ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/02/2021
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 13/2021 ಕಲಂ: 323, 324, 307, 504, 506 ಸಂ 34 ಐಪಿಸಿ : ಇಂದು ದಿನಾಂಕ:24/02/2021 ರಂದು ಗಾಯಾಳು ದೇವಿಂದ್ರಪ್ಪ ತಂದೆ ಆನಂದ ದೊರೆ ಸಾ|| ಹೊಸೂರ ಪೈದೊಡ್ಡಿ ಕಕ್ಕೇರಾ ಇವರ ಎಮ್ಎಲ್ಸಿಯು ಜಿ.ಜಿ.ಹೆಚ್. ಲಿಂಗಸ್ಗೂರ ದಿಂದ ವಸೂಲಾಗಿದ್ದುದರಿಂದ ಸದರ ಆಸ್ಪತ್ರೆಗೆ ಬೇಟಿಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿಯರ್ಾದಿಯಾದ ದೇವಿಂದ್ರಪ್ಪ ತಂದೆ ಆನಂದ ದೊರೆ ವ|| 23ವರ್ಷ ಜಾ|| ಹಿಂದೂ ಬೇಡರ ಉ|| ಟ್ರ್ಯಾಕ್ಟರ್ ಚಾಲಕ ಸಾ|| ಹೊಸೂರ ಪೈದೊಡ್ಡಿ ಕಕ್ಕೇರಾ ತಾ|| ಸುರಪೂರ ಇವರಿಗೆ ವಿಚಾರಿಸಲಾಗಿ ನೀಡಿದ ಪಿಯರ್ಾದಿ ಹೇಳಿಕೆಯ ಸಾರಾಂಶವೆನೇಂದರೆ ತಮ್ಮ ತಂದೆ-ತಾಯಿಗೆ ತಾನು, ಬಸವರಾಜ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮಿಬ್ಬರದು ಇನ್ನೂ ಮದುವೆ ಆಗಿರುವುದಿಲ್ಲ ನಮ್ಮ ತಮ್ಮ ಬಸವರಾಜನು ಒಕ್ಕಲುತನ ಕೆಲಸ ಮಾಡುತ್ತಿದ್ದು ನಾನು ಟ್ರ್ಯಾಕ್ಟರ್ ಚಾಲಕ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇವೆ. ಹೀಗಿದ್ದು ದಿನಾಂಕ:23/02/2021 ರಂದು ಪೂಲಬಾವಿಯರ ದೊಡ್ಡಿ ಕಕ್ಕೇರಾದಲ್ಲಿ ಶ್ರೀ ಯಲ್ಲಮ್ಮ ದೇವರು ಮಾಡಿದ್ದರಿಂದ ನಾನು ಮತ್ತು ನಮ್ಮೂರ ಪ್ರಕಾಶ ತಂದೆ ದೇವಿಂದ್ರಪ್ಪ ದೊರಿ, ಮಡಿವಾಳಪ್ಪಗೌಡ ತಂದೆ ಸೋಮರಾಯಗೌಡ ಗೌಡರ ಕೂಡಿಕೊಂಡು ಕಕ್ಕೇರಾ ಪೂಲಬಾವಿಯರ ದೊಡ್ಡಿಗೆ ಸಾಯಂಕಾಲ 4:00 ಗಂಟೆಗೆ ಬಂದು ಶ್ರೀ ಯಲ್ಲಮ್ಮ ದೇವರಿಗೆ ಕಾಯಿ ಹೊಡೆದುಕೊಂಡು ಬಂದು ಶ್ರೀ ಹನಮಂತ ದೇವರ ದೇವಸ್ಥಾನದ ಮುಂದಿನ ಖುಲ್ಲಾ ಜಾಗೆಯಲ್ಲಿ ನಾವುಗಳು ಮಾತನಾಡುತ್ತಾ ನಿಂತುಕೊಂಡಾಗ ಸೋಮಣ್ಣ ತಂದೆ ರಾಮಯ್ಯ ಐದಬಾಯಿ ಈತನು ತನ್ನ ತಮ್ಮನಾದ ಕಿಟ್ಟಪ್ಪ @ ಗಿಡ್ಡಪ್ಪ ಐದಬಾಯಿ ಇವನೊಂದಿಗೆ ತಮ್ಮ ಮೋಟರ ಸೈಕಲ್ ತೆಗೆದುಕೊಂಡು ಬಂದು ದಾರಿಗೆ ಹಚ್ಚಿದ್ದನು. ಆಗ ಸಮಯ ಅಂದಾಜು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾನು ಸೋಮಣ್ಣನಿಗೆ ನಿಮ್ಮ ಮೋಟರ್ ಸೈಕಲ್ ದಾರಿಗೆ ಹಚ್ಚಿದರೆ ಹೇಗೆ ಜನರು ತಿರುಗಾಡಬೇಕು ಅದನ್ನು ಪಕ್ಕಕ್ಕೆ ತೆಗೆದು ನಿಲ್ಲಿಸು ಅಂತಾ ಕೇಳಿದಾಗ ಸೋಮಣ್ಣನು ನನಗೆ ಲೇ ಸೂಳಿ ಮಗನೆ ನೀನು ಅದನ್ನೆಲ್ಲಾ ಏನು ಕೇಳುತ್ತಿಯಾ ಭೋಸೂಡಿ ಮಗನೆ ಅಂತಾ ಅಲ್ಕಾ ಶಬ್ದಗಳಿಂದ ಬೈದಾಗ ನಾನು ಸೋಮಣ್ಣನಿಗೆ ನೀನು ಹೀಗೆಲ್ಲ ಮಾತನಾಡುವುದು ಸರಿಯಲ್ಲ ಅಂತಾ ಅಂದಾಗ ಸೋಮಣ್ಣನು ನನಗೆ ಲೇ ಸೂಳಿ ಮಗನೆ ನೀನು ಎದುರು ಮಾತನಾಡುತ್ತಿಯಾ ನಿನಗೆ ನಾವು ಇಲ್ಲಿಯೇ ಕೊಲೆ ಮಾಡುತ್ತೇವೆ ಅಂತಾ ಬೈದು ನನ್ನೊಂದಿಗೆ ಅವರಿಬ್ಬರೂ ತೆಕ್ಕೆಕುಸ್ತಿಗೆ ಬಿದ್ದು ನನಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಬಿದ್ದಿದ್ದ ಒಂದು ಚೂಪಾದ ಕಲ್ಲನ್ನು ಸೋಮಣ್ಣ ಐದಬಾಯಿ ಈತನು ತೆಗೆದುಕೊಂಡು ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ಅವನ ತಮ್ಮನಾದ ಕಿಟ್ಟಪ್ಪ @ ಗಿಡ್ಡಪ್ಪ ಐದಬಾಯಿ ಈತನು ನನಗೆ ಕೈಯಿಂದ ಮೈಕೈಗೆ ಹೊಡೆಬಡೆ ಮಾಡಿ ಗುಪ್ತಪೆಟ್ಟು ಪಡೆಸಿದ್ದು ಈ ಜಗಳವನ್ನು ನನ್ನ ಸಂಗಡ ಇದ್ದ ನಮ್ಮೂರ ಪ್ರಕಾಶ ತಂದೆ ದೇವಿಂದ್ರಪ್ಪ ದೊರಿ, ಮಡಿವಾಳಪ್ಪಗೌಡ ತಂದೆ ಸೋಮರಾಯಗೌಡ ಗೌಡರ ಇವರುಗಳು ಬಿಡಿಸಿದ್ದು ನಂತರ ಸೋಮಣ್ಣ ಐದಬಾಯಿ ಮತ್ತು ಕಿಟ್ಟಪ್ಪ @ ಗಿಡ್ಡಪ್ಪ ಐದಬಾಯಿ ಇವರಿಬ್ಬರೂ ನನಗೆ ಲೇ ಸೂಳಿ ಮಗನೆ ಇವತ್ತು ಉಳಿದುಕೊಂಡಿ ಹೋಗಲೇ ನಿನ್ನ ಜೀವ ನಮ್ಮ ಕೈಯಲ್ಲಿದೆ ಮುಂದೆ ಆದರು ನಾವು ನಿನ್ನ ಕೊಲೆ ಮಾಡದೆ ಬಿಡಲ್ಲ ಅಲ್ಲಿಯವರೆಗೂ ನಮಗೆ ಸಮಾದಾನ ಇಲ್ಲ ಅಂತಾ ಜೀವದಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಂತರ ನನಗೆ ಪ್ರಕಾಶ ದೊರಿ, ಮಡಿವಾಳಪ್ಪಗೌಡ ಗೌಡರ ಇವರು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಕಕ್ಕೇರಾ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿನ ವೈದ್ಯರು ನನಗೆ ನಿನ್ನೆ ದಿನ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಲಿಂಗಸ್ಗೂರ ಸಕರ್ಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನನಗೆ ನನ್ನೊಂದಿಗೆ ಇದ್ದವರು ಕರೆದುಕೊಂಡು ಬಂದು ಈ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಾನು ಇನ್ನೂ ಉಪಚಾರ ಪಡೆಯುತ್ತಿದ್ದು ಇರುತ್ತದೆ. ಕಾರಣ ನನಗೆ ಕೊಲೆ ಮಾಡುವ ಉದ್ದೇಶದಿಂದ ಚೂಪಾದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮತ್ತು ಕೈಯಿಂದ ಮೈಕೈಗೆ ಹೊಡೆದು ಗುಪ್ತಪೆಟ್ಟು ಪಡಿಸಿದ 1) ಸೋಮಣ್ಣ ತಂದೆ ರಾಮಯ್ಯ ಐದಬಾಯಿ, 2) ಕಿಟ್ಟಪ್ಪ @ ಗಿಡ್ಡಪ್ಪ ತಂದೆ ರಾಮಯ್ಯ ಐದಬಾಯಿ ಸಾ|| ಇಬ್ಬರೂ ಐದಬಾಯಿಯರ ದೊಡ್ಡಿ ಕಕ್ಕೇರಾ ತಾ|| ಸುರಪೂರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ ನಿಜ ಇರುತ್ತದೆ ಅಂತಾ ನೀಡಿದ ಪಿಯರ್ಾದಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 5:30 ಪಿಎಮ್ಕ್ಕೆ ಬಂದು ಸದರ ಪಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.13/2021 ಕಲಂ: 323, 324, 307, 504, 506 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಪಿ.ಎ.ಆರ್. ನಂ.01/2021 ಕಲಂ. 107 ಸಿ.ಆರ್.ಪಿ.ಸಿ : ಈ ಮೂಲಕ ಮಾನ್ಯರವರಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ನಾನು ಹಣಮಂತ ಬಿ. ಪಿ.ಎಸ್.ಐ ಗುರುಮಠಕಲ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿ ಕೊಳ್ಳುವುದೆನೆಂದರೆ ಇಂದು ದಿನಾಂಕ 24.02.2021 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಹಳ್ಳಿ ಬೇಟಿ ಕುರಿತು ಹಾಗೂ ಪೇಟ್ರೊಲಿಂಗ್ ಕುರಿತು ಹಳ್ಳಿಗಳಲ್ಲಿ ಹೊರಟು ಬೊರಾಬಂಡಾ, ಧರಂಪೂರ, ಕಂದಕೂರ ಗ್ರಾಮಗಳಿಗೆ ಭೇಟಿ ನೀಡಿ ನಂತರ ಎಲ್ಲೇರಿ ಗ್ರಾಮಕ್ಕೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಬೇಟಿ ನೀಡಿದಾಗ ಸಾರ್ವಜನಿಕರಿಂದ ಭಾತ್ಮೀ ಬಂದಿದ್ದೆನೆಂದರೆ ಎಲ್ಲೇರಿ ಗ್ರಾಮದಲ್ಲಿ ಸವರ್ೆ ನಂ.142 ನೇದ್ದರ 02 ಗುಂಟೆ ಜಾಗದ ವಿಷಯದ ಕುರಿತು ಗ್ರಾಮದಲ್ಲಿ ಮೊದಲನೇ ಪಾಟರ್ಿ ಜನರಾದ 1)ಶಿವಶಂಕರ ರೆಡ್ಡಿ ತಂದೆ ತಿಪ್ಪರೆಡ್ಡಿ ಅಂಕರೆಡ್ಡಿ ವ:30ವರ್ಷ ಜಾ:ರೆಡ್ಡಿ 2) ತಿಪ್ಪರೆಡ್ಡಿ ತಂದೆ ಶಂಕ್ರಪ್ಪ ಅಂಕರೆಡ್ಡಿ ವ:64ವರ್ಷ ಜಾ: ರೆಡ್ಡಿ ಹಾಗೂ 02 ನೇ ಪಾಟರ್ಿ ಜನರಾದ 1)ಗುರುನಾಥರೆಡ್ಡಿ ತಂದೆ ಬಸವರಾಜ ಅಂಕರೆಡ್ಡಿ ವ:45ವರ್ಷ ಜಾ:ರೆಡ್ಡಿ 2) ಚನ್ನಾರೆಡ್ಡಿ ತಂದೆ ಬಸವರಾಜ ಅಂಕರೆಡ್ಡಿ ವ:40ವರ್ಷ ಜಾ:ರೆಡ್ಡಿ 3) ಚಂದ್ರಕಲಾ ಗಂಡ ಗುರುನಾಥರೆಡ್ಡಿ ಅಂಕರೆಡ್ಡಿ ವ:35ವರ್ಷ ಜಾ:ರೆಡ್ಡಿ 4) ರವಿಕುಮಾರ ತಂದೆ ಗುರುನಾಥರೆಡ್ಡಿ ಅಂಕರೆಡ್ಡಿ ವ:25ವರ್ಷ ಜಾ:ರೆಡ್ಡಿ 5) ರಘುನಾಥರೆಡ್ಡಿ ತಂದೆ ಗುರುನಾಥರೆಡ್ಡಿ ಅಂಕರೆಡ್ಡಿ ವ:46ವರ್ಷ ಜಾ:ರೆಡ್ಡಿ 6)ಸಿದ್ದಣ್ಣ ತಂದೆ ಶಂಕ್ರಪ್ಪ ಅಂಕರೆಡ್ಡಿ ವ:65 ವರ್ಷ ಜಾ:ರೆಡ್ಡಿ 7)ಮಲ್ಲಿಕಾಜರ್ುನ ತಂದೆ ಸಿದ್ದಣ್ಣ ಅಂಕರೆಡ್ಡಿ ವ:34ವರ್ಷ ಜಾ:ರೆಡ್ಡಿ 8) ಯಂಕರೆಡ್ಡಿ ಪಟ್ಟೆದಾರ ವ:60ವರ್ಷ ಜಾ:ರೆಡ್ಡಿ ಸಾ:ಎಲ್ಲರೂ ಎಲ್ಲೇರಿ ಗ್ರಾಮ ಇದ್ದು, ಸದರಿ ಜಾಗದ ವಿಷಯದ ಕುರಿತು ಮುಂದಿನ ದಿನಗಳಲ್ಲಿ ಯಾವುದೆ ಸಮಯದಲ್ಲಿ ಒಬ್ಬರಿಗೊಬ್ಬರು ಹೊಡೆಮಾಡಿ ಮಾಡಿಕೊಂಡು ಜೀವ ಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಭಯದ ವಾತಾವರಣವನ್ನುಂಟು ಮಾಡಿ ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇದೆ ಅಂತ ಭಾತ್ಮೀ ತಿಳಿದು ಬಂದ ಮೇರೆಗೆ ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡಿ ಯಾವುದಾದರು ಸಂಜ್ಞೆಯ ಅಪರಾಧ ಮಾಡಬಹುದು ಅಂತಾ ತಿಳಿದು ಬಂದಿದ್ದರಿಂದ ಸದರಿ ಮೊದಲನೇ ಪಾಟರ್ಿ ಜನರಾದ 1)ಶಿವಶಂಕರ ರೆಡ್ಡಿ ತಂದೆ ತಿಪ್ಪರೆಡ್ಡಿ ಅಂಕರೆಡ್ಡಿ ವ:30ವರ್ಷ ಜಾ:ರೆಡ್ಡಿ 2)ತಿಪ್ಪರೆಡ್ಡಿ ತಂದೆ ಶರರಣ ಅಂಕರೆಡ್ಡಿ ವ:64ವರ್ಷ ಜಾ: ರೆಡ್ಡಿ ಸಾ|| ಇಬ್ಬರು ಎಲ್ಲೇರಿ ಗ್ರಾಮ ರವರ ಮೇಲೆ ಮುಂಜಾಗೃತ ಕ್ರಮವಾಗಿ ಇಂದು ಠಾಣೆಗೆ 12.30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಗುರುಮಠಕಲ ಪೊಲೀಸ್ ಠಾಣಾ ಪಿ.ಎ.ಆರ್ ನಂ.01/2021 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 38/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 24/02/2021 ರಂದು ರಾತ್ರಿ 23-45 ಗಂಟೆಗೆ ಫಿಯರ್ಾದಿ ಶ್ರೀ ಜಗನ್ನಾಥರಡ್ಡಿ ವಯ 54 ವರ್ಷ ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ ಹಾಜರ ಪಡಿಸಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ಇಂದು ದಿನಾಂಕ 24/02/2021 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಶಹಾಪೂರದ ತಹಶೀಲಕಾಯರ್ಾಲಯದಿಂದ ಸರಕಾರಿ ಜೀಪ್ ನಂಬರ ಕೆಎ-33-ಜಿ-0243 ನೇದ್ದರಲ್ಲಿ ಜೀಪ್ ಚಾಲಕ ಮಲ್ಲೇಶಪ್ಪ ತಂದೆ ಗುರಪ್ಪ ವಡಗೇರಿ ಇವರೊಂದಿಗೆ ಮನೆಗೆ ಹೋಗುತಿದ್ದಾಗ ಶಹಾಪೂರದ ಹಳೆ ಬಸ್ ನಿಲ್ದಾಣದಲ್ಲಿ ಬರುತಿದ್ದಾಗ, ಒಂದು ಟಿಪ್ಪರ ವಾಹನದಲ್ಲಿ ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹತ್ತಿಗೂಡುರ ಮಾರ್ಗವಾಗಿ ಶಹಾಪೂರ ಕಡೆಗೆ ಬರುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ ಜೊತೆಯಲ್ಲಿದ್ದ ಜೀಪ್ ಚಾಲಕ ಮಲ್ಲೇಶಪ್ಪನಿಗೆ ವಿಷಯ ತಿಳಿಸಿ ಶಹಾಪೂರ ಪೊಲೀಸ್ ಠಾಣೆಗೆ ಭೇಟಿ ನೀಡಿ ರಾತ್ರಿ ಕರ್ತವ್ಯದ ಮೇಲಿದ್ದ ಶ್ರೀ ಹೊನ್ನಪ್ಪ ಹೆಚ್.ಸಿ 101 ರವರಿಗೆ ವಿಷಯ ತಿಳಿಸಿ ಇಬ್ಬರೂ ಪೊಲೀಸರು ಕಳುಹಿಸಿ ಕೊಡಬೇಕು ಅಂತ ಮೌಖಿಕವಾಗಿ ಕೇಳಿಕೊಂಡ ಮೆರೆಗೆ ಠಾಣೆಯಲ್ಲಿ ಹಾಜರಿದ್ದ ಶ್ರೀ ಮಲ್ಲಣ್ಣ ದೇಸಾಯಿ ಹೆಚ್.ಸಿ 79 ಹಾಗೂ ದೇವರಾಜ ಪಿ.ಸಿ 282 ಇವರನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಟ್ಟಿದ್ದು, ನನ್ನ ಜೀಪನಲ್ಲಿ ಕರೆದುಕೊಂಡು ಶಹಾಪೂರ ಪಟ್ಟಣದ ಹೊರವಲಯದಲ್ಲಿರುವ ಬೀದರ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚಾಂದ ಪೆಟ್ರೋಲ್ ಪಂಪ್ ಹತ್ತಿರ ರಾತ್ರಿ 9-20 ಗಂಟೆಗೆ ಹೋಗಿ ನಿಂತುಕೊಂಡಿದ್ದು, ಮರಳು ತುಂಬಿಕೊಂಡು ಬರುತಿದ್ದ ವಾಹನವನ್ನು ನಿಗಾ ಮಾಡುತ್ತಾ ನಿಂತಿದ್ದಾಗ ರಾತ್ರಿ 9-30 ಗಂಟೆಯ ಸುಮಾರಿಗೆ ವಿಭೂತಿಹಳ್ಳಿ ಗ್ರಾಮದ ಕಡೆಯಿಂದ ಒಂದು ಟಿಪ್ಪರ ವಾಹನ ಬಂದಿದ್ದು, ಸದರಿ ವಾಹನ ನನ್ನ ಕೈಯಲ್ಲಿದ್ದ ಟಾರ್ಚನಿಂದ ಸೈಡಿಗೆ ತೆಗೆದುಕೊಳ್ಳಲು ಸೂಚನೆ ನೀಡಿದ್ದು, ಸದರಿ ಟಿಪ್ಪರ ಚಾಲಕನು ರೋಡಿನ ಬದಿಗೆ ವಾಹನ ನಿಲ್ಲಿಸಿದನು. ಅವನ ಹತ್ತಿರ ಹೋಗಿ ವಾಹನದಲ್ಲಿ ಏನು ಲೋಡ ಇದೆ ಅಂತ ವಿಚಾರಿಸಿದಾಗ ಮರಳು ಇದೆ ಅಂತ ಹೇಳಿದನು. ಮರಳು ಎಲ್ಲಿ ಲೋಡ ಮಾಡಿದ್ದು ಯಾವಾಗ ಲೋಡ ಮಾಡಿದ್ದು, ವಾಹನ ಮಾಲಿಕರು ಯಾರು ಅಂತ ಇತ್ಯಾದಿಯಾಗಿ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಶಂಕರಗೌಡ ತಂದೆ ಭೀಮರಾಯ ಹೇರುಂಡಿ ಸಾಃ ಗಾಂಧಿಚೌಕ ಶಹಾಪುರ ಆಂತ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ನಾನೇ ಇರುತ್ತೇನೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇರುವುದಿಲ್ಲ ಅಂತ ಹೇಳಿ ವಾಹನ ಬಿಟ್ಟು ಚಾಂದ ಪಂಕ್ಷನ ಹಾಲ್ ಕಡೆಗೆ ಓಡ ತೊಡಗಿದನು, ಆಗ ನಾನು ನನ್ನ ಕೈಯಲ್ಲಿದ್ದ ಟಾರ್ಚ ಹಾಕಿಕೊಂಡು ನಾವೆಲ್ಲರೂ ಚಾಲಕನನ್ನು ಹಿಂಬಾಲಿಸಿದ್ದು ಸಿಕ್ಕಿರುವುದಿಲ್ಲ. ಟಿಪ್ಪರ ಚಾಲಕನು ಓಡಿ ಹೋಗುವಾಗ ರೋಡಿನ ಮೇಲೆ ಹೋಗುವ ವಾಹನಗಳ ಲೈಟಿನ ಬೆಳಕಿನಲ್ಲಿ ಮತ್ತು ನನ್ನ ಹತ್ತಿರವಿದ್ದ ಟಾರ್ಚನ ಬೆಳಕಿನ ಸಹಾಯದಿಂದ ಟಿಪ್ಪರ ಚಾಲಕನ ಮುಖ ನೋಡಿದ್ದು ಪುನಃ ನೋಡಿದಲ್ಲಿ ನಾವೆಲ್ಲರೂ ಗುರುತಿಸುತ್ತೇವೆ. ನಂತರ ಟಿಪ್ಪರ ವಾಹನದ ಹತ್ತಿರ ಬಂದು ನೋಡಲಾಗಿ ಟಿಪ್ಪರ ನಂಬರ ಕೆಎ-32-ಸಿ-4002 ಸದರಿ ಟಿಪ್ಪರ ವಾಹನದ ಅಂದಾಜು ಮೌಲ್ಯ 4 ಲಕ್ಷ ರೂಪಾಯಿ ಕಿಮ್ಮತ್ತಿನ ವಾಹನದಲ್ಲಿ ಅಂದಾಜು 6 ಬ್ರಾಸ್ನಷ್ಟು ಮರಳು ಇದ್ದು, ಮರಳಿನ ಅಂದಾಜು ಮೌಲ್ಯ 18,000=00 ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ಟಿಪ್ಪರ ಚಾಲಕ/ಮಾಲಿಕನಾದ ಶಂಕರಗೌಡ ಹೇರುಂಡಿ ಈತನು ಸರಕಾಕ್ಕೆ ಸೇರಿದ ಮರಳನ್ನು, ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಟಿಪ್ಪರ ವಾಹನ ನಂ ಕೆಎ-32-ಸಿ-4002 ನೇದ್ದರಲ್ಲಿ ಮರಳು ಲೊಡ ಮಾಡಿಕೊಂಡು ಅಕ್ರಮವಾಗಿ ಸಾಗಿಸುತಿದ್ದ ಬಗ್ಗೆ ಕಂಡು ಬಂದಿರುತ್ತದೆ. ಆದ್ದರಿಂದ ಜೊತೆಯಲ್ಲಿದ್ದ ಶ್ರೀ ದೇವರಾಜ ಪಿ.ಸಿ 282 ಇವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿದ್ದು, ಸದರಿಯವರು, ಇಬ್ಬರೂ ವ್ಯಕ್ತಿಗಳನ್ನು ರಾತ್ರಿ 10-00 ಗಂಟೆಗೆ ಸ್ಥಳಕ್ಕೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ಅಕ್ರಮವಾಗಿ ಮರಳು ಸಾಗಿಸುತಿದ್ದ ಟಿಪ್ಪರ ವಾಹನದ ಬಗ್ಗೆ ಮಾಹಿತಿ ತಿಳಿಸಿ ಸದರಿ ವಾಹನ ಮತ್ತು ಮರಳು ಜಪ್ತಿ ಮಾಡಿಕೊಳ್ಳುವುದಿದೆ ತಾವು ಪಂಚರಾಗಿ ಸಹಕರಿಸಬೇಕು ಅಂತ ಕೇಳಿಕೊಂಡ ಮೆರೆಗೆ ಸದರಿ ಇಬ್ಬರೂ ವ್ಯಕ್ತಿಗಳು ಪಂಚರಾಗಿ ಸಹಕರಿಸಲು ಒಪ್ಪಿಕೊಂಡ ಮೆರೆಗೆ ಪಂಚರ ಸಮಕ್ಷಮದಲ್ಲಿ ಸದರಿ ಮರಳು ತುಂಬಿದ ಟಿಪ್ಪರ ವಾಹನವನ್ನು ರಾತ್ರಿ 10-15 ಗಂಟೆಯಿಂದ 11-15 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡೆನು. ನಂತರ ಬೇರೆ ಒಬ್ಬ ಟಿಪ್ಪರ ಚಾಲಕನ ಸಹಾಯದಿಂದ ಮರಳು ತುಂಬಿದ ಟಿಪ್ಪರ ವಾಹನವನ್ನು ಇಂದು ದಿನಾಂಕ 24/02/2021 ರಂದು 11-45 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಟಿಪ್ಪರ ವಾಹನವನ್ನು ಹಾಜರ ಪಡಿಸಿ ಟಿಪ್ಪರ ಚಾಲಕ/ಮಾಲಿಕನಾದ ಶಂಕರಗೌಡ ತಂದೆ ಭೀಮರಾಯ ಹೇರುಂಡಿ ಸಾಃ ಗಾಂಧಿಚೌಕ ಶಹಾಪೂರ ಈತನ ವಿರುದ್ದ ಕ್ರಮ ಕೈಕೊಳ್ಳುಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 38/2021 ಕಲಂ 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 45/2021 ಕಲಂ: 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ. 