಬರೂ ಹೂವುಗಳನ್ನು ಹರಿಯುತ್ತಿದ್ದೆವು, ಹೂವುಗಳು ಹರಿದ ನಂತರ ಮರಳಿ ನಮ್ಮೂರಿಗೆ ಹೋಗುವ ಕುರಿತು ಹೂವುಗಳನ್ನು ತೆಗೆದುಕೊಂಡು ರೋಡಿಗೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಅಲ್ಲಿ ಕಾಣಿಸಲಿಲ್ಲ, ನಂತರ ನಾನು ಗಾಬರಿಯಾಗಿ ನಾನು ಮತ್ತು ಯಂಕಣ್ಣ ಇಬ್ಬರೂ ಕೂಡಿ ನಮ್ಮ ಹೊಲಗಳ ಸುತ್ತ ಹೊಲಗಳಲ್ಲಿ ಮತ್ತು ನಾಲವಾರ, ಯರಗೋಳ, ಮತ್ತು ಇನ್ನಿತರೆ ಗ್ರಾಮಗಳಲ್ಲಿ ಹುಡುಕಾಡಿದರೂ ಕೂಡಾ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲ, ನಂತರ ನಾನು, ಯಂಕಣ್ಣ ಮತ್ತು ನಾಗಪ್ಪ ತಂದೆ ಸಾಯಬಣ್ಣ ಇದ್ದಲಿ ಮೂವರೂ ಕೂಡಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದೆವು ಆದರೂ ಕೂಡಾ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲ, ಈ ಘಟನೆಯು ದಿನಾಂಕ 12/05/2021 ರಂದು ಸಾಯಂಕಾಲ 4-00 ಗಂಟೆಯಿಂದ 5-00 ಗಂಟೆಯ ಅವದಿಯಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಮೋಟಾರ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ನನ್ನ ಮೋಟಾರ ಸೈಕಲ್ ಕಪ್ಪು ಬಣ್ಣದು ಇದ್ದು, ಅದರ ಅಂದಾಜ ಕಿಮ್ಮತ್ತು 40,000/ರೂ ಆಗುತ್ತದೆ, ನನ್ನ ಮೋಟಾರ ಸೈಕಲನ್ನು ನಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದರು ಕೂಡಾ ನನ್ನ ಮೋಟಾರ ಸೈಕಲ್ ಸಿಗದ ಕಾರಣ ತಡವಾಗಿ ಇಂದು ದಿನಾಂಕ 18/05/2021 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೆನೆ, ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ, ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2021 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 80/2021 ಕಲಂ 417, 419, ಐ.ಪಿ.ಸಿ ಮತ್ತು 6 ಸಂಗಡ 19 ಕೆ.ಪಿ.ಎಮ್.ಇಕಾಯ್ದೆ : ಇಂದು ದಿನಾಂಕ:18/05/2021 ರಂದು 5-45 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಡಾ|| ರಾಜಾ ವೆಂಕಪ್ಪನಾಯಕತಾಲೂಕಾಆರೋಗ್ಯ ಅಧಿಕಾರಿಗಳು ಸುರಪೂರಇವರುಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿ ಗಣಕೀಕರಿಸಿದ ದೂರುಅಜರ್ಿ ನಿಡಿದ್ದು ಸಾರಾಂಶವೆನಂದರೆಇಂದು ದಿನಾಂಕಃ 18-05-2021 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನಾನು ನಮ್ಮಕಾಯರ್ಾಲಯದಲ್ಲಿದ್ದಾಗ ಪೇಠಅಮ್ಮಾಪೂರಗ್ರಾಮದಲ್ಲಿ ಕೆ.