ಅಭಿಪ್ರಾಯ / ಸಲಹೆಗಳು

 

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/03/2021

 ಕೆಂಭಾವಿ ಪೊಲೀಸ ಠಾಣೆ:- 41/21 ಕಲಂ 323, 324, 354, 504, 506, ಸಂಗಡ 34ಐಪಿಸಿ ಮತ್ತು 3(1) (ಆರ್) (ಎಸ್) (ಡಬ್ಲ್ಯೂ) 3(2) (ಗಿಚಿ) ಎಸ್.ಸಿ. /ಎಸ್.ಟಿ ಪಿಎ ಆ್ಯಕ್ಟ 1989: ಇಂದು ದಿನಾಂಕ : 23.03.2021 ರಂದು 01.15 ಪಿಎಮ್ ಗೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ  ಶಾಂತಮ್ಮ ಗಂಡ ರಾಯಪ್ಪ ಟಣಕೇದಾರ ವಯಸ್ಸು||30 ಜಾ|| ಬೇಡರ ಉ||ಹೊಲಮನೆಗೆಲಸ ಸಾ|| ಮಾವಿನಮಟ್ಟಿ ತಾ||ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿಯ ಅಜರ್ಿ ಸಾರಾಂಶ ಏನೆಂದರೆ, ದಿನಾಂಕ: 21/03/2021 ರಂದು ರಾತ್ರಿ 1:40 ಗಂಟೆ ಸುಮಾರಿಗೆ ನಮ್ಮೂರ ಕರೆಪ್ಪ ತಂದೆ ಭೀಮರಾಯ ಪೂಜಾರಿ ಈತನು ತನ್ನ ಮನೆಯಲ್ಲಿ ಮಲಗಿಕೊಂಡಾಗ ಆತನಿಗೆ ಯಾರೋ ಕೊಡಲಿಯಿಂದ ಕಾಲಿಗೆ ಹೊಡೆದು ಭಾರಿ ರಕ್ತಗಾಯಪಡಿಸಿದ ಬಗ್ಗೆ ತಿಳಿದುಬಂದಿದ್ದು ಈ ವಿಷಯದಲ್ಲಿ ಕರೆಪ್ಪನ ಮನೆಯವರು ನನ್ನ ಗಂಡನಾದ ರಾಯಪ್ಪ ತಂದೆ ಕೃಷ್Ùಳರಾಯ ಟಣಕೇದಾರ ಇವರ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಹೀಗಿದ್ದು ದಿನಾಂಕ:21/03/2021 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನಾನು, ನಮ್ಮ ಅತ್ತೆ ಮಹಾದೇವಿ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ ಕರೆಪ್ಪ ಪೂಜಾರಿ ಈತನ ಸಂಬಂದಿಕರಾದ 1) ರಾಯಪ್ಪ ತಂದೆ ಭೀಮರಾಯ ಪೂಜಾರಿ 2) ಭೀಮಣ್ಣ ತಂದೆ ರಾಯಪ್ಪ ಹೂಗಾರ 3) ಮಲ್ಲಪ್ಪ ತಂದೆ ಭೀಮರಾಯ ಪೂಜಾರಿ 4) ಸಿರೆಪ್ಪ ತಂದೆ ಭೀಮರಾಯ ಪೂಜಾರಿ ಎಲ್ಲರು ಜಾತಿ|| ಕುರುಬರ ಇವರು ನಮ್ಮ ಅಂಗಳದಲ್ಲಿ ಬಂದವರೇ ನನಗೆ ಏನಲೆ ಶಾಂತಿ ನಿನ್ನ ಗಂಡ ಎಲ್ಲಿದ್ದಾನೆ ಆ ಬ್ಯಾಡ ಸೂಳೆಮಗನ ಸೊಕ್ಕು ಬಾಳ ಆಗಿದೆ ಅಂತ ಜಾತಿ ಎತ್ತಿ ಬೈಯುತ್ತಿದ್ದಾಗ ನಾನು ಹಾಗೂ ನನ್ನ ಅತ್ತೆ ಮಹಾದೇವಿ ಇಬ್ಬರು ಕೂಡಿ ಊರಲ್ಲಿ ನಮ್ಮ ಜಾತಿಯ 2 ಮನೆಗಳಿದ್ದು, ನಮ್ಮ ಮೇಲೆ ಏಕೆ ದಬ್ಬಾಳಿಕೆ ಮಾಡುತ್ತಿರಿ ಅಂತ ಅಂದಾಗ ಎಲ್ಲರು ಎಲೆ ಬ್ಯಾಡ ಸೂಳಿಯರೆ ನಿಮ್ಮ ಸೊಕ್ಕು ಬಾಳ ಆಗಿದೆ ಅಂತ ಬೈಯುತ್ತಾ ಈ ಸೂಳಿಯರಿಗೆ ಬಿಡಬ್ಯಾಡರಿ ಅಂತ ಅನ್ನುತ್ತಾ ಎಲ್ಲರು ನನಗೂ ಹಾಗೂ ನಮ್ಮ ಅತ್ತೆಗೆ ಕೈಯಿಂದ ಹೊಡೆಬಡೆ ಮಾಡುತ್ತಾ ಇಬ್ಬರಿಗೂ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅತ್ತೆಯಾದ ಮಹಾದೇವಿ ಇವರಿಗೆ ಮಲ್ಲಪ್ಪ ಪೂಜಾರಿ ಈತನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯಪಡಿಸಿದನು ಆಗ ನಾನು ನಮ್ಮ ಅತ್ತೆಗೆ ಬಿಡಿಸಿಕೊಳ್ಳಲು ಹೋದಾಗ, ರಾಯಪ್ಪ ಪೂಜಾರಿ ಈತನು ಈ ಸೂಳಿಯದು ಬಾಳ ಆಗಿದೆ ಅಂತ ಅನ್ನುತ್ತಾ ನನ್ನ ಮಾನಭಂಗ ಮಾಡುವ ಉದ್ದೇಶದಿಂದ ಜಂಪರ ಹಿಡಿದು ಹರಿದು ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ನಾವಿಬ್ಬರು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಸಿದ್ದಪ್ಪ ತಂದೆ ಹಣಮಪ್ಪ ಹರಿಜನ, ಗುರಪ್ಪ ತಂದೆ ಭೀಮಪ್ಪ ಹರಿಜನ ಇವರು ಬಂದು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಸೂಳೆಯರೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಅದೇ ದಿನ ನಾನು ಹಾಗೂ ನಮ್ಮ ಅತ್ತೆ ಇಬ್ಬರು ಕೂಡಿಕೊಂಡು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ಮರಳಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 04 ಜನರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ್ 41/21 ಕಲಂ 323, 324, 354, 504, 506, ಸಂಗಡ 34ಐಪಿಸಿ ಮತ್ತು 3(1) (ಆರ್) (ಎಸ್) (ಡಬ್ಲ್ಯೂ) 3(2) (ಗಿಚಿ) ಎಸ್.ಸಿ. /ಎಸ್.ಟಿ ಪಿಎ ಆ್ಯಕ್ಟ 1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:- 41/2021 ಕಲಂ: 78() ಕೆ.ಪಿ. ಆಕ್ಟ್ : ನಿನ್ನೆ ದಿನಾಂಕ 22.03.2021 ರಂದು ಮಧ್ಯಾಹ್ನ 2:30 ಗಂಟೆಗೆ ಗುರುಮಠಕಲ್ ಪಟ್ಟಣದ ಐ.