ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21-05-2021

ಶಹಾಪೂರ ಪೊಲೀಸ್ ಠಾಣೆ :- 107/2021 ಕಲಂ 32,34 ಕೆ.ಇ. ಆಕ್ಟ ಮತ್ತು 188 ಐ.ಪಿ.ಸಿ. : ಇಂದು ದಿನಾಂಕ:20-05-2021 ರಂದು 11:15 ಎ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ (ಅ.ವಿ) ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ತಂದು ಹಾಜರು ಪಡಿಸಿದ್ದು ಸದರಿ ವರದಿಯ ಸಾರಾಂಶ ವೇನಂದರೆ, ಇಂದು ದಿನಾಂಕ:20-05-2021 ರಂದು 9:00 ಎ.ಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಬಾತ್ಮೀ ಬಂದಿದ್ದೇನೆಂದರೆ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಹಾಪೂರ ನಗರದ ಹಾಲಭಾವಿ ರೋಡ ಹತ್ತಿರ ಯಾರೋ ತನ್ನ ಪಾನ ಶಾಪ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಲಕ್ಕಪ್ಪ ಪಿಸಿ.163, ಬಸಯ್ಯ ಪಿ.ಸಿ.242 ರವರಿಗೆ ಬಾತ್ಮೀ ವಿಷಯ ತಿಳಿಸಿ ಲಕ್ಕಪ್ಪ ಪಿ.ಸಿ. 163 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1) ಶ್ರೀ ಅಪ್ಪಣ್ಣ ತಂದೆ ಬಾಬು ನಾಟೇಕಾರ ವಯ: 21 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ಬೆನಕನಹಳ್ಳಿ ತಾ: ಶಹಾಪುರ 2) ಶ್ರೀ ಭೀಮರಾಯ ತಂದೆ ಮಲ್ಲಪ್ಪ ಹಡಿಗಿಮದ್ರಿ ವಯ: 38 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ:ಗುತ್ತಿಪೇಠ ಶಹಾಪೂರ ಇವರನ್ನು 9.15 ಎ.ಎಂಕ್ಕೆ ಕರೆದುಕೊಂಡು ಬಂದು ಹಾಜರಪಡಿಸಿದ್ದು, ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ಪಂಚರಾಗಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿ ಕೊಂಡಿದ್ದು ಎಲ್ಲರು ಕೂಡಿ ದಾಳಿ ಕುರಿತು ಠಾಣೆಯ ಸಕರ್ಾರಿ ಜೀಪ ನಂ: ಕೆಎ-02-ಜಿ-302 ನೇದರಲ್ಲಿ ಕುಳಿತುಕೊಂಡು ಠಾಣೆಯಿಂದ 9:20 ಎ.ಎಂಕ್ಕೆ ಹೊರಟೆವು. ಜೀಪನ್ನು ನಾನೆ ಚಲಾಯಿಸುತ್ತಾ. ನೇರವಾಗಿ ಶಹಾಪೂರ ನಗರದ ಹಾಲಭಾವಿ ರೋಡಿನ ಮಡಿವಾಳೆಶ್ವರ ನಗರದ ಹತ್ತಿರ 9.30 ಎ.ಎಂಕ್ಕೆ ಹೋಗಿ ನಮ್ಮ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದುಕೊಂಡು ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ ಒಬ್ಬ ವ್ಯಕ್ತಿ ತನ್ನ ಪಾನ ಶಾಪ್ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ತನ್ನ ಮುಂದೆ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸೇರಿ ಸುತ್ತುವರೆದು ದಾಳಿ ಮಾಡಲಾಗಿ ಮದ್ಯ ಖರೀದಿ ಮಾಡಲು ಬಂದ ಜನರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಕೂಡಾ ಮದ್ಯವನ್ನು ಅಲ್ಲೇ ಬಿಟ್ಟು ಓಡಿ ಹೋದನು ಆತನ ಹೆಸರು ಮಲ್ಲಪ್ಪ ತಂದೆ ಭಿಮರಾಯ ಬಿದರಾಣಿ ಸಾ: ಗಂಗಾನಗರ ಗುತ್ತಿಪೇಟ ಶಹಾಪುರ ಅಂತಾ ಗುರುತಿಸಿರುತ್ತೇನೆ ಸದರಿಯವನು ಸದ್ಯ ಜಿಲ್ಲಾದಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡಿದ್ದು ಇದೆ. ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 180 ಎಂ.ಎಲ್.ನ 48 ಬ್ಯಾಗ ಪಿಪರ ಡಿಲಕ್ಷ ವಿಸ್ಕಿ ಪೌಚಗಳು ಇದ್ದು ಪ್ರತಿಯೊಂದರ ಬೆಲೆ 106.23 ರೂಪಾಯಿ ಇದ್ದು ಒಟ್ಟು 48 ಪೌಚಗಳ ಕಿಮ್ಮತ್ತು 5099.04 ರೂಪಾಯಿ ಆಗುತ್ತದೆ. ಅವುಗಳಲ್ಲಿ 180 ಎಂಎಲ್ ನ ಒಂದು ಬ್ಯಾಗ ಪಿಪರ ಡಿಲಕ್ಸ್ ವಿಸ್ಕಿ ಪೌಚನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನುಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು ಸದರಿ ಜಪ್ತಿ ಪಂಚನಾಮೆಯನ್ನು 9.35 ಎ.ಎಂ ದಿಂದ 10.35 ಎಎಂ ದವರೆಗೆ ಜಪ್ತಿ ಪಂಚನಾಮೆ ಮಾಡಿದ್ದು, ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 10.50 ಎಎಂ ಕ್ಕೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 11:15 ಎ.ಎಂ ಕ್ಕೆೆ ಮುಂದಿನ ಕ್ರಮ ಕೈಕೊಳ್ಳಲು ವರದಿ ನೀಡಿರುತ್ತೇನೆ. ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.107/2021 ಕಲಂ. 32, 34 ಕೆ.ಇ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 108/2021 ಕಲಂ 32, 34 ಕೆ.ಇ ಆಕ್ಟ ಮತ್ತು 188 ಐ.ಪಿ.ಸಿ. : ಇಂದು ದಿನಾಂಕ 20/05/2021 ರಂದು 12-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹಣಮಂತ ಬಿ, ಆರಕ್ಷಕ ಉಪ-ನಿರೀಕ್ಷಕರು (ಕಾ.ಸೂ-2) ಶಹಾಪೂರ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 20/05/2021 ರಂದು ಬೆಳಿಗ್ಗೆ 9-10 ಗಂಟೆಗೆ ಠಾಣೆಯಲ್ಲಿದ್ದಾಗ ಮಡಿವಾಳೇಶ್ವರ ನಗರ ಶಹಾಪೂರದ ಹಾಲಬಾವಿ ರಸ್ತೆಯ ಪಕ್ಕದಲ್ಲಿ ಇರುವ ಕಿರಾಣಿ ಡೆಬ್ಬಿ ಮುಂದೆ ಚಂದ್ರಶೇಖರ ತಂದೆ ಮಲ್ಲಣ್ಣ ನಾಯ್ಕೋಡಿ ಸಾ|| ಮಡಿವಾಳೇಶ್ವರ ನಗರ ಶಹಾಪೂರ ಈತನು ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತ ನನಗೆ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ.164. ಭೀಮನಗೌಡ ಪಿ.ಸಿ.402. ರವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಭೀಮನಗೌಡ ಪಿ.ಸಿ.402. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಸುಬಾಷ ತಂದೆ ಮಲ್ಲಪ್ಪ ದೂಳಾ ವ|| 65 ಜಾ|| ಲಿಂಗಾಯತ ಉ|| ಕೂಲಿ ಸಾ|| ಗಂಗಾನಗರ ಶಹಾಪೂರ 2] ಶ್ರೀ ನಿಂಗಪ್ಪ ತಂದೆ ತಿಪ್ಪಣ್ಣ ನಾಯ್ಕೋಡಿ ವ|| 35 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಗುತ್ತಿಪೇಠ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 9-25 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವಾಯ್,ಎಸ್,ಪಿ, ಸಾಹೇಬರು ಸುರಪೂರ ಮತ್ತು ಪಿ.ಐ. ಸಾಹೇಬರು ಶಹಾಪುರ ರವರ ಮಾರ್ಗದರ್ಶನದಲ್ಲಿ ಚಂದ್ರಶೇಖರನ ಮೇಲೆ ದಾಳಿ ಮಾಡಲು ನಾನು ಮತ್ತು ಪಂಚರು ಠಾಣೆಯ ಸಿಬ್ಬಂದಿಯವರು ಎಲ್ಲರು ಕೂಡಿ ಒಂದು ಖಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 9-30 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 9-40 ಗಂಟೆಗೆ ಶಹಾಪೂರದ ಮಡಿವಾಳೇಶ್ವರ ನಗರದ ಚಂದ್ರಶೇಖರನ ಅಂಗಡಿಯ ಡೆಬ್ಬಿ ಹತ್ತಿರ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯಕ್ತಿ ಕಿರಾಣಿ ಡೆಬ್ಬಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯದ ಪಾಕೇಟಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತಿದ್ದನು. ಸದರಿ ವ್ಯಕ್ತಿ ಮದ್ಯದ ಪಾಕೇಟಗಳು, ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 9-45 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಓಡಿ ಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ಓಡಿಹೋಗುವಾಗ ಅವನ ಮುಖ ನೋಡಿದ್ದು ಪುನ:ಹ ನೋಡಿದಲ್ಲಿ ಗುರುತ್ತಿಸುತ್ತೆನೆ, ನಂತರ ಸದರಿ ಕಿರಾಣಿ ಡೆಬ್ಬಿಯ ಮುಂದೆ ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಒಂದು ಬಿಳಿ ಪ್ಲಾಸ್ಟೀಕ ಚೀಲವಿದ್ದು ಅದರಲ್ಲಿ ಮದ್ಯದ ಪಾಕೇಟಗಳು ಇದ್ದು. ಪರಿಶೀಲಿಸಿನೋಡಲಾಗಿ 1] 180 ಎಮ್.ಎಲ್.ನ್ 48 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 180 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 70 ರೂಪಾಯಿ 26 ಪೈಸೆ ಇರುತ್ತದೆ. ಒಟ್ಟು 48 ಮದ್ಯದ ಪಾಕೇಟಿನ ಕಿಮ್ಮತ್ತ 3372/- ರೂಪಾಯಿ 48 ಪೈಸೆ ಆಗುತ್ತದೆ. 2] ಒಂದು ಬಿಳಿ ಪ್ಲಾಸ್ಟೀಕ ಚೀಲದ ಅ:ಕಿ: 00=00 ನೇದ್ದು, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. ಮತ್ತು ಸದ್ಯ ಜಿಲ್ಲಾಧೀಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡಿದ್ದು ಇರುತ್ತದೆ. 180 ಎಮ್.ಎಲ್.ನ್ 48 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ವಶಪಡಿಸಿಕೊಂಡ ಮದ್ಯವನ್ನು ಜಪ್ತಿಮಾಡಿಕೊಂಡಿದ್ದರಲ್ಲಿ ಮಾದರಿಗಾಗಿ 180 ಎಮ್.ಎಲ್.ನ್ 1 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಮಾದರಿ ಶಿಲ್ ಹಾಕಿ ನಾನು ಮತ್ತು ಪಂಚರು ಸಹಿನಿಸಿದ ಚೀಟಿ ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡೆನು, ಉಳಿದ ಮುದ್ದೆ ಮಾಲನ್ನು 9-45 ಗಂಟೆಯಿಂದ 10-45 ಎ.ಎಂ. ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲಿನೊಂದಿಗೆೆ ಮರಳಿ ಠಾಣೆಗೆ 11-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಓಡಿ ಹೋದ ಆರೋಪಿ ಚಂದ್ರಶೇಖರ ತಂದೆ ಮಲ್ಲಣ್ಣ ನಾಯ್ಕೋಡಿ ಈತನ ವಿರುದ್ಧ ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 12-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 108/2021 ಕಲಂ 32, 34 ಕೆ.ಇ. ಯಾಕ್ಟ ಮತ್ತು 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ

ಶಹಾಪೂರ ಪೊಲೀಸ್ ಠಾಣೆ :- 109/2021 ಕಲಂ 417, 419 ಐಪಿಸಿ ಮತ್ತು 6, 19 ಕೆ.ಪಿ.ಎಂ.ಇ ಕಾಯ್ದೆ 2007 : ???????,ಇಂದು ದಿನಾಂಕ 20/05/2021 ರಂದು 3.00 ಪಿಎಂ ಕ್ಕೆ ಶ್ರೀ ರಮೇಶ ಗುತ್ತೆದಾರ, ತಾಲೂಕಾ ಆರೋಗ್ಯಾಧಿಕಾರಿಗಳು ಶಹಾಪೂರ ರವರು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿಯನ್ನು ತಂದೆ ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 18/05/2021 ರಂದು ಕೋವಿಡ್-19 ಜಾಗೃತಿ ಮೂಡಿಸುವ ಸಲುವಾಗಿ ಶಹಾಪೂರ ನಗರದಲ್ಲಿ ಪೆಟ್ರೋಲಿಂಗ್ ಕುರಿತು ನಾನು ಮತ್ತು ಶ್ರೀ ಜಗನ್ನಾಥರೆಡ್ಡಿ ತಹಸೀಲ್ದಾರರು ಶಹಾಪೂರ, ಶ್ರೀ ಪ್ರಭಾಕರ ಉಪನಿದರ್ೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀ ಚಂದ್ರಕಾಂತ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ, ಶ್ರೀ ಶರಣಬಸಪ್ಪ ಹಿರಿಯ ಆರೋಗ್ಯ ಸಹಾಯಕರು ಮತ್ತು ಶ್ರೀ ರೇವಣಸಿದ್ದಪ್ಪ ದ್ವಿತೀಯ ದಜರ್ೆ ಸಹಾಯಕರು ಎಲ್ಲರೂ ಕೂಡಿ ಜಂಟಿಯಾಗಿ ಶಹಾಪೂರ ನಗರದಲ್ಲಿ ತಿರುಗಾಡುತ್ತಿದ್ದಾಗ ಗಾಂಧಿಚೌಕ ಹತ್ತಿರ ಒಂದು ಕ್ಲಿನಿಕ್ ಹಾಕಿಕೊಂಡು ಒಬ್ಬ ವ್ಯಕ್ತಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ನಾವು ಎಲ್ಲರೂ ಅಲ್ಲಿಗೆ ಭೇಟಿ ನೀಡಿದಾಗ ಕ್ಲಿನಿಕ್ ತೆರೆದಿತ್ತು ಕ್ಲಿನಿಕನಲ್ಲಿ ಒಬ್ಬ ವ್ಯಕ್ತಿ ವೈದ್ಯಕೀಯ ಕಾರ್ಯ ಮಾಡುತ್ತಿರುವುದು ಕಂಡು ಬಂದಿದ್ದು ನಾನು ಆ ವ್ಯಕ್ತಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಮೃತ ತಂದೆ ಗುರುಮೂತರ್ಿ ಹಿರೇಮಠ ಅಂತಾ ತಿಳಿಸಿದ್ದು, ಸದರಿ ವ್ಯಕ್ತಿಗೆ ವೈದ್ಯಕೀಯ ಕಾರ್ಯ ಮಾಡಲು ಅರ್ಹತೆ ಏನು ಎಂದು ಕೇಳಿದಾಗ ಕ್ಲಿನಿಕನ್ನು ಡಾ|| ಮಹಾಂತೇಶ ಹಿರೇಮಠ ಬಿ.ಎ.ಎಂ.ಎಸ್ ರವರು ಪಾರ್ಟಟೈಮ್ ಭೇಟಿ ನೀಡಿ ನಡೆಸುತ್ತಾರೆ ಅವರು ಬರದಿದ್ದಾಗ ನಾನು ನೋಡಿಕೊಂಡು ಹೋಗುತ್ತೇನೆ ಅಂತಾ ತಿಳಿಸಿದನು. ಆಗ ನಾವು ಸದರಿ ವ್ಯಕ್ತಿಗೆ ಕ್ಲಿನಿಕ್ ನಡೆಸಲು ಕೆ.ಪಿ.ಎಂ.ಇ ಕಾಯ್ದೆಯ ಪ್ರಕಾರ ನೋಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು 2 ದಿನಗಳ ಒಳಗಾಗಿ ಸಲ್ಲಿಸಬೇಕು ಅಂತಾ ಸಮಯ ಕೊಟ್ಟು ಬಂದಿದ್ದು ಇರುತ್ತದೆ. ಆದರೆ ಇವತ್ತಿನವರೆಗೂ ಯಾವುದೇ ದಾಖಲೆ ಸಲ್ಲಿಸಲು ವಿಫಲರಾಗಿದ್ದರಿಂದ ಇಂದು ದಿನಾಂಕ 20/05/2021 ರಂದು 11.00 ಎಎಂ ಕ್ಕೆ ಮತ್ತೆ ಮೇಲ್ಕಾಣಿಸಿದ ನಾವೆಲ್ಲರೂ ಕೂಡಿ ಶಹಾಪೂರ ನಗರದ ಗಾಂಧಿ ಚೌಕ ಹತ್ತಿರ ಇರುವ ಅಮೃತ ರವರ ಕ್ಲಿನಿಕಗೆ ಭೇಟಿ ನೀಡಿದಾಗ ಸದರಿ ಅಮೃತನು ಹಾಜರಿದ್ದು, ದಾಖಲೆಗಳು ಕೇಳಿದರೆ ಕ್ಲಿನಿಕ್ ನಡೆಸಲು ಯಾವುದೇ ದಾಖಲೆಗಳು ಇರುವುದಿಲ್ಲ ಅಂತಾ ತಿಳಿಸಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಕಾರಣ ಸದರಿ ಶ್ರೀ ಅಮೃತ ತಂದೆ ಗುರುಮೂತರ್ಿ ಹಿರೇಮಠ ಇವರು ವೈದ್ಯಕೀಯ ಪದವಿ ಪಡೆಯದೇ, ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸದೇ ಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಕಂಡು ಬಂದಿದ್ದು, ಸದರಿ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಮೂಲಕ ಕೋರಿರುತ್ತೇನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 109/2021 ಕಲಂ 417, 419 ಐಪಿಸಿ ಮತ್ತು 6, 19 ಕೆ.ಪಿ.ಎಂ.ಇ ಕಾಯ್ದೆ 2007 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ:- 84/2021 ಕಲಂಃ 143,147,148,323,324,448,336,307,395,427,188, 504,506 ಸಂ.149 ಐಪಿಸಿ : ಇಂದುದಿನಾಂಕ: 20/05/2021 ರಂದು 4 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗಶ್ರೀ ಆನಂದಕುಮಾರತಂದೆ ಭರಮಯ್ಯಾಅಮ್ಮಾಪೂರಕರ ಸಾ: ವಡ್ಡರ ಕಾಲೋನಿ ತಿಮ್ಮಾಪೂರಈತನುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿದಅಜರ್ಿತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:19-05-2021 ರಂದುರಾತ್ರಿ 08:30 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ನನ್ನ ಸಹೋದರರಾದ ವೆಂಕಟೇಶ, ಹಣಮಂತ, ಮಂಜುನಾಥ ಮತ್ತುತಂದೆಯಾದ ಬರಮಯ್ಯಾ , ತಾಯಿಯಾದ ಬೀಮವ್ವ ನನ್ನ ಹೆಂಡತಿಯಾದ ಸುವರ್ಣಎಲ್ಲರೂ ಮನೆಯಲ್ಲಿ ಊಟ ಮಾಡುತ್ತಿರುವಾಗ ಏಕಾ ಏಕಿಯಾಗಿ ನಮ್ಮಜನಾಂಗದ ನಮ್ಮಓಣಿಯವರಾದ 1) ನಾಗಪ್ಪತಂದೆ ಬೀಮಣ್ಣಕಟ್ಟಿಮನಿ 2) ಮಲ್ಲೇಶಿ ತಂದೆ ನಾಗಪ್ಪ ವಡ್ಡರ 3) ಜೆಟ್ಟೆಪ್ಪತಂದೆಜೆಟ್ಟೆಪ್ಪ ಪೂಜಾರಿ 4) ನಾಗಪ್ಪತಂದೆ ಲಕ್ಷ್ಮಣಜಾಲಹಳ್ಳಿ 5) ಜೆಟ್ಟೆಪ್ಪತಂದೆ ಬುಡ್ಡಪ್ಪ (ಜಡ್ಡಿಕೆ) 6) ಬೀಮಣ್ಣತಂದೆಯಲ್ಲಪ್ಪಕರಿಗೂಡ್ಡ 7) ಗೋಪಾಲ ತಂದೆ ಹಣಮಂತಚಂದನಕೇರಿ 8) ನಾಗರಾಜತಂದೆ ಹಣಮಂತಚಂದನಕೇರಿ 9) ಜೆಟ್ಟೆಪ್ಪತಂದೆ ನಾಗಪ್ಪ ವಡ್ಡರ 10) ತಿಮ್ಮಣ್ಣತಂದೆ ನಾಗಪ್ಪ ವಡ್ಡರ 11) ಹಣಮಂತತಂದೆ ಬೀಮಣ್ಣ ಪನಿ 12) ಪರಶುರಾಮತಂದೆ ಬುಡ್ಡಪ್ಪಜಡ್ಡಿಕಿ 13) ರವಿಕುಮಾರತಂದೆ ಬೀಮಣ್ಣ ವಡ್ಡರ 14) ಮಹೇಶ ತಂದೆ ಮರೆಪ್ಪಗೋಬ್ಬೂರ 15) ಬೀಮಣ್ಣತಂದೆರಾಮಣ್ಣ (ಧಣಿ) 16) ಮೌನೇಶತಂದೆ ಬೀಮಣ್ಣ 17) ಪರಶುರಾಮತಂದೆ ಬೀಮಣ್ಣ 18) ಕೃಷ್ಣಾ ತಂದೆ ಬೀಮಣ್ಣಕರಡಿಗುಡ್ಡಾ 19) ಪರಶುರಾಮತಂದೆ ಬೀಮಣ್ಣ ಹೊಸಕೇರಿ 20) ಬಸವರಾಜತಂದೆರಮೇಶಕರಿಡುಗುಡ್ಡಾ 21) ಬೀಮಣ್ಣತಂದೆ ಲಕ್ಮ್ಮಣಜಾಧವ 22) ರಂಗಪ್ಪತಂದೆ ಲಕ್ಷ್ಮಣ ಜಾಲಳ್ಳಿ 23) ಮೂಕಪ್ಪತಂದೆ ನಾಗಪ್ಪದಂಡಗುಲ್ಲ 24) ಕೃಷ್ಣಾ ತಂದೆ ಮೂಕಪ್ಪದಂಡಗುಲ್ಲ 25) ಬೀಮಣ್ಣತಂದೆರಾಮಣ್ಣಚಂದನಕೇರಿ 26) ಅಂಬ್ರೇಶತಂದೆರಾಮಣ್ಣಚಂದನಕೇರಿ 27) ಬೀಮಣ್ಣತಂದೆಯಲ್ಲಪ್ಪಕಟ್ಟಿಮನಿ 28) ವೆಂಕಟೇಶತಂದೆಯಲ್ಲಪ್ಪಕಟ್ಟಿಮನಿ 29) ನಾಗಪ್ಪತಂದೆಯಲ್ಲಪ್ಪಕಟ್ಟಿಮನಿ 30) ತಿಮ್ಮಯ್ಯಾತಂದೆತಿಮ್ಮಯ್ಯಾ ಪೂಜಾರಿ 31) ತಿಪ್ಪಣ್ಣತಂದೆತಿಮ್ಮಯ್ಯಾ ಪೂಜಾರಿ 32) ಪರಶುರಾಮತಂದೆತಿಮ್ಮಯ್ಯಾ ಪೂಜಾರಿ 33) ರಾಮಣ್ಣತಂದೆಜೆಟ್ಟೆಪ್ಪ ಪೂಜಾರಿ 34) ಯಲ್ಲಪ್ಪಚಿಂಚರಕಿ 35) ಹಣಮಂತತಂದೆಯಲ್ಲಪ್ಪಚಿಂಚರಕಿ 36) ರಾಮಣ್ಣತಂದೆರಾಮಣ್ಣಕರಿಗುಡ್ಡಾ 37) ಮರೆಪ್ಪತಂದೆರಾಮಣ್ಣಕರಿಗುಡ್ಡಾ 38) ಬಸವರಾಜತಂದೆ ಹಣಮಂತ ಗಲಗ ಹಾಗೂ 39) ಶಾರದಾಗಂಡ ನಾಗಪ್ಪಕಟ್ಟಿಮನಿ 40) ಕನಕಮ್ಮಗಂಡಜೆಟ್ಟೆಪ್ಪ ವಡ್ಡರ 41) ಮರೆಮ್ಮಗಂಡ ಮಲ್ಲೇಶಿ ವಡ್ಡರ 42) ಯಲ್ಲಮ್ಮಗಂಡ ಬೀಮಣ್ಣ ಫನಿ 43) ಮಲ್ಲಮ್ಮಗಂಡರಾಮಣ್ಣದಂಡಗುಲ್ಲ 44) ಹಣಮಂತಿಗಂಡ ಬೀಮಣ್ಣಕರಿಗುಡ್ಡಾ 45) ಬೀಮವ್ವಗಂಡ ಬೀಮವ್ವ ಸಾಹುಕಾರ 46) ಗೀತಾಗಂಡ ಮಲ್ಲಪ್ಪ ವಡ್ಡರ 47) ನಾಗಮ್ಮಗಂಡದೇವಪ್ಪ ವಡ್ಡರ 48) ನಾಗಣ್ಣಗಂಡ ಬೀಮಣ್ಣ ಹೊಸಕೇರಿ 49) ಮರೆಮ್ಮಗಂಡ ಬೀಮಣ್ಣ (ದಣಿ) 50) ರಂಗಮ್ಮಗಂಡರಾಮಣ್ಣ ಪೂಜಾರಿ 51) ಯಲ್ಲಮ್ಮಗಂಡರಾಮಣ್ಣಕೊದ್ದಡ್ಡಿ 52) ಬಾಲಮ್ಮಗಂಡರಾಮಣ್ಣಚಂದನಕೇರಿ 53) ನಾಗಮ್ಮಗಂಡಯಲ್ಲಪ್ಪಕಟ್ಟಿಮನಿ 54) ತಂಗಮ್ಮಗಂಡ ಹಣಮಂತಕಟ್ಟಿಮನಿ 55) ಸುರೇಖಾಗಂಡ ಮರೆಪ್ಪಕರಿಗುಡ್ಡಾ 56) ಲಕ್ಷ್ಮಿಗಂಡಜೆಟ್ಟೆಪ್ಪ ಪೂಜಾರಿ 57) ಮರೆಮ್ಮಗಂಡ ಹಣಮಂತಕಟ್ಟಿಮನಿ 58) ನಾಗಮ್ಮಗಂಡತಿಮ್ಮಯ್ಯಾ ಪೂಜಾರಿಎಲ್ಲರೂಗುಂಪುಕಟ್ಟಿಕೊಂಡುಕೈಯಲ್ಲಿ ಬಡಿಗೆಕಲ್ಲುರಾಡು, ಹಾರಿ, ಗುದ್ದಲಿಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಬಂದವರೆ ಮನೆಯ ಮುಂದೆ ನಿಂತುಎಲ್ಲರೂಚಿರಾಡುತ್ತಾಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಎಲೇ ಬೋಸಡಿ ಸುಳೇ ಮಕ್ಕಳೆ ಹೊರಗೆ ಬನ್ನಿರಿಇವತ್ತು ನಿಮ್ಮಕುಟುಂಬವನ್ನೆ ಸರ್ವನಾಶ ಮಾಡತಿವಿ ಆಯಿತು ನಿಮ್ಮದುಇವತ್ತೆಕೊನೆಯ ದಿನ ಹೊರಗಡೆ ಬನ್ನಿರಿ ಸುಳೆ ಮಕ್ಕಳೆ ಅಂತಾಚಿರಾಡುತ್ತಿರುವಾಗ ನಮ್ಮ ಸಹೋದರನಾದ ಮಂಜುನಾಥ ಮತ್ತುತಂದೆಯಾದ ಬರಮಯ್ಯಾಇವರಿಬ್ಬರು ಹೊರಗಡೆ ಹೊದಾಗ ಏಕಾ ಏಕಿ ಎಲ್ಲರೂ ಮೈ ಮೇಲೆ ಏರಗಿಇಬ್ಬರಿಗೂ ಕೊಲೆ ಮಾಡುವಉದ್ದೇಶದಿಂದತಲೆಗೆರಾಡು, ಗುದ್ದಲಿಯಿಂದತಲೆ ಹೊಡೆದಾಗಇಬ್ಬರುರಕ್ತಸ್ರಾವವಾಗಿ ಸತ್ತೆನೆಪ್ಪೊಅಂತಾಚಿರಿಕೊಂಡು ನೆಲಕ್ಕೆ ಬಿದ್ದಾಗ ಊಟ ಮಾಡುತ್ತಿದ್ದ ನಾನು ನನ್ನಅಣ್ಣನಾದ ವೆಂಕಟೇಶಇಬ್ಬರು ಹೊರಗಡೆ ಬಂದು ನೋಡುವದರಲ್ಲಿ ಏಕಾ ಏಕಿ ನಮಗೂ ಕೂಡಾ ಹೊಡೆಯಲು ಬಂದಾಗಜೀವರಕ್ಷಣೆಗೆಂದು ನಾವು ಕೂಡಾಅವರನ್ನು ನುಕಾಡುತ್ತಾ ನೋಡುವದರಲ್ಲಿ ನಮ್ಮತಂದೆ ಬರಮ್ಯಯಾತಮ್ಮನಾದ ಮಂಜುನಾಥಇಬ್ಬರಿಗೆರಕ್ತಸ್ರಾವ ವಾಗುತ್ತಿರುದನ್ನು ನೋಡದೇ ಭಯಗೊಂಡುಅವರೆಲ್ಲರಿಂದ ತಪ್ಪಿಸಿಕೊಂಡು ಮೊಟಾರ ಸೈಕಲ್ ಮೇಲೆ ಅವರಿಬ್ಬರನ್ನುಅಲ್ಲಿಂದಕರೆಂದುಕೊಂಡುರಕ್ಷಣೆಗೆಗಾಗಿ ಪೊಲೀಸ್ಠಾಣೆಗೆ ಬಂದಿದ್ದ ನಂತರಅವರೆಲ್ಲರೂ ನಮ್ಮ ಮನೆಯಕಲ್ಲುತೂರಾಟ ಮಾಡಿದಾಗ ಮನೆ ಓಳಗಡೆ ಇದ್ದಅಣ್ಣ ವೆಂಕಟೇಶ ನಮ್ಮತಾಯಿಯಾದ ಬೀಮವ್ವ ನನ್ನ ಹೆಂಡತಿಯಾದ ಸುವರ್ಣತಮ್ಮ ಹಣಮಂತ ನಾಲ್ಕು ಜನ ಮನೆಗೆ ಚಿರಾಡುತ್ತಾಠಾಣೆಗೆ ಬಂದಿದ್ದ ನನಗೆ ಪೋನ ಕರೆ ಮಾಡಿಅವರೆಲ್ಲರೂ ನಮ್ಮ ಮನೆಯಗೊಡೆ, ಕಿಡಗಿ, ಬಾಗಿಲು ದ್ವಂಸ ಮಾಡಿ ಒಳಗಡೆ ನುಗ್ಗಿ ನಮ್ಮಜೀವತಗೆಯುತ್ತಾರೆಏನಾದರೂ ಮಾಡಿ ನಮ್ಮನ್ನುರಕ್ಷಣೆ ಮಾಡುಆನಂದಅಂತಾಚಿರಾಡುತ್ತಾ ಪೋನ ಕರೆ ಮುಖಾಂತರಅಂಗಲಾಚುತ್ತಾರೋದಿಸುತ್ತಾ ಮನೆಯಲ್ಲೆಇದ್ದ ಸಮಯದಲ್ಲಿಎಲ್ಲರೂಗೊಡೆ ಬಾಗಿಲು , ಕಿಟಕಿದ್ವಂಸ ಮಾಡಿ ಮೇಲ್ಚಾವಣೆಟೀನ ಸೇಡ್ಡಗಳ ಮೇಲೆ ಕಲ್ಲುಗಳನ್ನು ಎತ್ತಿ ಹಾಕುತ್ತಾ ನಮ್ಮ ದ್ವಿ ಚಕ್ರವಾಹನಗಳನ್ನು ದ್ವಂಸ ಮಾಡಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದತಮ್ಮ ಹಣಮಂತನಿಗೆ ಕಲ್ಲುಗಳು ಎತ್ತಿ ಹಾಕಿ ಬಡಿಗೆಗಳನ್ನು ಹೊಡೆದು ಗಾಯಗೊಳಿಸಿ ಮನೆಯಲ್ಲಿದ್ದ ಟಿವಿ, ಸೋಪಾ, ಟ್ರೇಜರಿ ಮತ್ತು ಪೀಟೊಪಕರಣಗಳನ್ನು ದ್ವಂಸ ಮಾಡಿ ಹಾನಿಮಾಡಿ ಮನೆಯಲ್ಲಿದ್ದವರಿಗೆ ಹೊಡೆದು ಬಡೆದು ಹೇದರಿಸಿ ಜೀವದ ಭಯಹಾಕಿ ಮನೆಯಲ್ಲಿಟ್ಟಿದ್ದ ಹಣ ಮತ್ತು ಬಂಗಾರದ ಒಡವೆಗಳನ್ನು ಇಟ್ಟಿದ್ದಟ್ರಂಕ ಮುರಿದುಟ್ರಂಕನದಲ್ಲಿದ್ದ 6,50,000=00 ರೂ ನಗದು ಹಣ ಹಾಗೂ 12 ತೋಲಿ (120 ಗ್ರಾಂ) ಅಂದಾಜುಕಿಮ್ಮತ್ತು 6 ಲಕ್ಷರೂಗಳ ಬಂಗಾರದ ಒಡವೆಗಳನ್ನು ಜಭರದಸ್ತಿನಿಂದ ದೋಚಿಕೊಂಡುಟ್ರಂಕನ್ನು ಮನೆಯ ಮುಂದೆರೋಡಿಗೆತಂದು ಬಿಸಾಕಿ ಮನೆಯ ಮೇಲೆ ಹೆಚ್ಚಿನರೀತಿಯಲ್ಲಿಕಲ್ಲುತೂರಾಡಿದ್ವಂಸ ಗೊಳಿಸುತ್ತಿರುವಾಗ ಅಷ್ಟರಲ್ಲಿಅಲ್ಲಿಗೆತಕ್ಷಣವೆ ಪೋಲಿಸರು ಹೋಗಿ ಗುಂಪನ್ನು ಚಧುರಿಸಿ ಮನೆಯಲ್ಲಿದ್ದ ನಮ್ಮವರನ್ನುರಕ್ಷಣೆ ಮಾಡಿದ್ದುಇರುತ್ತದೆ. ಇಲ್ಲಅಂದ್ರೆಅವರು ನಮ್ಮಕುಟುಂವನ್ನು ಸರ್ವನಾಶಮಾಡಿ ಕೊಲೆ ಮಾಡಿ ಬಿಡುತ್ತಿದ್ದರು, ನಂತರಗಾಯಗೊಂಡತಮ್ಮ ಹಣಮಂತ, ಮಂಜುನಾಥ, ತಂದೆಯಾದ ಬರಮಯ್ಯಾ ಮೂವರಿಗೂ ಸರಕಾರಿಆಸ್ಪತ್ರೆ ಸುರಪೂರಕ್ಕೆಉಪಚಾರಕುರಿತು ಸೇರಿಕೆ ಮಾಡಿ ಹೆಚ್ಚಿನಉಪಚಾರಕುರಿತು ಮೂವರುಯಾದಗಿರಿ ಸರಕಾರಿಆಸ್ಪತ್ರೆಗೆ ಹೋಗಿದ್ದು, ನಾನು ನಮ್ಮತಂದೆತಮ್ಮರಯೋಗಕ್ಷೆಮ ವಿಚಾರಿಸಿ ಇಂದುತಡವಾಗಿಠಾಣೆಗೆ ಬಂದುದೂರುಅಜರ್ಿ ನಿಡಿದ್ದುಇರುತ್ತದೆ. ಮೇಲೆ ಹೇಳಿದ ಎಲ್ಲರೂ ಹಳೇಯ ವೈಷ್ಯಮ್ಯದಿಂದಗುಂಪುಕಟ್ಟಿಕೊಂಡು ಬಂದು ಕೊಲೆ ಮಾಡುವಉದ್ದೇಶದಿಂದ ನಮ್ಮಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮನೆಯನ್ನುದ್ವಂಸ ಮಾಡಿ ಹಾನಿಗೊಳಿಸಿ ನಗದು ಹಣ ಬಂಗಾರದ ಒಡೆಯವಗಳನ್ನು ಜಬರದಸ್ತಿನಿಂದ ಸಾರ್ವತ್ರಿಕವಾಗಿ ಪೂರ್ವನಿಯೋಜಿತವಾಗಿದೋಚಿಕೊಂಡು ಹೋಗಿದ್ದುಇರುತ್ತದೆ. ಅವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಹಾಗೂ ನಮ್ಮಕುಟುಂಬದವರಿಗೆ ಪ್ರಾಣರಕ್ಷಣೆ ನೀಡಲು ವಿನಂತಿ. ಅಂತಾಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 70/2021 ಕಲಂ 32, 34 ಕೆ.ಇ. ಕಾಯ್ದೆ. : ಇಂದು ದಿನಾಂಕ 20/05/2021 ರಂದು ಬೆಳಿಗ್ಗೆ 11-30 ಗಂಟೆಗೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ಸಾಹೇಬರು ಠಾಣೆಗೆ ಬಂದು ವರದಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ತಂದು ಹಾಜರಪಡಿಸಿದ್ದೆನೆಂದರೆ ಇಂದು ದಿನಾಂಕ 20-05-2021 ರಂದು 9 ಎ.ಎಮ್ ಕ್ಕೆ ಕೊವಿಡ್-19 ಲಾಕ್ ಡೌನ್ ಪೆಟ್ರೋಲಿಂಗ್ ಕರ್ತವ್ಯ ಕುರಿತು ರಾಮಸಮುದ್ರ ಗ್ರಾಮದಲ್ಲಿ ಇರುವಾಗ ವರ್ಕನಳ್ಳಿ ಗ್ರಾಮದಲ್ಲಿ ವೆಂಕಟೇಶ ತಂದೆ ಬುಗ್ಗಯ್ಯ ಕಲಾಲಇತನು ತನ್ನ ಹೊಟೇಲದಲ್ಲಿ ಅಕ್ರಮವಾಗಿ ಮಧ್ಯದ ಪ್ರೇಶರ್ ಶೀಲ್ಡ ಪಾಕೇಟಗಳನ್ನು ಮತ್ತು ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದರಿಂದ ಅಲ್ಲಿಗೆ ಹೋಗಿ ದಾಳಿ ಮಾಡುವ ಸಲುವಾಗಿ ಇಬ್ಬರು ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಶ್ರೀ ಮೋನಪ್ಪ ಸಿಪಿಸಿ-263 ಶ್ರೀ ಪ್ರಭುಗೌಡ ಸಿಪಿಸಿ-361 ಹಾಗೂ ಜೀಪ ಚಾಲಕ ಶ್ರೀ ಭೀಮರಾಯ ಸಿಪಿಸಿ-33 ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಜೀಪಿನಲ್ಲಿ 9-15 ಎಎ.