ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/02/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 26/2021 ಕಲಂ 379 ಐಪಿಸಿ (ಆಕ್ರಮ ಮರಳು) : ಇಂದು ದಿನಾಂಕ 20-02-2021 ರಂದು 11-30 ಗಂಟೆ ಸುಮಾರಿಗೆ ಫಿರ್ಯಾಧಿದಾರರು ತಮ್ಮ ಸಿಬ್ಬಂಧಿಯವರೊಂದಿಗೆ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯ ಹದ್ದಿಯಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿರುವಾಗ ಆರೋಪಿತನು ಯಾಧಗಿರಿ ಕಡೆಯಿಂದ ವಾಡಿ ಕಡೆಗೆ ತಮ್ಮ ಟಿಪ್ಪರ ನಂ: ಕೆ.ಎ-38/ಎ-3263 ನೆದ್ದರಲ್ಲಿ ಸಕರ್ಾರಕ್ಕೆ ರಾಯಲ್ಟಿ ಕಟ್ಟದೇ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸುತಿದ್ದಾಗ ದಾಳಿ ಮಾಡಿ ಹಿಡಿದು ಕಾನೂನು ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 27/2021 ಕಲಂ 406, 420 ಸಂ 34 ಐಪಿಸಿ : ಇಂದು ದಿನಾಂಕ 21/02/2021 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾಧಿದಾರನಾದ ಫಾಹೇದಅಹ್ಮದ ತಂದೆ ಅಬ್ದುಲ ಹಸನ ಬಾದಲ ವಯಾಃ 40 ವರ್ಷ ಜಾಃ ಮುಸ್ಲಿಮ್ ಉಃ ವ್ಯಾಪಾರ ಸಾಃ ಸ್ಟೇಸನ್ ಏರಿಯಾ ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರಪಡಿಸಿದ ಸಾರಾಂಶವೆನೆಂದರೆ ನಾನು ಫಾಹೇದಅಹ್ಮದ ತಂದೆ ಅಬ್ದುಲ ಹಸನ ಬಾದಲ ವಯಾಃ 40 ವರ್ಷ ಜಾಃ ಮುಸ್ಲಿಮ್ ಉಃ ವ್ಯಾಪಾರ ಸಾಃ ಸ್ಟೇಸನ್ ಏರಿಯಾ ಯಾದಗಿರಿ ಈ ಮೂಲಕ ಅಜರ್ಿ ಕೊಡುವುದೆನೆಂದರೆ ನಾನು ಯಾದಗಿರಿಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕಳೆದ 20 ವರ್ಷದಿಂದ ಮಿನಿ ಬಾದಲ ರೈಸ್ ಮಿಲ್ಲ ನಡೆಸಿಕೊಂಡು ಇದ್ದಿರುತ್ತೆನೆ, ನನ್ನ ರೈಸ್ ಮಿಲ್ಲದಿಂದ ಆಂದ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಅಕ್ಕಿಯನ್ನು ಬೇರೆ ಬೇರೆ ಟ್ರಾನ್ಸಪೋರ್ಟದಿಂದ ಕಳುಹಿಸುತ್ತಿದ್ದೆನು, ದಿನಾಂಕ 06/01/2021 ರಂದು ಸಾಯಂಕಾಲ 6-00 ಗಂಟೆಗೆ ಅಶೋಕ ರೋಡಲೈನ್ಸ ಒಂದು ಲಾರಿ ನಂ ಎಮ್.ಎಚ್.-18-ಬಿಎ-0625 ನೆದ್ದರ ಮಾಲೀಕನಾದ ನವಾಬಖಾನ ತಂದೆ ಅಕ್ರಮಖಾನ ಸಾಃ ಧರಂಪೂರಿ ಜಿಃ ಧಾರ ರಾಃ ಮಧ್ಯಪ್ರದೇಶ ಮೋ.ಮೋ.