ಬಿ ಯ ಮುಂದಿನ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 07/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-124 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 05:00 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 5:30 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2050/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 22.03.2021 ರಂದು ಸಮಯ ಸಂಜೆ 6:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-110 ಗುರುಮಠಕಲ್ ಠಾಣೆ ಗುನ್ನೆ ನಂಬರ 41/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- ಗುನ್ನೆ ನಂಬರ 63/2021 ಕಲಂ 78[3] ಕೆ.ಪಿ ಆಕ್ಟ: ಇಂದು ದಿನಾಂಕ 23/03/2021 ರಂದು 19-10 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್.ಹಿರೇಮಠ ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 23/03/2021 ರಂದು ಸಾಯಂಕಾಲ 18-30 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ಹಳಿಸಗರದ ಹನುಮಾನ ಗುಡಿಯ ಮುಂದೆ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 18/20214 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 63/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1530=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.                                                       

ಗೋಗಿ ಪೊಲೀಸ್ ಠಾಣೆ:- 23/2021 ಕಲಂ: ಹುಡುಗಿ ಕಾಣೆಯಾದ ಬಗ್ಗೆ.: ಇಂದು ದಿನಾಂಕ: 23/03/2021 ರಂದು 1-30 ಪಿಎಮ್ ಕ್ಕೆ ಶ್ರೀ ತಿಪ್ಪಣ್ಣ ಸೇವುನಾಯಕ ಪವಾರ ಸಾ|| ಕಕ್ಕಸಗೇರಾ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನನಗೆ ಮೂರು ಜನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿರುತ್ತಾರೆ. ಹೆಣ್ಣು ಮಕ್ಕಳಾದ 1) ನೀಲಾಬಾಯಿ ತಂದೆ ತಿಪ್ಪಣ್ಣ ರಾಠೋಢ ವಯ|| 30 ವರ್ಷ 2) ಶೇಖಾಬಾಯಿ ತಂದೆ ತಿಪ್ಪಣ್ಣ ಪವಾರ ವಯ|| 21 ವರ್ಷ 3) ಅನೀತಾ ತಂದೆ ತಿಪ್ಪಣ್ಣ ಪವಾರ ವಯ|| 20 ವರ್ಷ ಅಂತಾ ಮೂರು  ಜನ ಹೆಣ್ಣು ಮಕ್ಕಳಿದ್ದು, ನೀಲಾಬಾಯಿ ಇವಳಿಗೆ ನಮ್ಮ ತಾಂಡಾದಲ್ಲಿಯೇ ನನ್ನ ಅಕ್ಕನ ಮಗನಾದ ತಿರುಮಲ ರಾಠೋಡ ಇವನಿಗೆ ಈಗ ಸುಮಾರು 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು,  ಇರುತ್ತದೆ.  