Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20-05-2021

ಗುರಮಿಠಕಲ್ ಪೊಲೀಸ್ ಠಾಣೆ :- 65/2021 ಕಲಂ : 363 ಐಪಿಸಿ : ಎಂದಿನಂತೆ ನಿನ್ನೆ ದಿನಾಂಕ 18.05.2021 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಊಟ ಮಾಡಿ ಮ್ಯಾಳಿಗೆಯ ಮೇಲೆ ಮಲಗಿದ ನಂತರ ಇಂದು ದಿನಾಂಕ 19.05.2021 ರಂದು ಬೆಳಿಗ್ಗೆ 6:00 ಗಂಟೆಗೆಯ ಸುಮಾರಿಗೆ ಎದ್ದು ನೋಡಿದಾಗ ತನ್ನ ಮಗಳು ಕುಮಾರಿ.ಸವಿತಾ ಈಕೆ ಕಾಣಿಸದೇ ಇರುವುದರಿಂದ ಬಹಿದರ್ೆಸೆಗೆ ಹೋಗಿರಬೇಕು ಅಂತಾ ತಿಳಿದು ನಂತರ ಬೆಳಿಗ್ಗೆ 7:00 ಗಂಟೆಯಾದರು ತನ್ನ ಮಗಳು ಕಾಣಿಸದೇ ಇರುವುದರಿಂದ ತನ್ನ ಹೆಂಡತಿಗೆ ಎಬ್ಬಿಸಿ ತನ್ನ ಮಗಳು ಕಾಣಿಸದೇ ಇದ್ದ ಬಗ್ಗೆ ತಿಳಿಸಿದ ನಂತರ ತಾನು ಮತ್ತು ತನ್ನ ಹೆಂಡತಿ ಇಬ್ಬರು ಊರಲ್ಲಿ ಹುಡುಕಾಡಿದ ನಂತರ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ ಮೇಲೆ ಕೆಲ ಕಡೆಗೆಳಲ್ಲಿ ಹುಡುಕಿದರೂ ತನ್ನ ಮಗಳು ಕಾಣಿಸದೇ ಇರುವುದರಿಂದ ಆಕೆಯನ್ನು ಯಾರೋ ಯಾವೂದೋ ಉದ್ದೇಶಕ್ಕೆ ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ತಡವಾಗಿ ಠಾಣೆಗೆ ಬಂದು ಹೇಳಿಕೆ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 65/2021 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ :- 81/2021 ಕಲಂ 323,447,504,506ಸಂ.34 ಐ.ಪಿ.ಸಿ : ಇಂದು ದಿನಾಂಕ:19/05/2021 ರಂದು 2-15 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗಶ್ರೀ ದೇವನಗೌಡ ತಂದೆ ಹಣಮಂತ್ರಾಯಗೌಡ ಪೊಲೀಸ್ ಪಾಟೀಲ ವಯಾ:43 ವರ್ಷ ಉದ್ಯೋಗ :ವ್ಯವಸಾಯ ಮತ್ತು ವಕೀಲ ವೃತ್ತಿ ಸಾ:ದೇವರಗೋನಾಲ ತಾ:ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಸುರಪೂರ ತಾಲೂಕಿನ ದೇವರಗೋನಾಲ ಸೀಮಾಂತರದಲ್ಲಿ ಬರುವ ಸವರ್ೆ ನಂ. 273/2 ವಿಸ್ತಿರ್ಣ 02 ಎಕರೆ 21 ಗುಂಟೆ ಜಮೀನು ನಮ್ಮ ತಂದೆಯವರಾದ ಹಣಮಂತ್ರಾಯಗೌಡ ತಂದೆ ದೇವನಗೌಡ ಪೊಲೀಸ್ ಪಾಟೀಲ ಇವರ ಹೆಸರಿನಲ್ಲಿದ್ದು, ನಮ್ಮ ತಂದೆಯವರು ಜೀವಂತವಿರುವಾಗಲೇ ಮೌಖಿಕವಾಗಿ ನನ್ನ ಪಾಲಿಗೆ ಬಂದಂತಹ ಆಸ್ತಿಯನ್ನು ಬಿಟ್ಟುಕೊಟ್ಟಿರುತ್ತಾರೆ. ಅಂದಿನಿಂದಲು ಇಂದಿನವರೆಗೆ ನಾನೇ ಮಾಲೀಕ ಮತ್ತು ಕಬ್ಜೇದಾರನಿರುತ್ತೇನೆ ನಮ್ಮ ತಂದೆಯವರು ದಿನಾಂಕ:20-10-2017 ಎಂದು ಮರಣ ಹೊಂದಿರುತ್ತಾರೆ.ಹೀಗಿರುವಾಗ ದಿನಾಂಕ:09-05-2021 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ನಾನು ನನ್ನ ಜಮೀನಿನಲ್ಲಿದ್ದಾಗ ನಮ್ಮ ಊರಿನವರೇ ಆದ 1) ಯಂಕಪ್ಪ ತಂದೆ ನಿಂಗಪ್ಪ ಲಿಂಗದಳ್ಳಿ ಸಾ:ದೇವರಗೊನಾಲ 2) ಶಾಂತಗೌಡ ತಂದೆ ಹಣಮಂತ್ರಾಯ ಸಾ:ವಾಡಿ ತಾ:ಚಿತ್ತಾಪೂರ ಜಿ:ಕಲಬುರಗಿ ಈ ಇಬ್ಬರು ಒಂದು ಸ್ವರರಾಜ್ಯ ಕಂಪನಿಯ ಟ್ಯಾಕ್ಟರ ನಂಬರ ಕೆಎ-33, ಟಿಬಿ-2779 ನೇದ್ದನ್ನು ತೆಗೆದುಕೊಂಡು ಬಂದವರೆ ಯಂಕಪ್ಪ ಈತನು ಟ್ಯಾಕ್ಟರನಿಂದ ಕ್ರಾಸ್ ಕುಂಟಿ ಹೊಡೆಯುತ್ತಿದ್ದನು. ನಾನು ಅವನಲ್ಲಿಗೆ ಹೋಗಿ ನಮ್ಮ ಹೊಲದಲ್ಲಿ ಟ್ಯಾಕ್ಟರ ಯಾಕೇ ಹೊಡೆಯಲು ಬಂದಿರಿ ಅಂತಾ ಕೇಳಿದಕ್ಕೆ ಅವನು ಎಲೇ ಬೋಸಡಿ ಮಗನೆ ಅದಲ್ಲೆ ಕೇಳಲಾಕ ನೀನು ಯಾರಲೇ ಸುಮ್ಮನೆ ಹೋಗು ಇಲ್ಲಾ ಅಂದ್ರೆ ಇದೆ ಟ್ಯಾಕ್ಟರಲಿ ನಿನಗೆ ಗುದ್ದಿಸಿ ಸಾಯಿ ಹೊಡೆಯುತ್ತೆನೆ. ಎಂದನು. ಶಾಂತಗೌಡ ಈತನು ಎಲೇ ರಂಡಿ ಮಗನೇ ಎಂದವನೆ ನನ್ನ ಎಡಗಡೆ ಕಪಾಳಕ್ಕೆ ಕೈಯಿಂದ ಹೊಡೆದು ನನ್ನನ್ನು ನೆಲಕ್ಕೆ ಕೆಡವಿ ನನಗೆ ಬೆನ್ನಿಗೆ ಹಾಗೂ ನನ್ನ ಎರಡು ಭುಜಕ್ಕೆ ಕೈಯಿಂದ ಗುದ್ದಿ ಒಳಪೆಟ್ಟು ಮಾಡಿ ಹೊಡೆಯುತ್ತಿರುವಾಗ ಅದೆ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದೇವಕ್ಕೆಮ್ಮ ಗಂಡ ಚಂದಪ್ಪ ಹಾಗೂ ಬಸನಗೌಡ ತಂದೆ ಅಮರಣಗೌಡ ಇವರು ಬಂದು ಜಗಳ ಬಿಡಿಸಿದರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ನನಗೆ ಗುಪ್ತಗಾಯ ಒಳಪರಟ್ಟಾಗಿರುವದರಿಂದ ನಾನು ದವಾಖಾನೆಗೆ ಹೋಗಿರುವದಿಲ್ಲ. ನಮ್ಮೂರ ಹಿರಿಯರಾದ ಹಣಮಂತ್ರಾಯಗೌಡ ತಂದೆ ಬೀಮನಗೌಡ ಮಾಲಿ ಪಾಟೀಲ ಇವರಿಗೆ ವಿಚಾರ ಮಾಡಿ ಇಂದು ತಡವಾಗಿ ಬಂದು ಠಾಣೆಗೆ ದೂರು ಸಲ್ಲಿಸಿದ್ದು, ನನಗೆ ಅವಾಚ್ಯ ಬೈದು ಕೈಯಿಂದ ಹೊಡೆ ಬಡೆಮಾಡಿದ ಯಂಕಪ್ಪ, ಶಾಂತಗೌಡ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.

ಶೋರಾಪೂರ ಪೊಲೀಸ್ ಠಾಣೆ :- 82/2021 ಕಲಂ 417, 419, ಐ.ಪಿ.ಸಿ ಮತ್ತು 6 ಸಂಗಡ 19 ಕೆ.ಪಿ.ಎಮ್.ಇ ಕಾಯ್ದೆ : ಇಂದು ದಿನಾಂಕಃ 19-05-2021 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಠಾಣೆಯ ಎಸ್ ಹೆಚ್ ಡಿ ಕರ್ತವ್ಯದಲ್ಲಿರುವಾಗ ಶ್ರೀ ಡಾ|| ರಾಜಾ ವೆಂಕಪ್ಪನಾಯಕ ತಾಲೂಕಾ ಆರೋಗ್ಯ ಅಧಿಕಾರಿಗಳು ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:19-05-2021 ರಂದು 3-15 ಗಂಟೆಯ ಸುಮಾರಿಗೆ ನಾನು ನಮ್ಮ ಕಾಯರ್ಾಲಯದಲ್ಲಿದ್ದಾಗ ಪೇಠ ಅಮ್ಮಾಪೂರ ಗ್ರಾಮದಲ್ಲಿ ಕೆ.ಪಿ.ಎಂ.ಇ ನೊಂದಾವಣೆ ಇಲ್ಲದೆ ನಕಲಿ ವೈದ್ಯನು ಆಸ್ಪತ್ರೆ ತಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ನಮ್ಮ ಕಾಯರ್ಾಲಯದ ಸಿಬ್ಬಂದಿಯವರಾದ 1) ಶ್ರೀ ಮಲ್ಲಪ್ಪ ಗೋಗ್ಗಿ ಬಿಎಚ್ಇಓ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಲಯ ಸುರಪೂರ 2) ಶ್ರೀ ಮಡಿವಾಳಪ್ಪ ಗ್ರೂಪ್ ಡಿ ಸಿಬ್ಬಂದಿ, ಹಾಗು ನಮ್ಮ ಜೀಪ ಚಾಲಕನಾದ 3) ಶ್ರೀ ಶರಣಪ್ಪ ಹಾಗೂ ಸುರಪೂರ ತಹಸೀಲ್ದಾರರಾದ 4) ಶ್ರೀ ಸುಬ್ಬಣ್ಣ ಜಮಖಂಡಿ ಹಾಗೂ ಅವರ ಕಾಯರ್ಾಲಯದ ಸಿಬ್ಬಂಧಿಯವರಾದ 5) ಶ್ರೀ ಗುರುಬಸಪ್ಪ ಕಂದಾಯ ನಿರೀಕ್ಷಕರು, 6) ಶ್ರೀ ಸಂತೋಷ ರಾಠೋಡ ಗ್ರಾಮ ಲೇಖಪಾಲಕರು, ಮತ್ತು ಸುರಪೂರ ಪೊಲೀಸ್ ಠಾಣೆಯ 7) ಶ್ರೀ ಮಂಜುನಾಥ ಹೆಚ್ಸಿ-176 ಇವರೆಲ್ಲರಿಗೂ ನಮ್ಮ ಕಾಯರ್ಾಲಯಕ್ಕೆ ಬರಮಾಡಿಕೊಂಡು ಎಲ್ಲರಿಗೂ ವಿಷಯ ತಿಳಿಸಿ ಎಲ್ಲರೂ ಕೂಡಿ 3-30 ಪಿ.