ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/03/2021

ಗೋಗಿ ಪೊಲೀಸ್ ಠಾಣೆ:- 22/2021 279,337, 338, 304(ಎ) ಐಪಿಸಿ : ಇಂದು ದಿನಾಂಕ: 22/03/2021 ರಂದು 07.10 ಎಎಮ್ ಕ್ಕೆ ಅಜರ್ಿದಾರ ಶ್ರೀ. ಶ್ರೀ. ಹಣಮಂತ ತಂದೆ ಯಂಕಪ್ಪ ರಾಠೋಡ ವಯಾ:45 ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ: ಗೋಗಿ ಕೆ ಯುಕೆಪಿ ಕ್ಯಾಂಪ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:21/03/2021 ರಂದು ನನ್ನ ಮಗಳ ಗಂಡನಾದ ರಾಜು ತಂದೆ ನಾಗಪ್ಪ ರಾಠೋಡ ಸಾ; ಗೋಗಿ ಕೆ ಈತನು ತನ್ನ ಮಗನಾದ ಗಣೇಶ ತಂದೆ ರಾಜು ರಾಠೋಡ ವ: 05 ವರ್ಷ ಮತ್ತು ನನ್ನ ಸಣ್ಣ ಮಗನಾದ ರಾಜು ತಂದೆ ಹಣಮಂತ ರಾಠೋಡ ವ:16 ವರ್ಷ ಇಬ್ಬರನ್ನು ಕರೆದುಕೊಂಡು ಕರಕಳ್ಳಿ ರೋಡಿನ ಹತ್ತಿರ ಇರುವ ಬಾವಿಗೆ ಈಜಾಡಲು ಅಂತಾ ತನ್ನ ಮೋಟಾರ ಸೈಕಲ ನಂ: ಕೆಎ-33-ಎಲ್-6336 ನೇದ್ದರ ಮೇಲೆ ಕರೆದುಕೊಂಡು ಹೊಗಿದ್ದನು. ನಂತರ ಸಾಯಂಕಾಲ ಈಜಾಡಿ ಮರಳಿ ಮನೆಗೆ ಬರುವಾಗ ಅಂದಾಜು ಸಮಯ 05.45 ಪಿಎಂ ಸುಮಾರಿಗೆ ಶಹಾಪೂರ-ಸಿಂದಗಿ ಮೇನ್ ರೋಡಿನ ಗಂಗಾ ರೈಸ್ ಮಿಲ್ ಸಮೀಪ ಇರುವ ಹಳ್ಳದ ಬ್ರಿಡ್ಜ ಹತ್ತಿರ ರೋಡಿನಲ್ಲಿ ನನ್ನ ಮಗನಾದ ರಾಜು ವಯಾ: 16 ವರ್ಷ ಈತನು ಕುಳಿತು ಹೊರಟಿದ್ದ ಸದರಿ ನಮ್ಮ ಅಳಿಯನಾದ ರಾಜು ತಂದೆ ನಾಗಪ್ಪ ರಾಠೋಡ ವಯಾ:28 ವರ್ಷ ಈತನು ನಡೆಸುತ್ತಿದ್ದ ಮೋಟಾರ್ ಸೈಕಲ ನಂ: ಕೆಎ-33-ಎಲ್-6336 ನೇದ್ದಕ್ಕೆ ಒಂದು ಕ್ರೂಜರ ವಾಹನ ಚಾಲಕ ಡಿಕ್ಕಿ ಮಾಡಿ ಅಪಘಾತ ಮಾಡಿದ್ದಾನೆ ಅಂತಾ ಸುದ್ದಿ ತಿಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಲಲಿತಾಬಾಯಿ ಗಂಡ ಹಣಮಂತ ರಾಠೊಡ, ನನ್ನ ಇನ್ನೊಬ್ಬ ಮಗನಾದ ವೆಂಕಟೇಶ ತಂದೆ ಹಣಮಂತ ಎಲ್ಲರೂ ಸ್ಥಳಕ್ಕೆ ಹೋಗಿ ನೋಡಲಾಗಿ, ಸ್ಥಲದಲ್ಲಿ ಘಟನೆಯನ್ನು ನೋಡಿದ ರಾಮು ತಂದೆ ರಾಯಪ್ಪ ರಾಠೊಡ ಸಾ: ಗಂಗೂನಾಯ್ಕ ತಾಂಡಾ, ಮತ್ತು ಯಮನಪ್ಪ ತಂದೆ ದುಂಡಪ್ಪ ರಾಠೋಡ ಸಾ; ಯಡ್ರಾಮಿ ತಾಂಡಾ ಇವರುಗಳು ಇದ್ದು, ವಿಚಾರಿಸಿಲಾಗಿ ನಮ್ಮ ಅಳಿಯ ರಾಜು ತಂದೆ ನಾಗಪ್ಪ ಈತನು ತನ್ನ 05 ವರ್ಷದ ಮಗ ಗಣೇಶ ಈತನಿಗೆ ತನ್ನ ಮುಂದೆ ಕೂಡಿಸಿಕೊಂಡು, ತನ್ನ ಹಿಂದೆ ಬಾವಿ ಹತ್ತಿರ ಒಬ್ಬನೆ ಇದ್ದ ಮಹೇಶ ತಂದೆ ಚಂದಪ್ಪ ಏಗಣ್ಣಗೋಳ ವಯಾ: 10 ವರ್ಷ ಎಂಬ ಹುಡುಗನಿಗೆ ಮನೆಗೆ ಕರೆದುಕೊಂಡು ಬಂದರಾಯಿತು ಅಂತಾ ಕೂಡಿಸಿಕೊಂಡು ಕೋನೆಯಲ್ಲಿ ಹಿಂದೆ ನನ್ನ ಮಗನಾದ ರಾಜು ತಂದೆ ಹಣಮಂತ ವಯಾ:16 ವರ್ಷ ಈತನಿಗೆ ಕೂಡಿಸಿಕೊಂಡು ಗೋಗಿ ಕಡೆಗೆ ಬರುತ್ತಿದ್ದಾಗ ಎದರುಗಡೆಯಿಂದ ಅಂದರೆ, ಶಹಾಪುರ ಕಡೆಯಿಂದ ಒಂದು ಕ್ರೂಜರ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ನನ್ನ ಮಗನು ಹಿಂದೆ ಕುಳಿತು ಹೊರಟಿದ್ದ ಮೋಟಾರ ಸೈಕಲ್ಕ್ಕೆ ಕ್ರೂಜರ ವಾಹನ ಚಾಲಕ ಡಿಕ್ಕಿ ಪಡೆಸಿದ ಪರಿಣಾಮವಾಗಿ ಮೋಟಾರ್ ಸೈಕಲ ಮೇಲೆ ಬರುತ್ತಿದ್ದ ಹುಡುಗರು ಮತ್ತು ರಾಜು ತಂದೆ ನಾಗಪ್ಪ ಎಲ್ಲರು ಕೆಳಗೆ ಬಿದ್ದಿದ್ದಾರೆ ತಾವು ಘಟನೆಯನ್ನು ನೋಡಿ ಎಲ್ಲರಿಗೂ ಎಬ್ಬಸಿ ಕೂಡಿಸಿದ್ದಾಗಿ ಮತ್ತು ಅಂಬೂಲೆನ್ಸ ಗೆ ಯಾರೋ ಪೋನ ಮಾಡಿದ್ದು ಬರುತ್ತಿದೆ ಅಂತಾ ತಿಳಿಸಿದರು, ನಾನು ನನ್ನ ಹೆಂಡತಿ, ನನ್ನ ಮಗ ವೆಂಕಟೇಶ ಎಲ್ಲರೂ ನೋಡಲಾಗಿ, ಅಪಘಾತ ಮಾಡಿದ ಕ್ರೂಜರ ವಾಹನ ಅಲ್ಲೆ ರೋಡಿನಲ್ಲಿ ನಿಂತಿದ್ದು, ಅದರ ನಂ: ಕೆಎ-37-3777 ಅಂತಾ ಇದ್ದು ಅದರ ಚಾಲಕನು ಅಲ್ಲೆ ಇದ್ದು ಅವನಿಗೆ ವಿಚಾರಿಸಿದಾಗ ತನ್ನ ಹೆಸರು ಶಿವಪುತ್ರ ತಂದೆ ರಾಯಪ್ಪ ಮ್ಯಾಗಿನಮನಿ ವಯಾ: 50 ಸಾ: ರಬ್ಬನಳ್ಳಿ ತಾ: ಶಹಾಪೂರ ಅಂತಾ ತಿಳಿಸಿದನು. ನನ್ನ ಮಗನಿಗೆ ನೋಡಲಾಗಿ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಆಗಿ ಎಡಗಡೆ ಮೇಲಿಕಿಗೆ ಮತ್ತು ಎಡ ಕಪಾಳಕ್ಕೆ ಭಾರಿ ಗುಪ್ತಗಾಯವಾಗಿ ತರಚಿದಂತೆ ಆಗಿರುತ್ತದೆ, ಹೊಟ್ಟೆಗೆ, ಪಕ್ಕಡಿಗೆ ಮತ್ತು ಕೈಗಳಿಗೆ ಅಲಲ್ಲಿ ಹಾಗೂ ಎಡಗಾಲಿನ ಹಿಮ್ಮಡಿ ಹತ್ತಿರ ತರಚಿದಗಾಯಗಳು ಆಗಿದ್ದವು, ನಮ್ಮ ಅಳಿಯನ ಮಗನಾದ ಗಣೇಶ ವಯಾ:5 ವರ್ಷ ಈತನಿಗೆ ತಲೆಗೆ ಗುಪ್ತಗಾಯ ಮತ್ತು ಪೆಟ್ಟಾಗಿ ತರಚಿದಂತೆ ಆಗಿದ್ದು, ಮೂಗಲ್ಲಿ ರಕ್ತಸ್ರಾವ ಆಗಿತ್ತು, ನಮ್ಮ ಅಳಿಯ ರಾಜು ತಂದೆ ನಾಗಪ್ಪ ರಾಠೋಡ ಈತನಿಗೆ ತಲೆಗೆ ಒಳಪೆಟ್ಟಾಗಿದ್ದು, ತಲೆಯ ಬಲಗಡೆ ತರಚಿದ ಗಾಯ ಆಗಿತ್ತು, ನಮ್ಮ ಅಳಿಯನು ಈಜಾಡುವ ಬಾವಿ ಹತ್ತಿರ ನಿಂತಿದ್ದ ಒಂದು ಹುಡಗನನ್ನು ಮನೆಗೆ ಕರೆದುಕೊಂಡು ಬಂದರಾಯಿತು ಅಂತಾ ಕರೆದುಕೊಂಡು ಬಂದ ಮಹೇಶ ತಂದೆ ಚಂದಪ್ಪ ಏಗಣಗೋಳ ವ:10 ವರ್ಷ ಈತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅಷ್ಟರಲ್ಲಿ ಅಂಬೂಲೆನ್ಸ ವಾಹನ ಬಂದಿದ್ದು, ಎಲ್ಲರಿಗೂ ಅದರಲ್ಲಿ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದವು. ನಂತರ ನನ್ನ ಮಗನಾದ ರಾಜು ತಂದೆ ಹಣಮಂತ ರಾಠೊಡ 16 ವರ್ಷ ಈತನಿಗೆ ಮತ್ತು ನನ್ನ ಮಗಳ ಮಗನಾದ ಗಣೇಶ ತಂದೆ ರಾಜು ರಾಠೊಡ ವಯಾ: 05 ವರ್ಷ ಇವರಿಗೆ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಅಂತಾ ಕಲಬುರಗಿಯ ಯುನೈಟೆಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ಅಲ್ಲಿ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಅಂದಾಜು 09.20 ಪಿಎಂ ಸುಮಾರಿಗೆ ನನ್ನ ಮಗನಾದ ರಾಜು ಈತನು ಮೃತಪಟ್ಟಿದ್ದಾಗಿ ತಿಳಿಸಿದರು, ನಾವು ನಮ್ಮ ಮಗನ ಶವವನ್ನು ಇಂದು ದಿನಾಂಕ: 22/03/2021 ರಂದು ಬೆಳಗಿನ 01.00 ಎಎಂ ಸುಮಾರಿಗೆ ಶಹಾಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಗೆ ತಂದು ಇರಿಸಿರುತ್ತೇವೆ. ಕಾರಣ ನನ್ನ ಮಗನಾದ ರಾಜು ತಂದೆ ಹಣಮಂತ ರಾಠೊಡ ವಯಾ:16 ವರ್ಷ ಈತನ ಸಾವಿಗೆ ಕಾರಣನಾದ ಕ್ರೂಜರ ವಾಹನ ನಂ: ಕೆಎ-37-3777 ನೇದ್ದರ ಚಾಲಕ ಶಿವಪುತ್ರ ತಂದೆ ರಾಯಪ್ಪ ಮ್ಯಾಗಿನಮನಿ ವಯಾ: 50 ಸಾ: ರಬ್ಬನಳ್ಳಿ ತಾ: ಶಹಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ಮಾನ್ಯರವರಲ್ಲಿ ವಿನಂತಿ. ಆಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 22/2021 ಕಲಂ, 279, 337, 338, 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 41/2021 ಕಲಂ: 78() ಕೆ.