ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/04/2021

ಶೋರಾಪುರ ಪೊಲೀಸ್ ಠಾಣೆ :- 64/2021 ಕಲಂ. 323, 498(ಎ), 504, 506, ಸಂಗಡ 34 ಐಪಿಸಿ : ಇಂದು ದಿನಾಂಕ: 19/04/2021 ರಂದು10 ಎ.ಎಂ.ಕ್ಕೆ ಶ್ರೀ ಮಾಹದೇವಪ್ಪ ಸಿಪಿಸಿ-126 ಸುರಪೂರಠಾಣೆರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರರವರಿಂದ ಖಾಸಗಿ ಪಿಯರ್ಾದಿ ಸಂ. /2021 ದಿನಾಂಕ:12/07/2021 ನೇದ್ದನ್ನುವಸೂಲಾಗಿದ್ದು,ಠಾಣೆಗೆತಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ, ಪಿಯರ್ಾದಿದಾರಳಾದ ಶ್ರೀಮತಿ ಹೊನ್ನಮ್ಮಗಂಡ ಹಣಮಂತ ವಯಾ:29 ವರ್ಷ ಉ:ಮನೆ ಕೆಲಸ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರ ಜಿ: ಯಾದಗಿರಿಇವರು ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರದಲ್ಲಿ ಹಾಜರಾಗಿಆರೋಪಿತರಾದ 1. ಹಣಮಂತತಂದೆ ನಿಂಗಪ್ಪ ಪ್ರಧಾನಿ ವಯಾ:32 ವರ್ಷ ಉ:ಒಕ್ಕಲುತನ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರ2. ನಿಂಗಣ್ಣತಂದೆ ಮಲ್ಲಪ್ಪ ಪ್ರಧಾನಿ ವಯಾ:65 ವರ್ಷ ಉ:ಒಕ್ಕಲುತನ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರ 3. ವೆಂಕಟೇಶತಂದೆ ನಿಂಗಣ್ಣ ಪ್ರಧಾನಿ ವಯಾ:36 ವರ್ಷ ಉ:ಒಕ್ಕಲುತನ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರ 4. ಮಲ್ಲಪ್ಪತಂದೆ ನಿಂಗಣ್ಣ ಪ್ರಧಾನಿ ವಯಾ:22 ವರ್ಷ ಉ:ಒಕ್ಕಲುತನ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರ 5. ಸರಸ್ವತಿ@ಸರಮ್ಮತಂದೆ ನಿಂಗಣ್ಣ ಪ್ರಧಾನಿ ವಯಾ:30 ವರ್ಷ ಉ:ಮನೆಕೆಲಸ ಸಾ:ಕುರುಬರಗಲ್ಲಿಕುಂಬಾರಪೇಠತಾ:ಸುರಪೂರಇವರ ವಿರುದ್ಧ ಕಲಂ. 498(ಎ), 323, 504, 506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಖಾಸಗಿ ಪಿಯರ್ಾದಿ ಹಾಗೂ ಮಾನ್ಯ ನ್ಯಾಯಾಲಯ ನಿದರ್ೇಶನದ ಪ್ರಕಾರ ನಾನು ಈರಣ್ಣ ಹೆಚ್ಸಿ-28ಸುರಪೂರಠಾಣೆಗುನ್ನೆ ನಂ. 64/2021 ಕಲಂ. 498(ಎ), 323, 504, 506, ಸಂಗಡ 34 ಐಪಿಸಿ ನೇದ್ದರ ಪ್ರಕಾರಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ :- 86/2021 ಕಲಂ 87 ಕೆಪಿ ಯಾಕ್ಟ್ : ಇಂದು ದಿನಾಂಕ: 19/04/2021 ರಂದು 8.30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ ಅ.