ಎಮ್ ಕ್ಕೆ ಸುರಪೂರದಿಂದ ನಮ್ಮ ಕಾಯರ್ಾಲಯದ ಸಿಬ್ಬಂಧಿಯವರು ನಮ್ಮ ಜೀಪಿನಲ್ಲಿ ಹಾಗೂ ತಹಸೀಲ ಕಾಯರ್ಾಲಯದ ಸಿಬ್ಬಂಧಿಯವರು ತಮ್ಮ ಜೀಪಿನಲ್ಲಿ ಕುಳಿತುಕೊಂಡು ಹೊರಟು 04 ಪಿ.ಎಮ್ ಕ್ಕೆ ಪೇಠ ಅಮ್ಮಾಪೂರ ಗ್ರಾಮಕ್ಕೆ ತಲುಪಿ ನಕಲಿ ವೈದ್ಯರಾದ ರಮೇಶಕುಮಾರ ತಂದೆ ಶಿವಯ್ಯಾ ಹೀರೆಮಠ ವಯಾ:46 ಜಾತಿ: ಲಿಂಗಾಯತ ಸಾ:ಪೇಠ ಅಮ್ಮಾಪೂರ ಈತನು ತಮ್ಮ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವದನ್ನು ಗಮನಿಸಿ ರಮೇಶಕುಮಾರ ಅವರಿಗೆ ಕೆ.ಪಿ.ಎಂ.ಇ ಅಡಿಯಲ್ಲಿ ಕ್ಲಿನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ ಅವರು ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ. ನಕಲಿಯಾಗಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ಸದರಿ ರಮೇಶಕುಮಾರ ಈತನು ವೈದ್ಯಕೀಯ ಪದವಿಯನ್ನು ಪಡೆಯದೇ ಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ರಮೇಶಕುಮಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೆಕೆಂದು ಕೋರಲಾಗಿದೆ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:82/2021 ಕಲಂ. 417, 419 ಐಪಿಸಿ ಮತ್ತು ಕಲಂ. 6 ಸಂಗಡ 19 ಕೆ.ಪಿ.ಎಮ್.ಇ ಆಕ್ಟ್ 2007 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 69/2021 ಕಲಂ 419 ಐಪಿಸಿ, 19 ಕನರ್ಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶಮೆಂಟ ಆ್ಯಕ್ಟ 2007 : ಇಂದು ದಿನಾಂಕ 19/05/2021 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿಧಾರರಾದ ಶ್ರೀ ಡಾಃ ಹಣಮಂತರೆಡ್ಡಿ ಪ್ರಭಾರಿ ತಾಲೂಕಾ ಆರೋಗ್ಯ ಅಧಿಕಾರಿಗಳು ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಕೊಟ್ಟಿದ್ದೆನೆಂದರೆ ಮಾನ್ಯರವರಲ್ಲಿ ಮೇಲ್ಕಂಡ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ ನಾನು, ತಹಸಿಲ್ದಾರರು ಯಾದಗಿರಿ ಮತ್ತು ಆರಕ್ಷಕ ಉಪನಿರೀಕ್ಷಕರು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಎಲ್ಲರೂ ಕೂಡಿಕೊಂಡು ಜಂಟಿಯಾಗಿ ಯರಗೋಳ ಗ್ರಾಮದಲ್ಲಿ ಬಸವ ಮೇಡಿಕಲಗೆ ಹೊಂದಿಕೊಂಡಂತೆ ಮಹಾಂತೇಶ ತಂದೆ ದುಂಡಪ್ಪ ಯಡ್ರಾಮಿ ಸಾಃ ಯಾದಗಿರಿ ರವರು ಕೆ.ಪಿ.ಎಂ.ಇ. ಕಾಯ್ದೆ ಅನ್ವಯ ಪರವಾನಿಗೆ ಪಡೆಯದೇ ಶ್ರೀ ಮಹಾಂತೇಶ ತಂದೆ ದುಂಡಪ್ಪ ಯಡ್ರಾಮಿ ಸಾಃ ಯಾದಗಿರಿ ಇವರು ಖಾಸಗಿಯಾಗಿ ದವಾಖಾನೆ ತೆರೆದು, ಅಲ್ಲಿ ಸಾರ್ವಜನಿಕರಿಗೆ ಅನಧಿಕೃತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವದು ಕಂಡು ಬಂದಿರುತ್ತದೆ, ಆಗ ನಾವೆಲ್ಲರೂ ಕೂಡಿಕೊಂಡು ಜಂಟಿಯಾಗಿ ಸಾಯಂಕಾಲ 7-00 ಗಂಟೆಗೆ ದವಾಖಾನೆಯ ಮೇಲೆ ದಾಳಿ ಮಾಡಿದಾಗ ನಕಲಿ ಡಾಕ್ಟರ ಆದ ಮಹಾಂತೇಶ ತಂದೆ ದುಂಡಪ್ಪ ಯಡ್ರಾಮಿ ಸಾಃ ಯಾದಗಿರಿ ಇವರು ಅಲ್ಲಿಂದ ಓಡಿ ಹೋಗಿರುತ್ತಾರೆ, ಅಲ್ಲಿ ದವಾಖಾನೆಯಲ್ಲಿದ್ದ ಸಿಬ್ಬಂಧಿಯಾದ ಚಂದ್ರರೆಡ್ಡಿ ತಂದೆ ನಿಂಗಪ್ಪ ಮಾನೆಗಾರ ಇವರನ್ನು ವಿಚಾರಣೆ ಮಾಡಲಾಗಿ ಶ್ರೀ ಮಹಾಂತೇಶ ತಂದೆ ದುಂಡಪ್ಪ ಯಡ್ರಾಮಿ ಸಾಃ ಯಾದಗಿರಿ ಇವರು ಸಾರ್ವಜನಿಕರಿಗೆ ವೈದೈಕೀಯ ಚಿಕಿತ್ಸೆ ಮಾಡುತ್ತಾ ಬಂದಿರುತ್ತಾರೆ ಅಂತಾ ಮೌಖಿಕವಾಗಿ ಹೇಳಿರುತ್ತಾರೆ, ಆಗ ನಾವು ದವಾಖಾನೆಯಲ್ಲಿ ಚೆಕ್ ಮಾಡಲಾಗಿ ಸ್ಟೆತೋಸ್ಕೋಪ್, ಪಲ್ಸ ಆಕ್ಸೋಮೀಟರ ಮತ್ತು ಥರ್ಮಲ ಸ್ಕ್ಯಾನರ್ ಹಾಗೂ ಇನ್ನಿತರೆ ವೈಧ್ಯಕೀಯ ಸಾಮಗ್ರಿಗಳು ಮತ್ತು ಔಷಧಗಳು ಇದ್ದವು, ಅವುಗಳಲ್ಲಿಯಿದ್ದ ಸ್ಟೆತೋಸ್ಕೋಪ್, ಪಲ್ಸ ಆಕ್ಸೋಮೀಟರ ಮತ್ತು ಥರ್ಮಲ ಸ್ಕ್ಯಾನರ್ ಗಳನ್ನು ನಮ್ಮ ವಶಕ್ಕೆ ಪಡೆದುಕೊಂಡು ಬಂದಿರುತ್ತೆವೆ, ನಂತರ ಯಾದಗಿರಿ ಡಿಡಿಪಿಐ ಆಫೀಸ್ ಹತ್ತಿರ ಬಂದು ಸಿಬ್ಬಂಧಿಯಾದ ಚಂದ್ರರೆಡ್ಡಿ ಇತನಿಗೆ ವಿಚಾರಣೆ ಮಾಡಿ ಡಾಕ್ಟರನ್ನು ಕರೆಸು ಅಂತಾ ಹೇಳಿದಾಗ ಅವನು ಮೊಬೈಲದಿಂದ ಡಾಕ್ಟರನ್ನು ಕರೆಯಿಸಿದನು, ಆಗ ಡಾಕ್ಟರ ಮಹಾಂತೇಶ ಇತನು ಬಂದಿದ್ದು, ಅವನಿಗೆ ವಿಚಾರಿಸಿದಾಗ ತಾನು ಸುಮಾರು ವರ್ಷದಿಂದ ಕೆ.