ಪಿ. ಆಕ್ಟ್ : ನಿನ್ನೆ ದಿನಾಂಕ 22.03.2021 ರಂದು ಮಧ್ಯಾಹ್ನ 2:30 ಗಂಟೆಗೆ ಗುರುಮಠಕಲ್ ಪಟ್ಟಣದ ಐ.ಬಿ ಯ ಮುಂದಿನ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 07/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-124 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 05:00 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 5:30 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2050/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 22.03.2021 ರಂದು ಸಮಯ ಸಂಜೆ 6:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-110 ಗುರುಮಠಕಲ್ ಠಾಣೆ ಗುನ್ನೆ ನಂಬರ 41/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 42/2021 ಕಲಂ 379 ಐಪಿಸಿ : ಇಂದು ದಿನಾಂಕ 22.03.2021 ರಂದು ಫಿರ್ಯಾದಿದಾರರು ರಾತ್ರಿ 08:20 ಗಂಟೆಗೆ ವೃತ್ತ ಕಛೇರಿಯಲ್ಲಿದ್ದಾಗ ಯಂಪಾಡ ಕಡೆಯಿಂದ ಗುರುಮಠಕಲ ಕಡೆಗೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ದಾಳೀ ಕುರಿತು ಹೋಗಿ ರಾತ್ರಿ 09:00 ಗಂಟೆಗೆ ರಾಂಪೂರ ಕ್ರಾಸನಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯವರೋಂದಿಗೆ ದಾಳಿ ಮಾಡಿದಾಗ ಕಾಲಂ ನಂ. 08 ರಲ್ಲಿಯ ಮರಳು ತುಂಬಿದ ಟ್ರ್ಯಾಕ್ಟ್ರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ್ ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮ ಪೂರೈಸಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ರಾತ್ರಿ 10:30 ಗಂಟೆಗೆ ಠಾಣೆಗೆ ಬಂದು ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನ ವಿರುದ್ದ ಹಾಗೂ ಟ್ರ್ಯಾಕ್ಟರನ ಮಾಲೀಕನ ವಿರುದ್ದ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 42/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:- 60/2021 ಕಲಂಃ 143,147 323,354,504,506 ಸಂ.149 ಐಪಿಸಿ : ದಿನಾಂಕ:22/03/2021 ರಂದು 5-30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ದೇವಿಕ್ಕೆಮ್ಮ ಗಂಡ ರಂಗಪ್ಪ ನಾಯ್ಕೋಡಿ ವಯಾ:55 ವರ್ಷ ಉ:ಹೊಲ ಮನೆ ಕೆಲಸ ಜಾತಿ:ಬೇಡರ ಸಾ:ಹಾಲಬಾವಿ ತಾ:ಸುರಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:18-03-2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಗಂಡನಾದ ರಂಗಪ್ಪ ಇಬ್ಬರು ಮನೆಯ ಮುಂದಿನ ಕಟ್ಟೆಯ ಮೇಲೆ ಲೈಟಿನ ಕಂಬದ ಬೆಳಕಿನಲ್ಲಿ ಮಾತನಾಡುತ್ತಾ ಕುಳಿತಿರುವಾಗ ಅದೇ ಸಮಯಕ್ಕೆ ನಮ್ಮೂರ 1) ಶರಣಪ್ಪ ತಂದೆ ದೇವಿಂದ್ರಪ್ಪ ಬಿರೆದಾರ ಶರಪ್ಪನ ತಂದೆಯಾದ 2) ದೇವಿಂದ್ರಪ್ಪ ತಂದೆ ಪರಮಣ್ಣ ಬಿರೆದಾರ ಶರಣಪ್ಪನ ದೊಡ್ಡಪ್ಪನ ಮಗನಾದ 3) ಬಸನಗೌಡ ತಂದೆ ಪರಮಣ್ಣ ಬಿರೆದಾರ ಹಾಗೂ ಶರಣಪ್ಪನ ತಮ್ಮಂದಿರರಾದ 4) ಆನಂದ ತಂದೆ ದೇವಿಂದ್ರಪ್ಪ ಬಿರೆದಾರ 5) ಪರಮಣ್ಣ ತಂದೆ ದೇವಿಂದ್ರಪ್ಪ ಬಿರೆದಾರ ಶರಣಪ್ಪನ ಕಾಕನಾದ 6) ಬಾಲಯ್ಯಾ ತಂದೆ ಪರಮಣ್ಣ ಬಿರೆದಾರ ಇವರೆಲ್ಲರೂ ಕೂಡಿ ಬಂದವರೆ ನಮ್ಮ ಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಹಾಯ್ದು ಹೋಗಿದ್ದ ಸಾರ್ವಜನಿಕ ನೀರಿನ ಕಬ್ಬಿಣ ಪೈಪನ್ನು ಮಿಸೆನದಿಂದ ಕಟ್ಟ ಮಾಡುತ್ತಿರುವಾಗ ನಾವು ಅವರಿಗೆ ನೀರಿನ ಪೈಪನ್ನು ಕಟ್ಟ ಮಾಡಬೇಡಿರಿ ಎಲ್ಲಾ ಓಣಿಯವರಿಗೆ ನೀರಿನ ತೊಂದರೆಯಾಗುತ್ತದೆ ಮುಂದೆ ನೀರು ಹೋಗುವದಿಲ್ಲ ಅಂತಾ ತಿಳುವಳಿಕೆ ಮಾತು ಹೇಳಿದಾಗ ಆಗ ಅವರು ನೀವ್ಯಾರು ಕೇಳವರು ಸುಳೇ ಮಕ್ಕಳೆ ಇದು ಸರಕಾರಿ ನಳ ಇದೆ ನಾವೇನಾದರೂ ಮಾಡುತ್ತೆವೆ ಅಂತಾ ಹೇಳಿ ಪುನ: ಕಟ್ಟ ಮಾಡುತ್ತಿರುವಾಗ ನನ್ನ ಗಂಡ ರಂಗಪ್ಪನು ಅವರ ಹತ್ತಿರ ಹೋಗಿ ಕಟ್ಟ ಮಾಡಬೇಡಿರಪಾ ಸಾರ್ವಜನಿಕರಿಗೆ ನೀರಿನ ತೊಂದರೆ ಆಗುತ್ತದೆ ಅಂತಾ ಪುನ: ಹೇಳಿದಾಗ ಅವರಲ್ಲಿಯ ಶರಣಪ್ಪನು ಎನೋಲೆ ಸುಳೆ ಮಗನೆ ಅಂತಾ ಅಂದವನೆ ನನ್ನ ಗಂಡನನ್ನು ತೆಕ್ಕೆಯಲ್ಲಿ ಹಿಡಿದುಕೊಂಡು ಎತ್ತಿ ನೆಲಕ್ಕೆ ಹಾಕಿದನು ಆಗ ನನ್ನ ಗಂಡ ಸತ್ತೆಪ್ಪನೊ ಅಂತಾ ಕೆಳಗೆ ಬಿದ್ದು ಹೊರಳಾಡುತ್ತಿರುವಾಗ ಉಳಿದವರೆಲ್ಲರೂ ಅವನಿಗೆ ಕಾಲಿನಿಂದ ಹೊಟ್ಟೆಗೆ ಎದೆಗೆ ಒದೆಯುತ್ತಿರುವಾಗ ಬಿಡಿಸಲು ಹೋದ ನನಗೆ ಶರಣಪ್ಪನು ನನ್ನ ಕೈ ಹಿಡಿದು ಎಳೆದಾಡಿದವನೆ ನನ್ನ ಸೀರೆ ಸೆರಗು ಹಿಡಿದು ಜಗ್ಗಾಡಿ ಅವಮಾನ ಮಾಡಿ ನುಕಿಸಿಕೊಟ್ಟು ನನ್ನ ಗಂಡನಿಗೆ ಎಲ್ಲರೂ ಹೊಡೆ ಬಡೆ ಮಾಡುತ್ತಿರುವಾಗ ಆಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ನಮ್ಮ ತಮ್ಮಂದಿರರಾದ ಮಾನಯ್ಯಾ ತಂದೆ ದ್ಯಾವಪ್ಪ ದೊರಿ, ಸಂಗಯ್ಯಾ ತಂದೆ ದ್ಯಾವಪ್ಪ ದೊರಿ, ಹಾಗೂ ಮಾವನ ಮಗನಾದ ಮಲ್ಲಪ್ಪ ತಂದೆ ಚಂದಪ್ಪ ನಾಯ್ಕೋಡಿ, ಹಾಗೂ ಅಣ್ಣನಾದ ಚಂದಪ್ಪ ತಂದೆ ಬೀಮಣ್ಣ ಇವರು ಬಂದ ಜಗಳವನ್ನು ನೋಡಿ ಬಿಡಿಸಿದರು ಆಗ ಅವರು ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತಾರೆ. ಅಂದು ರಾತ್ರಿಯಾಗಿದ್ದರಿಂದ ಮರುದಿವಸ ಬೆಳಿಗ್ಗೆ ಸುರಪೂರ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡ ರಂಗಪ್ಪನಿಗೆ ಉಪಚಾರ ಮಾಡಿಸಿದ್ದು ಇರುತ್ತದೆ. ನಮಗೆ ಏನು ತೊಚದೆ ಇರುವದರಿಂದ ನಾವು ಊರಿಗೆ ಹೋಗಿದ್ದು, ನನ್ನ ಗಂಡನ ನಾನು ವಿಚಾರ ಮಾಡಿ ಇಂದು ತಡವಾಗಿ ದೂರು ನಿಡಿದ್ದು ಇರುತ್ತದ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :-. ಯು.ಡಿ.ಆರ್ ನಂ 12/2021 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 22/03/2021 ರಂದು 10:30 ಎ..