ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/04/2021

ಶೋರಾಪುರ ಪೊಲೀಸ್ ಠಾಣೆ :- 48/2021 ಕಲಂ: 269,270 ಐಪಿಸಿ ಕಲಂ.05 : ಇಂದು ದಿನಾಂಕ;20/04/2021 ರಂದು 1-15 ಪಿಎಮ್ ಕ್ಕೆ ಶ್ರೀ ಗೀರೀಶ ವಿ ರಾಯಕೋಟಿ ಕಂದಾಯ ನಿರೀಕ್ಷಕರು ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶದ್ದರ ಸಾರಾಂಶವೆನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಅದರಂತೆ ಸಾರ್ವಜನಿಕರ ಹಿತ ಕಾಪಾಡುವ ಸಲುವಾಗಿ ಮತ್ತು ಕೋವಿಡ್-19 ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮೂಡಿಸುವ ಕುರಿತು ನಾನು ಮತ್ತು ಮಲ್ಲಿಕಾಜರ್ುನ ಗ್ರಾಮ ಲೆಕ್ಕಿಗರು ಯಾದಗಿರಿ, ನೀಲಪ್ಪ ಭಜಂತ್ರಿ ಗ್ರಾಮ ಲೆಕ್ಕಿಗರು ಮುದ್ನಾಳ ರವರು ಕೂಡಿಕೊಂಡು ನಿನ್ನೆ ದಿನಾಂಕ; 19/04/2021 ರಂದು 11-00 ಎಎಮ್ ಸುಮಾರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಯಾದಗಿರಿ ಕಡೆಗೆ ಹೋಗುತ್ತಿರುವಾಗ ಚಿತ್ತಾಪೂರ ರಸ್ತೆಗೆ ಬರುವ ಡಾನ್ಬೊಸ್ಕೋ ಶಾಲೆಯ ಹತ್ತಿರ ಲಾರಿ ನಂ.ಕೆಎ.33.ಎ.0489 ನೇದ್ದರಲ್ಲಿ ಸುಮಾರು 40-50 ಜನರನ್ನು ತುಂಬಿಕೊಂಡು ಬರುತ್ತಿದ್ದನ್ನು ಕಂಡು ನಾವು ಕೈ ಮಾಡಿ ನಿಲ್ಲಿಸಿದ್ದು ನೋಡಲಾಗಿ ಲಾರಿಯಲ್ಲಿ ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ಕುಳಿತಿದ್ದು ಮತ್ತು ಕೆಲವರು ನಿಂತುಕೊಂಡಿದ್ದು ವಿಚಾರಿಸಲು ಲಾರಿ ಚಾಲಕ ದಾವಲಜಿ ತಂದೆ ಬಾಷುಮಿಯಾ ಮತ್ತು ಲಾರಿ ಮಾಲೀಕ ಮೌಲಾಲಿ ತಂದೆ ಚಂದಾಸಾಬ ಸಾ; ಇಬ್ಬರು ನಾಯ್ಕಲ್ ರವರು ತಿಳಿಸಿದ್ದೆನೆಂದರೆ, ವಡಗೇರಾ ತಾಲೂಕಿನ ಮಾಲಹಳ್ಳಿ ಗ್ರಾಮದ ಸಾಬಣ್ಣ ಹೊಸ್ಮನಿ ಇವರು ತನ್ನ ಮಗಳ ಮದುವೆಯು ಕಲಬುರಗಿಯಲ್ಲಿದ್ದು ಆತನ ಮಗಳ ಮದುವೆಗೆ ಹೋರಟಿದ್ದೆವೆ ಅಂತಾ ತಿಳಿಸಿದರು. ನಂತರ ಲಾರಿಯಲ್ಲಿದ್ದ ಜನರನ್ನು ಕೆಳಗಡೆ ಇಳಿಸಿ ಬೇರೆ ಬೇರೆ ವಾಹನಗಳಲ್ಲಿ ಕಳಿಸಿಕೊಟ್ಟೆವು. ನಂತರ ಲಾರಿಯನ್ನು ನಾವು ಯಾದಗಿರಿ ಗ್ರಾಮೀಣ ಪೊಲೀಸ ಠಾಣೆಯ ಆವರಣದಲ್ಲಿ ನಿಲ್ಲಿಸಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಿರುತ್ತೇವೆ. ಕಾರಣ ಆರೋಪಿತರು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಆರೋಪಿತರು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ಲಾರಿಯಲ್ಲಿ ಗುಂಪು ಗುಂಪಾಗಿ ತುಂಬಿಕೊಂಡು ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಚಚರ್ಿಸಿದ್ದು ಈ ಬಗ್ಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರಿಂದ ಇಂದು ದಿನಾಂಕ; 20/04/2021 ರಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.48/2021 ಕಲಂ.269, 270 ಐಪಿಸಿ ಮತ್ತು ಕಲಂ.05 ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 50/2021 ಕಲಂ 143, 147, 148, 323, 323, 341, 109 504, 506,ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 20-04-2021 ರಂದು 8-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಭೀಮರಾಯ ತಂದೆ ಆಶಪ್ಪಾ ಕೊಟ್ರಕಿ ವಯಾ:70 ಜಾ:ಕಬ್ಬಲಿಗೇರ ಉ:ಒಕ್ಕಲುತನ ಸಾ: ಕಟಗಿ ಶಹಾಪೂರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧೀ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 19-04-2021 ರಂದು ಬೆಳಗ್ಗೆ ನಾನು ಎಂದಿನಂತೆ ನಮ್ಮ ಹೋಲಕ್ಕೆ ಹೋಗಿ ಸಾಯಕಾಲದವರೆಗೆ ನಮ್ಮ ಹೋಲದಲ್ಲಿದ್ದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಮ್ಮ ಹೋಲದಿಂದ ಮನೆಯ ಕಡೆಗೆ ಹೊರಟು ರಾತ್ರಿ 8 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಮರೆಮ್ಮಾ ದೇವಿ ಗುಡಿ ಮುಂದುಗಡೆಯಿಂದ ನಮ್ಮ ಮನೆಯ ಕಡೆಗೆ ಬರುತ್ತಿದ್ದೆನು. ಅದೇ ವೇಳೆಗೆ ನನ್ನ ತಮ್ಮನ ಹೋಲ ಸೇಲ್ ಅಗ್ರಿಮೇಂಟ್ ಮಾಡಿಸಿಕೊಂಡ 1) ಚಂದ್ರಶೇಖರರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ್ ಪಾಟೀಲ್ ಇತನ ಸಹೋದರರಾದ 2) ಮಹಿಪಾಲರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ್ ಪಾಟೀಲ್ 3) ಬೇಬಮ್ಮಾ ಗಂಡ ಮಹಿಪಾಲರೆಡ್ಡಿ ಪೋಲಿಸ್ ಪಾಟೀಲ್ ಹಾಗೂ 4) ಮರೆಪ್ಪಾ ತಂದೆ ಬಸಪ್ಪಾ ನಾಟೇಕಾರ ಇವರೆಲ್ಲರೂ ಬಂದವರೇ ನನಗೆ ಎಲೇ ಭೊಸಡಿ ಮಗನೇ ತಡಿ ಊರಲ್ಲಿ ನಿನಗೆ ಸೊಕ್ಕು ಬಾಳ ಬಂದಿದೆ ಅಂತಾ ಬೈಯ್ಯುತ್ತಾ ನನಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ಇವರಲ್ಲಿ ಮಹಿಪಾಲರೆಡ್ಡಿ ಹಾಗೂ ಚಂದ್ರಶೇಖರರೆಡ್ಡಿ ಇವರಿಬ್ಬರೂ ನನಗೆ ಎಲೆ ಸೂಳೇ ಮಗನೇ ನಿನ್ನ ತಮ್ಮನ ಹೋಲ ನಾವು ಪುಕ್ಕಟೆ ಖರೀಧೀ ಮಾಡಿಲ್ಲಾ ಅದಕ್ಕೆ ತಕ್ಕಂತೆ ಹಣ ಕೊಟ್ಟಿದ್ದೇವೆ ನಮಗೆ ಹೋಲ ಮಾರಾಟ ಮಾಡಬೇಡ ಅನ್ನುವುದಕ್ಕೆ ನಿನಗೆ ಎಷ್ಟು ಸೊಕ್ಕು ಬಂದಿದೆ ರಂಡಿ ಮಗನೇ ಅಂತಾ ಅಂದವನೇ ಮಹಿಪಾಲರೆಡ್ಡಿ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಎರಡು ಸಲು ಹೊಡೆದು ರಕ್ತಗಾಯ ಮಾಡಿದನು, ಚಂದ್ರಶೇಖರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ್ ಪಾಟೀಲ್, ಬೇಬಮ್ಮಾ ಮತ್ತು ಮರೆಪ್ಪಾ ಈ ಮೂರು ಜನರು ನನಗೆ ಕೈಮುಷ್ಟಿ ಮಾಡಿ ಹೊಟ್ಟೆಗೆ ಬೆನ್ನಿಗೆ ಹೊಡೆದರು. ಆಗ ನಾನು ನೆಲಕ್ಕೆ ಬಿದ್ದು ಸತ್ತೆನೆಪ್ಪಾ ಅಂತಾ ಒದರಾಡುತ್ತಿದ್ದಾಗ ಈ 4 ಜನರು ನನಗೆ ತಮ್ಮ ಮನಸ್ಸಿಗೆ ಬಂದ ಹಾಗೇ ಕಾಲಿನಿಂದ ಒದ್ದರು. ಈ ಸಮಯದಲ್ಲಿ ನನ್ನ ಬಲಕಪಾಳಕ್ಕೆ ಮೂಕ ಪೆಟ್ಟಾಯಿತು. ಆಗ ಅಲ್ಲಿಯೇ ಇದ್ದ ನಮ್ಮ ಅಣ್ಣತಮಕಿಯವರಾದ ಬೀಮರಾಯ ತಂದೆ ಬಸಪ್ಪಾ ಕೋಟ್ರಕಿ, ಬಸಪ್ಪಾ ತಂದೆ ಭೀಮಣ್ಣಾ ಕೊಟ್ರಕಿ ಹಾಗೂಶರಣಗೌಡ ತಂದೆ ಬಸವರಾಜಪ್ಪಾ ಪೋಲಿಸ್ ಪಾಟೀಲ್ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಈ ಘಟನೆಯು ಮಹಿಪಾಲರೆಡ್ಡಿ ಇತನ ತಮ್ಮನಾದ ಸತೀಶಗೌಡ ಇತನ ಕುಮ್ಮಕ್ಕಿನಿಂದ ಜರುಗಿರುತ್ತದೆ. ಘಟನೆಯ ನಂತರ ಗಾಯಹೊಂದಿದ ನಾನು ನಿನ್ನೆ ರಾತ್ರಿ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರಕ್ಕೆ ಸೇರಿಕೆಯಾಗಿದ್ದು ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಆದ್ದರಿಂದ ಮೇಲ್ಕಂಡ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2021 ಕಲಂ 143, 147 148, 323, 324, 341, 504, 506, 109 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಗುರಮಿಠಕಲ್ ಪೊಲೀಸ್ ಠಾಣೆ :- 59/2021 ಕಲಂ 379 ಐಪಿಸಿ : ಇಂದು ದಿನಾಂಕ 20.04.2021 ರಂದು ಬೆಳಿಗ್ಗೆ 8:15 ಗಂಟೆಗೆ ಶ್ರೀಮತಿ ಗಂಗಮ್ಮ ಪಿ.ಎಸ್.ಐ (ಅ.ವಿ) ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಹಾಜರುಪಡಿಸಿ ಪರಿಶೀಲಿಸುವಾಗ ಓಡಿ ಹೋದ ಟ್ರ್ಯಾಕ್ಟರ ಚಾಲಕನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಅದರ ಸಾರಾಂಶವೆನೆಂದರೆ ನಾನು ಶ್ರೀಮತಿ ಗಂಗಮ್ಮ ಪಿ.ಎಸ್.ಐ (ಅ.ವಿ) ಗುರುಮಠಕಲ್ ಪೊಲೀಸ್ ಠಾಣೆ ಆದ ನಾನು ಈ ಮೂಲಕ ತಮಗೆ ತಿಳಿಯಪಡಿಸುವುದೆನೇಂದರೆ, ಇಂದು ದಿನಾಂಕ 20.04.2021 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ವಾಕಿಂಗ್ ಹೋಗುವಾಗ ಬೋರಬಂಡಾ ಕಡೆಯಿಂದ ಮರಳು ತುಂಬಿದ ಟ್ರ್ಯಾಕ್ಟರ ಅಕ್ರಮವಾಗಿ ಗುರುಮಠಕಲ್ಗೆ ಮರಳು ಮಾರಾಟಕ್ಕೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂತು. ಬೆಳಿಗ್ಗೆ 5:30 ಗಂಟೆ ಸುಮಾರಿಗೆ ಗುರುಮಠಕಲ್ ಬಸ್ ಡಿಪೋ ಮುಂದೆ ಬೋರಬಂಡಾ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿರುವುದು ಕಂಡು ನಾನು ಕೈ ಮಾಡಿ ನಿಲ್ಲಿಸಿದಾಗ ಅದರ ಚಾಲಕ ಟ್ರ್ಯಾಕ್ಟರ ಬಿಟ್ಟು ಓಡಿ ಹೋದ. ನಂತರ ನಾನು ಆ ಟ್ರ್ಯಾಕ್ಟರ ನೋಡಿದಾಗ ಚಸ್ಸಿ ನಂಬರ ಒಃಓಉಂಂಎ1ಂಐಓಎ00930 , ಇಂಜಿನ ನಂಬರ ಓಐಎ5ಓಆಇ0036 ಹಾಗೂ ಟ್ರ್ಯಾಲಿ ನಂಬರ ಅಊ ಓಔ- 54/91 ಆಗಿರುತ್ತದೆ. ಆ ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು ಇತ್ತು. ಟ್ರ್ಯಾಕ್ಟರನ ಅ.