ಪಿ.ಎಂ.ಈ ಕಾಯ್ದೆ ಅಡಿಯಲ್ಲಿ ಯಾವುದೇ ರೀತಿಯ ಪರವಾನಿಗೆ ಪಡೆದುಕೊಂಡಿರುವದಿಲ್ಲ, ಹಾಗೇ ಹಳ್ಳಿ ಜನರಿಗೆ ಡಾಕ್ಟರ ಎಂದು ಹೇಳಿ ಕೊಂಡು ಚಿಕಿತ್ಸೆ ನೀಡುತ್ತಿದ್ದೆನೆ ಅಂತಾ ತಾನು ಮಾಡಿದ ತಪ್ಪು ಒಪ್ಪಿ ಕೊಂಡಿರುತ್ತಾನೆ, ಆದ್ದರಿಂದ ಸದರಿ ಮಹಾಂತೇಶ ನಕಲಿ ಡಾಕ್ಟರ ಆದ ಮಹಾಂತೇಶ ತಂದೆ ದುಂಡಪ್ಪ ಯಡ್ರಾಮಿ ಸಾಃ ಯಾದಗಿರಿ ಇವನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ವಿನಂತಿ. ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2021 ಕಲಂ 419 ಐಪಿಸಿ, 19 ಕನರ್ಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶಮೆಂಟ ಆ್ಯಕ್ಟ 2007 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:- 83/2021 ಕಲಂಃ 143,147,148,323,324,307,504,506 ಸಂ.149 ಐಪಿಸಿ : ದಿನಾಂಕ: 19/05/2021 ರಂದು 10-45 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗಶ್ರೀ ಮಲ್ಲೇಶಿ ತಂದೆ ನಾಗಪ್ಪ ವಡ್ಡರ ವಯಾ:37 ವರ್ಷ ಉ:ಕಲ್ಲು ಒಡೆಯುವದುಜಾತಿ:ವಡ್ಡರ ಸಾ:ವಡ್ಡರಗಲ್ಲಿತಿಮ್ಮಾಪೂರಈತನುಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ನಾನು ಎರಡು ವರ್ಷಗಳ ಹಿಂದೆ ನಗರಸಭೆಚುನಾವಣೆಗೆ ನಮ್ಮಓಣಿಯಿಂದ ವೆಂಕಟೇಶಅಮ್ಮಾಪೂರಕರಈತನ ವಿರುದ್ದ ನಿಂತು ಜಯಗಳಿಸಿದ್ದು, ಅಂದಿನಿಂದ ವೆಂಕಟೇಶತಂದೆ ಬರಮಯ್ಯಾಅಮ್ಮಾಪೂರಕರಈತನು ನನ್ನ ಹಾಗೂ ನನ್ನಕುಟುಂಬದವರ ಮೇಲೆ ಆಗಾಗ ಜಗಳ ಮಾಡುತ್ತಾ ಬಂದಿದ್ದಲ್ಲದೆ ನಮ್ಮ ಮೇಲೆ ಹಗೇ ಸಾಧಿಸುತ್ತಾ ಬಂದು ನಮ್ಮೊಂದ್ದಿಗೆ ಜಗಳ ಮಾಡಿದ್ದು, ನಾನು ಜಗಳ ಮಾಡಿದ ವಿಷಯದಲ್ಲಿಠಾಣೆಯಲ್ಲಿ ಕೇಸು ಮಾಡಿರುತ್ತೆನೆ. ಅಷ್ಟಾದರೂಕೂಡಾ ವೆಂಕಟೇಶ ಹಾಗೂ ಅವರಅಣ್ಣತಮ್ಮಂದಿರರು ನೀನು ನಮ್ಮ ಮೇಲೆ ಕೇಸು ಮಾಡಿ ಮಗನೆ ನೀನು