ವಿ. ಶಹಾಪುರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 19/04/2021 ರಂದು 7.00 ಪಿ.ಎಮ್.ಕ್ಕೆ ಶಹಾಪೂರ ಠಾಣೆಯಲ್ಲಿದ್ದಾಗ ಶಹಾಪೂರ ಅನವಾರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 26/2021 ನೇದ್ದನ್ನು ದಾಖಲಿಸಿದ್ದು ಇದೆ. ಮತ್ತು ಕಲಂ 87 ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು, ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ಇದೆ. ಆದ್ದರಿಂದ ಸದರಿ ಇಸ್ಪೀಟ್ ಜೂಜಾಟ ಆಡುತ್ತಿರುವ ವ್ಯಕ್ತಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ 87 ಕೆಪಿ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 86/2021 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ನಂತರ ದಾಳಿಗೆ ಹೋಗಿ ದಾಳಿಮಾಡಿ 6 ಜನ ಆರೋಪಿತರು ಮತ್ತು ನಗದು 2730 ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

ಗೋಗಿ ಪೊಲೀಸ್ ಠಾಣೆ :- 35/2020 323, 326, 504, 506 ಐಪಿಸಿ : ಇಂದು ದಿನಾಂಕ: 19/04/2021 ರಂದು 01.30 ಪಿಎಂ ಕ್ಕೆ ಶ್ರೀಮತಿ ನಿಂಗಮ್ಮ ಗಂಡ ದೇವಿಂದ್ರಪ್ಪ ಮೇಟಿ ವಯಾ: 38 ಉ: ಒಕ್ಕಲುತನ ಜಾ: ಕುರುಬರ ಸಾ: ಸೈದಾಪೂರ ತಾ: ಶಹಾಪುರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಟೈಪ ಮಾಡಿಸಿದ ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ನಿಂಗಮ್ಮ ಗಂಡ ದೇವಿಂದ್ರಪ್ಪ ಮೇಟಿ ವಯಾ: 38 ಉ: ಒಕ್ಕಲುತನ ಜಾ: ಕುರುಬರ ಸಾ: ಸೈದಾಪೂರ ತಾ: ಶಹಾಪುರ ಜಿ: ಯಾದಗಿರಿ ಇದ್ದು ಈ ಮೂಲಕ ಅಜರ್ಿ ನೀಡುವುದೇನಂದರೆ, ನನಗೆ ಸುಮಾರು 15 ವರ್ಷಗಳ ಹಿಂದೆ ನಮ್ಮ ಸೈದಾಪೂರ ಗ್ರಾಮದವರೆ ಆದ ದೇವಿಂದ್ರಪ್ಪ ತಂದೆ ಅಮಾತೇಪ್ಪ ಮೇಟಿ ಇವರೊಂದಿಗೆ ಮದುವೆ ಆಗಿದ್ದು, ನನಗೆ ಮಕ್ಕಳು ಆಗಿರುವದಿಲ್ಲ. ನಂತರ ನನ್ನ ಗಂಡ ಬೆಂಗಳೂರಿಗೆ ದುಡಿಯಲು ಹೋದಾಗ ಸುಮಾರು 14 ವéರ್ಷಗಳ ಹಿಂದೆ ಆಶಾ ಎಂಬುವವಳೊಂದಿಗೆ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಅವರಿಗೆ ಒಬ್ಬನು ಗಂಡು ಮಗು ಮತ್ತು ಒಬ್ಬಳು ಹೆಣ್ಣು ಮಗಳು ಹೀಗೆ ಇಬ್ಬರು ಮಕ್ಕಳು ಇರುತ್ತಾರೆ. ನಾನು