ಎಮ್ ಕ್ಕೆ ರಾಮಸಮುದ್ರ ಗ್ರಾಮದಿಂದ ಬಾತ್ಮಿ ಬಂದ ಕಡೆಗೆ ಹೊರಟು ವರ್ಕನಳ್ಳಿ ಗ್ರಾಮ ತಲುಪಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಅವಿತುಕೊಂಡು ನೋಡಲಾಗಿ ವೆಂಕಟೇಶ ಇತನು ತನ್ನ ಹೊಟೇಲ ಮುಂದುಗಡೆ ಕುಳಿತುಕೊಂಡು ಸಾರ್ವಜನಿಕರಿಗೆ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಅಲ್ಲಿಗೆ ಹೋಗಿ ಬೆಳಿಗ್ಗೆ 9-45 ಗಂಟೆಗೆ ನಾವು ದಾಳಿ ಮಾಡುವಷ್ಟರಲ್ಲಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದವನು ಅಲ್ಲಿಂದ ಓಡಿ ಹೋದನು. ನಂತರ ಸದರಿಯವನು ಮಧ್ಯ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಅಲ್ಲಿ ಇಟ್ಟಿದ್ದ ಮಧ್ಯದ ಬಾಟಲಿಗಳು ಚೆಕ್ ಮಾಡಿದಾಗ 1) 90 ಎಮ್.ಎಲ್ ದ 25 ಯುಎಸ್ ವಿಸ್ಕಿ ಪ್ಲಾಸ್ಟಿಕ್ ಬಾಟಲಗಳು ಇದ್ದವು, ಒಂದು 90 ಎಮ್.ಎಲ್ ದ ಯುಎಸ್ ವಿಸ್ಕಿ ಪ್ಲಾಸ್ಟಿಕ್ ಬಾಟಲ ಕಿಮ್ಮತ್ತು 35.13/- ರೂ ರಂತೆ ಒಟ್ಟು 25 ಯು.ಎಸ್. ವಿಸ್ಕಿ ಬಾಟಲಗಳ ಕಿಮ್ಮತ್ತು ರೂ 878.25/- ರೂ ಆಗುತ್ತದೆ. 2) 330 ಎಮ್.ಎಲ್ ದ 16 ಕೆ.ಎಫ್. ಸ್ಟ್ರಾಂಗ್ ಬಿಯರ್ ಬಾಟಲಗಳು ಇದ್ದು, ಒಂದು 330 ಎಮ್.ಎಲ್ ದ ಕೆ.ಎಫ್. ಸ್ಟ್ರಾಂಗ್ ಬಿಯರ್ ಬಾಟಲ ಕಿಮ್ಮತ್ತು 85/- ರೂ ಯಂತೆ ಒಟ್ಟು 16 ಕೆ.ಎಫ್. ಸ್ಟ್ರಾಂಗ್ ಬಿಯರ್ ಬಾಟಲಗಳ ಕಿಮ್ಮತ್ತು 1,360/- ರೂ ಆಗುತ್ತದೆ. 3) 180 ಎಮ್.ಎಲ್ ದ 20 ಓರಿಜನಲ್ ಚೌಯಿಸ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟಗಳು ಇದ್ದವು, ಒಂದು 180 ಎಮ್.ಎಲ್ ದ ಓರಿಜನಲ್ ಚೌಯಿಸ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟ ಕಿಮ್ಮತ್ತು 70.26/- ರೂ ರಂತೆ ಒಟ್ಟು 20 ಓರಿಜನಲ್ ಚೌಯಿಸ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟ ಕಿಮ್ಮತ್ತು ರೂ 1,405.2/- ರೂ ಆಗುತ್ತದೆ. 4) 180 ಎಮ್.ಎಲ್ ದ 6 ಓಲ್ಟ ಟವರಿನ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟಗಳು ಇದ್ದವು, ಒಂದು 180 ಎಮ್.ಎಲ್ ದ ಓಲ್ಟ ಟವರಿನ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟ ಕಿಮ್ಮತ್ತು 86.75/- ರೂ ರಂತೆ ಒಟ್ಟು 6 ಓಲ್ಟ ಟವರಿನ್ ವಿಸ್ಕಿ ಪ್ರೇಶರ್ ಶೀಲ್ಡ ಪಾಕೇಟ ಕಿಮ್ಮತ್ತು ರೂ 520.5/- ರೂ ಆಗುತ್ತದೆ. 5) 180 ಎಮ್.ಎಲ್ ದ 10 ಇಂಪೇರಿಯಲ್ ಬ್ಲ್ಯೂ ವಿಸ್ಕಿ ಬಾಟಲಗಳು ಇದ್ದವು, ಒಂದು 180 ಎಮ್.ಎಲ್ ದ ಇಂಪೇರಿಯಲ್ ಬ್ಲ್ಯೂ ವಿಸ್ಕಿ ಬಾಟಲ ಕಿಮ್ಮತ್ತು 198.21/- ರೂ ರಂತೆ ಒಟ್ಟು 10 ಇಂಪೇರಿಯಲ್ ಬ್ಲ್ಯೂ ವಿಸ್ಕಿಇ ಬಾಟಲ ಕಿಮ್ಮತ್ತು ರೂ 1982.1/- ಆಗುತ್ತದೆ. 6) 90 ಎಮ್.ಎಲ್ ದ 16 ಹೇವಾಡ್ರ್ಸ ಚೀರ್ಸ ವಿಸ್ಕಿ ಪ್ರೆಶರ್ ಶೀಲ್ಡ ಪಾಕೇಟಗಳು ಇದ್ದವು, ಒಂದು 90 ಎಮ್.ಎಲ್ ದ ಹೇವಾಡ್ರ್ಸ ಚೀರ್ಸ ವಿಸ್ಕಿ ಪ್ರೆಶರ್ ಶೀಲ್ಡ ಪಾಕೇಟ ಕಿಮ್ಮತ್ತು 35.13/- ರೂ ರಂತೆ ಒಟ್ಟು 16 ಹೇವಾಡ್ರ್ಸ ಚೀರ್ಸ ವಿಸ್ಕಿ ಪ್ರೆಶರ್ ಶೀಲ್ಡ ಪಾಕೇಟ ಕಿಮ್ಮತ್ತು ರೂ 562.08/- ರೂ ಆಗುತ್ತದೆ. ಹೀಗೆ ಒಟ್ಟು 6,708.13/ರೂ ರೂಪಾಯಿ ಕಿಮ್ಮತ್ತಿನ ಮಧ್ಯವನ್ನು ನನ್ನ ವಶಕ್ಕೆ ಪಡೆದುಕೊಂಡು ಈ ಮೇಲೆ ನಮೂಧಿಸಿದ ಎಲ್ಲಾ ನಮೂನೆಯ ಮಧ್ಯದಲ್ಲಿ ತಲಾ ಒಂದೊಂದು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಪ್ರತ್ಯೇಕ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಪಿ.ಆರ್.ಎಸ್ ಅಂತಾ ಶೀಲ್ ಮಾಡಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 20-05-2021 ರಂದು 9-45 ಎ.ಎಂ ದಿಂದ 10-45 ಎಎ.ಎಂ ದವರೆಗೆ ಸ್ಥಳದಲ್ಲಿಯೇ ಕುಳಿತು ಪಂಚರ ಬರೆದು ಮುಗಿಸಿ ಮರಳಿ ಠಾಣೆಗೆ ಬೆಳಿಗ್ಗೆ 11-30 ಗಂಟೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಇರುತ್ತದೆ. ಸದರಿ ಆರೋಪಿತನ ವಿರುಧ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 70/2021 ಕಲಂ 32, 34 ಕೆ.ಇ. ಕಾಯ್ದೆ ಪ್ರಕಾರ ಗುನನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ :- 53/2021 ಕಲಂ: 417, 419 ಐಪಿಸಿ ಮತ್ತು ಕಲಂ, 6 ಸಂಗಡ 19 ಕೆ.ಪಿ.ಎಮ್.ಇ ಆಕ್ಟ್-2007 : ಇಂದು ದಿನಾಂಕ: 20/05/2021 ರಂದು 4-00 ಪಿಎಮ್ ಕ್ಕೆ ಪಿರ್ಯಾದಿದಾರರಾದ ಡಾ|| ಶೃತಿ ರಾಠೋಡ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಚಾಮನಾಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರನ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ಇಂದು ದಿನಾಂಕ: 20/05/2021 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಾನು, ಚಾಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ, ಉಕ್ಕನಾಳ ಗ್ರಾಮದಲ್ಲಿ ಕೆ.ಪಿ.ಎಮ್.ಇ ನೊಂದಾವಣಿ ಇಲ್ಲದೇ ನಕಲಿ ವೈದ್ಯನು ಕ್ಲೀನಿಕ್ ತೆಗೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಅಂತಾ ಮಾಹಿತಿ ಬಂದಿದ್ದರಿಂದ, ಶ್ರೀ ಜಗನ್ನಾಥರೆಡ್ಡಿ ಮಾನ್ಯ ತಹಸೀಲ್ದಾರರು, ಹಾಗೂ ತಾಲ್ಲೂಕಾ ದಂಡಾಧಿಕಾರಿಗಳು, ಶಹಾಪೂರ ರವರಿಗೆ ಮಾಹಿತಿ ತಿಳಿಸಿದ್ದು, ಮತ್ತು ಗೋಗಿ ಪೊಲೀಸ್ ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾಸು) ರವರಿಗೆ ಬರಲು ತಿಳಿಸಿದ್ದು, ಅದರಂತೆ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾಸು) ಗೋಗಿ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ: ಕೆಎ-33 ಜಿ-0161 ನೇದ್ದರಲ್ಲಿ ಬಂದಿದ್ದು, ನಮ್ಮ ಕಾಯರ್ಾಲಯದ ಸಿಬ್ಬಂದಿಯವರಾದ 1) ಶ್ರೀ ಗೋಪಿಚಂದ ಚವ್ಹಾಣ, ಹಿರಿಯ ಆರೋಗ್ಯ ಸಹಾಯಕರು, 2) ಶ್ರೀ ರೇವು, ಮಿಲ್ಡ್ ಲೇವಲ್ ಹೆಲ್ತ್ ಪ್ರಾವಿಡರ್, ಹಾಗೂ ಶ್ರೀ ಸೋಮಲಿಂಗ್ ಒಡೆಯರ್ ಪಿ.