ಊರಲ್ಲಿ ಹೇಗೆ ಬದುಕುತ್ತಿ ನೋಡುತ್ತೆವೆಅಂತಾಅನ್ನುತ್ತಾ ಬಂದರು ನಾನು ನಮ್ಮ ಮನೆಯವರುಅವರೊಂದಿಗೆ ಜಗಳ ಬೇಡಅಂತಾಅಂಜಿ ಸುಮ್ಮನಿದ್ದೆವು. ಹಿಗಿದ್ದುಇಂದು ದಿನಾಂಕ:19-05-2021 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನಅಣ್ಣನ ಹೆಂಡತಿಯಾದಕನಕಮ್ಮ ಇವಳು ಮನೆಗೆ ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ನಮ್ಮ ವಡ್ಡರಓಣಿಯ ಸಾಲಿಯ ಮುಂದುಗಡೆ ನಮ್ಮಓಣಿಯ ವೆಂಕಟೇಶಅಮ್ಮಾಪುರಕರ ಹಾಗೂ ಅವರತಮ್ಮಂಧಿರರಾದ ಮಂಜುನಾಥ ಮತ್ತುಆನಂದ ಮೂವರುಕೂಡಿ ನನ್ನಗಂಡನಾದಜೆಟ್ಟೆಪ್ಪತಂದೆ ನಾಗಪ್ಪ ವಡ್ಡರ ಹಾಗೂ ಮೈದುನನಾದತಿಮ್ಮಣ್ಣತಂದೆ ನಾಗಪ್ಪ ವಡ್ಡರ, ಅಕ್ಕನ ಮಗನಾದ ಬೀಮಣ್ಣತಂದೆಯಲ್ಲಪ್ಪ ವಡ್ಡರ ಮೂವರೊಂದಿಗೆ ಜಗಳ ತಗೆದು ಹೊಡೆ ಬಡೆ ಮಾಡುತ್ತಿದ್ದಾರೆ ಬೇಗ ಬಾ ಅಂತಾ ಹೇಳಿದ ಕೂಡಲೆ ನಾನು ಅಣ್ಣನ ಹೆಂಡತಿಕನಕಮ್ಮಇಬ್ಬರು ಸಾಲಿ ಹತ್ತಿರ ಓಡಿ ಹೋಗಿ ನೋಡಲು ವೆಂಕಟೇಶ ಹಾಗೂ ಅವರತಮ್ಮಂದಿರರಾದಆನಂದ, ಮಂಜುನಾಥಅಮ್ಮಾಪೂರಕರ ಮೂವರುಚಿರಾಡುತ್ತಾಇವತ್ತುಯಾರೂ ಬರುತ್ತಾರೆ ಬರಲಿ ಇವತ್ತುಒಂದು ಹೆಣ ಬಿಳುತ್ತದೆ ಅಂತಾಚಿರಾಡುತ್ತಿದ್ದವರೆ ಮಂಜುನಾಥನುತನ್ನಕೈಯಲ್ಲಿದ್ದ ಮಚ್ಚಿನಿಂದ ನನ್ನಅಣ್ಣನಾದಜೆಟ್ಟೆಪ್ಪಈತನತಲೆಗೆ ಹೊಡೆದು ಭಾರಿರಕ್ತಗಾಯ ಮಾಡಿದಾಗಅಣ್ಣಜೆಟ್ಟೆಪ್ಪನತಲೆಗೆ ಭಾರಿರಕ್ತಗಾಯವಾಗಿ ಸತ್ತೆನೆಪ್ಪೋಅಂತಾ ಅವನು ತಲೆಗೆ ಕೈ ಹಿಡಿದು ಕೆಳಗೆ ಬಿದ್ದಾಗ ಮಂಜುನಾಥನುಅದೆ ಮಚ್ಚಿನಿಂದತಮ್ಮತಿಮ್ಮಣ್ಣಈತನತಲೆಗೆ ಹೊಡೆದನು ಆಗ ತಿಮ್ಮಣ್ಣನಿಗೂಕೂಡಾತಲೆಗೆ ಭಾರಿರಕ್ತಗಾಯವಾಗಿ ನೆಲಕ್ಕೆ ಬಿದ್ದನು. ವೆಂಕಟೇಶಈತನುತನ್ನಕೈಯಲ್ಲಿದ್ದ ಬಡಿಗೆಯಿಂದ ಕೆಳಗೆ ಬಿದ್ದಿದ್ದಅಣ್ಣತಿಮ್ಮಣ್ಣನಎದೆಗೆ, ಬಲಗಡೆ ಸೊಂಟಕ್ಕೆ, ಕುತ್ತಿಗೆ ಹತ್ತಿರ ಹೊಡೆದನು. ಆನಂದಈತನುಅಲ್ಲೆ ಬಿದ್ದಒಂದು ಹಿಡಿ ಗಾತ್ರದಕಲ್ಲಿನಿಂದ ಬೀಮಣ್ಣ ವಡ್ಡರಈತನತಲೆಗೆ ಹೊಡೆದುರಕ್ತಗಾಯ ಮಾಡಿದನು, ಆಗ ಅದೆ ಸಮಯಕ್ಕೆಅಲ್ಲಿಗೆ ಬಂದ ವೆಂಕಟೇಶನಇನ್ನೊಬ್ಬತಮ್ಮನಾದ ಹಣಮಂತತಂದೆ ಭರಮಯ್ಯಾಅಮ್ಮಾಫೂರಕರ, ಅವರತಂದೆಯಾದ ಭರಮಯ್ಯಾತಂದೆ ಹಣಮಂತಅಮ್ಮಾಫೂರಕರ ಹಾಗೂ ಅವರಕಡೆಯವರಾದ ಶಿವು ತಂದೆ ಬೀಮಣ್ಣ ಪೂಜಾರಿ, ನಾಗಪ್ಪತಂದೆಜೆಟ್ಟೆಪ್ಪಕುಂಬಾರ, ನಾಗಪ್ಪತಂದೆ ಬೀಮಣ್ಣರಾಯಚೂರ, ಬೀಮಣ್ಣತಂದೆದ್ಯಾವಪ್ಪಕುಪ್ಪಗಲ್ಲ, ಅಮ್ಮಣ್ಣತಂದೆ ಬೀಮಣ್ಣಕುಪ್ಪಗಲ್ಲ, ಹಣಮಂತತಂದೆಜೆಟ್ಟೆಪ್ಪ ಪದ್ದಡಿಇವರೆಲ್ಲರೂ ನನ್ನಅಣ್ಣಜೆಟ್ಟೆಪ್ಪತಮ್ಮತಿಮ್ಮಣ್ಣನಿಗೆ ಕಾಲಿನಿಂದ ಮನ ಬಂದಂತೆಒದ್ದು ತುಳಿಯುತ್ತಿರುವಾಗ ಆಗ ಅದೆ ಸಮಯಕ್ಕೆಅಲ್ಲಿಗೆ ಬಂದ ನಮ್ಮ ಸಣ್ಣಮ್ಮಳಾದ ತಿಮ್ಮವ್ವ ವಡ್ಡರ, ಹಾಗೂ ನಮ್ಮ ವೈನಿಯಾದ ಲಕ್ಷ್ಮಿಗಂಡದ್ಯಾವಪ್ಪ ವಡ್ಡರ, ಓಣಿಯರಂಗಮ್ಮಗಂಡರಾಮಣ್ಣ ವಡ್ಡರ, ಎಲ್ಲರೂಕೂಡಿ ಜಗಳ ಬಿಡಿಸಿದರು. ಆಗ ಅವರುಇವತ್ತು ಉಳದಿರಿ ಮಕ್ಕಳೆ ನಿಮ್ಮ ಪುನ್ಯ ಚೋಲೊ ಆದಇನ್ನೊಮ್ಮೆ ಸಿಕ್ಕರೆ ನಿಮ್ಮ ಹರಿಬ್ಯಾಟಿಕಡಿದಂಗಕಡಿಯುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋದರು. ನಂತರಗಾಯಗೊಂಡತಮ್ಮನಾದತಿಮ್ಮಣ್ಣಅಣ್ಣನಾದಜೆಟ್ಟೆಪ್ಪಅಣ್ಣತಮಕಿಯಾದ ಬೀಮಣ್ಣ ವಡ್ಡರ ಮೂವರನ್ನು 108 ಅಂಬುಲೇನ್ಸ ವಾಹನ ಕರೆಯಿಸಿ ಉಪಚಾರಕುರಿತು ಸರಕಾರಿಆಸ್ಪತ್ರೆ ಸೇರಿಕೆ ಮಾಡಿಠಾಣೆಗೆ ಬಂದುದೂರು ನೀಡಿದ್ದುಇರುತ್ತದೆ. ವೆಂಕಟೇಶಅಮ್ಮಾಪೂರ ಹಾಗೂ ನಮ್ಮ ನಡುವೆ ನಗರಸಭೆಯಚುನಾವಣೆಯಲ್ಲಿ ನನ್ನ ವಿರುದ್ದ ಸೋತಿದ ವಿಷಯಕ್ಕೆ ವೆಂಕಟೇಶನು ನಮ್ಮೊಂದಿಗೆ ವೈಷಮ್ಯ ಬೆಳಸಿಕೊಂಡು ನನ್ನಅಣ್ಣನಾದಜೆಟ್ಟೆಪ್ಪತಮ್ಮನಾದತಿಮ್ಮಣ್ಣಅಣ್ಣತಮಕಿಯಾದ ಬೀಮಣ್ಣಇವರಿಗೆ ಕೊಲೇ ಮಾಡುವಉದ್ದೇಶದಿಂದ ಮಚ್ಚು, ಬಡಿಗೆ, ಕಲ್ಲಿನಿಂದ ಹೊಡೆದು ಭಾರಿಗಾಯಗೊಳಿಸಿದ್ದು ಇರುತ್ತದೆ. ಮೇಲೆ ಹೇಳಿದ ಹನ್ನೊಂದುಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

Last Updated: 20-05-2021 02:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080