ಶೇಖಾಬಾಯಿ ಇವಳು ಬಿ.ಎ ಅಂತಿಮ ವರ್ಷದ ತರಗತಿಯಲ್ಲಿ ಓದುತ್ತಿದ್ದು, ಶಹಾಪೂರದಲ್ಲಿ ಹಾಸ್ಟೇಲ್ ದಲ್ಲಿ ಇರುತ್ತಾಳೆ.  ಅನೀತಾ ತಂ: ತಿಪ್ಪಣ್ಣ ಪವಾರ ವಯ|| 20 ವರ್ಷ ಇವಳು ಮನೆಯಲ್ಲಿಯೇ ಹೊಲಮನೆಕೆಲಸ ಮಾಡಿಕೊಂಡಿರುತ್ತಾಳೆ.  ಗಂಡು ಮಕ್ಕಳಾದ 1) ಹರಿಶ್ಚಂದ್ರ ತಂದೆ ತಿಪ್ಪಣ್ಣ ಪವಾರ ವಯ|| 26 ವರ್ಷ ಈತನು ದುಡಿಯಲು ಬೆಂಗಳೂರಿಗೆ ಹೋಗಿರುತ್ತಾನೆ. 2) ಸುನೀಲ್ ತಂದೆ ತಿಪ್ಪಣ್ಣ ಪವಾರ ವಯ|| 16 ವರ್ಷ ಈತನು ಕಕ್ಕಸಗೇರಾ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಓದುತ್ತಾನೆ.  ಮನೆಯಲ್ಲಿ ನಾನು,  ನನ್ನ ಹೆಂಡತಿ ಸೀತಾಬಾಯಿ, ನನ್ನ ತಾಯಿ ಮನಕಿಬಾಯಿ, ಹಾಗೂ ಅನೀತಾ ತಂದೆ ತಿಪ್ಪಣ್ಣ ಪವಾರ ವಯ|| 20 ವರ್ಷ ಹಾಗೂ ನನ್ನ ಕೊನೆಯ ಮಗನಾದ ಸುನೀಲ್ ತಂದೆ ತಿಪ್ಪಣ್ಣ ಪವಾರ ಇರುತ್ತೇವೆ. ನಾನು ಕಕ್ಕಸಗೇರಾ ಗ್ರಾಮದ ಬಸಣ್ಣಗೌಡ ಮೇಟಿ ಇವರ ಎರಡು ಹೊಲಗಳನ್ನು ಪಾಲಿಗೆ ಮಾಡಿದ್ದು, ಒಂದು ಹೊಲದಲ್ಲಿ ಸಜ್ಜೆ, ಒಂದು ಹೊಲದಲ್ಲಿ ಸೇಂಗಾ ಬೆಳೆ ಹಾಕಿರುತ್ತೇನೆ.  ಹೀಗಿದ್ದು, ದಿನಾಂಕ: 21/03/2021 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು, ನನ್ನ ಹೆಂಡತಿ ಸೀತಾಬಾಯಿ, ಹಾಗೂ ನನ್ನ ಮಕ್ಕಳಾದ ಅನೀತಾ ವಯ|| 20 ವರ್ಷ, ಸುನೀಲ್ ವಯ|| 16 ವರ್ಷ ಇವರು ಕೂಡಿ, ನಾವು ಪಾಲಿಗೆ ಮಾಡಿದ ಹೊಲಗಳಿಗೆ ಹೋಗಿದ್ದೇವು.  ನಾನು ಪಾಲಿಗೆ ಮಾಡಿದ ಸಜ್ಜೆ ಹೊಲದಲ್ಲಿರುವಾಗ ಅಂದಾಜು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮ ಸಂಬಂಧಿಕರಲ್ಲಿ ತೀರಿಕೊಂಡಿರುವ ಸುದ್ದಿ ಬಂದಿದ್ದು, ಆಗ ಹೊಲದಲ್ಲಿ ನನ್ನ ಮಕ್ಕಳಾಧ ಅನೀತಾ ವಯ|| 20 ವರ್ಷ ಹಾಗೂ ಅನೀಲ್ ವಯ|| 16 ವರ್ಷ ಇವರಿಗೆ ಹೊಲದಲ್ಲಿರುವಂತೆ ಹೇಳಿ ನಾವು ನಮ್ಮ ತಾಂಡಾದವರೊಂದಿಗೆ ಹುಣಸಗಿ ಹತ್ತಿರ ಇರುವ ಹಳ್ಳಿ ತಾಂಡಾಕ್ಕೆ ಹೋದೇವು.   