ಎಸ್.ಐ (ಕಾಸು) ಗೋಗಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ 3) ಶ್ರೀ ಶರಬಣ್ಣ ಹೆಚ್.ಸಿ-69, 4) ಶ್ರೀ ನಾಗಪ್ಪ ಪಿಸಿ-167, 5) ಶ್ರೀ ಹನುಮಂತ್ರಾಯ ಪಿಸಿ-331 ಇವರಿಗೆ ವಿಷಯ ತಿಳಿಸಿ, ನಾನು ಮತ್ತು ನಮ್ಮ ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಹಾಗೂ ಗೋಗಿ ಪೊಲೀಸ್ ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ(ಕಾಸು) ರವರು ತಮ್ಮ ಸರಕಾರಿ ಜೀಪ್ ನಂ: ಕೆಎ-33 ಜಿ-0161 ನೇದ್ದರಲ್ಲಿ, ಸಿಬ್ಬಂದಿಯವರೊಂದಿಗೆ 1-45 ಪಿಎಮ್ ಕ್ಕೆ ಹೋರಟು ಉಕ್ಕನಾಳ ಗ್ರಾಮಕ್ಕೆ 2-15 ಪಿ.ಎಮ್ ಕ್ಕೆ ತಲುಪಿದ್ದು, ಮಾನ್ಯ ತಹಸೀಲ್ದಾರರು ಹಾಗೂ ತಾಲ್ಲೂಕಾ ದಂಡಾಧಿಕಾರಿಗಳು, ಶಹಾಪೂರ ರವರು ಕೂಡಾ ತಮ್ಮ ಸರಕಾರಿ ಜೀಪ್ ನಂ: ಕೆಎ-33, ಜಿ-0243 ನೇದ್ದರಲ್ಲಿ ತಮ್ಮ ಸಿಬ್ಬಂದಿಯವರಾದ ಶ್ರೀ ರಾಜು ಗ್ರಾಮ ಲೆಕ್ಕಿಗ ಇವರೊಂದಿಗೆ ಉಕ್ಕನಾಳ ಗ್ರಾಮಕ್ಕೆ ಬಂದಿದ್ದು, ಉಕ್ಕನಾಳ ಗ್ರಾಮ ಪಂಚಾಯತಿ ಹತ್ತಿರ ಇರುವ ಬಸನಗೌಡ ಹೊಸಮನಿ ಇವರ ಬಿಲ್ಡಿಂಗ್ದ ತನ್ನ ಕ್ಲೀನಿಕ್ ನಲ್ಲಿ ನಕಲಿ ವೈದ್ಯರಾದ ಸಿದ್ದು ತಂದೆ ಶರಣಪ್ಪ ಪೂಜಾರಿ ವಯ|| 24 ವರ್ಷ ಜಾ|| ಕುರುಬರ ಸಾ|| ಮಾಗಣಗೇರಿ ತಾ|| ಯಡ್ರಾಮಿ ಜಿ|| ಕಲಬುರಗಿ ಈತನು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸಿ, ಮಾನ್ಯ ತಹಸೀಲ್ದಾರರು ಹಾಗೂ ತಾಲ್ಲೂಕಾ ದಂಡಾಧಿಕಾರಿಗಳು, ಶಹಾಪೂರ ರವರ ಸಮಕ್ಷಮದಲ್ಲಿ ಸಿದ್ದು ಪೂಜಾರಿ ಇವರ ಕ್ಲೀನಿಕ್ದೊಳಗೆ ಹೋಗಿ ಅವರಿಗೆ ಕೆ.ಪಿ.ಎಮ್.ಇ ಅಡಿಯಲ್ಲಿ ಕ್ಲೀನಿಕ್ ನಡೆಸಲು ನೊಂದಣಿ ಮಾಡಿಸಿರುವ ಬಗ್ಗೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದಾಗ, ಅವರು ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವುದಿಲ್ಲಾ, ನಕಲಿ ವೈದ್ಯ ವೃತ್ತಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದು, ಸದರಿ ಸಿದ್ದು ಪೂಜಾರಿ ಇತನು ವೈದ್ಯಕೀಯ ಪದವಿಯನ್ನು ಪಡೆಯದೇ ಜನರಿಗೆ ವೈದ್ಯರೆಂದು ಹೇಳಿ ವಂಚಿಸಿ ನಕಲಿ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ಗೋಗಿ ಪೊಲೀಸ್ ಠಾಣೆಯ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ರವರಿಗೆ ವಶಕ್ಕೆ ತೆಗೆದುಕೊಳ್ಳುವಂತೆ ತಿಳಿಸಿದ್ದು, ಮತ್ತು ಸದರಿ ಸಿದ್ದು ಪೂಜಾರಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಲಾಗಿದೆ ಅಂತಾ ಅಜರ್ಿ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ನಂ: 53/2021 ಕಲಂ: 417, 419 ಐಪಿಸಿ ಮತ್ತು ಕಲಂ, 6 ಸಂಗಡ 19 ಕೆ.ಪಿ.ಎಮ್.ಇ ಆಕ್ಟ್-2007 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ :-. 69/2021 ಕಲಂ 323,324,504,506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 20.05.2021 ರಂದು 05.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಚಂದ್ರಭಾಗವ್ವ ಗಂಡ ಬಸವರಾಜ ಪೊಲೀಸ್ ಪಾಟೀಲ ವ|| 45 ಜಾ|| ಕಬ್ಬಲಿಗ ಉ|| ಮನೆಗೆಲಸ ಸಾ|| ಹೆಗ್ಗಣದೊಡ್ಡಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶಏನಂದರೆ, ನನ್ನ ಅತ್ತೆ ಮಾವನಿಗೆ ನನ್ನ ಗಂಡ ಒಬ್ಬನೇ ಗಂಡು ಮಗನಿದ್ದು 8 ಜನ ಹೆಣ್ಣುಮಕ್ಕಳು ಇರುತ್ತಾರೆ. ಎಲ್ಲಾ 8 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಆದರೆ ಮಲ್ಲಮ್ಮ ಗಂಡ ಕರೆಪ್ಪ ವಯಾ|| 40 ಇವಳು ನಮ್ಮ ಅತ್ತೆಯವರಾದ ಮಹಾದೇವಿ ಇವರೊಂದಿಗೆ ಅವಳ ಮನೆಯಲ್ಲಿಯೇ ವಾಸವಾಗಿರುತ್ತಾಳೆ. ಹೀಗಿದ್ದು ದಿನಾಂಕ: 16/05/2021 ರಂದು ಸಾಯಂಕಾಲ 05.30 ಗಂಟೆ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ನಮ್ಮ ನಾದಿನಿಯಾದ ಮಲ್ಲಮ್ಮ ಗಂಡ ಕರೆಪ್ಪ 2] ಶಾಂತಮ್ಮ ಗಂಡ ಆದಪ್ಪ 3] ದೇವಪ್ಪ ತಂದೆ ಈರಪ್ಪ ಹೆಳವರ ಈ ಮೂರು ಜನರು ಕೂಡಿಕೊಂಡು ನಮ್ಮ ಮನೆಗೆ ಬಂದು ಏನಲೆ ಸೂಳಿ ನಿನ್ನ ಗಂಡ ನನಗೆ ಕಿಡ್ನಾಫ ಮಾಡಿದ್ದು ಅದರಂತೆ ನಿನಗೂ ಕಿಡ್ನಾಫ ಮಾಡುತ್ತೇವೆ ಅಂತ ಅಂದಾಗ ನಾನೇನು ಮಾಡಿದ್ದೀನಿ ಅವರಿಗೆ ಕೇಳಿರಿ ಅಂತ ಅಂದಾಗ ಈ ಮೂರು ಜನರು ಈ ಸೂಳೇ ಮಗಳ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ದೇವಪ್ಪ ಹೆಳವರ ಈತನು ಈ ಸೂಳೆಯದು ಬಹಾಳ ಆಗಿದೆ ಅಂತ ಬೈಯುತ್ತಾ ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಬಲಗೈ ಮಣಿಕಟ್ಟಿನ ಹತ್ತಿರ ಹೊಡೆದು ಗುಪ್ತಗಾಯ ಪಡಿಸಿ ಎತ್ತಿ ನೆಲಕ್ಕೆ ಒಗೆದು ಎಲ್ಲರೂ ಕೂಡಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಅಳಿಯನಾದ ಭೀಮಣ್ಣ ತಂದೆ ಹಳ್ಳೆಪ್ಪಗೌಡ ಗಂಗನಾಳ ಹಾಗು ನನ್ನ ಸೊಸಿಯಾದ ಮಂಜುಳಾ ಗಂಡ ಮಡಿವಾಳಪ್ಪ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸದ್ಯಕ್ಕೆ ಇಷ್ಟಕ್ಕೆ ಬಿಟ್ಟಿದ್ದೇವೆ ಮುಂದೆ ನಿನ್ನ ಜೀವ ನಮ್ಮ ಕೈಯಲ್ಲಿದೆ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ಅಂದೆ ನೇರವಾಗಿ ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ಮರಳಿ ಮನೆಗೆ ಹೋಗಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದಿದ್ದು ಕಾರಣ ಮೇಲ್ಕಾಣಿಸಿದ ಮೂರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 69/2021 ಕಲಂ 3323,324,504,506 