ಎಂ ಕ್ಕೆ ಪಿರ್ಯಾದಿ ನಾಗರತ್ನ ಗಂಡ ತಿಪ್ಪಣ್ಣ ಶಹಾಪೂರಕರ ವ|| 35 ವರ್ಷ, ಜಾ|| ಒಕ್ಕಲುತನ, ಜಾ|| ಲಿಂಗಾಯತ, ಸಾ|| ಬೇವಿನಳ್ಳಿ ( ಜೇ), ತಾ|| ಶಹಾಪೂರ, ಇದ್ದು, ನಾವೂ ನನ್ನ ಗಂಡಗೆ ಇಬ್ಬರೂ ಹೆಂಡತಿಯವರು ಇದ್ದು, ನಾನು ಮತ್ತು ನಮ್ಮ ಅಕ್ಕ ಶಶೀಕಲ್ ವ|| 40 ವರ್ಷ ಇಕೇಗೆ ಒಂದು ಹೆಣ್ಣು ಮಗುವಿದ್ದು ಅಂಕಿತಾ ವ|| 12 ವರ್ಷ, ನನಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ಚೇತನ 6 ವರ್ಷ, ಚಿಂತನ ವ|| 4 ವರ್ಷವಿದ್ದು, ನಾವೂ ಒಕ್ಕಲುತನ ಕೆಲಸಮಾಡಿಕೊಂಡು ಎಲ್ಲರೂ ಒಟ್ಟಿಗೆ ಇದ್ದ ಜೀವನ ನಡೆಸುತ್ತಿದ್ದೇವು, ನನ್ನ ಗಂಡ ನಮಗೆ ಪಿತ್ರಾಜರ್ಿತವಾಗಿ ಬಂದು ಸವರ್ೇ ನಂ. 154/2 2 ಎಕರೆ ಹೋಲದಲ್ಲಿ, ಮತ್ತು ನಮ್ಮ ಸಂಬಂದಕರ ನಿಂಗಣ್ಣ ತಂದೆ ಶರಣಪ್ಪ ಇವರ ಹೋಲವನ್ನು ಲೀಜಗೆ ಹಾಕಿಕೊಂಡು ಒಕ್ಕಲುತನ ಕೆಲಸಮಾಡಿಕೊಂಡು ಇದ್ದು. ಸದರ ನನ್ನ ಗಂಡ ತಿಪ್ಪಣ್ಣ ಈತನು ನಮ್ಮ ಹೋಲದ ಲಾಗಲಿಗಾಡಿಗೆ ಮತ್ತು ಸಂಸಾರ ಅಡಚಣೆ ಗೋಸ್ಕರ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ ನೇದ್ದರಲ್ಲಿ 60,000/- ರೂ ಸಾಲ, ವಿ.ಎಸ್.ಎಸ್ ಬ್ಯಾಂಕನಲ್ಲಿ 15,000/-, ವಿಸ್ತಾರ ಪೈನಾಸ್ಸ 8,50,000/-, ಬಜಾಜ ಪೈನಾನ್ಸ 4,00,000/-ರೂ ಮತ್ತು ಊರಲ್ಲಿ ಅಲ್ಲಿ ಇಲ್ಲಿ ಕೈ ಗಡ 5,00,000/- ಸಾಲ ಮಾಡಿದ್ದು ಇರುತ್ತದೆ, ಸದರ ಸಾಲದ ವಿಚಾರವಾಗಿ ಮನಸ್ಸಿಗೆ ಬಹಳ ಹಚ್ಚಿಕೊಂಡಿದ್ದು, ಬಹಳ ಚಿಂತೆ ಮಾಡುತ್ತಾ ಇದ್ದು, ನಾವೂ ಪ್ರತಿ ಸಲ ಸಮದಾನ ಮಾಡುತ್ತಿದ್ದೇವು, ಈ ವರ್ಷ ಇಲ್ಲ, ಮುಂದಿನ ವರ್ಷ ಫಸಲು ಚನ್ನಾಗಿ ಬಂದರೆ, ಕೊಟ್ಟರಾಯಿತು, ಇಲ್ಲಾ ದುಡಿದು ತೀರಿಸದರಾಯಿತು ಎಂದು ಹೇಳುತ್ತಿದ್ದೇವು, ಹೀಗಿದ್ದು ದಿನಾಂಕ 21/03/2021 ರಂದು ನಾನು ಮತ್ತು ನನ್ನ ಗಂಡ ತಿಪ್ಪಣ್ಣ, ನಮ್ಮಕ್ಕ ಶಶೀಕಲ, ಮತ್ತು ನಮ್ಮ ಅಕ್ಕನ ಮಗ ಅಂಬ್ರೇಶ ತಂದೆ ಮಾನಪ್ಪ, ಎಲ್ಲರೂ ಕೂಡಿ ಊಟಾ ಮಾಡಿದ್ದು, ನನ್ನ ಗಂಡ ತಿಪ್ಪಣ್ಣ ನಾನು ಮತ್ತು ಅಂಬ್ರೇಶ ಈತನು ನಾವೂ ಹೋಲದ ಮನೆಗೆ ಹೋಗಿ ಮಲಗುತ್ತೆವೆ. ಅಂತಾ ಹೇಳಿ ಹೋಗಿದ್ದು ಇರುತ್ತದೆ, ನಂತರ ದಿನಾಂಕ 22/03/2021 ರಂದು ಬೇಳಗ್ಗೆ 8:00 ಎ.ಎಂ ಕ್ಕೆ ನಾನು ಮನೆಯಲ್ಲಿದ್ದಾಗ, ಅಂಬ್ರೇಶ ಈತನು ಫೋನ ಮಾಡಿ ತಿಳಿಸಿದ್ದೆನಂದರೆ, ನಾನು ಮತ್ತು ಮಾವ ತಿಪ್ಪಣ್ಣ ಇಬ್ಬರೂ ಕೂಡ ಹೋಲಕ್ಕೆ ಹೋಗಿ ಹೋಲದ ಮನೆಯಲ್ಲಿ ಟಿ.