ಪಿ.ಎಂ.ಇ ನೊಂದಾವಣೆಇಲ್ಲದೆ ನಕಲಿ ವೈದ್ಯನುಆಸ್ಪತ್ರೆತಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆಅಂತ ಮಾಹಿತಿ ಬಂದ ಮೇರೆಗೆ ನಮ್ಮಕಾಯರ್ಾಲಯದ ಸಿಬ್ಬಂದಿಯವರಾದ 1) ಶ್ರೀ ಆರ್ ವಿಶ್ವನಾಥ ನಾಯಕ ಬಿ.ಪಿ.ಎಮ್, 2) ಶ್ರೀ ಮುಸ್ತಾಪ್ಗ್ರೂಪ್ ಡಿ ಸಿಬ್ಬಂದಿ, ಹಾಗು ನಮ್ಮಜೀಪಚಾಲಕನಾದ 3) ಶ್ರೀ ಶರಣಪ್ಪ ಹಾಗೂ ಸುರಪೂರ ಪೊಲೀಸ್ಠಾಣೆಯ 4) ಶ್ರೀ ಬಸಪ್ಪಚಾಮಲ್ಎ.ಎಸ್.ಐ ಹಾಗೂ 5) ಶ್ರೀ ಮಂಜುನಾಥ ಹೆಚ್ಸಿ-176 ಇವರೆಲ್ಲರಿಗೂ ನಮ್ಮಕಾಯರ್ಾಲಯಕ್ಕೆ ಬರಮಾಡಿಕೊಂಡುಎಲ್ಲರಿಗೂ ವಿಷಯ ತಿಳಿಸಿ ಎಲ್ಲರೂಕೂಡಿ 3-45 ಪಿ.ಎಮ್ ಕ್ಕೆ ಸುರಪೂರದಿಂದ ನಮ್ಮಕಾಯರ್ಾಲಯದಜೀಪಿನಲ್ಲಿ ಹೊರಟು 04-30 ಪಿ.ಎಮ್ ಕ್ಕೆ ಪೇಠಅಮ್ಮಾಪೂರಗ್ರಾಮಕ್ಕೆತಲುಪಿ ಗ್ರಾಮ ಪಂಚಾಯತಿ ಹತ್ತಿರ ನಕಲಿ ವೈದ್ಯರಾದಅಬ್ದುಲ್ರಜಾಕತಂದೆಅಲ್ಲಾಪಟೇಲ ಗುಡ್ನಾಳ ವಯಾ: 40 ವರ್ಷಜಾತಿ: ಮುಸ್ಲಿಂ ಸಾ:ಪೇಠಅಮ್ಮಾಪೂರಈತನುತಮ್ಮಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದನ್ನು ಗಮನಿಸಿ ಅಬ್ದುಲ್ರಜಾಕಅವರ ಹತ್ತಿರ ಹೋಗಿ ಅವರಿಗೆ ಕೆ.ಪಿ.ಎಂ.ಇ ಅಡಿಯಲ್ಲಿಕ್ಲಿನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವರುತಮ್ಮ ಹತ್ತಿರಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ಸದರಿಅಬ್ದುಲ್ರಜಾಕಈತನು ವೈದ್ಯಕೀಯ ಪದವಿಯನ್ನು ಪಡೆಯದೇಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದುಅಬ್ದುಲ್ರಜಾಕಈತನ ಮೇಲೆ ಕಾನೂನು ಕ್ರಮಜರುಗಿಸಬೆಕೆಂದುಕೋರಲಾಗಿದೆ. ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ:80/2021 ಕಲಂ. 417, 419 ಐಪಿಸಿ ಮತ್ತು ಕಲಂ. 6 ಸಂಗಡ 19 ಕೆ.ಪಿ.ಎಮ್.ಇಆಕ್ಟ್ 2007 ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.