ನಂತರ ರಾತ್ರಿ 10-00 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದಾಗ ನನ್ನ ಮಗ ಸುನೀಲ್ ಈತನು ನಮಗೆ ತಿಳಿಸಿದ್ದೆನೆಂದರೆ,  ' ನಾವು ಪಾಲಿಗೆ ಮಾಡಿರುವ ಸಜ್ಜೆ ಹೊಲದಲ್ಲಿ ನಾನು, ಮತ್ತು ಅಕ್ಕ ಅನೀತಾ ಇವಳು ಕೂಡಿ ಇರುವಾಗ ಅಕ್ಕ ಅನೀತಾ ಇವಳು ನೀನು ಇಲ್ಲೆ ಇರು ನಾನು ಸೇಂಗಾದ ಹೊಲದಲ್ಲಿರುತ್ತೇನೆ ಅಂತಾ ಸಾಯಂಕಾಲ 5-00 ಗಂಟೆ ಸುಮಾರಿಗೆ ಹೇಳಿ ಹೋದವಳು ಮರಳಿ ಬರಲಿಲ್ಲಾ ನಾನು ಹೊಲದಲ್ಲಿ ಹುಡುಕಾಡಿದರೂ ಕೂಡಾ ಸಿಗಲಿಲ್ಲಾ ' ಅಂತಾ ತಿಳಿಸಿದ್ದು,  ನಂತರ ನಾವು ನಮ್ಮ ಎಲ್ಲಾ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಲಾಗಿ ತಮ್ಮಲ್ಲಿ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು,  ನಾವು ಮರುದಿವಸ ನಮ್ಮ ಸಂಬಂಧಿಕರ ತಾಂಡಾಗಳಾದ ಹೊಸಕೇರಾ ತಾಂಡಾ, ಕಾಡಮಗೇರಾ ತಾಂಡಾ, ಗೋಗಿ ತಾಂಡಾಗಳಿಗೆ ಹೋಗಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ. ನಾನು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಸಿಗದ ಕಾರಣ ಇಂದು ದಿನಾಂಕ: 23/03/2021 ರಂದು ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ನನ್ನ ಮಗಳು  5-00 ಅಡಿ ಎತ್ತರ ಇದ್ದು, ಬಿಳಿ ಬಣ್ಣ, ಇದ್ದು ಮನೆಯಿಂದ ಹೊಗುವಾಗ ಕೆಂಪು ಕಲರ್ ಚೂಡಿದಾರ ಹಾಕಿಕೊಂಡಿದ್ದು, ಕನ್ನಡ, ಹಿಂದಿ ಮತ್ತು ಲಂಬಾಣಿ ಬಾಷೆ ಮಾತನಾಡುತ್ತಾಳೆ. ಕಾರಣ ಮಾನ್ಯರವರು ನನ್ನ ಮಗಳಾದ ಅನೀತಾ ತಂದೆ ತಿಪ್ಪಣ್ಣ ಪವಾರ ವಯ|| 20 ವರ್ಷ ಜಾ|| ಲಂಬಾಣಿ ಉ|| ಹೊಲಮನೆಗೆಲಸ ಸಾ|| ಕಕ್ಕಸಗೇರಾ ತಾಂಡಾ ತಾ|| ಶಹಾಪೂರ ಇವಳು ದಿನಾಂಕ: 21/03/2021 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾವು ಪಾಲಿಗೆ ಮಾಡಿದ ಬಸಣ್ಣಗೌಡ ಮೇಟಿ ಇವರ ಹೊಲದಲ್ಲಿಂದ ಹೋದವಳು ಮರಳಿ ಮನೆಗೆ ಬರದೆ ಕಾಣೆೆಯಾಗಿದ್ದು, ನನ್ನ ಮಗಳನ್ನು ಹುಡಿಕಿಕೊಡಲು ಮಾನ್ಯರವರಲ್ಲಿ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 23/2021 ಕಲಂ: ಹುಡುಗಿ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:-. 24/2021 ಕಲಂ: ಮನುಷ್ಯ ಕಾಣೆಯಾದ ಬಗ್ಗೆ: ಇಂದು ದಿನಾಂಕ: 23/03/2021 ರಂದು 5-30 ಪಿಎಮ್ ಕ್ಕೆ ಶ್ರೀಮತಿ ನೇತ್ರಾವತಿ ಗಂಡ ಶಿವಕುಮಾರ ಚಿನ್ನಾರಾಠೋಡ ಸಾ|| ಕಕ್ಕಸಗೇರಾ ತಾಂಡಾ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನನ್ನ ತವರು ಮನೆ ಟಿ.ನರಸೀಪೂರ ಇದ್ದು,  ನಮ್ಮ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ನಾನು ಒಬ್ಬಳು ಹೆಣ್ಣು ಮಗಳಿರುತ್ತೇನೆ. ನಮ್ಮ ತಂದೆಯು ಈಗ ಸುಮಾರು ಎರಡು ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ.  ನಮ್ಮ ತವರು ಮನೆಯಲ್ಲಿ ನನ್ನ ತಾಯಿ ಗಂಗಮ್ಮ ಗಂಡ ಕೃಷ್ಣಪ್ಪ, ನಾನು, ನನ್ನ ಹಿರಿಯ ಅಣ್ಣ ವೆಂಕಟೇಶ, ಅತ್ತಿಗೆ ಕೊಲ್ಲಮ್ಮ, ಇನ್ನೊಬ್ಬ ಅಣ್ಣನಾದ ಲಕ್ಷ್ಮಣ, ಹಾಗೂ ನನ್ನ ತಮ್ಮನಾದ ಜಯಂತ ಕೂಡಿ ಇರುತ್ತೇವೆ.  ಈಗ ಸುಮಾರು ಐದು ವರ್ಷಗಳ ಹಿಂದೆ ನನ್ನ ಅಣ್ಣನಾದ ಪರಶುರಾಮ ತಂದೆ ಕೃಷ್ಣಪ್ಪ ಇತನು ಮದ್ದೂರಿನಲ್ಲಿ ಸಿನಿಮಾ ಶೂಟಿಂಗ್ ಅಂತಾ ತಿರುಗಾಡುತ್ತಿದ್ದಾಗ, ಆಗ ನಾನು ಪಿ.ಯು.ಸಿ ತರಗತಿ ಮುಗಿದು ರಜೆ ಇದ್ದಾಗ ನಾನು ನಮ್ಮ ಅಣ್ಣನ ಹತ್ತಿರ ಹೋಗಿದ್ದೆನು.  ಅಲ್ಲಿ ಶಿವಕುಮಾರ ತಂದೆ ಲಕ್ಷ್ಮಣ ಚಿನ್ನಾರಾಠೋಡ ಇತನು ಡ್ರೈವರ್ ಈತನ ಪರಿಚಯವಾಗಿ, ನಮ್ಮಿಬ್ಬರ ನಡುವೆ ಪ್ರೀತಿಯಾಗಿ ನಾವಿಬ್ಬರೂ ಆಗಾಗ ಮೈಸೂರಿನಲ್ಲಿ ಬೇಟಿಯಾಗುತ್ತಿದ್ದೇವು.  ನಂತರ ನಾವು ಹೋದ ವರ್ಷ 2020 ನೇ ಸಾಲಿನ ಜೂನ್ 29 ತಾರೀಖಿನಂದು ನಾವು ಶಹಾಪೂರಕ್ಕೆ ಬಂದು ಸಬ್ ರಜಿಸ್ಟರ್ದಲ್ಲಿ ಮದುವೆಯಾಗಿರುತ್ತೇವೆ.  ಮದುವೆಯಾದ ನಂತರ ನಾನು ನನ್ನ ಗಂಡ ಶಿವಕುಮಾರ ಕೂಡಿ ಕಕ್ಕಸಗೇರಾ ತಾಂಡಾಕ್ಕೆ ಹೋದೆವು. ನನ್ನ ಗಂಡನು ಒಂದು ವಾರದವರೆಗೆ ಜೊತೆಯಲ್ಲಿ ಇದ್ದು, ನಂತರ ನನ್ನ ಗಂಡ ದುಡಿಯಲು ಬೆಂಗಳೂರಿಗೆ ಹೋದನು. ನಾನು ಎರಡು ತಿಂಗಳವರೆಗೆ ಕಕ್ಕಸಗೇರಾ ತಾಂಡಾದಲ್ಲಿದ್ದು, ನಂತರ ನನ್ನ ಗಂಡ ಶಿವಕುಮಾರ ಈತನು ನನಗೆ ಕರೆದುಕೊಂಡು ಬೆಂಗಳೂರಿನಲ್ಲಿ ತನ್ನ ಅಣ್ಣನಾದ ಗೋಪಾಲ ತಂದೆ ಲಕ್ಷ್ಮಣ ಚಿನ್ನಾರಾಠೋಡ ಇತನು ಇರುವ ನೆಲಮಂಗಲಕ್ಕೆ ಕರೆದುಕೊಂಡು ಹೋಗಿದ್ದು,  ನಾವು ಅಲ್ಲಿಯೇ ಇದ್ದೇವು.  ನಂತರ ಜನೆವರಿ ತಿಂಗಳ ಕೊನೆಯ ವಾರದಲ್ಲಿ ನನ್ನ ಗಂಡ ಶಿವಕುಮಾರ ಈತನು ನನಗೆ ಊರಲ್ಲಿ ಹೊಲದ ಕೆಲಸ ಇದೆ ಅಂತಾ ನನಗೆ ನನ್ನ ತವರು ಮನೆಯಾದ ಟಿ.