ಇಲ್ಲಿಯ ವರೆಗೆ ದುಡಿದು ನನ್ನ ಗಂಡನ ಮನೆಯಲ್ಲಿ ಹಳೆ ಮನೆಯನ್ನು ಕಟ್ಟಿಸಿಕೊಂಡು ಉಪಜೀವಿಸುತ್ತಿದ್ದೇನೆ, ಈಗ ಸುಮಾರು 04 ತಿಂಗಳ ಹಿಂದೆ ನನ್ನ ಗಂಡ ದೇವಿಂದ್ರಪ್ಪ ಮೇಟಿ ಮತ್ತು ಅವನ ಎರಡನೇಯ ಹೆಂಡತಿಯಾದ ಆಶಾ ಗಂಡ ದೇವಿಂದ್ರಪ್ಪ ಮೇಟಿ ಇಬ್ಬರು ನಮ್ಮೂರಿಗೆ ಬಂದಿರುತ್ತಾರೆ. ಆಗ ನಮ್ಮ ತಾಯಿಯವರು ನನಗೆ ಸಮಾದಾನ ಹೇಳಿ ಎಲ್ಲರೂ ಕೂಡಿ ಇರಲು ಹೇಳಿದ್ದರು ಅದರಂತೆ ನಾನು ನನ್ನ ಗಂಡನ ಎರಡನೇಯ ಹೆಂಡತಿ ಮತ್ತು ಅವರ ಮಕ್ಕಳ ಜೋತೆಯಲ್ಲಿ ನಾನು ಕಟ್ಟಿದ ಮನೆಯಲ್ಲಿಯೇ ವಾಸವಾಗಿರುತ್ತೇವೆ. ನನ್ನ ಗಂಡ ನನ್ನ ಜೋತೆ ಮಾತನಾಡಿದರೆ ಆಶಾ ಇವಳು ನನ್ನ ಗಂಡನಿಗೆ ಅವಳ ಹತ್ತಿರ ಮಾತಾಡ ಬೇಡ ಅವಳ ಹತ್ತಿರ ಹೋಗ ಬೇಡ ಅಂತಾ ಹೇಳುತ್ತಾಳೆ. ಇದೆ ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದಳು. ಇತ್ತಿಚಿಗೆ ನನಗೆ ಮನೆಯಲ್ಲಿ ಇರಬೇಡ ನೀನು ಮನೆ ಬಿಟ್ಟು ಹೋಗು ಅಂತಾ ಅವಾಚ್ಯವಾಗಿ ಬೈಯುತ್ತಿದ್ದಳು. ಆದರೂ ನಾನು ತಾಳಿಕೊಂಡು ಸುಮ್ಮನಿದ್ದೇನು.ಹೀಗಿದ್ದು ನಿನ್ನೆ ದಿನಾಂಕ: 19/04/2021 ರಂದು ಸಾಯಂಕಾಲ 06.00 ಪಿಎಂ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನನ್ನ ಸವತಿಯಾದ ಆಶಾ ಗಂಡ ದೆವಿಂದ್ರಪ್ಪ ಮೇಟಿ ವಯಾ:36 ವರ್ಷ ಜಾ: ಕುರುಬರ ಸಾ: ಸೈದಾಪೂರ ಇವಳು ನನಗೆ ಮನೆ ಬಿಟ್ಟು ಹೊಗು ರಂಡಿ ಅಂತಾ ಬೈಯತೊಡಗಿದಳು. ಆಗ ನಾನು ಈ ಮನೆ ನಾನು ಕಟ್ಟಿಸಿದ್ದೇನೆ ನಾನು ಮೊದಲ ಹೆಂಡತಿ ಇದ್ದೀನಿ ನೀನು ಬೇಕಾದರೆ ಮನೆ ಬಿಟ್ಟು ಹೋಗು ಅಂತಾ ಅಂದಾಗ ಆಶಾ ಇವಳು ಬೋಸಡಿ ನನಗೆ ಮನೆ ಬಿಟ್ಟು ಹೋಗು ಎನ್ನುತ್ತಿ ಅಂತಾ ನನಗೆ ವಾಚ್ಯವಾಗಿ ಬೈಯುತ್ತಾ ಕೈಯಿಂದ ಬೆನ್ನಿಗೆ ಹೊಡೆದು ಬಲಗೈ ತಿರುವಿರುತ್ತಾಳೆ ಕೈಗೆ ಗುಪ್ತ ಪೆಟ್ಟಾಗಿರುತ್ತದೆ. ಆಗ ಅಲ್ಲೆ ಮನೆಯಲ್ಲಿ ಇದ್ದ ಒಂದು ಚಾಕುವಿನಿಂದ ನನ್ನ ಕುತ್ತಗೆಯ ಹಿಂಬಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಮಾಡಿರುತ್ತಾಳೆ. ಆಗ ನಾನು ಚಿರಾಡುವುದನ್ನು ಕೇಳಿ ನಮ್ಮ ಪಕ್ಕದ ಮನೆಯವರಾದ ಮಹಾದೇವಪ್ಪ ತಂದೆ ಶಿವಪ್ಪ ಮೇಟಿ ಮತ್ತು ಮುದೆಪ್ಪ ತಂದೆ ನಿಂಗಪ್ಪ ಮೇಟಿ ಇವರುಗಳು ನೋಡಿ ಬಿಡಿಸಿಕೊಂಡರು. ಆಗ ಆಶಾ ಇವಳು ಬೋಸಡಿ ಇನ್ನು ಮುಂದೆ ಈ ಮನೆಯಲ್ಲಿ ಕಾಲು ಇಟ್ಟರೆ ನಿನಗೆ ಖಲಾಸ ಮಾಡುತ್ತೇನೆ ಆಂತಾ ಜೀವದ ಬೇದರಿಕೆ ಹಾಕಿರುತ್ತಾಳೆ. ಆಗ ನಾನು ಊರಲ್ಲಿಯೇ ಇರುವ ನನ್ನ ತವರು ಮನೆಗೆ ಬಂದು ನನ್ನ ತಾಯಿಯಾದ ಶ್ರೀಮತಿ ಮಾಳಮ್ಮ ಗಂಡ ಸಂಕ್ರೆಪ್ಪ ಪೂಜಾರಿ ಮತ್ತು ನಮ್ಮ ತಮ್ಮನಾದ ಮಲ್ಲಪ್ಪ ತಂದೆ ಸಕ್ರೆಪ್ಪ ಪೂಜಾರಿ ಇವರುಗಳಿಗೆ ಘಟನೆಯ ವಿಷಯ ತಿಳಿಸಿದೆ ಅವರುಗಳು ನನಗೆ ನಿನ್ನೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ನಂತರ ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:19/04/2021 ರಂದು 01.30 ಪಿಎಂ ಕ್ಕೆ ಗೋಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ.ಕಾರಣ ನನಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಚಾಕುವಿನಿಂದ ಹೊಡೆದು ಭಾರಿಗಾಯ ಮಾಡಿ ಜೀವ ಭಯ ಹಾಕಿದ ನನ್ನ ಸವತಿಯಾದ ಆಶಾ ಗಂಡ ದೇವಿಂದ್ರಪ್ಪ ಮೇಟಿ ಸಾ: ಸೈದಾಪೂರ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಆಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2021 ಕಲಂ, 323, 326, 504, 506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ :- 36/2021 ಕಲಂ, 87 ಕೆ.ಪಿ ಆ್ಯಕ್ಟ್ : ಇಂದು ದಿನಾಂಕ 19/04/2021 ರಂದು 6-00 ಪಿಎಂ ಕ್ಕೆ ಶ್ರೀ. ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾಸು) ಗೋಗಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಮತ್ತು ಒಂದು ವರದಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ಮಹಲರೋಜಾ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ ಮೇಲೆ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 03 ಜನರನ್ನು ಹಿಡಿದಿದ್ದು ಆರೋಪಿತರಿಂದ ನಗದು ಹಣ ರೂ. 4,100=00 ರೂ. ಹಾಗೂ 52 ಇಸ್ಪೇಟ ಎಲೆಗಳನ್ನು 4-20 ಪಿ.ಎಮ್.ದಿಂದ 5-20 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 6-00 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ, ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಆರೋಪಿತರನ್ನು ಹಾಜರಪಡಿಸಿದ್ದರಿಂದ, ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀಗುಡಿ ಪೊಲೀಸ್ ಠಾಣೆೆ:- 35/2021 ಕಲಂ 323,324,504,506 ಸಂ 34 ಐಪಿಸಿ : ಫಿಯರ್ಾದಿ ಮತ್ತುಆರೋಪಿತರುಅಕ್ಕತಮ್ಮರಿದ್ದುಇಬ್ಬರ ನಡುವೆತಕರಾರುಇರುತ್ತದೆ. ಫಿಯರ್ಾದಿಯ ಮಗಳು ಸುಂದರಮ್ಮ ಇವಳು ಆರೋಪಿತರಿಗೆತಮ್ಮ ಮನೆಯ ಮಾಳಿಗೆಯ ಮೇಲೆ ಮಲಗದಂತೆತಾಕೀತು ಮಾಡಿದ್ದರಿಂದ ದಿನಾಂಕ:18/04/2021 ರಂದು 6.30 ಪಿ.