ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 2/03/2021

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:- 11/2021 ಕಲಂ 279, 337, 338 ಐಪಿಸಿ:ದಿನಾಂಕ 27/02/2021 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಯಾದಗಿರಿ ನಗರದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಶುಭಂ ಪೆಟ್ರೋಲ್ ಬಂಕ್ ಹತ್ತಿರ ಈ ಕೇಸಿನ ಗಾಯಾಳು ರಸ್ತೆ ಬದಿಯಲ್ಲಿ ನಡೆದುಕೊಂಡು ಗಂಜ್ ಕಡೆಗೆ ಹೊರಟಿದ್ದಾಗ ಮೊಟಾರು ಸೈಕಲ್ ನಂಬರ ಕೆಎ-33, ಎಸ್-9513 ನೇದ್ದರ ಸವಾರನು ಗಂಜ್ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ ತನ್ನ ಮೊಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ ಗಾಯಾಳುವಿಗೆ ಮತ್ತು ಮೊಟಾರು ಸೈಕಲ್ ಸವಾರನಿಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯ ಆಗಿದ್ದರ ಘಟನೆ ಬಗ್ಗೆ ತಡವಾಗಿ ನೀಡಿದ ಪಿಯರ್ಾದಿ ಸಾರಾಂಶದ ಮೇಲಿಂದ ಗುನ್ನೆ ನಂಬರ 11/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:- ಗುನ್ನೆ ನಂ: 34/2021 ಕಲಂ 143, 147, 447, 504, 506, 109 ಸ: 149 ಐಪಿಸಿ: ಇಂದು ದಿನಾಂಕ 01-03-2021 ರಂದು 6-10 ಪಿ.ಎಮ ಕ್ಕೆ ಅಜರ್ಿದಾರರಾದ ಶ್ರೀ ಸೈಯ್ಯದ್ ಬಾಷಾ ತಂದೆ ಹುಸೇನಸಾಬ ನೈಕೋಡಿ ವಯಾ: 56 ಉ:ಒಕ್ಕಲುತನ ಜಾ: ಮುಸ್ಲಿಂ ಸಾ: ವಡಗೇರಾ ತಾ:ಶಹಾಪೂರ ಜಲ್ಲೆ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಾನು 2009-2010 ನೇ ಸಾಲಿನಲ್ಲಿ ಎಂ.ಹೊಸಳ್ಳಿ ಗ್ರಾಮದ ಸೀಮೆಯಲ್ಲಿ ಶ್ರೀಮತಿ ಬಿಕ್ಷಮ್ಮಾ ಗಂಡ ವೀರಭದ್ರಯ್ಯಾ ಸಾ; ಎಮ್ ಹೊಸಳ್ಳಿ ಗ್ರಾಮದ ಇವರ ಹೊಲ ಸವರ್ೆ ನಂ 2/2 ನೆದ್ದರಲ್ಲಿ 2 ಎಕರೆ 11 ಗುಂಟೆ ಹೋಲವನ್ನು ಕಾನೂನು ಬದ್ದವಾಗಿ ಖರೀಧಿ ಮಾಡಿದ್ದು ಖರೀಧಿ ಮಾಡಿದ ಒಂದು ವರ್ಷದಲ್ಲಿಯೇ ನಾನು ಸದರಿ ಹೋಲವನ್ನು ನನ್ನ ಹೆಸರಿಗೆ ವಗರ್ಾಯಿಸಿಕೊಂಡಿದ್ದು ಅಲ್ಲಿಯಿಂದ ಇಲ್ಲಿಯವರೆಗೆ ಸದರಿ ಹೋಲ ನಾನೇ ಸಾಗುವಳಿ ಮಾಡುತ್ತಾ ಬಂದಿದ್ದು ಮತ್ತು ಅಧಿಕೃತವಾಗಿ ದಾಖಲಾತಿಗಳ ಪ್ರಕಾರ ನಾನೇ ಹೋಲದ ಮಾಲೀಕನಿರುತ್ತೆನೆ. ಆದರೆ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾಧಿ ಜೋತೆಯಲ್ಲ್ಲಿ ತಕರಾರು ಮಾಡಿ ಈ ಹೋಲ ನಮ್ಮ ಹಿರಿಯರಿಂದ ಬಂದಿಗೆ ಈ ಹೋಲದಲ್ಲಿ ನಮಗೂ ಪಾಲು ಬೇಕು ಅಂತಾ ನನಗೆ ಹಲವಾರು ಭಾರಿ ಹೋಲ ಸಾಗುವಳಿ ಮಾಡಲು ಅಡ್ಡಿ ಮಾಡಿದ್ದು ಮತ್ತು ಮಾನ್ಯ ನ್ಯಾಯಾಲಯದಲ್ಲಿಯೂ ಕೂಡಾ ತೀಪರ್ು ಫಿರ್ಯಾಧಿ ಪರವಾಗಿಾಗಿದ್ದು ಇರುತ್ತದೆ.ಅದರಂತೆ ದಿನಾಂಕ 19-02-2021 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಫಿರ್ಯಾಧಿದಾರರು ತಮ್ಮ ಹೋಲದಲ್ಲಿ ಟ್ರ್ಯಾಕ್ಟರ ಜೆಸಿಬಿ ಮುಖಾಂತರ ಹೋಲ ಲೇವೆಲ್ ಮಾಡಿಸುತ್ತಿದ್ದಾಗ ಅದೇ ವೇಳೆಗೆ ಆರೋಪಿತರಾದ 1) ವಿಜಯ ತಂದೆ ವಿರುಪಯ್ಯಾ ಹಿರೇಮಠ 2) ರವಿ ತಂದೆ ವಿರುಪಯ್ಯಾ ಹಿರೇಮಠ 3) ಚಂದ್ರು ತಂದೆ ವಿರುಪಯ್ಯಾ ಹಿರೇಮಠ 4) ದೇವಿಂದ್ರಯ್ಯಾ ತಂದೆ ಮಹಂತಯ್ಯಾ ಹಿರೇಮಠ 5) ಬಸಮ್ಮಾ ತಂದೆ ವಿರುಪಯ್ಯಾ ಹಿರೇಮಠ 