ನಾರಾಯಣಪ್ರರ ಪೊಲೀಸ್ ಠಾಣೆ :- 37/2021 ಕಲಂ 269, 270, ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ-2020 : ಇಂದು ದಿನಾಂಕ 18/05/2021 ರಂದು ಮದ್ಯಾಹ್ನ 4:50 ಪಿ.ಎಂ ಕ್ಕೆ ಸರಕಾರಿ ತಫರ್ೆ ಫಿಯರ್ಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಪ್ರಸ್ತುತ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡುವಿಕೆ ಪ್ರಮಾಣ ಹೆಚ್ಚಾಗುತಿದ್ದರಿಂದ, ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ಸಂಬಂಧ ಈಗಾಗಲೇ ಕನರ್ಾಟಕ ಸರಕಾರವು ದಿನಾಂಕ 10/05/2021 ರಿಂದ ದಿನಾಂಕ 24/05/2021 ರ ವರೆಗೆ ಲಾಕ್ಡೌನ್ ಘೋಷಣೆ ಮಾಡಿದ್ದು, ಲಾಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೊಲೆ ಹೊರಡಿಸಿದ್ದು ಇರುತ್ತದೆ. ಅವಶ್ಯಕ ಸೇವೆಗಳನ್ನು ಪೂರೈಸಲು ಬೆಳಿಗ್ಗೆ 06-00 ಗಂಟೆಯಿಂದ ಮುಂಜಾನೆ 10-00 ಗಂಟೆಯವರೆಗೆ ಅವಧಿ ನಿಗಧಿ ಮಾಡಿರುತ್ತಾರೆ. ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳನ್ನು ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮುಚ್ಚಲು ಸರಕಾರ ಆದೇಶಿಸಲಾಗಿರುತ್ತದೆ. ಈ ವಿಷಯ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣ/ಹಳ್ಳಿಯಲ್ಲಿ ದ್ವನಿವರ್ಧಕ ಹಾಗೂ ಡಂಗೂರ ಮೂಲಕ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು ಇರುತ್ತದೆ.ಹೀಗಿರುವಾಗ ಇಂದು ದಿನಾಂಕ 18/05/2021 ರಂದು ಸಾಯಂಕಾಲ 4:00 ಗಂಟೆಗೆ ನಾನು, ಜೊತೆಯಲ್ಲಿ, ಪ್ರಕಾಶ ಹೆಚ್.ಸಿ-143, ದೇವಿಂದ್ರಪ್ಪ ಪಿಸಿ-90, ರವರೊಂದಿಗೆ ನಾರಾಯಣಪೂರ ಗ್ರಾಮದಲ್ಲಿ ಲಾಕಡೌನ ಪ್ರಯುಕ್ತ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದಲ್ಲಿ ಅವಶ್ಯಕ ಸೇವೆಗಳನ್ನು ಪೊರೈಸುವ ಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಹೊರತುಪಡಿಸಿ ಇತರೆ ಸೇವೆ ನೀಡುವ ಕಛೇರಿ/ಅಂಗಡಿ/ಮುಂಗಟ್ಟುಗಳ ಬಗ್ಗೆ ನಿಗಾ ಮಾಡುತ್ತಾ ಪಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಇಂದು ಸಾಯಂಕಾಲ 4:30 ಪಿ.ಎಂ ಸುಮಾರಿಗೆೆ ನಾರಾಯಣಪೂರ ಗ್ರಾಮದ ಕಿರಾಣಿ ಅಂಗಡಿ ಮಾಕರ್ೆಟದಲ್ಲಿ ಹೋದಾಗ, ಅಮರದೀಪ ಎನ್ನುವ ಕಿರಾಣಿ ಅಂಗಡಿಯ ಮುಂದೆ ಬಹಳಷ್ಟು ಜನರು ಗುಂಪಾಗಿ ಸೇರಿದನ್ನು ಕಂಡು ಅಲ್ಲಿಗೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅಮರದೀಪ ಕಿರಾಣಿ ಅಂಗಡಿಯ ಮುಂದೆ ಕಿರಾಣಾ ಸಾಮಾನುಗಳನ್ನು ಇಟ್ಟುಕೊಂಡು ಸುಮಾರು 10 ರಿಂದ 12 ಜನ ಗಿರಾಕಿಗಳನ್ನು ತನ್ನ ಅಂಗಡಿಯ ಮುಂದೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಲ್ಲಿಸಿಕೊಂಡು