ಎಮ್. ಸುಮಾರಿಗೆಆರೋಪಿತರು ಫಿಯರ್ಾದಿ ಮತ್ತು ಫಿಯರ್ಾದಿಯ ಮಗಳೊಂದಿಗೆ ಜಗಳ ತೆಗೆದುಅವಾಚ್ಯ ಶಬ್ದಗಳಿಂದ ಬೈದು ಸಲಿಕೆ ಕಾವಿನಿಂದ ಫಿಯರ್ಾದಿ ಮತ್ತು ಫಿಯರ್ಾದಿಯ ಮಗಳು ಇಬ್ಬರತಲೆಗೆ ಹೊಡೆದುರಕ್ತಗಾಯ ಮಾಡಿದ್ದುಕೈಯಿಂದ ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು

ಕೆಂಭಾವಿ ಪೊಲೀಸ ಠಾಣೆ:- 53/2021 ಕಲಂ: 143,147,323,324,326,504,506 ಸಂಗಡ 149 ಐಪಿಸಿ : ಇಂದು ದಿನಾಂಕ 19.04.2021 ರಂದು 8.15 ಪಿಎಮಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಾಳಪ್ಪ ತಂದೆ ಕೇಶವನಾರಾಯಣ ರೈಟರ್ ವಯಾ|| 33 ಜಾ|| ಕುರುಬರ ಉ|| ಒಕ್ಕಲುತನ ಸಾ|| ಗೋಡ್ರಿಹಾಳ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನಮ್ಮ ಅಣ್ಣನಾದ ನಾರಾಯಣಪ್ಪ ಈತನ ಮಗಳಾದ ಶೃತಿ ಎಂಬುವವಳಿಗೆ ನಮ್ಮೂರ ಬೀರಪ್ಪ ತಂದೆ ಹಣಮಂತ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮ್ಮ ಅಣ್ಣನ ಮಗಳಾದ ಶೃತಿ ಇವಳಿಗೆ ಅವಳ ಗಂಡನಾದ ಬೀರಪ್ಪ ತಂದೆ ಹಣಮಂತ ಈತನು 1ಲಕ್ಷ ರೂಪಾಯಿ ಹಣ ಕೊಡು ಅಂತ ದಿನಾಲು ಜಗಳತೆಗೆಯುವದು ಮಾಡುತ್ತಿದ್ದನು. ಹೀಗಿದ್ದು ದಿನಾಂಕ: 07/04/2021 ರಂದು ರಾತ್ರಿ 8 ಗಂಟೆ ಹೊತ್ತಿಗೆ ನಾನು ಬೀರಪ್ಪ ತಂದೆ ಹಣಮಂತ ಇವರ ಮನೆ ಹತ್ತಿರ ಹಾದು ಹೋಗುತ್ತಿದ್ದಾಗ ನನ್ನ ಅಣ್ಣನ ಮಗಳಾದ ಶೃತಿ ಇವಳಿಗೆ ಅವಳ ಗಂಡ 1) ಬೀರಪ್ಪ ತಂದೆ ಹಣಮಂತ ಚಿಗರಿಹಾಳ 2) ಮಾನಪ್ಪ ತಂದೆ ಹಣಮಂತ ಚಿಗರಿಹಾಳ 3) ದೇವಪ್ಪ ತಂದೆ ಹಣಮಂತ ಚಿಗರಿಹಾಳ 4) ಅಯ್ಯಪ್ಪ ತಂದೆ ಹಣಮಂತ ಚಿಗರಿಹಾಳ 5) ಹಣಮಂತ ತಂದೆ ಬೀರಪ್ಪ ಚಿಗರಿಹಾಳ 6) ನಿಂಗಮ್ಮ ಗಂಡ ಹಣಮಂತ ಚಿಗರಿಹಾಳ ಸಾ|| ಗೋಡ್ರಿಹಾಳ ಈ ಎಲ್ಲಾ ಜನರು ಸೇರಿ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅಲ್ಲಿಯೇ ಹೊರಟಿದ್ದ ನಾನು ಬಿಡಿಸಲು ಹೋದಾಗ ನನಗೆ ಬೀರಪ್ಪ ಈತನು ಏನಲೆ ಸೂಳೆಮಗನೆ ನೀನ್ಯಾಕೆ ಬಂದಿರುವಿ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಅಲ್ಲಿಯೆ ಬಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಗೆ ಹೊಡೆದು ಬಾರಿ ರಕ್ತಗಾಯಪಡಿಸಿದನು. ಮತ್ತು ಅವರ ಅಣ್ಣನಾದ ಮಾನಪ್ಪ ಚಿಗರಿಹಾಳ ಈತನು ಅಲ್ಲಿಯೇ ಬಿದ್ದ ಜಾಲಿ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು. ಅಲ್ಲದೆ ದೇವಪ್ಪ ಚಿಗರಿಹಾಳ ಈತನು ಇಟ್ಟಂಗಿಯಿಂದ ನನ್ನ ಬಲಭುಜಕ್ಕೆ ಹೊಡೆದು ಗುಪ್ತಗಾಯಪಡಿಸಿದನು. ಅಯ್ಯಪ್ಪ ಚಿಗರಿಹಾಳ ಈತನು ಕೈಯಿಂದ ಬಲಕಪಾಳಕ್ಕೆ ಹೊಡೆದನು. ಹಣಮಂತ ಚಿಗರಿಹಾಳ ಈತನು ಬಲಗೈಯಿಂದ ನನ್ನ ಎಡಗಣ್ಣಿಗೆ ಮುಷ್ಠಿಯಿಂದ ಗುದ್ದಿ ಗುಪ್ತಗಾಯಪಡಿಸಿದನು. ಅಣ್ಣನ ಮಗಳಾದ ಶೃತಿ ಇವಳಿಗೆ ಅತ್ತೆಯಾದ ನಿಂಗಮ್ಮ ಚಿಗರಿಹಾಳ ಇವಳು ಕೂದಲು ಹಿಡಿದು ಎಳೆದಾಡಿ ಹೊಡೆದಿದ್ದು ಇರುತ್ತದೆ. ನಂತರ ನಾವಿಬ್ಬರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ವೆಂಕಟೇಶ ತಂದೆ ಗೋವಿಂದರಾಜ ದೊರಿ, ಬಸವರಾಜ ತಂದೆ ಲಕ್ಷ್ಮಣಗೌಡ ಮಾಲಿ ಪಾಟೀಲ, ಬಸವರಾಜ ತಂದೆ ಹಣಮಂತ್ರಾಯ ಅಂಗಡಿ ಹಾಗೂ ಅತ್ತಿಗೆಯಾದ ನೀಲಮ್ಮ ಗಂಡ ನಾರಾಯಣಪ್ಪ ಎಲ್ಲರೂ ಸೇರಿ ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ನನಗೆ ಅತಿಯಾದ ರಕ್ತಸ್ರಾವ ಆಗುತ್ತಿದ್ದರಿಂದ ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ವೈದ್ಯರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ ಮೇರೆಗೆ ದಿ: 08/04/2021 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆಯಾಗಿ ಉಪಚಾರ ಪಡೆದುಕೊಂಡು ದಿ: 15/04/2021 ರಂದು ಬಿಡುಗಡೆಯಾಗಿ ಮರಳಿ ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನ ಅಣ್ಣನ ಮಗಳಿಗೆ ಹೊಡೆಯುವದನ್ನು ಬಿಡಿಸಲು ಹೋದ ನನಗೆ ವಿನಾಕಾರಣವಾಗಿ ಕಬ್ಬಿಣದ ರಾಡಿನಿಂದ ಹೊಡೆದು ಅವಾಚ್ಯವಾಗಿ ಬೈದು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 6 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 53/2021 ಕಲಂ 143,147,323,324,326,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 20-04-2021 12:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080