ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/02/2021

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 11/2021 ಕಲಂ 279, 337, 338 ಐಪಿಸಿ : ದಿನಾಂಕ.21.01.2021 ರಂದು ಸಾಯಂಕಾಲ 4-15 ಗಂಟೆಗೆ ಸರಕಾರಿ ಅಸ್ಪತ್ರೆ ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿಯರ್ಾದಿ ಹುಸೇನಸಾಬ ತಂದೆ ಕಾಶಿಮಸಾಬ ಈತನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ. 21.01.2021 ರಂದು ಮಧ್ಯಾಹ್ನ ಫಿಯರ್ಾದಿ ಸೇರಿ ಒಟ್ಟು 8 ಜನರು ಅಟೋ ನಂ. ಕೆ.ಎ-33 ಎ-4315 ನೇದ್ದರಲ್ಲಿ ಬದ್ದೆಪಲ್ಲಿ ಮತ್ತು ಬಾಲಚೇಡ ಗ್ರಾಮಕ್ಕೆ ಹೊರಟಾಗ ಅಟೋ ಚಾಲಕನು ರಾಚನಳ್ಳಿ ಗ್ರಾಮ ದಾಟಿದ ಮೇಲೆ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಾಚನಳ್ಳಿ ಹಳ್ಳದ ಹತ್ತಿರ ರೋಡಿನ ಮೇಲೆ ಅಟೋವನ್ನು ಕಟ್ ಮಾಡಿದ್ದರಿಂದ ಅಟೋ ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಬಿದ್ದು ಅಪಘಾತ ಸಂಭವಿಸಿರುತ್ತದೆ. ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಬೆನ್ನಿಗೆ ಭಾರಿ ಗುಪ್ತಗಾಯವಾಗಿ, ಬಲಗೈಗೆ ತೆರಚಿದ ರಕ್ತಗಾಯವಾಗಿರುತ್ತದೆ, ಅಟೋದಲ್ಲಿದ್ದ ಅಂಬರಿಬಾಯಿ ಗಂಡ ಶರಣಪ್ಪ ಬದ್ದೇಪಲ್ಲಿ ತಾಂಡಾ ಇವಳಿಗೆ ತಲೆಗೆ ಭಾರಿ ರಕ್ತಗಾಯ, ಸರೋಜಮ್ಮ ಗಂಡ ತಾಯಪ್ಪ ಬದ್ದೇಪಲ್ಲಿ ಇವಳಿಗೆ, ಬಲಗಡೆ ಭುಜಕ್ಕೆ ಭಾರಿ ಗುಪ್ತಗಾಯ, ಮಿಥುನ ತಂದೆ ಶರಣಪ್ಪ ಬದ್ದೇಪಲ್ಲಿ ತಾಂಡಾ ಇವನಿಗೆ ಬಲಗೈ ಮೊಣಕೈ ಹತ್ತಿರ ಭಾರಿ ರಕ್ತಗಾಯ, ಇಂದಿರಾ ಗಂಡ ಆಂಜನೇಯ ಬದ್ದೇಪಲ್ಲಿ ಗ್ರಾಮ ಇವಳಿಗೆ ಹಣೆಗೆ ರಕ್ತಗಾಯವಾಗಿದ್ದು, ಯಲ್ಲಪ್ಪ ತಂದೆ ಹಣಮಂತ ಬಾಲಚೇಡ ಇವನಿಗೆ ತಲೆಗೆ, ಕುತ್ತಿಗೆಗೆ ಒಳಪೆಟ್ಟು, ಪವರ್ಿನ ಬೇಗಂ ಗಂಡ ಹುಸೇನಸಾಬ ಬಾಲಚೇಡ ಇವಳಿಗೆ ತಲೆಗೆ ಒಳಪೆಟ್ಟು, ರಾಜಾಬಿ ತಂಡ ಅಬ್ದುಲ್ ಘನಿ ಬಾಲಚೇಡ ಇವಳಿಗೆ ತಲೆಗೆ ಎದೆಗೆ ಒಳಪೆಟ್ಟಾಗಿದ್ದು ಅಟೋ ಚಾಲಕ ಅಬ್ಬಾಸ ಅಲಿ ಈತನಿಗೆ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.11/2021 ಕಲಂ.279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪ್ರಥಮ ವರ್ತಮಾನ ವರದಿಯನ್ನು ಈಗಾಗಲೆ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿದ್ದು