ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/02/2021

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 26/2021 ಕಲಂ:279, 338 ಐಪಿಸಿ : ದಿನಾಂಕ: 25/02/2021 ರಂದು 6-30 ಪಿಎಮ್ ಕ್ಕೆ ಶ್ರೀ ಶರಣಪ್ಪ ತಂದೆ ಮುನಿಯಪ್ಪ ಬಡಿಗೇರ, ವ:34, ಜಾ:ಮಾದಿಗ, ಉ:ಒಕ್ಕಲುತನ ಸಾ:ಮನಗನಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ:18/02/2021 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ನಮ್ಮೂರ ಶರಣ ಪಾಟೀಲ್ ಇವರ ಕಿರಾಣಿ ಅಂಗಡಿಗೆ ಹೋಗಿದ್ದೇನು. ನಮ್ಮ ತಂದೆಯು ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬರುವುದಾಗಿ ಹೇಳಿ ನಮ್ಮೂರ ಗೇಟಿನ ಹತ್ತಿರ ನಿಂತಾಗ ಖಾನಾಪೂರ ಕಡೆಯಿಂದ ಒಂದು ಅಟೋ ಯಾದಗಿರಿಗೆ ಹೊರಟಿದ್ದು, ನಮ್ಮ ತಂದೆಯು ಆ ಅಟೋಗೆ ಕೈ ಮಾಡಿ ನಿಲ್ಲಿಸಿ, ಒಳಗಡೆ ಹತ್ತಿ ಕುಳಿತುಕೊಂಡನು. ಅಟೋ ನಮ್ಮೂರಿನಿಂದ ಹೊರಟ್ಟಿದ್ದು, ಶಹಾಪೂರ-ಯಾದಗಿರಿ ಮೇನ ರೋಡ ನಮ್ಮೂರ ಅಂಬೇಡ್ಕರ ಚೌಕ ಹತ್ತಿರ ಹೋಗುತ್ತಿದ್ದಾಗ ಅಟೋ ನಂ. ಕೆಎ 33/9191 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ಒಮ್ಮೆಲೆ ಎಡಕ್ಕೆ ಕಟ್ ಹೊಡೆದಿದ್ದರಿಂದ ನಮ್ಮ ತಂದೆಯು ಅಟೋದಿಂದ ಕೆಳಗೆ ಬಿದ್ದಾಗ ಅಟೋದ ಬಾಡಿ ನಮ್ಮ ತಂದೆಯ ಎದೆಯ ಮೇಲೆ ಬಿದ್ದುಬಿಟ್ಟಿತ್ತು. ಆಗ ನಾನು ಮತ್ತು ನಮ್ಮೂರ ಮಲ್ಲಪ್ಪ ಹಾಗೂ ಲಿಂಗಣ್ಣ ಹೋಗಿ ಅಟೋ ಎತ್ತಿದೆವು. ನಮ್ಮ ತಂದೆಯ ಎದೆಗೆ ಭಾರಿ ಒಳಪೆಟ್ಟಾಗಿತ್ತು. ಅಟೋದಲ್ಲಿ ಕುಳಿತ್ತಿದ್ದ ಇನ್ನೊಬ್ಬ ಭೀಮರಾಯ ತಂದೆ ಸಾಬಣ್ಣ ಪೂಜಾರಿ ಈತನಿಗೆ ಯಾವುದೇ ಗಾಯಗಳಾಗಿರಲಿಲ್ಲ. ಅಟೋ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಆಂಜನೇಯ ತಂದೆ ಬಸವರಾಜ ಸಾ:ಮುಂಡರಗಿ ಎಂದು ಹೇಳಿದನು. ಅಟೋ ಚಾಲಕನಿಗೂ ಯಾವುದೇ ಗಾಯ ಆಗಿರಲಿಲ್ಲ. ನಮ್ಮ ತಂದೆಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿ, ಪ್ರಥಮ ಉಪಚಾರ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಹೋಗುವಂತೆ ಸಲಹೆ ನೀಡಿದರು. ಎಮ್.ಎಲ್.