4 ಡಿ.ಪಿ ಆಕ್ಟ್ 1961 : ಇಂದು ದಿನಾಂಕಃ 24/02/2021 ರಂದು 9-30 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ರೇಷ್ಮಾ ತಬ್ಹಸೂಮ್ ಗಂಡ ವಸೀಮ್ ಅಕ್ರಮ ಮನ್ಸೂರ್ ಸಾಃ ಉಪ್ಪಾರ ಮೊಹಲ್ಲಾ ಸುರಪೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನಗೆ ದಿನಾಂಕಃ 16/12/2009 ರಂದು ರಂಗಂಪೇಟ ಬೀಚ್ ಮೊಹಲ್ಲಾ ನಿವಾಸಿಯಾದ ವಸೀಮ್ ಅಕ್ರಮ್ ತಂದೆ ಅಬ್ದುಲ್ ರಹೀಮ್ ಮನ್ಸೂರ್ ಇತನೊಂದಿಗೆ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹ ಮಾಡಿದ್ದು ಇರುತ್ತದೆ. ನನಗೆ ಈಗ ಮಹ್ಮದ ಯೂಸುಫ್, ಮಹ್ಮದ ಜಬಿವುಲ್ಲಾ ಅಂತ ಇಬ್ಬರೂ ಗಂಡು ಮಕ್ಕಳು ಹಾಗು ಜೈನಾಬ ತಸ್ಮಿಯಾ ಅಂತ ಒಬ್ಬಳು ಹೆಣ್ಣು ಮಗಳು ಹೀಗೆ ಮೂವರು ಮಕ್ಕಳಿರುತ್ತಾರೆ. ನಾನು ಸರಕಾರಿ ಕಿರಯ ಪ್ರಾಥಮಿಕ ಶಾಲೆ ರಂಗಂಪೇಟದಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮಾವನವರು ಮರಣ ಹೊಂದಿರುತ್ತಾರೆ. ಮದುವೆಯಾದ ಬಳಿಕ ಸುಮಾರು 6 ವರ್ಷಗಳವರೆಗೆ ನನಗೆ ನನ್ನ ಗಂಡ, ಅತ್ತೆ, ಭಾವ ಹಾಗು ನೆಗೆಣಿ ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದು ಇರುತ್ತದೆ. ನಂತರ ಕಳೆದ 4 ವರ್ಷಗಳಿಂದ ಅಂದರೆ 2017 ನೇ ಸಾಲಿನಿಂದ ಇಲ್ಲಿಯವರೆಗೆ ನನಗೆ ನನ್ನ ಗಂಡನಾದ 1) ವಸೀಮ್ ಅಕ್ರಮ್ ತಂದೆ ಅಬ್ದುಲ್ ರಹೀಮ್ ಮನ್ಸೂರ್, ಅತ್ತೆಯಾದ 2) ಶಮೀಮ್ ಬೇಗಂ ಗಂಡ ಅಬ್ದುಲ್ ರಹಿಮ್ ಮನ್ಸೂರ್, ಭಾವನಾದ 3) ಮಹ್ಮದ ಆಸೀಫ್ ತಂದೆ ಅಬ್ದುಲ್ ರಹಿಮ್ ಮನ್ಸೂರ್, ನೆಗೆಣಿಯಾದ 4) ಸಬಾ ಗಂಡ ಮಹ್ಮದ್ ಆಸೀಫ್ ಮನ್ಸೂರ್ ಎಲ್ಲರೂ ಸಾ|| ಬೀಚ್ ಮೊಹಲ್ಲಾ ರಂಗಂಪೇಟ ಇವರು ನನಗೆ ಮದುವೆ ಸಮಯದಲ್ಲಿ ನಿನ್ನ ತವರು ಮನೆಯವರು ನಮಗೆ ವರದಕ್ಷಿಣೆ ಕೊಟ್ಟಿರುವದಿಲ್ಲ, ಈಗ ತವರು ಮನೆಯಿಂದ 10 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ತಗೆದುಕೊಂಡು ಬಾ ಅಂತ ಹೇಳಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದರು. ಆಗ ನಾನು ತವರು ಮನೆಗೆ ಹೋಗಿ ನನ್ನ ತಾಯಿಯವರಿಗೆ ಈ ವಿಷಯ ತಿಳಿಸಿದಾಗ ನಾವು ಬಡವರಿದ್ದೇವೆ, ಅಷ್ಟೊಂದು ಹಣ, ಬಂಗಾರ ನಮಗೆ ಕೊಡಲು ಆಗುವದಿಲ್ಲ, ತಾಳಿಕೊಂಡು ಹೋಗು ಅಂತ ಹೇಳಿದ್ದರಿಂದ ನಾನು ಗಂಡನ ಮನೆಯಲ್ಲಿ ಅವರು ಕೊಡುತ್ತಿರುವ ಕಿರುಕುಳ ಸಹಿಸಿಕೊಂಡು ಸಂಸಾರ ಮಾಡುತ್ತಿದ್ದೇನು. ಆಗ ನನ್ನ ಅತ್ತೆ, ಭಾವ, ಹಾಗು ನೆಗೆಣಿ ಇವರು ನೀನು ತವರು ಮನೆಯಿಂದ ಹಣ, ಬಂಗಾರ ತಂದರೆ ನಮ್ಮ ಮನೆಯಲ್ಲಿ ಇರು, ಇಲ್ಲದಿದ್ದರೆ ನಿನ್ನ ಗಂಡನಿಗೆ ಎರಡನೆ ಮದುವೆ ಮಾಡಿಸುತ್ತೇವೆ, ಮನೆ ಬಿಟ್ಟು ಹೋಗು ಸೂಳೆ ಅಂತ ಹೇಳುತ್ತ ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂದೆ ಕೊಡಲಾರಂಭಿಸಿದರಿಂದ ಅವರ ಕಿರುಕುಳ ತಾಳಲಾರದೇ ಕಳೆದ ಮೂರು ವರ್ಷಗಳ ಹಿಂದೆ ನಾನು ನನ್ನ ಮಕ್ಕಳೊಂದಿಗೆ ತವರು ಮನೆಗೆ ಬಂದು ತಾಯಿಯವರೊಂದಿಗೆ ವಾಸವಾಗಿರುತ್ತೇನೆ.ಇಂದು ದಿನಾಂಕ: 24/02/2021 ರಂದು ಸಾಯಂಕಾಲ 6-30 ಗಂಟೆಗೆ ನಾನು ಮತ್ತು ನನ್ನ ತಾಯಿಯಾದ ಮುಮ್ತಾಜ ಬೇಗಂ ಇಬ್ಬರೂ ಉಪ್ಪಾರ ಮೊಹಲ್ಲಾದಲ್ಲಿರುವ ನನ್ನ ತವರು ಮನೆಯ ಮುಂದೆ ಕುಳಿತಿದ್ದಾಗ ನನ್ನ ಗಂಡ 1) ವಸೀಮ್ ಅಕ್ರಮ್ ಅತ್ತೆ 2) ಶಮೀಮ್ ಬೇಗಂ,--ಭಾವ 3) ಮಹ್ಮದ ಆಸೀಫ್, ನೆಗೆಣಿ 4) ಸಬಾ ಇವರೆಲ್ಲರೂ ಬಂದು ನನಗೆ ಲೇ ಸೂಳೆ ನಿನಗೆ 10 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ತಗೆದುಕೊಂಡು ಬಾ ಅಂತ ಹೇಳಿ ಕಳಿಸಿದರೂ ತರದೇ ಇಲ್ಲೆ ಬಿದ್ದಿಯೇನು, ನಿನ್ನ ಪಗಾರ ಎಲ್ಲಿ ಇಟ್ಟಿದ್ದಿ ರಂಡಿ ಕೊಡು ನಮಗೆ ಅಂತ ಹೇಳುತ್ತ ಅವರೆಲ್ಲರೂ ನನಗೆ ಕೈಯಿಂದ ತಲೆಗೆ, ಬೆನ್ನಿಗೆ, ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾಗ ನನ್ನ ತಾಯಿ ಹಾಗು ಸಮೀಪದ ಮನೆಯವರಾದ ಭೀಮವ್ವ ಗಂಡ ರಂಗಪ್ಪ, ಹೈದರಬೀ ಗಂಡ ಮಹಿಬೂಬ ಇವರು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ನಾವು ಹೇಳಿದಷ್ಟು ಹಣ, ಬಂಗಾರ ತಂದರೆ ಒಳ್ಳೆಯದು, ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಎಂದು ನನಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 45/2021 ಕಲಂ. 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ 4 ಡಿ.ಪಿ ಆಕ್ಟ್ 1961 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.