ದಿನಾಂಕ: 23.02.2021 ರಂದು ಸದರಿ ಪ್ರಕರಣದಲ್ಲಿನ ಗಾಯಳು ಯಲ್ಲಪ್ಪ ತಂದೆ ಹಣಮಂತ ವಯ|| 46 ವರ್ಷ, ಸಾ|| ಬಾಲಚೇಡ ಇವರ ತಂದೆಯಾದ ಹಣಮಂತ ತಂದೆ ಹಣಮಂತ ಬಾಂಬೆ ವ|| 65 ವರ್ಷ ಜಾ|| ವಡ್ಡರ ಉ|| ಮನೆನಿಗರಾಣಿ ಸಾ|| ಬಾಲಚೇಡ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿ ದಿನಾಂಕ. 21.01.2021 ರಂದು ಅಟೋ ಪಲ್ಟಿಯಾದ ವೇಳೆಯಲ್ಲಿ ಅಟೋದಲ್ಲಿದ್ದ ನನ್ನ ಮಗ ಯಲ್ಲಪ್ಪ ತಂದೆ ಹಣಮಂತ ವಯ||46 ವರ್ಷ ಈತನಿಗೆ ತಲೆಗೆ ಮತ್ತು ಕುತ್ತಿಗೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಕುತ್ತಿಗೆಯ ನರಕ್ಕೆ ಪೆಟ್ಟಾಗಿದ್ದರಿಂದ ಬಲಗೈ ಮತ್ತು ಬಲಗಾಲುಗಳು ಶಕ್ತಿ ಕಳೆದುಕೊಂಡು ಮೇಲಕ್ಕೆ ಏಳುತ್ತಿರಲಿಲ್ಲ. ಅಪಘಾತವಾದ ನಂತರ ನಾನು ನನ್ನ ಮಗನಿಗೆ ರಾಯಚೂರ ಮತ್ತು ಬಳ್ಳಾರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದು ಕುತ್ತಿಗೆ ನರಕ್ಕೆ ಪೆಟ್ಟಾಗಿದ್ದರ ಬಗ್ಗೆ ತಿಳಿಸಿದ್ದು ಚಿಕಿತ್ಸೆ ನೀಡಿರುತ್ತಾರೆ. ಆದರೂ ನನ್ನ ಮಗನಿಗೆ ಗುಣಮುಖವಾಗದೆ ಇದ್ದಾಗ ವೈದ್ಯಕೀಯ ಮತ್ತು ಇನ್ನಿತರೆ ಖಚರ್ು ವೆಚ್ಚಗಳಿಂದಾಗಿ ನಾವು ದಿನಾಂಕ. 19.02.2021 ರಂದು ನನ್ನ ಮಗನಿಗೆ ದವಾಖಾನೆಯಿಂದ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿಯೇ ಉಪಚಾರ ಮಾಡುತ್ತಿದ್ದೆವು. ಇಂದು ದಿನಾಂಕ.23.02.2021 ರಂದು ಮಧ್ಯಾಹ್ನ 12:40 ಗಂಟೆ ಸುಮಾರಿಗೆ ನನ್ನ ಮಗ ಅಪಘಾತದಲ್ಲಿ ತಲೆಗೆ ಮತ್ತು ಕುತ್ತಿಗೆಗೆ ಆದ ಭಾರಿಪೆಟ್ಟಿನಿಂದಾಗಿ ಬಲಗೈ ಮತ್ತು ಬಲಗಾಲು ನಿಶ್ಚಲವಾಗಿ ಗುಣಮುಖನಾಗದೆ ನಮ್ಮ ಮನೆಯಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿಯನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕೆ ವಿನಂತಿಸಿಕೊಂಡಿದ್ದು ಇರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 12/2021 ಕಲಂ: 78(3) ಕೆ.ಪಿ ಆಕ್ಟ್ : ದಿನಾಂಕ:23/02/2021 ರಂದು 12:35 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ ಠಾಣೆರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ತಾವು ದಿನಾಂಕ:23.02.2021 ರಂದು ಬೆಳಿಗ್ಗೆ 10:00 ಎ.