Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26-05-2021

ಕೆಂಭಾವಿ ಪೊಲೀಸ್ ಠಾಣೆ :- 73/2021 ಕಲಂ: 143,147,323,447,427.504.506 ಸಂಗಡ 149 ಐಪಿಸಿ : ಇಂದು ದಿನಾಂಕ 25.05.2021 ರಂದು ಮದ್ಯಾಹ್ನ 1.15 ಗಂಟೆಗೆ ಪಿರ್ಯಾದಿ ಅಜರ್ಿದಾರರಾದ ಶ್ರೀ ಮಹ್ಮದ ಹಾಜಿ ತಂದೆ ಲಾಲಸಾಬ ವಯಾ|| 40 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೆನೆಂದರೆ ಕೆಂಭಾವಿ ಸೀಮಾಂತರ ಸವರ್ೆ ನಂಬರ 597/ಪೋ2 ವಿಸ್ತಿರ್ಣ 2 ಎಕರೆ 30 ಗುಂಟೆ ಹೊಲ ನನ್ನ ಹೆಸರಿನಲ್ಲಿದ್ದು, ಸದರಿ ಹೊಲದ ಮಾಲಿಕ, ಕಬ್ಜೆದಾರ, ಹಾಗೂ ಸಾಗುವಳಿದಾರ ನಾನೆ ಇರುತ್ತೇನೆ. ನನ್ನ ಹೊಲದಲ್ಲಿ ಈ ವರ್ಷ ಉಳ್ಲಾಗಡ್ಡಿ ಹಾಗು ಬತ್ತ ಮಾಡಿದ್ದು ಇರುತ್ತದೆ. ಆದರೆ ಸದರಿ ಬೆಳೆಗಳು ಸದ್ಯ ಕಟಾವಿಗೆ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ:- 01.05.2021 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋದಾಗ ನಮ್ಮ ಪಕ್ಕದ ಹೊಲದವರಾದ 1) ದವಲಸಾಬ ತಂದೆ ಬಾವಾಸಾಬ ಆಂದೇಲಿ 2) ಲಾಲಬೀ ಗಂಡ ದವಲಸಾಬ ಆಂದೇಲಿ 3) ಶಕುಂತಲಾ ಗಂಡ ಶರಣಬಸಪ್ಪ ಪೀರಾಪೂರ 4) ಶರಣಬಸಪ್ಪ ತಂದೆ ವಿರುಪಾಕ್ಷಪ್ಪ ಪೀರಾಪೂರ 5] ಪರಶುರಾಮ ಸಾ|| ಪರಸನಳ್ಳಿ 6] ರವಿ ತಂದೆ ಸಿದ್ದಣ್ಣ ಅಂಗಡಿ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ಉಳ್ಳಾಗಡ್ಡಿ ಹಾಗು ಬತ್ತದ ಬೆಳೆಯಲ್ಲಿ ಬೆಳೆಯಲ್ಲಿ ಗಳೆ ಹೊಡೆದು ಬೆಳೆ ಕಿತ್ತು ಹಾಕುತ್ತಿದ್ದಾಗ ನಾನು ಹೋಗಿ ಯಾಕೇ ಈ ರೀತಿ ಮಾಡುತ್ತೀರಿ ಈ ಹೊಲ ನನ್ನದು ಇರುತ್ತದೆ ಅಂತ ಅಂದಾಗ ಸದರಿಯವರೆಲ್ಲರೂ ಸೂಳೆ ಮಗನೆ ಈ ಹೊಲ ನಮಗೆ ಬರುತ್ತದೆ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಸಂಗಪ್ಪ ತಂದೆ ಬಸಲಿಂಗಪ್ಪ ಗುಡಿಮನಿ ಹಾಗು ಮಂಜೂರ ತಂದೆ ಅಬ್ದುಲ್ ರಜಾಕ ಇವರಿಬ್ಬರೂ ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಮಗನೇ ಇನ್ನೊಮ್ಮೆ ಈ ಹೊಲದ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರೆಲ್ಲರು ನನ್ನ 