ತನ್ನ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುತಿದ್ದನು, ಸಾರ್ವಜನಿಕರು ನಾವು ಬಂದಿದ್ದನ್ನು ನೋಡಿ ಓಡಿ ಹೋದರು. ಆಗ ನಾವು ವ್ಯಾಪಾರ ಮಾಡುತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರನ್ನು ಬಾಗರಾಮ ತಂದೆ ಅಡಮಾನರಾಮ ಪಟೇಲ್ ವ:46 ವರ್ಷ ಸಾ:ಕೊಪ್ಪಳ ಹಾ:ವ: ನಾರಾಯಣಪೂರ ಇದ್ದು ತಾನು ಅಮರದೀಪ್ ಕಿರಾಣಿ ಅಂಗಡಿಯ ಮಾಲಿಕನು ಇರುತ್ತಾನೆ ಅಂತಾ ತಿಳಿಸಿದನು ಬಾಗರಾಮ ಈತನು ತನ್ನ ಲಾಭಕ್ಕಾಗಿ ತನ್ನ ಕಿರಾಣಿ ಅಂಗಡಿಯ ಮುಂದೆ ಸುಮಾರು 10 ರಿಂದ 12 ಜನ ಗಿರಾಕಿಗಳನ್ನು ಗುಂಪುಗೂಡಿಸಿಕೊಂಡು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಗಟ್ಟುವಲ್ಲಿ ಅಸಹಕಾರ ತೋರಿಸಿ ಅತೀವ ನಿರ್ಲಕ್ಷ್ಯತನ ವಹಿಸಿರುತ್ತಾನೆ. ಇದರಿಂದ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣಿಸಿ, ಸಾರ್ವಜನಿಕರ ಜೀವಕ್ಕೆ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ ಅಂತ ಗೊತ್ತಿದ್ದರೂ ಸಹಿತ, ನಿರ್ಲಕ್ಷ್ಯತನದಿಂದ ಉದ್ದೇಶಪೂರ್ವಕವಾಗಿ ಕನರ್ಾಟಕ ಸರಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಕೃತ್ಯ ಎಸಗಿರುವುದು ಕಂಡು ಬಂದಿರುತ್ತದೆ. ಅಮರದೀಪ ಕಿರಾಣಿ ಅಂಗಡಿಯ ಮಾಲಿಕ ವ್ಯಾಪರಸ್ಥನಾದ ಬಾಗಾರಾಮ ಈತನನ್ನು ಸಾಯಂಕಾಲ 4:35 ಗಂಟೆಗೆ ವಶಕ್ಕೆ ಪಡೆದುಕೊಂಡು 4:50 ಪಿ.ಎಂ ಕ್ಕೆ ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು, ಮುಂದಿನ ಕ್ರಮಕ್ಕಾಗಿ ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ವರದಿ ನೀಡಿದ್ದು, ಅಮರದೀಪ ಕಿರಾಣಿ ಅಂಗಡಿಯ ಮಾಲೀಕ ವ್ಯಾಪಾರಸ್ಥನಾದ ಬಾಗರಾಮ ತಂದೆ ಅಡಮಾನ ಪಟೇಲ್ ಸಾ:ಕೊಪ್ಪಳ ಹಾ:ವ: ನಾರಾಯಣಪೂರ ಎಂಬುವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಂತಾ ನೀಡಿದ ವರದಿಯ ಸಾರಾಂಶದದ ಮೇಲಿಂದ ಠಾಣೆ ಗುನ್ನೆ ನಂಬರ 37/2021 ಕಲಂ 269, 270 ಐ.ಪಿ.ಸಿ ಮತ್ತು ಕಲಂ 5(1) ಕನರ್ಾಟಕ ಎಪಿಡೆಮಿಕ್ ಡಿಸೀಸಸ್ ಯಾಕ್ಟ್ -2020 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Last Updated: 19-05-2021 11:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080