Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/03/2021

ಕೆಂಭಾವಿ ಪೊಲೀಸ್ ಠಾಣೆ:- 40/2021 ಕಲಂ: 448, 307,326,504 ಸಂಗಡ 34 ಐಪಿಸಿ : ಇಂದು ದಿನಾಂಕ 21.03.2021 ರಂದು ಎಮ್ಎಲ್ಸಿ ಕರ್ತವ್ಯಕ್ಕೆ ಹೋದ ಶ್ರೀ ಶಂಭುರಾವ್ ಎಎಸ್ಐ ರವರು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿಯ ಗಾಯಾಳುದಾರರಾದ ಶ್ರೀ ಕರೆಪ್ಪ ತಂದೆ ಭೀಮರಾಯ ಪೂಜಾರಿ ವಯಾ|| 32 ಜಾ|| ಕುರುಬರ ಉ|| ಒಕ್ಕಲುತನ ಸಾ|| ಮಾವಿನಮಟ್ಟಿ ಇವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 7 ಪಿಎಮ್ಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಕೊಟ್ಟ ಹೇಳಿಕೆ ಸಾರಾಂಶವೇನೆಂದರೆ, ಪಿರ್ಯಾದಿ ಹಾಗೂ ಆರೋಪಿ ರಾಯಪ್ಪ ಟಣಕೇದಾರ ಇವರ ಹೊಲ ಆಜುಬಾಜು ಇದ್ದು ಹೊಲದ ನೀರು ತೆಗೆದುಕೊಳ್ಮ್ಳವ ವಿಚಾರದಲ್ಲಿ ಸುಮಾರು ದಿನಗಳಿಂದ ತಕರಾರು ನಡೆದು ಇಂದು ದಿನಾಂಕ: 21/03/2021 ರಂದು 1.40 ಎಎಮ್ಕ್ಕೆ ಪಿರ್ಯಾದಿ ತನ್ನ ಹೆಂಡತಿಯೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ಆರೋಪಿತರು ಪಿರ್ಯಾದಿಯ ಮನೆಗೆ ಬಂದವರೇ ಆರೋಪಿ ರವಿ ಟಣಕೇದಾರ ಹಾಗೂ ಅಂಬ್ರೇಶ ಟಣಕೇದಾರ ಇವರು ಬಾಗಿಲಲ್ಲಿ ನಿಂತಿದ್ದು ಆರೋಪಿ ರಾಯಪ್ಪ ಈತನು ಕೊಡಲಿ ತೆಗೆದುಕೊಂಡು ಮನೆಯ ಒಳಗೆ ಬಂದಾಗ ಬಾಗಿಲ ಸಪ್ಪಳ ಕೇಳಿ ಗಾಯಾಳು ಎಚ್ಚರವಾಗಿದ್ದಾಗ ಕೂಡಲೆ ಆರೋಪಿ ರಾಯಪ್ಪ ಟಣಕೇದಾರ ಈತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿರ್ಯಾದಿಯ ಎಡಗಾಲ ತೊಡೆಗೆ ಬಲವಾಗಿ ಕಡಿದು ಭಾರಿ ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿ ಬ್ಯಾಟಿ ಬಿತ್ತಲೆ ನಡೀರಿ ಅಂತ ಕೇಕೆ ಹಾಕಿ ಹೋಗಿದ್ದು ಕಾರಣ ಮೇಲ್ಸಾಣಿಸಿದ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 40/2021 ಕಲಂ 448, 307, 326, 504 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀಗುಡಿ ಪೊಲೀಸ್ ಠಾಣೆ:- 23/2021 ಕಲಂ 279, 338 ಐಪಿಸಿ : ದಿನಾಂಕ: 21/03/2021 ರಂದು 11.30 ಎ.ಎಮ್. ಸುಮಾರಿಗೆ ಫಿಯರ್ಾದಿಯ ಅಳಿಯ ಭೀಮಪ್ಪ ತಂದೆ ದೇವಿಂದ್ರಪ್ಪ ಮದ್ರಕಿ ಹಾಗು ಆತನ ಗೆಳೆಯ ನಾಗಪ್ಪ ಇಬ್ಬರು ಕೂಡಿ ಹೋತಪೆಟದಿಂದ ನಡೆದುಕೊಂಡು ಮಕ್ತಾಪೂರ ಕ್ರಾಸಿನ ಮರೆಮ್ಮ ಗುಡಿಯ ಹತ್ತಿರ ಇಂಗಳಗಿ ಕಡೆಗೆ ಬರುತ್ತಿದ್ದಾಗ ಆರೋಪಿತನು ತನ್ನ ಬಜಾಜ ಸಿಟಿ 100 ಮೋಟರ್ ಸೈಕಲ್ನ್ನು ಹೋತಪೇಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಭೀಮಪ್ಪ ಈತನಿಗೆ ಡಿಕಿಪಡಿಸಿದ್ದು ಸದರ ಅಪಘಾತದಲ್ಲಿ ಭೀಮಪ್ಪ ಈತನ ಎಡಗಾಲು ಮುರಿದಿದ್ದು ಇರುತ್ತದೆ ಅಂತ ವಗೈರೆ ದೂರು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 43/2021 ಕಲಂ 32, 34 ಕೆ.