ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/02/2021

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 22/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 20/02/2021 ರಂದು 1-10 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.20/02/2021 ರಂದು 12-30 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿಚೌಕ ಏರಿಯಾದ ಚೌಕ ಮಜೀದ ಕಡೆಗೆ ಹೋಗುವ ಸಂಧಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 1-00 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 1-10 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.22/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 37/2021.ಕಲಂ. 379. ಐ.ಪಿ.ಸಿ. : ಇಂದು ದಿನಾಂಕ 20/02/2021 ರಂದು 20-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ಪ್ರವೀಣ ತಂದೆ ಕಾಡಪ್ಪ ಬಾಳಪ್ಪನವರ ವ||21 ಜಾ|| ಕುರುಬರು ಉ|| ಗ್ರಾಮ ಲೆಕ್ಕಾಧಿಕಾರಿ ಹಯ್ಯಾಳ (ಬಿ) ಸಾ|| ಅಂಬಳಿ ತಾ|| ಕೊಟ್ಟೂರು ಜಿ|| ಬಳ್ಳಾರಿ ಹಾ||ವ|| ತಹಶೀಲ್ ಕಾಯರ್ಾಲಯ ವಡಗೇರಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ಸುಮಾರು 01 ತಿಂಗಳಿನಿಂದ ಹಯ್ಯಾಳ (ಬಿ) ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶ್ರೀ ಹಯ್ಯಾಳ ಲಿಂಗೇಶ್ವರ ದೇವಸ್ಥಾನವು ನನ್ನ ಗ್ರಾ.ಲೇ ವ್ಯಾಪ್ತಿಗೆ ಬರುತ್ತದೆ. ಹಿಗಿದ್ದು ದಿನಾಂಕ:19/02/2021 ರಂದು ಬೇಳಿಗ್ಗೆ 07-30 ಗಂಟೆಯ ಸುಮಾರಿಗೆ ಹಯ್ಯಾಳ ಲಿಂಗೇಶ್ವರ ದೇವಸ್ಥಾನದ ಪೂಜಾರಿಯಾದ ಹೇಮಣ್ಣ ತಂದೆ ಮಲ್ಲಪ್ಪ ಕಾಮಣ್ಣನೋರ ಇತನು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ-18/02/2021 ರಂದು ರಾತ್ರಿ 10-00 ಗಂಟೆಗೆ ನಾನು ಮನೆಗೆ ಹೋಗುವಾಗ ಹಯ್ಯಾಳ ಲಿಂಗೇಶ್ವರ ದೇವಸ್ಥಾನದ ಮುಂದಿನ ಕಟ್ಟೆಯ ಮೇಲೆ ಇರುವ ಕಂಚಿನ ದೇವರ ಕುದುರೆಯ ಮೂತರ್ಿಗಳು ಇದ್ದವು. ಮರುದಿನ ದಿನಾಂಕ:19/02/2021 ರಂದು ಬೆಳಿಗ್ಗೆ 06-00 ಗಂಟೆಗೆ ದಿನನಿತ್ಯದಂತೆ ದೇವರ ಪೂಜೆಗೆ ಬಂದಾಗ ದೇವಸ್ಥಾನದ ಮುಂದಿನ ಕಟ್ಟೆಯ ಮೇಲಿರುವ ಕಂಚಿನ ದೇವರ ಕುದುರೆ ಮೂತರ್ಿಗಳು ಕಾಣಿಸಲಿಲ್ಲ ಆಗ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ಅಂತಾ ತಿಳಿಸಿದನು. ಆಗ ನಾನು ನಮ್ಮ ಕಂದಾಯ ನಿರೀಕ್ಷಕರಾದ ಸಿದ್ದಯ್ಯ ಸ್ವಾಮಿ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದೆನು. ಆಗ ನಾನು ಮತ್ತು ನಮ್ಮ ಕಂದಾಯ ನಿರೀಕ್ಷಕರಾದ ಸಿದ್ದಯ್ಯ ಸ್ವಾಮಿ ಇಬ್ಬರೂ ಶ್ರೀ ಹಯ್ಯಾಳ ಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ಕಟ್ಟೆಯ ಮೇಲಿರುವ ಕಂಚಿನ ದೇವರ ಕುದುರೆಯ ಮೂತರ್ಿಗಳು ಇರಲಿಲ್ಲ. ಆಗ ನಾನು ಮತ್ತು ನಮ್ಮ ಕಂದಾಯ ನಿರೀಕ್ಷಕರು, ಹಾಗೂ ಗ್ರಾಮದವರಾದ ಹೇಮಣ್ಣ ತಂದೆ ಮಲ್ಲಪ್ಪ ಕಾಮಣ್ಣನೋರ, ಹಯ್ಯಾಳಪ್ಪ ತಂದೆ ಮಲ್ಲಪ್ಪ ಪದ್ಮಣ್ಣನೋರ, ಮಾನಪ್ಪ ತಂದೆ ನಿಂಗಪ್ಪ ಜಡಿಯಾರ, ಎಲ್ಲರೂ ಕೂಡಿ ಗುಡಿಯ ಸುತ್ತ ಮುತ್ತ ಹುಡುಕಾಡಿದರೂ ಸಿಕ್ಕಿರುವದಿಲ್ಲ. ದೇವಸ್ಥಾನದ ಮುಂದಿನ ಕಟ್ಟೆಯ ಮೇಲೆ ಇಟ್ಟಿರುವ 09 ಕಂಚಿನ ಕುದುರೆಯ ಮೂತರ್ಿಗಳು ಅಂದಾಜು ಕಿಮ್ಮತ್ತು 15000/- ರೂ ಬೆಲೆ ಬಾಳುವ ದೇವರ ಕುದುರೆಯ ಮೂತರ್ಿಗಳನ್ನು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 37/2021 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 03/2020 174 ಸಿ.ಆರ್.ಪಿ.ಸಿ : ಮೃತನಾದ ಹೊನ್ನಯ್ಯನಿಗೆ ಸುಮಾರು ದಿವಸಗಳಿಂದ ಕುಡಿಯುವ ಚಟವಿದ್ದು.ಮನೆಯಲ್ಲಿ ಹೆಚಿಡತಿ ಮಕ್ಕಳು ಮತ್ತು ತಾಯಿ ಎಷ್ಷು ಬುದ್ದಿ ಹೇಳಿದರೂ ಯಾರು ಮಾತು ಕೇಳುತ್ತಿರಲಿಲ್ಲ ಆಗಾಗಿ ಮೃತನು ದಿನಾಲು ಮಧ್ಯ ಸೇವನೆ ಮಾಡುತ್ತಿದ್ದುನು. ಹೀಗಿದ್ದು ದಿನಾಂಕ:19/02/2021 ರಂದು ರಾತ್ರಿ 10 ಗಂಟೆ ಸುಮಾರಿಗೆ ಹೊನ್ನಯ್ಯನು ವಿಪರೀತ ಮಧ್ಯ ಸೇವನೆ ಮಾಡಿ ತನ್ನ ಮಸೀಬಿನ ಶೇಂಗಾದ ಹೊಲಕ್ಕೆ ರಾತ್ರಿ ಮಲಗಲು ಕಾಡಂಗೇರಾ ರೋಡಿ ಕ್ಯಾನಲ್ ಹತ್ತಿರ ಹೋಗುವಾಗ ಕುಡಿದ ನಶೆಯಲ್ಲಿ ಆಯತಪ್ಪಿ ಕೆನಾಲಗೆ ಉರುಳಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ಇರುವುದಿಲ್ಲ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 03/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 06/2021 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 20/02/2021 ರಂದು 8-45 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಸಂಗೀತಾ ಗಂಡ ಧಾರು @ ರೆಡ್ಡಿ ಚಿನ್ನಿರಾಠೋಡ ಸಾ|| ಚಾಮನಾಳ ತಾಂಡಾ ಹಾ|| ವ|| ಉಕ್ಕನಾಳ ಖೇಮುನಾಯಕ ತಾಂಡಾ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ನಾಲ್ಕು ವರ್ಷಗಳ ಹಿಂದೆ ಧಾರು @ ರೆಡ್ಡಿ ತಂದೆ ಶಂಕರ ಚಿನ್ನಾರಾಠೋಡ ವಯಾ:25 ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ಚಾಮನಾಳ ತಾಂಡಾ ತಾ: ಶಹಾಪೂರ ಇವರೊಂದಿಗೆ ಮದುವೆ ಆಗಿದ್ದು, ಆರ್ಯನ್ ಅಂತಾ 2 ವರ್ಷದ ಮಗನಿರುತ್ತಾನೆ, ಈಗ ಮತ್ತೆ ಗಭರ್ಿಣಿ ಇರುತ್ತೇನೆ. ನನ್ನ ಗಂಡ ಮತ್ತು ನಾನು ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದೇವು, ಕೋರಾನ ಬಂದ ನಂತರ ಈಗ ಸುಮಾರು 1 ವರ್ಷಗಳಿಂದ ನಾವು ನಮ್ಮ ತವರು ಮನೆ ಇರುವ ಉಕ್ಕನಾಳ ತಾಂಡಾದಲ್ಲಿ ವಾಸವಾಗಿದ್ದು ಅಲ್ಲಿಂದಲೆ ನನ್ನ ಗಂಡ ನಮ್ಮ ಉಕ್ಕನಾಳ ಸೀಮಾಂತರದಲ್ಲಿನ ಹೊಲದಲ್ಲಿ ಒಕ್ಕಲುತನ ಕೆಲಸ ಮತ್ತು ಕೂಲಿ ಕೆಲಸ ಮಾಡುತ್ತಾ ಇದ್ದನು. ಹೀಗಿದ್ದು ಎಂದಿನಂತೆ ನಿನ್ನೆ ದಿನಾಂಕ:19/02/2021 ರಂದು ನಾನು ಮತ್ತು ನನ್ನ ಗಂಡನಾದ ಧಾರು @ ರೆಡ್ಡಿ ತಂದೆ ಶಂಕರ ಚಿನ್ನಾರಾಠೋಡ ವಯಾ:25 ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ಚಾಮನಾಳ ತಾಂಡಾ ಹಾ:ವ: ಉಕ್ಕನಾಳ ಖೇಮುನಾಯ್ಕ ತಾಂಡಾ ತಾ: ಶಹಾಪೂರ ಈತನು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿದ್ದೆವು ಸಾಯಂಕಾಲ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಅಂದಾಜು ಸಮಯ 06.30 ಪಿಎಂ ಸುಮಾರಿಗೆ ನಿನ್ನೆ ಗಾಳಿ ಜೋರಾಗಿ ಬಿಟ್ಟಿದ್ದರಿಂದ ನಮ್ಮ ಹೊಲದಲ್ಲಿಯ ಒಂದು ಲೈಟಿನ ಕಂಬದಿಂದ ಆಕಸ್ಮಿಕವಾಗಿ ವಾಯರ್ ಹರಿದು ಬಿದ್ದಿದ್ದು, ಆ ವಾಯರ್ ನನ್ನ ಗಂಡನ ಕೈಗೆ ತಗುಲಿ ಒಮ್ಮೆಲೆ ಚಟ್ಟನೆ ಚೀರಿದನು ಕರೆಂಟ್ ಶಾಟ್ ಹೊಡೆದು ಬಿದ್ದನು ನಾನು ಚಿರಾಡುತ್ತಿದಾಗ ನಮ್ಮ ದೊಡ್ಡ ಮಾವ ಅಂದರೆ ನನ್ನ ಗಂಡನ ದೊಡ್ಡಪ್ಪನಾದ ಡಾಕು ತಂದೆ ವಾಲು ಚಿನ್ನಾ ರಾಠೋಡ ನಮ್ಮ ತಾಂಡಾದವರಾದ ವಿನೋದ ತಂದೆ ಚಂದು ಚಿನ್ನಾ ರಾಠೊಡ, ನನ್ನ ಗಂಡ ಚಿಕ್ಕಪ್ಪನಾದ ಲೋಕೇಶ ತಂದೆ ವಾಲು ಚಿನ್ನಾರಾಠೋಡ ಮತ್ತು ಅನೀಲ ತಂದೆ ರಾಮು ರಾಠೋಡ ಇವರುಗಳು ಕೂಡ ಓಡಿ ಬಂದು ನೋಡಿದರು, ನಮ್ಮ ಮಾವ ಅಂದರೆ ನನ್ನ ಗಂಡನ ತಂದೆಯವರಾದ ಶಂಕರ ತಂದೆ ವಾಲು ಚಿನ್ನಾ ರಾಠೋಡ ಇವರು ಕೂಡ ಬಂದು ನೋಡಿದರು, ತದನಂತರ ಕರೆಂಟ ತೆಗೆಸಿ ನನ್ನ ಗಂಡನಿಗೆ ನೋಡಲಾಗಿ ಎರಡು ಕೈಗಳಿಗೆ ಕರೆಂಟ್ ಶಾಖ ಹೊಡೆದು ಪರಿಣಾಮವಾಗಿ ನನ್ನ ಗಂಡನಾದ ಧಾರು @ ರೆಡ್ಡಿ ತಂದೆ ಶಂಕರ ಚಿನ್ನಾರಾಠೋಡ ಈತನು ಸ್ಥಳದಲ್ಲಿ ಮೃತಪಟ್ಟಿದ್ದನು, ನಂತರ ನನ್ನ ಗಂಡನ ಶವವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಸಾಗಿಸಿರುತ್ತೇವೆ, ನಾನು ನಮ್ಮ ತಂದೆಯಾದ ಗುರುನಾಥ ತಂದೆ ದೇನು, ತಾಯಿಯಾದ ಸುಶಿಲಾಬಾಯಿ ಗಂಡ ಗುರುನಾಥ ಇವರುಗಳು ಪುನಾಃ ದಿಂದ ಬಂದ ನಂತರ ಇಂದು ದಿನಾಂಕ:20/02/2021 ರಂದು ಠಾಣೆಗೆ ಬಂದು ಅಜರ್ಿಯನ್ನು ನಮ್ಮ ಸಂಬಂದಿಕರಾದ ಶ್ರೀ. ಲಕ್ಷ್ಮಣ ತಂದೆ ಚಂದುನಾಯ್ಕ ರಾಠೋಡ ಸಾ: ಚಾಮನಾಳತಾಂಡಾ ಇವರಿಂದ ಬರೆಯಿಸಿರುತ್ತೇನೆ. ನನ್ನ ಗಂಡನು ಆಕಸ್ಮಿಕವಾಗಿ ಕೆಇಬಿ ವಿದ್ಯೂತ್ ಕಂಬಂದಿಮದ ಹರಿದು ಬಿದ್ದ ವಿದ್ಯೂತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನನ್ನ ಗಂಡ ಸಾವಿನ ವಿಷಯದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲ. ಮಾನ್ಯರವರು ನನ್ನ ಗಂಡನ ಸಾವಿನ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕು ಅಂತಾ ವಿನಂತಿ. ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 06/2021 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 01/2021 ಕಲಂ 174 ಸಿ.ಆರ್.ಪಿಸಿ : ಮೃತನ ಹೆಸರಿನಲ್ಲಿ ಹೊತಪೇಟ ಸೀಮಾಂತರದಲ್ಲಿ 1 ಎಕರೆ ಹೊಲವಿದ್ದು ಸದರಿ ಹೊಲದ ಸಾಗುವಳಿಗಾಗಿ ಮತ್ತು ಸಂಸಾರಕ್ಕಾಗಿ ತನ್ನ ತಾಯಿ ಹೊನ್ನಮ್ಮ ಇವಳ ಹೆಸರಿನಲ್ಲಿ ಹೊತಪೇಟ ಸೊಸೈಟಿಯಲ್ಲಿ 50,000 ರೂ ಸಾಲ ಹಾಗೂ ಖಾಸಗಿಯಾಗಿ 2 ಲಕ್ಷ ರೂ ಸಾಲ ಮಾಡಿರುತ್ತಾನೆ. ತನ್ನ ಹೊಲದಲ್ಲಿ ಹತ್ತಿ ಬೆಳೆ ಮಾಡಿದ್ದು ಮಳೆ ಬಾರದೇ ಹಾಳಾಗಿದ್ದರಿಂದ ಸಾಲ ತೀರಿಸಲಾಗದೇ, ಸಾಲದ ಬಾದೆ ತಾಳಲಾರದೇ ಮೃತನು ದಿನಾಂಕ 14/02/2021 ರಂದು 10 ಎ.ಎಮ್. ದಿಂದ 2 ಪಿ.ಎಮ್ ಅವಧಿಯಲ್ಲಿ ಹೊತಪೇಟ ದೊಡ್ಡ ಹಳ್ಳದ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಇಂದು ದಿನಾಂಕ:20/02/2021 ರಂದು 2 ಪಿ.ಎಮ್. ಸುಮಾರಿಗೆ ಮೃತನ ಶವ ಹಳ್ಳದ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು ಇರುತ್ತದೆ. ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:01/2021 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 21-02-2021 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080