ನಂ 9753427823 ಹಾಗೂ 9098135776 ಅಂತಾಯಿದ್ದು, ಇತನ ಲಾರಿ ಚಾಲಕನಾದ ಹಕೀಮಖಾನ ನಮ್ಮ ರೈಸ್ ಮಿಲ್ಲದಿಂದ 10 ಮೇಟ್ರಿಕ ಟನ್ ಅಕ್ಕಿಯನ್ನು ನನ್ನ ಲೇಬರಗಳಾದ ನವಾಜ ತಂದೆ ಜಲಾಲ ಕಾಲೆ, ಜಾವೀದ ತಂದೆ ತೌಫಿಕ್, ಖಾದರ ತಂದೆ ಅಬ್ದುಲ್ಲಾ ಚಾಂದ, ಸೋಹೇಲ ತಂದೆ ಅಜೀಮ ಸಾಃ ಎಲ್ಲರೂ ಯಾದಗಿರಿ ಇವರ ಮುಖಾಂತರ ಲಾರಿಯಲ್ಲಿ ತುಂಬಿಸಿ ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಅಹೆಮದಪೂರ ನಗರಕ್ಕೆ ರಾಜವೀರ ಟ್ರೇಡಿಂಗ್ ಕಂಪನಿಗೆ ತಲುಪಿಸಲು ಕಳುಹಿಸಿರುತ್ತೆವೆ, ಆದರೆ ಲಾರಿ ಚಾಲಕನಾದ ಹಕೀಮಖಾನ ಇತನು ಅಹೆಮದಪೂರ ನಗರದಲ್ಲಿಯಿರುವ ರಾಜವೀರ ಟ್ರೇಡಿಂಗ್ ಕಂಪನಿಗೆ ತಲುಪಿಸದೆ ಮಧ್ಯಪ್ರದೇಶದಲ್ಲಿಯಿರುವ ತನ್ನ ಊರಾದ ಧರಂಪೂರಿ ಊರಿಗೆ ಒಯ್ದಿರುತ್ತಾನೆ, ತದನಂತರ ನಾನು ಪೋನ ಮೂಲಕ ಲಾರಿ ಮಾಲೀಕ ಮತ್ತು ಲಾರಿ ಚಾಲಕ ಇವರಿಬ್ಬರಿಗೆ ವಿಚಾರಿಸಲು ಪೋನ ಮಾಡಿದರೆ ಅವರು ಪೋನ ಕರೆ ಎತ್ತುತ್ತಿಲ್ಲ, ಲಾರಿ ಮಾಲೀಕ ಮತ್ತು ಲಾರಿ ಚಾಲಕ ಇಬ್ಬರೂ ಕೂಡಿಕೊಂಡು ನಾವು ಕಳುಹಿಸಿದ 3,30,600/ರೂ ಕಿಮ್ಮತ್ತಿನ 10 ಮೆಟ್ರಿಕ್ ಟನ್ ಅಕ್ಕಿಯ ಲೋಡನ್ನು ರಾಜವೀರ ಟ್ರೇಡಿಂಗ್ ಕಂಪನಿಗೆ ತಲುಪಿಸದೇ ನನಗೆ ಮೋಸ ಮಾಡಿ ನಂಬಿಕೆ ದ್ರೋಹವೇಸಗಿ ತನ್ನ ಸ್ವಂತ ಲಾಭದ ಸಲುವಾಗಿ ಈ ರೀತಿ ಮಾಡಿರುತ್ತಾರೆ, ನಾವು ರಾಜವೀರ ಟ್ರಾನ್ಸಪೋರ್ಟ ಪುನೆ ಇವರಿಗೆ ವಿಚಾರಣೆ ಮಾಡಿ ಮತ್ತು ಮಧ್ಯಪ್ರದೇಶದ ಮಾಲೀಕರ ಮನೆಗೆ ಹೋಗಿ ವಿಚಾರಣೆ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ, ಆದ್ದರಿಂದ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ವಿನಂತಿ ಇರುತ್ತದೆ, ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 27/2021 ಕಲಂ 406, 420 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 20/2021 ಕಲಂ, 341 323, 504, 506 ಸಂ 34 ಐಪಿಸಿ : ಇಂದು ದಿನಾಂಕ: 21.02.2021 ರಂದು 12:30 ಪಿ.ಎಮ್.ಕ್ಕೆ ಠಾಣೆಗೆ ಖುದ್ಗದಾಗಿ ಹಾಜರಾಗಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯ ತಂದೆಗೆಯು ತನ್ನ ಮೊದಲ ಹೆಂಡತಿಗೆ ಮಕ್ಕಳಾದ ನಂತರ ಪಿರ್ಯಾಧಿಗೆ ಮತ್ತು ಪಿರ್ಯಾಧಿಯ ತಾಯಿಗೆ ಆಸ್ತಿಯಲ್ಲಿ ಪಾಲು ಕೊಡದೇ ಮನೆಯಿಂದ ಹೊರಗೆ ಹಾಕಿದ್ದು. ಈಗ ಪಿರ್ಯಾಧಿಯು ತನ್ನ ತಂದೆಯಿಂದ ಆಸ್ತಿಯ ಪಾಲು ಬರಬೇಕಾಗಿದ್ದು ಪಿರ್ಯಾಧಿ ಮತ್ತು ಆತನ ತಾಯಿಗೆಯೊಂದಿಗೆ ಪಿರ್ಯಾಧಿಯ ತಂದೆಯ ಊರಾದ ಕಾಕಲವಾರಕ್ಕೆ ಇಂದು ದಿನಾಂಕ:21.02.2021 ರಂದು 10:00 ಎಎಮ್ ಕ್ಕೆ ಹೋಗಿ ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿದಕ್ಕೆ ಪಿರ್ಯಾಧಿಯ ತಂದೆ ಆತನ ಮೊದಲ ಹೆಂಡತಿ ಮಕ್ಕಳು ಸಿಟ್ಟಾಗಿ ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ಹೊಡೇಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ.

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 15/2021 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 21/02/2021 ರಂದು 06:00 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಹೊನ್ನಾಳ ಮುತ್ಯಾನ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 8.15 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 05 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 16,210/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ: 323, 354, 504, 506 ಸಂ.34 ಐಪಿಸಿ : ಇಂದು ದಿನಾಂಕ 21.02.2021 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆರೋಪಿ ಶಂಕ್ರಪ್ಪನ ಹೆಂಡತಿ ವಿಜಯಲಕ್ಷ್ಮಿ ಇವರು ಅರಕೇರಾ(ಕೆ) ಗ್ರಾಮದ ಸಿದ್ದಾರೂಢ ಮಠದಲ್ಲಿ ದೇವರ ದರ್ಶನ ಮಾಡಿಕೊಂಡು ಮರಳಿ ಬರುತ್ತಿದ್ದಾಗ ಆರೋಪಿತರಲ್ಲಿ ದೇವಮ್ಮ @ ದೇವಮಲ್ಲಮ್ಮ ಈಕೆ ಲೇ ಸೂಳಿ ನನ್ನ ತಮ್ಮನ ಹೆಂಡತಿ ವಿಜಯಲಕ್ಷ್ಮಿ ನಮ್ಮೊಂದಿಗೆ ಜಗಳ ಮಾಡಿಕೊಂಡು ಇದ್ದಾಳೆ ಅವಳಿಕೆ ನೀನು ರಾತ್ರಿ ಯಾಕೆ ಇರಾಕ ಜಾಗ ಕೊಟ್ಟಿದಿ ಅಂತಾ ಹೊಲಸು ಮಾತಿನಿಂದ ಬೈದಿದ್ದು, ಆರೋಪಿ ಶಂಕ್ರಪ್ಪ ಈತನು ಏ ಸೂಳಿ ನನ್ನ ಹೆಂಡತಿಗೆ ಇಲ್ಲಿಗೆ ಕರೆದುಕೊಂಡು ಬಂದು ಸೇರಿಸಿಕೊಂಡಿದಿ ಅಂತಾ ಹೇಳಿ ಕೈಯಿಂದ ಹಣೆಯ ಮೇಲೆ ಹೊಡೆದು ಜಾಡಿಸಿ ದೊಬ್ಬಿ ಕಾಲಿನಿಂದ ಒದ್ದನು. ಆಗ ವಿಜಯಲಕ್ಷ್ಮಿ ಬಿಡಿಸಲು ಬಂದಾಗ ಆರೋಪಿ ಅನಂತಮ್ಮಳು ಲೇ ಸೂಳೆ ಇನ್ನೊಮ್ಮೆ ವಿಜಯಲಕ್ಷ್ಮಿಗೆ ಸೇರಿಸಿಕೊಂಡರೆ ನಿನಗೆ ಜೀವ ಸಹಿತ ಬಿಡೊದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದ ಬಗ್ಗೆ ಫಿರ್ಯಾದಿದಾರಳು ತಡವಾಗಿ ಠಾಣೆಗೆ ಬಂದು ತನಗೆ ಕೈಯಿಂದ ಹೊಡೆ-ಬಡೆ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿದ್ದು