2 ಎಕರೆ 30 ಗುಂಟೆ ಹೊಲದಲ್ಲಿನ ಸುಮಾರು 1,50,000=00 ರೂಗಳಷ್ಟು ಬೆಳೆ ಹಾನಿಪಡಿಸಿದ್ದು ಇರುತ್ತದೆ. ಈ ವಿಷಯದ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಎಲ್ಲಾ ಜನರು ನನ್ನೊಂದಿಗೆ ವಿನಾಕಾರಣ ಜಗಳ ತೆಗೆದು ಹೊಲದಲ್ಲಿ ಅತೀಕ್ರಮಣ ಪ್ರವೇಶ ಮಾಡಿ ನಮ್ಮ ಹೊಲದಲ್ಲಿನ ಬೆಳೆ ಹಾಳು ಮಾಡಿ ಒಟ್ಟು ಅಂದಾಜು 1,50,000=00 ರೂಗಳಷ್ಟು ಲುಕ್ಷಾನ ಮಾಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಆರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 73/2021 ಕಲ: 143,147,323,447,427,504,506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ :- 74/2021 ಕಲಂ: 302,109 ಸಂಗಡ 149 ಐಪಿಸಿ:ಇಂದು ದಿ: 25/05/2021 ರಂದು 9 ಪಿಎಮ್ಕ್ಕೆ ಪಿರ್ಯಾದಿದಾರರದ ಶ್ರೀಮತಿ ಶಾಂತಮ್ಮ ಗಂಡ ಹಳ್ಳೆಪ್ಪ ಇಣಚಗಲ್ ವಯಾ|| 68 ವರ್ಷ ಜಾ|| ಕಬ್ಬಲಿಗ ಉ|| ಮನೆಗೆಲಸ ಸಾ|| ತಳ್ಳಳ್ಳಿ[ಬಿ] ತಾ|| ಸುರಪೂರ ಜಿ|| ಯಾದಗಿರಿ ಇದ್ದು ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಏನೆಂದರೆ, ನನಗೆ ಮಕ್ಕಳು ಆಗದೇ ಇರುವದರಿಂದ ನನ್ನ ಮೈದುನನಾದ ಮಲಕಪ್ಪ ಈತನ ಮಗನಾದ ಮಹಾಂತೇಶ ವ|| 30 ಈತನಿಗೆ ದತ್ತು ತೆಗೆದುಕೊಂಡು ಸವಿತಾ ಇವಳೊಂದಿಗೆ ಮದುವೆ ಮಾಡಿದ್ದು ಸದ್ಯ ನಾವೆಲ್ಲರೂ ನಮ್ಮ ಮನೆಯಲ್ಲಿಯೇ ವಾಸವಾಗಿರುತ್ತೇವೆ. ನನ್ನ ಗಂಡನು ನಮ್ಮ ಹಳೆಯ ಮನೆಯನ್ನು ಕಿತ್ತಿ ಹೊಸದಾಗಿ ಮನೆ ನಿಮರ್ಾಣ ಮಾಡುತ್ತಿದ್ದು ಅದಕ್ಕೆ ನಮ್ಮ ಪಕ್ಕದ ಮನೆಯ ನಮ್ಮ ಜನಾಂಗದವನೇ ಆದ ಶಿವಪ್ಪ ತಂದೆ ಸಿದ್ದಪ್ಪ ಹರವಾಳ ಈತನು ನಮಗೆ ಹೋಗಿಬರಲು ತೊಂದರೆಯಾಗುತ್ತದೆ ರಸ್ತೆ ಬಿಟ್ಟು ಸರಿಸಿ ಕಟ್ಟು ಅಂತ ತಕರಾರು ಮಾಡಿದ್ದು ಆದರೆ ನನ್ನ ಗಂಡನು ನಮ್ಮ ಜಾಗದಲ್ಲಿ ಕಟ್ಟುತ್ತಿದ್ದೇವೆ ಅಂತ ಅಂದಿದ್ದನು.