ವಿ ನೋಡುತ್ತಾ 12:00 ಗಂಟೆ ವರೆಗೆ ಕುಳಿತ್ತಿದ್ದು ಇದನ್ನು ನೋಡಿದ ನಮ್ಮ ಮಾವ ತಿಪ್ಪಣ ಈತನು, ಏಕೆ ನಿದ್ದೆ ಬಂದಿಲ್ವಾ ಎಂದು ಬೆದರಿಸಿ, ನಿದ್ದೆಮಾಡು ಹೋಗು ಅಂತಾ ತಿಳಿಸಿದ್ದು ನಾನು ರಾತ್ರಿ 03:00 ಗಂಟೆ ನೋಡಿದಾಗ ಸದರಿ ತಿಪ್ಪಣ್ಣ ಈತನು ನನ್ನ ಪಕ್ಕದಲಿ ಮಲಗಿದ್ದು, ನಂತರ ನಾನು ದಿನಾಂಕ 22/03/2021 08:00 ಎ.ಎಂ ಕ್ಕೆ ಎದ್ದು ಬಯಲಿಗೆ ಮಲ ವಿಷರ್ಜನೆ ಕುರಿತು ಹೋದಾಗ ಸದರಿ ನಮ್ಮ ಮಾವ ತಿಪ್ಪಣ್ಣ ಈತನ ಹೋಲದಲ್ಲಿ ಮಲಗಿದ ಹಾಗೆ ಕಂಡು ಬಂದಿದ್ದು, ನಾನು ಹತ್ತಿರ ಹೋಗಿ ನೋಡಲಾಗಿ, ಬಾಯಿಯಲ್ಲಿ ಬುರಗ ಬಂದಿದ್ದು, ಕ್ರೀಮಿನಾಶಕ ಎಣ್ಣೇ ವಾಸನೆ ಬರುತ್ತಾ ಇತ್ತು, ಕ್ರೀಮಿನಾಶಕ ವಿಷ ಸೇವೆನ ಮಾಡಿ ಮೃತಪಟ್ಟಿದ್ದು ಇರುತ್ತದೆ ಅಂತಾ, ತಿಳಿಸಿದ್ದ ಕೂಡಲೇ, ನಾನು ಮತ್ತು ನಮ್ಮ ಅಕ್ಕ, ಶಶೀಕಲ, ನಮ್ಮ ಸಂಬಂದಿಕರಾ ಗಣಪತಿ ತಂದೆ ಬಸವರಾಜ, ಶರಣಪ್ಪ ತಂದೆ ನಿಂಗಪ್ಪ ಶಹಾಪೂರದರ, ಹಣಮಂತ ತಂದೆ ದ್ಯಾವಪ್ಪ ನಾಯ್ಕೋಡಿ, ಎಲ್ಲರೂ ಕೂಡ ಹೋಗಿ ನೋಡಲಾಗಿ ನನ್ನ ಗಂಡ ತಿಪ್ಪಣ್ಣ ಸಾಲಬಾದೆಯಿಂದ ಕ್ರೀಮಿನಾಶಕ ವಿಷ ಸೇವನೆ ಮಾಡಿ ಮೃತಪಟ್ಟಿದ್ದು, ಇರುತ್ತದೆ. ಕಾರಣ ನನ್ನ ಗಂಡ ತಿಪ್ಪಣ್ಣ ತಂದೆ ಸಿದ್ದಲಿಂಗಪ್ಪ ಶಹಾಪೂರದವರು, ವ|| 47 ವರ್ಷ, ಜಾ|| ಲಿಂಗಾಯತ, ಉ|| ಒಕ್ಕಲುತನ ಸಾ|| ಬೇವಿನಳ್ಳಿ (ಜೆ) ಈತನು ದಿನಾಂಕ 22/03/2021 ರಂದು 03:00 ಎ.ಎಂ ದಿಂದ 08:00 ಎ.ಎಂದ ಮದ್ಯದೋಳಗೆ ಸಾಲಬಾದೆಯಿಂದ ಜಿಗುಪ್ಸೆಗೊಂಡು ಮೃತಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಶಯ ವಗೇರಾ ಇರುವದಿಲ್ಲಾ, ಅಂತಾ ಹೇಳಿ ಟೈಪ ಮಾಡಿಸಿದ ನಿಜವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 12/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 23-03-2021 11:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080