ಒರತಿ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ ಠಾಣೆ:- 70/2021 ಕಲಂ: 279,337,338 ಐಪಿಸಿ ಸಂ 187 ಐಎಮ್ವಿ ಎಕ್ಟ್ : ದಿನಾಂಕ:20/05/2021 ರಂದು 8:30 ಪಿಎಮ್ ಕ್ಕೆ ಶ್ರೀ ಬಸವರೆಡ್ಡಿ ತಂದೆ ಹಂಪಣ್ಣಗೌಡ ಬಿರಾದಾರ, ವ:31, ಜಾ:ಲಿಂಗಾಯತ, ಉ:ಖಾಸಗಿ ಕೆಲಸ ಸಾ:ಹಬಸಿಹಾಳ ತಾ:ವಡಗೇರಾ ಇವರು ಪೋಲಿಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತಮ್ಮನಾದ ಶರಣಪ್ಪ ತಂದೆ ಹಂಪಣ್ಣಗೌಡ ಈತನು ಯಾದಗಿರಿಯಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಾ ವಾಸವಾಗಿದ್ದು, ದಿನಾಂಕ: 18/05/2021 ರಂದು ಸಂಜೆ ನನ್ನ ತಮ್ಮ ಶರಣಪ್ಪನು ನಮ್ಮ ತಾಯಿ ಚನ್ನಮ್ಮ ಇವಳಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡು ಮೋಟರ್ ಸೈಕಲ್ ಮೇಲೆ ಯಾದಗಿರಿಯಿಂದ ಊರಿಗೆ ಕರೆದುಕೊಂಡು ಬರುತ್ತೇನೆ ಎಂದು ನನಗೆ ಫೋನ ಮಾಡಿ ಹೇಳಿದನು. 8 ಪಿಎಮ್ ಸುಮಾರಿಗೆ ನನ್ನ ತಮ್ಮ ಶರಣಪ್ಪನು ನನಗೆ ಫೋನ ಮಾಡಿ ನನ್ನ ಅಮ್ಮನ್ನು ಮೋಟರ್ ಸೈಕಲ್ ಮೇಲೆ ಕರೆದುಕೊಂಡು ಊರಿಗೆ ಬರುತ್ತಿದ್ದಾಗ ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ಸರಕಾರಿ ಪ್ರೌಢ ಶಾಲೆ ಹತ್ತಿರ ನಿಧಾನವಾಗಿ ಬರುತ್ತಿದ್ದಾಗ ನಮ್ಮ ಗಾಡಿಯ ಹಿಂದಿನ ಗಾಲಿಯು ಪಂಕ್ಚರ ಆಗಿದ್ದರಿಂದ ರೋಡಿನ ಎಡಗಡೆ ಪಕ್ಕದಲ್ಲಿ ಮಣ್ಣಿನ ಮೇಲೆ ನನ್ನ ಗಾಡಿಯನ್ನು ನಿಲ್ಲಿಸಿದಾಗ ಅದೇ ಸಮಯಕ್ಕೆ ಎದುರುಗಡೆಯಿಂದ ಒಂದು ದ್ವಿಚಕ್ರ ವಾಹನ ಪ್ಯಾಸನ ಪ್ರೋ ಗಾಡಿ ಸಂಖ್ಯೆ ಕೆಎ 33 ಕ್ಯೂ 3481 ರ ಸವಾರನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತ ನಮಗೆ ಮತ್ತು ನಮ್ಮ ವಾಹನಕ್ಕೆ ಡಿಕ್ಕಿಪಡಿಸಿ, ಮೋಟರ್ ಸೈಕಲನೊಂದಿಗೆ ಓಡಿ ಹೋಗಿರುತ್ತಾನೆ. ನನಗೆ ಮತ್ತು ಅಮ್ಮನಿಗೆ ತೀವ್ರಗಾಯಗಳಾಗಿರುತ್ತವೆ ಎಂದು ಹೇಳಿದನು. ಆಗ ನಾನು ಹಾಲಗೇರಾ ಗ್ರಾಮದಲ್ಲಿರುವ ನಮ್ಮೂರಿನ ನಿಂಗಪ್ಪ ತಂದೆ ಸಾಯಬಣ್ಣನಿಗೆ ಅಪಘಾತ ವಿಷಯ ತಿಳಿಸಿ, ತಕ್ಷಣ ಸ್ಥಳಕ್ಕೆ ಹೋಗು ನಾನು ಕೂಡಾ ಊರಿಂದ ಬರುವುದಾಗಿ ಹೇಳಿದೆನು. ನಾನು ಬರುವಷ್ಟರಲ್ಲಿ ನಿಂಗಪ್ಪ ಮತ್ತು ಇತರರು ನನ್ನ ತಮ್ಮ ಹಾಗೂ ತಾಯಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನನಗೆ ಮಾರ್ಗ ಮಧ್ಯದಲ್ಲಿ ಗೊತ್ತಾಗಿ ನಾನು ನೇರವಾಗಿ ಆಸ್ಪತ್ರೆಗೆ ಹೋಗಿ ನನ್ನ ತಮ್ಮ ಮತ್ತು ತಾಯಿಗೆ ನೋಡಿದೆನು. ನನ್ನ ತಮ್ಮನಿಗೆ ಬಲಗಾಲ ಮೊಣಕಾಲದ ಮೇಲ್ಭಾಗದ ತೊಡೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ನನ್ನ ತಾಯಿಗೆ ಎಡಭುಜಕ್ಕೆ ಮತ್ತು ಎಡ ರಟ್ಟೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದಿತ್ತು ಮತ್ತು ಬಲಗೈ ಹಾಗೂ ತುಟಿಯಲ್ಲಿ ರಕ್ತಗಾಯವಾಗಿತ್ತು. ಆಗ ಅಪಘಾತದ ಬಗ್ಗೆ ನನ್ನ ತಮ್ಮನಿಗೆ ಕೇಳಿದಾಗ ನಾನು ತಾಯಿಗೆ ಆಸ್ಪತ್ರೆಗೆ ತೋರಿಸಿಕೊಂಡು ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಯು 8354 ರ ಮೇಲೆ ಕರೆದುಕೊಂಡು ಊರಿಗೆ ಬರುತ್ತಿರುವಾಗ ಹಾಲಗೇರಾ ಸರಕಾರಿ ಪ್ರೌಢ ಶಾಲೆ ಹತ್ತಿರ ನನ್ನ ಮೋಟರ್ ಸೈಕಲ್ ಹಿಂದಿನ ಪಂಕ್ಚರ ಆಗಿದ್ದರಿಂದ ರೋಡಿನ ಎಡಗಡೆ ಪಕ್ಕದಲ್ಲಿ ಮಣ್ಣಿನ ಮೇಲೆ ನನ್ನ ಗಾಡಿಯನ್ನು ನಿಲ್ಲಿಸಿದಾಗ ಅದೇ ಸಮಯಕ್ಕೆ ಎದುರುಗಡೆಯಿಂದ ಬಂದ ದ್ವಿಚಕ್ರ ವಾಹನ ಪ್ಯಾಸನ ಪ್ರೋ ಸಂ. ಕೆಎ 33 ಕ್ಯೂ 3481 ರ ಸವಾರನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ವಾಹನವನ್ನು ಚಲಾಯಿಸಿಕೊಂಡು ರೋಡಿನ ಪಕ್ಕದಲ್ಲಿ ನಿಂತ ನಮಗೆ ಮತ್ತು ನಮ್ಮ ವಾಹನಕ್ಕೆ ಡಿಕ್ಕಿಪಡಿಸಿ, ಮೋಟರ್ ಸೈಕಲ್ ನೊಂದಿಗೆ ಸ್ವಲ್ಪ ಹೊತ್ತು ನಿಂತು ಆ ಕಡೆ ಈ ಕಡೆ ನೋಡಿ ಗಾಡಿ ಚಾಲು ಮಾಡಿಕೊಂಡು ಹೋದನು. ಅವನಿಗೆ ಮತ್ತು ಮೋಟರ್ ಸೈಕಲ್ ನೋಡಿದಲ್ಲಿ ಗುರುತಿಸುತ್ತೇನೆ ಎಂದು ಹೇಳಿದೆನು. ಕಾರಣ ಸದರಿ ಮೋಟರ್ ಸೈಕಲ್ ಪ್ಯಾಸನ ಪ್ರೋ ಕೆಎ 33 ಕ್ಯೂ 3481 ರ ಸವಾರನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಬಂದು ಅಪಘಾತಪಡಿಸಿ, ವಾಹನದೊಂದಿಗೆ ಪರಾರಿಯಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಗಾಯಾಳುಗಳಾದ ನನ್ನ ತಮ್ಮ ಮತ್ತು ತಾಯಿಗೆ ಹೆಚ್ಚಿನ ಚಿಕಿತ್ಸೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿ ನಾನು ಮತ್ತು ನನ್ನ ತಂದೆ ಹೆಚ್ಚಿನ ಚಿಕಿತ್ಸೆ ಕೊಡಿಸಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2021 ಕಲಂ:279,337,338 ಐಪಿಸಿ ಸಂ 187 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:- 30/2021 279, 337 338 ಐಪಿಸಿ : ದಿ:19/05/2021 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಆರೋಪಿತನು ಚಲಾಯಿಸುವ ಶಿಪ್ಟಿಂಗ್ ಟೇಲರ್ ಲಾರಿ ನಂ: ಎನ್.ಎಲ್-01 ಎ.ಡಿ-3400 ನೇದ್ದನ್ನು ಯಾಳಗಿ ತಾಂಡಾದಿಂದ ಕಕ್ಕೇರಿಗೆ ಹೋಗಿ ಹಿಟ್ಯಾಚಿಯನ್ನು ತೆಗೆದುಕೊಂಡು ಬರಲು ಹೊರಟು, ಹುಣಸಗಿ-ಕಕ್ಕೇರಾ ರಸ್ತೆಯ ಮಂಜಲಾಪೂರ ಹಳ್ಳಿ ದಾಟಿದ ಮೇಲೆ ತಿರುವಿಗೆ ಆರೋಪಿತನಾದ ಶೇಖರ ತಂದೆ ಬದ್ದು ಜಾಧವ ಸಾ:ಯಾಳಗಿ ತಾಂಡಾ ಈತನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ತಿರುವಿಗೆ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಲಾರಿಯನ್ನು ಪಲ್ಟಿ ಮಾಡಿದ್ದು, ಲಾರಿ ಡ್ಯಾಮೇಜ್ ಮಾಡಿದ್ದಲ್ಲದೆ, ಆರೋಪಿತನಿಗೂ ಸಹ ಎಡಗಾಲಿನ ಮೊಳಕಾಲ ಮೇಲೆ ಭಾರಿ ಒಳಪೆಟ್ಟಾಗಿದ್ದು, ಲಾರಿ ಕ್ಲೀನರನಾದ ರವಿ ತಂದೆ ರಾಮು ಈತನಿಗೆ ಸಣ್ಣಪುಟ್ಟ ಗಾಯಗಳಾದ ಬಗ್ಗೆ ಅಪರಾಧ.