ಹೀಗಿದ್ದು ಇಂದು ದಿನಾಂಕ 25.05.2021 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ಹಾಗು ನನ್ನ ಗಂಡನಾದ ಹಳ್ಳೆಪ್ಪ ತಂದೆ ಸಾಯಬಣ್ಣ ಇಣಚಗಲ ವಯಸ್ಸು 70 ವರ್ಷ ಹಾಗು ನನ್ನ ಮೈದುನನ ಮಗನಾದ ಮಹಾಂತೇಶ ತಂದೆ ಮಲಕಪ್ಪ ಇಣಚಗಲ್ ಹಾಗು ಸೊಸಿಯಾದ ಸವಿತಾ ಗಂಡ ಮಹಾಂತೇಶ ಇಣಚಗಲ್ ನಾವೆಲ್ಲರೂ ಕೂಡಿಕೊಂಡು ನಾವು ಹೊಸದಾಗಿ ಕಟ್ಟುವ ಮನೆಯ ಉಸುಕು ಸೋಸುತ್ತಿದ್ದಾಗ ನಮ್ಮೊಂದಿಗೆ ಜಾಗದ ವಿಷಯದಲ್ಲಿ ತಕರಾರು ಮಾಡುತ್ತಾ ಬಂದಿದ್ದ ಶಿವಪ್ಪ ತಂದೆ ಸಿದ್ದಪ್ಪ ಹರವಾಳ ಈತನು ನಮ್ಮಲ್ಲಿಗೆ ಬಂದು ನನ್ನ ಗಂಡನಿಗೆ ರಸ್ತೆಯಿಂದ ಸರಿಸಿ ಕಟ್ಟು ಅಂತ ಅಂದರೂ ಮತ್ತೆ ರಸ್ತೆಗೆ ಮನೆ ಕಟ್ಟುತ್ತೀಯಾ ಸೂಳೇ ಮಗನೇ ಅಂತ ಬೈಯುತ್ತಿದ್ದಾಗ ನನ್ನ ಗಂಡನು ಯಾಕೇ ಸುಮ್ಮನೇ ಬೈಯುತ್ತಿ ನಾನು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದೇನೆ ಅಂತ ಅಂದಾಗ ಶಿವಪ್ಪನು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಬಿದ್ದ ಸಲಿಕೆಯಿಂದ ಬಲವಾಗಿ ನನ್ನ ಗಂಡನ ತಲೆಗೆ ಹೊಡೆದನು. ನನ್ನ ಗಂಡನಿಗೆ ತಲೆಗೆ ಬಾರೀ ರಕ್ತಗಾಯವಾಗಿ ಸತ್ತೆನೆಪ್ಪೋ ಅಂತ ನೆಲಕ್ಕೆ ಬಿದ್ದಿದ್ದು ನನ್ನ ಗಂಡನ ತಲೆಗೆ ಭಾರೀ ರಕ್ತಗಾಯವಾಗಿ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ನನ್ನ ಗಂಡನಿಗೆ ನಮ್ಮೂರ ಸಂತೋಷ ತಂದೆ ಹಳ್ಳೆಪ್ಪ ಸುರಪುರ ಇವರ ಕಾರನಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ವೈದ್ಯರಿಗೆ ತೋರಿಸಲಾಗಿ ವೈದ್ಯರು ನನ್ನ ಗಂಡನಿಗೆ ನೋಡಿ ಬಹಳ ಸೀರಿಯಸ್ ಇದೆ ಕೂಡಲೇ ಶಹಾಪೂರಕ್ಕೆ ಹೋಗಿರಿ ಅಂತ ಅಂದಾಗ ಕೆಂಭಾವಿಯಿಂದ ಅಂಬ್ಯೂಲೆನ್ಸ ಮೂಲಕ ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯೂ ಸಹ ನನ್ನ ಗಂಡನಿಗೆ ನೋಡಿದ ವೈದ್ಯರು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದಾಗ ನಾನು ಹಾಗು ಮಗ ಮಹಾಂತೇಶ ಇಬ್ಬರೂ ಕೂಡಿಕೊಂಡು ಅದೇ ಅಂಬ್ಯೂಲೆನ್ಸ ಮೂಲಕ ಕಲಬುಗರ್ಿಗೆ ಕರೆದುಕೊಂಡು ಹೋಗುತ್ತಾ ಇದ್ದಾಗ ದಾರಿಯ ಮದ್ಯ ನನ್ನ ಗಂಡನು ಯಾವದೇ ಸನ್ನೆ ಮಾಡದೇ ಇದ್ದಾಗ ಗಾಬರಿಯಾಗಿ ಅಂದಾಜು ರಾತ್ರಿ 7 ಗಂಟೆ ಸುಮಾರಿಗೆ ದಾರಿಯ ಮದ್ಯದ ಜೇವಗರ್ಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಅವರು ನನ್ನ ಗಂಡನಿಗೆ ನೋಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದಾಗ ನನ್ನ ಗಂಡನ ಶವವನ್ನು ಅಂಬುಲೇನ್ಸ್ದಲ್ಲಿ ಹಾಕಿಕೊಂಡು ಕೆಂಭಾವಿ ಸರಕಾರಿ ದವಾಖಾನೆಗೆ ಮರಳಿ ತಂದು ಹಾಕಿರುತ್ತೇವೆ. ಕಾರಣ ನಾವು ಮನೆ ಕಟ್ಟುವ ಜಾಗದ ವಿಷಯದಲ್ಲಿ ನನ್ನ ಗಂಡನಿನೊಂದಿಗೆ ಜಗಳ ತೆಗೆದ ಶಿವಪ್ಪ ತಂದೆ ಸಿದ್ದಪ್ಪ ಹರವಾಳ ಈತನು ಸಲಿಕೆಯಿಂದ ನನ್ನ ಗಂಡನ ತಲೆಗೆ ಬಲವಾಗಿ ಹೊಡೆದು ಭಾರೀ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು ಆತನಿಗೆ ಆತನ ತಮ್ಮಂದಿರಾದ 1] ಶರಣಪ್ಪ ತಂದೆ ಸಿದ್ದಪ್ಪ ಹರವಾಳ 2] ಶೇಖಪ್ಪ ತಂದೆ ಸಿದ್ದಪ್ಪ ಹರವಾಳ 3] ಮಲಕಪ್ಪ ತಂದೆ ಸಿದ್ದಪ್ಪ ಹರವಾಳ 4] ಮಡಿವಾಳಪ್ಪ್ಪ ತಂದೆ ಸಿದ್ದಪ್ಪ ಹರವಾಳ ಈ ನಾಲ್ಕು ಜನರು ಕೊಲೆ ಮಾಡಲು ಪ್ರಚೋದನೆ ನೀಡಿದ್ದು ಇರುತ್ತದೆ. ಕಾರಣ ಮನೆಯ ಜಾಗದ ವಿಷಯದಲ್ಲಿ ನನ್ನ ಗಂಡನೊಂದಿಗೆ ಜಗಳ ತೆಗೆದು ಸಲಿಕೆಯಿಂದ ಆತನ ತಲೆಗೆ ಬಲವಾಗಿ ಹೊಡೆದು ಭಾರೀ ರಕ್ತಗಾಯ ಪಡಿಸಿ ಕೊಲೆ ಮಾಡಿದ ಶಿವಪ್ಪ ತಂದೆ ಸಿದ್ದಪ್ಪ ಹರವಾಳ ಹಾಗು ಆತನಿಗೆ ಕೊಲೆ ಮಾಡಲು ಪ್ರಚೋದನೆ ನೀಡಿದ ಆತನ ನಾಲ್ಕು ಜನ ತಮ್ಮಂದಿರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇತ್ಯಾದಿ ವಿವರದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 74/2021 ಕಲಂ:302,109 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ :-. 90/2021 ಕಲಂ: 269, 270, 188 ಐಪಿಸಿ ಮತ್ತುಕಲಂ 5(1) ಕನರ್ಾಟಕಎಪಿಡೆಮಿಕ್ ಡಿಸೀಸೆಸ್ ಆಕ್ಟ-2020: ಇಂದು ದಿನಾಂಕ:25/05/2021 ರಂದು ಸಾಯಂಕಾಲ 6 ಗಂಟೆಗೆಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿದ್ದಾಗಕು|| ಮಲ್ಲಮ್ಮತಂದೆ ಸಿದ್ದಪ್ಪ ಬೇವೂರು ವಯಾ: 25 ವರ್ಷ ಉ: ಗ್ರಾಮ ಲೇಖಪಾಲಕರು ಬಿಜಾಸಪೂರಗ್ರಾಮಇವರುಠಾಣೆಗೆ ಬಂದುಒಂದುಗಣಕಯಂತ್ರದಲ್ಲಿಟೈಪ ಮಾಡಿದದೂರುಅಜರ್ಿತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆಜಗತ್ತಿನಾಧ್ಯಂತ ಕೊವಿಡ್-19 ರೋಗಾಣಿವಿನ ಹರಡುವಿಕೆಯನ್ನುತಡೆಗಟ್ಟಲುರಾಜ್ಯ ಸರಕಾರಅವಶ್ಯಕ ಸೇವೆಗಳನ್ನು ಹೊರತು ಪಡಿಸಿ ಇತರೆ ಸೇವೆಗಳನ್ನು ನೀಡುವಕಛೇರಿ/ಅಂಗಡಿ/ಮುಂಗಟ್ಟುಗಳನ್ನು ಮುಚ್ಚಲು ಹಾಗೂ ಗ್ರಾಮಗಳಲ್ಲಿ ಯಾವುದೆಜಾತ್ರೆ, ರಥೊತ್ಸವ, ಧಾಮರ್ಿಕ ಆಚರಣೆಗಳನ್ನು ನಡೆಸದಂತೆ ಸರಕಾರಿ ಆದೇಶಿದ್ದು ಇರುತ್ತದೆ. ಈ ವಿಷಯಕುರಿತು ಈಗಾಗಲೆ ನಮ್ಮಕಂದಾಯಇಲಾಖೆಯಕಡೆಯಿಂದ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಗ್ರಾಮಗಳಲ್ಲಿಯ ಸಾರ್ವಜನಿಕರಿಗೆದ್ವನಿವರ್ದಕ ಹಾಗೂ ಡಂಗೂರ ಸಾರುವ ಮೂಲಕ ಮಾಹಿತಿ ನೀಡಿಜಾಗೃತೆ ಮೂಡಿಸಿದ್ದು ಇರುತ್ತದೆ. ಹೀಗಿರುವಾಗಇಂದು ದಿನಾಂಕ:25-05-2021 ರಂದು ಬೆಳಿಗ್ಗೆ 8 ರಿಂದ 9 ಗಂಟೆಯಅವಧಿಯಲ್ಲಿ ಬಿಜಾಸಪೂರಗ್ರಾಮದ ಶ್ರೀ ಮರೆಮ್ಮದೇವಿಯಜಾತ್ರೆಕಾರ್ಯಕ್ರಮವನ್ನುದೇವಸ್ಥಾನಕ್ಕೆ ಸಂಬಂದಪಟ್ಟದೇವರಗುಡಿಯ ಪೂಜಾರಿಯಾದ 1) ಶಿವಕುಮಾರ ತಂದೆ ಸಿದ್ದಣ್ಣ ಪೂಜಾರಿ ಹಾಗೂ ಗ್ರಾಮದ 2) ಭೀಮರಾಯತಂದೆ ಸಾಹೇಬಣ್ಣ 3) ಚಂದ್ರಾಮತಂದೆ ಭಾಗಪ್ಪ 4) ಶೇಖಪ್ಪತಂದೆ ಭೀಮಪ್ಪ 5) ರಾಯಪ್ಪತಂದೆ ಲಚಮಪ್ಪ 6) ತಿಮ್ಮಣ್ಣತಂದೆ ಶರಣಪ್ಪ 7) ಬಸಪ್ಪತಂದೆ ಲಚಮಪ್ಪ 8) ಭೀಮಣ್ಣತಂದೆ ಪರಮಣ್ಣ 9) ಸಾಹೇಬಣ್ಣ ಹೂಡಗಿ ಹಾಗೂ ಗ್ರಾಮದಇತರೆಜನರುಕೂಡಿಗ್ರಾಮದಲ್ಲಿದೇವಿಯಧಾಮರ್ಿಕಆಚರಣೆ ಮಾಡಿ ಕೋವಿಡ್-19 ಸಾಂಕ್ರಾಮೀಕ ಕಾಯಿಲೆ ಉಲ್ಬಣಿಸಿ ಸಾರ್ವಜನೀಕರಜೀವಕ್ಕೆ ಪ್ರಾಣಕ್ಕೆಅಪಾಯಕಾರಿಯಾದರೋಗದ ಸೊಂಕನ್ನು ಹರಡುವ ಸಂಭವ ವಿರುತ್ತದೆಅಂತಾ ತಿಳಿದರೂ ಸಹೀತ ಸದರಿ ಮೇಲ್ಕಂಡಗ್ರಾಮಸ್ಥರು ಸರಕಾರದಆದೇಶವನ್ನುಉಲ್ಲಂಘನೆ ಮಾಡಿಗ್ರಾಮದಲ್ಲಿ ಮರೆಮ್ಮದೇವಿಯಧಾಮರ್ಿಕಆಚರಣೆ ನಡೆಸಿದ್ದು ಇರುತ್ತದೆ. ಸದರಿಯವರುಕೋವಿಡ್ -19 ಸಾಂಕ್ರಾಮೀಕರೋಗದ ಹರಡುವಿಕೆತಡೆಗಟ್ಟುವಲ್ಲಿಅಸಹಕಾರ ತೋರಿಸಿ ನಿರ್ಲಕ್ಷ್ಯತನದಿಂದಕೃತ್ಯಎಸಗಿರುವದುಕಂಡು ಬಂದಿರುತ್ತದೆ. ಕಾರಣ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮಜರುಗಿಸಲು ವರದಿ ನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

Last Updated: 26-05-2021 04:34 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080