ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/03/2021

ಯಾದಗಿರ ನಗರ ಪೊಲೀಸ್ ಠಾಣೆ:- 38/2021 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ;20/03/2021 ರಂದು 6-45 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.20/03/2021 ರಂದು 6-00 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರ ತಾಂಡ ಹತ್ತಿರ ಯಾರೋ ಒಬ್ಬನು ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 6-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 6-45 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.38/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:- 39/2021 ಕಲಂ: 279,3337,338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ : ಇಂದು ದಿನಾಂಕ 20.03.2021 ರಂದು ಸರಕಾರಿ ಆಸ್ಪತ್ರೆ ಕಲಬುಗರ್ಿಯಲ್ಲಿ ಗಾಯಾಳು ಗುತ್ತಪ್ಪ ತಂದೆ ಬಸಪ್ಪ ಬೊಮನಳ್ಳಿ ಸಾ|| ಮುದನೂರ (ಬಿ) ಹಾವ|| ಕೆಂಭಾವಿ ಇವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 7.30 ಪಿಎಮ್ಕ್ಕೆ ಬಂದಿದ್ದು, ಸದರಿ ಹೇಳಿಕೆ ಸಾರಾಂಶವೇನೆಂದರೆ, ನಾನು ದಿನಾಂಕ 13.03.2021 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ವಾಕಿಂಗ್ ಕುರಿತು ಕೆಂಭಾವಿ- ಮುದನೂರ ರಸ್ತೆಯ ಕೆಂಭಾವಿಯಿಂದ ಮುದನೂರ ಕಡೆ ಹೋಗುವ ಕುರಿತು ಕೆಂಭಾವಿ ಪಟ್ಟಣದ ಕೆಇಬಿ ಕಛೇರಿಯ ಮುಂದುಗಡೆ ರೋಡಿನ ಎಡಮಗ್ಗಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಒಂದು ಮೋಟರ ಸೈಕಲ್ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಹಿಂದಿನಿಂದ ಬಲವಾಗಿ ನನಗೆ ಡಿಕ್ಕಿಪಡೆಸಿ ವಾಹನವನ್ನು ನಿಲ್ಲಿಸದೆ ತೆಗೆದುಕೊಂಡು ಹೋಗಿದ್ದು, ನಾನು ಕೆಳಗೆ ಬಿದ್ದಿದ್ದು, ನನಗೆ ಎಡಗಾಲ ಮೊಳಕಾಲ ಕೆಳಗೆ ಕಾಲುಮುರಿದಂತಾಗಿ ಬೆನ್ನಿಗೆ ಗುಪ್ತಗಾಯವಾಗಿದ್ದು ನನಗಾದ ಗಾಯದ ನೋವಿನಲ್ಲಿ ನನಗೆ ಅಪಘಾತಪಡಿಸಿದ ಮೋಟರ ಸೈಕಲ್ ನಂಬರಾಗಲಿ ಹಾಗೂ ಅದರ ಚಾಲಕನಿಗಾಗಲಿ ನಾನು ಗುತರ್ಿಸಿರುವದಿಲ್ಲ. ನಂತರ ನಾನು ನಮ್ಮ ಮನೆಗೆ ಫೋನ್ ಮಾಡಿ ತಿಳಿಸಿದಾಗ ಮಗನಾದ ವಿದ್ಯಾಸಾಗರ ಈತನು ನನಗೆ ಅಪಘಾತವಾದ ಸ್ಥಳಕ್ಕೆ ಬಂದು ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ಉಪಚಾರ ಪಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ಅಪಘಾತಪಡಿಸಿ ತನ್ನ ಮೋಟರ ಸೈಕಲ್ನ್ನು ನಿಲ್ಲಿಸದೇ ಓಡಿ ಹೋದ ಮೋಟರ ಸೈಕಲ ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 39/2021 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:- 56/2021 ಕಲಂ:153, 147, 148, 323, 324, 307, 504, 506 ಸಂ. 149 ಐಪಿಸಿ : ಇಂದು ದಿನಾಂಕ:20/03/2021 ರಂದು 5:30 ಎ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀಮತಿ ನಂದಮ್ಮ ಗಂಡ ದೇವಿಂದ್ರಪ್ಪ ಬಿರಾದಾರ ವ|| 48 ವರ್ಷ ಜಾ|| ಬೇಡರು ಉ|| ಮನೆಗೆಲಸ ಸಾ|| ಹಾಲಬಾವಿ ತಾ|| ಸುರಪುರ ಈತನು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಮಗೆ ಮೂರು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದು ಮಗಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಮ್ಮೂರ ನಮ್ಮ ಜನಾಂಗದ ಹಣಮಂತ್ರಾಯ ನಾಯ್ಕೋಡಿ ಇವರು ನಮ್ಮ ಸಂಗಡ ಕುಡಿಯುವ ನೀರಿನ ಪೈಪ್ ಲೈನ ಕೆಲಸ ಮಾಡುವ ವಿಷಯವಾಗಿ ಹಣಮಂತ್ರಾಯ ನಾಯ್ಕೋಡಿ ಇತನು ನನ್ನ ತಾಯಿ ಗ್ರಾಮ ಪಂಚಾಯತ್ ಮೆಂಬರ ಇದ್ದಾಳೆ ನಾವು ಕೆಲಸ ಮಾಡಿಸುತ್ತೇವೆ, ನೀವು ಏಕೆ ಕೆಲಸ ಮಾಡುತ್ತಿ ಸುಳೆ ಮನಗೆ ಅಂತಾ ಬೈದಾಗ ನನ್ನ ಗಂಡ ಮನೆಗೆ ಬಂದಾಗ ನಡೆದ ವಿಷಯ ನಮ್ಮ ಮುಂದೆ ಹೇಳಿದನು. ದಿನಾಂಕ:18/03/2021 ರಂದು ರಾತ್ರಿ ಅಂದಾಜು 8:00 ಗಂಟೆಗೆ ನಾನು ಮತ್ತು ನನ್ನ ಗಂಡ ದೇವಿಂದ್ರಪ್ಪ ತಂದೆ ಪರಮಣ್ಣಗೌಡ ವ|| 55 ವರ್ಷ ನನ್ನ ಮಗ ಶರಣಬಸವ, ನನ್ನ ಮೈದುನಾ ಬಾಲಪ್ಪ ನಾಲ್ಕು ಜನರು ಕೂಡಿ ನಮ್ಮೂರ ದ್ಯಾವಮ್ಮ ದೇವಿ ಗುಡಿಯ ಹತ್ತಿರ ಮಾತಾಡುತ್ತಾ ನಿಂತಾಗ ನಮ್ಮೂರಿ ನಮ್ಮ ಜನಾಂಗದವರಾದ 1) ರಂಗಪ್ಪ ತಂದೆ ಹಣಮಪ್ಪ ನಾಯ್ಕೋಡಿ, 2) ಹಣಮಂತ್ರಾಯ ತಂದೆ ರಂಗಪ್ಪ ನಾಯ್ಕೋಡಿ, 3) ಅರವಿಂದ ತಂದೆ ರಂಗಪ್ಪ ನಾಯ್ಕೋಡಿ, 4) ಮಾನಯ್ಯ ತಂದೆ ದ್ಯಾವಪ್ಪ ದೋರಿ, 5) ಸಂಗಯ್ಯ ತಂದೆ ದ್ಯಾವಪ್ಪ ದೋರಿ ಎಲ್ಲರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಿಡಿಗೆ ಹಿಡಿದುಕೊಂಡು ಬಂದು ಹಣಮಂತ್ರಾಯ ನಾಯ್ಕೋಡಿ ಇತನು ನನ್ನ ಗಂಡನಿಗೆ ಏನಲೆ ದೇವ್ಯಾ ನೀನು ನಮ್ಮೂರಲ್ಲಿ ಕುಡಿಯುವ ನೀರಿನ ಪೈಪ್ ಲೈನ ಮಾಡಿಸುತ್ತಿ ಸುಳೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಗಂಡನು ಅವರಿಗೆ ಕೆಲಸ ನನಗೆ ಮಾಡಿಸಲು ಕೊಟ್ಟಿರುತ್ತಾರೆ ನೀವು ಯಾಕೆ ಇತರ ಬೈಯುತ್ತಿರಿ ಅಂತಾ ಕೇಳುತ್ತಿರುವಾಗ ರಂಗಪ್ಪ ಇತನು ನನ್ನ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡದನು, ಹಣಮಂತ್ರಾಯ ಇತನು ನನ್ನ ಗಂಡನಿಗೆ ಕೋಲೆ ಮಾಡುವ ಉದ್ದೇಶದಿಂದ ಕಾಲಿನಿಂದ ತೋರಡಿಗೆ ಒದೆಯಲು ಬಂದಾಗ ನನ್ನ ಗಂಡನು ತಪ್ಪಿಸಿಕೊಂಡಾಗ ಹೊಟ್ಟೆಗೆ ಬಡಿದು ಗುಪ್ತ ಗಾಯ ಮಾಡಿದನು, ಅರವಿಂದ ಇತನು ನನ್ನ ಗಂಡನಿಗೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡನ ಎಡ ಪಕ್ಕಡಿಗೆ ಹೊಡೆದು ಗುಪ್ತಗಾಯ ಮಾಡಿ ನೆಲಕ್ಕೆ ಕೆಡವಿದನು, ಮಾನಯ್ಯ ಮತ್ತು ಸಂಗಯ್ಯ ಇಬ್ಬರು ಕಾಲನಿಂದ ಎಡ ಬುಜಕ್ಕೆ ಹೊಟ್ಟೆಗೆ ಒದ್ದರು. ಅಲ್ಲೆ ಇದ್ದ ನಾನು ಮತ್ತು ನನ್ನ ಮಗ ಶರಣಬಸವ, ಹಾಗೂ ಮೈದುನ ಬಾಲಪ್ಪ ಮೂರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡೇವು. ಆಗ ಆರೋಪಿತರೆಲ್ಲರು ಇವರು ಜಗಳ ಬಿಡಿಸಿದ್ದಾರೆ ಅಂತಾ ಇವತ್ತು ನಿನಗೆ ಬಿಟ್ಟಿವಿ ಸೂಳೆ ಮಗನೆ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ನಂತರ ನನ್ನ ಗಂಡನನ್ನು ನಾನು ಮತ್ತು ನನ್ನ ಮಗ ಶರಣಬಸವ, ಮೈದುನ ಬಾಲಪ್ಪ ಮೂವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ತಂದು ಸೇರಿಕೆ ಮಾಡಿದೇವು. ಪ್ರಥಮೋಪಚಾರ ಮಾಡಿದ ವೈದ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೊಗಲು ತಿಳಿಸಿದ್ದರಿಂದ ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಕಲಬುರಗಿಯ ಮೊಹನರಾಜ ಆಸ್ಪತ್ರೆ ತಂದು ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನೀಡಿರುತ್ತೆನೆ. ಕಾರಣ ನನ್ನ ಗಂಡನಿಗೆ ಕೋಲೆ ಮಾಡುವ ಉದ್ದೇಶದಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿ ಹೋಗಿರುವ ಮೇಲೆ ಹೇಳಿದ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ.ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2021 ಕಲಂ:153, 147, 148, 323, 324, 307, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:- 57/2021 ಕಲಂಃ 323,324,504,506 ಸಂ 34 ಐಪಿಸಿ : ಇಂದು ದಿನಾಂಕ: 20/03/2021 ರಂದು 7 ಪಿ,ಎಂ ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿದ್ದಾಗ ಪಿಯರ್ಾದಿ ಶ್ರೀ ಗ್ಯಾನಪ್ಪತಂದೆ ಭೀಮಪ್ಪ ಕಾಂಬಳೆ ವಯಾ:33 ವರ್ಷಜಾ:ಪರಿಶಿಷ್ಟ ಜಾತಿ ಉ:ಒಕ್ಕಲುತನ ಸಾ:ಹುಣಸಿಹೊಳೆ ತಾ:ಸುರಪೂರಇವರುಠಾಣೆಗೆ ಬಂದುಒಂದು ಗಣಕೀಕರಿಸಿದ ಒಂದುದೂರುಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಸುಮಾರುಒಂದು ವರ್ಷದಿಂದ ನಮ್ಮಗ್ರಾಮದ ಮರಿಲಿಂಗತಂದೆರಾಮಲಿಂಗಪ್ಪಗುಡಿಮನಿ ಇವರುಅಂಬೇಡ್ಕರ್ಕಟ್ಟೆಯ ಹತ್ತಿರಇರುವಜಾಗದ ವಿಷಯವಾಗಿ ನಮ್ಮಜೊತೆತಂಟೆತಕರಾರು ಮಾಡುತ್ತಾ ಬಂದಿದ್ದರೂಕೂಡಾ ನಾವು ಸುಮ್ಮನಿದ್ದೇವು.ಹೀಗಿದ್ದು ದಿನಾಂಕ: 10-03-2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಅಂಬೇಡ್ಕರ್ಕಟ್ಟೆಯ ಹತ್ತಿರ ನಿಂತುಕೊಂಡಾಗ ನಮ್ಮಗ್ರಾಮದ ನಮ್ಮಜನಾಂಗದಾವರಾದ 1) ಮರಿಲಿಂಗತಂದೆರಾಮಲಿಂಗಪ್ಪಗುಡಿಮನಿ, 2) ಪರಶುರಾಮತಂದೆ ಭೀಮಪ್ಪಛಲವಾದಿ, 3) ಶಂಕ್ರೆಪ್ಪತಂದೆರಾಯಪ್ಪಛಲವಾದಿ ಇವರೆಲ್ಲರುಕೂಡಿ ಬಂದವರೆ ಎಲೇ ಸೂಳಿ ಮಗನೇ ಗ್ಯಾನ್ಯಾಊರಲ್ಲಿ ನಿಂದು ಬಹಳ ಆಗಿದೆಅಂತಾಅವಾಚ್ಯವಾಗಿ ಬೈಯುತ್ತಿರುವಾಗ ನಾನು ಏಕೆ ಬೈಯುತ್ತಿರಿಅಂದಿದ್ದಕ್ಕೆಅವರೆಲ್ಲರುಇವತ್ತುಒಂದು ಕೈ ನೋಡೇ ಬಿಡುತ್ತೇವೆಅಂದವರೆಅವರಲ್ಲಿಯ ಮರಿಲಿಂಗಇತನು ನನ್ನಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಗೆಒದ್ದು ಗುಪ್ತ ಗಾಯ ಮಾಡಿದನು. ಆಗ ನಾನು ಚೀರಾಡುತ್ತಿರುವ ಶಬ್ದ ಕೇಳಿ ಜಗಳ ಬಿಡಿಸಲು ಬಂದ ನನ್ನದೊಡ್ಡಪ್ಪನ ಮಗನಾದ ಶಿವಶಂಕರ ಈತನಿಗೆ ಪರಶುರಾಮಇತನುಅಲ್ಲೆ ಬಿದ್ದ ಬಡಿಗೆಯಿಂದ ಬಲಗೈಗೆ ಹೊಡೆದುಗುಪ್ತಗಾಯ ಮಾಡಿದನು. ಹಾಗೂ ಶಂಕ್ರೆಪ್ಪಈತನು ಶಿವಶಂಕರನಿಗೆ ಕಾಲಿನಿಂದ ಹೊಟ್ಟೆಗೆಒದ್ದುಗುಪ್ತಗಾಯ ಮಾಡಿದನು. ಆಗ ನಾವು ಚೀರಾಡುತ್ತಿರುವದನ್ನು ಕೇಳಿ ಅಲ್ಲೇ ಹೋಗುತ್ತಿದ್ದ ನಮ್ಮಗ್ರಾಮದ ಮಲ್ಲಣ್ಣತಂದೆ ಹಣಮಂತ್ರಾಯದೊರಿ, ಮಾನಪ್ಪತಂದೆ ನಾಗಪ್ಪಛಲವಾದಿ ಇಬ್ಬರು ಬಂದು ಜಗಳ ನೋಡಿ ಬಿಡಿಸದರು. ಆಗ ಅವರುಇವತ್ತುಇವರು ಬಂದು ಬಿಡಿಸಿದ್ದಾರೆ ಅಂತಾ ಉಳಿದಿರಿ ಮಕ್ಕಳೆ, ಇನ್ನೊಮ್ಮೆ ನಮ್ಮತಂಟೆಗೆ ಬಂದರೆ ನಿಮ್ಮಜೀವ ಸಹಿತ ಬಿಡುವದಿಲ್ಲ ಅಂತಾಜೀವದ ಬೆದರಿಕೆ ಹಾಕಿ ಹೊರಟು ಹೋದರು. ನಂತರಗಾಯಗೊಂಡ ನಾನು ಮತ್ತು ನನ್ನದೊಡ್ಡಪ್ಪನ ಮಗ ಶಿವಶಂಕರ ಇಬ್ಬರು ಸರಕಾರಿಆಸ್ಪತ್ರೆ ಸುರಪೂರಕ್ಕೆ ಬಂದುಉಪಚಾರ ಮಾಡಿಸಿಕೊಂಡು ನಮ್ಮತಂದೆ ಭೀಮಪ್ಪ ಹಾಗೂ ದೊಡ್ಡಪ್ಪನಾದ ಮಲ್ಲಪ್ಪಇವರೊಂದಿಗೆ ವಿಚಾರ ಮಾಡಿ, ಇಂದುತಡವಾಗಿಠಾಣೆಗೆ ಬಂದುದೂರುಅಜರ್ಿ ನಿಡಿದ್ದುಇರುತ್ತದೆ. ನಮಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ ಮೂರುಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ.

 ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 39/2021 ಕಲಂ 379 ಐಪಿಸಿ : ಇಂದು ದಿನಾಂಕ 20.03.2021 ರಂದು ಸಮಯ ಬೆಳಿಗ್ಗೆ 8:30 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ನೀಲಿ ಬಣ್ಣದ ಸೋನಾಲಿಕ ಟ್ರ್ಯಾಕ್ಟರನ ಇಂಜಿನ ಚಸ್ಸಿ ನಂಬರ ಇಙಂಖಖ862720ಖ3 ಮತ್ತು ಇಂಜಿನ ನಂಬರ 3100ಈಐಗ93ಉ859375ಈ18 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 39/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 40/2021 ಕಲಂ 379 ಐಪಿಸಿ : ಇಂದು ದಿನಾಂಕ 20.03.2021 ರಂದು ಸಮಯ ಮಧ್ಯಾಹ್ನ 04:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಕೆಎ-33-ಟಿಎ-3158 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 40/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 61/2021 ಕಲಂ 79.80 ಕೆ.ಪಿ ಆಕ್ಟ : ಇಂದು ದಿನಾಂಕ 20/03/2021 ರಾತ್ರಿ 21-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಟೇಶ ಡಿವೈ.ಎಸ್.ಪಿ ಸಾಹೇಬರು ಸುರಪೂರ ಉಪ ವಿಭಾಗ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 20/03/2021 ರಂದು ರಾತ್ರಿ 8-35 ಗಂಟೆಗೆ ಶಹಾಪೂರ ನಗರದ ಬಸವೇಶ್ವರ ಚೌಕ ಹತ್ತಿರ ಇದ್ದಾಗ ಶಹಾಪೂರ ನಗರದ ಹೋಸ ಬಸ್ಸ ನಿಲ್ದಾಣದ ಹತ್ತಿರ ಇರುವ ಸೂರ್ಯ ಲಾಡ್ಜನಲ್ಲಿನ ಒಂದು ರೂಮಿನಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಏಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 8-45 ಪಿ.ಎಂ.ಕ್ಕೆ ಅನುಮತಿ ನೀಡಿರುತ್ತಾರೆ. ಕಾರಣ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 61/2021 ಕಲಂ 79.80. ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ.