ಕಿ.-3 ಲಕ್ಷ ರೂಪಾಯಿ. ಮತ್ತು ಮರಳಿನ ಅ.ಕಿ-2500/- ರೂ ಇರುತ್ತದೆ. ಈ ಟ್ರ್ಯಾಕ್ಟರನಲ್ಲಿ ಮರಳು ಸಾಗಿಸುತ್ತಿದ್ದವನು ಅಕ್ರಮವಾಗಿ ಸರಕಾರದ ಯಾವುದೇ ಅನುಮತಿ ಇಲ್ಲದೇ ಕಳ್ಳತನದಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು ಇರುತ್ತದೆ. ಆದ್ದರಿಂದ ನಾನು ಆ ಟ್ರ್ಯಾಕ್ಟರನ್ನು ಪರಿಶೀಲಿಸುತ್ತಿರುವಾಗ ತನ್ನ ಮರಳ ತುಂಬಿದ ಟ್ರ್ಯಾಕ್ಟರನ್ನು ಜಾಗದಲ್ಲಿ ಇಟ್ಟು ಓಡಿ ಹೋದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈ ಮರಳು ತುಂಬಿದ ಟ್ರ್ಯಾಕ್ಟರ ತಂದು ನಿಮ್ಮ ಮುಂದೆ ಒಪ್ಪಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತೆನೆ ಅಂತಾ ನೀಡಿದ ಲಿಖಿದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 59/2021 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ :- 60/2021 ಕಲಂ 295(ಎ) ಐಪಿಸಿ : ಇಂದು ದಿನಾಂಕ 20.04.2021 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರನಾದ ಶ್ರೀ ಮುರುಳಿ ತಂದೆ ಗುಂಡಪ್ಪ ಕೊಟಗಿರಿ ವ|| 24 ವರ್ಷ ಜಾ||ಹೊಲೆಯ ಉ||ವಿದ್ಯಾಥರ್ಿ ಸಾ||ಗಾಜರಕೊಟ್ ತಾ||ಗುರುಮಠಕಲ್ ಜಿ||ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂದಿಸಿದಂತೆ ನಾನು ಅಂದರೆ ಶ್ರೀ ಮುರುಳಿ ತಂದೆ ಗುಂಡಪ್ಪ ಕೊಟಗಿರಿ ಮುಕ್ಕಾಂ : ಪೊಸ್ಟ: ಗಾಜರಕೊಟ್ ಆಗಿದ್ದು ತಾ||ಗುರುಮಠಕಲ್ ಜಿ||ಯಾದಗಿರಿ ಆಗಿದ್ದು ಇಂದು ದಿನಾಂಕ 20.04.2021 ರಂದು ಸುಮಾರು ಮಧ್ಯಾಹ್ನ 3:00 ಗಂಟೆಗೆ ಪರಮ ಪೂಜ್ಯ ಡಾ.ಬಿ.ಆರ್ ಅಂಬೆಡ್ಕರ ರವರ ಮಹಾ ನಾಯಕ ಎಂಬ ಭಾವಚಿತ್ರವುಳ್ಳ ಬ್ಯಾನರನ್ನು ಶ್ರೀ ಅಂಬಿಗರ ಚೌಡಯ್ಯನವರ ಮುಂದೆ ಖಾಲಿ ಜಾಗದಲ್ಲಿ (ಸರಕಾರಿ) ಜಾಗದಲ್ಲಿ ಮಹಾ ನಾಯಕ ಡಾ.ಬಿ.ಆರ್ ಅಂಬೆಡ್ಕರ ರವರ ಬ್ಯಾನರ ಹಾಕಿ ಅದರ ಕೆಳಗಡೆ ಡಾ.ಬಿ.ಆರ್ ಅಂಬೆಡ್ಕರ ರವರ ಗ್ಲಾಸಿನ ಭಾವಚಿತ್ರ ಫೋಟೊ ಇಟ್ಟು ಊರಿನ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪೂಜೆ ಮಾಡಿ ಯತ ಪ್ರಕಾರ ಎಲ್ಲಾರೂ ಕೂಡಕೊಂಡು ಮೆರವಣಿಗೆ ಹೋಗಿರುವ ಸಂದರ್ಭದಲ್ಲಿ ಸಂಜೆ 4:00 ಗಂಟೆಯಿಂದ ಸಂಜೆ 5:00 ಗಂಟೆಯ ಒಳಗೆ ಯಾರೋ ವ್ಯಕ್ತಿಗಳು ಸೇರಿ ಡಾ.ಬಿ.ಆರ್. ಅಂಬೆಡ್ಕರ ಭಾವಚಿತ್ರಕ್ಕೆ ಕಲ್ಲಿನಿಂದ ಹೊಡೆದು ಗ್ಲಾಸ ಪುಡಿ ಮಾಡಿ ವಿಶ್ವ ರತ್ನ ಬಾಬಾ ಸಾಹೇಬರಿಗೆ ಅವಮಾನ ಮಾಡಿದ್ದಾರೆ.ಅಪರಾಧ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂದಿಸಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಅಂತಾ ನೀಡಿದ ಲಿಖಿತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 60/2021 ಕಲಂ: 295(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆೆ:- 63/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 20-04-2021 ರಂದು ಮದ್ಯಾಹ್ನ 01-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಹರಿಜನವಾಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 640=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.63/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ ಠಾಣೆ:- 64/2021, ಕಲಂ. 147, 148, 323, 324, 420, 504, 506 ಸಂಗಡ 149 ಐ ಪಿ ಸಿ : ಇಂದು ದಿನಾಂಕ. 20.04.2021 ರಂದು ಸಾಯಂಕಾಲ 6.00 ಗಂಟೆಗೆ ಠಾಣಾ ಸಿಬ್ಬಂದಿ ಬಂದಪ್ಪ ಪಿಸಿ-383 ಇವರು ಮಾನ್ಯ ಸಿವಿಲ್ ಜಡ್ಜ ನ್ಯಾಯಾಲಯ ಯಾದಗಿರಿಯಿಂದ ಒಂದು ಗಣಕೀಕೃತ ದೂರು ಅಜರ್ಿ ಸ್ವೀಕರಿಸಿಕೊಂಡು ಬಂದು ಠಾಣೆಗೆ ತಂದು ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:25-01-2019 ರಂದು ಆರೋಪಿತರು ಕಡೇಚೂರ ಗ್ರಾಮಕ್ಕೆ ಬಂದು ಫಿಯರ್ಾದಿಗೆ ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದು ಬೈಹೆನ್ ಚೋದ್ ಮೇರೆಕೋ ಕ್ಯೂ ಬಾಡಾ ನಹಿ ದೇರಾಹಾ ಅಂತಾ ಶಹಾನ ತಬ್ಸುಮ್ಮ ಕೈಯಿಂದ ಹೊಡೆದು ಅವಾಚ್ಚ ಶಬ್ದಗಳಿಂದ ಬೈದದಿರುತ್ತಾರೆ. ಮತ್ತು ಮಹೆಮೂದ್ ಅಹ್ಮದ್ ಚಿನಾಳಿಕೆ,ರಾಂಡಿಕೆ,ಬೇಟಾ ಕೇದ್ ಕೋ ಚೀದ್ ದಾಳೆದಿಂಗಿ ಅಂತಾ ಬೈದು ಕಾಲಿನಿಂದ ತೊಡೆಗೆ ಒದ್ದಿರುತ್ತಾನೆ. ಮತ್ತು ಅಲ್ಲಿ ಬಿದ್ದಿದ್ದ ಕಬ್ಬಿಣದ ರಾಡು ತೆಗೆದುಕೊಂಡು ಫಿಯರ್ಾದಿ ತೆಲೆಗೆ ಹೊಡೆಯುತ್ತಿದ್ದಾಗ ಫಿಯರ್ಾದಿ ಕೈ ಅಡ್ಡ ತಂದಿದ್ದ ಕಾರಣ ಕೈಗೆ ಬಿದ್ದು ಗುಪ್ತ ಗಾಯವಾಗಿರುತ್ತದೆ. ಮತ್ತು ತುಮ್ಮ ಹೈದ್ರಾಬಾದ್ ಕೋ ಬಾ ಮಗನೆ ನಿನ್ನ ಜೀವ ಸಹಿತ ಬೀಡುವುದಿಲ್ಲ ನೀನು ಹೇಗೆ ಬಾಡಿಗೆ ತೆಗೆದುಕೊಳ್ಳುತ್ತಿಯಾ ನಾವು ನೋಡಿಕೊಳ್ಳಿತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಇನ್ನುಳಿದ ಗೌಸ್ ಅಹ್ಮದ್, ಜಾವಿದ್ ಅಹ್ಮದ್, ಖಾಲಿದ್ ಅಹ್ಮದ್ ಇವರುಗಳು ಫಿಯರ್ಾದಿ ಕೈ ಹಿಡಿದು ಜಗ್ಗಾಡಿ, ಹೇ ಬೇ ತೇರಾಕೋ ಲಂಗಾ ಕರಕೇ ಹೈದ್ರಾಬಾದಿ ಗಲ್ಲಿ ಗಲ್ಲಿ ಪಿರಾಪಿರಾಕೆ ಮಾರುಂಗಾ ಹೈದ್ರಾಬಾದನಲ್ಲಿ ಜಿಂದಗಿ ಕರೇಂಗೆ ಸಾಲೆ ಅಂತಾ ಅವಾಚ್ಚಶಬ್ದಗಳಿಂದ ಬೈದು, ಸದರಿಯವರು ಫಿಯರ್ಾದಿಗೆ ಮೋಸ ಮಾಡಿ 04 ವರ್ಷದಿಂದ ಮನೆ ಬಾಡಿಗೆ ತೆಗೆದುಕೊಳ್ಳುತ್ತಿದ್ದು ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುತ್ತೇನೆ. ನನ್ನ ಮೇಲೆ ಹಲ್ಲೆ ಮತ್ತು ಮೋಸ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯ ಘನ ನ್ಯಾಯಾಲಯದಲ್ಲಿ ವಿನಂತಿ ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

ಶಹಾಪೂರ ಪೊಲೀಸ ಠಾಣೆೆ:- 87/2021 ಕಲಂ 279, 338 ಐ.ಪಿ.ಸಿ ಸಂ 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 20/04/2021 ರಂದು ಸಾಯಂಕಾಲ 16-00 ಗಂಟೆಗೆ ಫಿಯರ್ಾದಿ ಜಾವೀದ್ ತಂದೆ ಲಾಳೇಸಾ ಖುರಾನ್ ಬುಡ್ಡಿ, ವಯ 20 ವರ್ಷ, ಜಾತಿ ಮುಸ್ಲಿಂ ಉಃ ವಿದ್ಯಾಥರ್ಿ, (ಪ್ಯಾರಾ ಮೆಡಿಕಲ್ ದರ್ಶನಾಪೂರ ಕಾಲೇಜ್ ಶಹಾಪೂರ) ಸಾಃ ಆಸರ ಮೋಹಲ್ಲಾ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 19/04/2021 ರಂದು, ಮುಂಜಾನೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ಎಜಾಸ್ ಅಹ್ಮದ ತಂದೆ ಅಬ್ದುಲ್ ರಹೆಮಾನ್, ಇಬ್ಬರು ಕೂಡಿ ಬೆಳಗಿನ ಜಾವ 06-00 ಗಂಟೆಗೆ ಶಹಾಪೂರ- ವಿಭೂತಿಹಳ್ಳಿ ರೋಡಿನ ಮೇಲೆ ಚಾಂದ ಪೆಟ್ರೋಪ್ ಪಂಪ್ ಕಡೆಗೆ ವಾಕಿಂಗ್ಗೆ ಹೋಗಿ, ಅಲ್ಲಿ ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡಿ, ನಂತರ ನಡೆದುಕೊಂಡು ಮರಳಿ ಮನೆಯ ಕಡೆಗೆ ಹೋಗುತಿದ್ದೆವು, ಇಂಡಸ್ಟ್ರೀಯಲ್ ಏರಿಯಾದ ಅಮಾನ ಧಾಬಾದ ಹತ್ತಿರ ಮುಂಜಾನೆ 07-30 ಗಂಟೆಯ ಸುಮಾರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ ಎದರುಗಡೆಯಿಂದ ಅಂದರೆ ಶಹಾಪೂರದ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು, ತನ್ನ ಮೋಟರ್ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಪಾದಚಾರಿಯ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದರಿಂದ, ಸದರಿ ವ್ಯಕ್ತಿ ಕೆಳಗಡೆ ಬಿದ್ದನು, ಆಗ ನಾವಿಬ್ಬರೂ ಅವರ ಹತ್ತಿರ ಹೋಗುತಿದ್ದಾಗ ಮೋಟರ್ ಸೈಕಲ್ ಸವಾರನು ಸ್ವಲ್ಪ ನಿಂತಂತೆ ಮಾಡಿ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋದನು. ಸದರಿ ಅಪಘಾತ ಪಡಿಸಿದ ಮೋಟರ್ ಸೈಕಲ್ ನಂಬರ ನೋಡಿದ್ದು, ಕೆಎ-33-ಎಲ್-9445 ಇರುತ್ತದೆ, ಅಪಘಾತ ಪಡಿಸಿದ ಚಾಲಕನನ್ನು ಪುನಃ ನೋಡಿದಲ್ಲಿ ಗುರುತಿಸಿಸುತ್ತೇನೆ, ಅಪಘಾತದಲ್ಲಿ ಗಾಯಹೊಂದಿ ಬಿದ್ದ ವ್ಯಕ್ತಿಯನ್ನು ನೋಡಲಾಗಿ ಅವರು ನನ್ನ ಖಾಸಾ ಚಿಕ್ಕಪ್ಪ, ಮಹ್ಮದ ರಫೀಕ್ ತಂದೆ ಅಬ್ದುಲ್ ಸತ್ತಾರ ಖುರಾನ್ ಬುಡ್ಡಿ ವಯ 34 ವರ್ಷ ಇದ್ದು, ಸದರಿಯವರಿಗೆ ಬಲಗೈ ಮುಂಗೈ ಎಲಬು ಮುರಿದು ಭಾರೀ ಗುಪ್ತಗಾಯವಾಗಿರುತ್ತದೆ. ನಂತರ ನಾನು ಮತ್ತು ಏಜಾಸ್ ಅಹ್ಮದ ಇಬ್ಬರೂ ಕೂಡಿ ಶಹಾಪೂರ ಕಡೆಗೆ ಬರುತಿದ್ದ ಒಂದು ಆಟೋದಲ್ಲಿ ಗಾಯಗೊಂಡಿದ್ದ ನಮ್ಮ ಚಿಕ್ಕಪ್ಪ ಮಹ್ಮದ ರಫೀಕ್ ಇವರನ್ನು ಕೂಡಿಸಿಕೊಂಡು, ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ. ನಮ್ಮ ಅಜ್ಜಿ ಜಮೀಲಾ ಬೇಗಂ ಗಂಡ ಅಬ್ದುಲ್ ಸತ್ತರ ಖುರಾನ್ ಬುಡ್ಡಿ ಇವರಿಗೆ ಫೋನ್ ಮಾಡಿ ಅಪಘಾತವಾದ ವಿಷಯ ತಿಳಿಸಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆಯಿಸಿಕೊಂಡೆನು. ವೈದ್ಯಾಧಿಕಾರಿಗಳು ನಮ್ಮ ಚಿಕ್ಕಪ್ಪನಿಗೆ ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಮುಂದಕ್ಕೆ ಹೋಗಲು ತಿಳಿಸಿದ ಮೇರೆಗೆ, ನಮ್ಮ ಚಿಕ್ಕಪ್ಪನಿಗೆ 108 ವಾಹನದಲ್ಲಿ ಹಾಕಿ ನಮ್ಮ ಅಜ್ಜಿಯ ಜೊತೆಯಲ್ಲಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ ನನ್ನ ಅಜ್ಜಿಗೆ ವಿಚಾರಿಸಿದಾಗ ಉಪಚಾರ ಕುರಿತು ಮಹ್ಮದ ರಫೀಕ್ ಈತನನ್ನು ಕಲಬುರಗಿಯ ಮನೂರ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತದೆ ಅಂತ ತಿಳಿಸಿರುತ್ತಾರೆ. ಅಪಘಾತವಾದ ಬಗ್ಗೆ ಕುಟುಂಬದವರ ಜೊತೆ ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ.ಕಾರಣ ನಮ್ಮ ಚಿಕ್ಕಪ್ಪ ಮಹ್ಮದ ರಫೀಕ್ ಇವರಿಗೆ ಅಪಘಾತ ಮಾಡಿ ಓಡಿ ಹೋದ ಮೋಟರ್ ಸೈಕಲ್ ನಂಬರ ಕೆಎ-33-ಎಲ್-9445 ರ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 87/2021 ಕಲಂ 279, 338 ಐ.ಪಿ.ಸಿ ಮತ್ತು ಸಂಗಡ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ ಠಾಣೆ :- 88/2021. ಕಲಂ. 279.338.ಐ.ಪಿ.ಸಿ. : ಇಂದು ದಿನಾಂಕ 20-04-2021 ರಂದು 4:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀನಿವಾಸ ತಂದೆ ಹಣಮಂತ ದೊಡ್ಲಾ ವಯ:20 ವರ್ಷ ಜಾ: ಎಸ್.ಸಿ. ಉ: ಕೂಲಿ ಕೆಲಸ ಸಾ ಕಟ್ಟಲಗೇರಿ ಗುರುಮಿಠಕಲ್ ಹಾಲಿ ವಸತಿ: ದೇವಿನಗರ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನಮ್ಮ ತಂದೆಯವರಾದ ಶ್ರೀ ಹಣಮಂತ ತಂದೆ ಬಸಪ್ಪ ದೊಡ್ಲಾ ವಯ: 51 ವರ್ಷ ಇವರು ಹಾಪುರದ ನಗರ ಸಭೆಯಲ್ಲಿ ಪೌರಕಾಮರ್ಿಕರ ಸುರವೈಸರ ಕೆಲಸ ಮಾಡುತ್ತಾರೆ. ಅದಕ್ಕಾಗಿ ಶಹಾಪುರದ ದೇವಿನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಾಗಿದ್ದೇವೆ. ಇಂದು ದಿನಾಂಕ: 20-04-2021 ರಂದು ಮುಜಾನೆ ತನ್ನ ಟಿ.ವಿ.ಎಸ್. ಎಕ್ಷಲ್ ಮೊಟಾರ ಸೈಕಲ್ ನಂಬರ ಕೆ.ಎ36-ಎಲ್-2739 ನೇದ್ದರ ಮೇಲೆ ಕೆಲಸಕ್ಕೆ ಹೋಗಿದ್ದರು. ಸಮಯ 11:30 ಎ.ಎಮ್. ಸುಮಾರಿಗೆ ನಮ್ಮ ತಂದೆಯವರು ಕೆಲಸ ಮಾಡುವ ಕಛೇರಿಯ ವಾಹನ ಚಾಲಕರಾದ ಶ್ರೀ ಇಕ್ಬಾಲ ತಂದೆ ಶಮರ್ುದ್ದೀನ ಪಠಾಣ ರವರು ನನಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಿಮ್ಮ ತಂದೆ ಹಣಮಂತ ರವರಿಗೆ ಸುರಪುರ ರೋಡಿನ ರಾಖಂಗೇರಾ ಸಮೀಪ ಕೊಬಾಟಾ ಟ್ರ್ಯಾಕ್ಟರ ಶೋರೂಮ್ ನ ಮುಂದೆ ಕಾರ ಡಿಕ್ಕಿಯಾಗಿ ಭಾರೀ ಗಾಯವಾಗಿದೆ ಅವರನ್ನು ನಾನು ಮತ್ತು ಹುಸೇನಭಾಷಾ ತಂದೆ ಮೌಲಾಲಿ ಸಾ: ಚಾಮುಂಡೇಶ್ವರಿ ನಗರ ಶಹಾಪುರ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದೇವೆ ನೀವು ಅಲ್ಲಿಗೆ ಬನ್ನಿ ಅಂತಾ ಹೇಳಿದ್ದು ಆಗ ನಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಂದೆ ಇದ್ದು ಅವರಿಗೆ ಎಡಗಾಲು ಮುಂಗಾಲಿಗೆ ಭಾರೀ ರಕ್ತಗಾಯವಾಗಿ ಮುರಿದಿದೆ. ಬಲಗಾಲ ಮೊಳಕಾಲಿಗೆ ಪೆಟ್ಟಾಗಿದೆ. ತಲೆಗೆ ಪೆಟ್ಟಾಗಿದೆ. ಎಡಗೈಗೆ ತರಚಿದ ಗಾಯವಾಗಿದೆ. ನಾನು ನಮ್ಮ ತಂದೆಗೆ ಹೇಗಾಯಿತು ಅಂತಾ ವಿಚಾರಿಸಲಾಗಿ ತಾವು ಕರ್ತವ್ಯಕ್ಕೆ ಕುರಿತು ರಾಖಂಗೇರಾ ಏರಿಯಾದ ಕಡೆಗೆ ಟಿ.