ಎಮ್ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ಬೀಟ್ ಸಿಬ್ಬಂದಿಯಾದ ಸಂಗನಗೌಡ ಹೆಚ್ಸಿ-16 ರವರ ಮೂಲಕ ಕಕ್ಕೇರಾ ಪಟ್ಟಣದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ ಮೇಲ್ ಮೂಲಕ ರವಾನಿಸಿ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮೂಲಕ ದಿನಾಂಕ:23.02.2021 ರಂದು 12:30 ಪಿ.ಎಮ್.ಕ್ಕೆ ಬಂದಿದ್ದು ಇರುತ್ತದೆ. ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:12/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರು 4:00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 4560/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ನೀಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.ನಿಜಾಮೋದ್ದಿನ ತಂದೆ ಮೈನೋದ್ದಿನ ಖಾಜಿ ವ|| 27ವರ್ಷ ಜಾ|| ಮುಸ್ಲಿಂ ಉ|| ಕಿರಾಣಿ ಅಂಗಡಿ ವ್ಯಾಪಾರ ಸಾ|| ಕಕ್ಕೇರಾ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ:110 (ಇ) ಮತ್ತು (ಜಿ) ಸಿಆರ್ಪಿಸಿ : ಇಂದು ದಿನಾಂಕ: 23/02/2021 ರಂದು ನಾನು ಸಗರ ಯಲ್ಲಮ್ಮ ದೇವಿ (ಮಹಲರೋಜಾ) ಜಾತ್ರಾ ಬ/ಬ ಕರ್ತವ್ಯದಲ್ಲಿರುವಾಗ 6-00 ಪಿಎಮ್ ಕ್ಕೆ ಯಲ್ಲಮ್ಮ ಗುಡಿಯ ಹತ್ತಿರ ನಾಲ್ಕು ಜನ ವ್ಯಕ್ತಿಗಳು ಹೋಗಿ ಬರುವ ಜನರೊಂದಿಗೆ ಅಸಭ್ಯ ರೀತಿಯಿಂದ ವರ್ತನೆ ಮಾಡುತ್ತಾ ಹೆಣ್ಣು ಮಕ್ಕಳಿಗೆ ಬೈಯುತ್ತಾ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಹೆದರಿಸುವುದು, ಬೇದರಿಸುವುದು, ಮಾಡುವುದನ್ನು ಕಂಡು ಸದರಿಯವರನ್ನು ಹೀಗೆ ಬಿಟ್ಟರೆ ಸಾರ್ವಜನಿಕರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗವುಂಟು ಸಂಭವ ಹೆಚ್ಚಾಗಿ ಕಂಡು ಬಂದಿದ್ದರಿಂದ ಸದರಿಯವರನ್ನು 6-10 ಪಿಎಮ್ ಕ್ಕೆ ದಸ್ತಗಿರಿ ಮಾಡಿಕೊಂಡು ಠಾಣೆಗೆ 7-15 ಪಿಎಂ.ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ಆರೋಪಿತರ ವಿರುದ್ದ ಠಾಣೆಯ ಪಿ.ಎ.ಆರ್ ನಂ: 06/2021 ಕಲಂ, 110 (ಇ) (ಜಿ) ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 24-02-2021 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080