ಈ. ಕಾಯ್ದೆ : ಇಂದು ದಿನಾಂಕ 21/03/2021 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ಸಾಹೇಬರು ಠಾಣೆಗೆ ಬಂದು ವರದಿ, ಜಪ್ತಿ ಪಂಚನಾಮೆ, ಒಬ್ಬ ಆರೋಪಿ ಮತ್ತು ಮುದ್ದೆಮಾಲು ತಂದು ಹಾಜರಪಡಿಸಿದ್ದೆನೆಂದರೆ ಇಂದು ದಿನಾಂಕ 21/03/2021 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ ಶ್ರೀ ರಾಜು ಸಿ.ಹೆಚ್.ಸಿ-33 ಮತ್ತು ಜೀಪ ಚಾಲಕನಾದ ಶ್ರೀ ಭೀಮರಾಯ ಸಿಪಿಸಿ-33 ಎಲ್ಲರು ಹೊನಗೇರಾ ಗ್ರಾಮದಲ್ಲಿ ಇರುವಾಗ ರಾಮಸಮುದ್ರ ಗ್ರಾಮದ ಬೀಟ ಸಿಬ್ಬಂಧಿಯಾದ ನಮ್ಮ ಠಾಣೆಯ ಶ್ರೀ ಬಸರೆಡ್ಡಿ ಸಿ.ಹೆಚ್.ಸಿ-94 ರವರು ತಿಳಿಸಿದ್ದೆನೆಂದರೆ ಇಂದು ಬೀಟ ಜಾರಿ ಮಾಡಲು ಹೋದಾಗ ರಾಮಸಮುದ್ರ ಗ್ರಾಮದಲ್ಲಿ ಬಂಗಾರೆಪ್ಪ ತಂದೆ ಮಲ್ಲಯ್ಯ ಗುಂಜಲಪ್ಪನೊರ ಸಾಃ ರಾಮಸಮುದ್ರ ಇವನು ತನ್ನ ಮನೆಯಲ್ಲಿ ಕಲಬೆರಿಕೆ ಸೆಂದಿ ಸರಾಯಿ ತಯ್ಯಾರಿಸಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದೆ ಅಂತಾ ತಿಳಿಸಿದ್ದು, ನಂತರ ನಾನು ಮತ್ತು ನಮ್ಮ ಜೋತೆಗಿದ್ದ ಸಿಬ್ಬಂಧಿಯವರನ್ನು ಕರೆದುಕೊಂಡು ರಾಮಸಮುದ್ರ ಗ್ರಾಮಕ್ಕೆ ಹೋಗಿ ಅಲ್ಲಿ ರಾಮಸಮುದ್ರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತು ದಾಳಿ ಮಾಡುವ ಕುರಿತು ಇಬ್ಬರೂ ಪಂಚರರನ್ನಾಗಿ 1)ಶ್ರೀ ವಿಶ್ವನಾಥ ತಂದೆ ಶರಣಪ್ಪ ಬಡಿಗೇರ ಮತ್ತು 2)ಶ್ರೀ ವೆಂಕಟೇಶ ತಂದೆ ಹಣಮಂತ ದೂಗನೂರ ಸಾಃ ಇಬ್ಬರೂ ರಾಮಸಮುದ್ರ ಇವರನ್ನು ಬರಮಾಡಿಕೊಂಡು ಅವರಿಗೂ ಕೂಡಾ ನಾವು ಅಲ್ಲಿಗೆ ಹೋಗಿ ದಾಳಿ ಮಾಡುವುದಿದ್ದು ನೀವು ನಮ್ಮ ಜೋತೆಗೆ ಬಂದು ಜಪ್ತಿ ಪಂಚನಾಮೆಗೆ ಪಂಚರಾಗಿ ಸಹಕರಿಸಿಬೇಕು ಅಂತಾ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡರು, ನಂತರ ಸರಕಾರಿ ಜೀಪ ನಂಬರ ಕೆ.ಎ-33-ಜಿ-67 ನೆದ್ದರಲ್ಲಿ ಪಂಚರನ್ನು ನಮ್ಮ ಜೋತೆಯಲ್ಲಿ ಕರೆದುಕೊಂಡು ರಾಮಸಮುದ್ರ ಗ್ರಾಮದಲ್ಲಿ ಇರುವ ಬಂಗಾರೆಪ್ಪ ತಂದೆ ಮಲ್ಲಯ್ಯ ಗುಂಜಲಪ್ಪನೊರ ಅವನ ಮನೆ ಕಡೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸ್ವಲ್ಪ ಮುಂದುಗಡೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ತನ್ನ ಮನೆಯಲ್ಲಿ ಗಿರಾಕಿಗಳಿಗೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಾಯಂಕಾಲ 4-00 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡೆವು, ಸೇಂದಿ ಮಾರಾಟ ಮಾಡುತ್ತಿದ್ದ ಇಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ನಾನು ಹಿಡಿದುಕೊಂಡವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಂಗಾರೆಪ್ಪ ತಂದೆ ಮಲ್ಲಯ್ಯ ಗುಂಜಲಪ್ಪನೊರ ಸಾ: ರಾಮಸಮುದ್ರ ಅಂತಾ ತಿಳಿಸಿದನು, ಸದರಿಯವನು ಸೇಂದಿ ಮಾರಾಟ ಮಾಡಲಿಕ್ಕೆ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತಪಡಿಸಿಕೊಂಡು ಸೆಂದಿ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಚೆಕ್ಕ ಮಾಡಿ ನೋಡಲಾಗಿ ಅಲ್ಲಿ ಎರಡು ಪ್ಲಾಸ್ಟೀಕ ಬ್ಯಾರಲಗಳಲ್ಲಿ ಅಂದಾಜು 10 ಲೀಟರದಂತೆ 20 ಲೀಟರ ಸೇಂದಿ ಇದ್ದು, ಇದರ ಅಂದಾಜ ಕಿಮ್ಮತ್ತು 500/- ರೂಪಾಯಿ ಆಗಬಹುದು. ಈ ಸೆಂದಿಯನ್ನು ಪರಿಶೀಲಿಸಿ ನೋಡಲಾಗಿ ಯವುದೋ ಪೌಡರನಿಂದ ತಯ್ಯಾರಿಸಿದ ಕಲಬೆರಕೆ ಸೇಂದಿ ಇದ್ದು, ಸದರಿ ಸೇಂದಿಯನ್ನು ಜಪ್ತಿಪಡಿಸಿಕೊಂಡು ಠಾಣೆಯಲ್ಲಿಟ್ಟಲ್ಲಿ ಅದು ಕೆಟ್ಟು ಹೋಗುವ ಸಾಧ್ಯತೆ ಇರುವುದರಿಂದ ಸದರಿ ಎರಡು ಬ್ಯಾರಲಗಳ ಸೆಂದಿಯಲ್ಲಿ ಒಂದು ಲೀಟರದ ಎರಡು ಬಿಸಲೇರಿ ಪ್ಲಾಸ್ಟಿಕ್ ಬಾಟಲಗಳಲ್ಲಿ ಪ್ರತ್ಯೇಕವಾಗಿ ಸೇಂದಿಯನ್ನು ಸಂಗ್ರಹಿಸಿ ಅದಕ್ಕೆ ಪಿ.ಆರ್.ಎಸ್ ಎಂಬ ಇಂಗ್ಲೀಷ ಅಕ್ಷರವುಳ್ಳ ಅರಗಿನಿಂದ ಶೀಲು ಮಾಡಿ ಜಪ್ತಪಡಿಸಿಕೊಂಡು ಉಳಿದೆಲ್ಲಾ ಸೇಂದಿಯನ್ನು ಸ್ಥಳದಲ್ಲಿಯೇ ನಾಶಪಡಿಸಲಾಯಿತು. ಖಾಲಿಯಾದ ಎರಡು ಪ್ಲಾಸ್ಟಿಕ ಬ್ಯಾರಲಗಳು ಹಾಗೂ ಸೇಂದಿ ಹಾಕಿ ಮಾರಾಟ ಮಾಡಿದ ನಗದು ಹಣ 200/ರೂ ಜಪ್ತಿಪಡಿಸಿಕೊಳ್ಳಲಾಯಿತು. ಓಡಿಹೋದವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರ ಹೆಸರು ಯಲ್ಲಪ್ಪ ತಂದೆ ನಾಗಪ್ಪ ಗುಂಜಲಪ್ಪನೊರ ಸಾ: ರಾಮಸಮುದ್ರ ಮತ್ತು ಹಣಮಂತಿ ಗಂಡ ಕಾಶಪ್ಪ ಗುಂಜಲಪ್ಪನೊರ ಸಾಃ ರಾಮಸಮುದ್ರ ಅಂತಾ ಗೋತ್ತಾಯಿತು, ಸದರಿ ಪಂಚನಾಮೆಯನ್ನು ಇಂದು ದಿನಾಂಕ 21-03-2021 ರಂದು 4-00 ಪಿ.ಎಮ್ ದಿಂದ 5-00 ಪಿ.ಎಮ್ ದವರೆಗೆ ಸ್ಥಳದಲ್ಲಿಯೇ ಮಾಡಿ ಮುಗಿಸಲಾಯಿತು. ನಂತರ ಮರಳಿ ಠಾಣೆಗೆ 6-00 ಪಿ.ಎಂ. ಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ವರದಿ, ಜಪ್ತಿ ಪಂಚನಾಮೆ, ಒಬ್ಬ ಆರೋಪಿ ಮತ್ತು ಮುದ್ದೆಮಾಲುಗಳನ್ನು ಠಾಣಾಧಿಕಾರಿಗಳಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/2021 ಕಲಂ 32, 34 ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:- 58/2021 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:10/02/2021 ರಂದು7:15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗಸ.ತ ಫಿರ್ಯಾದಿ ಶ್ರೀ ಸಾಹೇಬಗೌಡಎಮ್ ಪಾಟೀಲ್ ಪಿಐ ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 07 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ: 21-03-2021 ರಂದು 4-15 ಪಿ.