ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/02/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 31/2021 ಕಲಂ 279, 338 ಐಪಿಸಿ : ದಿನಾಂಕ 25/02/2021 ರಂದು ರಾತ್ರಿ 9-30 ಗಂಟೆಗೆ ಆರೋಪಿತನು ತನ್ನ ಲಾರಿ ನಂ ಕೆ,ಎ-28-ಸಿ-3517 ನೆದ್ದನ್ನು ಕೊಡ್ಲಾದಿಂದ ಓಡಿಸಿಕೊಂಡು ಸಿಂದಗಿಗೆ ಕಡೆಗೆ ಹೋಗುತ್ತಿದ್ದೆನು, ಮಾರ್ಗಮಧ್ಯ ಹತ್ತಿಕುಣಿ-ಯಡ್ಡಳ್ಳಿ ರೋಡಿನ ಮೇಲೆ ಯಡ್ಡಳ್ಳಿ ಗ್ರಾಮದಲ್ಲಿ ರೋಡಿನ ಮೇಲೆ ಹೋಗುವಾಗ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯತ್ರಣ ಕಳೆದುಕೊಂಡು ಕೆರೆ ಕ್ರಾಸ್ ಹತ್ತಿರ ಹಳೇ ಪಂಪಹೌಸಗೆ ಡಿಕ್ಕಿಪಡಿಸಿ ಮುಂದೆ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಟಿಪ್ಪರ ಚಾಲಕನಿಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 32/2021 ಕಲಂ: 323, 324, 354, 504, 506 ಐ.ಪಿ.ಸಿ : ಇಂದು ದಿನಾಂಕ 26-02-2021 ರಂದು 6-15 ಪಿ.ಎಮ್ ಕ್ಕೆ ಫಿರ್ಯಧಿದಾರರಾದ ಶ್ರೀ ತುಳಜಾರಾಮ ತಂದೆ ಲಕ್ಷ್ಮಣ ಚವ್ಹಾಣ ವಯಾ:36 ಉ: ಟ್ರ್ಯಾಕ್ಟರ ಚಾಲಕ ಜಾ: ಲಂಬಾಣಿ ಸಾ; ಅಶೋಕ ನಗರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ತಂದೆಗೆ ಮೂರು ಜನ ಸಹೋದರರಿದ್ದು ಮೂವರು ಬೇರೆ ಬೇರೆಯಾಗಿರುತ್ತೆವೆ. ನನ್ನ ತಮ್ಮನಾದ ಪರಮೇಶ ಇತನು ಈಗ ಸುಮಾರು 2-3 ತಿಂಗಳುಗಳಿಂದ ನಮ್ಮ ಜೊತೆಯಲ್ಲಿ ವಿನಾಕಾರಣ ಜಗಳಾ ಮಾಡುತ್ತಾ ನಮಗೆ ತೊಂದರೆ ಕೊಡುತ್ತಾ ಬಂದಿರುತ್ತಾನೆ. ಮತ್ತು ನನ್ನ ಹೆಂಡತಿಯಾದ ಗೋಲಿಬಾಯಿ ಇವಳಿಗೂ ಕೂಡಾ ಕುಡಿದು ಬಂದು ಇಲ್ಲ ಸಲ್ಲದ ಶಬ್ದ ಬಳಸಿ ಅವಾಚ್ಯವಾಗಿ ಬೈಯ್ಯುತ್ತಾ ಬಂದಿದ್ದು ನಾನು ಮತ್ತು ನಮ್ಮ ಹಿರಿಯವರು ಅವನಿಗೆ ಎಷ್ಟೇ ತಿಳಿಸಿ ಹೇಳಿದರೂ ಅವನು ಯಾರ ಮಾತು ಕೆಳಿರಲಿಲ್ಲಾ. ಹೀಗಿದ್ದು ನಿನ್ನೆ ದಿನಾಂಕ 25-02-2021 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿಯಾದ ಗೋಲಿಬಾಯಿ ಇಬ್ಬರೂ ನಮ್ಮ ಮನೆಯ ಹಿಂದೆ ಕುಳಿತಿದ್ದೆವು. ಅದೇ ವೇಳೆಗೆ ನಮ್ಮ ತಮ್ಮನಾದ ಪರಮೇಶ ಇತನು ತನ್ನ ಕೈಯ್ಯಲ್ಲಿ ಬಡಿಗೆ ಹಿಡಿದುಕೊಂಡು ಬಂದವನೇ ನನಗೆ ಎಲೇ ಚೋದು ಸೂಳೇ ಮಗನೆ ನಿನಗೆ ಹಾಗೂ ನಿನ್ನ ಹೆಂಡತಿಗೆ ಬಹಳ ಸೊಕ್ಕು ಬಂದಿದೆ, ನಿಮಗೆ ಇವತ್ತು ಒಂದು ಗತಿ ಕಾಣಿಸುತ್ತೆನೆ ಅಂತಾ ಅಂದವನೇ ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನಗೆ ಹೊಡೆಯಲು ಬಂದನು. ಆಗ ನಾನು ಅವನಿಗೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಆ ಬಡಿಗೆ ನನ್ನ ಬಾಯಿಗೆ ಮತ್ತು ತಲೆಯ ಬಲಬದಿಗೆ ಹತ್ತಿ ಅಲ್ಲಿ ಗಾಯವಾಯಿತು. ಆಗ ಅಲ್ಲಿಯೇ ಇದ್ದ ನನ್ನ ಹೆಂಡತಿ ಜಗಳಾ ಬಿಡಿಸಲು ಬಂದಾಗ ಅವಳಿಗೆ ಪರಮೇಶನು ಕೂದಲು ಹಿಡಿದು ಜಗ್ಗಾಡಿ ನೆಲದ ಮೇಲೆ ಕೆಡವಿ ಎಳೆದಾಡಿದನು. ಆಗ ನಾನು ನನ್ನ ಹೆಂಡತಿಗೆ ಹೊಡೆಯುವುದನ್ನು ಬಿಡಿಸಲು ಹೋದಾಗ ಅದೇ ಬಡಿಗೆಯಿಂದ ಪರಮೇಶನು ನನ್ನ ತಲೆಯ ಮೇಲೆ ಹೊಡೆದು ರಕ್ತ ಗಾಯ ಮಾಡಿದನು. ಮತ್ತು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದನು. ಆಗ ಅಲ್ಲಿಯೇ ಇದ್ದ ನಮ್ಮ ದೊಡ್ಡಮ್ಮಾ ಕಾಶೀಬಾಯಿ ಗಂಡ ಗೋಪಾಲ ಚವ್ಹಾಣ ಹಾಗೂ ಸುರೇಶ ತಂದೆ ಲಕ್ಷ್ನಣ ಚವ್ಹಾಣ ಇವರಿಬ್ಬರೂ ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವನು ಮತ್ತೆ ಇವತ್ತು ಉಳಿದಿರಿ ಸೂಳೇ ಮಕ್ಕಳೇ ಇನ್ನೊಮೇ ಸಿಗರಿ ನಿಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಭಯ ಹಾಕಿ ಹೋದನು. ಈ ಘಟನೆ ನಮ್ಮ ಮನೆಯ ಹತ್ತಿರವಿದ್ದ ಕಂಬದ ಲೈಟಿನ ಬೆಳಕಿನಲ್ಲಿ ಜರುಗಿದ್ದು ಇರುತ್ತದೆ. ನಂತರ ಗಾಯ ಹೊಂದದ ನಾನು ನಿನ್ನೆ ರಾತ್ರಿ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೆನೆ. ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಆದ್ದರಿಂದ ನನ್ನ ತಮ್ಮನಾದ ಪರಮೇಶ ತಂದೆ ಲಕ್ಷ್ಮಣ ಚವ್ಹಾಣ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 32/2021 ಕಲಂ 323, 324, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 02/2021 ಕಲಂ 174(ಸಿ) ಸಿಆರ್ಪಿಸಿ : ಇಂದು ದಿನಾಂಕ.26/02/2010 ರಂದು 12-00 ಪಿಎಂಕ್ಕೆ ಶ್ರೀಮತಿ ಕಲಾವತಿ ಗಂಡ ಹಣಮಂತ ಚವ್ಹಾಣ ವ;40 ಜಾ; ಲಂಬಾಣಿ ಉ; ಹೊಟೇಲ್ ವ್ಯಾಪಾರ ಸಾ; ಅರಿಕೇರಾ(ಕೆ) ಬಸವಂತ ತಾಂಡಾ ತಾ; ಗುರುಮಿಠಕಲ್ ಹಾ.ವ; ಅಗ್ನಿಶಾಮಕ ಠಾಣೆ ಹಿಂದುಗಡೆ ಷ-ಹನಷಾ ಅಲಿ ದಗರ್ಾ ಹತ್ತಿರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ನಾವು ಕಳೆದ 15 ವರ್ಷಗಳಿಂದ ಯಾದಗಿರಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿರುತೇವೆ. ನಾವು ಶಾಸ್ತ್ರಿಚೌಕ ಹತ್ತಿರ ನಮ್ಮದೊಂದು ಹೋಟೆಲ್ ಇಟ್ಟುಕೊಂಡು ನಾವು ಮನೆಯವರೆಲ್ಲರೂ ಕೂಡಿಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇವೆ. ನಮಗೆ 3 ಜನ ಮಕ್ಕಳಿದ್ದು ಅರವಿಂದ ತಂದೆ ಹಣಮಂತ, ರೂಪೇಶ ತಂದೆ ಹಣಮಂತ, ನಂದಿನಿ ತಂದೆ ಹಣಮಂತ ಅಂತಾ ಮಕ್ಕಳಿರುತ್ತಾರೆ. ನನ್ನ ಮಗ ರುಪೇಶ ಈತನು ಮೂರು ದಿವಸಗಳಿಂದ ನಮ್ಮ ಬಸವಂತ ತಾಂಡಾಕ್ಕೆ ಜೋಳದ ರಾಶಿ ಇದ್ದ ಕಾರಣ ಹೋಗಿ ಅಲ್ಲಿಯೇ ಇರುತ್ತಾನೆ. ಹಿಗಿದ್ದು ಇಂದು ದಿನಾಂಕ; 26/02/2021 ರಂದು ಬೆಳೆಗ್ಗೆ 6-00 ಗಂಟೆಗೆ ನನ್ನ ಗಂಡ ಹಣಮಂತ ತಂದೆ ರೂಪ್ಲಾ ನಾಯಕ ಈತನು ಹೊಟೇಲ ತೆಗೆಯುವ ಸಲುವಾಗಿ ಹೋದನು. ನಂತರ ಬೆಳೆಗ್ಗೆ 8-00 ಗಂಟೆಗೆ ನಾನು ನನ್ನ ಮಗ ಅರವಿಂದ ಈತನೊಂದಿಗೆ ಹೋಟೇಲಗೆ ಬಂದು ನನಗೆ ಹೊಟೇಲದಲ್ಲಿ ಬಿಟ್ಟು ಅರವಿಂದ ಈತನು ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ಬೆಳೆಗ್ಗೆ 9-45 ಗಂಟೆ ಸುಮಾರಿಗೆ ನನ್ನ ಮಗಳಾದ ನಂದಿನಿ ಇವಳು ನಮಗೆ ಫೋನ ಮಾಡಿ ತಿಳಿಸಿದ್ದನೆಂದರೆ, ನನ್ನ ಅಣ್ಣ ಅರವಿಂದ ಈತನು ನಿನಗೆ ಹೋಟೆಲಗೆ ಬಿಟ್ಟು ಮನೆಗೆ ಬಂದಿದ್ದು ನಂತರ ನಾನು ಬಾತರೂಮಿಗೆಂದು ಹೋಗಿ ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ಮುಚ್ಚಿದ್ದು ಬಾಗಿಲು