Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/04/2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 25/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 25/04/2021 ರಂದು ಸಮಯ 6-30 ಎ.ಎಂ.ಕ್ಕೆ ಯಾದಗಿರಿ ಆಸ್ಪತೆಯಿಂದ ಆರ್.ಟಿ.ಎ/ ಡೆತ್ ಎಂ.ಎಲ್.ಸಿ ಪೋನ್ ಮೂಲಕ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆ ಕುರಿತು ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಮೃತನ ಅಣ್ಣನಾದ ಪಿಯರ್ಾದಿ ಶ್ರೀ ಚಾಂದಪಾಶಾ ತಂದೆ ಖಾಜಾಮಿಯಾ ಕಾಳಗಿ ವಯ;32 ವರ್ಷ. ಜಾ;ಮುಸ್ಲಿಂ, ಉ;ಗೌಂಡಿ ಕೆಲಸ, ಸಾ;ಆಶ್ರಯ ಕಾಲನಿ, ಸೇಡಂ, ತಾ;ಸೇಡಂ, ಜಿ;ಕಲಬುರಗಿ ಇವರು ಘಟನೆ ಬಗ್ಗೆ ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 7 ಎ.ಎಂ ದಿಂದ 8 ಎ.ಎಂ. ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಗೌಂಡಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ತಂದೆ-ತಾಯಿಗೆ ನಾವು ಒಟ್ಟು 08 ಜನ ಮಕ್ಕಳಿರುತ್ತೇವೆ. 05 ಗಂಡು ಮತ್ತು 03 ಹೆಣ್ಣು ಮಕ್ಕಳಿರುತ್ತಾರೆ. ನನ್ನ ತಮ್ಮನಾದ ಮಹಮದ್ ಆಸಿಫ್ ವಯ;24 ವರ್ಷ ಈತನು ಲಾರಿ ಚಾಲಕನಿದ್ದು ನಮ್ಮ ಸಂಬಂಧಿಕರ ಲಾರಿ ನಂ. ಕೆಎ-49, 1014 ನೇದ್ದನ್ನು ಸುಮಾರು ದಿನಗಳಿಂದ ಚಾಲನೆ ಮಾಡಿಕೊಂಡು ಬಂದಿರುತ್ತಾನೆ. ನಿನ್ನೆ ದಿನಾಂಕ 24/04/2021 ರಂದು ಸಾಯಂಕಾಲ ತನ್ನ ಲಾರಿಗೆ ಸೇಡಂ ವಾಸವದತ್ತಾ ಸಿಮೆಂಟ್ ಕಂಪನಿಯಲ್ಲಿ ಸಿಮೆಂಟ್ ಲೋಡ್ ಮಾಡಿಕೊಂಡು ಹತ್ತಿಗುಡೂರಕ್ಕೆ ಹೋಗುತ್ತೇನೆಂದು ನಮಗೆ ಮನೆಯಲ್ಲಿ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 25/04/2021 ರಂದು ಮದ್ಯರಾತ್ರಿ 00-30 ಎ,ಎಂ.ದ ಸುಮಾರಿಗೆ ನನ್ನ ತಮ್ಮನಂತೆಯೇ ಆತನ ಜೊತೆ ಕೆಲಸ ಮಾಡುವ ನಮ್ಮೂರಿನ ಲಾರಿ ಚಾಲಕ ಖದೀರಪಾಷಾ ತಂದೆ ಬಾಬುಷಾ ಈತನು ಪೋನ್ ಮಾಡಿ ನನಗೆ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಿನ್ನ ತಮ್ಮ ಇಬ್ಬರು ನಮ್ಮ ನಮ್ಮ ಲಾರಿಗಳಿಗೆ ಸಿಮೆಂಟ್ ಲೋಡ್ ಮಾಡಿಕೊಂಡು ಸೇಡಂದಿಂದ ಹತ್ತಿಗುಡೂರಕ್ಕೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ಶಹಾಪುರ ಬೈಪಾಸ್ ರಸ್ತೆಯ ಅಬ್ಬೆತುಮಕುರ ಕ್ರಾಸ್ ಹತ್ತಿರ ನಿಮ್ಮ ತಮ್ಮನು ನಡೆಸುತ್ತಿದ್ದ ಲಾರಿ ನಂಬರ ಕೆಎ-49, 1014 ನೇದ್ದು ನನ್ನ ಲಾರಿಯ ಮುಂದೆ ಹೋಗುತ್ತಿದ್ದು ನಾನು ನೋಡು ನೋಡುತ್ತಿದ್ದಂತೆ ನಿನ್ನ ತಮ್ಮನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಕರ್ವದಲ್ಲಿ ಒಮ್ಮೊಲೆ ಬಲಕ್ಕೆ ಕಟ್ ಹೊಡೆದಾಗ ಲಾರಿಯು ಸ್ಕಿಡ್ ಆಗಿ ಬಲಕ್ಕೆ ಪಲ್ಟಿಯಾಗಿ ರಸ್ತೆಯ ಬದಿಯ ಹೊಲದಲ್ಲಿ ಬಿದ್ದು ಪಲ್ಟಿಯಾಗಿರುತ್ತದೆ. ಆಗ ನಾನು ನನ್ನ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಲಾರಿಯ ಸ್ಟೇರಿಂಗ್ ನಿನ್ನ ತಮ್ಮನ ಎದೆಗೆ ಬಡಿದು ಮತ್ತು ತಲೆಗೆ ಭಾರೀ ಗುಪ್ತಗಾಯವಾಗಿದ್ದು ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ನಾನು ಅವನಿಗೆ ಎಚ್ಚರಿಸಲು ಆದರೆ ಈ ಅಪಘಾತದಲ್ಲಿ ಆತನಿಗೆ ಆದ ಗಂಬೀರ ಸ್ವರೂಪದ ಗಾಯಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಆಗ ಅದೇ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ವಾಹನಗಳ ಚಾಲಕರುಗಳ ಸಹಾಯದಿಂದ ಆತನಿಗೆ ಲಾರಿಯಿಂದ ಹೊರಗೆ ತಂದಿರುತ್ತೇವೆ. ಈ ಅಪಘಾತವು ಇಂದು ದಿನಾಂಕ 25/04/2021 ರಂದು ಸಮಯ 00-15 ಎ.ಎಂ.ಕ್ಕೆ ಜರುಗಿರುತ್ತದೆ ಆತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ನೀವು ಕೂಡಲೇ ಆಸ್ಪತ್ರೆಗೆ ಬರಬೇಕು ಅಂತಾ ಹೇಳಿದಾಗ ನನಗೆ ಗಾಬರಿಯಾಗಿ ಮನೆಯಲ್ಲಿದ್ದ ನನ್ನ ತಮ್ಮ ಮಹಮದ್ ರಫೀಕ್ ಮತ್ತು ನನ್ನ ತಾಯಿ ಜಾಹೇರಬೇಗಂ ಹಾಗೂ ನಮ್ಮ ಸಂಬಂಧಿಕರಾದ ಮಹಮದ್ ತಂದೆ ಶೇಕ್ ಹೈಮದ್ ಮೆಕಾನಿಕ್ ಹಾಗೂ ಮಹೀಬೂಬ ತಂದೆ ಗೂಡುಮಿಯಾ ಪಟೇಲ್ ಇವರಿಗೆ ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ತಮ್ಮನ ಮೃತದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿದ್ದು, ನಾನು ಮತ್ತು ನನ್ನ ತಾಯಿ, ನನ್ನ ತಮ್ಮ ಇವರೆಲ್ಲರೂ ನನ್ನ ತಮ್ಮ ಮಹಮದ್ ಆಸೀಪ್ ಈತನ ಮೃತದೇಹವನ್ನು ಗುತರ್ಿಸಿದ್ದು ಇರುತ್ತದೆ. ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 25/04/2021 ರಂದು ಸಮಯ 00-15 ಎ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಬೈಪಾಸ್ ಮುಖ್ಯ ರಸ್ತೆಯ ಅಬ್ಬೆತುಮಕುರ ಕ್ರಾಸ್ ಮುಖ್ಯ ರಸ್ತೆಯ ಹತ್ತಿರ ನನ್ನ ತಮ್ಮನಾದ ಮಹಮದ್ ಆಸೀಫ್ ಈತನು ತಾನು ಚಾಲನೆ ಮಾಡಿಕೊಂಡು ಹೊರಟಿದ್ದ ಲಾರಿ ನಂ. ಕೆಎ-49, 1014 ನೇದ್ದನ್ನು ಯಾದಗಿರಿ ಕಡೆಯಿಂದ ಹತ್ತಿಗುಡೂರ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ನನ್ನ ತಮ್ಮನು ಅಪಘಾತದಲ್ಲಾದ ಗಂಭೀರ ಸ್ವರೂಪದ ಗಾಯಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 8-30 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 25/2021 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 56/2021 ಕಲಂ 143,147,323,341,504,506 ಸಂ:149 ಐ.ಪಿ.ಸಿ : ಇಂದು ದಿನಾಂಕ 25-04-2021 ರಂದು 4-15 ಎ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಸಾಬಣ್ಣಾ ತಂದೆ ಸಿದ್ದಪ್ಪಾ ಸೋಮಣ್ಣೋರ ವಯಾ: 42 ಉ:ಒಕ್ಕಲುತನ ಜಾ: ಕಬ್ಬಲಿಗೇರ ಸಾ; ಹತ್ತಿಕುಣಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 22-04-2021 ರಂದು ನಮ್ಮ ಮನೆಯ ಮುಂದೆ ನನ್ನ ತಮ್ಮನಾದ ಸಣ್ಣ ಸಾಬಣ್ಣಾ ಇತನ ಮದುವೆ ನೆರವೇರಿದ್ದು ಅಂದೇ ಸಾಯಂಕಾಲ ಸುಮಾರು 7-30 ಗಂಟೆಗೆ ನಮ್ಮ ಕುಡುಂಬ ಮತ್ತು ಗೆಳೆಯರ ಸಮೇತ ದೇವಾಸ್ಥಾನಕ್ಕೆ ಹೋಗಿ ಮರಳಿ ಮನೆ ಕಡೆಗೆ ಬರುವಾಗ ನಮ್ಮ ಮನೆಯ ಹತ್ತಿರ ಪಕ್ಕದ ಮನೆಯವರಾದ 1) ಮಲ್ಲಿಕಾಜರ್ುನ ತಂದೆ ಸಾಬಣ್ಣಾ ಗೌಡಗೇರಿ 2) ಹಣಮಂತ ತಂದೆ ಸಾಬಣ್ಣಾ ರಾಮಚಂದ್ರ 3) ಸೋಮು ತಂದೆ ತಂದೆ ಬೀರಪ್ಪಾ ಮುಂಡ್ರಗಿ 4) ಸಾಬಣ್ಣಾ ತಂದೆ ಭೀರಪ್ಪಾ ಮುಂಡ್ರಗಿ 5) ರೆಡ್ಡೆಪ್ಪಾ ತಂದೆ ಶಿವಪ್ಪಾ ಗೋಸಿ 6) ಭೀರಪ್ಪಾ ತಂದೆ ಶಿವಪ್ಪಾ ಬೋಲೇರ ಮತ್ತು ಖಂಡಪ್ಪಾ ತಂದೆ ದೊಡ್ಡ ಸಆಬಣ್ಣಾ ಖಂಡಪ್ಪನೋರ ಇವರೆಲ್ಲರೂ ಏಕಾಏಕಿ ನಮ್ಮ ಮನೆಯ ಅಂಗಳಕ್ಕೆ ನಮ್ಮ ಎದುರಿಗೆ ಬಂದು ನಮಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು ಇವರಲ್ಲಿ ಮಲ್ಲಿಕಾಜರ್ುನ ತಂದೆ ಸಾಬಣ್ಣಾ ಗೌಡಗೇರಿ ಮತ್ತು ಹಣಮಂತ ತಂದೆ ಸಾಬಣ್ಣಾ ರಾಮಚಂದ್ರ ಇವರಿಬ್ಬರೂ ನನಗೆ ಲೇ ಸೂಳೇ ಮಗನೇ ನಿಂದು ಊರಾಗ ಬಾಳ ಆಗ್ಯಾದ ಮನೆ ಮುಂದೆ ಮದುವೆ ಮಾಡಬೇಡ ನಮಗೆ ತೊಂದರೆ ಆಗುತ್ತೆ ಅಂತ ಹೇಳಿದರೂ ಕೂಡಾ ನೀನು ಮದುವೆ ಮನೆ ಮುಂದೆ ಮಾಡಿ ನಮಗೆ ತೊಂದರೆ ಮಾಡಿದ್ದಿ, ಮತ್ತು ನಮ್ಮ ಸಮಾಜದವರಿಗೆ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸೋಲಿಸಿದ್ದಿರಿ ಎಂದು 7 ಜನರೂ ಅವಾಚ್ಯ ಶಬ್ದಗಳಿಂದ ಬೈಯ್ಯತ್ತಾ ಇವತ್ತು