ಶಹಾಪೂರ ಠಾಣೆ ಗುನ್ನೆ ನಂ :- 58/2021 ಕಲಂ 78(3) ಕೆಪಿ ಯಾಕ್ಟ್ : ಇಂದು ದಿನಾಂಕ: 20/03/2021 ರಂದು 4.15 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ವೆಂಕಟೇಶ ಡಿ.ವೈ.ಎಸ್.ಪಿ ಸಾಹೇಬರು ಸುರಪೂರ ಉಪವಿಭಾಗ ರವರು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 20/03/2021 ರಂದು 3.30 ಪಿ.ಎಮ್.ಕ್ಕೆ ಶಹಾಪೂರ ಠಾಣೆಯಲ್ಲಿದ್ದಾಗ ಶಹಾಪುರ ನಗರದ ಮೇನ ಬಜಾರನಲ್ಲಿರುವ ಹನುಮಾನ ಗುಡಿಯ ಹತ್ತಿರ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 13/2021 ನೇದ್ದನ್ನು ದಾಖಲಿಸಿದ್ದು ಇದೆ. ಕಲಂ 78(3) ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು, ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ಇದೆ. ಆದ್ದರಿಂದ ಸದರಿ ಮಟಕಾ ಜೂಜಾಟ ನಡೆಸುತ್ತಿರುವ ವ್ಯಕ್ತಿಯ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 58/2021 ಕಲಂ 78(3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಠಾಣೆ ಗುನ್ನೆ ನಂ :- 59/2021 ಕಲಂ 78(3) ಕೆಪಿ ಯಾಕ್ಟ್ : ಇಂದು ದಿನಾಂಕ: 20/03/2021 ರಂದು 5.15 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 20/03/2021 ರಂದು 4.30 ಪಿ.ಎಮ್.ಕ್ಕೆ ಶಹಾಪೂರ ಠಾಣೆಯಲ್ಲಿದ್ದಾಗ ಬೇವಿನಳ್ಳಿ ಕ್ರಾಸ್ ಹತ್ತಿರ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 14/2021 ನೇದ್ದನ್ನು ದಾಖಲಿಸಿದ್ದು ಇದೆ. ಕಲಂ 78(3) ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು, ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ಇದೆ. ಆದ್ದರಿಂದ ಸದರಿ ಮಟಕಾ ಜೂಜಾಟ ನಡೆಸುತ್ತಿರುವ ವ್ಯಕ್ತಿಯ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 59/2021 ಕಲಂ 78(3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಠಾಣೆ ಗುನ್ನೆ ನಂ :-60/2021 ಕಲಂ 78(3) ಕೆಪಿ ಯಾಕ್ಟ್ : ಇಂದು ದಿನಾಂಕ: 20/03/2021 ರಂದು 8.05 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ವೆಂಕಟೇಶ ಡಿ.ವೈ.ಎಸ್.ಪಿ ಸಾಹೇಬರು ಸುರಪೂರ ಉಪವಿಭಾಗ ರವರು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 20/03/2021 ರಂದು 7.30 ಪಿ.ಎಮ್.ಕ್ಕೆ ಶಹಾಪೂರ ಠಾಣೆಯಲ್ಲಿದ್ದಾಗ ಶಹಾಪುರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 15/2021 ನೇದ್ದನ್ನು ದಾಖಲಿಸಿದ್ದು ಇದೆ. ಕಲಂ 78(3) ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು, ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ಇದೆ. ಆದ್ದರಿಂದ ಸದರಿ ಮಟಕಾ ಜೂಜಾಟ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 60/2021 ಕಲಂ 78(3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 21-03-2021 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080