ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22-05-2021

ಯಾದಗಿರ ನಗರ ಪೊಲೀಸ್ ಠಾಣೆ :- 58/2021 ಕಲಂ 32, 34 ಕೆ.ಇ ಆಕ್ಟ್ : ಇಂದು 21/05/2021 ರಂದು ಮಧ್ಯಾಹ್ನ 01-00 ಗಂಟೆಗೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ [ಕಾ.ಸು] ರವರು ಠಾಣೆಗೆ ಬಂದು ಒಬ್ಬ ಆರೋಪಿ ಮತ್ತು ಮುದ್ದೆ ಮಾಲು ನೀಡಿ, ಜಪ್ತಿಪಂಚನಾಮೆ ಹಾಗೂ ಒಂದು ಜ್ಞಾಪನ ಪತ್ರ ನೀಡಿದ ಸಾರಾಂಶವೇನೆಂದರೆ, ಇಂದು ದಿನಾಂಕ 21/05/2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿ ಇದ್ದಾಗ ಯಾದಗಿರಿ ನಗರದ ಬಂಡಿಗೇರಾದ ಗಂಗಾಜೀನ್ ರೈಸ್ ಮಿಲ್ ಹತ್ತಿರ ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ, ಕೂಡಲೆ ನಾನು ಇಬ್ಬರು ಪಂಚರನ್ನು ಠಾಣೆಗೆ ಬರ ಮಾಡಿಕೊಂಡು, ನಾನು ಹಾಗೂ ಸಿಬ್ಬಂದಿಜನರಾದ ಸಾಬರೆಡ್ಡಿ ಪಿ.ಸಿ 379, ಜಗನಾಥರೆಡ್ಡಿ ಹೆಚ್.ಸಿ 10 ಹಾಗೂ ಇಬ್ಬರು ಪಂಚರು ಕೂಡಿ ಠಾಣೆಯಿಂದ 11-15 ಎ.ಎಂ ಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಬಂಡಿಗೇರಾಕ್ಕೆ ಹೋರಟು ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಮುಂದೆ ಅಲ್ಲಿಂದ ನಡೆದುಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಗಂಗಾಜೀನ್ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಕುಳಿತುಕೊಂಡು ತನ್ನ ಹತ್ತಿರ ಇದ್ದ ಕೈಚೀಲದಲ್ಲಿಂದ ಮಧ್ಯಪಾನ ಕ್ವಾರ್ಟರ್ ಬಾಟಲಿಗಳನ್ನು ತೆಗೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಅವನಿಂದ ಖರೀಧಿಸಿಕೊಂಡು ಹೋಗುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಇಂದು 11-30 ಎ.ಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸುರೇಶ ತಂದೆ ಬಾಲಯ್ಯ ಪೋಲಂಪಲ್ಲಿ ವಯಾ 46 ವರ್ಷ, ಜಾ|| ಇಳಿಗೇರ ಉ|| ಹೊಟೇಲ್ದಲ್ಲಿ ಕೆಲಸ ಸಾ|| ಬಂಡಿಗೇರಾ ಯಾದಗಿರಿ ಅಂತಾ ತಿಳಿಸಿದನು. ಸದರಿ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಕೈಚೀಲದಲ್ಲಿ ಮಧ್ಯಪಾನದ ಬಾಟಲಿಗಳಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಎಣಿಕೆ ಮಾಡಿ ನೋಡಲಾಗಿ 1) ಓರಿಜಿನಲ್ ಚಯಿಸ್ ವಿಸ್ಕಿಯ 180 ಎಮ್.ಎಲ್.ನ ಒಟ್ಟು 43 ಪೌಚುಗಳು, ಒಂದಕ್ಕೆ 70.26/- ರೂ|| ಗಳು, ಹೀಗೆ ಒಟ್ಟು 7740/ ಎಮ್.ಎಲ್ ಇದ್ದು, ಅದರ ಒಟ್ಟು ಬೆಲೆ 3021/- ರೂಪಾಯಿಗಳು. ಸದರಿಯವುಗಳಲ್ಲಿಯ ಒಂದು ರಾಸಾಯನಿಕ ಪರೀಕ್ಷೆ ಕುರಿತು 1) ಒಂದು 180 ಎಮ್.ಎಲ್.ದ ಓರಿಜಿನಲ್ ಚಾಯಿಸ್ ವ್ಹಿಸ್ಕಿ ಪೌಚ್, ಪ್ರತ್ಯೇಕ ಪಡೆದುಕೊಂಡು ಪಂಚರ ಸಮಕ್ಷಮ ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಅದರ ಮೇಲೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಅದರ ಮೇಲೆ ಙಖಿ ಅಂತಾ ಅರಗಿನಿಂದ ಸೀಲ್ ಮಾಡಿ ಮುದ್ದೆಮಾಲನ್ನು ಜಪ್ತಿಪಡಿಸಿಕೊಳ್ಳಲಾಯಿತು. ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 21/05/2021 ರಂದು ಬೆಳಿಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ಲ್ಯಾಪಟಾಪದಲ್ಲಿ ಟೈಪ ಮಾಡಿ ಮುಗಿಸಿದ್ದು ಇರುತ್ತದೆ. ನಂತರ ಒಬ್ಬ ಆರೋಪಿ ಮತ್ತು ಒಟ್ಟು ಮುದ್ದೆ ಮಾಲಿನೊಂದಿಗೆ ಠಾಣೆಗೆ 01-00 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ಜ್ಞಾಪನಾ ಪತ್ರವನ್ನು ಒಪ್ಪಿಸುತ್ತಿದ್ದು ತಾವು ಸದರಿ ಸುರೇಶ ತಂದೆ ಬಾಲಯ್ಯನ ಈತನ ವಿರುದ್ದ ಮುಂದಿನ ಕ್ರಮಕೈಕೊಳ್ಳಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ 58/2021 ಕಲಂ 32, 34 ಕೆ.ಇ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 23-05-2021 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080