ಈ ಸೂಳೆ ಮಕ್ಕಳಿಗೆ ಬಿಡಬೇಡ ಖಲಾಸ ಮಾಡಬೇಕಂತ ಹಕಾರಿ ಹೊಡೆಯುತ್ತಾ ಅವರಲ್ಲಿ ಮಲ್ಲಿಕಾಜರ್ುನ ತಂದೆ ಸಾಬಣ್ಣಾ ಗೌಡಗೇರಿ ಹಣಮಂತ ತಂದೆ ಸಾಬಣ್ಣಾ ರಾಮಚಂದ್ರ ಇವರಿಬ್ಬರೂ ನನಗೆ ಕೈಯಿಂದ ಹೊಡೆದರು. ಆಗ ನನ್ನ ತಮ್ಮ ಸಣ್ಣ ಸಾಬಣ್ಣಾ ಇತನು ನನಗೆ ಹೊಡೆಯುವುದನ್ನು ಬಿಡಿಸುವಾಗ ಆತನಿಗೆ ರೆಡ್ಡೆಪ್ಪಾ, ಸಾಬಣ್ಣಾ ಮುಂಡ್ರಗಿ ಇವರು ಕಾಲಿನಿಂದ ಒದ್ದು ಕೈಯಿಂದ ಹೊಡೆದರು. ಮತ್ತು ಇನ್ನೂಳಿದವರು ಅವಾಚ್ಯ ಶಬ್ದಗಳಿಂದ ಬೈದರು ಆಗ ನಮ್ಮ ಜೋತೆಯಲ್ಲಿದ್ದ ದೇವೆಂದರಪ್ಪಾ ತಂದೆ ಸಾಬಣ್ಣಾ ಭಾವನೋರ, ಶರಣಪ್ಪಾ ತಂದೆ ಮಲ್ಲಪ್ಪಾ ಡೊಣಗಾಂವ ಇವರಿಬ್ಬರೂ ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಮತ್ತೆ ಆ 7 ಜನರು ಇನ್ನೊಮ್ಮೆ ಸಿಗರಿ ಸೂಳೆ ಮಕ್ಕಳೇ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವಧ ಬೆದರಿಕೆ ಹಾಕಿ ಹೋದರು. ನಾವು ಈ ಬಗ್ಗೆ ಮನೆಯಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಅಜರ್ಿ ಸಲ್ಲಿಸುತ್ತಿದ್ದೆವೆ ನನಗೆ ಹೊಡೆಬಡಿ ಮಾಡಿ ಜೀವಧ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2021 ಕಲಂ 143, 147, 341, 323, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸ್ಶೆದಾಪೂರ ಪೊಲೀಸ್ ಠಾಣೆ :- 66/2021 ಕಲಂ 379 ಐಪಿಸಿ : ಇಂದು ದಿನಾಂಕ: 25-04-2021 ರಂದು 04-00 ಪಿ.ಎಮ್ ಕ್ಕೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಛಲೇರಿ ಹಳ್ಳದಲ್ಲಿ ಮರಳು ತುಂಬಿದ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.66/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಗೋಗಿ ಪೊಲೀಸ್ ಠಾಣೆ :- 41/2021 ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ: 25/04/2021 ರಂದು 11-00 ಎಎಮ್ ಕ್ಕೆ ಶ್ರೀ ಲಾಲು ತಂದೆ ಬಾಮ್ಲಾನಾಯಕ ರಾಠೋಡ ಸಾ|| ಉಕ್ಕನಾಳ ಬಾಮ್ಲಾನಾಯಕ ತಾಂಡಾ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನನಗೆ 1) ರಮೇಶ 2) ರವಿ 3) ಸಂತೋಷ 4) ಕುಮಾರ ಅಂತಾ ನಾಲ್ಕು ಜನ ಗಂಡು ಮಕ್ಕಳು ಮತ್ತು 1) ಲಲಿತಾಬಾಯಿ 2) ಸಂಗೀತಾಬಾಯಿ 3) ಸೋನಾಬಾಯಿ 4) ಬೇಬಿ ಅಂತಾ ನಾಲ್ಕು ಜನ ಹೆಣ್ಣು ಮಕ್ಕಳು ಇರುತ್ತಾರೆ. ಎಲ್ಲರದೂ ಮದುವೆಯಾಗಿದ್ದು ಗಂಡು ಮಕ್ಕಳು ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿರುತ್ತಾರೆ. ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. ನನ್ನ ಕೊನೆಯ ಮಗಳಾದ ಬೇಬಿ ಇವಳಿಗೆ ಈಗ ಸುಮಾರು 2 ತಿಂಗಳ ಹಿಂದೆ ಸರಡಗಿ ತಾಂಡಾದ ಶಿವರಾಮ ಪವಾರ ಇತನೊಂದಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತಾರೆ. ಇಬ್ಬರೂ ಗಂಡ ಹೆಂಡತಿ ಚೆನ್ನಾಗಿ ಇರುತ್ತಾರೆ. ನನ್ನ ಮಗಳಾದ ಬೇಬಿ ಗಂಡ ಶಿವರಾಮ ಪವಾರ ಇವಳಿಗೆ ಈಗ ಸುಮಾರು ಒಂದು ವಾರದ ಹಿಂದೆ ನಮ್ಮ ತಾಂಡಾಕ್ಕೆ ಕರೆದುಕೊಂಡು ಬಂದಿದ್ದೇನು. ಮನೆಯಲ್ಲಿ ನಾನು ನನ್ನ ಹೆಂಡತಿ ಶಾಂತಿಬಾಯಿ, ಮತ್ತು ನನ್ನ ಮಗಳು ಬೇಬಿ ಇವರು ಇದ್ದೇವು. ಹೀಗಿದ್ದು, ದಿನಾಂಕ: 20/04/2021 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ನಾನು ಖಾಸಗಿ ಕೆಲಸದ ನಿಮಿತ್ಯ ಶಹಾಪೂರಕ್ಕೆ ಹೋದೆನು. ಮನೆಯಲ್ಲಿ ನನ್ನ ಹೆಂಡತಿ ಶಾಂತಿಬಾಯಿ ಮತ್ತು ನನ್ನ ಮಗಳು ಬೇಬಿ ಇವರು ಇಬ್ಬರೇ ಇದ್ದರು. ನಾನು ಖಾಸಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ 4-00 ಗಂಟೆ ಸುಮಾರಿಗೆ ನಾನು ಮರಳಿ ಮನೆಗೆ ಬಂದಾಗ, ಮನೆಯಲ್ಲಿ ನನ್ನ ಹೆಂಡತಿ ಶಾಂತಿಬಾಯಿ ಇವಳು ತಿಳಿಸಿದ್ದೆನೆಂದರೆ, ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು ಮತ್ತು ಮಗಳು ಬೇಬಿ ಇಬ್ಬರೂ ಮನೆಯಲ್ಲಿರುವಾಗ, ಬೇಬಿ ಇವಳು ಹೊರಗಡೆ ಅಂಗಡಿಗೆ ಹೋಗಿ ಬರುತ್ತೇನೆ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದಳು. ನಂತರ ನಾನು ನಮ್ಮ ಅಣ್ಣನಾದ ಮಾನು ತಂದೆ ಬಾಮ್ಲಾನಾಯಕ ರಾಠೋಡ ಮತ್ತು ಬಾಜು ಮನೆಯವರಾದ ಮೋತಿಬಾಯಿ ಗಂಡ ಭೀಮಲು ರಾಠೋಡ ಇವರಿಗೆ ವಿಷಯ ತಿಳಿಸಿ ವಿಚಾರಿಸಿದೆನು. ನಂತರ ನನ್ನ ಮಗನಾದ ರಮೇಶ ಮತ್ತು ಅಳಿಯ ಶಿವರಾಮ ಇವರಿಗೆ ಪೋನ್ ಮಾಡಿ ವಿಚಾರಿಸಿದ್ದು, ಹಾಗೂ ನಮ್ಮ ಸಂಬಂಧಿಕರ ತಾಂಡಾಗಳಲ್ಲಿ ವಿಚಾರಿಸಲಾಗಿ ಅಲ್ಲಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು. ನಾನು ಇಲ್ಲಿಯವರೆಗೆ ಹುಡುಕಾಡಿದರೂ ಕೂಡಾ ಸಿಗದ ಕಾರಣ ಇಂದು ದಿನಾಂಕ: 25/04/2021 ರಂದು ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದೇನೆ. ನನ್ನ ಮಗಳು 5-00 ಅಡಿ ಎತ್ತರ ಇದ್ದು, ಬಿಳಿ ಬಣ್ಣ, ಇದ್ದು ಮನೆಯಿಂದ ಹೊಗುವಾಗ ನಾಶಿ ಕಲರ್ ಚೂಡಿದಾರ ಹಾಕಿಕೊಂಡಿದ್ದು, ಕನ್ನಡ, ಹಿಂದಿ ಮತ್ತು ಲಂಬಾಣಿ ಬಾಷೆ ಮಾತನಾಡುತ್ತಾಳೆ. ಕಾರಣ ಮಾನ್ಯರವರು ನನ್ನ ಮಗಳಾದ ಬೇಬಿ ಗಂಡ ಶಿವರಾಮ ಪವಾರ ವಯ|| 22 ವರ್ಷ ಜಾ|| ಲಂಬಾಣಿ ಉ|| ಮನೆಗೆಲಸ ಸಾ|| ಸರಡಗಿ ತಾಂಡಾ ತಾ|| ಕಲಬುರಗಿ ಇವಳು ದಿನಾಂಕ: 20/04/2021 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಮನೆಯಿಂದ ಹೊದವಳು ಮರಳಿ ಮನೆಗೆ ಬರದೆ ಕಾಣೆೆಯಾಗಿದ್ದು, ನನ್ನ ಮಗಳನ್ನು ಹುಡಿಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 41/2021 ಕಲಂ: ಹುಡುಗಿ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆೆೆ:- 68/2021 ಕಲಂ 87 ಕೆ.ಪಿ. ಕಾಯ್ದೆ : ದಿನಾಂಕ: 25/04/2021 ರಂದು 7:50 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಶ್ರೀ ಸಾಹೇಬಗೌಡ ಎಮ ಪಾಟೀಲ್ ಪಿಐ ಸಾಹೇಬರು 5 ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:25/04/2021 ರಂದು 5 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಸತ್ಯಂಪೇಠಗ್ರಾಮದ ಶ್ರೀ ಚನ್ನಮಲ್ಲಿಕಾಜರ್ುನ ಮಠದ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271, 3) ಹೊನ್ನಪ್ಪ ಸಿಪಿಸಿ-427 4) ಶ್ರೀ ಮಾನಯ್ಯ ಸಿಪಿಸಿ-372, 5) ಶ್ರೀ ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ 1) ಶ್ರೀ ಅಂಬ್ರೇಶತಂದೆ ಭೀಮಣ್ಣಕ್ವಾಟಿ ವಯಾ:20 ವರ್ಷಜಾ:ಲಿಂಗಾಯತ ಉ:ಗುತ್ತೇದಾರ ಸಾ:ಸತ್ಯಂಪೇಠ ಸುರಪೂರ 2) ಶ್ರೀ ಬಡೆಸಾಬ ತಂದೆ ಬಾಸುಮಿಯಾ ಮುಲ್ಲಾ ವಯಾ:28 ವರ್ಷಜಾ:ಮುಸ್ಲಿಂ ಉ:ಒಕ್ಕಲುತನ ಸಾ:ಚನ್ನಪಟ್ಟಣತಾ:ಸುರಪುರಇವರನ್ನು 5:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:45 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು 6:15 ಪಿ.ಎಂ ಕ್ಕೆ ಸತ್ಯಂಪೇಠಗ್ರಾಮದ ಶ್ರೀ ಚನ್ನಮಲ್ಲಿಕಾಜರ್ುನ ಮಠದಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಶ್ರೀ ಚನ್ನಮಲ್ಲಿಕಾಜರ್ುನ ಮಠದ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 6:20 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 5 