ಸಿ ವಿಚಾರಣೆ ಕುರಿತು ವಡಗೇರಾ ಪೊಲೀಸರು ಬಂದಿದ್ದು, ನಮ್ಮ ಹಿರಿಯರಿಗೆ ವಿಚಾರ ಮಾಡಿ ದೂರು ಕೊಡುವುದಾಗಿ ತಿಳಿಸಿರುತ್ತೇವೆ. ನಮ್ಮ ತಂದೆಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಅಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 25/2021 ಕಲಂ:279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 39/2020.ಕಲಂ. 379. ಐ.ಪಿ.ಸಿ. : ಇಂದು ದಿನಾಂಕ 25/02/2021 ರಂದು 18-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ಪ್ರಕಾಶ ತಂದೆ ಶ್ರೀಶೈಲ ಪಟ್ಟಣಶೆಟ್ಟಿ ವ|| 28 ಜಾ|| ಲಿಂಗಾಯತ ಉ|| ಸಹಾಯಕ ಕೃಷಿ ಅಧಿಕಾರಿ ಬೀಜೊತ್ಪಾದನಾ ಕೇಂದ್ರ ಹತ್ತಿಗುಡೂರ ಸಾ|| ಚಿಂಚೊಳಿ ತಾ|| ಸುರಪೂರ. ಹಾ|| ವ|| ಬಸವೇಶ್ವರ ನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ನಮ್ಮ ಕೃಷಿ ಇಲಾಖೆಯ ಬೀಜೊತ್ಪಾದನಾ ಕೇಂದ್ರ ಹತ್ತಿಗುಡೂರದಲ್ಲಿ ಕೃಷಿ ಕೆಲಸಕ್ಕೆ 4 ಎತ್ತುಗಳು ಇದ್ದು. ಅವುಗಳ ನಿರ್ವಹಣೆ ಮತ್ತು ಕೃಷಿ ಕೆಲಸಕ್ಕೆ ಭೀಮರಾಯ ತಂದೆ ಮಹಾದೇವಪ್ಪ ನಾಟೇಕಾರ, ಸಾ|| ಹತ್ತಿಗುಡೂರ ಭಿಮಪ್ಪ ತಂದೆ ಹೈಯಾಳಪ್ಪ ನಾಟೇಕಾರ ಸಾ|| ಹತ್ತಿಗುಡೂರ ಇವರು ಇರುತ್ತಾರೆ. ದಿನಾಂಕ 21/02/2021 ರಂದು ಬೆಳಿಗ್ಗೆ 10-00 ಗಂಟೆಗೆ ನನಗೆ ಭಿಮರಾಯ ತಂದೆ ಮಹಾದೇವಪ್ಪ ಈತನು ಪೋನಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 20/02/2021 ರಂದು ನಾನು ಮತ್ತು ಭಿಮಪ್ಪ ಇಬ್ಬರು ಕೂಡಿ ಎತ್ತುಗಳನ್ನು ಕೃಷಿ ಇಲಾಖೆಯ ಜಮೀನಿನಲ್ಲಿ ಮೇಯಿಸಿಕೊಂಡು ಬಂದು ಸಾಯಂಕಾಲ 6-00 ಗಂಟೆಗೆ ಎತ್ತಿನ ಕೊಟ್ಟಿಗೆಯಲ್ಲಿ 4 ಎತ್ತುಗಳನ್ನು ಕಟ್ಟಿ ಹಾಕಿ ಮೇವು ಹಾಕಿ ರಾತ್ರಿ 9-00 ಗಂಟೆಗೆ ಮನೆಗೆ ನಾನು ಮತ್ತು ಭಿಮಪ್ಪ ಹೋಗಿರುತ್ತೆವೆ, ಮರಳಿ ದಿನಾಂಕ 21/02/2021 ರಂದು ಬೆಳಿಗ್ಗೆ 6-00 ಗಂಟೆಗೆ ಕೃಷಿ ಇಲಾಖೆಯ ಬೀಜೊತ್ಪಾದನಾ ಕೇಂದ್ರದಲ್ಲಿ ಬಂದು ಕೊಟ್ಟಿಗೆಯಲ್ಲಿ ನೊಡಲಾಗಿ 2 ಎತ್ತುಗಳು ಇದ್ದು ಇನ್ನು 2 ಎತ್ತುಗಳು ಕಾಣಿಸುತ್ತಿಲ್ಲ ಹುಡುಕಾಡಿದರು ಸಿಕ್ಕಿರಿವುದಿಲ್ಲ ಅಂತ ತಿಳಿಸಿದ್ದರಿಂದ ನಾನು ನಮ್ಮ ಕೃಷಿ ಇಲಾಖೆಯ ಬೀಜೊತ್ಪಾದನಾ ಕೇಂದ್ರ ಹತ್ತಿಗುಡೂರಕ್ಕೆ ಬಂದು ನೋಡಲಾಗಿ 