ಎಮ್. ಸುಮಾರಿಗೆಠಾಣೆಯಲ್ಲಿದ್ದಾಗಖಚಿತವಾದ ಮಾಹಿತಿ ಬಾತ್ಮಿ ಬಂದಿದ್ದೆನೆಂದರೆ ಸುರಪುರ ಪೊಲೀಸ್ಠಾಣಾ ವ್ಯಾಪ್ತಿಯಕವಡಿಮಟ್ಟಿಗ್ರಾಮದತಿಮ್ಮಯ್ಯನಗುಡಿಯ ಹಿಂದುಗಡೆಖುಲ್ಲಾಜಾಗದಲ್ಲಿ ಕೆಲವು ಜನರು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟುಜೂಜಾಟಆಡುತ್ತಿದ್ದಾರೆಅಂತಾಖಚಿತ ಮಾಹಿತಿ ಬಂದ ಮೇರೆಗೆಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ 1) ಶ್ರೀ ಮಂಜನಾಥ ಹೆಚ್ಸಿ-176, 2) ಶ್ರೀ ಮಂಜುನಾಥ ಪಿಸಿ-271, 3) ಶ್ರೀ ಬಸಪ್ಪ ಸಿಪಿಸಿ-393, 4) ಶ್ರೀ ದೇವಿಂದ್ರಪ್ಪ ಸಿಪಿಸಿ-184, 5) ಜಗದೀಶ್ ಸಿಪಿಸಿ-335, 6) ಸೋಮಯ್ಯ ಸಿಪಿಸಿ-235 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ 1) ಶ್ರೀ ದುರ್ಗಪ್ಪತಂದೆ ಸತ್ಯಪ್ಪ ನಾಯಕ ವಯಾ:24 ವರ್ಷಜಾ:ಬೇಡರ ಉ: ಒಕ್ಕಲುತನ ಸಾ:ಗುಡಿಹಾಳ (ಜೆ) ತಾ:ಸುರಪುರ 2) ಶ್ರೀ ಪ್ರಕಾಶತಂದೆ ಭೀಮಣ್ಣ ಬಾಕಲಿ ವಯಾ:29 ವರ್ಷಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ಗುಡಿಹಾಳ (ಜೆ) ತಾ:ಸುರಪೂರಇವರನ್ನು 4:45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು, ಸದರಿ ಪಂಚರೊಂದಿಗೆಎಲ್ಲರೂಕೂಡಿಠಾಣೆಯಿಂದ 5 ಪಿ.ಎಮ್. ಕ್ಕೆ ಸರಕಾರಿಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಹೊರಟು 5:30 ಪಿ.ಎಮ್.ಕ್ಕೆಕವಡಿಮಟ್ಟಿಗ್ರಾಮದತಿಮ್ಮಯ್ಯನಗುಡಿಯ ಹತ್ತಿರೆ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿತಿಮ್ಮಯ್ಯನಗುಡಿಯ ಹಿಂದುಗಡೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ನಿಂತುಕೊಂಡು ಹುಂಜಗಳ ಮೇಲೆ ಹಣವನ್ನು ಪಣಕ್ಕಿಟ್ಟು ಅವುಗಳ ಮೇಲೆ ಪಂದ್ಯಆಡುತ್ತಾಜೂಜಾಟವಾಡುತ್ತಿದ್ದದ್ದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 5:35 ಪಿ.ಎಮ್.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು07 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ನಿಂಗನಗೌಡತಂದೆ ಪರಮಣ್ಣಗೌಡ ಮಾಲಿ ಪಾಟೀಲ್ ವಯಾ:35 ವರ್ಷಜಾ:ಉಪ್ಪಾರ ಉ:ಹಮಾಲಿ ಕೆಲಸ ಸಾ:ಕವಡಿಮಟ್ಟಿತಾ:ಸುರಪೂರಈತನ ಹತ್ತಿರ 450/- ನಗದು ಹಣ ಸಿಕ್ಕಿದ್ದು 2) ಮುತ್ಯಪ್ಪತಂದೆದ್ಯಾವಣ್ಣಕೆಂಗೂರಿ ವಯಾ:28 ವರ್ಷಜಾ:ಕುರುಬರ ಉ:ಒಕ್ಕಲುತನ ಸಾ:ಕವಡಿಮಟ್ಟಿತಾ|| ಸುರಪುರಈತನ ಹತ್ತಿರ 400/- ನಗದು ಹಣ ಸಿಕ್ಕಿದ್ದು 3) ಬಲಭೀಮತಂದೆಕಾಮಣ್ಣಕೆಂಗೂರಿ ವಯಾ:30 ವರ್ಷಜಾ:ಕುರುಬರ ಉ:ಒಕ್ಕಲುತನ ಸಾ:ಕವಡಿಮಟ್ಟಿತಾ:ಸುರಪೂರಈತನ ಹತ್ತಿರ 370/- ನಗದು ಹಣ ಸಿಕ್ಕಿದ್ದು, 4) ಮಲ್ಲಪ್ಪತಂದೆ ಭೀಮಣ್ಣಖಾನಾಪೂರ ವಯಾ:25 ವರ್ಷಜಾ:ಕುರುಬರ ಉ:ಒಕ್ಕಲುತನ ಸಾ:ಕವಡಿಮಟ್ಟಿತಾ:ಸುರಪೂರಈತನ ಹತ್ತಿರ 350/- ನಗದು ಹಣ ಸಿಕ್ಕಿದ್ದು, 5) ವೆಂಕಟೇಶತಂದೆ ನಾಗಪ್ಪಕೆಂಗೂರಿ ವಯಾ:35 ವರ್ಷಜಾ:ಕುರುಬರ ಉ:ಒಕ್ಕಲುತನ ಸಾ:ಕವಡಿಮಟ್ಟಿತಾ:ಸುರಪೂರಈತನ ಹತ್ತಿರ 380/- ನಗದು ಹಣ ಸಿಕ್ಕಿದ್ದು, 6) ಶಂಕ್ರೆಪ್ಪತಂದೆದುರ್ಗಪ್ಪ ಸತ್ಯಪ್ಪನವರ ವಯಾ:40 ವರ್ಷಜಾ:ಬೇಡರ ಉ:ಡ್ರೈವರ ಸಾ:ಗುಡಿಹಾಳ(ಜೆ) ತಾ:ಸುರಪೂರಈತನ ಹತ್ತಿರ 400/- ನಗದು ಹಣ ಸಿಕ್ಕಿದ್ದು, 7) ಹಣಮಂತತಂದೆ ಲಕ್ಷ್ಮಣರೂಡಿ ವಯಾ:45 ವರ್ಷಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ಗುಡಿಹಾಳ(ಜೆ) ತಾ:ಸುರಪೂರಈತನ ಹತ್ತಿರ 450/- ನಗದು ಹಣ ಸಿಕ್ಕಿದ್ದು, ಹೀಗೆ ಒಟ್ಟು ನಗದು ಹಣ 2,800=00 ಹಾಗೂ ಕಣದಲ್ಲಿ 3 ಹುಂಜಗಳು ಇದ್ದು ಅವುಗಳ ಅ.ಕಿ 600/-ರೂ ಮತ್ತು 3 ಕತ್ತಿಗಳು ಅ.ಕಿ 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು. ಸದರಿಜಪ್ತಿ ಪಂಚನಾಮೆಯನ್ನು 5:35 ಪಿ.ಎಮ್ ದಿಂದ 6:35 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 7 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ 7:15 ಪಿ.ಎಂ ಕ್ಕೆ ಬಂದುತಮ್ಮ ವಶಕ್ಕೆ ಒಪ್ಪಿಸುತ್ತಿದ್ದರಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 59/2021 ಕಲಂ 87 ಕೆ.ಪಿ. ಕಾಯ್ದೆ : ದಿನಾಂಕ: 21/03/2021 ರಂದು 9-15 ಎ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸಾಹೇಬರು 13 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:21/03/2021 ರಂದು 6:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರುಕ್ಮಾಪೂರ ಗ್ರಾಮದ ಶ್ರೀ ಬನಶಂಕರಿ ದೇವಿ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್.ಸಿ-105, 3) ಶ್ರೀ ಮಂಜುನಾಥ ಸಿಪಿಸಿ-271 4) ಕುಮಾರ ಕಾಂಬಳೆ ಸಿಪಿಸಿ-139 5) ಮಹಾದೇವ ಸಿಪಿಸಿ-126 6) ಬಸವರಾಜ ಸಿಪಿಸಿ-336 7) ದೇವೀಂದ್ರಪ್ಪ ಸಿಪಿಸಿ-184 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ಸೋಮಶೇಕರ ತಂದೆ ಸಿದ್ದಪ್ಪ ಗೋಗಿ ವಯಾ:59 ವರ್ಷ ಜಾ:ನೇಕಾರ ಉ:ನೇಕಾರಿಕೆ ಸಾ:ರುಕ್ಮಾಪೂರ ತಾ:ಸುರಪೂರ 2) ಬಸವರಾಜ ತಂದೆ ಕೊಟ್ರೆಪ್ಪ ಹೈಯಾಳ ವಯಾ:50 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ರುಕ್ಮಾಪೂರ ತಾ|| ಸುರಪುರ ಇವರನ್ನು 6:45 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 7 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 7:30 ಪಿ.