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ವೆಂಕೋಬ ತಂದೆ ಶರಣಪ್ಪ ಶುಕ್ಲಾ ವಯಾ:62 ವರ್ಷಜಾ:ಬೇಡರ ಉ:ಒಕ್ಕಲುತನ ಸಾ:ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಶಿವಪ್ಪ ತಂದೆ ಹಣಮಂತ ಮೇದರಗೋಳ ವಯಾ:35 ಷರ್ವಜಾ:ಬೇಡರ ಉ:ಗೌಂಡಿ ಕೆಲಸ ಸಾ:ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಹಣಮಂತತಂದೆಯಂಕಪ್ಪಉಪ್ಪಾರ ವಯಾ:27 ವರ್ಷಜಾ:ಉಪ್ಪಾರ ಉ:ಅಟೋ ಡ್ರೈವರ ಸಾ:ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಮರೆಪ್ಪತಂದೆ ಪರಮಣ್ಣ ಸೋಮೆನವರ ವಯಾ:28 ವರ್ಷಜಾ:ಬೇಡರ ಉ:ಅಟೋ ಡ್ರೈವರ ಸಾ:ದಿವಳಗುಡ್ಡಾ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 5) ನಿಂಗಪ್ಪತಂದೆ ನಾಗಪ್ಪದೇವಿಕೇರಿ ವಯಾ:38 ವರ್ಷಜಾ:ಮಾದರ ಉ:ಕೂಲಿ ಸಾ: ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 3000/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5300/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 6:20 ಪಿ.ಎಮ್ ದಿಂದ 7:20 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 5 ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 68/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ವಡಗೇರಾ ಪೊಲೀಸ ಠಾಣೆ:- 47/2021 ಕಲಂ:279,337,338 ಐಪಿಸಿ : ದಿನಾಂಕ: 25/04/2021 ರಂದು 8-30 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಹೆಚ್.ಸಿ 78 ರವರಿಗೆ ನೇಮಕ ಮಾಡಿ ಕಳುಹಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಶ್ರೀಮತಿ ಕುಮುದಾ ಗಂಡ ಮಹೇಶ್ವರ ಹಿರೇಮಠ, ವ:40, ಜಾ:ಲಿಂಗಾಯತರು, ಉ:ಟೈಪಿಸ್ಟ್ ಸಾ: ಕಾಜಗಾರವಾಡಿ, ಹಾಲಿ ವಸತಿ: ವಿಶ್ವರಾಧ್ಯ ನಗರ ಯಾದಗಿರಿ ಇವರು ಕೊಟ್ಟ ದೂರನ್ನ ಪಡೆದುಕೊಂಡು ಮರಳಿ ಠಾಣೆಗೆ 10-45 ಪಿಎಮ್ ಕ್ಕೆ ಮರಳಿ ಬಂದು ಸದರಿ ಎಮ್.ಎಲ್.