ಅಲ್ಲದೇ ಹೊಲಸು ಮಾತಿನಿಂದ ಬೈದು ಜೀವದ ಬೆದರಿಕೆ ಹಾಕಿದ ಈ ಮೇಲ್ಕಂಡ ಆರೋಪಿತರ ಮೇಲೆ ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2021 ಕಲಂ: 323, 354, 504, 506 ಸಂ.34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 22/2021 ಕಲಂ: 323, 324, 504, 506 ಐಪಿಸಿ : ಇಂದು ದಿನಾಂಕ 21.02.2021 ರಂದು ಮಧ್ಯಾಹ್ನ 3;30 ಗಂಟೆಗೆ ಫಿರ್ಯಾದಿ ಮತ್ತು ಆತನ ತಾಯಿ ಹಾಗು ತಂಗಿ ಮೂರು ಜನರು ಮನೆಯ ಮುಂದೆ ಇದ್ದಾಗ ಫಿರ್ಯಾದಿಯ ತಂಗಿಯ ಗಂಡನಾದ ಆರೋಪಿತನು ಫಿರ್ಯಾದಿಯವರ ಮನೆಗೆ ಬಂದು ಅವಾಚ್ಯವಾಗಿ ಬೈದು ತಮ್ಮ ಹೆಂಡತಿಯನ್ನು ತನ್ನೊಂದಿಗೆ ಕಳುಹಿಸಿಕೊಂಡುವಂತೆ ಕೇಳಿದ್ದು ಅದಕ್ಕೆ ಫಿರ್ಯಾದಿಯು ನೀನು ಕುಡಿಯುವುದನ್ನು ಬಿಡು ಆಗ ಮಾತ್ರ ನಾನು ನನ್ನ ತಂಗಿಯನ್ನು ಕಳುಹಿಸಿಕೊಡುತ್ತೇನೆ ಅಂತಾ ಹೇಳಿದಕ್ಕೆ ಒಮ್ಮೆಲೆ ಕೊಪಗೊಂಡ ಆರೋಪಿತನು ಅಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ತಲೆಯ ಮೇಲೆ ಹೊಡೆದು ಸಾದಾ ಸ್ವರೂಪದ ರಕ್ತಗಾಯಗೊಳಿದ್ದು ಅಲ್ಲದೇ ಕೈಯಿಂದ ಪಕ್ಕೆಗೆ ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದುರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 22/2021 ಕಲಂ: 323, 324, 504, 506 ಐಪಿಸಿ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 26/2021 ಕಲಂ: 87 ಕೆಪಿ ಆಕ್ಟ : ಇಂದು ದಿನಾಂಕ: 21.02.2021 ರಂದು ಕರಡಕಲ್ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಸ್ಥಳಕ್ಕೆ ಹೋಗಿ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 04.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 09 ಜನ ಆರೋಪಿತರು ಸಿಕ್ಕಿದ್ದು ಮತ್ತು ಒಟ್ಟು 3800/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 05.30 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 08.00 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 26/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 22-02-2021 12:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080