ವಿ.ಎಸ್. ಮೊಟಾರ ಸೈಕಲ್ ಮೇಲೆ ಹೊರಟಾಗ ಎದುರಿನಿಂದ ಒಂದು ಕಾರ ನಂ ಕೆ.ಎ.53-ಸಿ-9221 ನೇದ್ದರ ಚಾಲಕನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದರಿಂದ ನಾನು ವಾಹನ ಸಮೇತಾ ಕೆಳಗೆ ಬಿದ್ದು ಗಾಯವಾಗಿವೆ ನನಗೆ ಪಠಾಣ ಮತ್ತು ಹುಸೇನಭಾಷಾ ರವರು ಖಾಸಗಿ ವಾಹನದಲ್ಲಿ ಸೇರಿಸಿದ್ದಾರೆ ಎಂದು ಹೇಳಿದರು. ಕಾರ ಚಾಲಕನ ಬಗ್ಗೆ ಕೇಳಲಾಗಿ ಶರಣಬಸವ ತಂದೆ ಮುದಕಪ್ಪ ಭೋಜಾ ಸಾ: ನಾಗಡದಿನ್ನಿ ಜಿ: ರಾಯಚೂರ ಅಂತಾ ಗೊತ್ತಾಗಿದೆ. ನಮ್ಮ ತಂದೆಯವರಿಗೆ ಉಪಚಾರ ಕುರಿತು ಕಲಬುರಗಿಗೆ ನಮ್ಮ ಅಣ್ಣ ವೆಂಕಟೇಶ ನೊಂದಿಗೆೆ ಹೆಚ್ಚಿನ ಉಪಚಾರಕ್ಕಾಗಿ ಕಳುಹಿಸಿದ್ದು ಇದೆ. ಅಫಘಾತ ನಡೆದಾಗ ಸಮಯ 11:00 ಗಂಟೆಯಾಗಿತ್ತು ಎಂದು ಹೆಳಿದನು. ಆದ್ದರಿಂದ ಇಂದು ದಿನಾಂಕ: 20-04-2021 ರಂದು 11:00 ಎ.ಎಮ್.ಕ್ಕೆ ಸುರಪುರ ರಸ್ತೆಯ ಕೊಬಾಟಾ ಟ್ರ್ಯಾಕ್ಟರ ಶೋರೂಮ್ ಮುಂದುಗಡೆ ಹೊರಟಾಗ ಕಾರ ನಂ. ಕೆ.ಎ.53-ಸಿ-9221 ನೆದ್ದರ ಚಾಲಕ ಶರಣಬಸವ ಈತನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಮ್ಮ ತಂದೆಯು ಹೊರಟಿದ್ದ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿ ಭಾರಿ ಗಾಯ ಮಾಡಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.88/2021 ಕಲಂ 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ ಠಾಣೆ:- 37/2020 379 ಐಪಿಸಿ: ಇಂದು ದಿನಾಂಕ: 20/04/2021 ರಂದು 06.40 ಪಿಎಂ ಕ್ಕೆ ಶ್ರೀ. ಖಾಸಯ್ಯ ತಂದೆ ಬಸಯ್ಯ ಬಿರೆದಾರ ವಯಾ:30 ಉ: ಒಕ್ಕಲುತನ ಜಾ: ಕುರುಬರ ಸಾ: ಚಾಮನಾಳ ತಾ: ಶಹಾಪುರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಟೈಪ ಮಾಡಿಸಿದ ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾವು ಒಕ್ಕಲುತನದ ಜೋತೆಗೆ 15 ಕುರಿಗಳನ್ನು ಸಾಕಿರುತ್ತೇವೆ. ನಮ್ಮ ತಮ್ಮನಾದ ಶಿವಶಂಕರ ತಂದೆ ಬಸಯ್ಯ ಬಿರೆದಾರ ಈತನು ಕುರಿ ಕಾಯುತ್ತಾನೆ. ನಮ್ಮ ಕುರಿಗಳನ್ನು ಚಾಮನಾಳ ಗ್ರಾಮದ ಹೊರ ವಲಯದಲ್ಲಿ ಕಾಡಂಗೇರಾ ರೋಡಿಗೆ ಹೊಂದಿಕೊಂಡು ಇರುವ ದೊಡ್ಡಿಯಲ್ಲಿ ಪ್ರತಿ ದಿನ ನಮ್ಮ ಕುರಿಗಳನ್ನು ನಿಲ್ಲಿಸುತ್ತಿದ್ದೇವು.ಹೀಗಿದ್ದು ದಿನಾಂಕ:13/03/2021 ರಂದು ಕೂಡ ಎಂದಿನಂತೆ ನಮ್ಮ ತಮ್ಮನಾದ ಶಿವಶಂಕರ ಈತನು ಕುರಿಗಳನ್ನು ನಮ್ಮ ದೊಡ್ಡಿಯಲ್ಲಿ ನಿಲ್ಲಿಸಿ ರಾತ್ರಿ ಊಟ ಮಾಡಿ ಹೋಗಿ ಕುರಿ ದೊಡ್ಡಿಯಲ್ಲಿ ಮಲಗಿದ್ದನು. ನಂತರ ರಾತ್ರಿ ವೇಳೆಯಲ್ಲಿ ಅಂದರೆ ದಿನಾಂಕ: 14/03/2021 ರ ಬೆಳಗಿನ ಅಂದಾಜು 02.00 ಎಎಂ ಸುಮಾರಿಗೆ ನಮ್ಮ ತಮ್ಮನಾದ ಶಿವಶಂಕರ ಈತನು ನನಗೆ ಪೋನ ಮಾಡಿ ನಮ್ಮ ದೊಡ್ಡಿಯಲ್ಲಿನ ಕುರಿಗಳಲ್ಲಿ ನಾಲ್ಕು ಕುರಿಗಳನ್ನು ಯಾರೋ ಕಳ್ಳರು ಒಂದು ಕೆಂಪು ಬಣ್ಣದ ತವೇರಾದ ವಾಹನ ನಂ: ಕೆಎ-36-ಎಂ-2696 ನೇದ್ದರಲ್ಲಿ ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ತಿಳಿಸಿದನು, ನಾನು ಕೂಡಲೆ ಹೋಗಿ ನೋಡಿ ವಿಚಾರಿಸಿದಾಗ ನಮ್ಮ 15 ಕುರಿಗಳಲ್ಲಿ 2 ದೊಡ್ಡ ಕುರಿಗಳು ಅಂದಾಜು ಕಿಮ್ಮತ್ತು ಒಂದಕ್ಕೆ 11000/- ರೂ ಯಂತೆ 22000/- ರೂ ಸಾವಿರ ಮತ್ತು ಎರಡು ಸಣ್ಣ ಕುರಿಗಳು ಅಂದಾಜು ಕಿಮ್ಮತ್ತು ಒಂದಕ್ಕೆ 6000/- ರು ಯಂತೆ 12000/- ರೂ ಹೀಗೆ ಒಟ್ಟು 34000/- ರೂ ಬೆಲೆಯ 4 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಮ್ಮ ತಮ್ಮ ಶಿವಶಂಕರ ಈತನಿಗೆ ವಿಚಾರಿಸಿದಾಗ ತಾನು ರಾತ್ರಿ ಮಲಗಿದಾಗ ಸ್ವಲ್ಪ ಏನೋ ಸಪ್ಪಳ ಆದಂತೆ ಆದಾಗ ನಾನು ಎದ್ದು ನೋಡಲಾಗಿ ಯಾರೋ ಕಳ್ಳರು ನಮ್ಮ ಕುರಿ ದೊಡ್ಡಿಯ ಪತ್ರಾಸ್ ಬಾಗಲ ಸರಿಸಿ ನಮ್ಮ ಕುರಿಗಳನ್ನು ಕಳ್ಳತನ ಮಾಡಿಕೊಂಡು ಒಂದು ಕೆಂಪು ಕಲರ ತವೇರಾ ವಾಹನದಲ್ಲಿ ಹಾಕಿಕೊಂಡು ಗಾಡಿ ಚಾಲು ಮಾಡಿದರು. ಆಗ ನಾನು ಚೀರುತ್ತಾ ಏನು ಮಾಡುತ್ತಿದ್ದೀರಿ ಅಂತಾ ಅಂದಾಗ ಒಬ್ಬನು ವಾಹನದಿಂದ ಕೆಳಗೆ ಇಳಿದು ಕಲ್ಲು ತಗೆದುಕೊಂಡನು ನಾನು ಅಂಜಿ ನಮ್ಮ ಗೋಡೆ ಮರೆಯಾದನು ಅಷ್ಟರಲ್ಲಿ ನಾನು ಚಿರಾಡುವದನ್ನು ಕೇಳಿ ಅಲ್ಲೆ ಪಕ್ಕದ ಹೊಲದಲ್ಲಿ ಮಲಗಿದ್ದ ಸಿದ್ದು ತಂದೆ ಮಲ್ಲಿಕಾಜರ್ುನ ಕಂದಳ್ಳಿ ಮತ್ತು ಪರಶುರಾಮ ತಂದೆ ಶರಣಗೌಡ ಬಿರೆದಾರ ಇವರುಗಳು ಬ್ಯಾಟರಿ ಹಿಡಿದುಕೊಂಡು ಓಡಿ ಬಂದರು ಆಗ ಕುರಿಗಳನ್ನು ಕಳ್ಳತನ ಮಾಡಿದವರು ಅವಸರ ಅವಸರ ಆಗಿ ತಮ್ಮ ವಾಹನ ಚಾಲು ಮಾಡಿಕೊಂಡು ಹೋಗುತ್ತಿದ್ದಾಗ ಸಿದ್ದು ಈತನು ವಾಹನದ ನಂಬರ ನೋಡಿ ಅದರ ನಂ: ಕೆಎ-36-ಎಂ-2696 ನ ಕೆಂಪು ಬಣ್ಣದ ತವೇರ ವಾಹನ ಇರುವದನ್ನು ನೋಡಿ ನನಗೆ ತಿಳಿಸಿದನು. ಸದರಿ ವಾಹನದಲ್ಲಿ ಇಬ್ಬರು ಇರುವದನ್ನು ನೋಡಿರುತ್ತೇನೆ ಅಂತಾ ತಿಳಿಸಿದನು. ನಂತರ ನಾನು ನಮ್ಮ ತಮ್ಮ ಮತ್ತು ಸಿದ್ದು ಕಂದಳ್ಳಿ, ಮತ್ತು ಪರಶುರಾಮ ಬಿರೆದಾರ ಎಲ್ಲರೂ ಕೂಡಿ ತವೇರಾ ವಾಹನವನ್ನು ಚಂದಾಪೂರ ಕಡೆಗೆ ತಗೆದುಕೊಂಡು ಹೊಗಿದ್ದು ನಾವು ಇಲ್ಲಿಯವರೆಗೆ ಸದರಿ ವಾಹನ ಮತ್ತು ನಮ್ಮ ಕುರಿಗಳನ್ನು ಹುಡುಕಾಡಿ ಸಿಗದಿದ್ದ ಕಾರಣ ನಮ್ಮ ತಮ್ಮನ ಜೋತೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:20/04/2021 ರಂದು 06.40 ಪಿಎಂ ಕ್ಕೆ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ :- 38/2021 323, 324. 354, 504, 506 ಸಂಗಡ 34 ಐಪಿಸಿ:ದಿನಾಂಕ: 20/04/2021 ರಂದು 6-30 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಆಸಾ ಗಂಡ ದೇವಿಂದ್ರಪ್ಪ ಮೇಟಿ ಸಾ|| ಸೈದಾಪೂರ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ದಿನಾಂಕ: 18/04/2021 ರಂದು ಸಾಯಂಕಾಲ 7-30 ಪಿಎಮ್ ಸುಮಾರಿಗೆ ನಾನು ಸೈದಾಪೂರ ಗ್ರಾಮದ ನನ್ನ ಮನೆಯಲ್ಲಿ ಇರುವಾಗ ಆರೋಪಿ-1 ಶಿವಮಾನಪ್ಪ ತಂದೆ ಸಕ್ರೆಪ್ಪಾ ಪೂಜಾರಿ ಸಾ|| ಸೈದಾಪೂರ ಇತನು ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಸದರಿ ಆರೋಪಿ ತನ್ನ ಕೈಗಳಿಂದ ಕಪಾಳಕ್ಕೆ ಹೊಡೆದು ನನ್ನ ಕೂದಲು ಹಿಡಿದು ಎಳೆದಾಡಿದಲ್ಲದೇ ತನ್ನ ಕಾಲುಗಳಿಂದ ಹೊಟ್ಟೆಗೆ ಹಾಗೂ ಬೆನ್ನಿಗೆ ಒದ್ದಿದ್ದು ಇರುತ್ತದೆ. ಈತನ ಜೊತೆಗೆ ಆರೋಪಿ-2 ನಿಂಗಮ್ಮ ಗಂಡ ದೇವಿಂದ್ರಪ್ಪ ಈಕೆಯು ಬಂದವಳೇ ತನ್ನ ಕೈಗಳಿಂದ ಹಾಗೂ ಚಪ್ಪಲಿಯಿಂದ ನನ್ನ ತಲೆಗೆ ಹಾಗೂ ಹೊಟ್ಟೆಗೆ ಇಬ್ಬರೂ ಸೇರಿ ಒದ್ದಿದ್ದಾರೆ. ಆದ್ದರಿಂದ ಸದರಿ ಆರೋಪಿ ನಂ: 01 ಮತ್ತು 02 ರವರು ಸೇರಿಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಕೈಗಳಿಂದ ಹಾಗೂ ಚಪ್ಪಲಿಯಿಂದ ಹೊಡೆದಿದ್ದಲ್ಲದೇ ತಮ್ಮ ಕಾಲುಗಳಿಂದ ಒದ್ದಿದ್ದು ಅಲ್ಲದೇ ಆರೋಪಿ ನಂ: 1 ರವರು ಕೈಯಲ್ಲಿ ಚಾಕು ಹಿಡಿದು ನನ್ನ ಎಡಗೈಗೆ ತಿವಿದು ತೀವ್ರ ರಕ್ತಗಾಯ ಮಾಡಿದ್ದು ಇರುತ್ತದೆ. ಸದರಿ ಆರೋಪಿತರು ನನಗೆ ಜೀವ ಭಯ ಹಾಕಿದ್ದಲ್ಲದೇ ನನ್ನ ಮೇಲೆ ಹಲ್ಲೆ, ತೀವ್ರಗಾಯ ಪಡಿಸಿದಲ್ಲದೇ ಸದರಿ ಆರೋಪಿತ 1 ರವರು ನನ್ನ ಜಡೆ ಹಾಗೂ ನೈಟಿ ಎಳೆದಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಈ ಪಿರ್ಯಾದಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 20/04/2021 ರಂದು ಸಾಯಂಕಾಲ ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದೇನೆ. ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 38/2021 ಕಲಂ, 323, 324, 354, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ :- 21/2021 279, 337 338 ಐಪಿಸಿ & 187 ಐಎಂವಿ ಕಾಯ್ದೆ : ಇಂದು ದಿನಾಂಕ:20/04/2021 ರಂದು 16.30 ಗಂಟೆಗೆ ಹುಣಸಗಿ ಸರಕಾರಿ ಆಸ್ಪತ್ರೆಯಿಂದಾ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ, ಗಾಯಾಳು ಶಿವಶರಣಪ್ಪ ಈತನು ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದುದ್ದಕ್ಕೆ ಶಿವಶರಣಪ್ಪನೊಂದಿಗೆ ಇದ್ದ ಶಿವಲಿಂಗಪ್ಪ ತಂದೆ ರೇವಣಸಿದ್ದಪ್ಪ ಕುಂಬಾರ ವಯ:64 ವರ್ಷ ಜಾ:ಕುಂಬಾರ ಉ:ಒಕ್ಕಲತನ ಸಾ: ಹೆಬ್ಬಾಳ(ಬಿ) ಈತನಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆಯಲು ಹೇಳಿಕೆ ನೀಡಿದ್ದೇನೆಂದರೆ, ಇಂದು ದಿ:20/04/2021 ರಂದು ನಮ್ಮಣ್ಣನ ಮಗನಾದ ಶಿವಶರಣಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ. ಕೆಎ-33 ಆರ್ 515 ನೇದ್ದರ ಮೇಲೆ ತಾಳಿಕೋಟಿಯಿಂದಾ ಹುಣಸಗಿಗೆ ಬರುವಾಗ ಮದ್ಯಾಹ್ನ 3 ಗಂಟೆಯ ಸುಮಾರಿಗೆ ಕುಪ್ಪಿ ಕ್ರಾಸ್ ಸಮೀಪ ಕಲಮಡಿ ಹಳ್ಳದ ಪೂಲಿನ ಮೇಲೆ ಹಿಂದಿನಿಂದಾ ಆರೋಪಿತನು ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಶಿವಶರಣಪ್ಪ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಸ್ಥಳದಲ್ಲಿ ಕಾರ ಬಿಟ್ಟು ಓಡಿಹೋಗಿದ್ದು, ಅಪಘಾತದಲ್ಲಿ ಶಿವಶರಣಪ್ಪನಿಗೆ ತೆಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ ಮತ್ತು ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿ ಬೇವೋಷ್ ಆಗಿರುತ್ತಾನೆ. ಕಾರಣ ಕಾರ ಚಾಲಕ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿ ಹೇಳಿಕೆ ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:- 54/2021 ಕಲಂ: 143,147,341,323,324,504,506 ಸಂಗಡ 149 ಐಪಿಸಿ : ಇಂದು ದಿನಾಂಕ 20.04.2021 ರಂದು 4.45 ಪಿಎಮಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ನಿಂಗಮ್ಮ ಗಂಡ ಹಣಮಂತ್ರಾಯ ಗೋಸಿ ವಯಾ|| 55 ಜಾ|| ಕುರುಬರ ಉ|| ಕೂಲಿಕೆಲಸ ಸಾ|| ಗೋಡ್ರಿಹಾಳ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನಮ್ಮೂರಿನ ನಾರಾಯಣಪ್ಪ ರೈಟರ್ ಈತನ ಮಗಳಾದ ಶೃತಿ ಎಂಬುವವಳಿಗೆ ನಮ್ಮ ಮಗನಾದ ಬೀರಪ್ಪ ಈತನಿಗೆ ತೆಗೆದುಕೊಂಡು ಮದುವೆ ಮಾಡಿದ್ದು ಇರುತ್ತದೆ. ನಮ್ಮ ಸೊಸಿಯಾದ ಶೃತಿ ಇವಳು ನಮ್ಮೊಂದಿಗೆ ಸರಿಯಾಗಿ ಇರದೇ ವಿನಾಕಾರಣ ಗಲಾಟೆ ಮಾಡಿಕೊಂಡು ಇದ್ದಳು. ಹೀಗಿದ್ದು ಇಂದು ದಿನಾಂಕ: 20/04/2021 ರಂದು ಬೆಳಿಗ್ಗೆ 8 ಗಂಟಗೆ ನಾನು ಹಾಗು ನನ್ನ ಗಂಡ ಹಣಮಂತ್ರಾಯ ಗೊಸಿ ಇಬ್ಬರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗುವ ಕುರಿತು ಊರ ಮದ್ಯದಲ್ಲಿರುವ ಹಳ್ಳದ ಹತ್ತಿರ ಹಾದು ಹೋಗುತ್ತಿದ್ದಾಗ ನಮ್ಮೂರ 1] ಶಿವಕಾಂತ ತಂದೆ ಶಂಕ್ರೆಪ್ಪ ರೈಟರ್ 2] ಅರುಣಪ್ಪ ತಂದೆ ಶಿವಕಾಂತ ರೈಟರ್ 3] ಮಾಳಪ್ಪ ತಂದೆ ಕೇಶವನಾರಾಯಣ [ದಳಪತಿ] 4] ಮಲ್ಲಪ್ಪ ತಂದೆ ನಾರಾಯಣ 5] ಸೋಮಪ್ಪ ತಂದೆ ಬಸವರಾಜ 6] ಅಪ್ಪಣ್ಣ ತಂದೆ ಕೇಶನಾರಾಯಣ ಎಲ್ಲರೂ ಸಾ|| ಗೋಡ್ರಿಹಾಳ ಈ ಎಲ್ಲಾ ಜನರು ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನಮ್ಮಿಬ್ಬರಿಗೂ ತಡೆದು ನಿಲ್ಲಿಸಿ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ನನ್ನ ಗಂಡನು ಯಾಕೇ ಸುಮ್ಮನೇ ಹೊಡೆಯುತ್ತೀರಿ ಅಂತ ಅಂದಾಗ ಎಲ್ಲರೂ ಈ ಸೂಳೆ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ನಮ್ಮಿಬ್ಬರಿಗೂ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಶಿವಕಾಂತ ರೈಟರ್ ಈತನು ಅಲ್ಲಿಯೇ ಬಿದ್ದ ಕಲ್ಲಿನ್ನು ತೆಗೆದುಕೊಂಡು ನನ್ನ ಗಂಡ ಹಣಮಂತ್ರಾಯ ಗೋಸೇರ್ ಈತನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನಾವಿಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಕೂಡ್ಲಿಗೆಪ್ಪ ತಂದೆ ಮಲ್ಲಪ್ಪ ಸಾ|| ಬೋನಾಳ ಹಾಗು ಮಾಳಿಂಗರಾಯ ತಂದೆ ನಾಗಪ್ಪ ಗೋಡ್ರಿಹಾಳ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 54/2021 ಕಲಂ 143,147,341,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 21-04-2021 11:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080