ಸಿ ಮತ್ತು ದೂರು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನಂದರೆ ನನಗೆ ಒಂದು ಗಂಡು ಒಂದು ಹೆಣ್ಣು ಹೀಗೆ ಇಬ್ಬರೂ ಮಕ್ಕಳಿರುತ್ತಾರೆ. ಸದರಿ ನನ್ನ ಮಗನೂ ನನ್ನ ಜೊತೆ ಯಾದಗಿರಿ ಕೋರ್ಟನಲ್ಲಿ ಟೈಪಿಸ್ಟ್ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ:25/04/2021 ರಂದು ನನ್ನ ಮಗ ಸುರೇಶನು ಬೆಳ್ಳೆಗೆಯಿಂದ ಮನೆಯಲ್ಲಿದ್ದು ಸಂಜೆ 6-30 ಗಂಟೆ ಸುಮಾರಿಗೆ ವಡಗೇರಾಕ್ಕೆ ತನ್ನ ಗೆಳೆಯರ ಹತ್ತಿರ ಹೋಗಿ ಬರುತ್ತೇನೆ ಎಂದು ನಮ್ಮ ಬುಲೇಟ್ ಮೋಟರ ಸೈಕಲ್ ಚೆಸ್ಸಿ ನಂಬರ: ಗ3ಖ5ಈ1ಐಏ381845 ನೇದ್ದನ್ನು ಚಲಾಯಿಸಿಕೊಂಡು ಹೋದನು. ನಂತರ ನಾನು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾಗ 7-30 ಪಿಎಮ್ ಸುಮಾರಿಗೆ ಯಾರೋ ದಾರಿ ಮೇಲೆ ಹೋಗುವವರು ನನ್ನ ಮಗನ ಮೋಬೈಲ್ನಿಂದ ನನಗೆ ಪೋನು ಮಾಡಿ ಈ ಮೋಬೈಲ್ ನವರಿಗೆ ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ ಹಳ್ಳದ ಬ್ರೀಡ್ಜ ಹತ್ತಿರ ಕಾರು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಅಪಘಾತ ಮಾಡಿದೆ. ಮೋಬೈಲಿನವರಿಗೆ ಭಾರಿ ಗಾಯಗಳಾಗಿರುತ್ತವೆ. ಕಾರಿನ ನಂಬರ ಖಿಖ: 07 ಗಂ 5526 ಇದ್ದು ಚಾಲಕನ ಹೆಸರು ಕೇಳಿದಾಗ ಕಾಶಪ್ಪ ತಂದೆ ಯಂಕಪ್ಪ ಸಾ:ಕೊಂಕಲ್ ಎಂದು ಹೇಳಿರುತ್ತಾನೆ. ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ. ಗಾಯಾಳುವಿಗೆ ಉಪಚಾರ ಕುರಿತು 108 ಅಂಬುಲ್ಯೇನ್ಸನಲ್ಲಿ ಯಾದಗಿರಿಗೆ ಕಳುಹಿಸಿಕೊಡಲಾಗುತ್ತಿದ್ದೆ ಎಂದು ಹೇಳಿದನು. ಆಗ ಗಾಭಾರಿಯಾದ ನಾನು ಕೆಲ ಹೊತ್ತಿನ ನಂತರ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಸುರೇಶನಿಗೆ ಅಪಘಾತದಲ್ಲಿ ಹಣೆಗೆ ತೂತು ಬಿದ್ದ ಭಾರಿ ರಕ್ತ ಗಾಯ, ಎಡಕೈಗೆ ಭಾರಿ ಒಳ ಪೆಟ್ಟಾಗಿ ಎಲಬು ಮುರಿದಿದ್ದು, ಬಲಗೈ ಮತ್ತು ಎಡ ಪಕ್ಕೆಗೆ ತರಚಿದ ಗಾಯಗಳು ಆಗಿದ್ದವು. ಕಾರಿ ಚಾಲಕ ಕಾಶಪ್ಪನಿಗೂ ಕೂಡ ಆಸ್ಪತ್ರೆಗೆ ತಂದಿದ್ದು ಅವನಿಗೆ ತೆಲೆಗೆ ಪೆಟ್ಟಾಗಿ ಮೂಗಿನಿಂದ ರಕ್ತಸ್ರಾವವಾಗಿತ್ತು. ನನ್ನ ಮಗನಿಗೆ ಅಪಘಾತದ ಬಗ್ಗೆ ಕೇಳಿದಾಗ ನಾನು ಬುಲೇಟ್ ಗಾಡಿ ಮೇಲೆ ವಡಗೇರಾಕ್ಕೆ ಹೋಗುತ್ತಿದಾಗ ಎದರುಗಡೆಯಿಂದ ಕಾರಿನ ಚಾಲಕನು ಅತಿವೇಗವಾಗಿ ಬಂದು ಅಪಘಾತ ಮಾಡಿದನು ಎಂದು ಹೇಳಿದನು. ಕಾರಣ ನನ್ನ ಮಗನಿಗೆ ಅಪಘಾತಪಡಿಸಿದ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2021 ಕಲಂ:279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

Last Updated: 26-04-2021 11:54 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080