ಎಂ ಕ್ಕೆ ರುಕ್ಮಾಪೂರ ಗ್ರಾಮದ ಶ್ರೀ ಬನಶಂಕರಿ ದೇವಿ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಬನಶಂಕರಿ ದೇವಿ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:35 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 13 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಅಮರಪ್ಪ ತಂದೆ ಬಸಣ್ಣ ಜಗಶೆಟ್ಟಿ ವ|| 43 ವರ್ಷ ಜಾ|| ಲಿಂಗಾಯತ ಉ|| ಕೂಲಿ ಕೆಲಸ ಸಾ|| ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಮಜೀದ್ ತಂದೆ ವಜೀರಸಾಬ್ ಖುರೇಶಿ ವ|| 48 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಸ ಸಾ|| ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 3) ತಿರುಪತಿ ತಂದೆ ಶರಣಪ್ಪ ದೋರನಳ್ಳಿ ವ|| 34 ವರ್ಷ ಜಾ|| ಉಪ್ಪಾರ ಉ|| ಕೂಲಿ ಸಾ|| ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 650/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಭೀಮಣ್ಣ ತಂದೆ ಕೊಟ್ರೆಪ್ಪ ಗೋಡೆಕಾರ ವ|| 31 ವರ್ಷ ಜಾ|| ಅಂಬಿಗೇರ ಉ|| ಒಕ್ಕಲುತನ ಸಾ|| ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಸಂಗಮೇಶ ತಂದೆ ತಿಪ್ಪಣ್ಣ ಹೂವಿನಡಗಿ ವಯಾ|| 24 ವರ್ಷ ಜಾ|| ಅಂಬಿಗೇರ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಸಿದ್ದಪ್ಪ ತಂದೆ ನಿಂಗಪ್ಪ ಬಡಿಗೇರ ವಯಾ|| 25 ವರ್ಷ ಜಾ|| ಅಂಬಿಗೇರ ಉ|| ಕೂಲಿ ಸಾ|| ರುಕ್ಮಾಪೂರ ತಾ|| ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 800/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಅಂಬ್ರೇಶ ತಂದೆ ಮಲ್ಲಪ್ಪ ಕವಲಿ ವಯಾ|| 31 ವರ್ಷ ಜಾ|| ಬೇಡರ ಉ|| ಡ್ರೈವರ ಸಾ|| ರುಕ್ಮಾಪೂರ ತಾ|| ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮುದ್ದುರಾಯ ತಂದೆ ಬಸಪ್ಪ ಪೂಜಾರಿ ವಯಾ|| 50 ವರ್ಷ ಜಾ:ಜಾಡರು ಉ:ಕೂಲಿ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 9) ನಾಗಪ್ಪ ತಂದೆ ಚನ್ನಪ್ಪ ಪೂಜಾರಿ ವಯಾ:35 ವರ್ಷ ಜಾ:ದೇವಾಂಗ ಉ:ಅರ್ಚಕ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 250- ರೂಗಳು ವಶಪಡಿಸಿಕೊಳ್ಳಲಾಯಿತು. 