ಗುರಮಿಠಕಲ್ ಪೊಲೀಸ್ ಠಾಣೆ :- 66/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 20.01.2021 ರಂದು ಬೆಳಿಗ್ಗೆ 10:00 ಸ|ತ|ಯಾಗಿ ಪಿರ್ಯಾಧಿ ಹಣಮಂತ ಎಎಸ್ಐ ಗುರುಮಠಕಲ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾಧಿ ಸಾರಾಂಶವೆಂದರೆ ಪಿರ್ಯಾಧಿಯು ದಿನಾಂಕ:20.05.2021 ರಂದು ಬೆಳೆಗ್ಗೆ 2:00 ಎಎಮ್ ಕ್ಕೆ ಲಾರಿ ನಂ|| ಟಿಎನ್-77 ಜಿ-6568 ನೇದ್ದರ ಚಾಲಕನು ಲಾರಿಯನ್ನು ಅತಿವೇಗ ಅಲಕ್ಷತನದಿಂದ ಚಾಲನೆ ಮಾಡಿ ಯಾದಗಿರಿ-ಗುರುಮಠಕಲ್ ಮುಖ್ಯ ರಸ್ತೆಯ ಮೇಲೆ ಧರ್ಮಪೂರ ಘಾಟ ಹತ್ತಿರ ಒಮ್ಮಲೇ ಕಟ್ ಮಾಡಿ ಘಾಟಿನ ನಲ್ಲಿ ಕಡೆವಿ ತನಗು ಮತ್ತು ಕ್ಲಿನರ್ ನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯ ಪಡಿಸಿ ಲಾರಿಯನ್ನು ಡ್ಯಾಮೇಜ್ ಮಾಡಿದ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:- 78/2021 ಕಲಂ. 188. 269, 270, ಐಪಿಸಿ ಮತ್ತು 5 (1) ಕನರ್ಾಟಕ ಸಾಂಕ್ರಮಿಕ ರೋಗ ತಡೆ ಕಾಯ್ದೆ 2020 : ದಿನಾಂಕ. 20.05.2021 ರಂದು ರಾತ್ರಿ 8.30 ಗಂಟೆಗೆ ಸ.ತಫರ್ೇ ಶ್ರೀ ಮಲ್ಲಕಾಜಪ್ಪ ತಂದೆ ಸುಭಾಸಚಂದ್ರ ವ|| 39 ವರ್ಷ ಜಾ|| ಲಿಂಗಾಯತ ಉ|| ಕಂದಾಯ ನಿರೀಕ್ಷಕರು ಬಳಿಚಕ್ರ ಹೊಬಳಿ ಇವರು ಠಾಣೆಗೆ ಬಂದು ನೀಡಿದ ದೂರು ಅಜರ್ಿ ಸಾರಾಂಶವೆನೆಂದರೆ, ದಿನಾಂಕ. 20.05.2021 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಾಗರಬಂಡಿ ಗ್ರಾಮದ ಸಾಬಯ್ಯ ತಂದೆ ಮರಗಣ್ಣ ಮರಗಯ್ಯನ್ನೋರ ವಯ|| 55 ವರ್ಷ, ಜಾ|| ಬೇಡರ ಉ|| ಒಕ್ಕಲುತನ ಸಾ|| ನಾಗರಬಂಡಾ ಮತ್ತು ಅತನ ಪತ್ನಿ ಶ್ರೀಮತಿ ಸಿದ್ದಲಿಂಗಮ್ಮ ಗಂಡ ಸಾಬಯ್ಯ ಇವರು ತಮ್ಮ ಮನೆಯ ಮುಂದೆ ತಮ್ಮ ಮಗನಾದ ಅಂಜಪ್ಪ ಈತನ ಮದುವೆಯನ್ನು ಜಿಲ್ಲಾಡಳಿತದ ಪರವಾನಿಗೆ ಇಲ್ಲದೇ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸದರಿ ಗ್ರಾಮಕ್ಕೆ ಇಂದು ದಿನಾಂಕ. 20.05.2021 ರಂದು ಮದ್ಯಾಹ್ನ 12-30 ಗಂಟೆಗೆ ನಾನು ಮತ್ತು ನನ್ನ ಸಂಗಡ ಲಕ್ಷ್ಮೀ ಗ್ರಾಮ ಲೆಕ್ಕಾಧಿಕಾರಿ ಎಲ್ಲರೂ ಸೇರಿ ಸ್ಥಳಕ್ಕೆ ಹೋದಾಗ ಅಷ್ಟರಲ್ಲಿ ಪಿ.ಡಿ.ಓ ರವರಾದ ಶಿವರಾಜ ಇವರು ಕೂಡ ಬಂದಿದ್ದು ನಾವೆಲ್ಲರೂ ಹೋಗಿ ನೋಡುವಷ್ಟರಲ್ಲಿ ಸದರಿ ಮೇಲ್ಕಂಡ ಸಾಬಯ್ಯ ಈತನು ತನ್ನ ಸಂಬಂಧಿಕರನ್ನು ಸೇರಿಸಿಕೊಂಡು ಮಗನ ಮದುವೆ ಮಾಡಿ, ಅಲ್ಲಿದ್ದ ಮದುವೆ ಸ್ಟೇಜನ್ನು ತೆಗೆಯುತ್ತಿರುವದು ಕಂಡು ಬಂದಿರುತ್ತದೆ. ನಮ್ಮ ಇಲಾಖೆಯಿಂದ ಕೊವೀಡ್-19, 2ನೇ ಅಲೆ ತಿವ್ರವಾಗಿ ಇರುವದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಮದುವೆ ಇತ್ಯಾದಿ ಜನರನ್ನು ಸೇರಿಸುವ ರೋಗವನ್ನು ಹರಡುವ ಕೆಲಸ ಮಾಡಬಾರದು ಅಂತಾ ಮಾನ್ಯ ತಹಶಿಲ್ದಾರರು ಯಾದಗಿರಿ ರವರ ಸಮಕ್ಷಮದಲ್ಲಿ ಮತ್ತು ಗ್ರಾಮ ಪಂಚಾಯಿತಿ ಪಿ.ಡಿ.ಒ ರವರ ಸಮಕ್ಷಮದಲ್ಲಿ ಸಭೆಯನ್ನು ಮಾಡಿ ಸಭೆಯಲ್ಲಿ ಊರಿನ ಜನರಿಗೆ ಸಭೆಯಲ್ಲಿ ತಿಳಿವಳಿಕೆ ನೀಡಿರುತ್ತೇವೆ ಮತ್ತು ಊರಲ್ಲಿ ಡಂಗೂರ ಸಾರಿದ್ದು ಅಲ್ಲದೇ ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ ನಾನು ಮತ್ತು ನಮ್ಮ ಗ್ರಾಮಲೇಕ್ಕಾಧಿಕಾರಿಯವರು ಕೂಡ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೆ ಗ್ರಾಮದಲ್ಲಿ ನಡೆಯದಂತೆ ನೋಡಿಕೊಂಡು ಬಂದಿರುತ್ತೇವೆ. ಆದರೂ ಕೂಡ ಸದರಿ ಮೇಲ್ಕಂಡ ಸಾಬಯ್ಯ ಈತನು ಏಕಾ ಏಕಿ ಜನರನ್ನು ಸೇರಿಸಿ ಮಗನ ಮದುವೆ ಮಾಡಿರುತ್ತಾನೆ. ಈಗ ಸದ್ಯ ಕೋವಿಡ್-19 2 ನೇ ಅಲೆ ಇದ್ದರೂ ಕೂಡ ಕೋವಿಡ್ ನಿಯಮ ಪಾಲಿಸದೆ ಮತ್ತು ಸಂಬಂಧಪಟ್ಟ ಇಲಾಖೆಯವರಿಂದ ಮದುವೆ ಮಾಡಲು ಅನುಮತಿಯನ್ನು ಪಡೆದುಕೊಳ್ಳದೆ ಜನರಿಗೆ ಕರೋನಾ ವೈರಸ್ ಕೋವಿಡ್-19 ರೋಗ ಹರಡುವ ಸಂಭವ ಇದ್ದರು ಅದನ್ನು ನಿರ್ಲಕ್ಷವಹಿಸಿ, ಪ್ರಾಣಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವ ಸಂಭವ ಇದ್ದರು ಸುಮಾರು ಜನರನ್ನು ಸೇರಿಸಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ: ಸಂ/ಕಂ/ದಂಡ/53/2019-2020 ದಿನಾಂಕ: 03-04-2021 ರಿತ್ಯಾ 188 ಐಪಿಸಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರೋನಾ ವೈರಸ್(ಕೋವಿಡ್-19) ಸ್ಪೋಟ ಮತ್ತು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡುವುದನ್ನು ಹಾಗೂ ಜನರು ಸಭೆ ಸಮಾರಂಭ ಯಾವುದೆ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸಿ, ವಿಧಿಸಿದ್ದು, ಈ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿರುತ್ತದೆ. ಕಾರಣ ಸದರಿ ಘಟನೆಗೆ ಕಾರಣನಾದ ಸಾಬಯ್ಯ ತಂದೆ ಮರಗಣ್ಣ ಮರಗಯ್ಯನ್ನೋರ ವಯ|| 55 ವರ್ಷ, ಜಾ|| ಬೇಡರ ಉ|| ಒಕ್ಕಲುತನ ಸಾ|| ನಾಗರಬಂಡಾ ಗ್ರಾಮ ಆತನ ಪತ್ನಿ ಶ್ರೀಮತಿ ಸಿದ್ದಲಿಂಗಮ್ಮ ಗಂಡ ಸಾಬಯ್ಯ ವಯ|| 50 ವರ್ಷ, ಜಾ|| ಬೇಡರ ಮತು ಆತನ ಮಗ ಅಂಜಪ್ಪ ತಂದೆ ಸಾಬಯ್ಯ ಹಾಗೂ ಸದರಿ ಮದುವೆ ಮಾಡಲು ಕಾರಣರಾದ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಅಂತ ದೂರು ನೀಡುತ್ತಿದ್ದು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ನಿಜವಿರುತ್ತದೆ. ಅಂತ ದೂರು ಸಾರಾಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 21-05-2021 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080