2 ಎತ್ತುಗಳು ಇರಲಿಲ್ಲಾ ಆಗ ನಾನು ಮತ್ತು ಭಿಮರಾಯ ಮತ್ತು ಭೀಮಪ್ಪ ಎಲ್ಲರು ಹುಡುಕಾಡಿದರು ಸಿಕ್ಕಿರುವದಿಲ್ಲಾ. ಕಳ್ಳತನವಾದ ಎರಡು ಬಿಳಿ ಬಣ್ಣದ ಎತ್ತುಗಳು ಅಂದಾಜು ವಯಸ್ಸು 12 ವರ್ಷಗಳು ಅವುಗಳ ಅ:ಕಿ:44,000=00 ರೂ ಇದ್ದು ಸದರಿ ಎತ್ತುಗಳಿಗೆ ಹುಡುಕಾಡಿ ಮತ್ತು ನಮ್ಮ ಇಲಾಖೆಯ ಮೆಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ನಮ್ಮ ಇಲಾಖೆಯ 2 ಎತ್ತುಗಳನ್ನು ಪತ್ತೆ ಮಾಡಿಕೊಡಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 39/2020 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಕಲಿಸಿ ಕೊಂಡು ತನಿಕೆ ಕೈಕೊಂಡೆನು

 ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 30/2021 ಕಲಂ 279, 337, 338, 304 (ಎ) ಐಪಿಸಿ : ಇಂದು ದಿನಾಂಕ 25-02-2021 ರಂದು 3-15 ಪಿ.ಎಮ್ ಕ್ಕೆ ಆರೋಪಿತನಾದ ಶಿವಬಾಲಕ ತಂದೆ ಪ್ರಲ್ಹಾದ ಕುಸುಬಾಳ ಸಾ: ಯರಗೋಳ ಇತನು ತನ್ನ ಟಂಟಂ ನಂ ಕೆಎ-33/3638 ನೇದ್ದರಲ್ಲಿ ಮೃತಳಾದ ಶ್ರಿಮತಿ ಶರಣಮ್ಮಾ ಗಂಡ ಶಿವಣ್ಣಾ ತಳವಾರ ವಯಾ:58 ಉ: ಕೂಲಿ ಜಾ: ಕಬ್ಬಲಿಗೇರ ಸಾ: ಕುನ್ನೂರ ತಾ: ಚಿತಾಪುರ ಮತ್ತು ಗಾಯಳುಗಳಾದ ಕುಮಾರಿ ಭಾಗ್ಯಶ್ರೀ ತಂದೆ ನಿಂಗಪ್ಪಾ ತ್ರಿಮಲ್ಲೇರ ವಯಾ: 12 ಸಾ: ಅಚೋಲಾ 2) ಶ್ರೀಮತಿ ತಿಪಳಿಬಾಯಿ ಗಂಡ ಗೋಬ್ರ್ಯಾ ಚ್ವಹಾನ ವಯಾ:50 ಸಾ: ಅಲ್ಲಿಪೂರ ತಾಂಡಾ ಇವರನ್ನು ಕೂಡಿಸಿಕೊಂಡು ಅಲ್ಲಿಪೂರ ಕಡೆಯಿಂದ ಅಚೋಲಾ ಗ್ರಾಮದ ಕಡೆಗೆ ಹೋಗುವಾಗ ಆರೋಪಿತನು ಈತನು ತನ್ನ ಟಂಟಂ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಟಂಟಂ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ ದ ಬಗ್ಗೆ ತಿಳಿಸಿದರು. ಈ ಘಟನೆಯಲ್ಲಿ ಶ್ರಿಮತಿ ಶರಣಮ್ಮಾ ಗಂಡ ಶಿವಣ್ಣಾ ತಳವಾರ ಇವಳು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೂಳಿದ ಭಾಗ್ಯಶ್ರೀ ಮತ್ತು ತಿಪಳಿಬಾಯಿ ಕ್ರಮವಾಗಿ ಸಾಧಾ ಮತ್ತು ಭಾರಿ ಗಾಯಹೊಂದಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 26-02-2021 11:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