6) ನೀಲಮ್ಮಾ ತಂದೆ ಮಹಾಂತಯ್ಯಾ ಹಿರೇಮಠ 7) ರಾಘುಸ್ವಾಮಿ ತಂದೆ ಶೇಖರಯ್ಯಾ ಹಿರೇಮಠ ಮತ್ತು 8) ಚಂದ್ರಕಲಾ ರಾಘುಸ್ವಾಮಿ ಹಿರೇಮಠ ಸಾ; ಎಲ್ಲರೂ ಎಮ್ ಹೊಸಳ್ಳಿ ಗ್ರಾಮ ಇವರೆಲ್ಲರೂ ಕೂಡಿ ಆರೋಪಿತರಾದ ಶರಣಯ್ಯಾ ತಂದೆ ಗುರುಲಿಂಗಯ್ಯಾ ಹಿರೇಮಠ ಸಾ: ನೀಲಹಳ್ಳಿ ಮತ್ತು ಮಲರೆಡ್ಡಿ ತಂದೆ ಮಹಾದೇವಪ್ಪಾ ಕಾಮರೆಡ್ಡಿ ಸಾ: ಎಮ್ ಹೊಸಳ್ಳಿ ಇವರ ಪ್ರಚೋಧನೆಯಿಂದ ಫಿರ್ಯಾಧೀ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಲೆವೇಲ್ ಮಾಡುತ್ತಿದ್ದ ಟ್ರ್ಯಾಕ್ಟರ ಮುಂದುಗಡೆ ಕುಳಿತು ಸಾಗುವಳಿ ಮಾಡಲು ಅಡ್ಡಿಪಡಿಸಿ ಜೀವಧ ಭಯ ಹಾಕಿದ್ದು ಇರುತ್ತದೆ. ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 34/2021 ಕಲಂ 143, 147, 447, 504, 506, 109 ಸಮಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:- ಕಲಂ, 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 01/03/2021 ರಂದು 5-50 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ (ಕಾಸು) ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 01/03/2021 ರಂದು ವನದುಗರ್ಾ ಗ್ರಾಮದ ವಿ.ಎಸ್.ಎಸ್.ಎನ್. ಸೋಸೈಟಿ ಎದುರಿನ ಸಿಸಿ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಖಂಡಪ್ಪ ತಂ: ಹೈಯ್ಯಾಳಪ್ಪ ಅನ್ವರ ವಯ|| 35 ವರ್ಷ ಜಾ|| ಬೇಡರ ಉ|| ಡ್ರೈವರ್ ಸಾ|| ವನದುಗರ್ಾ ತಾ|| ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 4-20 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 3200/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿ ವರದಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:- 33/2021 ಕಲಂ. 457. 380 ಐಪಿಸಿ: ಇಂದು ದಿನಾಂಕ. 01.03.2021 ರಂದು ಮಧ್ಯಾಹ್ನ 2-30 ಗಂಟೆಗೆ ಶ್ರೀ ಗೋವಿಂದಪ್ಪ ತಂದೆ ಮುದುಕಪ್ಪ ಸೋಮನಾಥ ದೇವಾಲಯದ ಪೂಜಾರಿ ಸಾ|| ಕಡೇಚೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 28.02.2021 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ. 01.03.2021 ರ ಬೆಳಿಗ್ಗೆ 6-00 ಗಂಟೆಯವರೆಗಿನ ಅವಧಿಯಲ್ಲಿ, ಸೋಮನಾಥ ದೇವಾಲಯದಲ್ಲಿ ಕಳುವಾದ 2 ಕೆ.ಜಿಯ ಬೆಳ್ಳಿ ಛತ್ರಿ ಅ.ಕಿ||.50,000/- ರೂ., 25 ತೊಲೆಯ ಬೆಳ್ಳಿ ಲಾಕೇಟ್ಅ.ಕಿ.|| 7,500/- ರೂ., 1/2 ತೊಲೆಯ ಬಂಗಾರದ ಮೂಗುತಿ ಅ.ಕಿ.|| 15,000/- ರೂ., 2 ಮಾಸಿಯ ಬಂಗಾರದ ತಾಳಿ ಅ.ಕಿ||6000/- ರೂ. ಮತ್ತು ಹಣದ ಹುಂಡಿಯಲ್ಲಿನ ನಗದು ಹಣ. 5000/- ರೂ. ಕಳುವಾಗಿರುತ್ತದೆ. ಒಟ್ಟು 84, 500/- ರೂ ನಷ್ಟು ಮೌಲ್ಯದ ಬಂಗಾರ, ಬೆಳ್ಳಿ ಒಡವೆ ಮತ್ತು ನಗದು ಹಣ ವನ್ನು ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 33/2021 ಕಲಂ. 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 02-03-2021 01:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080