ತೆಗೆಯುವಂತೆ ನನ್ನ ಅಣ್ಣ ಅರವಿಂದಗೆ ಹೇಳಿದಾಗ ಬಾಗಿಲು ತೆಗೆಯಲಿಲ್ಲ. ಎಷ್ಟೊತ್ತಾದ್ದರು ಬಾಗಿಲು ತೆಗೆಯಲಿಲ್ಲ. ನಂತರ ಬಾಜು ಮನೆಯವರನ್ನು ಕರೆದಾಗ ಆಜುಬಾಜುದವರು ಬಂದು ಬಾಗಿಲು ಸಡಿಲಿಸಿ ಬಾಗಿಲು ತೆಗೆದಾಗ ಅಣ್ಣ ಅರವಿಂದ ಈತನು ಮನೆಯ ಚತ್ತಿನ ಕಬ್ಬಿಣದ ಪೈಪಿಗೆ ಲುಂಗಿಯಿಂದ ನೇಣು ಹಾಕಿಕೊಂಡಿರುತ್ತಾನೆ. ಜೀವ ಇರಬಹುದು ಅಂತಾ ಆಜುಬಾಜುದವರ ಸಹಾಯದಿಂದ ನೇಣಿನಿಂದ ಕೆಳೆಗೆ ಇಳಿಸಿರುತ್ತೇವೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಗಂಡ ಹಣಮಂತ ಮನೆಗೆ ಹೋಗಿ ನೋಡಲಾಗಿ ನನ್ನ ಮಗ ಅರವಿಂದ ಈತನು ನೇಣು ಹಾಕಿಕೊಂಡಿದ್ದು ಮನೆಯ ಪಡಸಾಲಿಯಲ್ಲಿ ಹಾಕಿದ್ದು ಕೂಡಲೇ ನಾವು 108 ಅಂಬುಲೆನ್ಸ್ಗೆ ಫೋನ ಮಾಡಿದಾಗ ಅವರು ಸ್ಥಳಕ್ಕೆ ಬಂದು ನೋಡಿದ್ದು ನನ್ನ ಮಗನು ಮೃತಪಟ್ಟ ಬಗ್ಗೆ ತಿಳಿಸಿದರು. ನಂತರ ನನ್ನ ಮಗನ ಮೃತ ದೇಹವನ್ನು ಯಾದಗಿರಿ ಸರಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ತೆಗೆದುಕೊಂಡು ಹೋದೆವು. ಸದರಿ ಘಟನೆಯು ಇಂದು ದಿನಾಂಕ;26/02/2021 ರಂದು ಬೆಳೆಗ್ಗೆ 9-00 ಗಂಟೆಯಿಂದ 9-40 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ನನ್ನ ಮಗ ಅರವಿಂದ ತಂದೆ ಹಣಮಂತ ಚವ್ಹಾಣ ವ;24 ಜಾ; ಲಂಬಾಣಿ ಉ; ಹೊಟೇಲ ವ್ಯಾಪಾರ ಸಾ; ಅಗ್ನಿಶಾಮಕ ಠಾಣೆ ಹಿಂದುಗಡೆ ಷ-ಹನಷಾ ಅಲಿ ದಗರ್ಾ ಹತ್ತಿರ ಯಾದಗಿರಿ ಈತನು ಆರೋಗ್ಯದಿಂದ ಚೆನ್ನಾಗಿದ್ದು ತನಗೆ ಯಾರಿಂದಲೋ ಜೀವನದಲ್ಲಿ ಏನೋ ಸಮಸ್ಯೆಯಾಗಿರಬಹುದು ತಾನು ಯಾರಿಗೂ ಹೇಳದೇ ಒಮ್ಮಿಂದೊಮ್ಮಲೆ ಮನೆಗೆ ಹೋಗಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ನನ್ನ ಮಗನ ಸಾವಿನಲ್ಲಿ ಸಂಶಯವಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.02/2021 ಕಲಂ.174(ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 27-02-2021 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080