ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/03/2021

ಭೀಗುಡಿ ಪೊಲೀಸ ಠಾಣೆ:- 25/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 25/03/2021 ರಂದು 02.15 ಪಿ.ಎಮ್.ಕ್ಕೆ ಭೀ.ಗುಡಿಯ ಎಸ್.ಬಿ.ಐ ಬ್ಯಾಕ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 3.30 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1040=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಗೋಗಿ ಪೊಲೀಸ್ ಠಾಣೆ:- 20/2021 279, 337, 338 ಐಪಿಸಿ : ಇಂದು ದಿನಾಂಕ: 25/03/2021 ರಂದು 07.25 ಪಿಎಂ ಕ್ಕೆ ಅಜರ್ಿದಾರನಾದ ಶ್ರೀ. ಅನೀಲ ತಂದೆ ರಾಮು ರಾಠೋಡ ವಯಾ: 30 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಚಾಮನಾಳ ತಾಂಡಾ ತಾ; ಶಹಾಪೂರ ಜಿ; ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶ ಸಾರಾಂಶವೆನೆಂದರೆ, ದಿನಾಂಕ:22/03/2021 ರಂದು ಉಕ್ಕನಾಳ ತಾಂಡದಲ್ಲಿ ಇರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಬಂದರಾಯಿತು ಅಂತಾ ಚಾಮನಾಳ ತಾಂಡಾದಿಂದ ನಾನು ನನ್ನ ಮಗನಾದ ವಿಷ್ಣು ತಂದೆ ಅನೀಲ ರಾಠೋಡ ವಯಾ: 06 ವರ್ಷ ಇತನಿಗೆ ಕರೆದುಕೊಂಡು ಮೋಟಾರ್ ಸೈಕಲ್ ನಂ: ಕೆಎ-33-ಆರ್-9212 ನೇದ್ದರ ಮೇಲೆ ಹೋಗುತ್ತಿದ್ದಾಗ ಶಹಾಪೂರ ಸಿಂದಗಿ ಮೇನ ರೋಡಿನ ಉಕ್ಕನಾಳ ದೋರಿ ಗುಡ್ಡದ ಸಮೀಪ ಇರುವ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ದಿನಾಂಕ:22/03/2021 ರಂದು 03.00 ಪಿಎಂ ಸುಮಾರಿಗೆ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಮೋಟಾರ್ ಸೈಕಲ್ ಚಾಲಕ ತನ್ನ ಮೋಟಾರ್ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಕ್ಕೆ ಡಿಕ್ಕಿ ಪಡೆಸಿದ ಪರಿಣಾಮವಾಗಿ ನಾನು ಮತ್ತು ನನ್ನ ಮಗ ಇಬ್ಬರು ಮೋಟಾರ್ ಸೈಕಲ ಸಮೇತವಾಗಿ ಕೆಳಗೆ ಬಿದ್ದೇವು, ಅಷ್ಟರಲ್ಲಿ ನಮ್ಮ ಹಿಂದೆ ಬರುತ್ತಿದ್ದ ನಮ್ಮ ತಾಂಡಾದವರಾದ 1) ಬಿಲ್ಲು ತಂದೆ ಲಚಮಾನಾಯ್ಕ ಚವ್ಹಾಣ ವ:35 ಉ:ಒಕ್ಕಲುತನ ಜಾ: ಲಂಬಾಣಿ ಸಾ: ಚಾಮನಾಳ ತಾಂಡಾ ತಾ: ಶಹಾಪೂರ 2) ಲೋಹಿತ ತಂದೆ ಕಿಶನ ರಾಠೊಡ ವಯಾ:30 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಚಮನಾಳ ತಾಂಡಾ ತಾ: ಶಹಾಪೂರ ಇವರುಗಳು ಅಪಘಾತ ಆಗಿದ್ದನ್ನು ನೋಡಿ ನಮಗೆ ಎಬ್ಬಿಸಿದರು ನೋಡಲಾಗಿ ನನಗೆ ಎಡಗಡೆಯ ಬುಜಕ್ಕೆ ಭಾರಿ ಗುಪ್ತಗಾಯ ಆಗಿತ್ತು, ನನ್ನ ಮಗನಾದ ವಿಷ್ಣು ತಂದೆ ಅನೀಲ ಈತನಿಗೆ ತೆಲೆಗೆ ಭಾರಿ ಗುಪ್ತಗಾಯ ಆಗಿ, ಹಣೆಯ ಹತ್ತಿರ ರಕ್ತಗಾಯ ಆಗಿತ್ತು. ನಮಗೆ ಡಿಕ್ಕಿ ಪಡೆಸಿ ಅಪಘಾತ ಮಾಡಿದ ಮೋಟಾರ್ ಸೈಕಲ ನಂಬರ ನೋಡಲಾಗಿ ಕೆಎ-32-ಇಎನ್-6631 ಅಂತಾ ಇತ್ತು ಸದರಿ ಮೋಟಾರ ಸೈಕಲ್ ಮೇಲೆ ಬಂದವರಿಗೆ ವಿಚಾರಿಸಿದಾಗ ಮೋಟಾರ್ ಸೈಕಲ ನಡೆಸಿದವನು ತನ್ನ ಹೆಸರು ಸುರೇಶ ತಂದೆ ಮಲ್ಲಿಕಾಜರ್ುನ ಕೋರವಾರ ಸಾ: ಮಳ್ಳಿ ತಾ: ಯಡ್ರಾಮಿ ಜಿ: ಕಲಬುರಗಿ ಅಂತಾ ತಿಳಿಸಿದನು. ಸದರಿ ಸುರೇಶ ಇವರ ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತ ವ್ಯಕ್ತಿಯ ಹೆಸರು ಗುತ್ತಪ್ಪ ತಂದೆ ತೋಟಪ್ಪ ನಾಗೊಂಡ ವಯಾ:28 ಉ: ವಿದ್ಯಾಥರ್ಿ ಜಾ: ಲಿಂಗಾಯತ ಸಾ: ಮಳ್ಳಿ ತಾ: ಯಡ್ರಾಮಿ ಜಿ; ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಎಡಗೈಗೆ ಭಾರಿ ಗಾಯ ಪೆಟ್ಟಾಗಿದೆ ಅಂತಾ ತಿಳಿಸಿದರು. ನಂತರ ನಾವು ಖಾಸಗಿ ವಾಹನದಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ. ನನ್ನ ಮಗನಿಗೆ ಭಾರಿಗಾಯವಾಗಿದ್ದರಿಂದ ನಾನು ನನ್ನ ಮಗಿನಗೆ ಉಪಚಾರ ಮಾಡಿಸಿ ತಡವಾಗಿ ಇಂದು ದಿನಾಂಕ: 25/03/2021 ರಂದು 07.25 ಪಿಎಂ ಕ್ಕೆ ಠಾಣೆಗೆ ಬಂದು ಈ ಅಜರ್ಿ ನೀಡಿರುತ್ತೇನೆ. ನಮಗೆ ಅಪಘಾತ ಮಾಡಿದ ಮೋಟಾರ್ ಸೈಕಲ ನಂ: ಕೆಎ-32-ಇಎನ್-6631 ನೇದ್ದರ ಚಾಲಕನಾದ ಸುರೇಶ ತಂದೆ ಮಲ್ಲಿಕಾಜರ್ುನ ಕೋರವಾರ ಸಾ: ಮಳ್ಳಿ ತಾ: ಯಡ್ರಾಮಿ ಜಿ: ಕಲಬುರಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಆಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 27/2021 ಕಲಂ, 279, 337, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:- 17/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 25/03/2021 ರಂದು 7:10 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 6:30 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 17/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 9:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 820/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.ಅರುಣ ತಂದೆ ಸಿದ್ರಾಮಪ್ಪ ಪ್ರಭಾಕರ್ ವಯ:32 ವರ್ಷ, ಜಾ:ಹಿಂದೂ ಚಲವಾದಿ, ಉ:ಡ್ರೈವರ್, ಸಾ:ನಾರಾಯಣಪೂರ

ಗುರಮಿಠಕಲ್ ಪೊಲೀಸ್ ಠಾಣೆ:- 45/2021 ಕಲಂ: 273 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ಇಂದು ದಿನಾಂಕ 25.03.2021 ರಂದು ಬೆಳಿಗ್ಗೆ 9:00 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಹೆಂಡದ ಪ್ಲಾಸ್ಟಿಕ್ ಪಾಕೇಟ್ಗಳು ಚಂಡರಕಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ಒಂದು ಲೀಟರ್ ಅಳತೆಯ ಹೆಂಡ ತುಂಬಿದ 30 ಪಾಕೇಟ್ಗಳು ಒಟ್ಟು 9:00 ರೂ ಬೆಲೆಯ ಮುದ್ದೆ ಮಾಲನ್ನು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 45/2021 ಕಲಂ:273 280 ಐಪಿಸಿ ಮತ್ತು 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 26-03-2021 11:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080