ನರಸೀಪೂರಕ್ಕೆ ಬಿಟ್ಟು ಕಕ್ಕಸಗೇರಾ ತಾಂಡಾಕ್ಕೆ ಹೋಗಿರುತ್ತಾನೆ. ಹೀಗಿದ್ದು, ಮೊನ್ನೆ ದಿನಾಂಕ: 21/03/2021 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ನನ್ನ ತವರು  ಮನೆಯಲ್ಲಿರುವಾಗ ನನ್ನ ಗಂಡನ ಅಣ್ಣನಾದ ಗೋಪಾಲ ಚಿನ್ನಾರಾಠೋಡ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ,  ' ನಿನ್ನ ಗಂಡನಾದ ಶಿವಕುಮಾರ ತಂದೆ ಲಕ್ಷ್ಮಣ ಚಿನ್ನಾರಾಠೋಡ ಇತನು ಕಕ್ಕಸಗೇರಾ ತಾಂಡಾದ ಮನೆಯಿಂದ ಹೊರಗಡೆ ಹೋದವನು ಮರಳಿ ಮನಗೆ ಬಂದಿರುವುದಿಲ್ಲಾ ' ಅಂತಾ ತಿಳಿಸಿದನು.  ಆಗ ನಾನು ಮತ್ತು ನಮ್ಮ ಮನೆಯವರು ಕೂಡಿ ನನ್ನ ಗಂಡನ ಸಂಬಂಧಿಕರ ಊರುಗಳಿಗೆ ಮತ್ತು ನನ್ನ ಸಂಬಂಧಿಕರ ಊರುಗಳಿಗೆ ಪೋನ್ ಮಾಡಿ ವಿಚಾರಿಸಲಾಗಿ ತಮ್ಮಲ್ಲಿ ಬಂದಿರುವುದಿಲ್ಲಾ ಅಂತಾ ತಿಳಿಸಿದರು.  ನಾವು ನನ್ನ ಗಂಡನಿಗೆ ಎಲ್ಲಾ ಕಡೆ ಹುಡುಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಕಾರಣ ಇಂದು ದಿನಾಂಕ: 23/03/2021 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ನನ್ನ ಗಂಡ  5-2 ಅಡಿ ಎತ್ತರ ಇದ್ದು, ಬಿಳಿ ಬಣ್ಣ, ಇದ್ದು,  ಕನ್ನಡ, ಹಿಂದಿ ಮತ್ತು ಲಂಬಾಣಿ ಬಾಷೆ ಮಾತನಾಡುತ್ತಾಳೆ. ಕಾರಣ ಮಾನ್ಯರವರು ನನ್ನ ಗಂಡ ಶಿವುಕುಮಾರ ತಂದೆ ಲಕ್ಷ್ಮಣ ರಾಠೋಡ ವಯ|| 23 ವರ್ಷ ಜಾ|| ಲಂಬಾಣಿ ಉ|| ಡ್ರೈವರ್  ಸಾ|| ಕಕ್ಕಸಗೇರಾ ತಾಂಡಾ ತಾ|| ಶಹಾಪೂರ ಇವನು ದಿನಾಂಕ: 21/03/2021 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಕಕ್ಕಸಗೇರಾ ತಾಂಡಾದ ತನ್ನ ಮನೆಯಿಂದ ಹೋದವನು ಮರಳಿ ಮನೆಗೆ ಬರದೇ ಕಾಣೆೆಯಾಗಿದ್ದು, ನನ್ನ ಗಂಡನನ್ನು ಹುಡಿಕಿಕೊಡಲು ಮಾನ್ಯರವರಲ್ಲಿ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 24/2021 ಕಲಂ: ಮನುಷ್ಯ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:- ಯು.ಡಿ ಆರ್.ನಂ.03/2021 ಕಲಂ 174 :ಇಂದು ದಿನಾಂಕ.23/03/2021 ರಂದು 4-30 ಪಿಎಂಕ್ಕೆ ಶ್ರೀ ಫಂಡರಿ ಚವ್ಹಾಣ ತಂದೆ ದೇವಜಿ ಚವ್ಹಾಣ ವ;55 ಜಾ; ಲಂಬಾಣಿ ಉ; ಸಂಚಾರಿ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ ಘಟಕ ಯಾದಗಿರಿ ಸಾ; ನಾಲವಾರ ತಾ; ಚಿತ್ತಾಪೂರ ಜಿ; ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ಇಂದು ದಿನಾಂಕ.23/03/2021 ರಂದು 2-00 ಪಿಎಮ್ ಕ್ಕೆ ನಾನು ಕರ್ತವ್ಯ ನಿರ್ವಹಿಸಲು ಯಾದಗಿರಿಯ ಸಿಟಿ ಬಸ ನಿಲ್ದಾಣ(ಹಳೆ ಬಸ ನಿಲ್ದಾಣ)ದಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ 3-00 ಗಂಟೆ ಸುಮಾರಿಗೆ ಬಸ ನಿಲ್ದಾಣದಲ್ಲಿಯ ಶೌಚಾಲಯದ ಹತ್ತಿರ ಸಾರ್ವಜನಿಕರು ಸೇರಿದ್ದು ಆಗ ನಾನು ಮತ್ತು ಆಟೋ ಚಾಲಕನಾದ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೆ ಹಾಗೂ ಈತರರು ಹೋಗಿ ನೋಡಲಾಗಿ ಒಬ್ಬ ಹೆಣ್ಣು ಮಗಳು  ಅಂದಾಜ ವಯಸ್ಸು 55-60 ವರ್ಷ ಇರಬಹುದು ಸದರಿಯವಳು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ನಾವು ನೋಡಲಾಗಿ ಮೃತಳ ಗುರುತು ಸಿಕ್ಕಿರುವುದಿಲ್ಲ. ಮೃತಳು ಅಪರಿಚಿತ ಹೆಣ್ಣು ಮಗಳಾಗಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ.  ಕಪ್ಪುಬಣ್ಣ, ತೆಳುವಾದ ಮೈಕಟ್ಟು,  ತಲೆಯಲ್ಲಿ ಕಪ್ಪು ಕೂದಲು ಇದ್ದು ಮೈಮೇಲೆ ಹಳದಿ ಬಣ್ಣದ ಬಿಳಿ,ಕಪ್ಪು ಬಣ್ಣದ ಹೂವಿನ ಚಿತ್ರವುಳ್ಳ ಟೇರಿಕಾಟ್ ಸೀರೆ, ಕೆಂಪು ಬಣ್ಣದ ಕುಪ್ಪಸ  ಧರಿಸಿದ್ದು ಸದರಿಯವಳು  ಇಂದು ದಿನಾಂಕ. 23/03/2021 ರಂದು 10-00 ಎಎಮ್ ದಿಂದ 3-00 ಪಿಎಮ್ ದ ಮಧ್ಯದ ಅವಧಿಯಲ್ಲಿ ಮೃತಪಟ್ಟಿರಬಹುದು ಮೃತಳು ಭಿಕ್ಷುಕಳಂತೆ ಕಂಡು ಬರುತ್ತಿದ್ದು, ಅನಾರೋಗ್ಯದಿಂದ, ನಿಶಕ್ತಳಾಗಿ ಯಾವುದೋ ಕಾಯಿಲೆಯಿಂದ ಹೊಟ್ಟೆಗೆ ಆಹಾರವಿಲ್ಲದೆ ಮೃತಪಟ್ಟಂತೆ ಕಂಡು ಬರುತ್ತದೆ. ಸದರಿ ಮೃತಳ ವಾರಸುದಾರರು ಯಾರು ಅಂತಾ ಗೊತ್ತಾಗಿರುವುದಿಲ್ಲಾ. ಮತ್ತು ಯಾರು ವಾರಸುದಾರರು ಇಲ್ಲಿಯವರೆಗೆ ಬಂದಿರುವುದಿಲ್ಲ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.03/2021 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 24-03-2021 11:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080