10) ಅಶೋಕ ತಂದೆ ಗೆದ್ದಪ್ಪ ಧರಣಿ ವಯಾ:48 ವರ್ಷ ಜಾ:ದೇವಾಂಗ ಉ:ಕೂಲಿ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 11) ಸುರೇಶ ತಂದೆ ಬಸಪ್ಪ ಬಡಗಾ ವಯಾ:40 ವರ್ಷ ಜಾ:ದೇವಾಂಗ ಉ: ಕೂಲಿ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 800/- ರೂಗಳು ವಶಪಡಿಸಿಕೊಳ್ಳಲಾಯಿತು. 12) ಗಂಗಾಧರ ತಂದೆ ನಾಗಪ್ಪ ಚಿಲ್ಲಾಳ ವಯಾ:55 ವರ್ಷ ಜಾ:ಸಾಳೇರ ಉ: ಕೂಲಿ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 13) ವೆಂಕಟೇಶ ತಂದೆ ಭೀಮಣ್ಣ ಹೂವಿನಡಗಿ ವಯಾ:60 ವರ್ಷ ಜಾ:ಅಂಬಿಗೇರ ಉ:ಕೂಲಿ ಸಾ:ರುಕ್ಮಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 6130/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 15,130/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:35 ಪಿ.ಎಮ್ ದಿಂದ 8:35 ಎ.ಎಮ್ ವರೆಗೆ ಗುಡಿಯ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 13 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 46/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 62/2021 ಕಲಂ 87 ಕೆ.ಪಿ ಆಕ್ಟ್ : ಇಂದು ದಿನಾಂಕ 21/03/2021 ರಂದು, ರಾತ್ರಿ 10-45 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ ಪಿ.ಎಸ್.ಐ(ಅವಿ) ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 21/03/2021 ರಾತ್ರಿ 22-00 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಗರ(ಬಿ) ಗ್ರಾಮದ ತಿರುಪತಿ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಲೈಟಿನ ಬೆಳಕಿನಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಠಾಣೆಯ ಎನ್.ಸಿ ನಂಬರ 17/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ರಾತ್ರಿ 22-30 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಜೂಜಾಟ ಆಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿ ಅಂತ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 62/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ. ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 6 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 10,200=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿರುತ್ತದೆ.

Last Updated: 22-03-2021 11:30 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080